Oppanna.com

'ಅಡಿಗೆ ಸತ್ಯಣ್ಣ°' – 43

ಬರದೋರು :   ಚೆನ್ನೈ ಬಾವ°    on   02/01/2014    9 ಒಪ್ಪಂಗೊ

ಚೆನ್ನೈ ಬಾವ°

1
ನವಗೂ ಪೊರ್ಬುಗೊಕ್ಕು ಸಂಬಂಧ ಹೇದು ಇಲ್ಲದ್ರೂ ನವಗೂ ಪೊರ್ಬುಗೊಕ್ಕು ವ್ಯವಹಾರಂಗೊ ಇದ್ದೇ ಇದ್ದನ್ನೆ
ವ್ಯವಹಾರ ಮಾಡ್ಸು ಹೇದಮತ್ತೆ ಕೆಲವೊಂದು ಅವಕ್ಕೆ ಅರ್ಥ ಅಪ್ಪಲೆ ಆದರೂ ನಾವು ಅವರ ಕೆಲವು ವಿಷಯಂಗಳ ತೆಕ್ಕೊಳ್ಳೆಕ್ಕಾವ್ತದಾ. ಉದಾಹರಣೆಗೆ ಕೆಲೆಂಡರು
ಮನ್ನೆ ವೊರೆಗಾಣ ಕೆಲೆಂಡರು ಹಳತ್ತಿಂಗೆ ಹಾಕಲಾತು. ಇನ್ನೀಗ ಹೊಸ ಕೆಲೆಂಡರು

ಚಿತ್ರ ಕೃಪೆ: ವೆಂಕಟ್ ಕೋಟೂರ್
ಚಿತ್ರ ಕೃಪೆ:
ವೆಂಕಟ್ ಕೋಟೂರ್

ಹೊಸ ಕೆಲೆಂಡರು ಮಡುಗುಸ್ಸು ಹೇದರೆ ಅವರ ಅರ್ಥಲ್ಲಿ ಹೊಸ ವೊರಿಶ ಸುರುವಾತು ಹೇದು ಅಪ್ಪೋ!
ಹೊಸ ವೊರಿಶ ಹೇದು ಹೇದ ಮತ್ತೆ ನಮ್ಮಾಂಗೆ ಯುಗಾದಿ ಅವಕ್ಕುದೆ
ಹಾಂಗಾಗಿ ಹೊಸ ವೊರಿಶ ಆವ್ತ ಲೆಕ್ಕಲ್ಲಿ ಕೆಲವು ಜೆನಂಗೊಕ್ಕೆ ಹೊಸ ವೊರಿಶ ಆಚರಣೆ ಹೇದು
ನಾವು ಯುಗಾದಿ ಸಮಯಲ್ಲಿ ವಿಷು ಸ್ಪರ್ಧೆ ಮಡುಗುತ್ತಾಂಗೆ ಅವಕ್ಕೆ ಹೊಸ ವೊರಿಶ ಸ್ಪರ್ಧೆಗ ಮಡುಗುತ್ಸು ಕ್ರಮ
ಪಗ್ಗು ಬೇಶ ಆಟಿ ಸೋಣೆ ಹೇದು ನವಗೂ ನೆಂಪು ಮಡಿಕ್ಕೊಂಬಲೆ ಭಂಙ ಆವ್ತು ಹೇದು ನಾವುದೇ ಕೇಲೆಂಡರ್ ಹೊಸ ವೊರಿಶ ಆಚರ್ಸುತ್ತು ಪೇಟೆಲಿಪ್ಪೋರು
ಹಾಂಗೆ ಓ ಮನ್ನೆ ಬೆಂಗಳೂರ ಭಾವ ಕಂಡಿಪ್ಪಗ ಹೇದ- ‘ಬೆಂಗಳೂರ್ಲಿಯೂ ಹಲವು ಸ್ಪರ್ಧೆಗೊ ಇದ್ದು’
ಬೆಂಗಳೂರ ಭಾವ ಅಡಿಗೆ ಸತ್ಯಣ್ಣನತ್ರೆ ಹೀಂಗೆ ಲೋಕಾಭಿರಾಮ ಮಾತಾಡ್ವಗ ರಂಗಣ್ಣ ಎಲ್ಲಿ ಇತ್ತಿದ್ದನೋ .. ಸೀತ ಹತ್ರೆ ಬಂದವನೇ ಕಣ್ಣು ಮೂಗು ಬಾಯಿ ಕೆಮಿ ಅರಳಿಸಿ ಕೇಟ° ರಂಗೋಲಿ ..ರಂಗೋಲಿ ಸ್ಪರ್ಧೆ ಇದ್ದೋ?!  😀
**
2
ಅಂದು ಆದಿತ್ಯವಾರ. ರಮ್ಯಂಗೆ ರಜೆ. ಮನೆಲಿಯೇ ಇತ್ತು.
ಆದಿತ್ಯವಾರ ಹೇದರೆ ಸತ್ಯಣ್ಣಂಗೇನೂ ರಜೆ ಹೇದು ಇಲ್ಲೆ. ಅನುಪ್ಪತ್ಯ ಇಲ್ಲದ್ರೆ ರಜೆ . ಅಷ್ಟೆ.
ಹಾಂಗೆ ಅಂದು ಆದಿತ್ಯವಾರ ವಾಲ್ತಾಜೆಂದ ಅನುಪ್ಪತ್ಯ ಕಳುಶಿಕ್ಕಿ ಮನಗೆತ್ತುವಾಗ ಹೊತ್ತು ಮೂರ್ಸಂಧಿ ಕಳುದ್ದು
ಮನಗೆ ಬಂದೆತ್ತಿಯಪ್ಪಗ ರಮ್ಯ ಅಂತೇ ಕೂದೊಂಡಿತ್ತಿದ್ದು
‘ಎಂತ ಮಗಳೊ!, ರಜೆ ಹೇದು ಎಂತ ಮಾಡಿದೆ ಇಂದು?’ – ಕೇಟ° ಸತ್ಯಣ್ಣ°
ರಮ್ಯ ಹೇತು  – ‘ಸುಮಾರು ನುಸಿ ಬಡುದೆ ಅಪ್ಪ° ಇಂದು’ ! 😀
**
3
ತಲೆಂಗಳ ಮದುವೆ ಕಳುದ ಮರದಿನ ನೀರ್ಚಾಲು ಪೇಟೆಲಿ ಅಡಿಗೆ ಸತ್ಯಣ್ಣನೂ ಕೋಳಾರಿ ಮಾಟ್ರ ಭಾವನೂ ಭೇಟಿಯಾದವು
ಹಾಂಗೆ ಮದುವೆ ಎಲ್ಲ ಸುದರಿಕೆ ಎಲ್ಲ ಚೆಂದಕೆ ಕಳ್ದರ ಮಾತಾಡ್ಯೊಂಡವು
ಎಂತದೋ ಎಡಕ್ಕಿಲಿ ನೆಂಪಪ್ಪಗ ಕೋಳಾರಿ ಮಾಟ್ರ ಭಾವ ಸತ್ಯಣ್ಣನತ್ರೆ ಹೇದವು – “ಸತ್ಯಣ್ಣ, ಇದಾ ಆನು ನಿನ್ನೆ ಹೇದ ವಿಷಯ ನಮ್ಮೊಳದಿಕ್ಕೆ ಇರಲಿ. ಹೆರ ಆರತ್ರೂ ಹೇಳ್ಸು ಬೇಡ. ನಿಂಗ ಈಗ ಹೆರ ಆರತ್ರೂ ಹೇಳಿದ್ದೀಲಿರನ್ನೇ?!”
ಇಲ್ಲೆಪ್ಪ ಆನು ಆರತ್ರೆ ಹಾಂಗೆ ಹೇಯ್ದಿಲ್ಲೆ.  ಉದಿಯಪ್ಪಗ ಎರಟಕಾಯರ ಬಾವ ಎಂತ ವಿಷ್ಯ ಅದು ಹೇದು ಕೇಟಪ್ಪಗ ಎನ ಅದು ಸಂಗತಿ ಹೇದು ಹೋತು.
‘ಸರಿ, ಅವಂಗೊಬ್ಬಂಗೆ ಅಲ್ಲದ. ಬೇರೆ ಆರಿಂಗೂ ಗೊಂತಾಗಿರನ್ನೇ’ – ಕೋಳಾರಿ ಬಾವಂಗೆ ಮತ್ತೂ ಸಂಶಯ ಆತು.
‘ಅವಂಗೆ ಹೇಳ್ವಾಗ ಸಂಕದ ಬಾವಂಗೆ ಕೇಳಿದ್ದು ಬಾವ. ಆನಾಗಿ ಎಂತ್ಸೂ ಅವನತ್ರೆ ಹೇಯ್ದಿಲ್ಲೆ’  – ಹೇದ° ಸತ್ಯಣ್ಣ°
‘ಯೋ ರಾಮ!, ಇನ್ನೀಗ ಆ ಎರಟಕಾಯರ ಬಾವ ಆರತ್ರೂ ಹೇಳಿರ°ನ್ನೇ?!’ – ಕೋಳಾರಿ ಬಾವ° ಮತ್ತು ಖಚಿತಪಡಿಸ್ಯೊಂಬಲೆ ಕೇಟ°
‘ಯೇಯ್.. ಅವು ಹಾಂಗೆ ಆರತ್ರ ಹೇಳಿರವು. ಆದರೆ ಎರಟಕಾಯರ ಬಾವ ಅಳಕ್ಕೆ ಮಾವಂಗೊ, ಬೊಳುಂಬು ಅಣ್ಣಂಗೋ ಹೇಳದ್ದೆ ಇರವು’ 😀
ಆತಂಬಗ, ನಾವಿನ್ನಿಲ್ಲಿಂದ ಬೇಗ ಚಾಂಬಿಕ್ಕುವೊ. ನಮ್ಮತ್ರೇ ಬಂದು ಕೇಳ್ಸು ಬೇಡ ಇವಿನ್ನು ಹೇದು ಇಬ್ರೂ ಅವರವರ ದಾರಿ ನೋಡ್ಯಂಡವು 😀
**
4
ಅಡಿಗೆ ಸತ್ಯಣ್ಣ° ಅಡಿಗೆ ಸಾಮಾನಿನ ಪಟ್ಟಿಯೇನೋ ಬರದು ಕೊಡುಗು
ಮನೆಯೆಜಮಾನಂಗೆ ಏವುದಾರು ಅದರ್ಲಿ ಬೇಡಪ್ಪ ಹೇದರೆ ಬಿಡ್ತದಕ್ಕೆ ಅಡಿಗೆ ಸತ್ಯಣ್ಣಂದು ಆಕ್ಷೇಪ ಎಂತ್ಸೂ ಇಲ್ಲೆ.
ಅವರವರ ಅನುಕೂಲಕ್ಕೆ ಬೇಕಾದಾಂಗೆ ಒರ್ಮೈಶಿಗೊಂಡು ಹೋವ್ತರಲ್ಲಿ ಸತ್ಯಣ್ಣ ಬಲ
ಪಾಚಕ್ಕೆ ಬೀಜದಬೊಂಡು ದ್ರಾಕ್ಷೆ ಏಲಕ್ಕಿ ಎಲ್ಲ ಬೇಕು ಅಪ್ಪು. ಅದರ್ಲಿ ಏವುದಾರು ಒಂದು ಇಲ್ಲದ್ರೆ ಪಾಚವೇ ಮಾಡ್ತಿಲ್ಲೆ ಹೇದೇನೂ ತರ್ಕ ಇಲ್ಲೆ ಅಡಿಗೆ ಸತ್ಯಣ್ಣಂಗೆ
ಮೈಸೂರ ಮನೆ ಒಕ್ಕಲ್ಲಿ ಅಡಿಗೆ ಸತ್ಯಣ್ಣನ ಹತ್ರವೇ ಊಟಕ್ಕೆ ಕೂದ ಬೋಚಬಾವ°, ಮುಳ್ಳುಸೌತೆ ಪಾಯಸ ಬಳ್ಸಿಯಪ್ಪಗ – ‘ಸತ್ಯಣ್ಣ, ಇದಕ್ಕೆ ಬೀಜದ ಬೊಂಡು ಹಾಕಿದ್ದಿಲ್ಯ ?!’ – ಕೇಟನಡ°
ಸತ್ಯಣ್ಣ ಹೇದನಡ°- “ಬೀಜದ ಬೊಂಡು ಕಡದು ಹಾಕಿದ್ದು ಭಾವ. ಉಂಡು ನೋಡಿಕ್ಕಿ ಹೇಂಗಾಯ್ದು ಹೇಳು” 😀
ಸತ್ಯಣ್ಣ° ಕಡದು ಹಾಕಿದ್ದು ಹೇದಮತ್ತೆ ಮತ್ತೆ ಸಂಶಯ ಪಡ್ಳೆ ಎಂತಿದ್ದು?. ಕೈಲಿ ಬಾಚಿ ಬಾಯಿಗೆ ಸುರುದವನೇ ಹೇದನಡ – “ಭೋಜನಕಾಲೇ ನಮಃ ಪಾರ್ವತೀ ಪತೇ ಹರ ಹರ..”
“ಮಹದೇ..ವ” – ಹೇಳ್ವಾಗ ಅಕೇರಿಲಿ ಸತ್ಯಣ್ಣನ ಸೊರವೂ ಕೇಳಿದ್ದಡ  😀
**
5
ಅಡಿಗೆ ಸತ್ಯಣ್ಣಂಗೆ ಮುಂಗಿಲಲ್ಲಿ ಒಂದು ಅನುಪ್ಪತ್ಯ
ಆರೋ ಒಬ್ಬ ಅಡಿಗೆ ಕೊಟ್ಟಗ್ಗೆ ಬಂದವ° ಸತ್ಯಣ್ಣನತ್ರೆ ಮಾತಾಡ್ಯೊಂಡಿಪ್ಪಗ ಹೇದ° – “ ಹಲಸಿನಣ್ಣು ಆಗದ್ದವಕ್ಕೆ ಹಲಸಿನಣ್ಣು ಕೊಟ್ಟಿಗೆ ಅಕ್ಕಡ” !
ಸತ್ಯಣ್ಣಂಗೆ ಇದೆಂತ್ಸೂ ದೊಡ್ಡ ವಿಶೇಷದ್ದು ಹೇದು ಕಂಡಿದಿಲ್ಲೆ. ಸತ್ಯಣ್ಣ ಹೇದ° – “ಅಪ್ಪು ಭಾವ., ಮೊಸರು ಮಜ್ಜಿಗೆ ಆಗದ್ದವಕ್ಕೆ ಹಾಲು ತುಪ್ಪ ಅಕ್ಕಡ!” 😀
ರಂಗನದ್ದು ಅದರೆಡಕ್ಕಿಲಿ – “ಅಪ್ಪೋ .., ಎಲ್ಲಿದ್ದ° ಅವ° ?! ಅವನತ್ರೆ ಮಜ್ಜಿಗೆನೀರು ಅಕ್ಕೋ ಕೇಳ್ತೆಆನು” 😀
 
**
6
ಅಡಿಗೆ ಸತ್ಯಣ್ಣಂಗೆ ಹೊತ್ತು ಹೊತ್ತಿಂಗೆ ಕೆಲಸ ಆಯೇಕು.
ಅದು ಸಣ್ಣ ಕೆಲಸವೋ ದೊಡ್ಡ ಕೆಲಸವೋ.. ಆಯೇಕು ಹೇಳ್ವಾಗ ಆಯೇಕೆ.
ಅದೆಲ್ಲ ಮದಲಾಣೋರಿಂಗೆ ಎಡಿಗು. ಈಗಾಣವಕ್ಕೆ ಎಡಿಗೋ?!
ಹಾಂಗಾಗಿ ಅಡಿಗೆ ಸತ್ಯಣ್ಣಂಗೂ ರಮ್ಯಂಗೆ ಕೆಲವು ಸರ್ತಿ ಬಾಯಿ ಹರ್ಕತ್ತು ಅಪ್ಪ ಕ್ರಮ ಇದ್ದು. ಕಡೇಂಗೆ ಸತ್ಯಣ್ಣನೇ ಸೋಲ್ವದು. ಅದು ಬೇರೆ ವಿಷ್ಯ.
ಮನ್ನೆ ಹಾಂಗೆ  ಸತ್ಯಣ್ಣ ಕೂರ್ತ ಮೇಜಿಲ್ಲಿ ರಮ್ಯ ಕೂದೊಂಡು ಎಂತದೋ ಮೊಬೈಲು ಗುರುಟಿಯೊಂಡಿತ್ತಿದ್ದು.  
ಸತ್ಯಣ್ಣ ಹೇದ° – “ಏಳು ಕೂಸೆ , ಎನ ಕೆಲಸ ಇದ್ದಿಲ್ಲಿ”
ರಮ್ಯ ಹಂದಿದ್ದಿಲ್ಲೆ. ಅದರಟ್ಟಂಗೆ ಕೆಮಿಗೆ ಬೀಳದ್ದೋರ ಹಾಂಗೆ ಗುರುಟ್ಯೊಂಡೇ ಇತ್ತಿದ್ದು
ಸತ್ಯಣ್ಣ ಮತ್ತೊಂದರಿ ಹೇದ° – ‘ಏಳು ಹೇದು’
ಇಲ್ಲೆ , ಮತ್ತೂ ಹಂದಿದ್ದಿಲ್ಲೆ.
ಸತ್ಯಣ್ಣ ವಾಪಾಸು ಹೇದ° – ಇದ ಮಗಳೋ!, ಏಳು ಹೇದರೆ ಏಳೆಕು
ರಮ್ಯ ಕೇಟತ್ತು – ಏಳು ಹೇಳ್ವಾಗ ಏಳದ್ರೆ ಎಂತ ಮಾಡುವಿ?!
ಸತ್ಯಣ್ಣ ಹೇದ° –  ‘ಎಂಟು!’, ಈಗ ಮದಾಲು ನೀನು ಏಳು ಇಲ್ಲಿಂದ 😀
ರಮ್ಯ ಎದ್ದತ್ತು ಹೇಳ್ವೊ ಮತ್ತೆ 😀
**
7
ಅಡಿಗೆ ಸತ್ಯಣ್ಣ ಅಡಿಗೆ ತೆರಕ್ಕಿಲ್ಲಿ ಇಪ್ಪಗ ಆರಾರು ಏನಾರು ಪೊರಾಟು ಹೇಳ್ಯೊಂಡು ಬಂದರೆ ಸತ್ಯಣ್ಣಂಗೆ ಮಂಡಗೆ ಏರ ಅದು.
ಹಾಂಗೇಳಿ ಮಾತಾಡ್ಳೆ ಬಂದೋರ ತಡದು ನಿಲ್ಸುತ್ತ ಪಂಚಾತಿಗೆ ಇಲ್ಲೆ.
ಮಾತಿಗೆ ಹೂಂಕಟ್ಟಿರೂ ಆಚವ ಮುಂದುವರ್ಸುತ್ತ° ಮತ್ತೆ
ಸಿದ್ದನಕರೆ ಶುದ್ಧದ ಅಡಿಗ್ಗೆ ತೆರಕ್ಕಿಲ್ಲಿ ಇತ್ತಿದ್ದ ಸತ್ಯಣ್ಣನತ್ರೆ ಒಬ್ಬ ಬಂದು ಹೇದ° –  ಓ ಅವ° ಇದ್ದಲ್ಲ°ದಾ … (ಅವನ ಮಾತು ಮುಗುದ್ದಿಲ್ಲೆ!)
ಒಲೆಬುಡಲ್ಲಿ ನಿಂದೊಂಡು ಬೆಂದಿ ಬಾಗ ಬೆಂತೋ ನೋಡ್ತ ತೆರಕ್ಕಿಲ್ಲಿ ಇತ್ತಿದ್ದ ಸತ್ಯಣ್ಣ ಎಡಕ್ಕಿಲಿ ಇಟ್ಟು ಕೇಟಪ್ಪದ್ದೆ ಹೇದ° – “ಎಂತ ಅವ° ಹೋದನೋ?!” 😀
**
8
ಕುಂಬಳೆ ಹೊಡೆಂಗೆ ಬೈಕಿಲ್ಲಿ ಹೋಯ್ಕಿ ಬಂದೊಂಡಿಪ್ಪಗ ಅಡಿಗೆ ಸತ್ಯಣ್ಣ ನಾಯ್ಕಾಪಿಂದ ಮದಲೆ ಕಾನ ತಿರ್ಗಾಸಿಲ್ಲಿ ಕುಂಬಳೆ ಪೋಲೀಸು ಚೆಕ್ಕಿಂಗು ಅಡ್ಡ ತಳ್ಪಿದ್ದು
ಸತ್ಯಣ್ಣ ಬೈಕ ಕರೇಲಿ ಸ್ಟೇಂಡಿಂಗೆ ಸಾಂಚಿ ನಿಲ್ಲುಸಿ ಕಂಕುಳೆಡಿಲಿ ಚೀಲ ಮಡಿಕ್ಕೊಂಡು ಬಾಯಿಲಿಪ್ಪದರ ಪುರ್ರುನೆ ತುಪ್ಪಿ ಜೀಪಿನ ಹತ್ರಂಗೆ ಬಂದು ನಿಂದ°
ಸಬಿನ್ಸುಪೆಟ್ರ ಏವುದೋ ಒಂದು ಮಲೆಯಾಳಿ ಕಾಣುತ್ತು. ಅದು ಹೇದ್ದೆಂತರ ಹೇದು ಸತ್ಯಣ್ಣಂಗೆ ಅರ್ಥ ಆಯ್ದಿಲ್ಲೆ.
ಪೋಲಿಸುಗೊ ಮದಾಲು ಕೇಳ್ತದು ಹೆಸರೆಂತ  ಹಾಂಗೇನಾರು ಆಯ್ಕು ಹೇದು ಗ್ರೇಶಿಯೊಂಡು ಸತ್ಯಣ್ಣ ಹೇದ° – ‘ದೃಷ್ಟದ್ಯುಮ್ನ’
“ಎಂದಾ.. ಪರಾ..” ಹೇದು ವಾಪಾಸು ಕೇಟತ್ತು ಆ ಸಬಿನ್ಸುಪೆಟ್ರ
ಸತ್ಯಣ್ಣ ವಾಪಾಸು – ‘ದೃಷ್ಟದ್ಯುಮ್ನ’  ಹೇದವನ್ನೆ ಕೈಲಿಪ್ಪ ಚೀಲ ಬಿಡಿಸಿ ಪೇಪರುಗಳ ಬಲುಗಿ ಹಾಕಲೆ ಸುರುಮಾಡಿದ°
ಆ ಪೋಲೀಸರಂಗೆ ಈ ದೃಷ್ಟದ್ಯುಮ್ನ ಹೆಸರೇ ಹೊಸತ್ತು. ಬಾಯಿಗೆ ತೆರ್ಚೆಕ್ಕನ್ನೆ ಕೈಲಿ ಬರೇಕ್ಕಾರೆ.
ಸತ್ಯಣ್ಣನ ಕೋಲವ ಕಂಡಪ್ಪಗ – ಹ್ಹ್° ಹ್ಹ್° ಪೋಯ್ಕೋ ಪೋಯ್ಕೋ ಹೇತು ಸಬಿನ್ಸುಪೆಟ್ರ 😀
ಸತ್ಯಣ್ಣಂಗೆ ಅದು ಮಾತ್ರ ಸರೀ ಅರ್ಥ ಆತು, ಹೋಗು ಹೇದ್ದು ಹೇದು. ಸತ್ಯಣ್ಣ ಎರಡು ಕೈ ಜೋಡ್ಸಿ ಒಂದು ನಮಸ್ಕಾರ ಕೊಟ್ಟಪ್ಪಗ ಸಬಿನ್ಸುಪೆಟ್ರಂಗೂ ಕೊಶಿ ಆತು.
**
9
ಕಾಲ ಬದಲಾದಾಂಗೆ ಪರಿಸ್ಥಿತಿ ಬದಲುತ್ತು.
ಅಪ್ಪೋ ಅಲ್ಲದೋ, ಸತ್ಯಣ್ಣ ಅಂತೂ ಅಪ್ಪು ಹೇದು ಒಪ್ಪುತ್ತ°
ಸತ್ಯಣ್ಣಂಗೂ ಕಾಲ ಬದಲಾದಾಂಗೆ ರಜ ರಜ ಬದಲಾವಣೆ ಆಗಿಯೇ ಆಯ್ದು
ಎ ಬಿ ಸಿ ಡಿ ಮಾಂತ್ರ ಗೊಂತಿದ್ದ  ಸತ್ಯಣ್ಣಂಗೆ ಇಂಗ್ಲೀಷಿಲ್ಲಿ ಸಣ್ಣ ಸಣ್ಣಕೆ ಬರದ್ದರ ಕೂಡಿಸಿ ಅರ್ತ ಆಗದ್ದ ಶಬ್ದವನ್ನೂ ಓದುತ್ತಷ್ಟಕ್ಕೆ ಆಯ್ದು ದೊಡ್ಡ ಮಗಳ ಬೆಂಗಳೂರಿಂಗೆ ಕೊಟ್ಟ ಮತ್ತೆ, ರಮ್ಯ ಕಾಳೇಜಿಂಗೆ ಹೋಪಲೆ ಸುರುಮಾಡಿದ ಮತ್ತೆ, ಮನೆಲಿ ಕಂಪ್ಯೂಟ್ರು, ಮೊಬೈಲು ಎಲ್ಲ ಬಂದ ಮತ್ತೆ,
ಕಳುದ ಸರ್ತಿ ಬೆಂಗಳೂರಿಂಗೆ ಹೋಯ್ಕಿ ಬಂದವನೆ ಅಡಿಗೆ ಸತ್ಯಣ್ಣ ಮನಗೆ ಬಂದಪ್ಪದ್ದೆ ದೊಡ್ಡ ಮಗಳಿಂಗೆ ಫೋನು ಮಾಡಿ ಕೇಟ° – ಅಪ್ಪೋ ಮಗಳೋ ನಿಂಗಳ ಬೆಂಗಳೂರಿಲ್ಲಿ ಫ್ಲಾಟುಗೊ ಎಲ್ಲ ತುಂಬ ಚೀಪು ಅಯ್ದು ಕಾಣುತ್ತು.
ದೊಡ್ಡ ಮಗಳು ರಾಧೆ ಆಚೊಡೆ ಫೋನಿಲ್ಲಿ ಕೇಟತ್ತು – ಇಲ್ಲೆನ್ನೆ ಅಪ್ಪ° , ಎಂತಕೆ ಹಾಂಗೆ ಹೇಳ್ತಿ??!
ಅಲ್ಲ ಮಗಳೋ , ಬಸ್ಸಿಲ್ಲಿ ಬಪ್ಪಗ ಸುಮಾರು ಅಂಗುಡಿ ಕರೇಲಿ ಬೋರ್ಡು ನೇಲ್ಸ್ಯೊಂಡು ಕಂಡತ್ತುಫ್ಲಾಟ್ 30% – 40% – 50% off  😀
**
10
ಅಡಿಗೆ ಸತ್ಯಣ್ಣ ಮನೆಲಿ ಇದ್ದ ದಿನ ಶಾರದಕ್ಕಂಗೆ ಉಪವಾಸ ಇದ್ದರೆ ಸತ್ಯಣ್ಣಂಗೂ ಉಪವಾಸವೇ.
ಉಪವಾಸ ದಿನ ಸತ್ಯಣ್ಣ ದಣಿಯ ತಿಂಬಲೆ ಇಲ್ಲೆ.
ಉದಿಯಪ್ಪಂಗೆ ನಾಕೇ ನಾಕು ಗೋಧಿ ದೋಸೆ ಸಾಕು ಹೇಳುಗು ಅಡಿಗೆ ಸತ್ಯಣ್ಣ
ಸಾಲದ್ರೆ ಮತ್ತೆ ಒಂದು
ಅಷ್ಟಪ್ಪಗ ಜೇನ ರಜಾ ಅಂತೊಂಡ್ರೆ ಇನ್ನು ಲಾಯಕ ಹೇದು ರಜ ಜೇನ ಆಂತೊಂಡ್ರೆ ದೋಸೆ ಮುಗುದಪ್ಪಗ ಜೇನ ಮುಗಿತ್ತಿಲ್ಲೆ.
ಮತ್ತೆ ಜೇನಕ್ಕೇದು ಒಂದು ದೋಸೆ.
ಜೇನದೋಸೆ ತಿಂದಪ್ಪಗ ರುಚೀ ಆತು ಹೇದ್ದಕ್ಕೆ ಮತ್ತೊಂದು ದೋಸೆ ಬಳುಸಿತ್ತು ಶಾರದಕ್ಕ
ಮತ್ತಾಣ ದೋಸೆ ಅಂತೇ ತಿಂಬಲಾವ್ತೋದು ಮೊಸರು ಹಾಕ್ಯೊಂಡು ತಿಂದಪ್ಪಗ ಮೊಸರು ರಜಾ ಬಾಳೆಲಿ ಉಳ್ಕೊಂಡ್ರೆ ಮತ್ತೆ ಮೊಸರು ಕಾಲಿ ಮಾಡ್ಳೆ ಮತ್ತೊಂದು .
ಅಂದರೂ ಸತ್ಯಣ್ಣ ತಿಂದದು ನಾಕೇ ದೋಸೆ. ಬಾಕಿದ್ದದು ಜೇನಕ್ಕೆ , ಮೊಸರಿಂಗೆ – ಸತ್ಯಣ್ಣ ಹೇದ್ದು 😀
**
11
ಮಳಿ ಉದಯಣ್ಣ ಹೇದರೆ ಬೈಲಿಲಿ ಗೊಂತಿಲ್ಲದ್ದವು ಆರು ಇರವು ಕಾಣುತ್ತು
ಪೆರ್ಲಮಗ್ಗಕ್ಕೆ ಹೋದರೆ ಅಲ್ಲಿ ಕಾಂಬದು ಮಳಿ ಉದಯಣ್ಣನೇ
ಮಳಿ ಉದಯಣ್ಣನಲ್ಲಿ ಓ ಮನ್ನೆ ಹಗಲಿಂಗೆ ಗೆಣಪತಿ ಹೋಮವುದೆ ಶಿವಪೂಜೆಯುದೆ ಅನುಪ್ಪತ್ಯ
ಮಳಿ ಉದಯಣ್ಣನಲ್ಲಿಗೆ ಅನುಪ್ಪತ್ಯಕ್ಕೆ ಹೋವ್ಸು ಸತ್ಯಣ್ಣನೇ
ಆದರೆ ಪೆರ್ಲ ಸತ್ಯಣ್ಣ ಅಲ್ಲ , ಚೌರ್ಕಾಡು ಸತ್ಯಣ್ಣ
ಮದಲಿಂಗೆ ಗಣಪ್ಪಣ್ಣಡೋ, ಅವ್ವಲ್ಲಿಂದ  ಜಾಗೆ ಕೊಟ್ಟಿಕ್ಕಿ ದೂರ ಹೋದಮತ್ತೆ ಚೌರ್ಕಾಡು ಸತ್ಯಣ್ಣಂಗೆ ಆ ಮಳಿ ಮನೆ ಖಾಯಂ ಆತು
ಪೆರ್ಲಲ್ಲಿ ಇಪ್ಪ ಮಳಿ ಉದಯಣ್ಣಂಗೂ ಪೆರ್ಲಲ್ಲಿಪ್ಪ ಅಡಿಗೆ ಸತ್ಯಣ್ಣಂಗೂ ಮದಲಿಂದಲೂ ಒಂದು ಚೆಂಙಾಯಿಪ್ಪಡು.
ಹಾಂಗಾಗಿ ಅಡಿಗೆ ಸತ್ಯಣ್ಣಂಗೂ ಗೆಣವತಿ ಹೋಮ ಶಿವಪೂಜಗೆ ಹೇಳಿಕೆ ಇತ್ತಿದ್ದು
ಅಡಿಗೆ ಸತ್ಯಣ್ಣಂಗೆ ಅಂದು ಅನುಪ್ಪತ್ಯ ಬೇರೆ ಹೋಪಲೆ ಇತ್ತಿದ್ದಿಲ್ಲೆ. ಹಾಂಗಾಗಿ ಕಾಲಂಟೇ ಮಳಿಗೆ ಹೋಗಿತ್ತಿದ್ದ.
ಸತ್ಯಣ್ಣ ಹೋಗಿ ಒಂದರಿಯಾಣ ಕಾಪಿ ತಿಂಡಿ ಸುಧರಿಕೆ ಎಲ್ಲಾ ಆಗಿ ಕರೇಲಿ ಮಡಿಗಿದ್ದದು ತಣುದು ಕೋಡಿಕಟ್ಟುವಂದ ಮದಲೆ ಮಳಿ ಮನೆಂದ ನಾಕು ದಿಕ್ಕಂಗೆ ಕೊಟ್ಟ ಅಕ್ಕಂದ್ರು ಬಂದು ಎತ್ತಿಯೊಂಡವು.
ಹೆಮ್ಮಕ್ಕ ಎರಡು ಜೆನ ಸೇರಿರೇ ಸಾಕು.., ಮತ್ತಿನ್ನು ಈ ನಾಕು ಹೆಮ್ಮಕ್ಕ ಸೇರಿರೆ ಕೇಳೆಕ!
ಚಾವಡಿಲಿ ಹಸೆ ಮೇಗೆ ಕೂದೊಂಡು ಈ ಹೆಮ್ಮಕ್ಕಳ ಬಡಾಯಿ ಕೆಕೆಪೆಕೆ ಜೋರು ಜೋರು ಕೇಟಪ್ಪಗ ಅಡಿಗೆ ಸತ್ಯಣ್ಣ ಹೇದ° – ಇದಾ ನಿಂಗೊ ರಜಾ ಹೂಗು ಆದಾಕಿ ಮತ್ತೆ ನೊಣೆ ಹೇದೊಂಡು ಆರತಿಗೆ ನೆಣೆ ಹಾಕಿ.
ಸತ್ಯಣ್ಣ ಅಟ್ಟು ಹೇದಪ್ಪಗ ಅಕ್ಕಂದ್ರು ಆಚಿಗೆ ನೋಡಿದವು – ಅಪ್ಪನ್ನೇ!, ಇಂದು ಕಿಟ್ಟಣ್ಣ° ಬಯಿಂದನಿಲ್ಲೆ!.
ಒಳ ಏಕಾದಶ ರುದ್ರ ಮುಗುದಪ್ಪಗ ಹೆಮ್ಮಕ್ಕಳ ಹೂಗು ಹೆರ್ಕಿ ಕಸವು ರಾಶಿ ಹಾಕಿ ರೆಡೀ ಆತು
ಸತ್ಯಣ್ಣ ಹೇದ° – ಕಂಡತ್ತೋ .. ನಾಕು ಹೆಮ್ಮಕ್ಕೊ ಸೇರಿರೆ ಕೆಲಸ ಜಟ್‍ಪಟ್ ಮುಗಿತ್ತು 😀
**
12
ಅಡಿಗೆ ಸತ್ಯಣ್ಣಂಗೆ  ಚಾಕೊಟೆಲಿ ಅನುಪ್ಪತ್ಯ
ಏವುತ್ರಾಣಂಗೆ ಮೂರ್ನೇ ಹಂತಿಗೆ ಹಂತಿಕರೇಲಿ ಸುರುವಾಣ ಸಾಲಿಲಿ ಸುರುವಾಣ ಸೀಟಿಲ್ಲಿ ಊಟಕ್ಕೆ ಕೂಯ್ದ ಅಡಿಗೆ ಸತ್ಯಣ್ಣ°
ಮೂರ್ನೇ ಹಂತಿಗೆ ಬಳುಸುಲೆ ನಿಂದ ಕುರ್ಯತ್ತಡ್ಕ ಅರವಿಂದಣ್ಣ ಸಾರು ತಣುದ್ದು ಹೇದು ಒಂದರಿ ಒಲೆಲಿ ಮಡಿಗಿ ಬೆಶಿ ಮಾಡಿ ತೆಕ್ಕೊಂಡು ಬಂದು ‘ಬೆಶಿ ಬೆಶಿ ಸಾರು ಬೆಶಿ ಬೆಶಿ ಸಾರು’ ಹೇದು ಬಳ್ಸಿಗೊಂಡು ಬಂದವು
ಅವರ ಬೆನ್ನಾರೆ ಮಳಿ ಭಾವ° ನಿಂದೊಂಡು ಅಂದು ಮಾಡಿದ ಹಸಿ ಸೌತೆಕಾಯಿ ಉಪ್ಪಿನಕಾಯಿ ಕೈಮರಿಗೆಲಿ  ಹಿಡ್ಕೊಂಡು ಸತ್ಯಣ್ಣನತ್ರೆ ನಿಂದೊಂಡು ‘ಉಪ್ಪಿನಕಾಯಿ.. ಉಪ್ಪಿನಕಾಯಿ’ ಹೇದವು
ಸತ್ಯಣ್ಣ ತಲೆನೆಗ್ಗಿ ಮಳಿಭಾವನತ್ರೆ ಕೇಟ° – ಇದೂ ಬೆಶಿ ಬೆಶಿದೋ ? 😀
ಹತ್ರವೇ ಕೂದ ರಂಗಣ್ಣ ಹೇದ° – ಅಲ್ಲ ಮಾವ.,  ಇದು ಹಸಿ ಹಸಿದು. ನಾವು ಇಂದು ಮಾಡಿದ್ಸು. 😀
**
 

 *** 😀 😀 😀  ***

9 thoughts on “'ಅಡಿಗೆ ಸತ್ಯಣ್ಣ°' – 43

  1. ಸೂಪರ್ .
    ಹಾಸ್ಯದೊಟ್ಟಿಂಗೆ ಸತ್ಯಣ್ಣನ ಜೀವನದ ಅನುಭವಂಗೊ ಕೂಡಾ ಎದ್ದು ಕಾಣುತ್ತು.

  2. ಸತ್ಯಣ್ಣ ಒಂದು ಬಾರಿ ಉತ್ತರ ಕನ್ನಡ ಟ್ರಿಪ್ ಹಾಕವು

  3. ಹೊಸವರ್ಷಲ್ಲಿಯುದೆ ಸತ್ಯಣ್ಣ ಒಳ್ಳೆ ರೈಸಿದ್ದ. ವಿಷಯ ಎರಟೆಕಾಯರ ಮಾವನ ಹತ್ರೆ ಹೇಳಿದೆಯೊ, ಇನ್ನು ಪೇಪರು ಎಂತಕೆ ?

  4. ಹು ಹು ಹು.. ಸೂಪರ‍್ರೋ ಸೂಪರ‍್ರು ಚೆನ್ನೈ ಭಾವ. ಹೇಳಿದಾಂಗೆ ಅಡಿಗೆ ಸತ್ಯಣ್ಣಂಗೆ ಹುಟ್ಟು ಹಬ್ಬದ ಶುಭಾಶಯಂಗೊ ತಿಳಿಸಿಕ್ಕಿ ಆತೋ.. 🙂

  5. ‘ದೃಷ್ಟದ್ಯುಮ್ನ’ ಫ್ಲಾಟ್ ಚೀಪ್ ಆದ್ದು ಭಾರೀ ಲಾಯ್ಕ ಆಯಿದು ,ಸತ್ಯಣ್ಣ ೨೦೧೪ ರ ಸುರುವಿಲಿಯೇ ಭಾರೀ ರೈಸಿದ್ದ !

  6. ಮೈಸೂರು ಮನೆ ಒಕ್ಕಲಿನ ಊಟಲ್ಲಿ ಸತ್ಯಣ್ಣನ ಸೊರ ……… ವ್ಹಾ…… ಹೇಳುದು ಎನಗೂ ಕೇಳಿದ್ದು.

  7. Chennai Bhaava… supper aaidu… anthu ningala deseli Satyannana kaambalaathida… 🙂

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×