- ಬಲೀಂದ್ರಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ಗೋಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ತೊಳಶಿ ಪೂಜೆ – ಸರಳ ಸಂಕ್ಷಿಪ್ತ ವಿಧಾನ - October 30, 2020
1
ಈಗೀಗ ಅಡಿಗೆ ಸತ್ಯಣ್ಣಂಗೂ ಪುರುಸೊತ್ತು ಇಲ್ಲೆ, ನವಗೂ ಪುರುಸೊತ್ತು ಇಲ್ಲೆ. ಅಂದರೂ ಬೈಲಿಂಗೆ ಶುದ್ದಿ ಹೇಳದ್ದೆ ಮನಸ್ಸು ಕೇಳ್ತಿಲ್ಲೆ.
ಸಂಗತಿ ಹೀಂಗಿಪ್ಪಗ ಓ ಮನ್ನೆ ಮುಳಿಯ ಉಪ್ನಾನಲ್ಲಿ ಅಡಿಗೆ ಸತ್ಯಣ್ಣನ ಕಾಂಬಲೆ ಸಿಕ್ಕಿತ್ತದ
ಮುಳಿಯ ಉಪ್ನಾನ ಹೇದಮತ್ತೆ ಅದು ಬೈಲಿಂದೇ ಅನುಪ್ಪತ್ಯ. ಬೈಲಿನೋರು ಬಂದಿತ್ತವು ನಾವೂ ಹೋಗಿದ್ದತ್ತು
ನಾವು ಹೋಗಿ ಆಸರಿಂಗೆ ಕುಡ್ಕೊಂಡಿಪ್ಪಗ ಅಡಿಗೆ ಕೊಟ್ಟಗೆಲಿ ಅಡಿಗೆ ಸತ್ಯಣ್ಣಂಗೂ ಕುಂಟಾಂಗಿಲ ಭಾವಂಗೂ ಮಾತುಕತೆ ಆಗ್ಯೊಂಡಿತ್ತಿದ್ದು.
ಸಂಗತಿ ಎಂತರಾಯ್ಕು ಹೇದು ಓರೆಕಣ್ಣಿಲ್ಲಿ ಕೆಮಿಗೊಟ್ಟು ಕೇಟಪ್ಪಗ ವಿಶ್ಯ ಎಂತರ ಹೇದು ಗೊಂತಾತು.
ಸತ್ಯಣ್ಣ ಅಂದು ಬಲದ ಕೈಗೆ ವಾಚು ಕಟ್ಯೊಂಡು ಬಂದ್ಸಡ. ಅದು ಕುಂಟಾಂಗಿಲ ಭಾವಂಗೆ ತಮಾಸು ಕಂಡತ್ತು.
ಹಾಂಗೆ ಹೋಗಿ ಕುಂಟಾಂಗಿಲ ಭಾವ ಕೇಟ°- ಅಡಿಗೆ ಸತ್ಯಣ್ಣ!, ನಿಂಗೊ ಎಂತಕೆ ಬಲದ ಕೈಗೆ ವಾಚು ಕಟ್ಟುತ್ತು.
ಆಡಿಗೆ ಸತ್ಯಣ್ಣ ಹೇದ° – “ಗಂಟೆ ನೋಡ್ಳೆ” !
ಕುಂಟಾಂಗಿಲ ಭಾವನ ಬಾಯಿ ಸುಮ್ಮನೆ ಕೂರೆಕೋ! . ಅಲ್ಲಿಂದಲೂ ಒಂದು ಒಗ್ಗರಣೆ – “ಅಲ್ಲ… ಪಟ ತೆಗವಲೋ ಗ್ರೇಶಿದೆ”
ಅಡಿಗೆ ಸತ್ಯಣ್ಣನ ಬಾಯಿಗೆ ಕೋಲಾಕಿಕ್ಕಿ ಅಷ್ಟು ಪಕ್ಕಕ್ಕೆ ಪೀಂಕಿಕ್ಕಲೆ ಎಡಿಗೋ?! , ಸತ್ಯಣ್ಣ ಹೇದ° – “ಆತಪ್ಪ ತೆಗೆತ್ತರೆ ತೆಗೆ”. 😀
ಅಡಿಗೆ ಸತ್ಯಣ್ಣಂಗೂ ಕುಂಟಾಂಗಿಲ ಭಾವಂಗೆ ಹೀಂಗಿರ್ಸ ಪಂಚಾತಿಗೆ ಅಂಬಗಂಬಗ ನಡೆತ್ತು. ನಾವದರ ಮತ್ತೆ ಎಂತಾತು ಹೇದು ಉದ್ದ ಎಳೆತ್ಸು ಬೇಡ 😀
~~
2
ಮುಳಿಯ ಉಪ್ನಾನಕ್ಕೆ ಬೈಲಿನೋರು ಅಲ್ಪ ಜೆನ ಬಂದಿತ್ತವು ಹೇದು ಹೇಯ್ದೆ ಅಪ್ಪೋ.
ಹಾಂಗೆ ಬಂದೋರಲ್ಲಿ ತೆಕ್ಕುಂಜ ಮಾವನೂ ದಂ ಕಟ್ಟಿಯೊಂಡೇ ಬಂದದು
ಕುಂಟಾಂಗಿಲ ಭಾವ ಅಡಿಗೆ ಸತ್ಯಣ್ಣನತ್ರೆ ಒಗ್ಗರಣೆ ಹಾಕ್ಸಿಕ್ಕಿ ತಿರುಗಿ ನಿಂದಪ್ಪಗ ಕಂಡದು ತೆಕ್ಕುಂಜ ಮಾವನ ಅಲ್ಲೇ ಆಚಿಗೆ
ಕುಂಟಾಂಗಿಲ ಭಾವ ಕೇಟ° – “ಅಪ್ಪೋ ಈ ತೆಕ್ಕುಂಜ ಮಾವ ಎಂತಕೆ ಮೀಸೆ ಮಡಿಕ್ಕೊಳ್ತವಿಲ್ಲೆ!”
ಅಡಿಗೆ ಸತ್ಯಣ್ಣಂಗೆ ಒಂದು ಸುತ್ತು ಪೂರ್ತಿ ತಿರುಗಿ ಆಯ್ದಿಲ್ಲೆ.., ಅಲ್ಲಿಂದಲೇ ಹೇದ° – “ಕವುಂಚಿ ಬಿದ್ದರೆ ಮೀಸಗೆ ಮಣ್ಣಪ್ಪಲಾಗ ಹೇದು!” 😀
~~
3
ಮುಳಿಯ ಅನುಪ್ಪತ್ಯ ಹೇದರೆ ಕೇಳೆಕೊ ಮತ್ತೆ..
ಚೆನ್ನಬೆಟ್ಟಣ್ಣ, ವೇಣೂರಣ್ಣ … ಹೇದು ಯಕ್ಷಗಾನ ಪ್ರೇಮಿಗಳೂ ( ಅಪ್ಪು, ನಿಜವಾಗಿ ಬೈಲ ಕ್ರಮಲ್ಲಿ ಹೇಳ್ತರೆ ಯಕ್ಷಗಾನ ಮರ್ಳಂಗೊ) ಬಂದಿತ್ತವು.
ಇವು ಸೇರಿದರೆ ಮತ್ತೆ ಮಾತಿಂಗೆ ವಿಷಯ ಎಂತರ ಹೇದು ಪ್ರತ್ಯೇಕ ಹೇಳ್ಳೆ ಎಂತೂ ಇಲ್ಲೆ. ಬಲಿಪ್ಪನ ಪದಂದ ಸುರುವಾಗಿ ಎಲ್ಲಿ ನಿಲ್ಲುಗು ಹೇಳ್ಳೆ ಎಡಿಯ
ಇವರೆಡಕ್ಕಿಲಿ ಮಾತಾಡ್ಯೊಂಡಿಪ್ಪಗ ಆತಿದ ಅಡಿಗೆ ಸತ್ಯಣ್ಣ ಎಲೆತಟ್ಟೆ ಹುಡ್ಕ್ಯೊಂಡು ಇವರತ್ರಂಗೆ ಬಂದ್ಸು.
ಎಂತಕೆ? – ಸುಭಗಣ್ಣ ಅಲ್ಲೆ ಇತ್ತಿದ್ದವಿದಾ
ಅಷ್ಟಪ್ಪಗ ಆತು ಕುಂಟಾಂಗಿಲ ಭಾವನ ಒಂದು ಚೋದ್ಯ – ಹೆಮ್ಮಕ್ಕಳ ಪದ ಎಂತಕೆ ಲಾಯಕ ವಿರಳ ಆಗಿರ್ತು?!
ಅಡಿಗೆ ಸತ್ಯಣ್ಣ ಹೇದ° – “ಹೆಮ್ಮಕ್ಕ ಎಲೆ ತಿಂದೊಂದು ಪದ ಹೇಳ್ತವಿಲ್ಲೆ ಇದಾ!” 😀
~~
4
ಮುಳಿಯ ಉಪ್ನಾನ ಕಳುದು ಹೆರಡುತ್ತವು ಹೆರಟೊಂಡಿದ್ದವಟ್ಟೇ.
ಬೈಲಿನೋರು ಅಕೇರಿಗೆ ಹೆರಡ್ತ ಕಾರಣ ಸಾವಕಾಶ ಕೂದು ಪಟ್ಟಾಂಗ ಆವ್ತಾ ಇತ್ತಿದ್ದು ಅಡಿಗೆ ಸತ್ಯಣ್ಣನನ್ನೂ ಹತ್ರೆ ಕೂರ್ಸಿ.
ಎಂತದೋ ಮಾತಿನ ಎಡಕ್ಕಿಲಿ ಆತು ಕುಂಟಾಂಗಿಲ ಕೇಟದು – ಇರುಳು ಒರಗುವಂದ ಮದಲು ಹಾಲು ಕುಡುದರೆ ಎಂತಕ್ಕು?
ಅಡಿಗೆ ಸತ್ಯಣ್ಣ ಕೇಟ° – “ಏವ ಹಾಲು?!” 😀
ದನದ ಹಾಲು , ಎಮ್ಮೆ ಹಾಲು, ಪೇಟೆ ಹಾಲು, ಪೇಕೆಟು ಹಾಲು … ಉಮ್ಮ ನವಗರಡಿಯಪ್ಪ ಈ ತರ ತರ ಹಾಲಿನ ಗುಣ :!
~~
5
ಅಟ್ಟಪ್ಪಗ ಅದಾ ಅಡಿಗೆ ಸತ್ಯಣ್ಣಂಗೆ ಒಂದು ಫೋನು ಬಂತು ತೆಂಕ್ಲಾಗಿ ತಿರುವನಂತಪುರಕ್ಕೆ ಅಡಿಗ್ಗೆ ಹೋಪಲೆ ರಂಗಣ್ಣನೊಟ್ಟಿಂಗೆ
ತೆಂಕ್ಲಾಗಿ ಹೋವ್ತು ಹೇದು ಆದರೆ ಬೈಕಿಲಿ ಬಸ್ಸಿಲ್ಲಿ ಹೋಪದು ಅಲ್ಲನ್ನೆ . ರೈಲಿಲ್ಲಿ ಇದಾ
ರೈಲಿಲ್ಲಿ ಹೋವ್ತು ಹೇದು ಆದರೆ ಮದಲೇ ಟಿಕೆಟು ಬುಕ್ಕು ಮಾಡೇಕ್ಕಿದಾ
ನಿಂಗೊಗಾಗದರೆ ಇಂಟರುನೆಟ್ಟಿಲ್ಲಿ ಮೊಬೈಲಿಲಿ ಎಲ್ಲ ಟಿಕೆಟು ಮಾಡಿ ಅಭ್ಯಾಸ ಇಕ್ಕು. ಅಡಿಗೆ ಸತ್ಯಣ್ಣಂಗೆ ಅದೆಲ್ಲ ಅರಡಿಯ
ಹಾಂಗೆ ಅಡಿಗೆ ಸತ್ಯಣ್ಣ ಕುಂಟಾಂಗಿಲ ಭಾವನತ್ರೆ ಹೇದ್ದು – ಏ ಭಾವ! ಒಂದರಿ ಹೋಪಲೆ ಬಪ್ಪಲೆ ಟಿಕೆಟು ಬುಕ್ಕು ಮಾಡಿ ಕೊಟ್ಟಿಕ್ಕುವೆಯೋ?!
ಆತಪ್ಪ ಅದೆಕ್ಕೆಂತ ಮಾಡೆಕು!, ಧಾರಳ ಮಾಡಿ ಕೊಡ್ಳಕ್ಕು, ನಿಂಗಳ ಮೊಬೈಲಿಂಗೇ ಟಿಕೆಟು ಬತ್ತಾಂಗೆ ಮಾಡ್ತೆ ಹೇದ° ಕುಂಟಾಂಗಿಲ ಭಾವಯ್ಯ°.
ಅಟ್ಟಪ್ಪಗ ರಂಗಣ್ಣಂಗೆ ರಪಕ್ಕನೆ ನೆಂಪಾತು, “ಮಾವ° S1, S2, S3 , S4 , S5 , S6 …..S12 ಹೇದೆಲ್ಲ ಪೆಟ್ಟಿಗೆ ಇದ್ದು ರೈಲಿಲ್ಲಿ. ನವಗೆ ಏವುದರ್ಲಿ ಆಯೇಕು ಹೇಳೇಡದೋ?
ಸತ್ಯಣ್ಣ ಹೇದ° – ಅದೆಲ್ಲ ಅವಂಗೆ ಗೊಂತಿಕ್ಕು, ಏವುದು ಮದಾಲು ಎತ್ತುತ್ತೋ ಅದರ್ಲಿ ಮಾಡುಗು ಅವ° 😀
ಉಮ್ಮಾ, ಏವುದರ್ಲಿ ಆದರೂ ಅಡ್ಡಿ ಇಲ್ಲೆ. ರೈಲು ಎತ್ತಲಪ್ಪಗ ಎದೂರೆ ಹೋಗಿ ನಿಂದರಾತು ಹೇದನೋ ಗೊಂತಿಲ್ಲೆ ಕುಂಟಾಂಗಿಲ ಭಾವ° ಮನಸಿನೊಳದಿಕೆಯೆ 😀
~~
6
ರಜಾ ಹೊತ್ತಪ್ಪಗ ಉಪ್ಪಿನಕ್ಕಾಯಿ ಮೆಡಿ ಶುದ್ದಿ ಬಂತು.
ಕುಂಟಾಂಗಿಲ ಭಾವ° ಈ ಸರ್ತಿ ವಾರ ವಾರ ರಜೆಲಿ ಮೆಡಿ ಕೊಯ್ವಲೆ ಹೋಯ್ದ° ಹೇಳ್ತ ಶುದ್ದಿ ಅಡಿಗೆ ಸತ್ಯಣ್ಣಂಗೆ ಗೊಂತಿದ್ದು.
ಎನಗೆ ಈ ವೊರಿಶಕ್ಕಾತು ಮೆಡಿ, ಎನಗೆ ಕೊಯ್ದು ಆತು, ಎನಗೆ ತರುಸಿ ಆತು ಹೇದು ಒಬ್ಬೊಬ್ಬ° ಹೇದೊಂಡಿಪ್ಪಗ ಅಡಿಗೆ ಸತ್ಯಣ್ಣ ಹೇದ° – “ಮೆಡಿ ಎಲ್ಯಾರು ಇದ್ದೋ? ಎನಗೂ ರಜಾ ಬೇಕಾತು”
ಕುಂಟಾಂಗಿಲ ಭಾವ ಹೇದ° – ಅಡಿಗೆ ಸತ್ಯಣ್ಣ!, ನಿಂಗೊಗೆಂತಕೆ ಮೆಡಿ, ನಿಂಗೊಗೆ ನಿತ್ಯ ಅನುಪ್ಪತ್ಯ ಇದ್ದಲ್ಲದಾ?!
ಸತ್ಯಣ್ಣ ಹೇದ° – ಅನುಪ್ಪತ್ಯಕ್ಕೆ ಹೋವ್ತದಾನು ಅಲ್ಲಿ ಅಡಿಗೆ ಮಾಡ್ಳೆ, ಅಲ್ಲಿಂದ ಉಪ್ಪಿನಕ್ಕಾಯಿ ತಪ್ಪಲೆ ಅಲ್ಲ. ಏಯ್… ಅನುಪ್ಪತ್ಯ ಇಲ್ಲದ್ದ ದಿನ ನವಗೆ ಮನೆಲಿ ಹೆಜ್ಜೆ ಉಪ್ಪಿನಕ್ಕಾಯಿ ಉಣ್ಣೆಡದೋ, ಮನೆಲಿಪ್ಪೋರಿಂಗಾದರೂ ಬೇಡದಾ?! ಊಟಕ್ಕಪ್ಪಗ ಬಂದೋರಿಂಗೆ ಬಳ್ಸುಲಾರು ಬೇಡದ?!
ಕುಂಟಾಂಗಿಲ ಭಾವಂಗೆ ಗೊಂತಾದು ಇದು ಅಡಿಗೆ ಸತ್ಯಣ್ಣ ಈಗ ಬತ್ತಿ ಮಡಿಗಿದ್ದದು – ದೊಡ್ಡಜ್ಜನ ವರುಷಾಂತ ಅಡಿಗೆ ಪಟ್ಟಿ ಮಾಡ್ಸಲೆ ಅಡಿಗೆ ಸತ್ಯಣ್ಣನಲ್ಲಿ ಮೂರ್ಸಂಧಿಯಪ್ಪಗ ಹೋದವ ಇರುಳು ಉಂಡಿಕ್ಕಿಯೇ ಹೆರಟದು 😀
~~
7
ಮುಳಿಯ ಉಪ್ನಾನದ ಅತ್ತಾಳದ ದಿನ ಅಲ್ಲೆ ಹತ್ರೆ ಕದ್ರಿಲಿ ಕಟೀಲು ಮೇಳದ ಶನೀಶ್ವರ ಮಹಾತ್ಮೆ ಆಟ ಇದ್ದತ್ತದಾ.
ಕೊರವಲೆ ಹೋದ ಏನಂಕೋಡ್ಳಣ್ಣ ಇರುಳು ಉಂಡಿಕ್ಕಿ ತೆಕ್ಕುಂಜ ಮಾವನ ಹಿಂದೆ ಕೂರಿಸ್ಯೊಂಡು ಆಟಕ್ಕೆ ಬೈಕು ಎಬ್ಬಿದ್ದ.
ಹೆರಡೆಕ್ಕಾರೆ ಮದಲೆ ಅಡಿಗೆ ಸತ್ಯಣ್ಣಂಗೂ ಗಾಳಿ ಹಾಕಿ ಕೆಮಿ ಅರಳಿಸಿ ಆಗಿತ್ತು ಏನಂಕೋಡ್ಳಣ್ಣಂಗೆ
ಹೋಳಿಗೆ ವೊಯಿವಾಟು ಅಂದು ಇಲ್ಲದ್ದ ಕಾರಣ, ಸೆಕಗೆ ಹೇಂಗೂ ಒರಕ್ಕು ಬಪ್ಪಲಿಪ್ಪ ಪಂಚಾತಿಗೆ ಅಲ್ಲದ್ದ ಕಾರಣ ಏನಂಕೋಡ್ಳಣ್ಣನ ಬೆನ್ನಾರಿಕೆ ಅಡಿಗೆ ಸತ್ಯಣ್ಣನ ಬೈಕೂ ಹೆರಟತ್ತು ರಂಗಣ್ಣನ ಜತೆಗೆ ಸೇರ್ಸಿಯೊಂಡು
ಗ್ರಾಚಾರ.. ಅಡಿಗೆ ಸತ್ಯಣ್ಣ ಹೋಪಗ ಕೈಲಿ ಮೊಬೈಲೂ ಹಿಡ್ಕೊಂಡು ಹೋಗಿತ್ತಿದ್ದ° 🙁
ಈಗಾಣ ಮೊಬೈಲು ಏರ್ಪಾಡುಗೊ ಹೇದರೆ ಗೊಂತಿದ್ದನ್ನೆ ಮತ್ತೆ … ಒಂದು ಕ್ಷಣ ತಳಿಯದ್ದೆ ಕೂಬಲೆ ಬಿಡವು ಮನುಶ್ಯರು.. ವಾಟುಸುಅಪ್ಪು, ವೈಬೆರು, ಮೋರೆಪುಟ ಹೇದು ಪ್ರೀ ಮೆಸೇಜು, ಪಟ, ವೀಡಿಯೋ ..
ಅದೇ ದಿನ ಸುಳ್ಯ ತೊಡಿಕ್ಕಾನಲ್ಲಿ ಹೊಸನಗರ ಮೇಳದ ಶಿವಭಕ್ತ° ಬಾಣಾಸುರ° ಅದಾ.
ಸತ್ಯಣ್ಣ ಹೋಗಿ ಒಂದು ಕರೇಲಿ ಹೆಗಲ ಶಾಲ ನೆಲಕ್ಕಕೆ ಹಾಕಿ ಕೂದೊಂಡಿದ್ದಾಂಗೆ ತೊಡಿಕ್ಕಾನ ಆಟಕ್ಕೋದಲ್ಲಿಂದ ಕಲ್ಲುಗುಂಡಿ ದಾಕುಟ್ರು ಜಯರಾಂಭಾವ° ಅಲ್ಲ್ಯಾಣ ಆಟದ ವರ್ತಮಾನ ವಾಟುಸಪ್ಪಿಲ್ಲಿ ಬಿತ್ತರುಸುಲೆ ಸುರುಮಾಡಿದವು. ಶಿವನ ಪಟವೋ, ಬಾಣಾಸುರನ ಪಟವೋ, ಬಿಲ್ಲು ಬಾಣ ತ್ರಿಶೂಲ, ಅಟ್ಟಾಸೋ, ಧೀಂಕಣವೋ… ಪಟ, ಪದ್ಯ, ವೀಡಿಯಾ..
ನೀ ಮಾಂತ್ರ ಆಟಕ್ಕೆ ಹೋದ್ದೋ..!, ಆನೂ ಆಟಕ್ಕೆ ಬೈಂದೆ ಇದಾ ಹೇದು ಅಡಿಗೆ ಸತ್ಯಣ್ಣನೂ ಇಲ್ಲ್ಯಾಣ ಪದ, ಪಟ, ವೀಡಿಯಾ ತೆಗದು ಕಳ್ಸುಲೆ ಸುರುಮಾಡಿದವು.
ಅಂತೂ ಇಂತೂ ಕೋಳಿ ಕೂಗೆಕ್ಕಾರೆ ಮದಲೆ ಆಟವ ಅಲ್ಲಿಗೆ ಬಿಟ್ಟಿಕ್ಕಿ ಅಡಿಗೆ ಸತ್ಯಣ್ಣ° ಎತ್ತಿದವು ಮುಳಿಯಕ್ಕೆ ಉಪ್ನಾನ ಇಡ್ಳಿ ಸಾಂಬಾರು, ಮತ್ತಾಣ ಅಡಿಗೆ ಸುರುಮಾಡ್ಳೆ
ಮನೆ ಜಾಲಿಂಗೆತ್ತುವಾಗ ಬಾಯಿಲಿ ತುಂಬ ಪೇಸ್ಟಿನ ನೊರೆ ಹಾಕ್ಯೊಂಡು ಹಲ್ಲುತಿಕ್ಕಿಯೊಂಡಿತ್ತಿದ್ದ ಆರೋ ಕೇಳಿದವು ಎಂತರ ಪ್ರಸಂಗ ಸತ್ಯಣ್ಣ°?
ಸತ್ಯಣ್ಣ° ಹೇದ°.. ಎಂತರ ಭಾವಯ್ಯ ಆಟದ ಬಗ್ಗೆ ಹೇಳುಸ್ಸು. ಎಂತಾರು ಇನ್ನು ಮುಂದೆ ಆಟಕ್ಕೋಪಗ ಈ ಮೊಬೈಲ ಕೊಂಡೋಪ ಪಂಚಾಯಿತಿಗೇ ಆಗ ಮಿನಿಯ. ಇವರ ಮೆಸೇಜು ಕಳ್ಸುತ್ತ ಏರ್ಪಾಡಿಲ್ಲಿ ಎನ ಆಟ ನೋಡ್ಳೇ ಎಡಿಗಾಯ್ದಿಲ್ಲೆ, ಎಂತ ಪ್ರಸಂಗ ಕಳುತ್ತು.. ಅಲ್ಲ ಎಂತ ಪ್ರಸಂಗ ಆವ್ತಾ ಇದ್ದು ಹೇದು ಕೂಡ ಗೊಂತಾಯ್ದಿಲ್ಲೆ. ಅಂತೂ ಆಟ ಮಾತ್ರ ಒಳ್ಳೆ ರೈಸಿದ್ದು 😀
~~
ಹೇದಾಂಗೆ ಸತ್ಯಣ್ಣ ತೆಂಕ್ಲಾಗಿ ಹೋಯ್ದ ಅಪ್ಪ. ಬಂದಾಗಲಿ. ಮತ್ತೆ ಕಾಂಬೊ°
ಆಟದ ಗೌಜಿಲಿ ಅಲ್ಲ ವಾಚಿನ ಕೆಮೆರಾ ಕತೆಯೋ ಎನೋ ,
ಸತ್ಯಣ್ಣ ಹ೦ಡೇ ಕೈಯಿಯ ಒಲೆ ಕಿಚ್ಚಿನ ಹೊಡೆ೦ಗೆ ಮಡಗಿದವನ್ನೇ
ಅಲ್ಲ ರ೦ಗಣ್ಣನ ಕಾರುಬಾರೋ?
ಗೇಸಿ೦ದ ಆಗಿದ್ದರೆ ಕೆಮಿ ಎಲ್ಲಾಗಿದ್ದರೂ ಒ೦ದೇ ಹೇಳುಗು.
ಅಲ್ಲದಾ?
ತೆ೦ಕ್ಲಾಗಿ೦ದ Wಟೇಸೊಪ್ಪು
ಬ೦ದಪ್ಪಗ ಗೊ೦ತಕ್ಕು.
ಇರ್ಲಿ.
ದ.ಕ. ಹವ್ಯಕ ಭಾಷೆ ನಿಮ್ ಶೈಲೀಲಿ ತುಂಬ ಖುಷಿಕೊಡ್ತು ..
ಯಂಗೆ ೮೦% ಅರ್ಥ ಆಗ್ತು
ಸತ್ಯಣ್ಣ ಅರ್ಧ ಸೆಂಚುರಿ ದಾಂಟಿ ರೈಸುತ್ತಾ ಇದ್ದ !ಸೂಪರ್ ಆಯಿದು !ಸೆಂಚುರಿ ಬಾರ್ಸುದರ ಕಾಯ್ತಾ ಇದ್ದೆಯ
ಹಾಲು ಕುಡಿವ ಶುದ್ದಿ ಪಷ್ಟಾಯಿದು.
ಸತ್ಯಣ್ಣಂಗೆ ವೋಟು ಹಾಕಿ ಆತೊ?