Oppanna.com

‘ಅಡಿಗೆ ಸತ್ಯಣ್ಣ’ ಜೋಕುಗೊ – ಭಾಗ 34 (ಸುಭಗ ವಾರ ಮೂರು – ವರುಷಾಂತ ವಿಶೇಷಾಂಕ)

ಬರದೋರು :   ಚೆನ್ನೈ ಬಾವ°    on   31/10/2013    9 ಒಪ್ಪಂಗೊ

ಚೆನ್ನೈ ಬಾವ°

ಅಡಿಗೆ ಸತ್ಯಣ್ಣ° ದೊಡ್ಡಜ್ಜನ ಒರುಶಾಂತಕ್ಕೆ ಹೋದ್ದು ಬೈಲಿಂಗೆ ಗೊಂತಿದ್ದನ್ನೆ
ದೊಡ್ಡಜ್ಜನ ವಿಷಯಂಗಳ ಎಲ್ಲವನ್ನೂ ಒಂದೇ ಕತೆಲಿ ಹೇಳಿ ಮುಗುಶುಲೆ ಎಡಿಯ
ಹಾಂಗೇ, ದೊಡ್ಡಜ್ಜನ ಮನೆ ಅನುಪ್ಪತ್ಯ ವಿಷಯಂಗಳನ್ನೂ ಒಂದೇ ಸರ್ತಿಲಿ ಹೇಳಿ ಮುಗಿಯ. ಎಂತಕೆ ಹೇದರೆ, ಬೆಂಗ್ಳೂರತ್ತೆ ಹೇದಾಂಗೆ ಆ ದಿಕ್ಕಂಗೆ ಕೊಟ್ಟದು, ಈ ದಿಕ್ಕಂಗೆ ಕೊಟ್ಟದು, ಆಚ ದಿಕ್ಕಂಗೆ ಕೊಟ್ಟದು, ಆಚೀಚಿಗಂದ ಬಂದೋರು ಹೇದು ಅಲ್ಪ ಜೆನ ಆವ್ತು ಒಂದು.  ಒರುಶಾಂತ ಹೇದು ಒಂದು ದಿನ ಅಪ್ಪದಾರು ಅರೆಮಾಸಿಕ, ಪತಂಗ ಹೇದು ದಿನ ಮೂರಾವ್ತಿದ. ಅಡಿಗೆ ಸತ್ಯಣ್ಣಂಗೂ ಸುಭಗಣ್ಣಂಗೂ ಅಪ್ಪಗ ನಾಕು ದಿನಾಣ ಒರುಶಾಂತ ಅನುಪ್ಪತ್ಯ ಆವ್ತಿದ. ಮತ್ತೆ ನಮ್ಮ ವರದಿಗಾರಂಗೆ ಒಂದೊಂದೇ ನೆಂಪು ಮಾಡಿ ಎಲ್ಲ ಒಂದೇ ಸರ್ತಿ ಹೇದುಬಿಟ್ಟಿಕ್ಕಲೆ ಕೂದರೆ ಆಚಿಗೆ ಬೇಲೆನ್ಸು ತಪ್ಪುತ್ತು. ಹಾಂಗೆ ಸುಭಗಣ್ಣ ಒರತೆ ರೆಜ ರೆಜವೇ ಪೀಂಕಿಸಿ ಬಿಟ್ಟಾಂಗೆ ಇಲ್ಲಿ ತಂದೊಪ್ಪಿಸಿದ್ದಿದಾ.  ಅಂತೂ ಒರುಶಾಂತ ಮೂರು ದಿನಾಣ ಲೆಕ್ಕಲ್ಲಿ ಸುಭಗ ವಾರ ಮೂರಕ್ಕೆ ಎತ್ತಿತ್ತಿದಾ.
ಬನ್ನಿ..  ನೋಡ್ವೋ ಸುಭಗಣ್ಣ° ಸತ್ಯಣ್ಣನತ್ರೆಂದ ಎಂತೆಲ್ಲ ಕತೆ ಹೆರ್ಕಿಂಡು ಬೈಂದವೇದು.
~~

1
2.10.2013
ಒರುಶಾಂತ ಮಧ್ಯಾನ್ನ  ಊಟಕ್ಕಪ್ಪಗ ಭಯಂಕರ ರಶ್ಶು.
ಬಾಳೆಹಾಕುತ್ತ ಹೊತ್ತಿಂಗೆ ಕಾರಿಂದ ಇಳುದು ಬಂದ ಪೇಂಟು ಸುರ್ಕೊಂಡ  ಪೇಟೆ ಭಾವಯ್ಯಂದ್ರು ಉಂಡು ಎದ್ದು ಕೈತೊಳದಿಕ್ಕಿ ಅಲ್ಲಿಂದಲೇ ಹಾಂಗೇ ಕಾರು ಹತ್ತಿ ಹೋದವು.
ಕರವಲಪ್ಪಗ ಎತ್ತೆಕ್ಕಾದವು, ಮಕ್ಕಳ ಶಾಲೆ ಬಿಡ್ಲಪ್ಪಗ ಶಾಲೆ ಗೇಟಿನ ಬುಡಲ್ಲಿ ಇರೆಕ್ಕಾದವು ಎರಡ್ನೇ ಹಂತಿ ಕಳುದಪ್ಪಗ ಮನೆಯೋರ ವಿಶೇಷ ಅನುಮತಿ ತೆಕ್ಕೊಂಡು ಅಕ್ಕು ಕಾಂಬೋ° ಮಾಡಿದವು.
ಅಕೇರಿಗೆ ಮಂತ್ರಾಕ್ಷತೆಯೂ  ಕಳುದಪ್ಪಗ ಬಾಕಿ ಒಳುದೋರೂ  ಒಬ್ಬೊಬ್ಬನೇ ಚೀಲ ಹೆಗಲಿಂಗಾಕಿ ಮೆಟ್ಟಿನಜೋಡು ಸಿಕ್ಕುಸಿ ‘ಕಾಂಬೊ ಭಾವಾ’ ಹೇದಿಕ್ಕಿ ನೆಡದವು.
ಅಂತೂ ಮಧ್ಯಾನ್ನ ಎರಡು ಗಂಟೆಗೆ ಜೆನ ತುಂಬಿ ಜಿಮಿಜಿಮಿ ಜಿಮಿಕ್ಕೊಂಡಿದ್ದಿದ್ದ ದೊಡ್ಡಜ್ಜನ ಜಾಲು ಐದು ಗಂಟೆ ಅಪ್ಪಗ ಮುಕ್ಕಾಲುವಾಶಿ ಖಾಲಿ, ಪ್ಫೋ!
ಮದಲಿಂದಲೇ ದೊಡ್ಡಜ್ಜನಲ್ಲಿ  ಅಕೇರಿ ಉಳುದೋರಿಂಗೆ ಅಕೇರಿಯಾಣ ಬಸ್ಸು ಇಷ್ಟೊತ್ತಿಂಗೆ ಹೇದು ಹೇಳ್ತ ಕ್ರಮ ಇಲ್ಲೆ.
ಹಾಂಗಾಗಿ ಇದೀಗ ಹೊಸತ್ತಾಗಿ ಅಡಿಗೆ ಸತ್ಯಣ್ಣನೂ ಸುರುಮಾಡಿದ್ದನಿಲ್ಲೆ, ದೊಡ್ಡಳಿಯನೂ ಸುರುಮಾಡಿದ್ದನಿಲ್ಲೆ. 😀
**
2
ಒರುಶಾಂತದ ದಿನ ಒಂದರಿಯಾಣ ಹೆರಡುತ್ತೋರಿಂಗೆ ಚಾಯಕಾಪಿ ವೆವಸ್ಥೆ ಆತೂಳಿ ಆದರೆ ಮತ್ತೆ ಒಂದು ಘಳಿಗೆ ಸತ್ಯಣ್ಣಂಗೆ ವಿಶ್ರಾಂತಿ.
ದೊಡ್ಡ ಮಗಳು ಹೇಂಗೂ ಇಪ್ಪಕಾರಣ ದೊಡ್ಡಳಿಯಂಗೂ ವಿಶ್ರಾಂತಿ. ಎಲೆ ತಟ್ಟೆ ನೋಡ್ಯೊಂಡಿದ್ದರೆ ಆತು.
ರಂಗಣ್ಣನೂ ಸತ್ಯಣ್ಣನೂ  ಒಂದೊಂದು ಹಸೆ ಹುಡ್ಕಿ  ಫೇನಿನ ಅಡಿಲಿ ಜಾಗೆ ನೋಡಿ ಹತ್ತರತ್ತರೆ ಹಾಕಿ ಮಗ್ಗಿಲು ಅಡ್ಡ ಹಾಕಿದವು.
ಅಂದ್ರಾಣ ದಿನದ ಅಡಿಗೆಯ ಬಗ್ಗೆ ಆತ್ಮಾವಲೋಕನ ಮಾಡ್ತ ನಮುನೆಲಿ ಅವರಿಬ್ಬರ ನೆಡುಕೆ ಮಾತುಕತೆ ನೆಡೆದತ್ತು.
ಅಷ್ಟು ಆಗಿ ಮತ್ತೆ ವಿಷಯ ನಾಳೆಯಾಣ ಅಡಿಗ್ಗೆ ಎತ್ತಿತ್ತು.
“ನಾಳೆಯಾಣ ಅಟ್ಟಣೆ ಎಷ್ಟು ಜೆನಕ್ಕಡ ಮಾವಾ…?” –  ರಂಗಣ್ಣ ಕೇಟ.
“ನೂರು” – ಸತ್ಯಣ್ಣ° ಉವಾಚ
“ಯೋಪ! ನೂರು ಜೆನವೋ?! … ಅಲ್ಲ ಮಾವ°, ಇವು ಈ ಪತಂಗಕ್ಕೆಲ್ಲ ಇಷ್ಟು ದೊಡ್ಡಕೆ ಹೇಳಿಕೆ ಹೇಳೆಕ್ಕಾತೋ? ಬರೇ ಕೊಟ್ಟು ತಂದಲ್ಲಿಂಗೆ ಹೇಳಿದ್ದರೆ ಸಾಕಾವ್ತಿತ್ತಿಲ್ಯೋ..?!!”
ರಂಗಣ್ಣನ ಅಧಿಕಪ್ರಸಂಗದ ಮಾತು ಕೇಳಿ ಸತ್ಯಣ್ಣಂಗೆ ಪಿಸುರು ಎಳಗಿತ್ತು.
“ಅಲ್ಲ ಮಾರಾಯನೇ, ಜೆಂಬ್ರಕ್ಕೆ  ಬರೇ ಕೊಟ್ಟು ತಂದಲ್ಲಿಂಗೆ ಮಾಂತ್ರ ಹೇಳಿರೆ ಸಾಕೋ ಅಲ್ಲ ಪಿಕ್ಕಾಸು ಕೊಟ್ಟಲ್ಲಿಂಗೂ  ಹೇಳೆಕ್ಕೋ ಹೇಳ್ತದರ  ತೀರ್ಮಾನ ಮಾಡೆಕ್ಕಾದ್ದು ಜೆಂಬ್ರ ತೆಗೆತ್ತ ಮನೆಯವು. ನಾವಲ್ಲ. ಅವು ಎಷ್ಟು ಜೆನಕ್ಕೆ ಏರ್ಪಾಡು ಮಾಡ್ತವೋ ಅಷ್ಟು ಜೆನಕ್ಕೆ ಬೇಯ್ಶಿ ಹಾಕುತ್ತ ಕೆಲಸ ಮಾಂತ್ರ ನಮ್ಮದು. ಗೊಂತಾತಿಲ್ಯೋ?!” 😀
ಸತ್ಯಣ್ಣಂಗೆ ಪಿಸುರು ಎಳಗಿತ್ತು ಹೇದು ಗೊಂತಾದಪ್ಪಗ ಉಸ್ಕ್ಕು ದಮ್ಮು ಇಲ್ಲದ್ದೆ ಮನುಗಿದ ರಂಗಣ್ಣ.!!  ಆಚಿಗೆ ಎಲೆ ತಟ್ಟೆ ಹತ್ರಂದ ಮರ ಸಿಗಿತ್ತ ಸೊರವೂ ಕೇಟೊಂಡಿದ್ದತ್ತು 😀
**
3
ಎಲ್ಲದಿಕ್ಕೆ ಆವ್ತಾಂಗೆ ದೊಡ್ಡಜ್ಜನಲ್ಲಿಯೂ ಮನ್ನೆ ಒರುಶಾಂತ ಮರದಿನ ಪತಂಗ.
ಕೆಲವು ದಿಕ್ಕೆ ಈ ಕಾರ್ಯಕ್ರಮಂಗಳಲ್ಲಿ ಕೆಲವು ಐಟಮುಗಳ ‘ಬಟ್ಟಕ್ಕೊ’ಗೆ ಬಳುಸುವಷ್ಟೇ ಮಾಡುಗಷ್ಟೆ.
ಆದರೆ ದೊಡ್ಡಜ್ಜನಲ್ಲಿ ಹಾಂಗಲ್ಲ. ತೋವ್ವೆ ತಂಬುಳಿ ಆದರೂ ರಸಾಯನ ಆದರೂ ಅದು ಹಂತಿಗೂ ಬರೆಕು.
ಸತ್ಯಣ್ಣ° ಪತಂಗ ದಿನ ಎರಡ್ನೇ ಹಂತಿಲಿ ಉಂಬಲೆ ಕೂಯಿದ° ಮನೆಯೋರ ಹಂತಿ ಒಟ್ಟಿಂಗೆ. ಗಂಟೆ ಮೂರಕ್ಕೆ ಹತ್ತರೆ ಆಯಿದು.
ಸಾರು ಸಾಂಬಾರು ಆಗಿ ಮೇಲಾರ ಬಂದು ಪಾಯಸ ರಸಾಯನದವರೆಂಗೆ ಎತ್ತಿತ್ತು.
ಹಂತಿಲಿ ಕೂದ ದೊಡ್ಡಭಾವನಾಂಗಿಪ್ಪೋರಿಂಗೆ ಪಾಯಸ ರಸಾಯನ  ಎರೆಡೆರಡು ಸೌಟು ಬಳಿಸಿದ್ದೂ ಆತು.
“ರಸಾಯನ ಒಂದೊಂದು ಕವಂಗ ಒಳುದ್ದು..” – ಹೇದ° ಬಳ್ಸಿದ ಬೆಟ್ಟುಕಜೆ ಮಾಣಿ° ಚಪ್ಪರಲ್ಲಿ ನಿಂದುಗೊಂಡು.
“ತೊಂದರೆ ಇಲ್ಲೆ, ಅದು ಮತ್ತಂಗೆ ಆತು” – ಹೇದವು ಹತ್ತ್ರೆಯೇ ಕೂದ ಪದ್ಯಾಣತ್ತೆ.
ಎದುರಾಣ ಹೊಡೆಲಿ ಕೂದ ರಂಗಣ್ಣಂಗೆ ಪರಮಾಶ್ಚರ್ಯ..!!
ತಡವಲೆಡಿಯದ್ದೆ ಕೇಳಿದ°- “ಅಪ್ಪೊ ಪದ್ಯಾಣತ್ತೆ!, ರಸಾಯನ ಈಗಳೇ ಗಡಿದಾಂಟಿ ಹೋಪ ಅಂದಾಜಿಲಿ ಇದ್ದು. ಹಾಂಗಿದ್ದರೂ ನಿಂಗ ಅದರ ಮತ್ತಂಗೆ ಆತು ಹೇಳ್ತೀರನ್ನೇ? ಮತ್ತಂಗೆ ಒರೆಗೆ ಒಳಿಗೋ ಅದು..?”
ಸತ್ಯಣ್ಣ° ಹೇದ° – ” ಏ ಬೋಸೋ… ಮತ್ತಂಗೆ ಹೇದರೆ ಇಲ್ಲಿ ಮದಲಿಂಗೆ ಇಲ್ಲಿ ಚಾಕರಿಗೆ ಬಂದೊಂಡಿದ್ದಿದ್ದ ಒಂದು ಆಳಿನ ಹೆಸರು – ಮತ್ತನ್. ಅದಕ್ಕೆ ಈಗ ಪ್ರಾಯ ಆಗಿ ನೇರ್ಪಕೆ ಕೈಕಾಲು ಹಂದುತ್ತಿಲ್ಲೆ. ಆದರೆ ಇಲ್ಲಿ ಎಂತ ಅನುಪ್ಪತ್ಯ ಇದ್ದರೂ ಊಟಕ್ಕೆ ಅದು ಬಿಡಾರ ಸಮೇತ ತಪ್ಪದ್ದೆ ಬಕ್ಕು. ಉಂಡಿಕ್ಕಿ ಏನಾರು ಒಳುಗಡೆ ಇದ್ದರೆ ಅದನ್ನೂ ಕಟ್ಟಿಂಡು ಹೋಕು. ಹಾಂಗಾಗಿ ಪದ್ಯಾಣತ್ತೆ ಆ ಮತ್ತಂಗೆ ಆತು ಹೇದು ಹೇದ್ದದು” 😀
**
4
ಅಡಿಗೆ ಸತ್ಯಣ್ಣನ ಕಾಂಬಗ ಒಂದೊಂದು ನಮೂನೆ ಪ್ರಶ್ನೆ , ಸಂಶಯಂಗೊ ಎಳಗುವದು ಒಬ್ಬೊಬ್ಬಂಗೆ
ಒರುಶಾಂತ ಅತ್ತಾಳ ದಿನ ಅಡಿಗೆ ಎಲ್ಲ ಆಗಿ, ಬಳುಸಲೆ ಪಾತ್ರಲ್ಲಿ ತೋಡಿ ಮಡಿಗಿಯೂ ಆಗಿದ್ದತ್ತು ಅಡಿಗೆ ಸತ್ಯಣ್ಣಂಗೆ
ದೊಡ್ಡಳಿಯನ ಹಿಡಿಸೂಡಿ ಸೇವೆ ಆದಪ್ಪದ್ದೇ ಫೇನಿನಡಿಲಿ ಬಗ್ಗಿ ನಡವ ಅಳಿಯ° ಬಾಳೆಲೆ ಕಟ್ಟ ಹಿಡ್ಕೊಂಡು ಬಂದ°
ಬಾಳೆಲಿ ಹಾಕ್ಯೊಂಡಿಪ್ಪಗ ಪೆರಟು ಸಕ್ಕಣ್ಣ ಭಾವ° ಕೇಟ° – ಅಪ್ಪೋ ಸತ್ಯಣ್ಣ! ಬಾಳೆಲೆ ಕೊಡಿಯ ಎಂತಕೆ ಎಡತ್ತಿಂಗೆ ಹಾಕುಸ್ಸು?, ಬಲತ್ತಿಂಗೋ ಮೇಗಂತಾಗಿಯೋ ಏಕೆ  ಹಾಕಲಾಗ?!
ಸತ್ಯಣ್ಣ ಹೇದ° – ನಾವು ಉಣ್ಸು ಬಲದ ಕೈಲಿ ಇದಾ, ಕೈ ತುಂಬ ಬಾಚಿ ಬರಗಿ ಉಂಬಲೆ ಅನುಕೂಲ ಆಯೇಕು ಹೇದು ಅಗಲ ಜಾಗೆ ಇಪ್ಪ ಕಡೆ ಬಲದ ಹೊಡೆಂಗೆ ಹಾಕೆಕು ಹೇದು ಶಾಸ್ತ್ರ
ಅಪ್ಪೋ ಅಲ್ಲದೋ.,  ಸತ್ಯಣ್ಣ° ಹೇದಪ್ಪಗ  ಅದು ಅಪ್ಪಪ್ಪು ಹೇದೇ ಅಪ್ಪದು . ಅಪ್ಪೋ ಅಲ್ಲದೋ?!  😀
**
5
ಅಡಿಗೆ ಸತ್ಯಣ್ಣ ಇನ್ನೂ ಒರುಶಾಂತ ಮನೇಲಿಯೇ ಇದ್ದ°, ಪತಂಗ ಬಿರುದ್ದಿಲ್ಲೆ
ಅಡಿಗೆ ಸತ್ಯಣ್ಣನಲ್ಲಿ ಟಿ.ವಿ ಇದ್ದು ಗ್ರೈಂಡರಿದ್ದು, ಪ್ರಿಜ್ಜು ಇದ್ದು, ಮಿಕ್ಸಿ ಇದ್ದು, ಬೈಕು ಇದ್ದು, ಕಾರು ಇದ್ದು
ಆದರೆ ಅಡಿಗೆ ಸತ್ಯಣ್ಣ° ಅದರ ಎಲ್ಲ ಉಪಯೋಗ ಮಾಡ್ತ ಕ್ರಮ ಇಲ್ಲೆ. ಅದೆಂತಿದ್ದರೂ ಶಾರದೆ ಅಕ್ಕಂಗೆ, ರಮ್ಯಂಗೆ
ಬೈಕು ಮಾಂತ್ರ ಸತ್ಯಣ್ಣಂಗೆ…,  ಅದೂ ಅಂಬೇರ್ಪಿಂಗೆ ಎಲ್ಯಾರು ಹೋಯೇಕ್ಕಾರೆ ಮಾಂತ್ರ.
ಅಡಿಗೆ ಸತ್ಯಣ್ಣ ಮನೆಲಿ ಇಪ್ಪ ದಿನ ಕಡವಕಲ್ಲೇ ಹಂದುತ್ತದು, ಹೂಜಿ ನೀರೇ ಕುಡಿವದು.
ಹೋದಲ್ಲ್ಯೂ ಕಡವ ಕಲ್ಲಿಂಗೇ ಹಾಕೋ° ಹೇಳುಗು ರಂಗಣ್ಣಂಗೆ ಸತ್ಯಣ್ಣ°
ಇದೆಲ್ಲ ಎಂತ್ಸಕೆ ಸತ್ಯಣ್ಣ ಹೀಂಗೆ?! – ಕೇಟ° ಉದ್ದದಷ್ಟೇ ಅಡ್ಡಕೆ ಬೆಳದ ಬಬೆಟ್ಟು ಭಾವ°.
ಸತ್ಯಣ್ಣ ಹೇದ° -– “ಅದೆಲ್ಲ ಸೌಕರ್ಯಕ್ಕೆ ಅಕ್ಕಷ್ಟೇ ವಿನಾ ರುಚಿಗೆ ಆತಿಲ್ಲೆ. ರುಚಿ ಸಿಕ್ಕೆಕಾರೆ ಕಡವ ಕಲ್ಲಿಲ್ಯೇ ಕಡೆಕು, ಹೂಜಿ ನೀರನ್ನೇ ಕುಡಿಯೆಕು.  ಕರೆಂಟು ಬಿಲ್ಲಿಂಗೂ ಗುಣ ಇದ್ದು ! 😀
**
6
ಮನ್ನೆ ದೊಡ್ಡಜ್ಜನಲ್ಲಿ ದೀಕ್ಷಾಂತದ ವರುಷಾಂತ ಇತ್ತಪ್ಪೋ?
ಅಡಿಗೆ ಸತ್ಯಣ್ಣಂದು ಅಡಿಗೆ ಸುದರಿಕೆ., ದೊಡ್ಡಳಿಯಂದು ಸರ್ವ ಸುದರಿಕೆ!
ದೊಡ್ಡಜ್ಜ ಹೋಗಿ ವರುಷ ಒಂದು ಆದರೂ ಅವರ ಜಾಗಗೆ ಒಬ್ಬ ಗುರಿಕ್ಕಾರನ ನೇಮಕ ಆಯಿದಿಲ್ಲೆ.
ಹಾಂಗೆ ಹಿಳ್ಳೆಮನೆ ಅಣ್ಣನೊಟ್ಟಿಂಗೆ ಕೆಲವು ಜೆನಂಗ ಬಂದಿತ್ತಿದ್ದವಿದಾ ಈ ವಿಚಾರವಾಗಿ ಮಾತಾಡ್ಲೆ.
ಎಸ್ ಅಕ್ಕಂಗೂ ಅಲ್ಲಿಗೆ ಹೋಗದ್ದೆ ನಿಮುರ್ತಿ ಇಲ್ಲೆ.  ಹೋಗಿ ಎತ್ತಿಯಪ್ಪದ್ದೆ ದೊಡ್ಡಳಿಯಂದು ‘ಏನು’ ಹೇದು ಉಪಚಾರ ಆತು ಕ್ಕೆ ಜಾಲಕೊಡಿಗೆ ಬಂದು.
ಎಸ್ ಅಕ್ಕಂಗೆ ಆಸರಿಂಗೆ ಆಯ್ಕೊಂಡಿದ್ದಾಂಗೆ ಹಿ ಮ ಅಣ್ಣ ದಿನಿಗೇದವು. ಮತ್ತೆ ಒಂದು ಕರೇಲಿ ನಿಂದು ಮೀಟಿಂಗು ಆತು.
ಸರ್ವ ಸುದರಿಕೆ ಅಳಿಯಂಗೆ ಒಂದಿಕ್ಕೆ ನಿಂಬಲೆ ಪುರುಸೊತ್ತು ಇಲ್ಲೆ.  ಎಡೇಲಿ ಅಡಿಗೆ ಕೊಟ್ಟಗೆ ಹೊಡೆಂಗೆ ಹೋಪಗ ಮೀಟಿಂಗ್ ಒಂದರಿ ಬಿರುದತ್ತು,
ಇರುವಾರ ಮತ್ತೊಂದು ದಿಕ್ಕೆ ಕೂದು ಮಾತಾಡಿದವು! ರಜ್ಜ ಮಾತಾಡ್ಲಪ್ಪದ್ದೆ ಹೊಡಾಡ್ಲೆ ದಿನಿಗೆಳಿದವು.
ಅದಾಗಿ ಊಟ. ಗಡದ್ದು ಉಂಡಿಕ್ಕಿ ರಜ್ಜ ಮನುಗದ್ದರೆ ಅಕ್ಕೋ, ಮನಿಕ್ಕೊಂಡೇ ಒಂದು ಮೀಟಿಂಗ್ ಆತು.
ಮತ್ತೆ ಮಂತ್ರಾಕ್ಷತೆ ಹೊತ್ತು. ಅದಾಗಿ ಹೆರಡ್ತ ಗೌಜಿ!
ಕೂದು, ನಿಂದು, ಮನಿಗಿ, ಎದ್ದು ಹೇಂಗೆ ಮಾಡಿ ಮೀಟಿಂಗ್ ಮಾಡಿದರೂ ಸರಿಕಟ್ಟು ಜೆನರ ಆಯ್ಕೆ ಮಾಡ್ಲೆ ಆಯಿದೆಲ್ಲೆನ್ನೆ ಸತ್ಯಣ್ಣಾ.. ಹೇದವು ಹಿ ಮ ಅಣ್ಣ ಬೇಜಾರಲ್ಲಿ.
ದೊಡ್ಡಜ್ಜ ಹೋದ್ದದರಂದಲೂ ದೊಡ್ಡ ಬೇಜಾರ ಅವರ ದಪ್ಪ ಸೊರಲ್ಲಿತ್ತು! 🙁
ಸತ್ಯಣ್ಣ ಹೇದ°- ಗೋಕರ್ಣ ಮಂಡಲದ ಈ ಕರೇ..ಲಿ ಇಷ್ಟು ವರುಷ ನಮ್ಮತನವ ಒಳಿಶಿ ಬೆಳೆಶಿ ಬಂದ ದೊಡ್ಡಜ್ಜನ ಜಾಗೆಗೆ ಅಷ್ಟು ಸುಲಾಬಲ್ಲಿ ಜೆನ ಸಿಕ್ಕುತ್ತಿತ್ತರೆ ದೊಡ್ಡಜ್ಜ ತನ್ನ ಉತ್ತರಾಧಿಕಾರಿಯ ಯಾವಾಗಲೋ ನೇಮುಸಿತ್ತಿತ್ತವು! ಕೆಲವು ಜಾಗೆಗ ಹಾಂಗೇ ಖಾಲಿ ಆದರೆ ತುಂಬುಲೆ ಕಷ್ಟ ಅಣ್ಣೋ!! ಸಕಲ ಐಶ್ವರ್ಯವ ಇರುವಾರ ತುಂಬುಸುಲೆಡಿಗು, ಆದರೆ ದೊಡ್ಡಜ್ಜನಂಥಾ ನಿಧಿಯ ತುಂಬುಸುದು ಕಷ್ಟವೇ ಸರಿ 🙁
“ಸತ್ಯಣ್ಣ° ಹೇಳೊದು ಕೇಳ್ವಾಗ ನೆಗೆ ಬತ್ತರೂ ಸತ್ಯಣ್ಣನ ಮಾತಿಲ್ಲಿ ಮರ್ಮ ಇದ್ದು ಅಪ್ಪೋ” – ಹೇದವು ಎಸ್.ಅಕ್ಕ° 😀
**
7
ಒರುಶಾಂತ ದಿನ ಅಡಿಗೆ ಸತ್ಯಣ್ಣಂಗೆ ಸಮಯಕ್ಕೆ ಸರಿಯಾಗಿ ಅಡಿಗೆಯೂ ಆಯ್ದು, ಒಳ ಬಟ್ಟಮಾವನ ಕೆಲಸವೂ ಆವ್ತಾ ಇದ್ದು.
ಊಟಕ್ಕೆ ಕೂಪಗ ನೆಡು ಹಂತಿಲಿ ಕುಂಟಾಂಗಿಲ ಭಾವನ ನೆಡು ಅಕ್ಕನ ಸಣ್ಣ ಮಗ° ಕೂಯಿದ.
ವಾಟೆ ಬಾವಂಗೆ ಅಡಿಗೆ ಸತ್ಯಣ್ಣ ಹೊರುದ ಗುರುವಾಯೂರು ಹಪ್ಪಳವ ಬಳ್ಸಿ, ಕೇಳಿ ಆಗಿ ಸಾಂಬಾರು ಬಳ್ಸಿಯೂ ಆಯಿದು.
ಸುಭಗ ದೊಡ್ಡಪ್ಪನ ಹೊಟ್ಟೆ ಕಂಡಪ್ಪಗ ಹಪ್ಪಳ ನೆಂಪಾತೋ ಏನೋ ಮಾಣಿಗೆ, “ದೊಡ್ಡಪ್ಪಾ°.., ಎನಗೆ ಒಂದು ಹಪ್ಪಳ ಬೇಕು” ಹೇದ° ಕುಂಞಿ ಮಾಣಿ
ಈ ಸುಭಗ ದೊಡ್ಡಪ್ಪ ಉಬ್ಬಿದ ಎರಡು ಹಪ್ಪಳ ತಂದವು!,  “ಇದಾ… ಮಾಣಿ, ಹಪ್ಪಳ”  ಹೇದು ಕೊಡುವಾಗ, ಎನಗೆ ಒಂದೇ ಹಪ್ಪಳ ಸಾಕು ಹೇದ° ಕುಂಞಿ ಮಾಣಿ.
“ತಿನ್ನಪ್ಪಾ… ಲಾಯ್ಕಿದ್ದು” ಹೇದು ದೊಡ್ಡಪ್ಪನ ಒತ್ತಾಯ! ., ಮಾಣಿಗೆ ಬೇಪಲೇ ಬೇಡ!.
ತಂದದರ ಎಂತ ಮಾಡ್ಸು ಹೇದು ಸುಭಗಣ್ಣಂಗೆ ಚಿಂತೆ L. ಕರೇಲಿ ಆದರೆ ಒಂದೇ ಸರ್ತಿಯಂಗೆ ಬಾಯಿಗೆ ಹಾಕಿಕ್ಕುಲಾವುತ್ತಿತ್ತು J, ಇದು ನೆಡು ಹಂತಿ, ಇವನ ಬೊಬ್ಬೆಗೆ ಎಲ್ಲೊರೂ ನೋಡಿದ್ದವು ಬೇರೆ!
ಮತ್ತೆ ತಳಿಯದ್ದೆ ಹತ್ತರೆ ಕೂದ ಇನ್ನೊಬ್ಬ ಮಾಣಿಯ ಬಾಳಗೆ ಹಪ್ಪಳ ಹಾಕಿಕ್ಕಿ ನೆಡದವು ಸುಭಗಣ್ಣ!!
ಅಡಿಗೆ ಕೊಟ್ಟಗೆಂದಲೇ ಇದೆಲ್ಲವ ನೋಡಿಗೊಂಡಿತ್ತಿದ್ದ  ಅಡಿಗೆ ಸತ್ಯಣ್ಣ°, ದೊಡ್ಡಜ್ಜನ ದೊಡ್ಡ ಮಗಳತ್ರೆ ಹೇದನಡ°ಇದೇ ಹೋಳಿಗೆ ಆಗಿರುತ್ತಿದ್ರೆ ಈ ಹಂತಿ ಮುಗಿವಲೆ ಇನ್ನರ್ಧ ಗಂಟೆ ಬೇಕಾವ್ತಿತ್ತು. 😀
**
8
“8ನೇ ತಾರೀಕು ಹೊತ್ತೋಪಂಗೆ 12ಲೀಟರ್ ಹಾಲು”.
ಇದು ಸತ್ಯಣ್ಣನ ಪಟ್ಟಿಲಿಪ್ಪದು. ಒರುಶಾಂತದ ಮುನ್ನಾಣದಿನ ಹೊತ್ತೋಪಗಾಣ ಕಾಪಿಚಾಯಕ್ಕೂ, ಮೇಲಾರಕ್ಕೆ ಕೊರಯಾಣ ಚಾಯಕ್ಕೂ ಉದಿಯಪ್ಪಾಣ ಮೊಸರಿಂಗೂ ಆಗಿ ಇಟ್ಟು ಬೇಕಕ್ಕು ಹೇದು ಸತ್ಯಣ್ಣನ ಅಂದಾಜಿ.
ಮಾವುಂಗಾಲು ಹತ್ರಾಣ ಡಿಪೋಕ್ಕೆ ಮದ್ಯಾಂತಿರಿಗಿ ನಾಕುಗಂಟೆ ಅಪ್ಪಗ ಹಾಲು ಬತ್ತು. ಬೈಕಿಲ್ಲಿ ಹೋಗಿ ತಂದರಾತು ಹೇದು ಮದಲೇ ಲೆಕ್ಕಾಚಾರ ಹಾಕಿತ್ತಿದ್ದವು ಕುಂಠಾಂಗಿಲ ಬಾವ.
ಅರೆಮಾಸಿಕ ಕ್ರಿಯಾಭಾಗ ಕಳುದು ಉಂಡು ಒತ್ತರೆ ಆಗಿ ಮೂರುವರೆ ಹೊತ್ತಿಂಗೆ ಕುಂಟಾಗಿಲ ಭಾವ ಬೈಕಿನ ಕೀ ಹಿಡ್ಕಂಡು ಜಾಲಿಂಗಿಳುದ. ಹಿಂದಂದ ಹಾಲಿನ ಖಾಲಿ ಕೇನು ಹಿಡ್ಕಂಡು ಬೆಟ್ಟುಕಜೆ ಮಾಣಿಯೂ..
ಅವಿಬ್ರು ತುಂಡು ಜವ್ವನಿಗರು ಬೈಕು ಹತ್ತಿ ಪೇಟೆ ತಿರುಗಲೆ ಹೆರಟ್ರೆ  ತಿರುಗಿಂಡೇ ಇಕ್ಕು. ಹೊತ್ತು ಹೋಪದೇ ಗೊಂತಾಗ.
ಈ ಸಂಗತಿ ಗೊಂತಿಪ್ಪ ಕಾರಣ ಸತ್ಯಣ್ಣ “ಹಾಲು ತೆಕ್ಕೊಂಡು ಬೇಗ ಬನ್ನಿ, ಅಂತೇ ಹೊತ್ತು ಕಳೆಯೆಡಿ” ಹೇದ°.
ಗಂಟೆ ನಾಕಾತು, ನಾಕು ಕಾಲಾತು; ನಾಕುವರೆಯೂ ಆತು. ನಾಕುಮುಕ್ಕಾಲಾಗ್ಯೊಂಡು ಬಂತು.
ಹಾಲಿಂಗೋದವರ ಶುದ್ದಿ ಇಲ್ಲೆ. ಸತ್ಯಣ್ಣಂಗೆ ಬೆಶಿ ಅಪ್ಪಲೆ ಸುರುವಾತು. ಆದರೆ ಮಾತಾಡಿಕ್ಕಲೆ ಗೊಂತಿದ್ದೋ?
ಹಾಂಗೂಹೀಂಗೂ ನಾಕೂಮುಕ್ಕಾಲು ದಾಂಟಿ ರೆಜಾ ಹೊತ್ತಪ್ಪಗ ಹಾಲು ತೆಕ್ಕಂಡು ಎತ್ತಿದವು ಜವ್ವನಿಗರು. ಸತ್ಯಣ್ಣನ ಮೋರೆ ನೋಡಿಯಪ್ಪದ್ದೇ ಅವ ಬೆಶಿಲಿದ್ದ ಹೇಳಿ ಗೊಂತಾತು ಕು.ಭಾವಂಗೆ.
‘ತೆಕ್ಕ್.. ಈ ಹೊತ್ತೋಪಗ ಶಾಲೆ ಬಿಡ್ತ ಹೊತ್ತಿಂಗೆ ಮಾರ್ಗಲ್ಲೆ ಹೋತಿಕ್ಕಲೆ ಗೊಂತಿಲ್ಲೆ ಸತ್ಯಣ್ಣ.. ಅಲ್ಲಲ್ಲಿ ಅಲ್ಲಲ್ಲಿ ಸಣ್ಣಸಣ್ಣ ಶಾಲೆಮಕ್ಕೊ ಮಾರ್ಗದ ಕರೆಲಿ ನಿಂದೊಂಡು; ಅತ್ತು ಇತ್ತು ದಾಂಟಿಂಡು ಇರ್ತವು. ಅವರ ನೋಡಿಂಡು ಜಾಗ್ರತೆಲಿ ಬೈಕು ಬಿಡೆಕಾದಕಾರಣ ಹಾಲು ತೆಕ್ಕಂಡು ಬಪ್ಪಲೆ ಇಷ್ಟು ಹೊತ್ತಾತಿದಾ..’ ಹೇದ° ಕು.ಭಾವ°
ಪಾಪ!, ಕು.ಬಾವಂಗೆ ಬೇರೆಂತೆಲ್ಲ ಅಡ್ಡಿ ಆತೋ ಗ್ರೇಶಿಯೊಂಡ° ರಂಗಣ್ಣ. ಕು.ಭಾವ ಹೇಳ್ತ ಹಸಿ ಹಸಿ ಸತ್ಯವ ಕೆಮಿ ಮೂಗು ಕಣ್ಣರಳ್ಸಿ ನೋಡ್ಯೊಂಡು ನಿಂದಲ್ಲೇ ಬಾಕಿ ಬೆಟ್ಟುಕಜೆ ಮಾಣಿ 😀
**
9
ಜೆವ್ವನಿಗರು ಹೇದ್ದೆಲ್ಲ ನಂಬಲೆ ಅಡಿಗೆ ಸತ್ಯಣ್ಣ ಅಟ್ಟೆಂತ ಹೆಡ್ಡನೋ!
‘ಅಪ್ಪಪ್ಪಾ..ಮಕ್ಕೊ ಮಾಂತ್ರ ಅಲ್ಲ; ಜವ್ವಂತಿ ಟೀಚರಕ್ಕಳೂ ಮಾರ್ಗದ ಕರೆಲಿ ನಿಂದೊಂಡಿರ್ತವು ಹಾಂಗಾಗಿ ಅವರನ್ನೂ ನೋಡಿಂಡು ಬರೆಕಾದ್ದದೇ..”
ಸತ್ಯಣ್ಣ ಚೆಂದಕೆ ಬತ್ತಿ ಮಡುಗಿದವು ಹೇದು ಕು.ಭಾವಂಗೆ ಅಂದಾಜಿ ಆತು.
‘ಹೆ..ಹೆ..ಹೆ.. ಎಡಿಯಪ್ಪ.. ಪಾಪದೋರು ಸಿಕ್ಕಿರೆ ಎಷ್ಟೂ ಡೋಂಗಿ ಮಾಡುಗು’ ಹೇದೊಂಡು ಕು.ಭಾವ ಮೆಲ್ಲಂಗೆ ಅಲ್ಲಿಂದ ಜಾರಿದ°.
ಬೆಟ್ಟುಕಜೆ ಮಾಣಿ ಕುಂಟಾಂಗಿಲ ಭಾವನ ಹತ್ತರೆ ಬಂದು ಮೆಲ್ಲಂಗೆ ಕೇಟ°- “ಅಪ್ಪೊ ಭಾವಾ, ನಾವು ಆ ಮೇಕ್ಕಾಟ್ ಶಾಲೆ ರಂಜಿನಿ ಟೀಚರತ್ರೆ ಮಾತಾಡಿಂಡು ನಿಂದಂಡಿದ್ದದು  ಈ ಸತ್ಯಣ್ಣಂಗೆ ಹೇಂಗೆ ಗೊಂತಾತು..?!!” 😀
**

9 thoughts on “‘ಅಡಿಗೆ ಸತ್ಯಣ್ಣ’ ಜೋಕುಗೊ – ಭಾಗ 34 (ಸುಭಗ ವಾರ ಮೂರು – ವರುಷಾಂತ ವಿಶೇಷಾಂಕ)

  1. ಕು. ಭಾವ ನಿಂದೊಂಡು ಮಾತಾಡ್ಸಿದ ಟೀಚರ ಹೆಸರು ಸುಭಗ ಭಾವಂಗೆ ಹೇಂಗೆ ಗೊಂತಾದ್ಸು…? ಉಮ್ಮಪ್ಪ ಸತ್ಯಣ್ಣನತ್ರೆ ಸಿಕ್ಕಿಪ್ಪಗ ವಿಚಾರ್ಸೆಕ್ಕಟ್ಟೆ.

  2. ಕೊಟ್ಟು ತಂದಲ್ಲಿಂಗೆ ಮಾಂತ್ರ ಹೇಳಿರೆ ಸಾಕೋ ಅಲ್ಲ ಪಿಕ್ಕಾಸು ಕೊಟ್ಟಲ್ಲಿಂಗೂ ಹೇಳೆಕ್ಕೋ ಹೇಳ್ತದರ ತೀರ್ಮಾನ ಮಾಡೆಕ್ಕಾದ್ದು!..ಕೊಟ್ಟು ತಪ್ಪದು ಇತ್ಯಾದಿ ಸಾಮಾನ್ಯ ಬಳಕೆಯ ಮಾತುಗಳಲ್ಲಿ ಇಷ್ಟು ನೆಗೆ ತಪ್ಪ ಹಾಸ್ಯ ಇಪ್ಪದರ ಗುರುತಿಸುವ ಚೆನ್ನೈ ಭಾವಂಗೆ ಮಾತ್ರ ಸಾಧ್ಯ!
    ಸತ್ಯಣ್ಣ ಭಾರೀ ರೈಸಿದ್ದ !

  3. ಪಿಕ್ಕಾಸು ಕೊಟ್ಟಲ್ಲಿಂಗೆ ಪ್ರಯೋಗ ಕಂಡು ಕೊಶಿ ಆತು, ಹೇಳಿರೆ ನೆರೆಕರೆ ಆಯ್ಕು ಅಲ್ದೊ ಚೆನ್ನೈ ಭಾವಯ್ಯ. ಮರ ಸಿಗಿತ್ತ ಸೊರ ಒಳ್ಳೆ ಉಪಮೆ. ಮತ್ತಂಗೆ ಮಡಗಿದ್ದು ಲಾಯಕಾತು. ಆನು ಗ್ರೇಶಿದೆ ಫ್ರಿಜ್ಜಿಲ್ಲಿ ಮಡಗಿ ಕತ್ಲೆಪ್ಪಗ ಹೊಡೆತ್ತ ಏರ್ಪಾಟೋ ಹೇಳಿ.
    ಹಾಲು ತಪ್ಪಲೆ ತಡ ಆದ ಕಾರಣ ಕೇಳಿ ನೆಗೆ ಬಂತು. ಸೂಪರ್ ಸತ್ಯಣ್ಣ.

  4. ಅಂತೂ ವರುಶಾಂತದ ಕತೆ ವರುಶ ಆದರೂ ಮರದು ಹೋಗ! ರೈಸಿದ್ದು.

  5. ವರ್ಷಾಂತ ಗೌಜಿಯೇ. ಅದರೊಟ್ಟಿಂಗೆ ಸತ್ಯಣ್ಣನ ಒಗರಣೆಯೂ ಗೌಜಿ ಆಯಿದು ಹೇಳಿ ಒಂದು ಒಪ್ಪ.
    “ಮತ್ತಂಗಾತು” ಹೇಳಿ ಒಪ್ಪವ ಮುಂದೆ ಹಾಕುವ ಹಾಂಗಿಲ್ಲೆ !!!

  6. ಅಂಬಗ ಸುಭಗಣ್ಣ ಮತ್ತೆ ಎಲೆ ತಿಂಬಲೆ ಸುರುಮಾಡಿದವೊ ? ಅಂತೂ ವರ್ಷಾಂತ ಗೌಜಿ ಆಯಿದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×