ಸಂಗತಿ ಎಂತಾದು ನಿಂಗೊಗೆ ಗೊಂತಿದ್ದೋ…
ಗೊಂತಿರ. ಏಕೇಳಿರೆ ನಿಂಗ ಇತ್ತಿಲ್ಲಿ ಅಲ್ಲಿ ಮಾತಾಡ್ವಗ 🙂
ದೂರದ ಬಾವಯ್ಯಂಗೆ ಹಲ್ಸಿನಣ್ಣು ಕೊಟ್ಟಿಗೆ ತಿನ್ನೆಕ್ಕೂದು ಬಹು ದಿನದ ಆಶೆ. ಕೊಟ್ಟಿಗೆ ಹೇದರೆ ಅಂತೇ ಹಲ್ಸಿನಣ್ಣು ಕೊಚ್ಚಿಯೋ, ಕಡದೋ ಬಟ್ಲಿಲ್ಲಿ, ಗ್ಲಾಸಿಲ್ಲಿ ಎರದ್ದಲ್ಲ. ನಮ್ಮ ಹವೀಕರ ಶಾಸ್ತ್ರೀಯ ಕ್ರಮದಾಂಗೆ ಬಾಳೆ ಕೀತಿಲ್ಲಿ ಮಡ್ಚಿ ಮಡ್ಚಿ ಅಟ್ಟಿನಳಗೆಲಿ ಬೇಶಿದ್ದು. ಹಾಂಗೆ ಬೆಂದು ತಿಂಬಲೆ ಆಯೆಕ್ಕಾರೆ ಹತ್ರಾಣವು ಹೇದು ನೆರೆಕರೆಲಿ ಇಲ್ಲದ್ರೂ ಪಟ ತೆಗದು ಬೈಲಿಲ್ಲಿಪ್ಪ ಚೆಂಙಾಯ್ಗೊಕ್ಕೆ ಕಳ್ಸಿಕ್ಕುವೋದು ಕಳ್ಸಿಕ್ಕಿ ಮನಸ್ಸಮಾಧಾನ ಆವ್ತಾಂಗೆ, ಹೊಟ್ಟೆ ತುಂಬುವನ್ನಾರ ತಿಂದಿಕ್ಕಿ ಮೊಬೀಲು ಉದ್ಯೊಂಡು ಕೂದಪ್ಪಗ ಕೆಲಾವು ಕಾಣ್ತಿದ ಮೇಸೇಜು.
ಜಾತಿ ಮರದ (ತೆಕ್ಕಿ/ತೇಗ/ಸಾಗುವಾನಿ) ಎಲೆಲಿ ಮಡ್ಚಿ ಮಾಡಿರೆ ಲಾಯ್ಕ ರುಚೀ ಆವ್ತೂಳಿ. ಶ್ಯೆಲಾ ಐಯ್ಯನ ಮಂಡೇ… 🙂
ಈ ಹತ್ತು ಬಾಳೆ ಕೀತು ತರೆಕಾರೇ ಬಲಿ ಬಂದದು ಎಷ್ಟು ಹೇದು ಬಲಿ ಬಂದವಂಗೆ ಅಲ್ದೋ ಗೊಂತು ಹೇಳಿ ತಲೆ ತೊರುಸುವಗ ಆತು ಇನ್ನೊಬ್ಬ ಬಾವಯ್ಯನ ಮೇಸೇಜು ಬಂದದು…!
ಅರಶಿನ ಎಲೆಲಿ ಮಡ್ಚಿ ಮಾಡಿರೆ ಪರಿಮ್ಮಳ ಆವ್ತು ಹೇಳಿ 😅 ಅರಶಿನ ಎಲೆ, ತೆಕ್ಕಿ ಎಲೆ ಸಿಕ್ಕದ್ರೆ ಉಪ್ಪಳಿಗ ಮರದ ಎಲೆ ಅಕ್ಕೋ ಕೇಳಿದ್ದನಾಡ ಮದಲಿಂಗೆ ಪರಾಕಿಲ್ಲಿ. ಉಪ್ಪಳಿಗೆ ಎಲೆ ಕೊಟ್ಟಿಗೆ ಮಡ್ಚಲೆ ಆವ್ತೆಲ್ಲಿಗೆ… ಅದು ಉಪಯೋಗ ಆಯ್ಕೊಂಡಿದ್ದದು ಮರದಿನ ಉದ್ಯಪ್ಪಂಗೆ ಗಂಡಿ ಕರೇಲಿ ಕೂದಿಕ್ಕಿ ಏಳೆಕ್ಕಾರೆ… 😷 ಮದಲಿಂಗೆ ಈಗಾಣಾಂಗೆ ಟೋಯ್ಲೆಟ್ಟು ಎಲ್ಲಿ ಇದ್ದತ್ತು…!? ಪ್ರಕೃತಿ ಸೌಂದರ್ಯ ಆಸ್ವಾದಿಸಿಯೊಂಡು, ಹಲ್ಲೆಡಕ್ಕಿಂಗೆ ಮುಳಿ ಕಡ್ಡಿ ಕುತ್ಯೊಂಡು ಕೂದರೆ ಹತ್ತು ಮಿನಿಂಟಿಂಗೆ ಬೇರೆ ಸ್ವರ್ಗ ಬೇಕೋ ಮತ್ತೆ..!? ಹ್ನೇ..!? 😂.
ಅಲ್ಲೇ ಉಪ್ಪಳಿಗೆ ಸೆಸಿ ಇದ್ದದರಿಂದ ಒಂದೋ ಎರಡೋ ಎಲೆ ಚೂಂಟಿರೆ ನೀರು ಒಂದು ಚೆಂಬು ಕೊಂಡೋದ್ದು ಹದಾ ಆವ್ತು 🤭.
ಇಷ್ಟೆಲ್ಲ ಹೇಳ್ಯಪ್ಪಗ ನಿಂಗಳತ್ರೆ ಕೇಳ್ಳೆ ಬಿಟ್ಟೋತದ.! ಈಗ ಈ ಟಿಶ್ಯೂ ಪೇಪರು ಹೇಳಿ ಉಪಯೋಗ ಮಾಡ್ತ ಕ್ರಮ ಆರದ್ದು? ಪೋರೀನಿನವರದ್ದೋ..? ಯೇಯ್… ಮದಲಿಂಗೆ ಅವರ ವಸಹಾತು ಇಪ್ಪಗ ಇಲ್ಲಿ ನೋಡಿ ಕಲ್ತದು. ಅವಕ್ಕಲ್ಲಿ ಉಪ್ಪಳಿಗೆ ಎಲೆ ಎಲ್ಲಿದ್ದು.? ಹಾಂಗೆ ಟಿಶ್ಯೂ ಪೇಪರು ಮಾಡಿದ್ದದು. ಇದೂ ನಮ್ಮ ದೇಶದ ಕ್ರಮವೇ… ನವಗೆ ಗೊಂತಿದ್ದತ್ತಿಲ್ಲೆ. ಈಗ ಪೋರೀನಿನವು ಮಾಡ್ತವೂಳಿ ಅಲ್ದೋ ನಾವೂ ಮಾಡಿ ಉದ್ದಿ ಇಡ್ಕುತ್ತದು..!😝
ಪೋರೀನಿನವು ಹೇಳಿರೆ ವೇದ ವಾಕ್ಯ, ಅವು ಮಾಡಿದಾಂಗೆ ಮಾಡಿರೆ ಇಜ್ಞಾನ 🤭
- ಜೆಂಬ್ರದ ಗೌಜಿ – ಎಬಿ ಭಾವ - June 2, 2019
- ಟಿಶ್ಯೂ ಪೇಪರು ಪುರಾಣ – AB ಭಾವ ಕಂಡಂತೆ - May 27, 2019
ವಾಸ್ತವಕ್ಕೊಂದು ಲಘು ಬರಹ. ಲಾಯಿಕ ಆಯಿದು.
ಧನ್ಯವಾದಂಗ 🙏😊