Oppanna.com

ಸ್ವಯಂವರ : ಕಾದಂಬರಿ : ಭಾಗ 01 – ಪ್ರಸನ್ನಾ. ವಿ. ಚೆಕ್ಕೆಮನೆ

ಬರದೋರು :   ಪ್ರಸನ್ನಾ ಚೆಕ್ಕೆಮನೆ    on   27/05/2019    2 ಒಪ್ಪಂಗೊ

ಎಂತಕೆನ್ನ ಬಪ್ಪಲೇಳಿದ್ದು ನೀನು? ಆದಿತ್ಯವಾರ ಒಂದು ದಿನ ರಜೆ ಸಿಕ್ಕುದು. ಆ ದಿನವೂ ನೆಮ್ಮದಿಲಿ ಆನು ಒರಗುಲಾಗ ಹೇಳಿಯಾ” ಹಾಸ್ಟೆಲಿಂದ ಹೆರ ಬಂದ ಕೂಡ್ಲೇ ಸುಪ್ರಿಯ ಗೆಳತಿ ವಿಜಯನತ್ರೆ ಜಗಳ ಮಾಡ್ಲೆ ಹೆರಟತ್ತು.
“ನೀನೊಂದರಿ ಸುಮ್ಮನೇ ಕೂರು. ಒರಗುದಲ್ಲ ನೀನು.. ಎಂತ ಮಾಡುದೂಳಿ ಎನಗೆ ಗೊಂತಿದ್ದಾತಾ…..” ವಿಜಯ ಸುಪ್ರಿಯನತ್ರೆ ರಜ ರಾಗಲ್ಲಿ ಹೇಳಿಯಪ್ಪಗ ಅದರ ಮೋರೆಲಿದ್ದ ಕೋಪ ಮಾಯ ಆಗಿ ರಜಾ ನಾಚಿಕೆಯ ಬಣ್ಣ ಬಂತು.

“ಹೋಗಾ° ನಿನ್ನದೊಂದು, ಯೇವಗಲೂ ತಮಾಶೆಯೇ.ಸತ್ಯ ನಿನಗೆ ಮಾಂತ್ರ ಗೊಂತಿಪ್ಪದು. ಬೇರೆ ಆರಿಂಗಾರು ಗೊಂತಾದರೆ ಆನು ಬಾವಿಗೆ ಹಾರುವೆ ನೋಡು”

“ಎನ್ನ ಹೆದರ್ಸುದಾ ಹೇಂಗೆ? ಬಾಯಿಲಿ ಹಾಂಗೆ ಹೇಳಿರೂ ಕೂಚಕ್ಕಂಗೆ ಬಾವಿಗೆ ಹಾರ್ಲೆಲ್ಲ ಮನಸಿಲ್ಲೇಳಿ ಎನಗೆ ಗೊಂತಿದ್ದೂ…..” ವಿಜಯ ಪುನಃ ರಾಗಲ್ಲಿ ಹೇಳಿ ನೆಗೆ ಮಾಡಿತ್ತು.

ಸುಪ್ರಿಯ ಮಾತಾಡಿದ್ದಿಲ್ಲೆ. ವಿಜಯ ಆರತ್ರಾರು ಹೇಳುಗ ಹೇಳಿ ಅದಕ್ಕೆ ಸಂಶಯವೇ ಇಲ್ಲೆ. ಕಾರಣ ಎಂತ ಹೇಳಿರೆ ವಿಜಯಂಗೆ ಸುಪ್ರಿಯ ಬಿಟ್ಟು ಬೇರೆ ಆರತ್ರೂ ಒಡನಾಟವೇ ಇಲ್ಲೆ.
“ಎಂತ ಮಾತಾಡ್ತಿಲ್ಲೆ ಮದಿಮ್ಮಾಳು?” ವಿಜಯ ಪುನಃ ಅದರ ಬಾಯಿಗೆ ಕೋಲಾಕಲೆ ಸುರು ಮಾಡಿತ್ತು.

“ಬೇರೆಂತ ಬೇಕಾರು ಹೇಳು.ಆದರೆ ಈ ಮದಿಮ್ಮಾಳು” ಹೇಳಿ ಮಾತ್ರ ಎನ್ನ ಹೇಳೆಡ. ಎನಗೆ ಆ ಶಬ್ದ ಕೇಳುಗಳೇ ಕೋಪ ಬತ್ತು. ಎನಗೆ ಆ ಮೋಞ° ನ ಮದುವೆ ಅಪ್ಪಲೆ ರಜವು ಮನಸಿಲ್ಲೆ ಹೇಳಿ ನಿನಗೆ ಗೊಂತಿದ್ದು…..” ಸುಪ್ರಿಯ ಅವು ಇಪ್ಪದು ಮಾರ್ಗದ ಕರೆಲಿ ಹೇಳ್ವದರನ್ನೂ ಮರದ ಹಾಂಗೆ ದೊಡ್ಡಕೆ ಬೊಬ್ಬೆ ಹಾಕಲೆ ಸುರು ಮಾಡ್ಯಪ್ಪಗ ವಿಜಯ ಅದರ ಕೈ ಹಿಡುದು ಬಾಯಿ ಮುಚ್ಚಿತ್ತು.

“ಈ ನಡು ಮಾರ್ಗಲ್ಲಿ ನಿಂದೊಂಡು ‘ಮೋಞ° ಅದೂ.. ಇದೂ..ಹೇಳ್ತೆನ್ನೇ. ನಾಚಿಕೆ ಆವ್ತಿಲ್ಯಾ ನಿನಗೆ. ಅವನ ಪ್ರಾಯಕ್ಕೆ, ವಿದ್ಯಗೆ, ಗುಣಕ್ಕೆ ಬೆಲೆ ಕೊಡು. ಅಲ್ಲದ್ದೆ ಆ ಟೆಂಪೋ ಡ್ರೈವರ ನ ಹೇಳುವಾಂಗೆ……”

ಈಗ ವಿಜಯನ ಬಾಯಿ ಮುಚ್ಚಿದ್ದದು ಸುಪ್ರಿಯ.
“ಹಾಂಗಿದ್ದ ಮಾತೆಲ್ಲ ಈಗ ಬೇಡ.”

“ಆತಪ್ಪಾ ಮಾತಾಡ್ತಿಲ್ಲೆ. ಕೆಲವು ವಿಷಯ ಹೇಳುಗ ನಿನಗೆಷ್ಟು ಪಿಸ್ರು ಬತ್ತು ಹೇಳಿ ಒಂದು ಪರೀಕ್ಷೆ ಮಾಡಿದ್ದು ಮಾರಾಯ್ತೀ….. ಬಾ…ಬಸ್ ಸ್ಟೇಂಡಿಂಗೆ ಹೋಪ.”

“ಅಯ್ಯೋ ಬಸ್ಸಿಲ್ಲಿ ಹೋಪದಾ? ಎನಗಿಷ್ಟರ ವರೆಗೆ ಬಸ್ಸಿಲ್ಲಿ ಹೋಗಿಯೇ ಗೊಂತಿಲ್ಲೆ.”

“ಹೇ….ನಿಜವಾಗಿಯೂ ಬಸ್ಸಿಲ್ಲಿ ಹೋಗಿ ಗೊಂತಿಲ್ಯಾ? ವಿಜಯಂಗೆ ನಂಬಿಕೆಯೇ ಬಯಿಂದಿಲ್ಲೆ.

” ನಿಜವಾಗಿಯೂ ಅಪ್ಪು. ಸಣ್ಣಾದಿಪ್ಪಗ ಅಪ್ಪನೊಟ್ಟಿಂಗೆ ಸ್ಕೂಟರಿಲ್ಲಿ ಶಾಲಗೆ ಹೋಗಿಂಡಿದ್ದದು. ಈಗ ಅಣ್ಣಂಗೆ ಕೆಲಸ ಸಿಕ್ಕಿ ಕಾರು ತೆಗದ ಮತ್ತೆ ಕಾರಿಲ್ಲೇ ಹೋಪದು.”

ವಿಜಯ ಮಾತಾಡಿದ್ದಿಲ್ಲೆ. ಸುಪ್ರಿಯ ಎಷ್ಟು ಪುಣ್ಯವಂತೆ.ಪ್ರೀತಿಸುವ ಅಪ್ಪ, ಕೊಂಡಾಟಲ್ಲಿ ನೋಡುವ ಅಬ್ಬೆ.ತಂಗೆ ಹೇಳಿರೆ ಜೀವದ ಹಾಂಗೆ ನೋಡ್ಯೊಂಬ ಅಣ್ಣ……

“ಎಂತರ ಆಲೋಚನೆ ಮಾಡುದು? ಈ ಬೆಶಿಲಿಂಗೆ ಹೆಚ್ಚೊತ್ತು ನಿಂಬಲೆಡಿತ್ತಿಲ್ಲೆ.” ಸುಪ್ರಿಯ ವಿಜಯನ ಕೈ ಹಿಡುದು ಎಳದತ್ತು.

“ಅದುವಾ‌‌…..ಇಷ್ಟರವರೆಗೆ ಬಸ್ಸಿಲ್ಲಿ ಹತ್ತದ್ದ ಜೆನ ಇನ್ನು ಬಸ್ಸಿಲ್ಲಿ ಹೋಯೆಕಾಗಿ ಬತ್ತನ್ನೇಳಿ ಬೇಜಾರಾತು”.

” ಇಂದು ಒಂದು ದಿನ ಅಲ್ಲದಾ? ಅದೂದೆ ನಿನ್ನೊಟ್ಟಿಂಗೆ ,ಎಂತದೂ ಆಗ”

“ಇಂದ್ರಾಣ ಸಂಗತಿ ಮಾಂತ್ರ ಅಲ್ಲ ಹೇಳಿದ್ದು.ನಿನ್ನ ಆ ಒಂದು ತೀರ್ಮಾನ ಜಾರಿಗೆ ಬಂದರೆ ಮತ್ತೆ……”

“ಏಯ್‌.‌‌‌…ಹಾಂಗೆ ಎಂತಾರು ಹೇಳಿ ಹೆದರ್ಸೆಡ.ಎಂತಾದರು ಎನಗೆ ನಿತ್ಯ ಬಸ್ಸಿಲ್ಲಿ ಹೋಪಲೇ ಎಡಿಯ.”

“ಹೆದರ್ಸುದೆಂತಕೆ? ನೀನೇ ಸರಿಯಾಗಿ ಆಲೋಚನೆ ಮಾಡಿರೆ ಗೊಂತಪ್ಪ ವಿಶಯಂಗೊ ಅದೆಲ್ಲ’

” ಶ್ಶೋ…..ಆನದೆಲ್ಲ ಆಲೋಚನೆ ಮಾಡಿದ್ದೇಯಿಲ್ಲೆ ಮಾರಾಯ್ತೀ. ರಜಾ ಇತ್ಲಾಗಿ ಬಾ..ಅಲ್ಲಿ ಮೀನಿನ ವಾಸನೆಲಿ ಹೋಪಲೆಡಿತ್ತಿಲ್ಲೆ.” ಮೀನು ಮಾರುವವು ಆ ಮಾರ್ಗದ ಕರೇಲಿ ವ್ಯಾಪಾರ ಮಾಡಿಂಡಿದ್ದದರ ನೋಡಿ ಸುಪ್ರಿಯಂಗೆ ಹೇಸಿಗೆ ಆತು.

“ನೀನು ಕಾರಿಲ್ಲಿ ಹೋಪ ಕಾರಣ ನಿನಗಿದೆಲ್ಲ ಗೊಂತಾಗದ್ದದು ಕೂಸೇ.ರಜಾ ಹೀಂಗೇ ನಡಕ್ಕೊಂಡು ಬಂದರೆ ಇದೆಲ್ಲ ಅನುಭವಕ್ಕೆ ಬಕ್ಕಷ್ಟೆ”

“ನೀನಾ…..ನಿನ್ನ ಅನುಭವವಾ..ಎನ್ನ ಅಣ್ಣಂಗೆ ಗೊಂತಾಯೆಕು.ಬೈದು ಮಡುಗ ಗೊಂತಿದ್ದಾ?”

“ಹ್ಹ……ಹ್ಹ……ಅಣ್ಣನ ಅಷ್ಟು ಹೆದರಿಕೆ ಇದ್ದಂಬಗ”

“ಅಯ್ಯೋ ಅದು ಹೆದರಿಕೆ ಅಲ್ಲ ,ಪ್ರೀತಿ….!!ಪ್ರೀತಿ ಹೇಳಿರೆ ಹಾಂಗೇ.ಎನ್ನ ಅಣ್ಣ ಇಲ್ಯಾ ಕಳ್ದೊರ್ಷ ಎನ್ನ ಹುಟ್ಟು ಹಬ್ಬಕ್ಕೆ ಆನು ಮನಸಿಲ್ಲಿ ಗ್ರೇಶಿದಾಂಗಿದ್ದ ಮೊಬೈಲು ಪೋನು ತೆಗದು ಕೊಟ್ಟಿದ.ಮತ್ತೆ ಇಲ್ಯಾ ಆನೆಂತಾರು ಬೇಕೂಳಿರೆ ಅಬ್ಬೆ ಯೇವಗಲೂ ಬೈವದು. ಈಗ ಅಣ್ಣಂಗೆ ಕೆಲಸ ಸಿಕ್ಕಿದ ಮತ್ತೆ ಆ ಪಂಚಾಯತಿಕೆ ಇಲ್ಲೆ.ಎಲ್ಲದಕ್ಕೂ ಅಣ್ಣನೆ ಯಜಮಾನ.” ಸುಪ್ರಿಯನ ಮೋರೆಲಿ ಅಣ್ಣನ ಮೇಗೆ ಇಪ್ಪ ಪ್ರೀತಿ ,ಅಭಿಮಾನ ನೆಗದು ಕಂಡು ಕೊಂಡಿದ್ದತ್ತು.

ವಿಜಯ ಅದರನ್ನೇ ನೋಡಿಕ್ಕಿ ಒಂದರಿ ದೊಡ್ಡಕೆ ಉಸಿಲು ಬಿಟ್ಟತ್ತು.
‘ಇಷ್ಟೆಲ್ಲಾ ಸಂತೋಶಲ್ಲಿಪ್ಪ ಕೂಸು ಅದಾಗಿಯೇ ಕಷ್ಟ ಬಲುಗಿ ಹಾಕುತ್ತನ್ನೇ.”ಮೂಲೆಲಿಪ್ಪ ಮಡುವಿನ ಕಾಲಂಗೆಳದು ಹಾಕುದು” ಹೇಳಿ ಹೇಳುದು ಹೀಂಗಿದ್ದದಕ್ಕೇ ಆಗಿರೆಕು…..;!!!!

ಇನ್ನೂ ಇದ್ದು, ಇನ್ನಾಣ ವಾರಕ್ಕೆ >>>

ಪ್ರಸನ್ನಾ ಚೆಕ್ಕೆಮನೆ

2 thoughts on “ಸ್ವಯಂವರ : ಕಾದಂಬರಿ : ಭಾಗ 01 – ಪ್ರಸನ್ನಾ. ವಿ. ಚೆಕ್ಕೆಮನೆ

  1. ಎರಡು ಕೂಚಕ್ಕಂಗಳ ಆತ್ಮೀಯತೆ ಲಾಯಿಕಲ್ಲಿ ವ್ಯಕ್ತವಾಯಿದು. ಮುಂದಾಣ ಕಂತಿಂಗೆ ಕಾಯ್ತೆ

  2. ಒಪ್ಪಣ್ಣಲ್ಲಿ ಒಪ್ಪ ಕಾದಂಬರಿ ಶುರುವಾದ್ದು ಕೇಳಿ ಕೊಶಿಯಾತು. ಪ್ರಸನ್ನಕ್ಕ ಬರೆತ್ತ ಕತೆ ಏವತ್ತುದೆ ರೈಸುತ್ತು. ಸ್ವಯಂವರದ ಒಂದನೇ ಕಂತು ಓದಿ ಅಪ್ಪಗಳೇ ಕುತೂಹಲ ಹುಟ್ಟುಸಿತ್ತು. ಬರಳಿ ಬರಳಿ. ಕಾಯ್ತಾ ಇದ್ದೆ.
    ಇದಾ, ಈ ವಿಷಯವ ನವಗೆ ಗೊಂತಿಪ್ಪವಕ್ಕೆ ಎಲ್ಲ ತಿಳುಶುವೊ. ಒಪ್ಪಣ್ಣ ಬೈಲಿಲ್ಲಿ ಮತ್ತೆ ಬೆಳೆ ಬರಲಿ. ಬೆಳೆಯಲಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×