Oppanna.com

'ಅಡಿಗೆ ಸತ್ಯಣ್ಣ°' – 44

ಬರದೋರು :   ಚೆನ್ನೈ ಬಾವ°    on   09/01/2014    8 ಒಪ್ಪಂಗೊ

ಚೆನ್ನೈ ಬಾವ°

1
ಅಡಿಗೆ ಸತ್ಯಣ್ಣ ಹೋದಲ್ಲಿ ಒಂದಿಕ್ಕೆ ಉಪ್ನಾನ ಅನುಪ್ಪತ್ಯ
ಉಪ್ನಾನ, ಊಟ ಕಳುದಿಕ್ಕಿ ಬಟ್ಟಮಾವ° ಹೆರಟು ನಿಂದವು

ಚಿತ್ರಕೃಪೆ : ವೆಂಕಟ್ ಕೋಟೂರ್
ಚಿತ್ರಕೃಪೆ :
ವೆಂಕಟ್ ಕೋಟೂರ್

ಅಟ್ಟಪ್ಪಗ ಮನೆ ಎಜಮಾನ ಕೇಟ ಅಂಬಗ ಬಟ್ಟಮಾವ°!, ಮಾಣಿಗೆ ಇರುಳಿಂಗೆ ಅರ್ಘ್ಯೆಜೆಪ ಮಾಡ್ಳೆ??
ಬಟ್ಟಮಾವ° ಹೇದವು- “ಇರುಳಿಂಗೆ ನಿಂಬಲೆ ಎನ ಪುರುಸೊತ್ತಿಲ್ಲೆ. ಬೇರೆ ಹೋಪಲಿದ್ದು” , “ನಿಂಗಳೇ ಮಾಣಿಗೆ ಅರ್ಘ್ಯೆಜೆಪ ಹೇದುಕೊಟ್ಟಿಕ್ಕಿ”
ಮನೆಯೆಜಮಾನ – “ಅದು….. ಎನ ಗಾಯತ್ರೀ…”
ಬಟ್ಟಮಾವ ಹೇದವು –  “ ಈಗಂಗೆ ನಿನಗೆ ಅರಡಿತ್ತಾಂಗೆ ಹೇದು ಕೊಡು, ಮತ್ತೆ ಮಾಣಿಯ ವೇದಪಾಠಕ್ಕೆ ಕಳ್ಸು, ಕಲಿಯಲಿ” 
ಬಟ್ಟಮಾವ ಹೆರಟು ಹೋದಪ್ಪದ್ದೆ  ಮನೆಯೆಜಮಾನ ಅಡಿಗೆ ಸತ್ಯಣ್ಣನ ಮೋರೆನೋಡಿದ ಎಂತ ಮಾಡ್ಸಿನ್ನು ಹೇದು ಕೇಳ್ತಾಂಗೆ
ಸತ್ಯಣ್ಣ ಹೇದ° – ನೀನು ಆಗ ಜೆನಿವಾರ ಹಾಕುವಾಗ ಮಾಣಿಗೆ ಗುಡಿಹಾಕಿ ಹೇದಾಂಗೆ ಇರುಳಿಂಗೂ ಹೇಳಿರಾತು ಬಾವ. 😀
ಸತ್ಯಣ್ಣಂಗೂ ಹೆರಡ್ಳೆ ಹೊತ್ತಾತು 😀
**
2
ಬೆಂಗಳೂರ್ಲಿ ಅನುಪ್ಪತ್ಯಕ್ಕೆ ಹೋದ ಅಡಿಗೆ ಸತ್ಯಣ್ಣಂಗೆ ಅಲ್ಲಿ ಒಬ್ಬ° ವಿಶೇಷದವ° ಸಿಕ್ಕಿದ°
ಎಂತ ಕೇಳಿರೆ ಒಬ್ಬ° –  ಇದು  ಮಂತರ್ಸಿದ ಹಣ್ಣು. ಇದರ ತೆಕ್ಕೊಂಡೋಗಿ ಮನೆಲಿ ಮಡಿಕ್ಕೊಂಡ್ರೆ ಒಳ್ಳೆದಾವ್ತು. ಇದಕ್ಕೆ ಬರೇ 50/- ಹೇದು ತನ್ನ ಚೀಲಲ್ಲಿಪ್ಪದರ ವಿಲೆವಾರಿ ಮಾಡಿಯೊಂಡಿತ್ತಿದ್ದ°.
ಸತ್ಯಣ್ಣನ ಗುರ್ತ ಇಲ್ಲದ್ದ ಆ ಬಂದೋನು ಸತ್ಯಣ್ಣಂಗೂ ಒಂದು ಅರಶಿನ ಮಿಶ್ರ ಕೆಂಪು ಗೆನಾ ಹಣ್ಣ ತೋರುಸಿ ನಿಂಗಳೂ ಒಂದು ತೆಕ್ಕೊಂಡೋಗಿ ಮನೆಲಿ ಮಡಿಕ್ಕೊಳಿ . ಬರೇ 50/- ರೂ” –  ಹೇದ°
ಸತ್ಯಣ್ಣ° ಹೇದ° – ಇದಕ್ಕೆ ಎಂಗಳ ಊರ್ಲಿ ಹಣ್ಣಡಕ್ಕೆ ಹೇಳ್ತವು ಭಾವ°, ಧಾರಾಳ ಸಿಕ್ಕುತ್ತು 😀
**
3
ಅಡಿಗೆ ಸತ್ಯಣ್ಣಂಗೆ ಗಟ್ಟದ ಮೇಗೆ ಅಡಿಗೆ
ಜೆಂಬ್ರಕ್ಕೆ ಬಂದಿತ್ತಿದ್ದ ಒಬ್ಬ ಬಾವಯ್ಯ ಒಂದು ಪೇಕೇಟು ಬಿಡುಸಿ,  “ಇದಾ ಇದು ಪೋಳ್ಯದ ಪ್ರಸಾದ. ಮನ್ನೆ ಪೋಳ್ಯಕ್ಕೆ ಹೋಗಿತ್ತಿದ್ದೆ” – ಹೇದು ಎಲ್ಲೋರಿಂಗು ಕೊಟ್ಟೊಂಡಿತ್ತಿದ್ದ°
ಅದರ ಕಂಡಪ್ಪಗ ಸತ್ಯಣ್ಣ ಮುಷ್ಟಿ ಹಸರ ಬೇಳೆ ಹೊಡಿಮಾಡಿ ಅದಕ್ಕೆ ರಜಾ ಸಕ್ಕರೆಯುದೆ, ಏಲಕ್ಕಿ ಗುದ್ದಿ ಬೆರುಸಿ ಮಡಿಕ್ಕೊಂಡ°
ರಂಗಣ್ಣ ಕೇಟ° – ಇದೆಂತದಕ್ಕೆ ಮಾವ°?
ಸತ್ಯಣ್ಣ° ಹೇದ° – ನಿಲ್ಲು , ಅವ° ಇಲ್ಲಿ ಬರಳಿ, “ಇದಾ ಇದು ಎರ್ಮರೆ ಪ್ರಸಾದ” ಹೇದು ಕೊಡ್ತೆ ಆನವಂಗೆ  😀
**
4
ಅಡಿಗೆ ಸತ್ಯಣ್ಣಂಗೆ ಹೊಸಮೂಲೆಲಿ ಅನುಪ್ಪತ್ಯ
ಸತ್ಯಣ್ಣನೂ ರಂಗಣ್ಣನೂ ಹೋದವು ಆಸರಿಂಗೆ ಕುಡುದಾದಿಕ್ಕಿ ಅಡಿಗೆ ಕೊಟ್ಟಗ್ಗೆ ಹೋದವು
ಸತ್ಯಣ್ಣ ರಂಗಣ್ಣನತ್ರೆ ಒಲಗೆ ಕಿಚ್ಚು ಹಾಕಿ ಮದಾಲು ಒಂದು ತಪ್ಪಲೆ ಬೆಶಿನೀರಿಂಗೆ ಮಡುಗು ಹೇದ°
ರಂಗಣ್ಣ ಸೂಟೆ ಮಡ್ಳ ಬಲುಗಿ ಕಿಚ್ಚು ಹಿಡಿಶಿದಾಂಗೆ ಮಾಡಿಕ್ಕಿ ಸೌದಿಕೊಳ್ಳಿ ಮಡುಗಿದ.
ಚಂಡಿ ಸೌದಿ.. ಹೊತ್ತುತ್ತೋ ಅಷ್ಟು ಪಕ್ಕಕ್ಕೆ !
ಹೊಗೆ ತಡೆಯದ್ದೆ ರಂಗಣ್ಣ° ಹೇದ° – ಮಾವ° ಸೌದಿ ಚೆಂಡಿ, ಹೊತ್ತುತ್ತಿಲೆ. ಹೋಗೇಯೇ ಬತ್ತು. ಇದಾ ಕಣ್ಣಿಲ್ಲಿ ನೀರು ಎಕ್ಕಸಕ ಬತ್ತು 🙁
ಸತ್ಯಣ್ಣ° ಹೇದ° –  ಪಾಟೆ ತೆಕ್ಕೊ ಅಂಬಗ. ಹೂಗಿನ ಸೆಸಿಗೆ ಎರವಲಾತು 😀
 
**
5
ನಾಟೆಕಲ್ಲಿಲ್ಲಿ ಅನುಪ್ಪತ್ಯ. ಅಡಿಗೆ ಸತ್ಯಣ್ಣನ ಸೆಟ್ಟು. ಸೆಟ್ಟಿಲ್ಲಿ ಒಟ್ಟಿಂಗೆ ರಂಗಣ್ಣ ಅಲ್ಲದ್ದೆ ಗಾಡಿಗುಡ್ಡೆ ಗಣಪ್ಪಣ್ಣನೂ ಇತ್ತಿದ್ದ°
ಹೋಳಿಗೆ ಬೇಶಿ ಸುರುವಾಣ ಹೋಳಿಗೆ ‘ಅವಿಘ್ನಮಸ್ತು’ ಹೇದೊಂಡು ಗೆಣವತಿಗೆ ಕಿಚ್ಚಿಂಗೆ ಹಾಕಿದ° ಅಡಿಗೆ ಸತ್ಯಣ್ಣ.
ರಂಗಣ್ಣ° ಹೇದ° – ಮಾವ° ಗೆಣವತಿ ಇಲ್ಯೇ ಇಪ್ಪಗ ಇವಂಗೇ ಸುರುವಾಣ ಹೋಳಿಗೆ ಕೊಟ್ಟಿಕ್ಕಲಾವ್ತಿತ್ತು. ಗೆಣವತಿ ನಮ್ಮ ಕಣ್ಣಾರೆ ತಿಂಬದು ಕಾಣ್ತಿತ್ತು.
ಸತ್ಯಣ್ಣ° ಹೇದ° – ಮತ್ತೆ ಕಿಚ್ಚಿಂಗೆ ಹಾಕಿದ ಹೋಳಿಗೆ ಮಾಂತ್ರ ಎಂತ ಗೆಣವತಿ ಚೀಲಲ್ಲಿ ಹಾಕಿ ಕೊಂಡೋದ° ಗ್ರೇಶಿದಿಯೋ?! . ಇದಾ ನೇರ್ಪಕ್ಕೆ ಒಲೆಲಿ ಕಿಚ್ಚು ಹೊತ್ತುತ್ತರ ನೋಡು…
ಕಾಣುತ್ತೋ ಈಗ ಇದಾ.. ಗೆಣವತಿಯ ಸೊಂಡಿಲು.. ಬಾಯಿ… ಕೈ… ಹೊಟ್ಟೆ… ಸರಿಯಾಗಿ ಅದರ್ನೇ ನೋಡು … ಕಾಣುತ್ತೋ?? ಕಂಡತ್ತೋ..
ಸತ್ಯಣ್ಣ° ಹಾಂಗೆ ತೋರ್ಸಿಯಪ್ಪಗ ರಂಗಣ್ಣಂಗೆ ಕಿಚ್ಚಿಲ್ಲಿ ಗೆಣವತಿಯ ಕಂಡತ್ತಡ.
“ಅಪ್ಪು ಗೆಣವತಿ ಹೋಳಿಗೆ ತಿಂಬದು ಕಾಣ್ತು ಮಾವ°” – ಹೇದ° ರಂಗಣ್ಣ° ಮತ್ತೆ ಹೋಗಿ ಲಟ್ಟುಸುಲೆ ಕೂದ°
**
6
ರಂಗಣ್ಣಂಗೆ  ಕೆಲಸ ಸುರುಮಾಡ್ಳೆ ಆವ್ತಷ್ಟೆ. ಮೊಬೈಲ ತೆಕ್ಕೊಂಡು ಮೋರೆಪುಟ ಬಿಡ್ಸಿ ನೋಡ್ಯೊಂಡಿತ್ತಿದ್ದ.
ಒಂದಿಕ್ಕೆ ಕಂಡತ್ತು –
‘ಕೇಪುಳ ಬೇರ ಗುದ್ದಿ ತಾಮ್ರದ ಪಾತ್ರೆಲಿ ಹಾಕಿ ತೆಂಙಿನೆಣ್ಣೆ ಎರದು ಮಡಿಗಿರೆ ಕಾಲು ಒಡದ್ದಕ್ಕೆ ಆವ್ತು.’
ರಂಗಣ್ಣ ಸತ್ಯಣ್ಣನತ್ರೆ ಹೇದ°- ಮಾವ°.., ಪಾಟೆಲಿ ಹಾಕಿ ಮಡಿಗಿರೆ ಕಾಲು ಒಡೆತ್ತದು ನಿಲ್ಲುತ್ತಡ!. ಇನ್ನು ಕಾಲೊಡದರೆ ಮದ್ದು ಕಾಲಿಂಗೆ ಕಿಟ್ಟುವ ಕೆಲಸ ಇಲ್ಲೆ  😀 😀
ಅಷ್ಟಪ್ಪಗ ಮತ್ತೊಂದಿಕ್ಕೆ ಕಂಡತ್ತು, ಸತ್ಯಣ್ಣನತ್ರೆ ಹೇದ° –
 “ ‘ಹರಳೆಣ್ಣೆ ಕುಡುದರೆ ಹುಳುವಿಂಗೆ ಒಳ್ಳೆದು’ – ಹೇದು ಕುಂಬ್ಳೆಜ್ಜಿ ಹೇಳಿಗೊಂಡಿತ್ತಿದ್ದವು.
                “ಹುಳುವಿಂಗೋ? ನವಗಲ್ಲದೋ?” – ಕೇಳಿದನಡ ಬೋಚಬಾವ”
ಸತ್ಯಣ್ಣ ಹೇದ° – ಅದರಿಂದ ಕೆಳ ಎಂತ ಬರಕ್ಕೊಂಡಿದ್ದು ನೋಡು
“ಅವನ ಎದುರಾಣ ಎರಡು ಹಲ್ಲು ಹೋದ್ಸು ಎಂತಗೆ ಹೇದು ಈಗ ಗೊಂತಾತೋ?!”
ರಂಗಣ್ಣ ತಳಿಯದ್ದೆ ಅಲ್ಲಿಂದ ಎದ್ದಿಕ್ಕಿ ಕೆರಮಣೆ ತೆಕ್ಕೊಂಡು ಕಡವ ಕಲ್ಲಿನ ಹತ್ರೆ ಹೋದ° 😀
**
7
ಅದು ರಂಗಣ್ಣ ಅಡಿಗೆ ಸತ್ಯಣ್ಣನೊಟ್ಟಿಂಗೆ ಸಕಾಯಕ್ಕೆ ಹೋಪಲೆ ಸುರುಮಾಡಿದ ಸಮಯ
ಅಂದು ಶೇಂತಾರ್ಲಿ ತಿಥಿ ಅಡಿಗೆ ಅದಾ
ರಂಗಣ್ಣ ಕೇಟ° – ಅಲ್ಲ ಮಾವ° , ಇದೆಂತ್ಸಕೆ ಈ ಮನೆಯೋರು ಹೇಳ್ಸು – ಅಶನಕ್ಕೆ ಅಕ್ಕಿ ಹಾಕು, ಬೆಶಿನೀರಿಂಗೆ ಕಿಚ್ಚು ಹಾಕು, ಬೆಶಿನೀರು ಕಾಸು ..!!
ಸತ್ಯಣ್ಣ ಹೇದ° – ನಿಲ್ಲು, ರಜಾ ಕಳಿಯಲಿ, ಕಡವಕಲ್ಲು ತಿರುಗುಸು ಹೇಳ್ತೆ ನಿನಗೆ 😀
**
8
ಅಡಿಗೆ ಸತ್ಯಣ್ಣಂಗೆ ಪೋಳ್ಯಲ್ಲಿ ಮನ್ನೆ ಅನುಪ್ಪತ್ಯ
ಬಾಳೆ ಹಾಕಲಪ್ಪಗ ಒಬ್ಬ ಭಾವಯ್ಯ ಅಡಿಗೆ ಕೊಟ್ಟಗೆ ಕರೇಲಿ ಬಂದು ನಿಂದುಗೊಂಡು ಮೋರೆ ಚೆಪ್ಪೆ ಚೆಪ್ಪೆ ಮಾಡ್ಯೊಂಡು ಆಚೀಚೆ ನೋಡ್ಯೊಂಡಿತ್ತಿದ್ದ°
ಅಡಿಗೆ ಸತ್ಯಣ್ಣ ಕೇಟ° – ಎಂತ ಭಾವ!! ಮೋರೆ ಕುಂಞಿ ಮಾಡ್ಯೊಂಡಿದ್ದೆ?!
ಭಾವಯ್ಯ ಹೇದ° – ಅಲ್ಲ ಸತ್ಯಣ್ಣ.. ಓ ಅಲ್ಲಿ ಕೂದೊಂಡಿತ್ತಿದ್ದೆ.. ಮೊಬೈಲು ಅಲ್ಲೇ ಮಡಿಗಿಕ್ಕಿ ಹೆರಹೋಗಿ ಎಲೆತುಪ್ಪಿಕ್ಕಿ ಬಪ್ಪಗ ಮೊಬೈಲು ಕಾಣುತ್ತಿಲ್ಲೆ.
ಸತ್ಯಣ್ಣ ಹೇದ° – ಅಂಬಗ ಹೆರಡು. ಪೋಲೀಸು ಸ್ಟೇಶನಲ್ಲಿ ಕಂಪ್ಲೈಂಟು ಕೊಟ್ಟಿಕ್ಕುವೋ. ಮೊಬೈಲು ಕಾಣೆ ಆದರೆ ಪೋಲೀಸು ಸ್ಟೇಶನಿಂಗೆ ತಿಳುಶೆಕು ಹೇಳ್ತವನ್ನೆ. ಗೊಂತಿಲ್ಯ?
ಭಾವಯ್ಯಂಗೆ ಪೋಲೀಸ್ ಸ್ಟೇಶನ್ ಹೇದಪ್ಪದ್ದೆ ಬೆಗರು ಬಿಚ್ಚಿತ್ತು. ಶಾಲಿಲ್ಲಿ ಮೋರೆ ಉದ್ದಿಯೊಂಡೇ ಹೇದ° – ಬೈಲಿಲ್ಲಿ  ಶ್ಯಾಮಣ್ಣನ ಚೈನು ಹೇಳ್ತ ಕತೆ ಓದಿದ ಮತ್ತೆ ಪೋಲೀಸು ಸ್ಟೇಶನು ಹೇದರೆ ಎನ ಹೀಂಗೇ ಅಪ್ಪದಿದಾ. ಬೇಡ ಬೇಡಾ.. ಓ ಅಲ್ಲೆಲ್ಯಾರು ಇದ್ದೋ ನೋಡ್ತೆ 😀
**
9
ಅಡಿಗೆ ಸತ್ಯಣ್ಣಂಗೆ ಓ ಮನ್ನೆ ಹಳೆಮನೆಣ್ಣನಲ್ಲಿ ಸಣ್ಣ ಒಂದು ಅನುಪ್ಪತ್ಯ ಮಜ್ಜಾನಕ್ಕೆ
ಅದು ಕಳುದಿಕ್ಕಿ ಅಡಿಗೆ ಸತ್ಯಣ್ಣಂಗೆ ಮುಳ್ಳೆರಿಯಾಲ್ಲಿ ಒಂದು ಮದುವೆ ಅತ್ತಾಳಕ್ಕೆ ಎತ್ತೆಕು.
ಹಳೆಮನೆಣ್ಣ ಅಂತೇ ಕೇಟವು ಅಡಿಗೆ ಸತ್ಯಣ್ಣನ್ನತ್ರೆ – ಅಪ್ಪೋ ಸತ್ಯಣ್ಣ°, ಮುಳ್ಳೇರಿಯಕ್ಕೆ ನಿಂಗಳೊಟ್ಟಿಂಗೆ ನಲ್ಕ ರಂಗಣ್ಣ ಅಲ್ಲದ್ದೆ ಮತ್ತೆ ಆರೆಲ್ಲ ಅಂಬಗ?
ಸತ್ಯಣ್ಣ ಹೇದ° – ಅಲ್ಲಿಗೆ ಬಕ್ಕು ಬೆಂಗ್ರೋಡಿ ಬಂಗಾರಣ್ಣ, ಪೂವಾಳೆ ಪುಟ್ಟಣ್ಣ, ಮಂಜಳಗಿರಿ ಮಾಪಣ್ಣ, ಮುಳಿಯಾಲ ಮುದ್ದಣ್ಣ, ಕುಂಞಿಮೂಲೆ ಕುಂಞಣ್ಣ°.,  ಇದ್ದವಪ್ಪ ನಮ್ಮ ಕಾಯಂ ಸೆಟ್ಟಿನವು.
ರಂಗಣ್ಣ ಮತ್ತೆ ದಾರಿಲಿ ಹೋಪಗ ಕೇಟನಡ – ಕಾಯರ್ಪಾಡಿ ಕೇಚಣ್ಣ, ಗೂಮೆಮೂಲೆ ಗೆಣಪ್ಪಣ್ಣ, ಚೇರ್ಕಾಡು ಚಾಮಣ್ಣ, ಜೇನುಮೂಲೆ ಜಗ್ಗಣ್ಣ, ತಾಪತ್ರೆ ತಾರ್ನಾತ, ನರಿಕ್ಕೊಂಬು ನಾಣಣ್ಣ, ಪೆರ್ವೋಡಿ ಪಂಬೆಚ್ಚ, ಬೊಳ್ಯಮೂಲೆ ಬಂಗಾರು, ಮುಂಡಿತ್ತಡ್ಕ ಮಾಬ್ಲಣ್ಣ, ಯೈಯೂರು ಯೆತೀಶಣ್ಣ, ವಳಕ್ಕುಂಜ ವಿಗ್ಗಣ್ಣ, ಶಡ್ರಂಪಾಡಿ ಸತೀಶಣ್ಣ ಇವೆಲ್ಲ ನಮ್ಮ ಸೆಟ್ಟಿನವ್ವೇ ಅಪ್ಪೋ ಮಾವ° 😀
**
10
ಓ ಅಂದು ಅಡ್ಯನಡ್ಕಲ್ಲಿ ಪಂಚಕಲ್ಯಾಣ ಆದ್ದದು, ಸತ್ಯಣ್ಣ ಹೋದ್ದು, ರಂಗಣ್ಣಂಗೆ ಸಟ್ಟುಮುಡಿ ಇಲ್ಲೇದು ತಲೆಬೆಶಿ ಆದ್ದು ಎಲ್ಲ ಮಾತಾಡಿದ್ದಪ್ಪೋ
ಬಟ್ಟಮಾವಂಗೆ ಬೇರೆ ಒಪ್ಪಿದ್ದದು ಇತ್ತಿದ್ದ ಕಾರಣ ಬಪ್ಪಲಾಗದ್ದೆ ಕಟೀಲು ಬಟ್ರೇ ಎಲ್ಲ ಮದುವೆಗಳನ್ನೂ ಸುಧಾರ್ಸಿದ್ದದಾ
ಈ ವರ್ತಮಾನ ಕೇಟಪ್ಪದ್ದೆ ಬೈಲಿಲ್ಲಿ ಒಬ್ಬಂಗೆ ಯೋಚನೆ ಸುರುವಾತು – ಆ ಬಟ್ಟಮಾವಂಗೆ ಅಕ್ಕಿ ಕಾಯಿ ಅಲ್ಪ ಸೇರಿಕ್ಕನ್ನೇ, ಹೇಂಗೆ ಕೊಂಡೋದವೋ?!
ಸತ್ಯಣ್ಣ ಹೇದ° – ಅಲ್ಲಿ ಅಕ್ಕಿ ಕಾಯಿ ಹೊರ್ತ ಮರ್ಯಾದಿ ಇಲ್ಲೆ. ಮೌಲ್ಯ ಕೊಟ್ರೆ ಆತು. ಅದರ ಕೊಂಡೋಪಲೆ ಇನ್ನು ಪ್ರತ್ಯೇಕ ವ್ಯವಸ್ಥೆ ಮಾಡ್ಳೆ ಇಲ್ಲೆನ್ನೆ 😀
ಸತ್ಯಣ್ಣಂಗೆ ಮತ್ತೂ ಒಂದು ಸಂಶಯ ಸುರುವಾತು – ಪೈಶೆ ಅಲ್ಪ ಬೇಂಕಿಲ್ಲಿ ಹಾಕಿ ಮಡಿಗಿದ್ದದು ಇಕ್ಕೋದು ಕೇಳುಗೋ ಇವ್ವಿನ್ನು ! 😀
**
11
ಮನ್ನೆ ಉದಿ ಉದಿಗಾಲಕ್ಕೆ ಕಡುಮನೆ ಬಟ್ಟಮಾವಂಗೂ ಮೂಲಡ್ಕ ಬಟ್ಟಮಾವಂಗೂ ಒಟ್ಟಿಂಗೆ ಬೈಕಿಂಗೂ ಕಾರು ಏಕ್ಸಿಡೆಂಟು ಆತಡ ಅಪ್ಪೋ 🙁
ದೇವರ ದಯಂದ ಅಟ್ರಲ್ಲೇ ಹೋತನ್ನೇದು ಸಮಾಧಾನ.
ಅಲ್ಯಾಣ ನೆರೆಕರೆ ಹವ್ಯಕರ ತುರ್ತು ಕಾರ್ಯಾಚರಣೆ ತುಂಬಾ ಸಕಾಯ ಆತು. ಅವಕ್ಕೆ ಎಷ್ಟು ಧನ್ಯವಾದ ಹೇದರೂ ಸಾಲ ಹೇದವು ಅಸುಪತ್ರೆಲ್ಲಿದ್ದೊಂಡೇ ಮೂಲಡ್ಕ ಬಟ್ಟಮಾವ
ಕಡುಮನೆ ಬಾವ ಕೈಗೆ ಕಾಲಿಂಗೆಲ್ಲ ಮುಂಡಾಸು ಕಟ್ಟಿಸಿಯೊಂಡು ಬಿಡುಗಡೆ ಆದವು, ಹೊಯಿಗೆ ಕಟ್ಟ ನೇಲ್ಸಿಯೊಂಡು ಅತ್ತಿತ್ತೆ ಹಂದಂದೆ ಮನೆಲಿ ಮನಿಕ್ಕೊಂಬಲೆ ಮೂಲಡ್ಕ ಬಟ್ಟಮಾವಂಗೂ ಪುತ್ತೂರು ಆದರ್ಶದೋರ ಆಶೀರ್ವಾದ ಸಿಕ್ಕಿತ್ತು
ಶುದ್ದಿ ಗಾಳಿಗೆ ಹಬ್ಬುತ್ತೋ ಮೊಬೈಲಿಲಿ ಹಬ್ಬುತ್ತೋ .. ಒಟ್ಟಾರೆ ಶುದ್ದಿ ಸತ್ಯಣ್ಣಂಗೂ ಎತ್ತಿತ್ತು
ಸತ್ಯಣ್ಣ ಹೇದ° – ಅಂಬಗ ಬಟ್ಟಮಾವನ ಮನೆಲಿನ್ನು ದಿನಾ ಎರಡು ಲೀಟ್ರು ಹಾಲು, ಕಾಫಿ/ಚಾ ಹೊಡಿ ರೆಡೀ ಸ್ಟಾಕು ಬೇಕು 😀
ರಂಗಣ್ಣ ಕೇಟಾ° – ಎಂತ ಮಾವ, ಹಾಲಿಲ್ಲಿ ಉದ್ದಲಿದ್ದೋ!!
ಸತ್ಯಣ್ಣ ಹೇದ°ಅಲ್ಲದೋ°, ಇನ್ನು ದಿನಾ “ಎಂತಾತು ಬಟ್ಟಮಾವ°, ಹೇಂಗಾತು ಬಟ್ಟಮಾವ°” ಹೇದು ಕೇಳ್ಯೊಂಡು ಮನಗೆ ಬಪ್ಪೋರಿಂಗೆ ಕಾಪಿ ಚಾಯ ಹೇದು ಉಪಚಾರಕ್ಕೆ ಆಯೇಕ್ಕನ್ನೇ 😀
 

*** 😀 😀 😀 ***

8 thoughts on “'ಅಡಿಗೆ ಸತ್ಯಣ್ಣ°' – 44

  1. ಚೆನ್ನೈ ಭಾವಾ, ನಿಜ ಹೇಳ್ತೆ, ಎನಗೆ ಪೂರ್ತಿ ಓದುಲೆ ಆಯ್ದಿಲ್ಲೆ! ಮುಕ್ಕಾಲು ಭಾಗ ಓದಿದ್ರೂ ಅನ್ನುಸ್ತು, ತಪ್ಪಿಲ್ಲದ ಎ೦ಥಾ ಧೀರ್ಘ ಬರಹ ಅದು..? ನಿ೦ಗಳ ಶ್ರದ್ಧೆ, ಸ೦ಯಮಕ್ಕೆ ನಮೋನಮಃ.

  2. “ಎಂತಾತು ಬಟ್ಟಮಾವ°, ಹೇಂಗಾತು ಬಟ್ಟಮಾವ°” ಹೇದು ಕೇಳ್ಯೊಂಡು ಮನಗೆ ಬಪ್ಪೋರಿಂಗೆ ಕಾಪಿ ಚಾಯ ಹೇದು ಉಪಚಾರಕ್ಕೆ ಆಯೇಕ್ಕನ್ನೇ 😀 ಇದೆಲ್ಲ ಸತ್ಯನ್ನಂಗೆ ಮೊದಲೇ ಹೇಂಗೆ ಅಂದಾಜು ಅವುತ್ತಪ್ಪಾ ?ಎನಗಂತೂ ಗೊಂತವುತ್ತಿಲ್ಲೇ ..ಸೂಪರ್ ಅಯಿದು ಚೆನ್ನೈ ಭಾವ

  3. ಲಾಯ್ಕ ಆಯಿದು.ಹಣ್ಣಡಕ್ಕೆಯ ಜೋಕು !

  4. ಆಕ್ಸಿಡೆಂಟಿಂಗುದೆ, ಹಾಲಿಂಗುದೆ ಸಂಬಂಧ ಕಲ್ಪಿಸಿದ್ದು ಲಾಯಕಾಯಿದು. ಸತ್ಯಣ್ಣನ ಬಳಗವ ನೋಡುವಗ ನರಸಿಂಹಯ್ಯನ ಪತ್ತೇದಾರಿ ಕಾದಂಬರಿಗಳ ಹೆಸರುಗೊ ನೆಂಪಾತು ಭಾವಯ್ಯ. ಅಂತೂ ಸತ್ಯಣ್ಣ ಸೂಪರು.

  5. (ಬೈಲಿಲ್ಲಿ ಶ್ಯಾಮಣ್ಣನ ಚೈನು ಹೇಳ್ತ ಕತೆ ಓದಿದ ಮತ್ತೆ ಪೋಲೀಸು ಸ್ಟೇಶನು ಹೇದರೆ ) ಈ ಚೈನು ಕತೆಂದಾಗಿ ಪೋಲೀಸುಗೊಕ್ಕೆ ಆದಾಯ ಕಮ್ಮಿ ಆತೋ ಹೇಂಗೆ?

  6. ಬೆಂಗ್ಳೂರಿನ ಜೆನ ಆರು ಹೇದು ಗೊಂತಾದರೆ ನವಗೂ ರಜ ಹಣ್ಣಡಕ್ಕೆ ವಿಲೇವಾರಿ ಮಾಡ್ಳಾವ್ತಿತು ಹೇದೊಂದೊಪ್ಪ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×