- ಬಲೀಂದ್ರಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ಗೋಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ತೊಳಶಿ ಪೂಜೆ – ಸರಳ ಸಂಕ್ಷಿಪ್ತ ವಿಧಾನ - October 30, 2020
1.
ಸಾರಡ್ಕದ ಅನುಪ್ಪತ್ಯ ಕಳ್ಸಿಕ್ಕಿ ಅಡಿಗೆ ಸತ್ಯಣ್ಣಂಗೆ ಮನಗೆ ಎತ್ತಿಯಪ್ಪಗ ಶಾರದೆ ಹೇಳಿತ್ತು – ‘ವಾಷಿಂಗು ಮೆಶಿನು ಹಾಳಾಯ್ದು’.
“ಸರಿ, ವೊರಿಶ ಸುಮಾರು ಆತು ಅದಕ್ಕೆ, ರಿಪೇರಿ ಹೇದೂ ಅಲ್ಪ ಕರ್ಚಿ ಮಾಡಿದ್ದಾತು ಅದಕ್ಕೆ.
ನಾಳಂಗೆ ಪುತ್ತೂರಿಂಗೆ ಹೋಗಿ ಹೊಸತ್ತೇ ತಪ್ಪೋ” – ಹೇದ° ಅಡಿಗೆ ಸತ್ಯಣ್ಣ°.
“ಅಕ್ಕು, ಆದರೆ ಆನು ಬತ್ತಿಲ್ಲೆ, ನಿಂಗಳೂ ರಂಗನೂ ಹೋಗಿ ತೆಕ್ಕೊಂಡು ಬನ್ನಿ” – ಹೇತು ಶಾರದೆ.
“ಅದೆಂಸು ನೀನು ಹಾಂಗೆ ಹೇದ್ದು, ನಮ್ಮ ಮನಗೆ ಸಾಮಾನು ಹೊಸತ್ತು ತೆಗವಲೆ ನೀ ಏಕೆ ಬತ್ತಿಲ್ಲೆ?!” – ಕೇಟ° ಸತ್ಯಣ್ಣ°.
ಶಾರದೆ ಹೇತು – “ಬೇಡ, ಕಳುದ ಸರ್ತಿ ಆನು ಆರುವರೆ ತಿಂಗಳು ಬಸರಿ ಆದಿಪ್ಪಗ ವಾಶಿಂಗು ಮೆಶಿನು ತೆಗವಲೆ ಹೋಗಿ ನಿಂಗೊ ಪೈಸೆ ಕೊಡ್ಳೆ ಹೋದಪ್ಪಗ, ಬನ್ನಿ, ಕೂಡ್ಳೆ ಡೆಲಿವರಿ ಮಾಡ್ಸುತ್ತೆ ಹೇದು ಅಂಗುಡಿಯ ಮನುಷ್ಯ° ಹೇದ್ದು ನೆಂಪಿದ್ದೋ!” 😀
**
2.
ವಾಶಿಂಗು ಮೆಶಿನು ತೆಗದ ದಿನವೂ ಅದರ ಮರದಿನವೂ ಅಡಿಗೆ ಸತ್ಯಂಗೆ ಬಿಡುವು ಇದ್ದತ್ತು.
ಅಡಿಗೆ ಸತ್ಯಣ್ಣಂಗೆ ತೋಟ ಇದ್ದರಲ್ಲದೋ ತೋಟಕ್ಕೆ ಹೋಪದು!, ಅಡಿಗೆ ಇದ್ದರಲ್ಲದೋ ಅಡಿಗ್ಗೆ ಹೋಪದು!!
ಹಾಂಗಾಗಿ ಅಡಿಗೆ ಸತ್ಯಣ್ಣಂಗೆ ಮನೆ ಹೇದೂ, ಪೇಟೆ ಹೇದೂ ಎರಡು ದಿನ ಕಳಾತು
ಅದರ ಮರುದಿನ ಅದಾ ಚಂಬ್ಳಿತ್ತಿಮಾರಿಲ್ಲಿ ಅನುಪ್ಪತ್ಯ ಇತ್ತಿದ್ದದು
ಡೈಮಂಡು ಬಾವನೂ ಬೇಲೆನ್ಸು ಬಾವನೂ ಹೋಳಿಗೆ ಕೆರುಶಿ ಹಿಡ್ಕೊಂಡು ಹೆರಟವು ಒಂದನೇ ಹಂತಿಗೆ ಬಳುಸುಲೆ.
ಅಟ್ಟಪ್ಪಗ ಒಂದನೇ ಹಂತಿಲಿ ಉಂಬಲೆ ಕೂಬಲೆ ಬಾಕಿಯಾದ ಬೈಲ ಬಾವ° ಒಬ್ಬ° ಅಡಿಗೆ ಕೊಟ್ಟಗೆಲಿ ನಿಂದು ಮತ್ತೊಬ್ಬ° ಬಾವನೊಟ್ಟಿಂಗೆ ಎಂತದೋ ಮಾತಾಡಿಗೊಂಡಿತ್ತಿದ್ದವ° – ” ಉಪ್ಪು ತಿಂದವ° ನೀರು ಕುಡಿವಲೇ ಬೇಕು, ಅಲ್ಲದೋ ಸತ್ಯಣ್ಣ” ಹೇದು ಸತ್ಯಣ್ಣನ ಸಾಕ್ಷಿಗೆ ಎಳದ°
“ಅಪ್ಪಪ್ಪು., ಈಗ ಹೋಳಿಗೆ ಬೆನ್ನಿಂಗೆ ತುಪ್ಪ ಹೋಪಲೇ ಬೇಕು. ಇದಾ ಹಿಡ್ಕೊ” 😀
ಅದರ ಬೆನ್ನಿಂಗೆ ಆಚವನ ಕೈಗೆ ಕಾಯಾಲು ಕವಂಗವನ್ನೂ ನೇಲ್ಸಿದ ಅಡಿಗೆ ಸತ್ಯಣ್ಣ° 😀
**
3.
ಚಂಬ್ಳಿತ್ತಿಮಾರ ಅನುಪ್ಪತ್ಯ ಕಳುದ ಮರುದಿನ ಸಾಯಲ್ಲಿ ಶಿವಪೂಜೆ
ಅದರೆಡಕ್ಕಿ ರಮ್ಯ ಕಾಲುವಾರ್ಷಿಕ ಪರೀಕ್ಷೆಲಿ ಪಸ್ಟುಕ್ಲಾಸು ಪಾಸು ಹೇಳ್ತ ಸುದ್ದಿಯೂ ಆಗಿತ್ತು.
ವರ್ತಮಾನ ಕೇಟ ಬದನಾಜೆ ಅತ್ತೆ ಸತ್ಯಣ್ಣನ್ನತ್ರೆ ಕೇಟತ್ತು – “ಅಂಬಗ ಆ ಲೆಕ್ಕಲ್ಲಿ ಎಂಗೊಗೆ ಚೀಪೆ ಆಯೇಕು ಸತ್ಯಣ್ಣ”
ಸತ್ಯಣ್ಣ ಹೇದ° – “ಅಕ್ಕು, ಬಪ್ಪ ಆದಿತ್ಯವಾರ ಎನ ಪುರುಸೊತ್ತು ಇದ್ದು. ನಿಂಗೊಗೆ ಅನುಕೂಲ ಇದ್ದರೆ ಅಂದೇ ಮಜ್ಜಾನ್ನಕ್ಕೆ ಮಾಡಿಕ್ಕುವೊ ಅತ್ತೆ. ಪಾತ್ರ ಸಾಮಾನು ಎಲ್ಲ ಇದ್ದನ್ನೇ ಮನೆಲಿ. ತೊಳದು ಬೂದಿ ಉದ್ದಿ ಮಡಿಗಿಕ್ಕಿ” 😀
**
4.
ಸಾಯದ ಅನುಪ್ಪತ್ಯ ಕಳುದಿಕ್ಕಿ ಅಡಿಗೆ ಸತ್ಯಣ್ಣಂಗದಾ ಕೊಡೆಯಾಲಲ್ಲಿ ಕೋಡಿ
ಈ ಸರ್ತಿ ಬೈಲಿಲಿ ಕೋಡಿಗೊ ಸುಮಾರು ಕಳುತ್ತಡ. ಅಡಿಗೆ ಸತ್ಯಣ್ಣ ಹೇದೇ ನವಗೂ ಗೊಂತು.
ಕೊಡೆಯಾಲ ಕೋಡಿಗೆ ಬಂದ ಚೆನ್ನಬೆಟ್ಟು ಬಾವ ಆಚಿಗೆ ನಿಂದೊಂಡು ಯಕ್ಷಗಾನದ ಬಗ್ಗೆ ಜೋರು ಜೋರು ಮಾತಾಡ್ವದು ಕೇಳುತ್ತು.
ಗೆಂಡುಮಕ್ಕೊಗೆ ಸವಾಲಾಗಿ ಇಡೀ ಹೆಮ್ಮಕ್ಕಳ ಯಕ್ಷಗಾನ ಪ್ರದರ್ಶನ ಆದ್ದು, ರೈಸಿದ್ದು
ಕಿರೀಟವೇಶ, ಪಗಡಿವೇಶ, ಸ್ತ್ರೀವೇಶ, ಬಣ್ಣದ ವೇಶ ಹೇದು ಎಲ್ಲವನ್ನೂ ಹಾಸ್ಯಗಾರಂಗಳೇ ಸೇರಿ ಇಡೀ ಪ್ರಸಂಗ ಆಡಿದ್ದು
ಇದರೆಲ್ಲ ಕೇಟಪ್ಪಗ ಸತ್ಯಣ್ಣಂಗೆ ತೋರಿತ್ತು, ಸಣ್ಣಕೆ ರಂಗಣ್ಣನತ್ರೆ ಹೇದ° – ಬಪ್ಪವೊರಿಶ ಬಟ್ಟಮಾವಂದ್ರು ಅಡಿಗೆ ಮಾಡ್ಸು, ಅಡಿಗೆಯೋರು ಪೂಜೆ ಮಾಡ್ಸುಸುತ್ತು ಹೇದು ಸುರುವಕ್ಕೋ 😀
ಅಲ್ಲ ಮಾವ°, ತೆಂಕು ಬಡಗು ದ್ವಂದ್ವ ಹೇಳ್ತಾಂಗೆ ಪೂಜೆ/ಹೋಮ ಅಡಿಗೆ ಕೇಳುಗೋ?! – ರಂಗಣ್ಣನದ್ದೂ 😀
**
5.
ಕೊಡಯಾಲ ಕೋಡಿಯ ಮರುದಿನ ಅದಾ ಅಡಿಗೆ ಸತ್ಯಣ್ಣಂಗೆ ಕಾರಿಂಜಲ್ಲಿ ಅನುಪ್ಪತ್ಯ.
ಕಾರಿಂಜ ಅನುಪ್ಪತ್ಯ ಕಳುದು ಮನೆಗೆತ್ತುವಾಗ ರಮ್ಯ ಹಸೆಬಿಡ್ಸಿ ಮನಿಕ್ಕೊಂಡಿತ್ತು. ತಲೆಬುಡಲ್ಲಿ ಕೋಳೇಜಿಂಗೆ ಹಾಕ್ಯೊಂಡೋಪ ಇಸ್ತ್ರಿ ಹಾಕಿದ ಚೂಡುದಾರವೂ ಮಡಿಕ್ಕೊಂಡಿದ್ದು.
ಕೇಟದಕ್ಕೆ ಶಾರದೆ ಹೇತು – ಕೋಳೇಜಿಗೆ ಹೆರಡ್ಳಪ್ಪಗ ಜೋರು ಜೊರ
ಅಪ್ಪನ ಸೊರ ಕೇಟಪ್ಪದ್ದೆ ರಮ್ಯಂಗೆ ಎಚ್ಚರಿಕೆ ಆತು, ಎದ್ದು ಕೂದತ್ತು.
ಸತ್ಯಣ್ಣ ಹೇದ° – ‘ಇದೆಂತ ಮಗಳೇ! ಕನಸಿಲ್ಲಿ ಕೋಳೇಜಿಂಗೆ ಹೋವ್ತರಾತು ಹೇದು ಡ್ರೆಸ್ಸು ಹತ್ರೆ ಮಡಿಕ್ಕೊಂಡದ ಇಸ್ತ್ರಿ ಹಾಕಿ 😀
**
6.
ಕಾರಿಂಜದ ಅನುಪ್ಪತ್ಯದ ಮರುದಿನ ಅಡಿಗೆ ಸತ್ಯಣ್ಣಂಗೆ ಕುಂಞಿಮೂಲೆ ಗೆಣಪ್ಪಣ್ಣನಲ್ಲಿ ಜೆಂಬ್ರ
ಊಟಕ್ಕೆ ಬಾಳೆಕ್ಕಾಯಿ ಪೋಡಿಯೂ ಆಗ್ಬೇಕು ಹೇದವು ಮನೆಯೆಜಮಾನ
ಬಾಳೆಕ್ಕಾಯಿ ಕೊರದು ಕೊಟ್ಟ ಸುಭಾವ ಪೀಶತ್ತಿ ತಿಕ್ಕಿಯೊಂಡಿಪ್ಪದ್ದೆ ಅಡಿಗೆ ಸತ್ಯಣ್ಣಂಗೆ ಹಿಟ್ಟೂ ರೆಡಿ.
ಬಾಣೆಲಿ ಒಲೆಲಿ ಮಡಿಗಿ ಕಾದ ಎಣ್ಣಂಗೆ ಬಾಳೆಕ್ಕಾಯಿ ಬಾಗ ಹಿಟ್ಟಿಂಗೆ ಅದ್ದಿ ಚುಂಯ್ಕ ಮಾಡಿಗೊಂಡಿತ್ತಿದ್ದ ಅಡಿಗೆ ಸತ್ಯಣ್ಣ
ಇದರ ಚೆಂದ ನೋಡಿಗೊಂಡಿತ್ತಿದ ಜಾಲ್ಸೂರ ಮಾಣಿ ಕೇಟ ನರಕಲ್ಲಿ ಪಾಪ ಮಾಡಿದವರ ಎಣ್ಣೆಂಗೆ ಹಾಕೋದು ಹೇಳ್ತವನ್ನೇ.. ಅದು ಹೀಂಗೇ ಆಯ್ಕೋ ಸತ್ಯಣ್ಣ?!
ಸತ್ಯಣ್ಣ ಹೇದ° – ಆಯ್ಕು ಆಯ್ಕು. ಆದರೆ ಏವ ಎಣ್ಣೆಲಿ ಹೇದು ಮಾತ್ರ ಆರತ್ರಾರು ಕೇಟು ಅರ್ತು ಮಡಿಕ್ಕೊ 😀
**
7.
ಮನ್ನೆ ಸೋಮವಾರ ಅಡಿಗೆ ಸತ್ಯಣ್ಣಂಗೆ ಒಂದು ಎಡೆ
ಅಡಿಗೆ ಸತ್ಯಣ್ಣಂಗೆ ಎಡೆ ಇಪ್ಪ ದಿನ ದೇದರೆ ಸಕಾಯಿ ರಂಗಣ್ಣಂಗೂ ಎಡೆಯೆ
ಎಡೆ ಇಪ್ಪ ದಿನ ಮಧ್ಯಾಂತ್ರಿಗಿ ಒಂದಾರಿ ಪೇಟಗೆ ಹೋವ್ಸು ಸತ್ಯಣ್ಣನ ಕ್ರಮ
ಸತ್ಯಣ್ಣ ಪೇಟಗೆ ಎತ್ತುವ ಹೊತ್ತಿಂಗೆ ಪೇಟಗೆ ಹಾಜರಿ ಹಾಕುಸ್ಸು ರಂಗಣ್ಣನ ಕ್ರಮ
ಅಂತೂ ಪೇಟೆ ಅರಟುತ್ತ ಕೆಲ್ಸ ಮುಗ್ಶಿ ಹೆರಡ್ಳಪ್ಪಗ ಸತ್ಯಣ್ಣಂಗೆ ನೆಂಪಾತು ರಂಗಣ್ಣಂಗೆ ಹೇಳ್ಳೆ – ರಂಗೋ ನವಂಬ್ರ 2 ಕಲ್ಲುಗುಂಡಿ.
ರಂಗಣ್ಣ ಸತ್ಯಣ್ಣನೊಟ್ಟಿಗೆ ಇತ್ತೀಚೆಗೆ ಕೆಲವು ಆತು ಆಟಕ್ಕೆ ಹೋವ್ಸು. ಹಾಂಗಾಗಿ ಪಟಕ್ಕನೆ ಕೇಟ° – ಓ ಎಂತ ಆಟಕ್ಕೋ?!
ಸತ್ಯಣ್ಣ ಹೇದ° – “ಅಲ್ಲ, ಅಡಿಗ್ಗೆ” 😀
**
ವಾರಕ್ಕಿಪ್ಪ ಶುದ್ದಿಯ ಅಡಿಗೆ ಸತ್ಯಣ್ಣನತ್ರೆ ಕೇಟು ದಾಕಲು ಮಾಡಿಗೊಂಡದೂ ಆತು, ಶಾರದಕ್ಕ ಕೊಟ್ಟ ಚಾಯ, ಚಿಪ್ಪುಸು ಕಾಲಿ ಮಾಡಿದ್ದೂ ಆತು.
ಅಡಿಗೆ ಸತ್ಯಣ್ಣನತ್ರೆ ಮಾತಾಡ್ಯೊಂಡು ಕೂದರೆ ಹೊತ್ತು ಹೋವ್ಸೇ ಗೊಂತಾಗ, ಮೂರ್ಸಂದಿ ಆಗ್ಯೊಂಡು ಬಂತುದೆ, ಮುಗಿಲು ಹಾಕಾಣವೂ ಕಂಡತ್ತು.
“ಅಕ್ಕು, ಕಾಂಬೋ” ಹೇದು ಮೆಲ್ಲಂಗೆ ಎದ್ದು ಜಾಲಿಂಗಿಳುದು ಕಾಲಿಂಗಿಪ್ಪ ಮೆಟ್ಟ ಸುರ್ಕೊಂಡು ಜಾಲಕರೆಲಿತ್ತಿದ್ದ ಉರುವೆಲು ನುರುಕ್ಕುವಾಗ ಸತ್ಯಣ್ಣ ಸಣ್ಣಕ್ಕೆ ಹೇದ “ಬಾವ.. ಮುವತ್ತು ಆತಿಲ್ಯೋ”
ಮಳೆ ಸೊಯ್ಪುವಂದೊಳ ಮನಗೆ ಎತ್ತಿರೆ ಸಾಕು ಹೇಳ್ವ ಏವ್ರಲ್ಲಿತ್ತಿದ್ದ ನಾವುದೇ ಅಪ್ಪು ಭಾವ ಹೇದಿಕ್ಕಿ ಬೀಸ ನಡದ್ದದೇ.
ಮತ್ತಲ್ಲದೋ ಅಂದಾಜಿ ಆದ್ದು ಸತ್ಯಣ್ಣ ಹೇದ್ದೆಂತರ ಹೇದು. ಈಗ ನಿಂಗೊಗೂ ಅಂದಾಜಿ ಆತಾಯ್ಕಪ್ಪೋ.
ಎಂತಾರು ‘ಸತ್ಯಣ್ಣ ಸತ್ಯಣ್ಣನೆ!’ ಅಪ್ಪೋ!… ಹಾಂಗಾಗಿ ನಾವುದೇ ಅಕೇರಿಗೆ ಹೇತಿಕ್ಕುವೋ° – ‘ಸತ್ಯಣ್ಣ ಸತ್ಯಣ್ಣನೆ’. 😀 😀
*** 😀 😀 😀 ***
ಅಕ್ಕು ಸತ್ಯಣ್ಣ ಹಾಂಗಾರೆ ಕಲ್ಲುಗುಂಡಿ ಆಟಲ್ಲಿ ಕಾಂಬ ಇನ್ನು
ಗೊತ್ತಾನಗ ಪೊರ್ತಾ೦ಡ್
ಅಡಿಗೆ ಸತ್ಯಣ್ಣನ ಜೋಕುಗಳ ಆನು ಇಂದೇ ಸುರು ಓದಿದ್ದು . ಇಲ್ಲಿ ಬರದ ಹೇದು ,ಕೇಟ ಇದೆಲ್ಲ ಕುಂಬಳೆ ಸೀಮೆ ಭಾಷೆಯ? ಆನು ಹೀಂಗೆ ಮಾತಾಡುದರ ಕೇಳಿದ್ದಿಲ್ಲೆ .
ವೆಂಕಟಭಾವನ ಕೆಮರ ಅಷ್ಟುದೇ ದೊಡ್ಡ ಇದ್ದಾ- ಸತ್ಯಣ್ಣ ಚಕ್ಕುಲಿ ಬೇಶುಲೆ ಕೂಪಷ್ಟು?!!
ಚೆನ್ನೈ ಭಾವ… ರಿಟಾಯರು ಅಪ್ಪದು ಅರುವತ್ತಕ್ಕೆ…. ಮೂವತ್ತಕ್ಕೆ ಅಲ್ಲನ್ನೆ….
ಆದರೆ ನಮ್ಮ ಮಂತ್ರಿಗೊ 90 ಕಳುದರೂ ರಿಟಾಯರು ಅಪ್ಪಲೆ ಒಪ್ಪುತ್ತವಿಲ್ಲೆ ಇದಾ…. 😉
ಸತ್ಯಣ್ಣನ ಜೋಕುಗಳ ಓದುವ ಸಲುವಾಗಿಯೇ ಆನು ಒಪ್ಪಣ್ಣನ ಒಪ್ಪಂಗೊಕ್ಕೆ ಬಂದು ಗೊಂಡು ಇತ್ತದು ಸುರುವಿಂಗೆ,ಇದರಲ್ಲಿ ಬಳಕೆ ಆದ ನಂತರ ಇತರ ವಿಚಾರನ್ಗಳತ್ತರೂ ಆಸಕ್ತಿ ಬಂತು .ನಮ್ಮ ಭಾಷೆಗು ಎಂಗಳ ಕಡೆ ಇಪ್ಪ ನಮ್ಮ ಭಾಷೆಗು ರಜ್ಜ ವ್ಯತ್ಯಾಸ ಇದ್ದ್ದಲ್ಲದ ಹೇಳಿ ಎನಗೆ ಇಲ್ಲಿಯೇ ತಲೆಗೆ ಹೋದ್ದು .ಎನಗೆ ಸುರುವಿಂಗೆ ಸತ್ಯಣ್ಣ ಹೇದ ,ರಮ್ಯ ಹೇತು ,ಕೇಟತ್ತು ಇತ್ಯಾದಿ ಓದಿ ನಮ್ಮ ಭಾಷೆಲಿ ಹೀಂಗು ಬಳಕೆ ಇದ್ದ ಹೇಳಿ ಆಶ್ಚರ್ಯ ಆಗಿತ್ತು .ಸುರುವಿಂಗೆ ಈ ಪದಂಗಳ ಓದುವಗ ಏನೋ ಒಂದು ಅಯೋಮಯ ಆಯಿಕ್ಕೊಂಡು ಇತ್ತು .ಅಡಿಗೆ ಸತ್ಯಣ್ಣ ನ ಓದುತ್ತಾ ಓದುತ್ತಾ ಎನಗೆ ಭಾರಿ ಇಷ್ಟ ಆತು ಜೋಕುಗಳುದೆ ಈ ರೀತಿಯ ಪದಂಗಳುದೆ.ಇನ್ನೂ ಕಮ್ಮಿ ಹೇಳ್ರೆ 22 ವಾರ ಆದರೂ ಬಂದರೆ ಒಳ್ಳೆದಿತ್ತು ಹೇಳಿ ಎನಗೆ ಅನ್ಸುತ್ತು
೩೦ ಕಂತಿಲಿ ಒಳ್ಳೆಯ ಸಹೃದಯ ಜೋಕುಗಳ ಕೊಟ್ಟದಕ್ಕೆ ಚೆನ್ನೈ ಭಾವಂಗೆ ಹೃತ್ಪೂರ್ವಕ ಅಭಿನಂದನೆಗ
ಹೂ..!! ಸತ್ಯಣ್ಣ ರೈಸಿದ್ದ.. 🙂
* ಅಪ್ಪೋ,ಈ ಹೆಮ್ಮಕ್ಕಳ ಯಕ್ಷಗಾನಲ್ಲಿ ಬಾಕಿ ಯೇವ ಪ್ರಸಂಗ ಬೇಕಾರುದೆ ಆಡಲಿ,ಒಂದು ಪ್ರಸಂಗ ಮಾಂತ್ರ ಬೇಡ ಹೇದು ಕಾಣುತ್ತು………” ದ್ರೌಪದಿ ವಸ್ತ್ರಾಪಹಾರ ”
* ಹಾಸ್ಯಗಾರರದ್ದೇ ಮೇಳ – ತಾಳ ಮದ್ದಳೆ ಜಾಗಟೆ ಕೋಲು ಚೆಂಡೆ ವೇಶ ಆದರೆ …!
* ಅಡಿಗೆಲಿಯುದೆ ದ್ವಂದ್ವ ಇದ್ದನ್ನೆ …ವೆಜ್- ನೊನ್ ವೆಜ್? ಮಾಡುತ್ತವಿಲ್ಲೆಯೋ? ಒಂದೇ ಚೆಪ್ಪರಲ್ಲಿ…!
* ಅಡಿಗೆ ಸತ್ಯಣ್ನಂಗೆ ಮೂವತ್ತು ಆದಿಕ್ಕು,… ಸತ್ಯಣ್ನನ ಮಾತಾಡ್ಸಿಂಡಿದ್ದರೆ …ನವಗೆ ಹಲ್ಲು ಬಿಡ್ಲಾವುತ್ತನ್ನೆ …
* ಸತ್ಯಣ್ಣ ಸತ್ಯಣ್ನ ನೇ ಸರಿ … ಭಳಿರೆ ಪರಾಕ್ರಮ ಕಂಠೀರವ…
ಅಪಹಾಸ್ಯದ ಸೋಂಕು ರೆಜವೂ ಇಲ್ಲದ್ದೆ ಶುದ್ಧ ಹಾಸ್ಯದೊಟ್ಟಿಂಗೆ, ಒಳ್ಳೆ ಸಂದೇಶಂಗಳನ್ನೂ ಕೊಡ್ತಾ ಇಪ್ಪ, ಈ ಕಂತು ಮುಂದುವರಿಯಲಿ
ಹ್ಹಹ್ಹಹ್ಹಹ್ಹ…….ಹ್ಹ ಹ್ಹ ಹ್ಹ
ಅಪ್ಪು , ಸತ್ಯಣ್ಣ ಎಲ್ಲೊರಿ೦ಗು ಬೇಕಾದವನೆ. ಮುಲ್ಲಾ ನಾಸುರುದ್ದಿನ್ ನ ಹಾಸ್ಯ ಪ್ರಸ೦ಗ ಲಾಯಿಕ ಇರುತ್ತು. ಅಥವಾ ಹಾನ್ಗಿಪ್ಪದೆ ಇನ್ನು ಯಾವದಾದರೂ ಪುಸ್ತಕ೦ದ ,ವಿಷಯ ಸತ್ಯಣ್ಣ೦ಗೆ ಬೇಕಾದ ಹಾ೦ಗೆ ಅಳವಡಿಸಿಗೊ೦ಮ್ಬಲೆ ಎಡಿತ್ತೊ ನೋಡ್ಲಕ್ಕು. ಮುಲ್ಲಾ೦ಗೆ ಆದರೆ ರಮ್ಯನ ಜ್ವರ ಹಿಡುದೋರಿ೦ಗೆ ಮದ್ದು ಕೊಡ್ಲೆ ಕಷ್ಟಕ್ಕು.
ಸತ್ಯಣ್ಣ ಮೇವು ಹಗರಣಲ್ಲಿ ಸಿಕ್ಕಿ ಹಾಕಿದ ಲಾಲು ಪ್ರಸಾದ ಯಾದವನ ಹಾ೦ಗೆ ಜೈಲ್ಲಿ ಇಲ್ಲೆನ್ನೆ !!!
ವೇದ ಮ೦ತ್ರಗೊ, ಉಪನಿಷತ್ತಿನ ಸಾರದ ಭಗವದ್ ಗೀತೆ — ಇದರಲ್ಲಿ ಬಪ್ಪ ವಿಷಯ೦ಗೊಕ್ಕೆ ಅದಕ್ಕೆ ತಕ್ಕದ ಮರ್ಯಾದಿ ಕೊಡೆಕ್ಕಾದೋರು ಕೊಟ್ಟು ; ಒಳಿಶಿಗೊ೦ಡರೆ ಅದುವೇ ಅಬ್ಬೆ ಭಾಷೆಗೆ ಕೊಡುವ ಮರ್ಯಾದಿ ಅಕ್ಕು. ಒಳ ಲಡಾಯಿ ಮಾಡಿ ,ಅಬ್ಬೆ ಭಾಷೆ ಜನಗಣತಿ ಪಟ್ಟಿಲಿ ಇದ್ದರೆ ಎ೦ತ ಪ್ರಯೋಜನ?
೩೦ಕ್ಕೆ ರಿಟೈರ್ಡ್ ಆದರೆ ಹೇಂಗೆ? ಮತ್ತೆ ನವಂಬ್ರ ಎರಡರಂದು ಕಲ್ಲುಗುಂಡಿಗೆ ಹೋಪದಾರು? ಅಲ್ಯಾಣ ಶುದ್ಧಿ ಹೇಳುದಾರು? ಸತ್ಯಣ್ಣ ಬಂದ ಮತ್ತೆ ಈ ರಾಂಪ, ಸೋಂಪ ಎಲ್ಲಾ ನಾಟುತ್ತೇ ಇಲ್ಲೆ ಬೈಲಿನವಕ್ಕೆ. ಮೆಗಾಧಾರಾವಾಹಿಯಾಗಿ ಹರುದು ಬರಲಿ ಹೇಳುದು ಬೈಲಿನೋರ ಆಶಯ. ನೀರಿನ ಒರತೆ ಕ್ಷೀಣ ಆಯಿದೋ?
ಒರತೆ ಇದ್ದನ್ನೆ ಅತ್ತೆ… ಎಡೆ ಇಲ್ಲದ್ದೆ ಮೋಸ ಆದ್ದು… ಸತ್ಯಣ್ಣ ನಿಂಬಲಿಲ್ಲೆಪ್ಪಾ.. ಬಪ್ಪವಾರ ಬಕ್ಕಪ್ಪಾ ಬಕ್ಕು
ಮೂವತ್ತಕ್ಕೆ ಜವಾಬ್ದಾರಿ ಹೆಚ್ಚುದು. ಮೂವತ್ತಕ್ಕೆ ಚುಂಯ್ಕ ಅಪ್ಪಲಾಗ. ಲಾರನ ದಾಖಲೆ ಮುರಿಯೆಕು!
ಅಡಿಗೆ ಸತ್ಯಣ್ಣನ ಮೇಗೆ ನಿಂಗೊ ಎಲ್ಲೋರ ಅಭಿಮಾನಕ್ಕೆ, ಪ್ರೀತಿಯ ಒಪ್ಪಕ್ಕೆ ಹೃತ್ಪೂರ್ವಕ ವಂದನೆಗೊ. ನಿಂಗೊ ಓದಿ ಕೊಶಿಪಟ್ಟಷ್ಟೇ ಕೊಶಿ, ತೃಪ್ತಿ ಆತು. ಇನ್ನೊಂದರಿ ಎಲ್ಲೋರಿಂಗೂ ಧನ್ಯವಾದ. ಹೀಂಗಿರ್ತ ತಿಳಿ ಹಾಸ್ಯಂಗೊ ನಮ್ಮಲ್ಲಿ ಬೆಳೆಯಲಿ. ರಾಂಪ ಸೋಂಪ ಸರ್ದಾರ ಹಾಸ್ಯಂದ ಸೊಗಸಾಗಿ ನಮ್ಮ ಭಾಷೆಲಿಯೂ ತಿಳಿಹಾಸ್ಯಂಗೊ ಅನುಭವುಸಲೆ ಲಾಯಕ ಆವ್ತು ಹೇದು ಅಡಿಗೆ ಸತ್ಯಣ್ಣ ಒಗ್ಗರಣೆಗೊ ಕೊಶಿಕೊಟ್ಟತ್ತು. ಹರೇ ರಾಮ.
“ಸಾಯದ ಅನುಪತ್ಯ ಕಳುದಿಕ್ಕಿ ಕೊಡೆಯಾಲಲ್ಲಿ ಸತ್ಯಣ್ಣಂಗೆ ಕೋಡಿ”. ಸತ್ಯಣ್ಣಂಗೂ ಕೋಡಿ ಮಾಡ್ಸುತ್ತೀರೋ?????? ಮಾತು ಮಾತಿಲ್ಲಿಯೂ ಜೋಕು ತುಂಬಾ ಲಾಯ್ಕ ಬತ್ತಾ ಇದ್ದು. ಭಾಗ ಮೂವತ್ತಾದ್ದು, ಜೋಕು ಡಬ್ಬಲ್ ಸೆಂಚುರಿ ಆಯಿದು.
ಸತ್ಯಣ್ಣ ಸತ್ಯಣ್ಣನೇ….ಅವ ಇನ್ನೂ ಬರೆಕ್ಕು .ಅಕೇರಿಯಾಣದ್ದು ಅಪ್ಪಲಾಗ
ಅಕೇರಿಯಾಣ ಗೆರೆ ಓದಿ ಮಕ್ಕೋಗೆ ನೆಗೆಯೋ ನೆಗೆ….
ರೈಸಿದ್ದು ಭಾವಾ ರೈಸಿದ್ದು..
ಅಂತೂ ನಮ್ಮ ಭಾವಂಗೆ ಇನ್ನೂ ಇಪ್ಪತ್ತೆರಡು ಪ್ಲೇಟು ಚಿಪ್ಪುಸೂ,ಚಾಯವೂ ಆಯೆಕ್ಕಿದಾ.
ಸತ್ಯಣ್ಣ ಸತ್ಯಣ್ಣನೇ.
“ಅಕ್ಕು, ಕಾಂಬೋ”…ಕೋಟೂರಣ್ಣನ ಪಟ ಚೆಂದ ಆಯಿದು….
Rammyange Jwara kammi Aato!!
ಯಬ್ಬೋ ಸತ್ಯಣ್ಣನೇ…
ಸತ್ಯಣ್ಣ ೩೦ ಆತಿಲ್ಯೋ ಹೇಳಿದ್ದರ ಅರ್ಥ ಗೊಂತಾಯ್ದು.. ೫೨ ದಾಂಟಲಿ ಹೇಳಿ ನಾವು ಹೇಳ್ತು ಇತ್ಲಾಗಿಂದ..
ಮುಂದಿನ ಗುರುವಾರವುದೇ ಈ ಹೊತ್ತಿಲ್ಲಿ, ಬೈಲಿಲ್ಲಿ ಸತ್ಯಣ್ಣನ ಕಾಣೆಕ್ಕು ನವಗೆ 😉