Oppanna.com

'ಅಡಿಗೆ ಸತ್ಯಣ್ಣ' ಜೋಕುಗೊ – ಭಾಗ 32

ಬರದೋರು :   ಚೆನ್ನೈ ಬಾವ°    on   17/10/2013    6 ಒಪ್ಪಂಗೊ

ಚೆನ್ನೈ ಬಾವ°

1
ಅಡಿಗೆ ಸತ್ಯಣ್ಣ° ದೊಡ್ಡಜ್ಜನ ವೊರ್ಷಾಂತ ಕಳ್ಸಿಕ್ಕಿ ಬಪ್ಪದಿದಾ
ನವರಾತ್ರಿ ಸಮಯವುದೇ
ಪೆರ್ಲಕ್ಕೆ ಬಂದು ಕಾಲು ಮಡಿಗಿದ್ದಷ್ಟೇ .., ಒಂದು ಕೊರಗ ಬಂದು,  ‘ಯಪ್ಪ ಕೊರಗೆ ಅಡ್ಡಬೂರ್ಯೆ’ – ಹೇದಿಕ್ಕಿ ಸತ್ಯಣ್ಣನ ಎದುರೆ ಬಗ್ಗಿ ಸರ್ತ ನಿಂದತ್ತು
ಈ..ಯೇ ಬೂರ್ನೆ ಅತ್ತ, ಈ..ಯೇ ಲಕ್ಕೋಣು ಹೇದ° ಅಡಿಗೆ ಸತ್ಯಣ್ಣ°
‘ಅಂದಪ್ಪ, ಕೊರ್ಗೆಗ್ ಪಾಡ್ಳೆ.. ಬುಕ್ಕೋ’ – ಕೊರಗನ ಡೈಯಲಾಗ್ ಆತು
“ಕೊರಗ್ಗೆಗ್ ಪಾಡ್ಯೆರ ಆವಂದ್…., ಅವು.. ಪೋಲೀಸ್ ಕೇಸ್ ಆಪುಂಡು! …! ಬರ್ಪೆ ಆವೋ” – ಸತ್ಯಣ್ಣ ಹೇದಿಕ್ಕಿ ಮುಂದೆ ನಡದ° .
ಸತ್ಯಣ್ಣನ ಕೈಂದ ನಾಕ್ರುಪ್ಪಾಯಿ ಪೀಂಕ್ಸುವೋ ಗ್ರೇಶಿದ ಕೊರಗ° ತಲೆಂದ ಮುಟ್ಟಾಳೆ ತೆಗದು ಕೈಲಿ ಹಿಂಡ್ಕಂಡಲ್ಯೇ ಬಾಕಿ.   😀
**
2
ಓ ಮನ್ನೆ ಆಯುಧ ಪೂಜೆ ಅಂದು ಅಡಿಗೆ ಸತ್ಯಣ್ಣಂಗೆ ವಿಶೇಷ ಅನುಪ್ಪತ್ಯ ಎಂತ್ಸೂ ಇತ್ತಿದ್ದಿಲ್ಲೆ.
ಈ ವೊರಿಶ ಪೆರ್ಲಲ್ಲಿ ಸಾರ್ವಜನಿಕ ಆಯುಧ ಪೂಜೆ ಹೇದು ನಿಘಂಟು ಮಾಡಿತ್ತಿದ್ದವು ಓ ಅಂದೇ
ಪುರುಸೊತ್ತು ಇದ್ದ ಕಾರಣ ಅಡಿಗೆ ಸತ್ಯಣ್ಣನೂ, ರಂಗಣ್ಣನೂ ಭಜನಾಮಂದಿರಲ್ಲಿ ಆಯುಧಪೂಜೆ ಆವ್ತಲ್ಯಂಗೆ ಎತ್ತಿದವು
ಸತ್ಯಣ್ಣನ ಕಂಡಪ್ಪದ್ದೆ ಅವಲಕ್ಕಿ ನೀವೇ ಬೆರ್ಸಿ ಸತ್ಯಣ್ಣ ಹೇದು ಸತ್ಯಣ್ಣನ ತಲಗೆ ಕಟ್ಟಿ ಬಿಟ್ಟವು
ಸತ್ಯಣ್ಣಂಗೆ ಅದರ್ಲೇನೂ ಉದಾಸನ ಇಲ್ಲೆ. ರಂಗಣ್ಣನೂ ಕೂಡಿಗೊಂಡು ಕೊಪ್ಪರಿಗೆಲೇ ಅವಲಕ್ಕಿ ಕಲುಸುಲೆ ಸುರುಮಾಡಿದವು
ಅಷ್ಟಪ್ಪಗ ಆಚಿಗೆ ಎಂತದೋ ನಾಕು ಜೆನ ಜೆವ್ವನಿಗರು ಸೇರಿ ಗುಸುಗುಸು ಮಾತಾಡ್ಯೊಂಡಿತ್ತಿದ್ದವು
ಎಂತರಪ್ಪ ಹೇದು ಹೋಗಿ ಇಣ್ಕಿ ನೋಡಿಕ್ಕಿ ಬಂದ ರಂಗಣ್ಣನತ್ರೆ ಸತ್ಯಣ್ಣ ಕೇಟ° -‘ಎಂತರ್ನೋ ಅಲ್ಲಿ ಅವರದ್ದು?’
ರಂಗಣ್ಣ ಹೇದ° – ಮಾವ°, ಬೈಲ ಮಾಣಿ ಬೆನ್ನಿಲ್ಲಿ ಲೇಪುಟಾಪು ಇದ್ದಡ, ಅದರ ಆಯುಧ ಪೂಜಗೆ ಮಡುಗೆಕೋ, ಪುಸ್ತಕ ಪೂಜಗೆ ಮಡುಗೆಕೋದು ಚರ್ಚೆ.
ಸತ್ಯಣ್ಣ ಹೇದ°- ಅದಿರ್ಲಿ, ಮದಾಲು ಇದಾ ನಮ್ಮ ಚೀಲಂದ ಲಟ್ಟಣಿಗೆ ಕೊಂಡೋಗಿ ಆಯುಧ ಪೂಜಗೆ ಮಡಿಗಿಕ್ಕಿ ಬಾ. 😀
**
3
ಅಂತೂ ಪುಸ್ತಕ ಪೂಜೆ ಆಯುಧ ಪೂಜೆ ಹೇದು ಗೌಜಿಗೆ ಕಳಾತು
ಮಂಗಳಾರತಿ, ಪ್ರಸಾದ ವಿತರಣೆ ಆತು, ರಂಗಣ್ಣನ ಬೈಕಿನಡಿಂಗೂ, ಸತ್ಯಣ್ಣನ ಕಾರಿನಡಿಂಗೂ ಲಿಂಬುಳಿ ಅರಚ್ಚಿದ್ದಾತು
ಹೆರಡ್ಳಪ್ಪಗ ರಂಗಣ್ಣ ಕೇಟ°-  ಮಾವ°! ಅಂಬಗ ಲಟ್ಟಣಿಗ್ಗೆ ಲಿಂಬುಳಿ?!
ಸತ್ಯಣ್ಣ ಹೇದ° – ತೆಕ್ಕೊಂಡಿದನೊ° ನಾಕು, ಚೀಲಲ್ಲಿ ತುಂಬ್ಸಿದ್ದೆ. ಮನಗೆ ಹೋಗಿ ಹಿಂಡುವೊ 😀
**
4.
ಅಡಿಗೆ ಸತ್ಯಣ್ಣಂಗೆ ಓ ಅಂದು ಕೋಡಿ ಕಳುದಲ್ಲಿ ಓ ಮನ್ನೆ ಪುಣ್ಯಾಯದಡಿಗೆ
ಪುಣ್ಯಾಯದಡಿಗೆ ಹೇದರೆ ಕೋಡಿ ಅಡಿಗೆ ಅಟ್ಟು ಉದ್ದ ಇಲ್ಲೆ. ಕಟ್ಟು ಕಟ್ಳೆ ಒಟ್ಟಿಂಗೆ ಸಣ್ಣಕೆ ಒಂದು ಸೀಟುಮಾಡಿರೆ ಆತು.
ಉಂಡಾಯ್ಕಿ ಮತ್ತೆ ಚಾಯ ಮಾಡಿ ಕೊಟ್ಟಲ್ಯಂಗೆ ಕೆಲಸ ಮುಗುತ್ತು.
ಈ ಉಂಡು ಚಾಯ ಅಪ್ಪಂದ ಮದಲೆ ಅಡ್ಡ ಬೀಳ್ಳೆ ಎಡಿಗಾಗದ್ದಲ್ಲಿ ಕುತ್ತ ಕೂದು ಹರಟೆ ಹೊಡವಲೆ ಅಡಿಗೆ ಸತ್ಯಣ್ಣನೂ ಇರ್ತ.
ಹಾಂಗೆ ಆದ್ದು ಮನ್ನೆ ಅಲ್ಲಿಯುದೇ.
ನಮ್ಮವು ಎರಡು ಜೆನ ಸೇರಿರೆ ಸುರುವಿಂಗೆ ಸಿಕ್ಕುವದು ಬಾಯಿಗೆ ಆಟದ ಶುದ್ದಿಯೇ
ಅಡಿಗೆ ಸತ್ಯಣ್ಣ ಕೂದೊಂಡು ಉರುಟು ಹೊಟ್ಟೆ ಉದ್ದಿಗೊಂಡು ಹೇದ° ಬೈಲ ಹೆಮ್ಮಕ್ಕಳದ್ದೇ ಒಂದು ಯಕ್ಷಗಾನ ಮಾಡಿರೆ ಹೇಂಗಕ್ಕು.
ಹೋ.. ಅದು ಅಪ್ಪಾದ್ದೇ. ಬಾಗವತಿಗೆಂದ ಹಿಡುದು ಚೆಂಡೆ ಮದ್ದಳೆ ಚಕ್ರತಾಳ ಸ್ತ್ರೀವೇಶ ರಾಜ ಪುಂಡು ತಡ್ಪೆ ಹೀಂಗೆ ಒಂದೊಂದಕ್ಕೂ ಕಣ್ಣಿಂಗೆ ಕಂಡ ಬಾಯಿಗೆ ಸಿಕ್ಕಿದ ಒಂದೊಂದು ಅಕ್ಕಂದ್ರ ಅತ್ತೆಯಕ್ಕಳ ಹೆಸರು ಹೇದು ಆತು
ಇನ್ನು ಪ್ರಸಂಗ ಎಂತಕ್ಕು ಹೇದಪ್ಪಗ, ‘ದ್ರೌಪದಿ ಪ್ರತಾಪ ಬೇಡ’ – ಹೇದ° ಉದ್ದಚೀಲ ಬಾವ° ಒಬ್ಬ°
ಮತ್ತೆ ಪಂಚವಟಿಂದ ಹಿಡುದು ನೆಂಪಪ್ಪ ಎಲ್ಲ ಹೆಸರುಗಳನ್ನೂ ನೆಂಪು ಮಾಡಿದ್ದಾತು.
ನೋಡೇಕ್ಕಾತು… ಒಂದೊಂದು ಹೇಳ್ಯೊಂಡು ಒಬ್ಬೊಬ್ಬ ನೆಗೆ ಮಾಡ್ತ ಗೌಜಿ… ಮಾಡು ಹಾರ್ಲೆ ಮಾಂತ್ರ ಬಾಕಿ! 😀

ಎರಡ್ನೇ ಹಂತಿ ಬಳ್ಸ್ಯೊಂಡಿತ್ತಿದ್ದ ಎಸ್ ಅಕ್ಕ° “ಇಂತರ ಇದು ಗೌಜಿ”- ಹೇದು ಒಳಂದ ಹೆರಬಂದು ಕೇಟವು
ಸತ್ಯಣ್ಣ° ಎದ್ದ° , “ರಂಗೋ.. ಒಲಗೆರಡ ಕೊಳ್ಳಿ ಮಡಿಗೋ” ಹೇದು ಬೈರಾಸು ಹೆಗಲಿಂಗೆ ಹಾಕ್ಯೊಂಡು ಅಡಿಗೆ ಕೊಟ್ಟಗ್ಗೆ ನಡದ°
ಸತ್ಯಣ್ಣ° ಎದ್ದಪ್ಪದ್ದೆ ಸುತ್ತು ಕೂದೊಂಡಿದ್ದ ಒಬ್ಬೊಬ್ಬ ಒಂದೊಂದು ಹೊಡೆಂಗೆ ಚಾಂಬಿದವತ್ತೆ°  😀
ಅಕ್ಕ° ಮಾಂತ್ರ ‘ಎಂತ?’ ಹೇದು ಕೇಟಲ್ಯೇ ಬಾಕಿ  😀
**
5.
ಅಡಿಗೆ ಸತ್ಯಣ್ಣ° ಅಡಿಗೆ ಮಾಡ್ತರ್ಲಿ ಉಷಾರಿ ಅಪ್ಪು
ಹಾಂಗೇಳಿ ಗಡದ್ದಿಂಗೆ ಕೂದು ಉಂಬಲೆ ಕೂಬದರ್ಲಿ ಅಡಿಗೆ ಸತ್ಯಣ್ಣ ಮೋಸವೇ
ಎರಡ್ನೇ ಹಂತಿಗೋ ಮೂರ್ನೇ ಹಂತಿಗೋ ಸಾವಕಾಶಲ್ಲಿ ಏವುದಾರು ಒಂದು ಹಂತಿ ಕರೇಲಿ ಕೂರುಗಟ್ಟೇ
ಮತ್ತೆ ಕೂಬಗಳೂ ಹಾಂಗೇ…,  ‘ಮಾಡಿ ಹಾಕಿದ್ದೆ, ತಿಂದು ನೋಡುತ್ತೆ’ ಹೇದು ಸಾಹಸಕ್ಕೆ ಇಳಿವಲೆ ಇಲ್ಲೆ. ಬೇಕಾದ್ದರ ಮಾಂತ್ರ ಆಂತೊಂಬದು.
ಹಾಂಗೇಳಿ ಒಂದೊಂದೇ ಬಪ್ಪನ್ನಾರ ಅಂತೇ ಕೈ ಚೀಪಿಯೊಂಡು ಕೂಬಲೆ ಎಡಿತ್ತೋ ಬಾಳೆ ಬುಡಲ್ಲಿ…
ಅಡಿಗೆ ಸತ್ಯಣ್ಣ ಅದಕ್ಕೆ ಕೂಬಗಳೇ ಒಂದು ಚೆಂಬಿಲ್ಲಿ ತಣ್ಣೀರು, ಇನ್ನೊಂದು ಚೆಂಬಿಲ್ಲಿ ಬೆಶಿನೀರು, ಒಂದು ಪಾಟೆ ಸಾರು, ಇನ್ನೊಂದು ಪಾಟೆ ಮಜ್ಜಿಗೆ ನೀರು ಹೀಂಗೆಲ್ಲ ಹತ್ರ ಮಡಿಕ್ಕೊಂಡೇ ಕೂಬದು
ಬೈಲ ಕೇಚಣ್ಣಂಗೆ ಈ ಕೋಲವ ನೋಡಿ ನೆಗೆ ತಡೆಯ., ಚೀಲಲ್ಲಿತ್ತಿದ್ದ ಕೆಮರ ಹಿಡ್ಕೊಂಡು ಸತ್ಯಣ್ಣನ ಎದುರೆ ಬಂದು ನಿಂದದೇ
ಕೇಚಣ್ಣ ಕೆಮರ ಹಿಡ್ಕೊಂಡು ನಿಂದಪ್ಪದ್ದೆ ಆಚೊಡೆಂದ ಸುಬ್ಬನೂ ಮೈಬೈಲು ಹಿಡ್ಕೊಂಡು ನಿಂದ°
ಇವು ಪಟ ತೆಗೆತ್ತದರ ನೋಡ್ಳೆ ಮತ್ತೆ ನಾಕು ಬಾವಂದ್ರು ಬಂದು ಸುತ್ತ ನಿಂದುಗೊಂಡವು
ಅಡಿಗೆ ಸತ್ಯಣ್ಣ ಬೈರಾಸಿಲ್ಲಿ ಮೈ ಹಳಿಗಿದ್ದರ ಉಂದಿಗೊಂಡೇ ಹೇದ° ನಿಂಗೊ ಪಟ ಎಟ್ಟು ಬೇಕಾರು ತೆಕ್ಕೊಳ್ಳಿ…,  ಬಾಳಗೆ ಮಾಂತ್ರ ಏನಾರು ತಂದು ಸೊರುಗೆಕ್ಕೆಡಿನ್ನು.
ಪಟದ ಬಾವಂದ್ರು ಬೇಕು ಬೇಕಾದ ನಮೂನೆಲಿ ಸತ್ಯಣ್ಣನ ಏಕುಟು ಮಾಡ್ಸಿ ಪಟ ಹಿಡುದ್ದದಾತು
ಏಳ್ಳಪ್ಪಗ ಸತ್ಯಣ್ಣ ಪಟ ತೆಗದ ಬಾವನತ್ರೆ ಕೇಟ° – ಬಾವೋ ಇದು ಮೋರೆಪುಟಕ್ಕೋ, ಬೈಲಿಂಗೋ, ಚಾವಡಿಗೋ?  😀
**
6.
ಉಳ್ವಾನದ ಶತರುದ್ರ ಮರದಿನ ಕಂಗಿಲಲ್ಲಿ ಏಕಾಶಿ ಆರಾದನೆ
ಅಡಿಗೆ ಸತ್ಯಣ್ಣ ಅಡಿಗೆಲಿ ಇಪ್ಪಗ ಮೊಬೈಲು ಕಿಣಿಕಿಣಿ ಆತು
ಮಾರಾಪ್ಪಿಂದ ಮೊಬೈಲು ಎಳದು ತೆಗದು ಹ್ಹಾ° ಹ್ಹು ಹೇದ್ದಾತು
ರಂಗಣ್ಣಂಗೆ ಅದು ಅಂದಾಜಿ ಆತು ಮತ್ತಾಣ ಬುಕ್ಕಿಂಗು ಅದು ಹೇದು, “ಎಲ್ಯಾಣದ್ದು ಮಾವ°?” – ಹೇದು ಕೇಟ°
ಸತ್ಯಣ್ಣ ಹೇದ° – ಬೆಂಗ್ಳೂರದ್ದು ಹೆತ್ತಿದಡವೊ°, ನಾ..ಡದ್ದಿಂಗೆ ಪುಣ್ಯಾಯಡೋ
ಬೆಂಗಳೂರದ್ದು ಹೇದಪ್ಪದೆ ರಂಗಣ್ಣಂಗೆ ಕೆಮಿ ಅಗಲ ಆತು , ಕಡಕ್ಕೊಂಡಿತ್ತಿದ್ದ ಕೈ ಸಡ್ಳು ಮಾಡಿ ಸರ್ತಕೂದು ಕೇಟ° ಏವತ್ತು ಮಾವಂಬಗ?!
ಸತ್ಯಣ್ಣ ಹೇದ° – ನಾ..ಡದ್ದೋ ಶೆನಿವಾರ. ಹೆತ್ತದು ಅಲ್ಲಿಯಡ. ಪುಣ್ಯಾಯವ ಇಲ್ಯೇ ಊರ್ಲಿ ಅಪ್ಪನ ಮನೇಲಿಯಡ
ರಂಗಣ್ಣಂಗೂ ಬರ್ರಾನೆ ಮಳೆ ಸೊಯ್ಪಿದಾಂಗೆ ಆತು., “ಹ್ಹೋ! ಊರ್ಲಿಯೇಯೋ, ಆತಂಬಗ” – ಹೇದು ಕಂಜಿ ಸುತ್ತಲೆ ಸುರುಮಾಡಿದ° 😀
**
7
ಅಡಿಗೆ ಸತ್ಯಣ್ಣಂಗೆ ನೀರ್ಚಾಲಿಲ್ಲಿ ಉಪ್ನಾನದ ಅಡಿಗೆ..
15 ಸೇರು ಹೋಳಿಗೆ. ಮುನ್ನಾಣದಿನೇ ತಂಡದೊಟ್ಟಿಂಗೆ ಹೋಯ್ದ°..
ಮೈಂದ ಕಲಸಿಕ್ಕಿ ಅತ್ತಾಳದ ಅಡಿಗ್ಗೆ ಉಪ್ಪು ಮೆಣಸು ಹಾಕಲೆ ಹೆರಟ ಸತ್ಯಣ್ಣ.
ಬೆಂದಿಗೆ ಕೊರವಲೆ ಬಂದ ನೆರೆಕರೆ ಭಾವಯ್ಯ ರಜ್ಜ ಕೊಚ್ಚೆಲ. ಒಂದೆರಡು ಸರ್ತಿ ಡೆಲ್ಲಿಲಿಪ್ಪ ಮಗಳ ಮನೆಗೆ ವಿಮಾನಲ್ಲಿ ಹೋಗಿಂಡು ಬೈಂದ.
ಸೀದಾ ಸತ್ಯಣ್ಣನತ್ರೆ ಹೋದವನೇ.. ತನ್ನ ವಿಮಾನ ಪ್ರಯಾಣವ ವಿವರುಸಲೆ ಸುರು ಮಾಡಿದ
ನಮ್ಮ ಸತ್ಯಣ್ಣ ಯುಕೆ, ಜಪಾನಿಂಗೆ ವಿಮಾನಲ್ಲೇ ಹೋದ ವಿಶಯ ಅವಂಗೆ ಗೊಂತಿಲ್ಲೆಯೋ ಕಾಣ್ತು.. ಕೊಚ್ಚಿದ…. ಕೊಚ್ಚಿದ… ವಿಮಾನಲ್ಲಿ ಹಾಂಗೆ ಹೀಂಗೆ,. ಹೇಳಿಕ್ಕಿ ಒಂದು ಮಾತು ಹೇಳಿ ಬಿಟ್ಟ-
ಸತ್ಯಣ್ಣೋ.. ವಿಮಾನಲ್ಲಿ ಗಗನಸಖಿ ಇದ್ದವಲ್ಲೋ…
“ಆರು ಭಾವ.. ಆ ಆಸರಿಂಗೆ ಕೊಟ್ಟೊಂಡು ಬಂದು ಕಪ್ಪು ತೊಟ್ಟೆಲಿ ಕಸವು ಹೆರ‍್ಕುತ್ತವೋ?” – ಹೇಳಿ ಕೇಟ° ಸತ್ಯಣ್ಣ°
ಅಪ್ಪು ಅಪ್ಪು ಅವ್ವೇ.. ಸತ್ಯಣ್ಣ.. ಈ ಲೋಕಲ್ಲಿ ಅವರಷ್ಟು ಚೆಂದದವು ಆರು ಇಲ್ಲೆ ಗೊಂತಿದ್ದೋ ಹೇಳಿದ ನೆರೆಕರೆ ಭಾವ…
ಚೆಲಾ ಇವ° ಎನ್ನತ್ರವೇ ಕೊಚ್ಚುತ್ತನ್ನೇ! ಆ ಪೈಂಟ್ ಉದ್ದಿಗೊಂಡು ಕೊಂಗಿ ಮಾಡ್ತವು ಚೆಂದವೋ ಇವಂಗೆ… ಹೇದು ಮನಸ್ಸಿಲ್ಲಿ ಗ್ರೇಶಿಗೊಂಡ ಸತ್ಯಣ್ಣ° ಹೇದಾ –  ‘ಭಾವಯ್ಯ!, ಅಂಬಗ ಎನ್ನ ಹೆಂಡತ್ತಿ ಶಾರದೆ ಚೆಂದ ಇಲ್ಲೆ ಹೇದು ನಿಂಗೊ ಹೇಳುದೋ.. ಶಾರದೆಯ ನೋಡಿದ್ದಿರೋ ನಿಂಗ?!
ಸತ್ಯಣ್ಣ ಇಟ್ಟು ಹೇದಪ್ಪದ್ದೇ ಭಾವಯ್ಯ° –  ಸತ್ಯಣ್ಣೋ!,  ನಾಳೆ ಅಟ್ಟಣೆ ಎಷ್ಟು ಜೆನಕ್ಕೆ ಹೇದು ಮನೆ ಎಜಮಾನತ್ರೆ ಕೇಟಿಕ್ಕಿ ಬತ್ತೆ ಹೇದು ಅಲ್ಲಿಂದ ಚಾಂಬಿದ 😀
ಪಟ್ಟಿ ಕೊಟ್ಟವನೇ ಇಲ್ಲಿಪ್ಪಗ ಇನ್ನು ಹೋಗಿ ಅವನತ್ರೆ ಕೇಳಿರೇ ಅರ್ತ ಅಕ್ಕಟ್ಟೇ ಇವಂಗೆ ! – ಒಳಂದಲೇ ಹೆದೊಂಡತ್ತೆ ತೊಳಸಲೆ ಸೌಟು ಹುಡ್ಕಲೆ ತಿರುಗಿದ ಸತ್ಯಣ್ಣ° 😀
**
8.
ಅಡಿಗೆ ಸತ್ಯಣ್ಣಂಗೆ ಪೆರ್ಣೆಲಿ ಅನುಪ್ಪತ್ಯ
ಅಲ್ಲಿಗೆ ಬಂದಿತ್ತ ಸೊರ್ಗದ ಅಳಿಯ° ಅಡಿಗೆ ಕೊಟ್ಟಗೆಲಿ ನಿಂದು ಪಾತಾಳ ಬಾವನತ್ರೆ ಸಾವಕಾಶ ಮಾತಾಡ್ಯೊಂಡಿತ್ತಿದ್ದ°
ಅಟ್ಟಪ್ಪಗ ಎಂತದೋ ಸೊರ್ಗದಳಿಯಂಗೆ ನೆಂಪಾತು, ಅಡಿಗೆ ಸತ್ಯಣ್ಣನ ಹೊಡೆಂಗೆ ಮೋರೆ ತಿರುಗಿಸಿ ಹೇದ° – ಸತ್ಯಣ್ಣೋ, ಲಲ್ಲುವ ಜೈಲಿಂಗೆ ಹಾಕಿದವಡ್ಡ!
ಸತ್ಯಣ್ಣಂಗೆ ಅದೆಲ್ಲ ಎಲ್ಲಿಂದ ಗೊಂತಕ್ಕು ! ಅರಡಿಯದ್ದೇ ಕೇಟ° – ಅಪ್ಪೋ ! ಎಂತಕ್ಕಪ್ಪ!
ಸೊರ್ಗದಳಿಯ ಹೇದ° – ಅಂಬಗ ನಿಂಗೊ ಟೀವಿ ನೋಡುತ್ತಿಲ್ಯೋ ಸತ್ಯಣ್ಣ°
ಸತ್ಯಣ್ಣ ಸತ್ಯವನ್ನೇ ಹೇದ° – ಇಲ್ಲೆ, ಆನು ಅಡಿಗೆ ಮಾಡ್ತದು   😀
**

***  😀 😀 😀  ***

 

6 thoughts on “'ಅಡಿಗೆ ಸತ್ಯಣ್ಣ' ಜೋಕುಗೊ – ಭಾಗ 32

  1. ಲಿಂಬುಳಿ ಕಥೆ ಓದಿ ನೆಗೆ ಬಂದು ತಡೆಯಾ..ಅಪ್ಪಚ್ಚಿ….!!!

  2. ” ಕಪ್ಪು ತೊಟ್ಟೆಲಿ ಕಸವು ಹೆರ್ಕುತ್ತವೊ ? ” ಇದರ ಓದಿರೆ ಗಗನ ಸಖಿಗೊ ವಿಮಾನಂದ ಹಾರಿ ಆತ್ಮಹತ್ಯೆ ಮಾಡುಗು. ಹರೇ ರಾಮ.

  3. ಅಡಿಗೆ ಮನೇಲಿ ಬಳಸುವ ಆಯುಧಕ್ಕೆ ಅಡಿಗೆ ಮನೆಲಿಯೇ ನಿಂಬೆ ಹಣ್ಣು ಕೊರವದು ! ಲಾಯಕ್ಕು ಇದ್ದು

  4. ಪುಣ್ಯಾಯ ಕುಂಬ್ಳೆಲಿ ಹೇದು ಹೇಳುವದು ಕೇಟತ್ತು.

  5. ಆ ಪಟ ತೆಗದೋರ ಒಟ್ಟಿಂಗೆ ಎಂಕಟಣ್ಣ ಇತ್ತಿದ್ದಾಯಿಲ್ಲೆಯಾ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×