Oppanna.com

'ಅಡಿಗೆ ಸತ್ಯಣ್ಣ°' – 37

ಬರದೋರು :   ಚೆನ್ನೈ ಬಾವ°    on   21/11/2013    7 ಒಪ್ಪಂಗೊ

ಚೆನ್ನೈ ಬಾವ°

ಸದ್ಯಕ್ಕೆ ಪ್ರತ್ಯೇಕ ವಿಶೇಷ ಒಕ್ಕಣೆ ಹೇದು ಹೇಳ್ಳೆ ಎಂತ್ಸೂ ಇಲ್ಲದ್ದ ಕಾರಣ ನೇರ ವಿಷಯಕ್ಕೇ ಹೋತಿಕ್ಕುವೊ°.
ಇಂದ್ರಾಣ ಸಂಗತಿ ಎಂತ ಕೇಟ್ರೆ –
 
1
ಅಡಿಗೆ ಸತ್ಯಣ್ಣನ ಮನೆ ಹತ್ರವೇ ಮಾರ್ಗದ ಬಲದ ಹೊಡೆಲ್ಯಾಗಿ ಅಣ್ಣು ಪೂಜಾರಿಯ ಮನೆ.

ಚಿತ್ರಕೃಪೆ : ವೆಂಕಟ್ ಕೋಟೂರ್
ಚಿತ್ರಕೃಪೆ :
ವೆಂಕಟ್ ಕೋಟೂರ್

ಅಣ್ಣು ಪೂಜಾರಿಗೆ ನಿತ್ಯ ಉರ್ಪುತ್ತ ಅಭ್ಯಾಸ. ಕೆಲವು ದಿನ ರಜ್ಜ ಹೆಚ್ಚಿಗೆಯೇ ಆಗಿಹೋಪದಿದ್ದು.
ಆ ಹೆಚ್ಚಿಗೆ ಆದ ದಿನ ಆ ಮಾರ್ಗಲ್ಲೆ ಹೋವ್ತಕ್ಕೆ ಸಂಧ್ಯಾಪಾರಾಯಣ ನೋಡ್ಯೊಂಡೇ ಹೋಪಲಾವ್ತು.
ಹಾಂಗೇಳಿ ಮಕ್ಕ ಆರೂ ಅದರ ಎದುರಿಂಗೆ ಸಿಕ್ಕಿ ಹಾಕ್ಯೊಳ್ತವಿಲ್ಲೆ.
ಬೈಲ ಮನಗಳಲ್ಲಿಯೂ ಅಜ್ಜಿ ಹೆಮ್ಮಕ್ಕೊಗೆ ಜೋರು ತರ್ಕ ಮಾಡ್ವ ಮಕ್ಕಳ ಮಂಕಡುಸುಲೆ ಅಣ್ಣು ಪೂಜಾರಿಯ ಹೆಸರು ಹೇಳಿರೆ ಸಾಕು. ಕೂಗುತ್ತ ಬಾಬೆಯೂ ಒಂದರ್ಯಂಗೆ ಬಾಯಿಮುಚ್ಚುಗು!.
ಅಣ್ಣು ಪೂಜಾರಿಗೆ ಕೆಲಸ ಎಂತ್ಸರ ಹೇದರೆ ಉದಿಯಪ್ಪಗ ಎದ್ದು ಅದರ ಹೆಂಡತಿ ಹತ್ರಂದ ಪೈಸೆ ತೆಕ್ಕೊಂಡಿಕ್ಕಿ ಪೇಟಗೆ ಹೋಗಿ ಮೂರ್ಸಂಧಿಯಪ್ಪಗ ಮನಗೆತ್ತಿಗೊಂಬದು.
ಬಾಕಿ ಅಶನಕ್ಕಿಪ್ಪದು, ಕರ್ಚಿಗಿಪ್ಪದು ಎಲ್ಲ ಅದರ ಹೆಣ್ಣು ಆ ಪಾಪದ್ದು, ಆಚಕರೆ ಪದ್ಯಂಭಟ್ಟನಲ್ಲಿಗೆ ಹೋಗಿ ಹುಲ್ಲು, ಸೊಪ್ಪು, ಬಜವು , ವಸ್ತ್ರ ತೊಳೆತ್ತದು ಹೀಂಗೆಲ್ಲ ಮಾಡ್ಯೊಂಡು ಸುಧಾರ್ಸುತ್ತು.
ಓ ಮನ್ನೆ ಚೌತಿ ಸಮಯಲ್ಲಿ, ಒಂದಿನ  ಅದಕ್ಕೆ ನೇಂಟಿದ್ದು ಎಕ್ಕಸಕ ಆಗಿಯೋತು ಕಾಣುತ್ತು.
ಮೂರ್ಸಂಧಿ ಆಯೇಕ್ಕಾರೇ ಮನೆ ಹತ್ರಂಗೆ ಎತ್ತಿದ್ದು, ಮನೆಯೊಳ ಹೊಕ್ಕಿದಿಲ್ಲೆ.
ಮಾರ್ಗಲ್ಲಿ ನಿಂದೊಂಡು ಜೋರು ಜೋರು ಸುರುವಾತು, ರಾಜಕೀಯ ಬಾಷಣಂದ ಸುರುವಾಗಿ ಕುರಿಯ ಪದದ ವರೇಂಗೆ.
ಎಡೆಡೆಲಿ ಆರನ್ನಾರು ನೆಂಪಾದರೆ ಅವಕ್ಕೂ ಕಲ್ಪೋಕ್ತ ನಾಮಾರ್ಚನೆ!.
ಅಂತೂ ಅಂದು ಕೆಮಿಮಡಿಗಿಕ್ಕಲೆ ಎಡಿಯ ಎಲ್ಲೋರನ್ನೂ ಹೆಸರೇಳಿ ಬಾಯಿಹರಿತ್ತರ್ಲಿ.
ಅದರ ಹೆಂಡತಿಗೂ ಇದರ ಸಮದಾನಮಾಡಿ ಮನೆಯೊಳ ಕರ್ಕೊಂಡು ಬಪ್ಪಲೆ ಎಡಿಗಾಯ್ದಿಲ್ಲೆ. ಅಕೆರಿಗೆ ‘ಸತ್ಯಣ್ಣರೇ, ಈರೇ ಒರ ಬತ್ತುತ್ ದಾಲಾಂಟ್ಳ ಮಲ್ಪುಲೆ’ ಹೇದು ಒರಂಜಿತ್ತು.
‘ಸರಿ, ನೀ ಹೋಗು, ಆನು ಬತ್ತೆ’ ಹೇಳಿಕ್ಕಿ ಅದರ ಕಳ್ಸಿದ° ಅಡಿಗೆ ಸತ್ಯಣ್ಣ°.
ಕಾಲಿಂಗೆ ಚೆರ್ಪು ತುರ್ಕಿಸಿ ಹೆಗಲಿಂಗೆ ನಿತ್ಯಾಣ ಶಾಲ ಏರ್ಸಿ ನಡಕ್ಕೊಂಡು ಪೂಜಾರಿ ಕಾಂಬಲೆ ಹೆರಟ° ಅಡಿಗೆ ಸತ್ಯಣ್ಣ°
ಸತ್ಯಣ್ಣನ ಕಂಡಪ್ಪಗ ಉಗ್ರ ಎಳಗಿತ್ತು ಪೂಜಾರಿಗೆ. ಪೂಜಾರಿಯ ಅವತಾರ ಕಂಡಪ್ಪಗ ಸತ್ಯಣ್ಣಂಗೂ ಉಗ್ರ ಎಳಗಿತ್ತು.
ಸೀದ ಪೂಜಾರಿ ಹತ್ರಂಗೆ ಹೋದವನೆ ಅದರ ಕೊರಳಹಿಂದಗೆ ಕೈಮಡಿಗಿ ತಲೆಯ ಬಗ್ಗುಸಿ ಬೆನ್ನಿಂಗೆ ಬಡಾಲನೆ ಒಂದ ಮಡಿಗಿದ ಅಡಿಗೆ ಸತ್ಯಣ್ಣ. 😀
ಅದರ ತಿಂದಪ್ಪಗ ಪೂಜರಿಗೆ ಮತ್ತೆ ಸ್ವರ ಹೆರಡ. ಸೀದ ಎದ್ದಿಕ್ಕಿ ಮನಗೆ ನಡದ್ದದೆ. ಅಂದಿಂದ ಮತ್ತೆ ಸತ್ಯಣ್ಣನ ಕಣ್ಣ ಎದುರಿಂಗೆ ಕಾಂಬಲೆ ಸಿಕ್ಕಿದಿಲ್ಲೆಡ ಆ ಅಣ್ಣು ಪೂಜಾರಿ 😀
**
2
ಮೇಗಾಣ ಯಶೋಗಾಥೆ ಮರದಿನ ಮೈಲುಬಸ್ಸು ಬರೆಕ್ಕಾರೆ ಮದಲೆ ಪೆರ್ಲ ಪೇಟಗೆ ಎತ್ತಿದ್ದು
ಸತ್ಯಣ್ಣ ಅಂಬಗ ಎಂತ ಹಾಂಗೊಂದು ಬಲಕ್ಕೆ ಪೊಳಿ ಹಾಕಿದನೋ ಹೇದು ಕೆಲವರಿಂಗೆ ಅಲ್ಲ, ಹಲವರಿಂಗೆ ಆಶ್ಚರ್ಯ!
ಅದನ್ನೂ ಸತ್ಯಣ್ಣನತ್ರೆ ಕೇಳಿಯೇಬಿಟ್ಟಿಕ್ಕುವೊ° ಹೇದು ಜ್ಯೂಸಿನಂಗುಡಿ ಪೈ ಕೇಳಿತ್ತು
ಸತ್ಯಣ್ಣ ಹೇದ° – ಎಂತ ಪೊಳಿಯೂ ಹಾಕಿದ್ದಿಲ್ಲೆ ಮಾರಾಯ, ಗತ್ತಿಲ್ಲಿ ಹೋಗಿ ಬಲಕ್ಕೆ ಶಬ್ದ ಬಪ್ಪಾಂಗೆ ಅಂಗೈ ಗುಳಿಮಾಡಿ ಅದರ ಬೆನ್ನಿಂಗೆ ಒಂದ ಮಡಿಗಿದ್ದಟ್ಟೆ.  ಅದರ ಹತ್ರಂಗೆ ಹೋಪಗ ದುರುಗಟ್ಟಿ ನೋಡಿದ್ದರ್ಲೇ ಅದರ ಪೆರ್ಚಿ ಅರ್ಧ ಇಳುದ್ದು. ಅಟ್ಟೆ. 😀
ಹೀಂಗಿರ್ತ ಕೆಲವು ಪ್ರಯೋಗ ಬೇಕಾವ್ತು, ಹೆರ ಹೇಳಿಕ್ಕಿಡಿನ್ನು ಗುಟ್ಟು. 😀
**
3
ಅಡಿಗೆ ಸತ್ಯಣ್ಣನಲ್ಲಿಗೆ ಹೊಸ ಟಿವಿಯುದೆ ಮತ್ತೆ ಕೇಬಲ್ ಕನ್ನೆಕ್ಷನುದೆ ಆಯಿದಡ
ಮನೇಲಿ ಇದ್ದರೆ ನಿತ್ಯ ಉದಿಯಪ್ಪಗ ಎದ್ದು, ಎಲ್ಯಾರು ಹೋಗಿದ್ರೆ ಹೋಗಿ ಬಂದ ಕೂಡ್ಳೆ,  ನಿತ್ಯ ಎಲ್ಲಾ ಚಾನೆಲ್ ಇದ್ದೋ ಹೇದು ನೋಡ್ತಾ ಕೆಲಸ ಸತ್ಯಣ್ಣಂಗೆ.
ಮಗಳು ರಮ್ಯ ಕೇಳಿತ್ತಡ – “ಅದೆಂತದಕ್ಕೆ ನಿತ್ಯಾ ಹಾಂಗೆ ನೋಡುವದು ಅಪ್ಪ”!
ಸತ್ಯಣ್ಣ ಹೇದ° – ಪೈಸೆ ಕೊಟ್ಟದಕ್ಕೆ ನಿತ್ಯಾ ಎಲ್ಲಾ ಚಾನೆಲ್ ಕೊಡ್ತವೋ ಇಲ್ಯೋದು ನೋಡೆಕ್ಕು,ಇಲ್ಲದ್ರೆ ಕಳ್ಳಂಗೊ ಒಂದೊಂದೇ ಚಾನೆಲ್ ಕಮ್ಮಿ ಮಾಡ್ಯೊಂಡು ಬಕ್ಕು  😀

**
4
ಬಂಟಮಲೆ ಪುಣ್ಯಾಯದ ಮರದಿನ ಅಡಿಗೆ ಸತ್ಯಣ್ಣಂಗೆ ಕಟ್ಟ ಕೇಶವಣ್ಣನಲ್ಲಿ ಅನುಪ್ಪತ್ಯ.
ಅನುಪ್ಪತ್ಯ ಎಂತ್ಸರ ಕೇಟ್ರೆ ಎರಡ್ನೇ ಮಗಳ ಬದ್ಧ, ಶಿವಪೂಜೆದೆ
ಮಂಗಳಾರತಿಂದ ರಜಾ ಮದಲೆ ಆಚೊರಿಶ ಅಮೇರಿಕ ಮಾಣಿಗೆ ಮದುವೆ ಮಾಡಿ ಕೊಟ್ಟ ಕೇಶವಣ್ಣನ ದೊಡ್ಡ ಮಗಳುದೇ ಅಳಿಯನುದೆ ತೋಟಲ್ಯಾಗಿ ನಡಕ್ಕೊಂಡು ಬಂದು  ಜಾಲ ಹತ್ತಿ ಅಬ್ಬಿ ನೀರಿಲ್ಲಿ ಕಾಲುತೊಳಕೊಂಡು ಮೆಟ್ಲು ದಾಂಟಿದವು.
ಅಕ್ಕ° ಭಾವ° ಬಂದ್ಸು ಕಂಡಪ್ಪದ್ದೆ ಮದಿಮ್ಮಾಳು ಕೂಸು ಹೆರಬಂದು ಅಕ್ಕ ಭಾವನತ್ರೆ – “ಏನು ಅಕ್ಕ , ಏನು ಭಾವ” ಕೇಳಿತ್ತಾಡ
“ಡಾಂಟ್ ಕಾಲ್ ಮಿ ಏಸ್ ಬಾವ, ಕಾಲ್ ಮೀ ಏಸ್ ವಿಕ್ಕಿ” ಹೇಳಿದನಡ  ವಿಕ್ರಮ್ ಶರ್ಮ ಹೇಳ್ತಾ ಆ ಭಾವಯ್ಯ.
ಕೆಲಸ ಮುಗಿಶಿ ಅಡಿಗೆ ಕೊಟ್ಟಗೆಲಿ ಕಡವಕಲ್ಲ ಕರೇಲಿ ಸಾಂಚಿ ಕೂದೊಂಡಿದ್ದ ಅಡಿಗೆ ಸತ್ಯಣ್ಣಂಗೆ ಇದರ ಕಂಡಪ್ಪಗ ಕೋಪ ಪಿಸುರು ಉರಿ ಎಲ್ಲ ಒಟ್ಟಿಂಗೆ ಎಳಗಿತ್ತೊಂದರಿ. ಅಂದರೂ ತೋರ್ಸಿಗೊಂಡಿದನಿಲ್ಲೆ.
ಅಲ್ಲಿ ಕೂದೊಂಡಿದ್ದ ರಂಗಣ್ಣನತ್ರೆ ಹೇದ° – “ಕಂಡತ್ತೋ!… ಇವಕ್ಕೆ ಅಕ್ಕ°, ಭಾವ°, ಅಣ್ಣ° , ತಮ್ಮ°, ಅಪ್ಪಚ್ಚಿ, ಚಿಕ್ಕಮ್ಮ, ದೊಡ್ಡಮ್ಮ, ಹೇದು ಎಲ್ಲಾ ಬಾಂಧವ್ಯ ಅರಡಿಗೋ”!.
ಇವಕ್ಕೆ ಅರಡಿತ್ತದು, ಮೆಚ್ಚುತ್ತದು ಕಸಿನ್ನು , ಅಂಕುಲ್ , ಆಂಟೀ !! 😀
**
5
ವಿಕ್ಕಿಯಪ್ಪನ ಪೋರ್ಸು ಅಲ್ಲಿಗೆ ಮನೆಯೊಳದಿಕ್ಕೆ ಮುಗುತ್ತಾರೂ ಅಡಿಗೆ ಸತ್ಯಣ್ಣನ ಮನಸ್ಸಿಂದ ಬಿರುದ್ದಿಲ್ಲೆ.
ರಂಗಣ್ಣನ ಹತ್ರೆಯೇ ಉಂಬಲೆ ಕೂದ ಸತ್ಯಣ್ಣಂಗೆ ಅಲ್ಲೆ ಎದುರೆ ಕುರ್ಶಿಲಿ ಕಾಲಾಡ್ಸ್ಯೊಂಡು ಕೂದಂಡಿದ್ದ ಆ ದೊಡಾ ಅಳಿಯನ ಕಂಡಪ್ಪಗ ಮತ್ತೊಂದರಿ ಎಳಗಿತ್ತು.
ರಂಗಣ್ಣನ ಕೆಮಿ ಹತ್ರೆ ಬಗ್ಗಿ ಸತ್ಯಣ್ಣ ಹೇದ° – ಅಪ್ಪೋ ರಂಗ!, ಇವಂಗೆ ಮಕ್ಕೊ ಹುಟ್ಟಿರೆ  ಇವ° ಇವನ ಅಪ್ಪ° ಹೇಳ್ಳಾಗ, ಬೆಪ್ಪ° ಹೇಳು ಹೇದು ಕಲುಶುಗೋ!
ರಂಗಣ್ಣಂಗೂ ಸತ್ಯಣ್ಣ ಹೇದ್ದು ಅಪ್ಪು ಹೇದು ಕಂಡತ್ತು, ಹೇದ° – ಅಪ್ಪು ಮಾವ°!, ಎಂತಾರು ನಮ್ಮದರ್ಲಿ  “ಏ..ನು ಭಾ..ವ” ಹೇದು ಕೆಂಪುತೊಡಿಲಿ ರಾಗ ಎಳದು ಕೇಳ್ವಾಗ “ಒಳ್…..ಳೆದಪ್ಪಾ” ಹೇಳ್ಸೇ ಲಾಯಕ ಆವ್ತು. 😀
**
6
ಕಟ್ಟಂದ ಬಂದ ದಿನ ಇರುಳು ಅಡ್ಯನಡ್ಕಲ್ಲಿ ಆಟ
ಮರದಿನಕ್ಕೆ ಎಲ್ಯೂ ಇಲ್ಲದ್ದ ಕಾರಣ ಎಂಟುಗಂಟಗೆ ಸತ್ಯಣ್ಣನ ಪಲ್ಸರು ರಂಗಣ್ಣನ ಜಾಲಿಂಗೆ ಎತ್ತಿತ್ತು, “ಹೆರಡೋ°, ಆಟಕ್ಕೆ ಹೋಪೋ°” ಹೇದ ಸತ್ಯಣ್ಣ.
ರಂಗಣ್ಣಂಗೂ ಗೊಂತಿದ್ದು ..- ಹೇಂಗೂ ಸತ್ಯಣ್ಣ° ಉದಿವರಗೆ ಆಟ ನೋಡ್ಳೆ ಇಲ್ಲೆ. ಹೋಳಿಗೆ ಬೇಶಿ ಅಪ್ಪಷ್ಟು ಹೊತ್ತ ಸತ್ಯಣ್ಣಂಗೆ ಒರಕ್ಕು ಬಾರ ಹೋಳಿಗೆ ಬೇಶುಲೆ ಇಲ್ಲದ್ದ ದಿನವೂ!
ಹಾಂಗೆ ರಂಗಣ್ಣನೂ ರಪಕ್ಕನೆ ಅಬ್ಬಿಕೊಟ್ಟಗ್ಗೆ ಹೋಗಿ ಎರಡು ಚೆಂಬ ನೀರ ತಲಗೆರಕ್ಕೊಂಡು ಬಂದು ಉಂಡಾಂಗೆ ಮಾಡಿಕ್ಕಿ, ಅಂಗಿ ಸುರ್ಕೊಂಡು, ಇಬ್ರೂ ಒಂದೇ ಬೈಕಿಲ್ಲಿ ಹೆರಟವು.
ರಂಗಣ್ಣ ಒಟ್ಟಿಂಗೆ ಇಪ್ಪಗ ಸತ್ಯಣ್ಣ ಬೈಕಿಲ್ಲಿ ಹಿಂದೆಯೇ ಕೂರ್ಸು.
ಅಡ್ಯನಡ್ಕಕ್ಕೆ ಎತ್ತಿತ್ತು..
ಊರ ಪರವೂರ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಸೀತಾ ಕಲ್ಯಾಣ, ಸುಭದ್ರಾ ಕಲ್ಯಾಣ, ವಿದ್ಯುನ್ಮಾಲಿ ಕಲ್ಯಾಣ, ಗಿರಿಜಾ ಕಲ್ಯಾಣ ಮತ್ತೆ ಉದಿಗಾಲಕ್ಕೆ ರತಿಕಲ್ಯಾಣ ಹೇದು ಪ್ರಸಂಗ ಪ್ರಿಂಟು ಮಾಡಿತ್ತವು.
ಸೀತಾ ಕಲ್ಯಾಣ ಕಳುದತ್ತು, ಸುಭದ್ರಾ ಕಲ್ಯಾಣ ಮುಗುದತ್ತು, ವಿದ್ಯುನ್ಮಾಲಿ ಕಲ್ಯಾಣವೂ ಕಳುದತ್ತು. ಬೈಲ ಬಟ್ಟಮಾವಂಗೆ ಕಿಟ್ಟಣ್ಣನೊಟ್ಟಿಂಗೆ ಮುಜುಂಗಾವಿಲ್ಲಿ ಬೇರೆ ಅನುಪ್ಪತ್ಯ ಇತ್ತಿದ್ದರಿಂದ ಈ ಮದುವಗೆಲ್ಲ ಅವ್ವು ಇತ್ತಿದ್ದವಿಲ್ಲೆ.   ಎಲ್ಲವನ್ನೂ ಕಟೀಲು ಸೀತಾರಾಮಣ್ಣನೇ  ಬಟ್ಟಮಾವನಾಗಿ ಇದ್ದುಗೊಂಡು ನಡೆಶಿಕೊಟ್ಟದು ಅಂದು.
ಗಂಟೆ ಎರಡು ಕಳಾತು..
ರಂಗಣ್ಣ ಹೇದ° –ಅಪ್ಪೋ ಮಾವ°!, ಇವ್ವು ಎಲ್ಲ ಆಟಲ್ಯೂ ಮದುವೆ ಮಾಡ್ಸುತ್ತು ಮಾಂತ್ರ ಕಾಣುತ್ತು. ಇವಕ್ಕೆ ವಧೂಗೃಹ ಪ್ರವೇಶ ಮಾಡ್ಸೆಕು ಹೇದು ಗೊಂತಿಲ್ಯೋ  ಅಂಬಗ!”
ಸತ್ಯಣ್ಣ° ಹೇದ°- “ರಂಗೋ°… ನಾವು ಕೂಸಿನ ಕಡೆ, ಮದುವಗೆ ಮಾಂತ್ರ ಹೇಳಿಕೆ. ಇನ್ನು ಕೂದರೆ ಉದಿಯಪ್ಪಗ ವಧೂಗೃಹಪ್ರವೇಶ ದಿಬ್ಬಾಣಲ್ಲಿ ಹೋಯೆಕ್ಕಕ್ಕು. ಆನು ಉಡುಗೊರೆ ಎಂತ್ಸೂ ತೈಂದಿಲ್ಲೆ. ನಾವೀಗ ಇಲ್ಲಿಂದಲೇ ಮೆಲ್ಲಂಗೆ ಚಾಂಬಿಕ್ಕುವೊ” 😀
**
7
ಅಡ್ಯನಡ್ಕ ಆಟದ ಮರದಿನ ಇರುಳಿಂಗೆ ಬೈಲ ಅಪ್ಪಚ್ಚಿ ಊರ್ಲಿ ಒಂದು ಮನೆ ಒಕ್ಕಲ ಅನುಪ್ಪತ್ಯ
ಅಂದು ಅಪ್ಪಚ್ಚಿಯ ಕಂಪೆನಿಲಿ ಪಬ್ಲಿಕ್ಕು ಕಂಪೆನಿಯವು ಇಂಧನ ಉಳಿತಾಯ ಮಾಡೆಕ್ಕು, ಖರ್ಚು ಕಮ್ಮಿ ಮಾಡೆಕ್ಕು ಹೇಳಿ ಒಂದು ಸುತ್ತೋಲೆ.
ಹಾಂಗೆ ಅಂದು ಸ್ವಂತ ವಾಹನಲ್ಲಿ ಬಪ್ಪಲಾಗ ಹೇದು ಅಪ್ಪಚ್ಚಿಯ ಡಿಪಾರ್ಟುಮೆಂಟಿಂಗೂ ಇನ್ನೊಂದು ಸುತ್ತೋಲೆ.
ಅದಾದಿಕ್ಕಿ ಅಂದು ಕಂಪೆನಿ ಬಸ್ಸಿಲ್ಲಿಯೇ ಎಲ್ಲೋರು ಬರೆಕು ಹೇಳಿ ಮತ್ತೊಂದು ಸುತ್ತೋಲೆ.
ಅದೂ ಮೀರಿ ಸ್ವಂತ ವಾಹನಲ್ಲಿ ಬಪ್ಪವು ವಾಹನವ ಗೇಟಿನೊಳ ತಪ್ಪಲಾಗ ಹೇದು ಮಗದೊಂದು ಸುತ್ತೋಲೆ.
ಅಪ್ಪಚ್ಚಿ ಅಂತೂ ಸುತ್ತಿ ಸುತ್ತಿ, ಬಸ್ಸ್  ಸ್ಟೇಂಡಿಂಗೆ ಬಂದು  ಆಪೀಸು ಬಸ್ಸಿಲ್ಯೇ ಆಪೀಸಿಂಗೆ  ಬಂದಾತು.
ಯೇವಾಗಲೂ ಕಾರು ತಂದರೆ ನಿಲ್ಲುಸಲೇ ಜಾಗೆ ಇಲ್ಲದ್ದಲ್ಲಿ, ಅಂದು ಕಾರ್ ಶೆಡ್ಡಿಲ್ಲಿ ಸೂತಕದ ಛಾಯೆ!.
ಬೇಗ ಹೆರಟ ಕಾರಣ ಅಪ್ಪಚ್ಚಿಗೆ ಮನೆಂದ ಊಟ ತಪ್ಪಲೆ ಆಯಿದಿಲ್ಲೆ .
ಮತ್ತೋ°?!..
ಮಧ್ಯಾಹ್ನ ಊಟಕ್ಕೆ ಕ್ಯಾಂಟೀನೇ ಗತಿ !!! ( ಏವತ್ರಾಣಾಂಗೆ 30/- ರೂ ಕೊಟ್ಟರೆ ಸಾಕು ಅಂದುದೆ ಉಟಕ್ಕೆ)
ಉಳಿತಾಯವೆ ಉಳಿತಾಯ
ಹೀಂಗೆ ಇದಾ ಇಂದ್ರಾಣ ಕತೆ ಹೇದು ಅಪ್ಪಚ್ಚಿ ಸಾವಕಾಶ ಕೂದೊಂಡು ಅಡಿಗೆ ಸತ್ಯಣ್ಣನೈಲಿ ಹೇದವು
ಸತ್ಯಣ್ಣ° ಹೇದ° – “ಎನಗೆ ನಿತ್ಯಾ” ಬಸ್ ದಿನ” ವೇ ಅಪ್ಪಚ್ಚಿ., ಅದೂ ಪೈಸೆ ಕೊಟ್ಟೇ ಹೋಪದು. ನಿಂಗಳ ಹಾಂಗೆ ಧರ್ಮಕ್ಕೆ- ಕಂಪೆನಿ ಕೊಟ್ಟ ಬಸ್ಸಿಲ್ಲಿ ಅಲ್ಲ.
ಬಸ್ ಇಲ್ಲದ್ದ ದಿನ, ಬಸ್ ಇಲ್ಲದ್ದ ಊರಿಂಗೆ “ನಟರಾಜ ಸರ್ವಿಸ್ ” ಎಷ್ಟು ದಿನ ಮಾಡಿದ್ದನೋ ಎಂತೋ?- ಎನಗೇ  ಲೆಕ್ಕ ಇಲ್ಲೆ .
ಸೂರಂಬೈಲಿಲ್ಲಿ ಬಸ್ ಇಳುದು ದೊಡ್ಡಮಾಣಿಗೋ, ಹಳೆಮನೆಗೋ  ಹೋಯೆಕ್ಕಾರೆ ಮೈಯ್ಯಂಕಲ್ಲು ಗುಡ್ಡೆಲಿ ಬಸ್ ಸರ್ವಿಸ್ ಆರು ಮಡುಗಿದ್ದವೂ?”….
ಅಡಿಗೆ ಸತ್ಯಣ್ಣನ ರೈಲು ಹೋಯ್ಕೊಂಡೇ ಇಪ್ಪಗ, ಅಪ್ಪಚ್ಚಿ!, ಗೇಸುಲೈಟಿಂಗೆ ಒಂದರಿ ಗಾಳಿ ಹಾಕೇಕ್ಕಾತನ್ನೇ ಹೇಳೋದು ಕೇಟತ್ತು ಆಚಿಗಂದ ! 😀
ಅಂದರೂ ಅಡಿಗೆ ಸತ್ಯಣ್ಣ° ಬಿಟ್ಟಿದನಿಲ್ಲೆ.. ಕೇಳಿಯೇ ಬಿಟ್ಟ° – ಅಪ್ಪೋ ಅಪ್ಪಚ್ಚಿ , ಇಷ್ಟೆಲ್ಲ ಆದರೂ ಅದರ ಬೈಲಿಂಗೋ ಮೋರೆಪುಟಕ್ಕೋ ಹಾಕಲೆ ಒಂದು  ಪಟತೆಗವಲೆ ಆರಿಂಗೂ ನೆಂಪಾಯ್ದಿಲ್ಲೆ ನೋಡಿದಿರೋ 😀
**
8
ಅಡಿಗೆ ಸತ್ಯಣ್ಣಂಗೆ ಈ ತಿಂಗಳಂತೂ ಪುಣ್ಯಾಯಂಗಳೇ ಹೆಚ್ಚಿಗೆ
ಬೈಲಲ್ಲಿ, ಅ ಆದಿ ಅಂತ್ಯ ನ  ಇಪ್ಪ ನಾಕಕ್ಷರದ ಎರಡ್ನೇ ಅಕ್ಷರ ಒತ್ತಕ್ಷರ ಇಪ್ಪ ಭಾವನಲ್ಲಿ ಓ ಮನ್ನೆ ಪುಣ್ಯಾಯ
ಈ ಭಾವ° ದೊಡ್ಡಮಾವ° ಆದ ಲೆಕ್ಕಲ್ಲಿ ಮಾಣಿಗೆ ಜೆನ ನಕ್ಕುಸುವಾಗ ಇದಾ ದೊಡ್ಡಮಾವ° ಜೇನುನಕ್ಕುಸುವದು ಹೇದು ಪಟತೆಗದಾತು ಅಲ್ಯಾಣ ಮೂರಕ್ಷರದ ನೆಡುಕೆ ನಕಾರಕ್ಕೆ ಅನುಸ್ವಾರ ಸೇರ್ಸಿ ಹೆಸರಿಪ್ಪ ಭಾವ°.
ಈ ಚಂದವ ನೋಡಿಗೊಂಡು ಚಿಟ್ಟೆಲಿ ಕೂದೊಂಡಿತ್ತಿದ್ದ ಅಡಿಗೆ ಸತ್ಯಣ್ಣ ಹೇದ° “ದೊಡ್ಡ ಮಾವನೊಟ್ಟಿಂಗೆ ದೊಡ್ಡ ಅತ್ತೆ ನಿಂಬ ಪಟವೂ ಬೇಗ ಬಪ್ಪಾಂಗಾಗಲಿ” 😀
**
9
ಅಡಿಗೆ ಸತ್ಯಣ್ಣಂಗೆ ನೆಟ್ಟಾರಿಲ್ಲಿ ತಿಥಿ ಅಡಿಗೆ. ಒಟ್ಟಿಂಗೆ ರಂಗಣ್ಣನೂ ಇದ್ದ°
ಕೈಯ್ನೀರಿಂಗೆ ಬೇರೆ ಜೆನ ಆದ ಕಾರಣ ಅಡಿಗೆ ಸತ್ಯಣ್ಣಂಗೆ ಅಡಿಗೆ ಆಗಿಕ್ಕು ಪುರುಸೊತ್ತು ಬಳ್ಸುಲೆ ಅಪ್ಪನ್ನಾರ
ಅಂತೇ ಕೂದರೆ ಹೊತ್ತು ಹೋಯೆಕನ್ನೇದು ಸತ್ಯಣ್ಣ ಮೊಬೈಲ ತೆಗದು ಗುರುಟಿಯೊಂಡಿತ್ತಿದ್ದ
ರಂಗಣ್ಣಂಗೆ ಆಗಳೇ ಕೆಲಸ ಆಗಿಕ್ಕಿ ಈಗ ಹೊತ್ತು ಹೋಗದ್ದೆ ಕೂದಲ್ಲ್ಯೇ ಒರಕ್ಕು ತೂಗಲೆ ಸುರುವಾತು.
ಸತ್ಯಣ್ಣ ಹೇದ° – “ಏಯ್..ಒರಕ್ಕು ತೂಗೆಡದೋ.., ಲಕ್ಷ್ಮಿಯಕ್ಕ° ಬಂದರೆ ಅದಾ ಮಾಣಿಗೆ ‘ತಿಗಲೆ ಕಂಠ!’ ಹೇಳಿಕ್ಕುಗು. ಹೇಯ್ದಿಲ್ಲೇದು ಬೇಡ ಹಾ°” 😀
ರಂಗಣ್ಣ ರಪಕ್ಕನೆ ಎದ್ದು ಅವನ ಮೊಬೈಲ ಕೈಲಿ ಹಿಡ್ಕೊಂಡ° 😀
 

* * *   😀 😀 😀 * * *

7 thoughts on “'ಅಡಿಗೆ ಸತ್ಯಣ್ಣ°' – 37

  1. * ಅಕ್ಕನ ಗೆಂಡ’ ಭಾವ’ ಹೇದು ‘ ದೆನಿಗೊಳೆಡ ಹೇಳಿದ ಮತ್ತೆ ಮದಿಮಾಳು ಕೂಸು – ವಿಕ್ಕಿ ..ವಿಕ್ಕಿ .. ಹೇದೇ ದೆನಿಗೋಳಿತ್ತಾಡ ಅಟ್ಟಪ್ಪಾಗ , ಅದಾ! ಕೊಟ್ಟಗೆ ಹೊಡೇಂದ ಬೌ..ಬೌ ..ಬೌ ..ಹೇಳಿ ಕೇಳಿತ್ತಾಡ
    * ‘ಐದು ಕಲ್ಯಾಣ’ ಕ್ಕುದೇ ಸೀತಾರಾಮಣ್ಣನೇ ಬಟ್ಟಮಾವ ನೋ! ಅಕ್ಕಿ ಕಾಯಿ, ಕ್ರಿಯಾ ದಕ್ಷಿಣೆ ,ವೇಷ್ತಿ ,ಅಬ್ಬಬ್ಬೋ!!! ಟೆಂಪೋ ಬೇಕಕ್ಕೋ?
    ಚೆನ್ನೈ ಭಾವ ,ಗಮ್ಮತ್ತಾಯಿದು….

  2. “ತಿಗಲೆ ಕಂಠವೋ” “ತಿಗಣೇ ಕಾಟವೋ” ಒಟ್ಟಾರೆ ಪಾಪ ರಂಗಣ್ಣನ ಒರಗಲೆ ಬಿಡೆಯಿ ನಿಂಗೊ.?

  3. ಸತ್ಯಣ್ಣ ನ ಪೆಟ್ಟಿನ ಪೌರುಷ ಭಾರಿ ಲಾಯಕ್ಕು ಇದ್ದು ,
    ಅದು ಸಮ ಸತ್ಯನ್ನಂಗೆ ಲಕ್ಷ್ಮಿಯಕ್ಕನ ಪರಿಚಯದೆ ಇಪ್ಪದು ಸಾಕು !ಯಬ್ಬೋ!ದೇವರೇ !ಸತ್ಯಣ್ಣನೆ !ಸತ್ಯಣ್ಣ ಸಾಮಾನ್ಯ ಅಲ್ಲ ಭಯಂಕರ !

  4. ಮಾಣಿಗೆ ‘ತಿಗಲೆ ಕಂಠ!’ ಹೇಳಿಕ್ಕುಗು.———–
    ಇ೦ದ್ರಾಣ ,rediff ಸುದ್ದಿಲಿ top email service,
    must see,national photo contest is on ,
    ಅವು ಪಟ ಬೇರೆ ನೇಲಿಸಿದ್ದವಡ{ ೩ನೇ ಪಟ}. ಒ೦ದಾರಿ ನೋಡಕ್ಕಾದ್ದೆ.
    ಐಸ್ ಮೇಲೆ ನಿ೦ದ ತಿಗಲೆ ಕ೦ಠ ನ ನೋಡಕ್ಕಾದ್ದೇ!!!!!!!!!!.

  5. ಈಗ ರಂಗಣ್ಣ ‘ಮೊಬೈಲಾಕ್ಷ’ ನೋ , ‘ಮೊಬೈಲ್ ಪಾಣಿ’ಯೋ ಆದನೋ ಅಂಬಗ ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×