Oppanna.com

ಭಾವನೆ ಇದ್ದರೆ ಸಂಭಾವನೆಯೇ ಬೇಕಾಗ…!

ಬರದೋರು :   ಒಪ್ಪಣ್ಣ    on   06/01/2012    28 ಒಪ್ಪಂಗೊ

ಬೈಲಿಂಗೆ ಮೂರೊರಿಷ ಕಳಾತು, ಇದು ನಾಲ್ಕನೇದು – ಹೇಳ್ತದು ಕಳುದವಾರವೇ ನವಗೆ ಸಂಗತಿ ಗೊಂತಾಯಿದು.
ಪುತ್ತೂರಿನ ಪುಟ್ಟಕ್ಕ° ಹೇಳ್ತ ಹಾಂಗೆ, ಈಗ ಬೈಲು ಹೇಳಿರೆ ನಾಲ್ಕೊರಿಶದ ಸಣ್ಣ ಬಾಬೆ.
ಒರಿಶದ ಕೊನೇ ವಾರ, ಅತವಾ ಸುರೂವಾಣ ವಾರ ಆ ಬಗ್ಗೆಯೇ ಶುದ್ದಿ ಮಾತಾಡ್ತದು ಒಪ್ಪಣ್ಣನ ಹೆಮ್ಮೆ. ಅದೊಂದೇ ಒಪ್ಪಣ್ಣನ ಪೊನ್ನಂಬ್ರ ಅಲ್ಲದೋ – ಹಾಂಗೆ!

ಬೈಲಿಲಿ ನಿತ್ಯವೂ ಹೊಸ ಹೊಸ ಶುದ್ದಿಗೊ, ಹೊಸ ಹೊಸ ಒಪ್ಪಂಗೊ.
ಒಂದೊಂದು ಶುದ್ದಿಲಿ ಒಂದೊಂದು ಸತ್ವ ಇರ್ತು, ಜೀವನಾನುಭವ ಇರ್ತು, ತೂಕ ಇರ್ತು.  ಒಂದೊಂದು ಒಪ್ಪಲ್ಲಿ ಆ ವೆಗ್ತಿಗೆ ಅದು ಅರ್ತ ಆದ ಭಾವನೆಗೊ ಇರ್ತು.
ನಿತ್ಯವೂ ಓದಲೆ ಹೊಸತ್ತಿದ್ದೇ ಇರ್ತು; ನಿತ್ಯವೂ ಬೈಲಿಲಿ ಗಲಗಲ!
ಎಲ್ಲೋರಿಂಗೂ ಇದೊಂದು ನಿತ್ಯ ಮನೆಜೆಂಬ್ರ ಅಲ್ಲದೋ!
ಇದು ಹೇಂಗೆ ಸಾಧ್ಯ ಆತು?
– ಬೈಲಿನ ಎಲ್ಲೋರುದೇ ಸೇರಿ ’ಸುದರಿಕೆ’ ಮಾಡಿ ಗೆಲ್ಲುಸುತ್ತ ಕಾರಣ ನಾಕೊರಿಶಂದ ನಿತ್ಯಜೆಂಬ್ರ ಆದರೂ ಚೆಂದಲ್ಲಿ ನೆಡೆತ್ತು.
~

ಮೊನ್ನೆ ದೊಡ್ಡಜ್ಜನ ಮನೆ ತ್ರಿಕಾಲಪೂಜೆ ಮುಗುಶಿ ಬಪ್ಪೋನಿಂಗೆ ರಂಗಮಾವ° ಸಿಕ್ಕಿದವು.
ಬದಿಯೆಡ್ಕ ಕೆಮ್ಕಲ್ಲಿ ಅಡಕ್ಕಗೆ ರೇಟು ವಿಚಾರ್ಸಿ ಚೀಲನೇಲುಸಿಗೊಂಡು ಬಂದುಗೊಂಡಿತ್ತವು. ರೇಟು ಇಳುದ್ದಡ ಈಗ.
ಅಲ್ಲಿಂದ ಎಂಗೊ ಒಟ್ಟಿಂಗೇ ಬಂದದು, ಬೈಲಿಂಗೆ.
ನೆಡಕ್ಕೊಂಡೇ ಹೆರಟೆಯೊ°; ಪೆರ್ಡಾಲ ಸಂಕ ದಾಂಟಿಗೊಂಡು.
ಪುಳ್ಳಿಮಾಣಿ ಪುಳ್ಳ ವಿನುವಿಂಗೆ ಒಂದುವಾರ ರಜೆ ಮುಗಾತಡ; ಪಾತಿಅತ್ತೆ ಕಾಲುಬೇನೆಗೆ ಕೊಡ್ಯದಜ್ಜನೇ ಬಪ್ಪದಡ, ಈಗ ರಜ ಕಮ್ಮಿ ಆಯಿದಡ – ಸುಮಾರು ಶುದ್ದಿ ಹೇಳಿದವು.

ಹೀಂಗೀಂಗೆ – ಮೂರೊರಿಶ ಆತು; ಬೈಲಿನ ಎಲ್ಲೋರು ಶುದ್ದಿ ಹೇಳಿಗೊಂಡು, ಸುದರಿಕೆ ಮಾಡ್ತವು – ಹೇಳಿದೆ.
ತುಂಬ ಕೊಶಿ ಆತು ಅವಕ್ಕೆ; ಇನ್ನೂ ಬೆಳೆಯಲಿ, ಮುಂದರಿಯಲಿ – ಹೇಳಿದವು.
ಇದೆಲ್ಲ ಮಾಡ್ತದಕ್ಕೆ ಪೈಶೆ ಲೆಕ್ಕ ಹಾಕೆಡಿ ಇನ್ನು, ಹಾಂ! – ಹೇಳಿದವು.

ರಂಗಮಾವ ಹಾಂಗೇ! ಅವಕ್ಕೆ ಪೈಶೆಲೆಕ್ಕ ಹಾಕಿ ಅರಡಿಯ.
ಹಾಂಗೆ ಒಂದುವೇಳೆ ನೋಡ್ತರೆ ಪೈಸೆಗೆ ಬೇಕಾಗಿ ಮಾಡುದು ಅಡಕ್ಕೆ ಮಾಂತ್ರ. ಅವು ಪೈಶೆಲಿ ಆಶೆ ಮಾಡಿದೋರಲ್ಲ, ದೈವಭಕ್ತಿ, ತತ್ವ, ನಿಷ್ಠೆಲೇ ಬದ್ಕಿದೋರು.
ಹಾಂಗಾಗಿ ಬೈಲಿನ ಬಗ್ಗೆಯೂ ಅವು ಹಾಂಗೇ ಮಾತಾಡಿದವು – ಕೊಶೀ ಆತು ಒಪ್ಪಣ್ಣಂಗೆ.
ಇಲ್ಲಿ ಏನಿದ್ದರೂ ಶುದ್ದಿಗೊ, ಒಪ್ಪಂಗೊ, ನೆರೆಕರೆ, ಬೈಲು – ಇಷ್ಟೇ; ಪೈಶೆಯ ಉಪಯೋಗವೇ ಇಲ್ಲೆ ಈ ಬೈಲಿಲಿ – ಹೇಳಿದೆ.

ಒಂದರಿ ಪೈಶೆಯ ಆಶೆ ಬಂದರೆ ಮತ್ತೆ ಹಿಂದಂತಾಗಿ ಹೋಪಲೆ ಎಡಿತ್ತಿಲ್ಲೆಡ.
ರಂಗಮಾವನ ಅನುಭವಲ್ಲಿ ಬಂದ ಒಂದೆರಡು ಸಂಗತಿಗಳ ತೂಷ್ಣಿಲಿ ವಿವರುಸಿ ಹೇಳಿದವು.
~
ಸಮ್ಮಂದವೇ ಇಲ್ಲದ್ದರೂ ಆರಾರ ಜೆಂಬ್ರಂಗಳ ಸ್ವಂತಮನೆಯ ಜೆಂಬ್ರದ ಹಾಂಗೆ ಸುದರುಸುವ ‘ಸುದರಿಕೆಯ ಅಣ್ಣಂದ್ರು’ ನಮ್ಮ ಊರಿಲೇ ಸುರು ಆಯಿದವು.
ಈ ಹೊಸತನದ ‘ಸುದರಿಕೆಯ ಬಳಗಂದಾಗಿ’ ಅಂಬೆರ್ಪಿನ ಜೀವನಲ್ಲಿ ಉಪಕಾರಂಗೊ ಆಯಿದು; ಸಂಶಯವೇ ಇಲ್ಲೆ.
ಸುದರಿಕೆಯೋರಿಂದಾಗಿ ನಮ್ಮ ಸಾಮಾಜಿಕ ಜೀವನಕ್ಕೆ ತೊಂದರೆಯೂ ಆಯಿದು;
ಮುಂದೆ ಯೇವತ್ತಾರು ಇದೆರಡರ ಬಗ್ಗೆ ವಿವರವಾಗಿ ಶುದ್ದಿ ಮಾತಾಡುವೊ°.
~
ರಂಗಮಾವನ ಗುರ್ತದ ಒಬ್ಬ ಕೆಂಪಂಗಿ ಭಾವಯ್ಯ ಸುದರಿಕೆಗೆ ಹೋವುತ್ತೋನು.
ಹೇಳಿಕೆ ಬಂದ ಸುದರಿಕೆ ಜಾಗೆಲಿ ಜೆಂಬ್ರದ ಮುನ್ನಾಣ ದಿನಂದ ಜೆಂಬ್ರದ್ದಿನ ಹೊತ್ತೋಪಗ ಒರೆಂಗೆ ಪಾದರಸದ ಹಾಂಗೆ ದುಡಿತ್ತ.
– ಮದಲಿಂಗೇ ತೋಟಲ್ಲಿ ದುಡುದು ಅಭ್ಯಾಸ ಇದ್ದಲ್ಲದೋ.
ಹೋದಲ್ಲಿ ಅಂಬೆರ್ಪಿಂಗೆ ಮರಕ್ಕೆ ಹತ್ತಲೂ ತಯಾರೇ.
ಅದೇ ಆ ಭಾವಯ್ಯ ಮನೆಲೇ ಇದ್ದ ದಿನಕ್ಕೆ ನೆರೆಕರೆ ಹೇಳಿಕೆ ಬಂದಿದ್ದರೆ, ಹೋಪಲೆ ಉದಾಸ್ನ ಮಾಡ್ತ.
ಒಂದು ವೇಳೆ ಹೋದರೂ, ಅಲ್ಲಿಗೆ ಒಂದ್ನೇ ಹಂತಿಗಪ್ಪಗ ಎತ್ತುಗು, ಎರಡ್ಣೇ ಹಂತಿ ಬಾಳೆ ಹಾಕುವ ಮದಲು ಹೆರಟು ಮನಗೆತ್ತಿ, ಉಂಡ ಕೈ ತೊಳಕ್ಕೊಂಗು.

ಅವನ ಮನೆ ಜಾಲಕರೆಲೇ ಇಪ್ಪ ಇನ್ನೊಂದು ಮನೆಲಿ ಮದುವೆ ಕಳಾತಡ ನಿನ್ನೆ.
ಆ ಮದುವೆಗೆ ಬಂದೋನು ಹೀಂಗೇ ಮಾಡಿ ಸುದಾರ್ಸಿಕ್ಕಿ ಹೆರಟಿದ ಹೇದು ರಂಗಮಾವಂಗೆ ಬೇಜಾರು.
ರಂಗಮಾವಂಗೆ ಈಗ ಎಡಿತ್ತಿಲ್ಲೆ, ಎಡಿವಷ್ಟು ಸುದರಿಕೆ ಈಗಳೂ ಮಾಡ್ತವು.
~

ಬೆಳಿಶಾಲು ಭಾವಯ್ಯಂಗೆ ಮಂತ್ರಾಧ್ಯಯನ ಆಯಿದಡ.
ಕ್ರಮಪ್ರಕಾರ ಏಳೊರಿಶ ಆಯಿದಿಲ್ಲೆ, ಆದರೆ ಮಂತ್ರ ಬತ್ತು.
ಅಪುರೂಪಕ್ಕೆ ಶತರುದ್ರವೋ, ಉಪಹೋಮವೋ – ಹೀಂಗೆಂತಾರು ಸಿಕ್ಕುತ್ತು; ಹೋಪ ಕ್ರಮ ಇದ್ದು.
ದರ್ಬೆ ಬಟ್ಟಮಾವನ ಶಿಷ್ಯವರ್ಗ ಆದ ಕಾರಣ, ಅವರ ಹೇಳಿಕೆಗಳೂ ಬಪ್ಪದಿದ್ದು.
ಕಾರ್ಯಕ್ರಮ ಇಡೀ ಕೂದು ಚೆಂದಕೆ ಮಂತ್ರ ಹೇಳಿಕ್ಕಿ ಬಕ್ಕು.
ಓ ಮೊನ್ನೆ ಅವರ ಊರ ದೇವಸ್ಥಾನಲ್ಲಿ ಜಾತ್ರೆ ಕಳಾತು. ದರ್ಶನಬಲಿಗೆ ಸುಮಾರು ಸುತ್ತುಗೊ ಇರ್ತು ಅಪ್ಪೋ – (ದರ್ಶನಬಲಿಯ ಗುರ್ತ ಆಯೆಕ್ಕಾರೆ ಶುದ್ದಿ ಇಲ್ಲಿದ್ದು).
ಆ ಬಲಿಯ ದಿನ ಈ ಭಾವಯ್ಯ ಮನೆಲೇ ಇದ್ದಿದ್ದ ಪುರುಸೋತಿಲಿ.
ಒಂದರಿ ಹೋತಿಕ್ಕಲಾವುತಿತು, ಮಂತ್ರ ಸುತ್ತು ಮಾಡಿ ಕೊಟ್ಟಿಕ್ಕಿ ಬಪ್ಪಲಾವುತಿತು ಅವಂಗೆ – ಹೇಳಿದವು.
ರಂಗಮಾವಂಗೆ ಹಳೆಕಾಲಂದಲೇ ಎಷ್ಟೋ ವೇದವಿದ್ವಾಂಸರ ಧಾರಾಳತನದ ಗುಣನಡತೆ ಕಂಡು ಗೊಂತಿದ್ದಿದಾ.
~

ಭಾವನೆ ಇಲ್ಲದ್ದ ಕಾರ್ಯಲ್ಲಿ ಎಷ್ಟು ಸಂ-ಭಾವನೆ ಸಿಕ್ಕಿರೂ - ಮನೋತೃಪ್ತಿ ಸಿಕ್ಕ!

ನೀಲಿಅಂಗಿ ಭಾವಯ್ಯ ‘ಸಂಪನ್ಮೂಲ ವೆಗ್ತಿ’ ಹೇದು ಹೆಸರಾದೋನು ಅಡ. ಭಾಷಣಲ್ಲಿ ಎತ್ತಿದ ಕೈ ಅಡ.
ದೊಡ್ಡದೊಡ್ಡ ಕೋಲೇಜುಗೊಕ್ಕೆ, ಮಕ್ಕೊಗೆ, ಮಾಷ್ಟ್ರಂಗೊಕ್ಕೆ – ಇವಕ್ಕೆಲ್ಲ ನೀತಿ, ಮನಸ್ಸು, ಶೆಗ್ತಿ ಹೇಳಿಗೊಂಡು ಪಾಟ ಮಾಡ್ತೋನಡ. ಒಂದು ದಿಕ್ಕಂಗೆ ಹೇಳಿಕೆ ಹೇಳಿ ದಿನಿಗೆಳೇಕಾರೆ ರುಪಾಯಿ ದೊಡ್ಡನೋಟು ಕೊಡೆಕ್ಕಡ.
ಈಗೀಗ ಎಷ್ಟಾಯಿದು ಹೇಳಿತ್ತುಕಂಡ್ರೆ, ಕೊಡ್ತಲ್ಲಿಗೆ ಮಾಂತ್ರ ಅಲ್ಲದ್ದೆ, ಬೇರೆದಿಕ್ಕಂಗೆ ಹೋಪಲೂ ಇಲ್ಲೇಡ!
ಹೋದರೂ, ಕಾರ್ಯಕ್ರಮ ಸುರು ಅಪ್ಪದ್ದೇ, ಎನಗೆ ಬೇರೆ ಹೋಪಲಿದ್ದು – ಹೇಳಿಗೊಂಡು ಒಪಾಸು.
~

ಸುದರಿಕೆ ಭಾವಯ್ಯಂಗೆ ಹೋದಲ್ಲಿ ಸಿಕ್ಕುತ್ತ ಸಂಭಾವನೆಯ ಮೇಗೆ ಕಣ್ಣು.
ಅದಿದ್ದರೇ ಅವನ ಭಾವನೆಗೊ ಸರಿಯಾಗಿ ಹೊಂದಿಗೊಂಬದು; ಅಲ್ಯಾಣ ಜೆಂಬ್ರಕ್ಕೆ ಸುದರಿಕೆ ಮಾಡ್ಲೆ ಎಡಿವದು.
ಜೆಂಬ್ರಕ್ಕೆ ಹೋಪಲೆ ಪುರುಸೊತ್ತಿದ್ದರೆ ಸಾಕು, ಮೈ ಮುರುದು ಸುದಾರಿಕೆ ಮಾಡಿ ಗೆಲ್ಲುಸುತ್ತ ನಮ್ಮ ಅಣ್ಣಂದ್ರ ಎದುರು ಈಗಾಣ ಈ ಪೈಶೆ ಮೋರೆ ನೋಡ್ತ ಭಾವಯ್ಯಂದ್ರ ವಿಚಿತ್ರ ಕಾಣ್ತು ಒಂದೊಂದರಿ.

ಬೆಳಿಶಾಲು ಭಾವಯ್ಯಂಗೂ ಹಾಂಗೇ – ದಕ್ಷಿಣೆ ಸಂಭಾವನೆ ಸಿಕ್ಕುತ್ತರೆ ಮಾಂತ್ರ ಮಂತ್ರಂಗೊ ಬಾಯಿಂದ ಉದುರುದು.
ಅದಲ್ಲದ್ದೇ ಧರ್ಮಾರ್ಥವಾಗಿ ಎಲ್ಲಿಯೂ ಸೇವೆಮಾಡಿದ್ದಿರ.
ಆಚಮನೆ ದೊಡ್ಡಣ್ಣಂಗೆ ಶಾಸ್ತ್ರೀಯ ಮಂತ್ರಾಧ್ಯಯನ ಆಯಿದು.
ಮೂಡ್ಳಾಗಿ ಒಂದು ದೇವಸ್ತಾನಲ್ಲಿ ಶಿವರಾತ್ರಿ ನೆಡಿರುಳು ಕೂದು ರುದ್ರ ಹೇಳೇಕಾರೆ ಅವನೇ ಆಯೆಕ್ಕಟ್ಟೆ.
ಹೋದ ಜೆಂಬ್ರಂಗೊಕ್ಕೂ ಹಾಂಗೇ, ಎರಡ್ಣೇ ಹಂತಿಗೆ ಬಳುಸಿಕ್ಕಿಯೇ ಒಂದೊರಕ್ಕು ಒರಗುದು.
ಭಟ್ಟಮಾವ ಬಳುಸುದೋ – ಚೆಚೆ, ಸ್ಥಾನಮಾನ – ಹೇಳಿಗೊಂಡು ಕೂಪಲಿಲ್ಲೆ ಅವ°!

ನೀಲಿಅಂಗಿ ಭಾವಯ್ಯಂಗೂ ಹಾಂಗೆಯೇ, ಸಂಭಾವನೆ ಕೊಟ್ಟು ಕೂರುಸಿರೆ ಅಲ್ಲಿಪ್ಪ ಮಕ್ಕೊ ಸ್ವಂತ ಮಕ್ಕಳ ಹಾಂಗೆ ಭಾವನೆ ಬಂದುಬಿಡುಗು.
ಅವಕ್ಕೆ ನಿಂಗೊ ಹೇಂಗಿರೆಕ್ಕು, ಹೇಂಗೆ ಬದ್ಕೇಕು – ಹೇದು ಮುಕ್ಕಾಲುಗಂಟೆ ಪಾಟ ಮಾಡುಗು.
ಕೊಟ್ಟ ಸಂಭಾವನೆಯ ತೆಕ್ಕೊಂಡು ಮನಗೆ ಹೋಕು.
ಏನೂ ಸಿಕ್ಕದ್ದರೆ ಭಾವನೆಯೇ ಇಲ್ಲೆ. ಅವರ ದಾರಿ ಅವಕ್ಕೆ.
~
ನಮ್ಮ ಊರಿಲಿ ಎಲ್ಲೋರುದೇ ಹೀಂಗೇ ಮಾಡಿರೆ ಸಮಾಜ ನೆಡಗೋ – ಹೇಳ್ತದು ರಂಗಮಾವನ ಪ್ರಶ್ನೆ.
ಹೆತ್ತಬ್ಬೆ ಹಾಲು ಕೊಡ್ತು, ಅದಕ್ಕೆ ಸಂಭಾವನೆ ನಿರೀಕ್ಷೆ ಮಾಡ್ತೋ?
ಅಪ್ಪ ದುಡುದು ಅಕ್ಕಿ ತಂದು ಹಾಕುತ್ತವು, ಅದಕ್ಕೆ ಒಪಾಸು ಪೈಶೆ ನಿರೀಕ್ಷೆ ಮಾಡ್ತವೋ?
ಅಪ್ಪಚ್ಚಿ, ದೊಡ್ಡಪ್ಪ, ಅಕ್ಕ, ಅಣ್ಣ, ತಮ್ಮ, ಬಾವಂದ್ರು – ಎಂತದೂ ನಿರೀಕ್ಷೆ ಇಲ್ಲದ್ದೆ ನಿಸ್ವಾರ್ಥವಾಗಿ ಒಂದಲ್ಲೊಂದು ಉಪಕಾರಂಗಳ ಅತ್ತಿತ್ತೆ ಮಾಡಿಗೊಂಬದು ಇದ್ದು.
ಅವೆಲ್ಲೊರೂ ಸಂಭಾವನೆ ಕೊಟ್ರೆ ಮಾಂತ್ರ ಕೆಲಸ ಮಾಡ್ತದು ಹೇಳಿಗೊಂಡು ಕೂದರೆ ನಾವು ಇರ್ತಿತೇ ಇಲ್ಲೆ! ಅಪ್ಪೋಲ್ಲದೋ?
ಹಾಂಗಾಗಿ, ಸಂಭಾವನೆಯನ್ನೇ ನೋಡಿಗೊಂಡು ನಮ್ಮ ಕೆಲಸ ಮಾಡ್ತದಲ್ಲ, ರಜ್ಜ ಭಾವನೆಯನ್ನೂ ಬೆಳೆಶಿಗೊಂಡ್ರೆ ಚೆಂದ ಅಕ್ಕು – ಹೇಳ್ತದು ಇದರ ತಾತ್ಪರ್ಯ.
~
ಇದರ ಬೈಲಿಂಗೆ ಹೇಳಿಕ್ಕುವೊ – ಹೇದು ಕಂಡದೆಂತಕೆ ಗೊಂತಿದ್ದೋ?
ಮೊನ್ನೆ ಶರ್ಮಪ್ಪಚ್ಚಿ ಕಾಟಿಪ್ಪಳ್ಳದ ಮದುವೆಲಿ ಒಬ್ಬ ಭಾವಯ್ಯ° ಸಿಕ್ಕಿದನಡ.
ಅವನ ಹೆಸರು ಪೇಪರಿಲಿ ಅಂಬಗಂಬಗ ಕಾಂಬಲೆ ಸಿಕ್ಕುತ್ತು, ಸಣ್ಣಸಣ್ಣ ಕವಿತೆ, ನೀತಿಕತೆಗಳ ಬರದ್ದರ್ಲಿ.
ಅಪ್ಪಚ್ಚಿ ಹೀಂಗೇ ಪರಿಚಯ ಮಾಡಿ ಮಾತಾಡಿ ಅಪ್ಪದ್ದೇ – ‘ನಮ್ಮದೇ ಒಂದು ಬೈಲು ಇದ್ದು, ನಿಂಗೊ ನೀತಿಕತೆಗಳ ಶುದ್ದಿ ಹೇಳುಲೆ ಸುರುಮಾಡ್ತಿರೋ?’ ಕೇಳಿದವಡ.
ಸಂಭಾವನೆ ಎಷ್ಟು ಕೊಡ್ತವು? ಕೇಳಿದನಡ ಭಾವಯ್ಯ°!
ಇಲ್ಲಿ ಸಂಭಾವನೆ ಹೇಳಿ ಪೈಸೆ ಎಂತೂ ಇಲ್ಲೆ. ನಮ್ಮದೇ ಬೈಲು, ಹಾಂಗಾಗಿ ಒಪ್ಪಂಗೊ ಸಿಕ್ಕುತ್ತು – ಹೇಳಿದವಡ.
ಆನು ಸಂಭಾವನೆ ಇಪ್ಪಲ್ಲಿ ಮಾಂತ್ರ ಬರವದು – ಹೇಳಿದವಡ, ಮೋರಗೆ ಬಡುದ ಹಾಂಗೆ.
ಶರ್ಮಪ್ಪಚ್ಚಿ ಆತಂಬಗ ಹೇಳಿಗೊಂಡು ಜೆಂಬ್ರಲ್ಲಿ ಸುದರಿಕೆ ಮಾಡಿಕ್ಕಿಯೇ ಉಂಡಿಕ್ಕಿ ಬಂದವು.
~
ಕಂಡತ್ತೋ – ನೀತಿಕತೆಗಳ ಹೇಳೇಕು ಹೇಳ್ತ ಭಾವನೆ ಬರೇಕಾರೆ ಸಂಭಾವನೆ ಸಿಕ್ಕೇಕಡ.
ಅಂಬಗ ವಿಜ್ಞಾನ, ಜ್ಞಾನಂಗ ಇಪ್ಪ ಶರ್ಮಪ್ಪಚ್ಚಿಯ ಶುದ್ದಿಗೊಕ್ಕೆ ಎಷ್ಟು ಸಂಭಾವನೆ ಕೊಡೆಕ್ಕು?
ವಿದ್ವಾನಣ್ಣ ಸ್ವತಃ ಅವ್ವೇ ಹೇಳಿದ ರಾಮಸಹಸ್ರನಾಮ ಬೇರೆಲ್ಲಿಯಾರು ಸಿಕ್ಕುಗೋ? ಅವಕ್ಕೆಷ್ಟು ಕೊಡೆಕ್ಕಾತು?
ಚೆಂದದ ಭಾಮಿನಿಯ ಥಕಥೈ ಕೊಣುಶಿ ಬೈಲಿಲಿ ಶುದ್ದಿಹೇಳುವ ಮುಳಿಯಭಾವಂಗೆ ಸಂಭಾವನೆ ಎಷ್ಟೂ ಕೊಡೆಕ್ಕಾತು?
ಸಂಸ್ಕೃತ, ಸಂಸ್ಕಾರ, ಸಂಸ್ಕೃತಿಗಳ ಶುದ್ದಿ ಹೇಳ್ತ ಡಾಮಹೇಶಣ್ಣ, ಚೆನ್ನೈಭಾವ, ಶ್ರೀಅಕ್ಕ°, ಗೋಪಾಲಣ್ಣಂಗೆಲ್ಲ ಹೇಂಗೆ ಅಂಬಗ?
ಇರ್ತಲೆ ಹಿಡುದ ಸುಭಗಣ್ಣಂಗೆ ಎಂತ? ಪದಬಂದ ಕಟ್ಟಿದ ಬೊಳುಂಬುಮಾವ?
ಬೈಲಿಲಿ ಬೈಕಿಲ್ಲಿ ಹೋಪಗ ಬಿದ್ದು ಕೈ ಮುರುದರೂ ಬೈಲಿಲೇ ಇಪ್ಪ ಕೆಪ್ಪಣ್ಣಂಗೆ ಎಂತರ?
ಪಾರುಅತ್ತೆ ಒಟ್ಟಿಂಗೇ ಬೈಲಿಲಿ ಶುದ್ದಿ ಬರವ ತೆಕ್ಕುಂಜ ಕುಮಾರ ಮಾವಂಗೆ ಏನು ಕೊಡೆಕ್ಕಾತು?
ತಪಃಸಿದ್ಧಿ ಮಾಡಿಗೊಂಡು ಬೈಲಿಂಗಿಳುದು, ತಾನೂ ಓಡಾಡಿ ಕುಣುದು, ಬಾಕಿದ್ದೋರನ್ನೂ ಕುಣಿಶಿದ ಬೋಚ ಬಾವಂಗೆ?
ಚೆಂದಚೆಂದದ ಪಟ ಪ್ರೀತಿಲಿ ನೇಲುಸುತ್ತ ಕೆಮರದ ಅಣ್ಣಂದ್ರು?
ರುಚಿಯಾದ ಅಡಿಗೆ ಶುದ್ದಿ ಹೇಳ್ತ ಹೆಮ್ಮಕ್ಕೊ, ಆರೋಗ್ಯದ ಬಗ್ಗೆ ಮಾಹಿತಿ ಕೊಟ್ಟ ಡಾಗುಟ್ರಕ್ಕೊ – ಇವಕ್ಕೆ!
ಎಲ್ಲೆಲ್ಲಿಂದ ಶುದ್ದಿ ಹೆರ್ಕಿ ಬೈಲಿಂಗೆ ತತ್ತ – ಪೆಂಗಣ್ಣಂಗೆ ಎಷ್ಟಂಬಗ!?
ಮತ್ತೂ ಸುಮಾರು ಜೆನ ಇದ್ದವಲ್ಲದೋ, ಅವಕ್ಕೆಲ್ಲ?
ಬೈಲಿಲಿ ದರ್ಖಾಸು ರಿಜಿಸ್ತ್ರಿಮಾಡಿಗೊಂಡು ಶುದ್ದಿ ಹೇಳ್ತ ಎಷ್ಟೋ ಅಕ್ಕ-ಭಾವಂದ್ರಿಂಗೆ ಎಂತರ ಅಂಬಗ?
ಎಂತದೂ ಇಲ್ಲೆಯೋ? ಇದ್ದು –
ಇವಕ್ಕೆಲ್ಲೋರಿಂಗೂ ಸಂಭಾವನೆ ಸಿಕ್ಕುತ್ತು – ಎಂತರ:
ಶುದ್ದಿ ಕೇಳಿ ಕೊಶಿಪಟ್ಟ ಎಷ್ಟೋ ಬೈಲ ಅಕ್ಕಭಾವಂದ್ರ ಪ್ರೀತಿಯ ಭಾವನೆಯ ಒಪ್ಪಂಗೊ.
ಇದುವೇ ಸಂಭಾವನೆ.
~
ನಮ್ಮ ಭಾಶೆಯನ್ನೇ ಮಾತಾಡ್ಳೆ ನಾಮಾಸು ಮಾಡಿಗೊಂಡಿದ್ದ ಈ ಅಂತರ್ಬೈಲಿಲಿ ಧೈರ್ಯವಾಗಿ ನಮ್ಮ ಭಾಶೆಯ ಶುದ್ದಿಗೊ ರಾರಾಜಿಸೆಂಡಿದ್ದು! ಇದು ಕೊಶಿ ಅಲ್ಲದೋ?
ಕೆಲವು ಶುದ್ದಿಗೊಕ್ಕೆ ಗುರುಗಳೇ ಸ್ವತಃ ಒಪ್ಪ-ಆಶೀರ್ವಾದ ಮಾಡಿದ್ದವು – ಇದರಿಂದಲೂ ಸಂಭಾವನೆ ಬೇಕೋ?
ದೀಪಿಅಕ್ಕ° ಕನ್ನಡ ಬರವಲೆ ಕಲ್ತಿದವು ಹೇಳ್ತದು ಮೊನ್ನೆ ಗೊಂತಾತು, ಬೇರೆ ಸಂಭಾವನೆ ಬೇಕೋ?
ನೀರಮೂಲೆ ಅಕ್ಕಂಗೆ ಹುಡ್ಕುತ್ತ ನಮುನೆ ಬೈಲೇ ಸಿಕ್ಕಿದ್ದಡ, ಕೊಶೀಲಿ ಹೇಳಿದವು. ಇದರಿಂದ ಹೆಚ್ಚಿಂದು ಬೇಕೋ?
ಮನೆ ಜೆಂಬ್ರದ ಹಾಂಗೇ – ಅಪ್ಪಚ್ಚಿ, ಚಿಕ್ಕಮ್ಮ, ಅತ್ತೆ, ಮಾವ, ಅಣ್ಣ ತಮ್ಮ, ಅಕ್ಕ ತಂಗೆಕ್ಕೊ ಸುಮಾರು ಜೆನ ಸಿಕ್ಕಿದವು. ಇದು ಕೊಶಿಯೇ ಅಲ್ಲದೋ?
ಹೀಂಗಿರ್ಸ ಕೊಶಿಗೊ ಎಷ್ಟೂ ಸಿಕ್ಕುಗು ಒಪ್ಪಣ್ಣಂಗೆ.
ಆರೋ ಕೊಡ್ತ ನೂರಿನ್ನೂರು ರುಪಾಯಿಗೆ – ಇಲ್ಲದ್ದ ಭಾವನೆಗಳ ಉಂಟುಮಾಡಿ – ಶುದ್ದಿ ಹೇಳ್ತದಕ್ಕೂ, ಆಂತರ್ಯಂದ ಬಂದ ಭಾವನೆಗಳ ಹೆರಮಾಡಿ ಬೈಲಿಲಿ ಶುದ್ದಿ ಹೇಳ್ತದಕ್ಕೂ ಎಷ್ಟು ವಿತ್ಯಾಸ ಇದ್ದಲ್ಲದೋ?

ಮಾತಾಡಿಗೊಂಡಿದ್ದ ಹಾಂಗೇ ಬೈಲು ಎತ್ತಿದ್ದಕ್ಕೆ, ರಂಗಮಾವ ಆಚಗೆದ್ದೆಪುಣಿ ಹಿಡುದವು, ನಾವು ಇತ್ಲಾಗಿ ತಿರುಗಿತ್ತು.
ತಲೆಲಿ ರಂಗಮಾವ ಹೇಳಿದ್ದೇ ತಿರುಗೆಂಡಿತ್ತು.
ರಂಗಮಾವನ ಮಾತುಗಳೂ, ಶರ್ಮಪ್ಪಚ್ಚಿಯ ಅನುಭವಂಗಳೂ ಒಟ್ಟಾಗಿ, ಈ ವಾರ ಈ ಶುದ್ದಿಯನ್ನೇ ಹೇಳುವೊ ತೋರಿತ್ತು.

ಬೈಲು ಹಾಂಗೆ ಬೆಳತ್ತಿದಾ. ಈಗ ನಾಕೊರಿಶ. ಆಪ್ತೇಷ್ಟರು ಬತ್ತಾ ಇರಳಿ, ಶುದ್ದಿ ಹೇಳಿಗೊಂಡಿರಳಿ, ಸಂ-ಭಾವನೆ ಪಡೆಯಲಿ.
ಬೈಲು ಬೈಲಾಗಿ ಶುದ್ದಿಗಳ ನಿರಂತರ ಬಯಲು ಮಾಡ್ತಾ ಇರಲಿ.
ನಾಕೊರಿಶ ಆದ ಮಕ್ಕೊ ತೀರಾ ಬಾಲ್ಯಕಾಲದ ಬಾಲಿಶಂಗಳ ಬಿಟ್ಟು, ಒಂದಾವರ್ತಿ ಗಂಭೀರ ಅಪ್ಪಲೆ ಸುರು ಆವುತ್ತವು.
ಸಿಕ್ಕಿದ್ದಕ್ಕೆ ಮುಟ್ಟಿದ್ದಕ್ಕೆ ಪ್ರಶ್ನೆಗಳ ಕೇಳ್ತವು, ಸಂಶಯ ಪರಿಹಾರಂಗಳ ಮಾಡಿಗೊಳ್ತವು – ಹೇಳ್ತದು ಅಮ್ಮಂದ್ರ ಅಭಿಪ್ರಾಯ.
ನಮ್ಮ ಬೈಲೂ ಹಾಂಗೇಯೇ, ಪ್ರಶ್ನೆ ಕೇಳ್ತ ಬಾಬೆ ಆಗಲಿ, ಎಲ್ಲಾ ಸಂಶಯಂಗಳ ತೀರುಸುವ ಅಬ್ಬೆ ಆಗಲಿ.

ಒಂದೊಪ್ಪ: ಸಂಭವಾಮಿ ಯುಗೇ ಯುಗೇ – ಹೇಳಿದ ಕೃಷ್ಣನೂ ಸಂಭಾವನೆ ಕೊಡು ಹೇಳಿರೆ ನಾವೆಲ್ಲಿಗೆ ಹೋವುತ್ಸು!

ಸೂ:
ಒಪ್ಪಣ್ಣನ ಶುದ್ದಿಗೊ ತುಂಬ ಉದ್ದ ಆವುತ್ತು ಹೇದು ಕೆಲವು ಜೆನರ ಅಭಿಪ್ರಾಯ.
ಹಾಂಗಾಗಿ ರಜ ತೂಷ್ಣಿಲಿ ವಿವರುಸಿ ನಿಲ್ಲುಸಿದ್ದು. ಹೇಂಗೆ? 🙂

28 thoughts on “ಭಾವನೆ ಇದ್ದರೆ ಸಂಭಾವನೆಯೇ ಬೇಕಾಗ…!

  1. ಆನು ಮೊನ್ನೆ ಮೊನ್ನೆ ಓದುಲೆ ಸುರು ಮಾಡಿದ “ಒಪ್ಪಣ್ಣ” ವೆಬ್ಸೈಟ್ಂಗೆ ಈಗ ನಾಲ್ಕನೇ ವರ್ಷ ಹಿಡುದತ್ತು ಹೇಳಿ ತುಂಬಾ ಖುಶಿ ಆತು.
    ಎಷ್ಟೊಂದು ಜನರ ಇಲ್ಲಿ ಒಂದೆ ಮನೆಯವರ ಹಾಂಗೆ ಭೇಟಿ ಮಾಡಿ ಎಷ್ಟೆಲ್ಲ ಸುದ್ದಿಗಳ ಹಂಚಿಗೊಂಬಲೆ ಆವ್ತು, ಅದ್ರಲ್ಲಿ ಸಿಕ್ಕುವ ಸಂತೋಷ ಎಷ್ಟು ಹೇಳಿ ಎನಗೆ ವಿವರುಸುಲೆ ಎಡಿಯ. ಹೀಂಗೆ ಎಲ್ಲರಿಂಗೂ ತುಂಬ ಖುಷಿ ಕೊಡುವ ಈ ಬೈಲಿಲ್ಲಿ ಸಂಭಾವನೆಯ ಬಗ್ಗೆ ನೆಂಪೇ ಆವ್ತಿಲ್ಲೆ. ಬೈಲಿನ ಬಗ್ಗೆ ಬರೇ ಪ್ರೀತಿಯ ಭಾವನೆ ಬತ್ತಷ್ಟೆ ಮನಸಿಲ್ಲಿ ಯಾವಾಗಲುದೆ.
    ~ ಸುಮನಕ್ಕ.

  2. ಒಪ್ಪಣ್ಣ,
    ಈ ವಾರದ ಶುದ್ದಿ ಈ ವರ್ಷದ ಶುದ್ದಿ ಆತು ಮಾತ್ರ ಅಲ್ಲ, ಎಲ್ಲರಿಂಗೂ ಒಂದು ಧ್ಯೇಯ ವಾಕ್ಯದ ಹಾಂಗೆ ಆತು. ಲಾಯ್ಕಾಯಿದು ಶುದ್ದಿ.

    ಸಂಭಾವನೆ ಹೇಳಿದರೆ ಗೌರವ ಹೇಳಿ ಅರ್ಥ. ಬಾಕಿ ದಿಕ್ಕೆ ಬರವೋರಿಂಗೆ ಅದರ ಪೈಸೆಯ ರೂಪಲ್ಲಿ ಕೊಡ್ತವು. ಅಲ್ಲಿ ಪೈಸೆಯ ಬೆಲೆಯಷ್ಟೇ ಆ ಸಂಬಂಧ ಇಪ್ಪದು. ಬರದವನ ಬಗ್ಗೆ ಪ್ರಕಟ ಮಾಡುವವಂಗೆ ಎಂತದೂ ಗೊಂತಿರ್ತಿಲ್ಲೇ. ಯಾವ ಊರಿನವ°? ಎಂತ ಮಾಡ್ತ°? ಯಾವುದೂ ಅರಡಿಯ. ಅದೇ ಬರವವಂಗೆ ಕೂಡಾ…!! ತಾನು ಬರವದರ ಆರು ನೋಡಿ ಪ್ರಕಟ ಮಾಡ್ತ° ಹೇಳುದು ಅರಡಿಯ. ಅವರ ಒಳ ಇಪ್ಪದು ಪೈಸೆಗೆ ತಕ್ಕಿತ ಬರವ ಸಂಬಂಧವೂ..!! ಅದಕ್ಕೆ ತಕ್ಕಿತ ಭಾವನೆಯೂ..!!

    ಆದರೆ ಬೈಲು ಹಾಂಗಲ್ಲ. ಎಲ್ಲಾ ರೀತಿಲೂ ಭಿನ್ನ. ಇಲ್ಲಿ ಎಲ್ಲೋರೂ ಅವರವರ ಗುರುತಿಸಿಗೊಂಬದು ಒಪ್ಪಣ್ಣ ಮಡಗಿದ ಒಂದು ಒಪ್ಪ ಹೆಸರಿಲಿ. ಆ ಹೆಸರಿಲಿ ಇಪ್ಪ ಸಂಬಂಧವಾಚಕ ಆ ವ್ಯಕ್ತಿಯ ಒಟ್ಟಿಂಗೆ ಎಲ್ಲರ ಅದೇ ಭಾವನೆಲಿ ಬಂಧಿಸಿ ಬಿಡ್ತು. ಅದರಲ್ಲಿ ಪ್ರಾಯದ ಲೆಕ್ಕ ಇಲ್ಲೆ. ಇಲ್ಲಿ ಪ್ರತಿಯೊಬ್ಬನೂ ಕೂಡಾ ಈ ಪ್ರೀತಿಯ ನೂಲಿಲಿ ಜೀಕಿಗೊಂಡು ಬೈಲ ಸಂಚಾರಲ್ಲಿ ಇರ್ತವು. ಒಂದು ಕೂಡು ಕುಟುಂಬದ ಆತ್ಮೀಯತೆ ಇಲ್ಲಿದ್ದು.

    ಈ ಬೈಲಿಂದಾಗಿಯೇ ಬರವಲೆ ಸುರು ಮಾಡಿ ಶ್ರೀಅಕ್ಕ° ಆಗಿ ಗುರುತಿಸಿಗೊಂಡೋಳು ಆನು. ಇದು ಬೆಳೆತ್ತಾ ಇಪ್ಪಗ ಸಂತೋಷವೂ ಆಯಿದು. ಬೈಲಿಂದಾಗಿ ಸಿಕ್ಕಿದ್ದದರ ಲೆಕ್ಕ ಹಾಕುಲೆ ಕಷ್ಟ! ಅದಕ್ಕೆ ಬೆಲೆ ಕಟ್ಟುಲೇ ಅಸಾಧ್ಯ!!

    ♦ ಬೈಲಿಲಿ ಒಬ್ಬ ಪ್ರೀತಿಯ ತಮ್ಮ ಸಿಕ್ಕಿದ್ದದೇ ಒಂದು ದೊಡ್ಡ ಸಂಭಾವನೆ ಎನಗೆ!! ಅದು ಪೂರ್ವ ಜನ್ಮದ ಪುಣ್ಯಲ್ಲಿಯೇ ಸಿಕ್ಕಿದ್ದದು! ಈ ತಮ್ಮನ ಮೂಲಕ ಸಿಕ್ಕಿದ ಗುರು ಸೇವೆಯ ಭಾಗ್ಯ, ಗುರು ಅನುಗ್ರಹದ ಧಾರೆ ಈ ಜೀವಮಾನದ ದೊಡ್ಡ ಉಳಿಕೆ, ಗಳಿಕೆ. ಇದಕ್ಕಿಂತ ದೊಡ್ಡ ಸಂಭಾವನೆ ಇದ್ದಾ?
    ಆ ತಮ್ಮನ ಮದುವೆಗೆ ಹೇಳಿ ಅಪ್ಪನ ಮನೆಂದ ಸೀರೆ ಸಿಕ್ಕುವ ಹಾಂಗೆ ಬೈಲಿನ ತಮ್ಮ ಮಾಮಾಸಮನ ಮದುವೆಗೆ ಸೀರೆ ಸಿಕ್ಕಿದ್ದು. ಅದುದೇ ಖುದ್ಧಾಗಿ ಅಪ್ಪಚ್ಚಿ, ಚಿಕ್ಕಮ್ಮ ಮನೆಗೆ ಬಂದು ಕೊಟ್ಟು ಗೌರವಿಸಿದ್ದು. ಈ ಪ್ರೀತಿಯ ಭಾವನೆಗೆ ಎಂತ ಹೇಳುದು? ಬೈಲಿನ ಎಲ್ಲೋರ ಒಟ್ಟಿಂಗೆ ಮದುವೆ ತಯಾರಿಗೆ ಓಡಾಡಿದ್ದದು.. ಆ ನೆನಪುಗ ಶಾಶ್ವತ!! ಬಹುತೇಕ ಎಲ್ಲರ ಸುರೂ ಮುಖತಃ ಕಂಡದೂ ಅಲ್ಲಿಯೇ!!! ಆ ಸಂತೋಷ ಯಾವಾಗಲೂ ಹಸುರು.

    ♦ಪ್ರತಿ ವರ್ಷ ಚಾತುರ್ಮಾಸ್ಯಲ್ಲಿ ಅಶೋಕೆಗೆ ಹೋಪಲಿದ್ದನ್ನೇ! ಈ ಸರ್ತಿ ಹೋಪಗ ದೊಡ್ಡಜ್ಜ°, ಸುಭಗಣ್ಣನ ಒಟ್ಟಿಂಗೆ ಒಂದೇ ಮನೆಯವರ ಹಾಂಗೆ ಹೋಪಲೆ, ಅಲ್ಲಿ ಹೋಗಿ ಗುರಿಕ್ಕಾರ್ರು, ಮಾಮಾಸಮ, ಅಭಾವ, ಕೆಪ್ಪಣ್ಣ, ಪೆಂಗಣ್ಣನ ಒಟ್ಟಿಂಗೆ ಶ್ರೀ ಮಹಾಬಲೇಶ್ವರ ಸನ್ನಿಧಿಗೆ ಹೋಗಿ, ಗುರು ಭೇಟಿ ಮಾಡಿ ಶ್ರೀ ಪೀಠದ ಮಂತ್ರಾಕ್ಷತೆ ಪಡಕ್ಕೊಂಡ ಈ ಕೊಶಿಗೆ ಬೆಲೆ ಕಟ್ಟುದು ಹೇಂಗೆ?
    ವಾಪಾಸು ಬಪ್ಪಗ ಇರುಳು ಹತ್ತೂವರೆ ಆದರೂ ಕೂಡಾ ಸುಮಾರು ಬಗೆ ಮಾಡಿ ಕಾದು ಕೂದು ಬೆಶಿ ಬೆಶಿ ಬಳ್ಸಿ ಹೊಟ್ಟೆ, ಮನಸ್ಸು ಎರಡೂ ತುಂಬುಸಿ, ಮರದಿನಕ್ಕೆ ಮನೆಗೂ ತಿಂಡಿ ಕಟ್ಟಿ ಕೊಟ್ಟ ಶರ್ಮಪ್ಪಚ್ಚಿ, ಚಿಕ್ಕಮ್ಮ, ತಂಗೆಯ ಪ್ರೀತಿಗೆ ಎಷ್ಟು ಬೆಲೆ ಕಟ್ಟುಲೆಡಿಗು? ಅಪ್ಪಚ್ಚಿಯ ಮನೆಯ ಗುರ್ತ ಆದ್ದದೂ .. ಅಪ್ಪಚ್ಚಿಯ ಆ ಪ್ರೀತಿಯ ಪಡಕ್ಕೊಂಬಲೆ ಎಡಿಗಾದ್ದದೂ ಬೈಲಿಂದಾಗಿಯೇ ಅಲ್ಲದ?

    ♦ಮಾಷ್ಟ್ರುಮಾವನ ಒಟ್ಟಿಂಗೆ ಬೆಂಗ್ಲೂರಿಂಗೆ ಹೋಗಿ ಬಪ್ಪಗ ಅವರ ಪ್ರೀತಿ, ಅವರ ಮಾತಿನ ಪ್ರತಿಯೊಂದು ಗೆರೆಲಿಯೂ ಸಿಕ್ಕಿದ ಆಳವಾದ ಜ್ಞಾನಕ್ಕೆ, ಗಂಭೀರ, ಗಹನವಾದ ವಿಷಯಕ್ಕೆ ಪೈಸೆ ಲೆಕ್ಕ ಹಾಕಿ ಪೂರೈಸುಗಾ?

    ♦ವಿದ್ವಾನಣ್ಣ ಎಲ್ಲಿಯೇ ಆದರೂ ಎದುರು ಸಿಕ್ಕಿ ನೆಗೆ ನೆಗೆ ಮಾಡಿ ಬೈಲಿನ ಆತ್ಮೀಯತೆಲಿ ಮಾತಾಡ್ಸುವಾಗ ಸಿಕ್ಕುವ ಕೊಶಿಗೆ ಯಾವ ಲೆಕ್ಕ?

    ♦ಮೊನ್ನೆ ಮೊನ್ನೆ ಮಾಷ್ಟ್ರುಮಾವನ ಮನೆಲಿ ಪೂಜೆಗೆ ಅರ್ಧಕರ್ಧ ಬೈಲಿನ ಬಂಧುಗ ಸೇರಿ ಮಾಡಿದ ಗೌಜಿಲಿ ಸಿಕ್ಕಿದ ದೇವರ ಆಶೀರ್ವಾದದ ಒಟ್ಟಿಂಗೆ ಪ್ರೀತಿಯ ರಕ್ಷೆಗೆ ಎಷ್ಟು ಬೆಲೆ?

    ♦ಅಂದು ಮೂಡಬಿದಿರೆಗೆ ಹೋಗಿಪ್ಪಗ ಸುವರ್ಣಿನಿ ಡಾಗುಟ್ರಕ್ಕನ ಕಂಡು ಮಾತಾಡಿ, ಗಮ್ಮತ್ತು ತಿಂದು ಬಂದದು ಈ ಪ್ರೀತಿಯ ಭಾವನೆಲಿಯೇ ಅಲ್ಲದ?

    ♦ಡಾಮಹೇಶನ ಸನ್ಮಾನಕ್ಕೆ ಹೋಗಿ ಬದಿಯಡ್ಕಲ್ಲಿ ದೊಡ್ಡಭಾವ°, ಡಾಮಹೇಶ°, ಯೇನಂಕೂಡ್ಳು, ಬಲ್ನಾಡು ಮಾಣಿ, ಗಣೇಶ ಮಾವ° ‘ಆನಂದ ಸಾಗರ’ದ ಆನಂದಲ್ಲಿ ಮುಳುಗಿದ್ದದಕ್ಕೆ ಲೆಕ್ಕವ ಯೇನಂಕೂಡ್ಲಣ್ಣ ಚುಕ್ಕು ಕಾಪಿ ಪೈಸೆಯ ಒಟ್ಟಿಂಗೆ ಕೊಟ್ಟಿಕ್ಕಾ?

    ♦ಏನಂಕೂಡ್ಳಿಲಿ ಬೈಲಿನ ಮಿಲನ ಆದ್ದದರ ಮಧುರತೆ ಇನ್ನೂ ಮರದ್ದಿಲ್ಲೇ. ಆ ಮನೆಯ ಅಪ್ಪಚ್ಚಿ ಚಿಕ್ಕಮ್ಮನ ಪ್ರೀತಿಲಿ ಇದ್ದ ಭಾವನೆ ಯಾವುದಾದರೂ ಹಾಲಿಲಿ ಸೇರಿದರೆ ಅಥವಾ ಯಾವುದಾದರೂ ಜಾಗೆಗೆ ಹೋದರೆ ಸಿಕ್ಕುಗಾ? ಅವರ ಪ್ರೀತಿಗೆ ಅಭಿಮಾನಕ್ಕೆ ಬೆಲೆ ಎಷ್ಟು?

    ♦ಮುಳಿಯ ಭಾವನ ಮನೆಲಿ ಸೇರಿ ಮಾಡಿದ ಗೌಜಿಗೆ ಹೇಂಗೆ ಲೆಕ್ಕ ಹಾಕುದು?

    ♦ ನಿತ್ಯ ಮೂರು ಹೊತ್ತೂ ಬೈಲ ಚಾವಡಿಯ ಗಲಗಲಲ್ಲಿ ನಮ್ಮ ಚಿಂತೆಗ ಸಾವಿರ ಇಪ್ಪದು ಮರದು ನೆಗೆಯ ಆವರಣಲ್ಲಿ ದಿನ ಮುಗಿತ್ತು. ಈ ಪ್ರೀತಿಯ ಬಂಧಕ್ಕೆ ಹೇಂಗೆ ಬೆಲೆ ಕಟ್ಟುದು? ಯಾವ ಜೆಂಬರಕ್ಕೆ ಹೋಗಲಿ ಆರ ಹತ್ತರೆ ಮಾತಾಡಲಿ. ಬೈಲ ನೆರೆಕರೆಯ ಬಂಧುಗ ಸಮೋಸಲ್ಲಿ ಒಟ್ಟಿಂಗೆ ಇರ್ತವು. ಯಾವ ಸಂಬಂಧದ ಮದುವೆ, ಪೂಜೆ, ಯಾವ ಸಂದರ್ಭ ಆದರೂ ಕೂಡಾ!!! ಯಾವ ಹೊಡೆಂಗೆ ಹೋದರೂ ಕೂಡಾ ನೆರಳಿನ ಹಾಂಗೆ ಬತ್ತ ಈ ಪ್ರೀತಿಯ ಬಂಧುಗಳ ಪ್ರೀತಿಗೆ ಎಷ್ಟು ಲೆಕ್ಕ ಹಿಡಿವದು?

    ♦ಯಾವ ಊರಿಂಗೆ ಹೋಗಲಿ ಎಂತ ತೊಂದರೆ ಬಂದರೂ ಬೈಲಿನ ಬಂಧುಗ ಆರಾರು ಇದ್ದೇ ಇದ್ದವು ಹೇಳುವ ಧೈರ್ಯ ಬೇರೆ ಆರಿಂಗಾದರೂ ಸಿಕ್ಕುಗಾ?ಅದು ಬೈಲಿಲಿ ಇಪ್ಪ ಪ್ರತಿಯೊಬ್ಬನೂ ಎಲ್ಲೆಲ್ಲಿ ಇದ್ದವು ಹೇಳುವ ಅರಿವಿದ್ದ ಕಾರಣ ಅಲ್ಲದಾ? ಆ ಆತ್ಮೀಯತೆ ಇದ್ದ ಕಾರಣ ಬೈಲಿನ ಆರ ಮನೆಗೆ ಸುರು ಹೋದರೂ ಕೂಡಾ ಆ ಮನೆ ಸುಮಾರು ಸರ್ತಿ ಬಂದು ಅಭ್ಯಾಸ ಇದ್ದ ಮನೆಯ ಹಾಂಗೆ ಆವುತ್ತು. ಯಾವ ಸಂಕೋಚ ಅಲ್ಲಿ ಇರ್ತಿಲ್ಲೆ. ಒಂದೇ ಮನೆಯೋರ ಭಾವನೆಲಿ ಕಂಡು ಮಾತಾಡಿ ಸುಖ ದುಃಖ ಹಂಚಿ ಮನಸ್ಸು ತುಂಬಿ ವಾಪಾಸು ಬತ್ತು. ಈ ಭಾವನೆ ಬೇರೆ ಎಲ್ಲಿ ಇಕ್ಕು?

    ♦ಇಲ್ಲಿ ಒಬ್ಬ ಅಷ್ಟು ಬರದ°, ಇಷ್ಟು ಬರದ° ಹೇಳ್ತ ಮಾತ್ಸರ್ಯ ಇಲ್ಲೆ. ಇನ್ನೊಬ್ಬ ಬರವೋರ ಮನದಾಳಂದ ಪ್ರೋತ್ಸಾಹ ಮಾಡ್ತ ಎಲ್ಲಾ ಸಹೃದಯ ಬಂಧುಗ ಇಪ್ಪಗ, ಬರದ್ದದರ ಪ್ರೀತಿಲಿ ತಿದ್ದುತ್ತ ಅಣ್ಣ, ತಮ್ಮ, ಅಪ್ಪಚ್ಚಿ , ಭಾವಂದ್ರು ಇಪ್ಪಗ ಮನಸ್ಸಿಲಿ ಇಪ್ಪದರ ಬರವಲೆ ಅಳುಕಿಲ್ಲೆ. ಮನೆದೋ, ಸ್ವಂತದ್ದೋ ಎಂತದೇ ಸಂತೋಷದ ಸುದ್ದಿ, ಎಂತದೆ ಸಮಸ್ಯೆ ಬಂದರೂ ಕೂಡಾ ಮೊದಾಲು ನೆಂಪಪ್ಪದು ಬೈಲಿನ ಬಂಧುಗಳ.

    ♦ಪ್ರತಿ ಜೆಂಬರಕ್ಕೆ ಹೋದಪ್ಪಗಳೂ ಬೈಲಿನವ್ವು ಆರಾರು ಇದ್ದವಾ ಹೇಳಿ ಹುಡುಕ್ಕಿ ಹೋಪದು ಎಂತಕ್ಕೆ? ಅಲ್ಲಿಪ್ಪವ್ವು ಎಲ್ಲೋರೂ ಸಂಬಂಧಿಕರೇ ಆಗಿದ್ದರೂ ಕೂಡಾ ಹೃದಯ ಸಂಬಂಧದ ಬೈಲಿನ ಬಂಧುಗಳ ಮನಸ್ಸು ಹುಡುಕ್ಕಿ ಹಿಡಿತ್ತು ಅಲ್ಲದಾ?

    ಒಪ್ಪಣ್ಣ,
    [ಎಲ್ಲೋರಿಂಗೂ ಇದೊಂದು ನಿತ್ಯ ಮನೆಜೆಂಬ್ರ ಅಲ್ಲದೋ!]

    ಒಪ್ಪಣ್ಣನ ಬೈಲು ನೀನು ಹೇಳಿದ ಹಾಂಗೆ ನಿತ್ಯ ಮನೆ ಜೆಂಬರದ ಹಾಂಗೆ!!! ಇಲ್ಲಿ ನಿತ್ಯ ಸುದರಿಕೆ ಆಯೆಕ್ಕು. ಅವ° ಮಾಡಲಿ, ಇವ° ಮಾಡಲಿ ಹೇಳಿ ಇಲ್ಲೆ. ಎಲ್ಲೊರೂ ಸೇರಿ ಮಾಡುವ ನಿತ್ಯ ಹಸಿರಿನ ಬೈಲು ಇದು. ಇಲ್ಲಿ ಯಾವಾಗಲೂ ಕೊಯ್ಲು ಇದ್ದೇ ಇದ್ದು.
    ಈ ಬೈಲಿನ ಅಂತರ್ಬೈಲು ಹೇಳಿ ನೀನು ಹೇಳಿದೇ.. ಈ ಅಂತರ್ಬೈಲಿನ ವಿಸ್ತಾರ ಅನಂತ ಅಲ್ಲದಾ? ಈ ಅನಂತತೆಯ ಒಂದು ಕಣ ಆಗಿಪ್ಪಲೇ ತುಂಬಾ ತುಂಬಾ ಖುಷಿ ಇದ್ದು. ಬೈಲಿನ ಪ್ರೀತಿಯ ಭಾವನೆಯ ಸಂಭಾವನೆ ದಿನಂದ ದಿನಕ್ಕೆ ವೃದ್ಧಿ ಆವುತ್ತು. ಈ ಸಂಭಾವನೆ ಯಾವುದೇ ಬ್ಯಾಂಕ್ ಲಿ ಮಡುಗದ್ದೆ ಬಡ್ಡಿ ಸಮೇತ ಇಮ್ಮಡಿ, ಮುಮ್ಮಡಿ ಆಗಿ ಸಿಕ್ಕುತ್ತು.

    ಈ ಲಾಭದ ಲೆಕ್ಕಕ್ಕೆ ಎಲ್ಲೋರೂ ಶುದ್ಧ ಮನಸ್ಸಿಲಿ ಸೇರಿದರೆ, ಸಂಬಂಧ ಬೆಳದು, ಭಾವನೆಯ ಮರ ಚಿಗುರಿ ಸಂಭಾವನೆ ಎಲ್ಲರ ಮನಸ್ಸು ತುಂಬಲಿ…
    ಬೈಲಿಲಿ ಎಲ್ಲರ ಮನಸ್ಸು ಒಂದೇ ಆಗಿ ಇರಲಿ…
    ಈ ಜನ್ಮದ ಸರಸ್ವತೀ ಸೇವೆಯ ಭಾಗ್ಯ ಒದಗಿಸಿದ ನಿನಗೆ ಎಲ್ಲಾ ಸೌಭಾಗ್ಯಂಗ ಒಲಿದು ಬರಲಿ..
    ಬೈಲು ಭಾವನೆಯ ಸಂಭಾವನೆಲಿ ತುಂಬಿ ತುಳುಕಲಿ..

  3. ಈ ಬೈಲಿನ ಆಕರ್ಷಣೆಯೇ ಆತ್ಮೀಯ ಸಂಬಂಧ..ಪ್ರತಿಯೊಬ್ಬಂಗೂ ಅಣ್ಣ, ಅಕ್ಕ°, ಅಪ್ಪಚ್ಚಿ, ಮಾವ ಹೇಳುವ ಸಂಬೋಧನೆ, ಇಲ್ಲಿ ಬಪ್ಪ ತಮಾಷೆ, ನಮ್ಮದೇ ಪದಂಗಳ ಬಳಕೆ (ಇತ್ತೀಚೆಗೆ ಮಾತಿಲ್ಲಿ ಕಮ್ಮಿ ಆದ್ದ ಶಬ್ದಂಗೊ) ಗಹನವಾದ ವಿಚಾರಂಗೊ, ಮರೆತ್ತಾ ಇಪ್ಪ ನಮ್ಮ ಸಂಸ್ಕೃತಿ-ಸಂಸ್ಕಾರಂಗಳ ಸ್ಮರಣೆ ಮತ್ತೆ ಪರಿಷ್ಕರಣೆ ನಿಜವಾಗಿಯೂ ಅದ್ಭುತ ಪ್ರಯತ್ನ. ಪ್ರತಿಯೊಬ್ಬರ ಬರವಣಿಗೆಲಿಯೂ ಒಂದೊಂದು ಹೊಸ ವಿಷಯಂಗೊ ಸಿಕ್ಕುತ್ತು. ಒಪ್ಪಣ್ಣ°..ನಿನ್ನ ಬರಹ ಉದ್ದ ಆವ್ತು ಹೇಳಿದ್ದಾರು? ಅದೇ ಸ್ವಾರಸ್ಯಲ್ಲಿ ಕುತೂಹಕಲಲ್ಲಿ ಓದಿಸಿಕೊಂಡು ಹೋವುತ್ತು ..ಭಾಷೆಯೂ ಶೈಲಿಯೂ ಎಲ್ಲವೂ ಖುಷಿ ಕೊಡ್ತು..ಸಾಕಷ್ಟು ತಿಳುವಳಿಕೆ ಕೊಡ್ತು..ಹೀಗೇ ಮುಂದುವರಿಯಲಿ..

  4. ನಮ್ಮ ಬೈಲು ಹೇಳಿರೆ, ನಮ್ಮದೇ ಬೈಲು, ಬಾವಂದ್ರು, ಅಣ್ಣಂದ್ರು, ಅಕ್ಕಂದ್ರು, ಅತ್ತಿಗೆಕ್ಕೊ, ಅಪ್ಪಚ್ಚಿ, ದೊಡ್ಡಪ್ಪ, ಅತ್ತೆ, ಮಾವ, ಅಜ್ಜ, ಅಜ್ಜಿ ಪುಳ್ಯಕ್ಕೊ ಸೇರುತ್ತ ಕೂಡು ಕುಟುಂಬ. ಹಾಂಗಾಗಿ ಇಲ್ಲಿ ಸುದರಿಕೆ ಮಾಡುವಗ ಸಂಭಾವನೆ ಪ್ರಶ್ಣೆ ಬಪ್ಪಲೇ ಆಗ. ಮನೆಲೇ ಪೈಸೆ ತೆಕೊಂಡು ಕೆಲಸ ಮಾಡ್ತ ಕ್ರಮ ಇದ್ದೊ. ಸುದರಿಕೆ ಮಾಡ್ತ ಉದ್ಯೋಗವನ್ನೇ ಮಾಡ್ತವನುದೆ, ಅವನ ಮನೆಲಿ, ಅವನ ಹತ್ರಾಣ ನೆಂಟ್ರ ಮನೆಲಿ ಸಂಬಾವನಗೆ ಅಪೇಕ್ಷ್ಸೆ ಮಾಡ್ತದು ತಪ್ಪೇ. ಭಾವಂಗುದೆ, ಸಂಭಾವನೆಗುದೆ ಹೊಂದಾಣಿಕೆ ಖಂಡಿತಾ ಬಾರ.
    ಸೂಕ್ಷ್ಮ ವಿಷಯವೊಂದರ ನವಿರಾಗಿ ಮನಸ್ಸಿಂಗೆ ತಟ್ಟುವ ಹಾಂಗೆ ವಿವರುಸಿದ್ದ° ಒಪ್ಪಣ್ಣ°. ಬೈಲಿನ ಎಲ್ಲೋರಿಂಗೂ ಸೇರ್ಲೆ ಒಂದು ವೇದಿಕೆ ಆಗಿ ಮಾಡಿ ಕೊಟ್ಟು ಎಲ್ಲೊರಿಂಗು ಅತ್ಲಾಗಿತ್ಲಾಗಿ ಪರಿಚಯ ಮಾಡೆಂಬಲೆ, ತಮ್ಮ ಪ್ರತಿಭೆಯ ತೋರುಸಲೆ, ಹಾಂಗೇ ಬೆಳವಲೆ ಅವಕಾಶ ಮಾಡಿ ಕೊಡ್ತಾ ಇಪ್ಪ ಒಪ್ಪಣ್ಣಂಗೆ ನಾವು ಎಂದೆಂದೂ ಋಣಿಗೊ.

    ಊರಿಲ್ಲಿ ಪ್ರಚಲಿತ ವಿಷಯವೊಂದು ಈ ಸಂದರ್ಭಲ್ಲಿ ನೆಂಪ್ಜು ಆವ್ತು. ಊರಿನ ಒಬ್ಬ, ಗಣ್ಯನೊ, ನಗಣ್ಯನೋ ವ್ಯಕ್ತಿ, ಅವ ನೆರೆಕರೆಗೆ ಸುದರಿಕೆಗೆ ಬತ್ತ ಕ್ರಮ ಇಲ್ಲೆ, ಹಾಂಗಾಗಿ ಅವನ ಮನಗೆ ಬೆಂದಿಗೆ ಕೊರವಲೆ/ ಸುದರಿಕೆಗೆ ನೆರೆಕರೆಯವು ಹೋಪಲೆ ಉದಾಸನ ಮಾಡ್ತವು. ನೀ ನನಗಿದ್ದರೆ ನಾ ನಿನಗೆ ಹೇಳಿ. ಇದು ನಮ್ಮ ಬೈಲಿಲ್ಲಿ ಇಲ್ಲೆ ಹೇಳ್ತದು ಸಂತೋಷದ ಸಂಗತಿ.

    ಒಪ್ಪಣ್ಣನ ಶುದ್ದಿಗೊ ತುಂಬ ಉದ್ದ ಆವುತ್ತು ಹೇದು ಕೆಲವು ಜೆನರ ಅಭಿಪ್ರಾಯ ಆಡ. ಚೆ. ಈ ಮಾತು ಕಂಡಿತಾ ಆನು ಒಪ್ಪೆ. ಅದು ಎಷ್ಟು ಉದ್ದ ಇದ್ದರುದೆ ಓದುಸೆಂಡುದೆ ಹೋವುತ್ತು, ಒಳ್ಳೆ ಭಾಷೆ, ವಿಷಯಂಗಳುದೆ ಇರ್ತು, ತಮಾಷೆ, ವ್ಯಂಗ್ಯ, ಎಲ್ಲವುದೆ ಇರ್ತು. ಹಾಂಗೆ ತೂಷ್ಣಿ ಮಾಡಿಕ್ಕೆಡ ಒಪ್ಪಣ್ಣಾ. ಒಪ್ಪ ಕೊಡುವಗ ರಜಾ ಬೇಗ/ತಡ ಆಗಿ ಹೋತಿಕ್ಕುಗು, ಅದಕ್ಕೆ ಹೀಂಗಿಪ್ಪ ಬೇಜಾರಿನ ಮಾತುಗೊ ಬೇಡ ಆತೊ ?!!

  5. ಒಪ್ಪಣ್ಣಾ,
    ತೂಷ್ಣಿಲಿ ವಿವರುಸಿ ನಿಲ್ಲುಸೆಕ್ಕು ಹೇಳಿ ಏನೂ ಇಲ್ಲೆ ಆತಾ??
    ಹಾಂ…!!
    ಎಡಕ್ಕಿಲ್ಲಿ ಬೇಕಾರೆ ಸಣ್ಣ ಸಣ್ಣ ಸುದ್ದಿ ಇರಳಿ, ಆದರೆ ನಿನ್ನ ಶೈಲಿ ಬದಲಪ್ಪಲಾಗ…

  6. ಈ ಒಪ್ಪಣ್ಣ ಬೈಲು, ಎನ್ನ ಹಾಂಗಿಪ್ಪ ಅದೆಷ್ಟೋ ಜೆನಂಗೊಕ್ಕೆ ಅವರವರ ಭಾವನೆಗಳ ಹಂಚಲೆ, ಜ್ಞಾನ ಪಡಕ್ಕೊಂಬಲೆ ಸಹಕಾರಿ ಆಯಿದು. ಇಲ್ಲಿ ಎಲ್ಲರೂ ಕೂಡು ಕುಟುಂಬದ ಸದಸ್ಯರು.
    ಸಂಭಾವನೆಗಾಗಿ ಪತ್ರಿಕೆಲಿ ಬರೆತ್ತವರಲ್ಲಿ ಎಷ್ಟು ಜೆನಂಗೊಕ್ಕೆ ಅದೇ ಪತ್ರಿಕೆಲಿ ಬರೆತ್ತ ಇತರ ಲೇಖಕರ ಪರಿಚಯ ಇಕ್ಕು?. ಇದರೂ ಎಷ್ಟು ಆತ್ಮೀಯತೆ ಇಕ್ಕು?. ಅಲ್ಲಿ ಭಾವನೆಗೊ ಎಲ್ಲಿದ್ದು?. ಸಂಬಾವನೆಯೇ ಮುಖ್ಯ ಆಗಿಪ್ಪಲ್ಲಿ ಭಾವನೆಗೊಕ್ಕೆ ಬೆಲೆ ಎಲ್ಲಿದ್ದು?
    ಆದರೆ ಇಲ್ಲಿ ಪ್ರತಿಯೊಬ್ಬನೂ ಇನ್ನೊಬ್ಬನ ತನ್ನ ಕುಟುಂಬದ ಸದಸ್ಯ ಹೇಳಿಯೇ ತಿಳ್ಕೊಂಬ ಭಾವನೆ ಖಂಡಿತಾ ಇದ್ದು. ಬೇರೆ ದಿಕ್ಕೆ ಇಪ್ಪದು ಇಲ್ಲಿ ಇಕ್ಕು, ಆದರೆ ಇಲ್ಲಿ ಸಿಕ್ಕುವ ಸಂತೋಷ ತೃಪ್ತಿ ಬೇರೆ ದಿಕ್ಕೆ ಖಂಡಿತಾ ಸಿಕ್ಕ. ನಮ್ಮ ಭಾಷೆಲಿ ಮರತು ಹೋವ್ತಾ ಇಪ್ಪ ಹಲವಾರು ಶಬ್ದಂಗಳ ಪರಿಚಯ ಎನಗೆ ಇಲ್ಲಿಯೇ ಆದ್ದು. ಸಂಸ್ಕಾರಂಗಳ ಬಗ್ಗೆ ಇಲ್ಲಿ ಸಿಕ್ಕಿದ ಮಾಹಿತಿ ಬಹುಷಃ ಬೇರೆ ಎಲ್ಲಿಯೂ ಈ ರೀತಿ ಸಂಗ್ರಹಲ್ಲಿ ಸಿಕ್ಕಲೆ ಕಷ್ಟ ಸಾಧ್ಯವೇ ಸರಿ.
    ಭಾಷೆ, ಸಂಸ್ಕೃತಿ, ಭಾವನಾತ್ಮಕ ಸಂಬಂಧಂಗಳಿಂದ ಬೆಸೆದ ಈ ಬೈಲು ಇದೇ ಹಾದಿಲಿ ಇನ್ನು ಮುಂದೆಯೂ ನೆಡೆಯಲಿ ಹೇಳುವದೇ, ಈ ಶುಭ ಸಂದರ್ಭಲ್ಲಿ ಎನ್ನ ಹಾರೈಕೆಗೊ

  7. ‘Sum’ಭಾವನೆಯ ಆಶೆಲಿ ಬರವಲೆ ಹೆರಟರೆ ಅದರಲ್ಲಿ‘Some’ಭಾವನೆಯೂ ಸಿಕ್ಕ ಹೇಳುದು ಸತ್ಯ.
    ಒಪ್ಪಣ್ಣನ ಬೈಲು ಅದಕ್ಕಿಂತ ಹೆಚ್ಚಿನ ‘ಗುರ್ತ-ಅರ್ಥ’ವ ಊರಿಲ್ಲಿ ಕೊಡ್ತಾ ಇದ್ದು.
    ನಾಕನೇ ವರ್ಷದ ಬಾಬೆಗೆ ಶುಭಾಶಯಂಗೊ…

  8. ನಾಲ್ಕು ವರ್ಷ ಆತು ಹೇಳುದು ಖುಷಿಯ ವಿಚಾರ ..ಪ್ರತಿ ವಾರವೂ ಹೊಸ ಹೊಸ ಸುದ್ದಿಯ ಸ್ಫೂರ್ತಿಲಿ ವಿವರ್ಸಿ ಹೇಳುವ ಒಪ್ಪಣ್ಣ, ಇದರ ಹೀಂಗೆ ಮುಂದುವರಿಸಲಿ ..
    ನಮ್ಮೋರು ಉದ್ಯೋಗಕ್ಕೊಸ್ಕರ ಎಲ್ಲೆಲ್ಲಿ ಚದುರಿದೊರ ಒಂದೇ ಕಡೆ ತಕ್ಕ ಮಟ್ಟಿoಗೆ ಒಂದು ಮಾಡ್ಲೆ ಎಡಿವದೇ ದೊಡ್ಡ ಸಂಭಾವನೆ ..ಅದರಿಂದ ದೊಡ್ಡ ಸಂಭಾವನೆ ಬೇರೆ ಇಲ್ಲೆ ..

  9. “ಒಪ್ಪಣ್ಣ” -ಒಂದು ಸಮ ಭಾವ ಇಪ್ಪವರ ಕೂಡು ಕುಟುಂಬ. ಎನ್ನ ಭಾವನೆ ಹೇಳ್ತರೆ, ಆನು ಇಲ್ಲಿ “ಶುದ್ದಿ ಬರವ” ಅಭಿಪ್ರಾಯಲ್ಲಿ ಇಳುದ್ದದು ಅಲ್ಲ, ಎನ್ನ ಭಾವನೆಗಳ ಹಂಚಿಗೊಂಬಲೆ ಬಂದದು.ಇದುವರೆಗೆ ಎಲ್ಲಿಯೂ ಬರವಣಿಗೆ ಹೇಳಿ ಮಾಡದ್ದ ಎನ್ನ ಹಾಂಗಿಪ್ಪವಕ್ಕೆ ಅವರವರ ಭಾವನೆಗಳ ಪ್ರಕಟ ಮಾಡ್ಳೆ ಒಂದು ವೇದಿಕೆ ಇದು. ಇಲ್ಲಿ ನೆರೆಕರೆಯೋರ some ಭಾವನೆಯೇ ನವಗೆಲ್ಲ ಪ್ರೀತಿಯ ಸಂಭಾವನೆ. ನಾವೆಲ್ಲ ಹೊಟ್ಟೆಪಾಡಿಂಗೆ ಬೇಕಾಗಿ ಹುಟ್ಟಿದ ಊರು, ನಮ್ಮೋರು ಎಲ್ಲ ಬಿಟ್ಟು ದೂರ ಬಂದ ಮೇಲೆ ನೆರೆಕರೆ ಹೇಳಿ ಅಭಿಮಾನಲ್ಲಿ ವ್ಯವಹರುಸುಲೆ “ಒಪ್ಪಣ್ಣ” ಕಾರಣ ಆತು. ಇದು ನೂರ್ಕಾಲ ಬಾಳಿ ಬೆಳಗಲಿ.

  10. ಒ೦ದರಿ ಯೋಚನೆಯ ದಿಕ್ಕೇ ಬದಲಿದ ಹಾ೦ಗಾತು ಒಪ್ಪಣ್ಣಾ.
    ಬೈಲಿನ ಈ ಮೂರು ವರುಷದ ಅರೆವಾಶಿ ಕಾಲ ಆನೂ ಒಬ್ಬ ನೆರೆಕರೆಯ ನೆ೦ಟನಾಗಿ ಇದ್ದೆ ಹೇಳುಲೆ ಹೆಮ್ಮೆ ಅನುಸುತ್ತೆನಗೆ.ಆಕಸ್ಮಿಕವಾಗಿ ಕ೦ಡು,ಒಳ ಹೊಕ್ಕ ಮೇಲೆ ಇಷ್ಟು ಜೆನ ಆತ್ಮೀಯ,ಸಮಾನ ಮನಸ್ಸಿನ ನೆ೦ಟರ ಸಹವಾಸಲ್ಲಿ ಬದುಕ್ಕೊಗ ಮನಸ್ಸಿ೦ಗೆ ಶಾ೦ತಿ, ನೆಮ್ಮದಿ ಸಮೃದ್ಧವಾಗಿ ಸಿಕ್ಕಿತ್ತು ಹೇಳೊದಕ್ಕೆ ಏವ ಸ೦ಶಯವೂ ಇಲ್ಲೆ.
    ಹವ್ಯಕ ಭಾಷೆಲಿ ಬಿಡು,ಕನ್ನಡಲ್ಲಿ ಬರವೊದೇ ಅಪ್ರೂಪವಾಗಿದ್ದ ಎನಗೆ ಬರವಣಿಗೆಯ ಹವ್ಯಾಸವ ಬೆಳೆಸಿದ್ದೇ ಈ ಬೈಲು.ಭಾಮಿನಿಯ ಕಲಿವಲೆ ಪ್ರೇರಣೆ ಕೊಟ್ಟದೇ ಈ ಬೈಲು.ಇ೦ದು ಕನ್ನಡಲ್ಲಿಯೂ ಬರವಣಿಗೆಯ ಪ್ರಯತ್ನಕ್ಕೆ ಮೂಲಕಾರಣ ಈ ಬೈಲು.
    ಇ೦ದು ಉದ್ಯೋಗದ ಒತ್ತಡ೦ದಲೋ ಅಥವಾ ಪ್ರಯಾಣ೦ದಲೋ ದಿನಲ್ಲಿ ಒ೦ದರಿ ಆದರೂ ಬೈಲಿನ ದರ್ಶನ ಆಗದ್ದರೆ,ಆತ್ಮೀಯ ನೆ೦ಟರ ಒಟ್ಟಿ೦ಗೆ ಮಾತುಕತೆ ಆಗದ್ದರೆ ಏನೋ ಒ೦ದು ಕಳಕ್ಕೊ೦ಡ ಹಾ೦ಗಿರ್ತ ಅನುಭವ.
    ಎನಗೆ ಅಥವಾ ಎನ್ನ ಹಾ೦ಗಿರ್ತ ಒಳುದ ಬೈಲಿನ ನೆ೦ಟ್ರಿ೦ಗೆ ಹೀ೦ಗಿರ್ತ ಭಾವನೆಗೊ ಇಕ್ಕೇ ಹೊರತು ಸ೦ಭಾವನೆಯ ಅಪೇಕ್ಷೆ ಕನಸಿಲಿಯೂ ಬಾರ.
    ಇಲ್ಲಿ ಆನು ಪಡದ ಜ್ಞಾನವೇ ಹೆಚ್ಚು,ಇಲ್ಲಿ ನೆ೦ಟರ ಪರಿಚಯವಾಗಿ ಬೆಳದ ಆತ್ಮೀಯತೆಯೇ ಹೆಚ್ಚು.ಅದು ಏವ ಜನ್ಮದ ಮೈತ್ರಿ,ಏವ ಅಯಸ್ಕಾ೦ತೀಯ ಶಕ್ತಿ ಇಷ್ಟು ಜೆನರ ಒಟ್ಟಿ೦ಗೆ ಹಿಡುದು ಮಡಗಿದ್ದೊ ಅರಡಿಯ.
    ಬದುಕಿ೦ಗೆ ಒ೦ದು ಹೊಸ ರೂಪ ,ಹೊಸ ಅರ್ಥ ಕೊಟ್ಟ ಬೈಲಿ೦ಗೆ ಎನ್ನ ಋಣಸ೦ದಾಯ ಈ ಜನ್ಮಲ್ಲಿ ಮುಗಿಯ.
    ‘ಕೆರೆಯ ನೀರನು ಕೆರೆಗೆ ಚೆಲ್ಲಿ’ ಹೇಳುವ ವಾಕ್ಯ೦ದ ಹೆಚ್ಚೇನೂ ಎನ್ನ೦ದ ಹೆರಡುತ್ತಿಲ್ಲೆ,ಈ ಕ್ಷಣ.
    ಬೈಲು ಶಾಶ್ವತವಾಗಿ ಬೆಳೆಯಲಿ,ಹೊಸ ಎತ್ತರವ ಏರಲಿ,ಇನ್ನೂ ಹೆಚ್ಚು ಪ್ರಕಾಶಿಸಲಿ.

  11. • ಪೊನ್ನಂಬ್ರ : ಈ ಶಬ್ದವ ಬಾಲ್ಯದ ಸಮಯಲ್ಲಿ ಅಮ್ಮ ಹೇಳುದು ಕೇಳಿ ನೆಂಪಿದ್ದು, ಇತ್ತೀಚೆಗೆ ಹೀಂಗಿದ್ದ ಹಲವು ಶಬ್ದಂಗಳ ಬಳಕೆ ಕಮ್ಮಿ ಆಯ್ದು, ಅಥವಾ ಇಲ್ಲಲೇ ಇಲ್ಲೆ. ಒಪ್ಪಣ್ನನ ಬೈಲಿಲ್ಲಿ ಈಗಳೂ ನಮ್ಮ ಭಾಷೆ ಅಷ್ಟೇ ಚೆಂದಕ್ಕೆ ಇಪ್ಪದು ನೋಡಿ ಸಂತೋಷ ಆತು.

    • ಒಂದರಿ ಪೈಶೆಯ ಆಶೆ ಬಂದರೆ ಮತ್ತೆ ಹಿಂದಂತಾಗಿ ಹೋಪಲೆ ಎಡಿತ್ತಿಲ್ಲೆಡ. : ಸತ್ಯವಾದ್ದು, ಈಗಾಣ ಕಾಲಲ್ಲಿ ನಾವು ಪಸೆಗೇ ಹೆಚ್ಚು ಪ್ರಾಮುಖ್ಯತೆ ಕೊಡ್ತಾ ಇದ್ದು..ಇದರಿಂದಾಗಿ ಬೆಲೆಕಟ್ಟುಲೇ ಸಾಧ್ಯ ಆಗದ್ದ ಸಂಬಂಧ- ಬಾಂದವ್ಯಂಗಳ ಬೆಲೆಯೆನ್ನೇ ಮರತ್ತಿದು 🙁

    • ಏನೂ ಸಿಕ್ಕದ್ದರೆ ಭಾವನೆಯೇ ಇಲ್ಲೆ: ಇದು ಖಂಡಿತಾ ಅಪ್ಪು, ಕೆಲವು ಜೆನರ ಜೀವನಲ್ಲಿ !! ಪೈಸೆ ಸಿಕ್ಕುತ್ತರೆ ಹೇಂಗಿದ್ದ ಭಾವನೆಯೂ ಬತ್ತು ! ಪೈಸೆ ಸಿಕ್ಕುವ ಕಾರಣಕ್ಕೆ ಒಬ್ಬ ವ್ಯಕ್ತಿಯ ಕೊಲ್ಲುವ ಕ್ರೂರ ಭಾವವೇ ಬತ್ತಡ, ಇನ್ನು ಪ್ರೀತಿಯ ಭಾವನೆಯ ಅಭಿನಯ ಕಷ್ಟವಾ?!!

    • ಇವಕ್ಕೆಲ್ಲೋರಿಂಗೂ ಸಂಭಾವನೆ ಸಿಕ್ಕುತ್ತು – ಎಂತರ:
    ಶುದ್ದಿ ಕೇಳಿ ಕೊಶಿಪಟ್ಟ ಎಷ್ಟೋ ಬೈಲ ಅಕ್ಕಭಾವಂದ್ರ ಪ್ರೀತಿಯ ಭಾವನೆಯ ಒಪ್ಪಂಗೊ.
    ಇದುವೇ ಸಂಭಾವನೆ. :ಈ ನಮ್ಮ ಬೈಲಿಲ್ಲಿ ಪರಸ್ಪರ ಇಪ್ಪ ಪ್ರೀತಿಯ ಮುಂದೆ ಬೇರೆ ಸಂಭಾವನೆ ಎಂತಕ್ಕೆ ! ಪೈಸೆಯ ಸಂಭಾವನೆಂದಲೂ ಹೆಚ್ಚಿನ ಬೆಲೆ ಈ ಒಪ್ಪಂಗೊಕ್ಕೆ ಇದ್ದು ಹೇಳುದು ಸತ್ಯ.

    • ಆಪ್ತೇಷ್ಟರು ಬತ್ತಾ ಇರಳಿ, ಶುದ್ದಿ ಹೇಳಿಗೊಂಡಿರಳಿ, ಸಂ-ಭಾವನೆ ಪಡೆಯಲಿ : ಇಂಗ್ಲಿಷಿನ ’ಸಂ’ some ಭಾವನೆ ಅಲ್ಲ 🙂 ಸಂಸ್ಕೃತದ ’ಸಮ್’ ಭಾವನೆ ಎಲ್ಲರ ಮನಸ್ಸಿಲ್ಲಿಯೂ, ಜೀವನಲ್ಲಿಯೂ ಇರಲಿ 🙂

    • ಒಂದೊಪ್ಪ: ಸಂಭವಾಮಿ ಯುಗೇ ಯುಗೇ – ಹೇಳಿದ ಕೃಷ್ಣನೂ ಸಂಭಾವನೆ ಕೊಡು ಹೇಳಿರೆ ನಾವೆಲ್ಲಿಗೆ ಹೋವುತ್ಸು! : ಒಪ್ಪಣ್ಣನ ಈ ಒಂದೊಪ್ಪ ಯುಗಲ್ಲಿ ಒಂದರಿ ಸಿಕ್ಕುವ ಹಾಂಗಿತ್ತದು ! ಕೃಷ್ಣಂಗೆ ನಮ್ಮ ಜೀವನವೇ ಸಂಭಾವನೆ… ಉತ್ತಮ ಭಾವನೆ, ಆಲೋಚನೆ, ಕರ್ಮಂಗಳ, ಸಂಸ್ಕಾರ ಸಂಸ್ಕೃತಿಗಲ ಆಚರ್ಸುದರಿಂದ …ಕೃಷ್ಣನ ಸಂಭಾವನೆ ಕೊಡುವ ಪ್ರಯತ್ನ ಮಾಡ್ಲಕ್ಕು 🙂

    • ನಾಲ್ಕನೇ ವರ್ಷದ ಈ ಬಾಬೆ, ಆರೋಗ್ಯವಂತವಾಗಿ, ಮಾಹಿತಿಪೂರ್ಣವಾಗಿ, ಪ್ರೀತಿ ತುಂಬಿ ನೂರ್ಕಾಲ ಬಾಳಲಿ,

  12. * ಒಪ್ಪಣ್ಣನ ಬ್ಲೊ ಗುಚ್ಚಲ್ಲಿ ೨೦೧೨ ಹೇಳಿ ಬರದು ಮಡುಗಿದ ಬ್ಲೊ ಮಾಡಿದ( (ಊದಿದ) ಗುಚ್ಛ ಭಾರೀ ಚೆಂದ ಕಾಣ್ತು. ೪ ನೆ ವರ್ಷಕ್ಕೆ ಪಾದಾರ್ಪಣೆ ಮಾಡಿದ ಒಪ್ಪಣನ್ಗೆ ಅಭಿನಂದನೆಗೋ.
    * ಪ್ರತಿಯೋಬ್ಬಂಗು ಅವರವರ ಭಾಷೇಲಿ ಓದುಲೆ ಸಿಕ್ಕುವ ಸಾಹಿತ್ಯವೇ ಒಂದು ಸಂಭಾವನೆ.
    * ಮನುಷ್ಯ ಮುಂದುವರುದು ಕಾಗದವ ತಯಾರುಸಿ ಬರವಲೆ ಸುರು ಮಾಡಿ ಎಶ್ಟೊ ಸಮಯ ಆತು .ಎಲ್ಲಾ ಜನಾಂಗದ ಹಾಂಗೆ ಹವ್ಯಕ ಸಮಾಜದೊರುದೆ ದಾಪು ಗಾಲು ಹಾಯಿಕೊಂಡು ಮುಂದೆ ಬಂದವು.ಆದರೆ ಹವ್ಯಕ ಭಾಷೇಲಿ ಕಾಗದ ರೂಪಲ್ಲಿಪ್ಪ ಸಾಹಿತ್ಯದ ಬಗ್ಗೆ ಯೋಚನೆ ಮಾಡಿದರೆ ಬೇರೆ ಭಾಷಗೆ ಹೋಲುಸುವಾಗ ಕಮ್ಮಿ ಕಾಣ್ತು. ಅಧುನಿಕ ತಂತ್ರಜ್ಞಾನವ ಅಳವದಿಸಿಗೊಂಡು , ಗಣಕಯಂತ್ರಲ್ಲಿ ಮನಸಿನ ಭಾವನೆಗಳ ದೃಶ್ಯ , ಶ್ರವ್ಯ ಮಾಧ್ಯಮಗಳ ಉಪಯೋಗಿಸಿಯೊಂದು ಅಭಿವ್ಯಕ್ತ್ಹಿಪದಿಸುಲೆ ಹವ್ಯಕ ಸಮಾಜ ಹಿಂದೆ ಒಳುದ್ದಿಲ್ಲೆ ಹೇಳಿ ಹೇಳುದಕ್ಕೆ ಒಪ್ಪಣ್ಣನ ಬೈಲು ಒಂದು ಸಾಕ್ಷಿ. ಬೋಚಭಾವ ತಪಸ್ಸು ಮಾಡುಲೆ ಹೋಗಿ ಕೈಲಿ ಒಟ್ಟ ಮುಕ್ಕಾಲು ಹಿಡುಕೊಂಡು ಬಪ್ಪ ಚಿತ್ರ ನೋಡಿ ಅಪ್ಪಗ ಒಪ್ಪಣ ,ತಂತ್ರಜ್ಞಾನವ ಉಪಯೊಗಿಸಿ ಕೈಲಿ ಚಿತ್ರ ಬಿಡಿಸಿ, ಮತ್ತೂ ಒಂದು ಹೆಜ್ಜೆ ಮುಂದುವರಿದ ಹಾಂಗೆ ಎನಗೆ ಅನ್ಸಿತ್ತು . ಇನ್ನು ೫೦ , ನೂರೊ ವರ್ಷ ಕಳುದಪ್ಪಗ ಹವ್ಯಕ ಸಮಾಜದ ಅಧ್ಯಯನಕ್ಕೆ ಒಪ್ಪಣ್ಣನ ಬೈಲೇ ಸಾಕ್ಷಿ ಅಕ್ಕಷ್ಟೇ .

    * ಕೆಲವೊರಿನ್ಗೆ ಸಂಭಾವನೆ ತೆಕ್ಕೊಮ್ಬದು ಅನಿವಾರ್ಯ ಆಗಿರುತ್ತು.

    * ಸಂಭಾವಾಮಿ ಯುಗೇ ಯುಗೇ ಹೇಳಿದ ಶ್ರೀಕೃಷ್ಣನ ಸಮ ತೂಕಕ್ಕೆ ಬನ್ದದು ರುಕ್ಮಿಣಿಯ ಸದ್ ಭಾವನೆಯ ಒಂದೇ ಒಂದು ತುಳಸಿ ದಳ ; ಹೊರತು ಸತ್ಯಭಾಮೆಯ ಸಂಭಾವನೆಯ ರೂಪದ ಅಟ್ಟೈಶ್ವರ್ಯ ಅಲ್ಲ!

  13. ಎಲ್ಲರು ಒಂದೇ ಹಾಂಗೆ ಇರುತ್ತವೊ, ಒಪ್ಪಣ್ಣೊ? ಸಂಭಾವನೆಯವರ ಬಿಟ್ಟು ಹಾಕಿ! ನಿಸ್ವಾರ್ಥ ಸೇವೆ ಮಾಡೋರು ಎಲ್ಲಾ ಕಾಲಲ್ಲೂ ಇದ್ದವು. ಹಾಂಗಾಗಿ ಬೈಲು ಇನ್ನೂ ಚೆಂದಕ್ಕೆ ಮುಂದುವರಿಗು.

  14. ಜನರ ಪ್ರೀತಿ, ವಿಶ್ವಾಸ ಇಪ್ಪಲ್ಲಿ ಸಂಭಾವನೆ ಇಲ್ಲದ್ದರೂ ಕೆಲಸ ಮಾಡ್ಲಕ್ಕು. ಸಂಭಾವನೆ ಕಮ್ಮಿ ಆದರೂ ಕೆಲಸ ಮಾಡ್ಲಕ್ಕು. ಆದರೆ ಕೆಲಾವು ಜನ ಹೀಂಗೂ ಇದ್ದವು. ಅವಕ್ಕೆ ಸಿಕ್ಕುತ್ತಲ್ಲಿ ಎಷ್ಟು ಸಿಕ್ಕಿರೂ ಸಾಕಾಗ. ಕೊಡ್ತಲ್ಲಿ ಅವು ಮಹಾ ಪೀನಾರಿಗೊ. ಕೊಡೆಕಾದಲ್ಲಿ ಕೊಡೆಕಾದ ಪೈಸೆಯ ಕೊಡದ್ದೆ ಮಡುಗಿ ದೋಡ್ಡ ಮನೆ ಕಟ್ಟುಸಿ ಉದ್ಧಾರ ಆದವ° ಆರೂ ಇಲ್ಲೆ. ಆದರೂ ಕೆಲಾವು ಜನ ಹಾಂಗೆ ತಿಳ್ಕೊಳ್ತವು. ಈಗಾಣ ಕಾಲಲ್ಲಿ ಪೈಸೆಗೇ ಬೆಲೆ ಇಪ್ಪದು ಹೇಳುದು ವ್ಯವಹಾರದ ಮಾತು. ಆದರೂ, ಪ್ರೀತಿ, ವಿಶ್ವಾಸ, ಅನುಕಂಪ, ಪ್ರಾಮಾಣಿಕತೆ ಇತ್ಯಾದಿ ಮೌಲ್ಯಂಗೊ ಈಗಲೂ ಒಳ್ಳೆ ಮನುಷ್ಯರ ಹತ್ರೆ ರಜ್ಜ ಆದರೂ ಒಳುಕ್ಕೊಂಡಿದ್ದು ಹೇಳುದು ಸಂತೋಷದ ಸಂಗತಿ.

    ಮತ್ತೆ ಪತ್ರಿಕೆಗೊಕ್ಕೆ ಬರವದಕ್ಕೂ ನಮ್ಮ ಬೈಲಿಂಗೆ ಬರವದಕ್ಕೂ ಹೋಲಿಕೆ ಮಾಡಿರೆ ಸರಿ ಆಗ. ಪತ್ರಿಕೆಗಳಲ್ಲಿ ಇಪ್ಪಷ್ಟು ಅನ್ಯಾಯ ಬೇರೆಲ್ಲಿಯೂ ಕಾಂಬಲೆ ಸಿಕ್ಕ. ಹೆಸರಿಲ್ಲಿ ಒಂದು ಬ್ರಾಹ್ಮಣಸೂಚಕ ಶಬ್ದ ಏನಾರೂ ಸಿಕ್ಕಿರೆ ಅವನ ಲೇಖನ ಕಸದಬುಟ್ಟಿಗೆ ಹೋತು ಹೇಳಿಯೇ ಲೆಕ್ಕ. ಸಂಭಾವನೆಯ ವಿಷಯವೂ ಅಷ್ಟೆ. ಅವಕ್ಕೆ ತೋರಿದರೆ ಕೊಟ್ಟವು, ಇಲ್ಲದ್ರೆ ಇಲ್ಲೆ. ಹಾಂಗೆ ಹೇಳಿ ಪತ್ರಿಕೆಯ ಒಂದು ಪ್ರತಿ ಕಳುಸಿ ಆದರೂ ಕೊಡ್ತವೋ?, ಅದೂ ಇಲ್ಲೆ! (ಬೇಕಾರೆ ನಮ್ಮ ಡೈಮಂಡ್ ಭಾವನತ್ರೆ ಕೇಳಿ…) ಪತ್ರಿಕೆಗೊ ಕಮರ್ಷಿಯಲ್ ಆಗಿಪ್ಪಲಕ್ಕು, ನಾವು ಇಪ್ಪಲಾಗದಾ? ಹಾಂಗಿಪ್ಪ ಪತ್ರಿಕೆಗೊಕ್ಕೆ ಬರದು ಎಂತ ಮಾಡ್ಲಿದ್ದು ಕೇಳುದು ಆನು. ನಮ್ಮ ಬೈಲಿಲ್ಲಿ ಆದರೆ ಹಾಂಗಲ್ಲ, ಎಲ್ಲಿ ಹೋದರೂ ಜನಂಗೊ ಪ್ರೀತಿಲಿ ಮಾತಾಡ್ಸುದು ಕಾಂಬಗ ಅದೇ ಒಂದು ಗಳಿಕೆ ಹೇಳಿ ತೋರ್ತು. ಒಪ್ಪಣ್ಣನ ಬೈಲಿಂಗೆ ಮೂರು ಕಳುದು ನಾಲ್ಕನೇ ವರ್ಷ ಅಪ್ಪಗ ಎಲ್ಲೋರಿಂಗೂ ಕೊಷಿ ಆವುತ್ತು. ಶುಭ ಹಾರೈಕೆಗೊ.

  15. ಬೈಲಿಂಗೆ ನಾಕನೇ ವರ್ಷ ಹಿಡುದ ಖುಷಿಲಿ ಸುರೂವಿಂಗೆ ಅದ್ಭುತ ಲೇಖನ ಒಪ್ಪಣ್ಣ. ಮನಸ್ಸು ತುಂಬಿ ಬಂತು. ನಾವು ಬೈಲಿನವೆಲ್ಲ ಸಂಭಾವನೆ ಹೇಳ್ತದರ ಬಗ್ಗೆ ಯೋಚನೆಯೇ ಮಾಡದ್ದೇ, ನಮ್ಮ ಕುಟುಂಬದವರ ಹತ್ರ ವಿಚಾರ ವಿನಿಮಯ ಮಾಡಿಗೊಂಡ ಹಾಂಗೆ ಮಾತಾಡಿಗೊಂಡು ಬಯಿಂದು. ಇದು ಹೀಂಗೇ ಮುಂದುವರಿಯಲಿ.
    ಎಂತಾರು ಕಾರಣಂದಾಗಿ ಕೆಲವು ಸಮಯ ಬೈಲಿಂಗೆ ಬಪ್ಪಲಾಗದ್ರೆ ಮನಸ್ಸಿಂಗೆ ಸಮಾಧಾನವೇ ಇಲ್ಲದ್ದಾಂಗಾವುತ್ತು. ಓದಿ ಪ್ರತಿಕ್ರಿಯೆ ಕೊಡ್ಳಾಗದ್ರುದೇ ಒಂದರಿ ಕಣ್ಣಾಡುಸಿಕ್ಕಿ ಹೋಪದು ಇದ್ದೇ ಇದ್ದು. ನಮ್ಮ ಕುಟುಂಬಕ್ಕೆ ಹೊಸ ಹೊಸ ಅಣ್ಣಂದ್ರು ಅಕ್ಕಂದ್ರು ಎಲ್ಲ ಬಂದು ಸೇರುದು ನೋಡುವಾಗ ಖುಷೀ ಆವುತ್ತು. ಈ ನಿಷ್ಕಲ್ಮಶ ಸಂಬಂಧ ನಿರಂತರವಾಗಿರಲಿ ಹೇಳಿ ಆಶಯ. ಗುರುಗಳ, ಹಿರಿಯೋರ ಆಶೀರ್ವಾದಂದ ಈ ಬೈಲು ಇನ್ನೂ ಎತ್ತರಕ್ಕೆ ಬೆಳೆಯಲಿ.

  16. ಬೈಲಿನವರೆಲ್ಲರ ಭಾವನೆಗಳ ಕೆಲವು ವಾಕ್ಯಗಳಲ್ಲಿ ಬರದ ಒಪ್ಪನ್ಣಂಗೆ ಅದೆಷ್ಟು ಸ೦-ಭಾವನೆ ಕೊಟ್ಟರೂ ಕಡಮ್ಮೆಯೇ!!!

    ಗುರುಗೋ ಹೇಳುತ್ತ ಹಾಂಗೆ ನಿಜವಾಗಿಯೂ “ಭಾವದ ಪ್ರಭಾವ ದೊಡ್ಡದು…”. ಇದು ಒಂದರಿ ಅರ್ಥ ಅಪ್ಪವರೆಗೆ ಮಾಂತ್ರ ನಾವು ಸಂಭಾವನೆಗೆ ಪ್ರಾಮುಖ್ಯತೆ ಕೊಡುತ್ತು… ಒಂದರಿ ಸರಿಯಾಗಿ ಅರ್ಥ ಆದ ಮೇಲೆ ಇನ್ನೂ ರಜ ಮೇಗಣ ಹಂತಕ್ಕೆ ಹೋದರೆ ಸಂಭಾವನೆಯೇ ಇಲ್ಲದ್ದವಂಗೂ ನೆಮ್ಮದಿಯ ಮತ್ತು ಮರ್ಯಾದೆಯ ಜೀವನ ನಡೆಸಲೆಡಿತ್ತು ಹೇಳುದು ಅರ್ಥ ಆವುತ್ತು… ಆ ನಂತರ ನಮಗೆ “ದುಡ್ಡಿದ್ದವನೆ ದೊಡ್ಡಪ್ಪ” ಹೇಳಿ ಅನ್ನಿಸುವ ಬದಲು “ದನ ಇದ್ದವನೇ ಧನಿಕನು” ಹೇಳಿ ಅನ್ನಿಸುಲೇ ಸುರು ಆವುತ್ತು… ಹಾಂಗಾರೆ ಸಂಭಾವನೆಗೆ ಪ್ರಾಮುಖ್ಯತೆ ಕೊಡುವವ ಸಮಾಜಂದ ಹೆರವ ಕೇಳಿರೆ ಖಂಡಿತವಾಗಿಯೂ ಅಲ್ಲ… ಅವು ಇನ್ನುದೆ ಸಣ್ಣ ಮಕ್ಕೋ ಹೇಳುದರ ನಾವು ದೊಡ್ಡ ಮಕ್ಕೋ ಅರ್ಥ ಮಾಡಿಗೊಂಡು ‘ಭಾವ’ ನ್ದಲೇ ಅವಕ್ಕೆ ‘ಭಾವದ ಪ್ರಭಾವ’ವ ಅರ್ಥ ಮಾಡುಸೆಕ್ಕು… ಅವರನ್ನೂ ಬೆಳೆಸೆಕ್ಕು…

    1. ಸಂಭಾವನೆಯೇ ಇಲ್ಲದ್ದವ ಹೇಂಗೆ ನೆಮ್ಮದಿಯ ಮತ್ತು ಮರ್ಯಾದೆಯ ಜೀವನ ನಡೆಸುತ್ತ ಹೇಳುದಕ್ಕೆ ಕೆಲವು ಉದಾಹರಣೆಗಳ ಕೊಡುತ್ತೆ…

      ೧)ಒಬ್ಬ ಗುರುಭಕ್ತ ಆದಿಕ್ಕು… ಅವನಲ್ಲಿ ಒಳ್ಳೆ ಸಾಮರ್ಥಿಗೆಯೂ ಇದ್ದು,ದೈವಾನುಕೂಲವೂ ಇದ್ದು,ಅವ ಪ್ರಾಮಾಣಿಕವಾಗಿ ಗುರು ಸೇವೆ ಮಾಡಿದ ಹೇಳಿ ಆದರೆ ಅವಂಗೆ ಯಾವುದೇ ಸಂಭಾವನೆಯ ಅಗತ್ಯ ಇಲ್ಲೇ… ಅವ ಇಡೀ ಸಮಾಜಕ್ಕೆ ಬೇಕಾದವ ಆಗಿರುತ್ತ… ಅವನ ಸಮಾಜವೇ ಅಷ್ಟೂ ಪ್ರೀತಿಂದ ನೋಡಿಗೊಳ್ಳುತ್ತು…

      ೨)ಒಂದನೇ ಉದಾಹರಣೆ ಎಂತದೋ ದೇವರಿಂಗೆ/ಸಂನ್ಯಾಸಕ್ಕೆ ಸಂಬಂಧಿಸಿದ್ದು ನಮಗೆ ಅರ್ಥ ಆಗ ಹೇಳಿ ಅನ್ನಿಸಿರೆ ಇನ್ನೊಂದು ಉದಾಹರಣೆ ಕೊಡುತ್ತೆ…
      ದೊಡ್ಡ ಆಸ್ತಿ ಇಪ್ಪ ಒಂದು ಇಡೀ ಕುಟುಂಬ ವಿದೇಶಲ್ಲಿ ನೆಲೆಸಿದ್ದವು ಮತ್ತು ಅವಕ್ಕೆ ಇಲ್ಲಿ ಆಸ್ತಿ ಇಪ್ಪ ಬಗ್ಗೆ ನೆನಪೂ ಇಲ್ಲದ್ದಷ್ಟು ಬ್ಯುಸಿ ಆಗಿದ್ದವು ಹೇಳಿ ಮಡುಗುವ… ಆ ಆಸ್ತಿಯ ಆರೋ ಒಬ್ಬ ಪ್ರಾಮಾಣಿಕವಾಗಿ ದುಡಿವವ ನೋಡಿಗೊಂಡು ದಾನ/ ಧರ್ಮ ಮಾಡಿಗೊಂಡು ಇಡೀ ಸಮಾಜಕ್ಕೆ ಬೇಕಾದವ ಆಗಿಪ್ಪಲಕ್ಕು… ಇಲ್ಲಿಯೂ ಯಾವುದೇ ಸಂಭಾವನೆ ಇಲ್ಲದ್ದೆ ಅವ ಸಮಾಜಲ್ಲಿ ಮರ್ಯಾದೆಯ ಜೀವನ ನಡೆಸುತ್ತ…

      ೩) ೨ ನೆ ಉದಾಹರಣೆಯೂ ಮೈ ಮುರುದು ದುಡಿವವಕ್ಕೆ ಆತು … ನಮಗೆಲ್ಲ ಅರ್ಥ ಆಗ ಹೇಳಿ ಅನ್ನಿಸಿರೆ ಇನ್ನೊಂದು ಉದಾಹರಣೆ ಕೊಡುತ್ತೆ…
      ದೊಡ್ಡ ಕಂಪನಿಯ ಬಾಸ್ ಬೇಕಾದಷ್ಟು ಇನ್ ವೆಸ್ಟ್ ಮಾಡಿದ್ದ… ಆದರೆ ಅವಂಗೆ ಕಂಪನಿಯ ಬಗ್ಗೆ ಗಮನ ಕೊಡುಲೆ ಕೂಡಾ ಪುರುಸೊತ್ತು ಇಲ್ಲೇ… ಎಲ್ಲಾ ಜವಾಬ್ದಾರಿಗಳ ಮೇನೆಜರ್ ಗೆ ಬಿಟ್ಟುಕೊಟ್ಟಿದ… ಮೇನೆಜರ್ ತನ್ನದೇ ಕಂಪನಿ ಹೇಳುವಷ್ಟು ಪ್ರೀತಿಲ್ಲಿ ದುಡುದು ಎಲ್ಲರ ಜೊತೆಗೆ ಪ್ರೀತಿಲ್ಲಿ ವ್ಯವಹಾರ ಮಾಡಿಗೊಂಡು ಇದ್ದ… ಹೇಳಿ ಆದರೆ ಈ ಮೇನೆಜರ್ ಬಾಸ್ ಗಿಂತ ಹೆಚ್ಚಾಗಿ ಎಲ್ಲೋರಿಂಗೂ ಬೇಕಾದವ ಆಗಿರುತ್ತ… ಇಲ್ಲಿಯೂ ಸಂಭಾವನೆಗಿಂತ ಪ್ರೀತಿಗೆ ಪ್ರಾಧಾನ್ಯತೆ ಇಪ್ಪದು ಕಾಣುತ್ತು…

      ಒಟ್ಟಾರೆ ಹೇಳುತ್ತರೆ ನಮ್ಮ ಬೈಲಿನವರ ಹಾಂಗೆ ಪ್ರೀತಿಲ್ಲಿ, ಪ್ರಾಮಾಣಿಕವಾಗಿ ದುಡಿತ್ತವಕ್ಕೆ ಜೀವನಲ್ಲಿ ಯಾವತ್ತೂ ಸೋಲಿಲ್ಲೇ…

  17. ಆರೋ, ಎಲ್ಲಿಯೋ, ಏನೋ ಹೇಳಿದವು ಹೇಳಿ ಒಪ್ಪಣ್ಣ ತಲೆಬೆಶಿ ಮಾಡೆಕಾದ ಅಗತ್ಯ ಇಲ್ಲೆ. ಬೈಲಿನ ನೋಡದ್ದವು, ಗೊಂತಿಲ್ಲದ್ದವು, ಪೈಶಗಾಗಿಯೇ ಬರವವು ಹಾಂಗೆ ಹೇಳಿಕ್ಕು. ಬೈಲ್ಲಿ ಇಪ್ಪವು ಆರೂ ಹಾಂಗೆ ಮಾತಾಡವು. ಬೈಲಿಂಗೆ ಬಂದವು ‘ಇದು ನಮ್ಮ ಬೈಲು’ ಹೇಳುವ ಪ್ರೀತಿಂದ ಬಂದವು ಹೇಳ್ತದಲ್ಲಿ ಸಂಶಯ ಇಲ್ಲೆ.

    ಸಂಭಾವನೆಯ ಬಗ್ಗೆ ಮಾತಾಡುವಾಗ ನಾವು ಒಂದು ವಿಷಯವ ಮನಸ್ಸಿಲ್ಲಿ ಮಡಿಕ್ಕೊಳೆಕ್ಕು – ಅದೆಂತರ ಹೇಳಿರೆ, ವೃತ್ತಿ, ಪ್ರವೃತ್ತಿ (ಹವ್ಯಾಸ)ಗಳ ವ್ಯತ್ಯಾಸ. ಬೈಲ್ಲಿ ಇಪ್ಪ ಎಲ್ಲೋರೂ ಒಂದಲ್ಲ ಒಂದು ವೃತ್ತಿಲಿ ಇಪ್ಪೋರೆ. ಸಂಪಾದನಗಾಗಿ ಮಾಡುವ ವೃತ್ತಿಲಿ ಪ್ರತಿಯೊಬ್ಬನೂ ಎಲ್ಲಿ, ಯಾವದರಲ್ಲಿ ಹೆಚ್ಚು ಸಿಕ್ಕುತ್ತು ಹೇಳಿ ನೋಡುವವನೆ. ಪ್ರಾಮಾಣಿಕವಾಗಿ ವೃತ್ತಿ ಮಾಡುವವ° ಹೆಚ್ಚು ಸಿಕ್ಕೆಕು ಹೇಳಿ ನಿರೀಕ್ಷೆ ಮಾಡುದು ತಪ್ಪೇ?

    ಪೌರೋಹಿತ್ಯ ಇಂದ್ರಾಣ ಕಾಲಲ್ಲಿ ಒಂದು ವೃತ್ತಿ ಹೇಳಿಯೇ ಹೇಳೆಕ್ಕಾವುತ್ತು. (ಎಲ್ಲ ಬಟ್ಟ ಮಾವಂದಿರಿಂಗೂ ಇದು ಅನ್ವಯಿಸುತ್ತಿಲ್ಲೆ) ಜೀವನಕ್ಕೆ ಬೇರೆ ವೃತ್ತಿ ಇಲ್ಲದ್ದವ° ಪೌರೋಹಿತ್ಯಂದಲೇ ಜೀವನ ಮಾಡೆಕ್ಕಾದರೆ ಸಾಕಷ್ಟು ಸಂಭಾವನೆ ಸಿಕ್ಕದ್ದರೆ ಎಡಿಗೋ? ಬೆಂಗ್ಳೂರಿಲ್ಲಿ ಬಟ್ಟ ಮಾವಂಗೆ ಊರಿಲ್ಲಿ ಕೊಡುವಷ್ಟೇ ದಕ್ಷಿಣೆ ಕೊಟ್ಟ್ರೆ ಸಾಕೆ?

    ಅದೇ ರೀತಿ ಪ್ರತಿಯೊಂದು ಕೆಲಸಲ್ಲಿಯೂ ವೃತ್ತಿ ಪರ, ಹವ್ಯಾಸಿ ಹೇಳಿ ಎರಡು ತರದವು. ಪ್ರೀತಿಂದ ಅಥವಾ ಸಹಾಯ ಮಾಡೆಕು ಹೇಳುವ ಭಾವನೆಂದ ಮಾಡುವವು ಬೇರೆ, ಪೈಸಗಾಗಿ ಮಾಡುವವು ಬೇರೆ. ಸುದರಿಕೆಲಿಯೂ ಹಾಂಗೆ – ನಾವು ಸುದರಿಕೆಯ ಕೆಲಸಕ್ಕೆ ಹೇಳಿ ದಿನಿಗೇಳಿ ಬಪ್ಪವು ಏಳ್ನೂರೋ, ಸಾವಿರವೋ ಸಿಕ್ಕುಗು ಹೇಳಿಯೇ ಬಪ್ಪವಲ್ಲದೋ?

    ನಮ್ಮ ಬೈಲು ದಿನಂದ ದಿನಕ್ಕೆ ಬೆಳೆತ್ತಾ ಇದ್ದು; ಇನ್ನು ಮುಂದೆಯೂ ಬೆಳೆತ್ತಾ ಹೋಕು. ಇಲ್ಲಿ ಪ್ರೀತಿಯ, ಅಭಿಮಾನದ ಭಾವನೆಯೇ ಕೆಲಸ ಮಾಡುಸುತ್ತು!

    ಒಪ್ಪಣ್ಣನ ಬೈಲು ನಾಲ್ಕನೇ ವರ್ಷಕ್ಕೆ ಕಾಲು ಮಡುಗಿದ ಸಂದರ್ಭಲ್ಲಿ ಒಪ್ಪಣ್ಣಂಗೆ ಪ್ರೀತಿಯ ಒಪ್ಪಂಗೊ.

  18. ಒಪ್ಪಣ್ಣ ಹೇಳಿದ ವಿಷಯ ಸರಿ. ಹಣದ ನಿರೀಕ್ಷೆ ಮಾತ್ರ ಮಡಿಗ್ಯೊಂಡು ಕೆಲಸ ಮಾಡ್ಲಾಗ. ಮಾನವೀಯತೆಯೂ ಬೇಕು.

    ಅದೆಲ್ಲ ಸರಿ ಈ ಸುದ್ದಿಗೆ ಎಷ್ಟು ಒಪ್ಪದ ನಿರೀಕ್ಷೆ ಇದ್ದು ಒಪ್ಪಣ್ಣೋ………?

  19. ಓ ಅಂದೊಂದರಿ, ಆನೂ ಒಪ್ಪಣ್ಣಕ್ಕೆ ಬರೆತ್ತೆ ಹೇಳಿ ಇನ್ನೊಬ್ಬನತ್ರೆ ಹೇಳುವಾಗ,
    “ಅಪ್ಪಾ.. ಎಷ್ಟು ಕೊಡ್ತವು?”
    ಕೇಳಿದ.
    “ಪೈಸೆಗಲ್ಲ” ಹೇಳಿದೆ.
    “ಮತ್ತೆ?” ಕೇಳಿದ ಭಾರ್ಈ ಆಶ್ಚರ್ಯಲ್ಲಿ.
    “ಖುಶಿಗೆ” ಹೇಳಿದೆ.

    ***

    ಎನ್ನ ಮನಸ್ಸಿಲ್ಲಿದ್ದ ಆ ಎಲ್ಲ ಭಾವನೆಗೊಕ್ಕೆ ಅಕ್ಷರ ರೂಪ ಕೊಟ್ಟಿದೆ ಒಪ್ಪಣ್ಣಾ..!!
    ಒಳುದ ಬೈಲುಗೊ ಸಮಯ ಕಳವಲೆ,
    ಈ ಬೈಲು ಬದುಕ್ಕುಲೆ.

    ಬಚ್ಚುವ ವರೆಗೆ ಸುದರಿಕೆ ಮಾಡುದೇ.

    ರುದ್ರ ಕಲ್ತ ಸುರೂವಿಲ್ಲಿ,
    ಅಪರೂಪಲ್ಲಿ ದೇವಸ್ಥಾನಂಗೊಕ್ಕೆ ಹೋಪದಿತ್ತು,
    ಶತರುದ್ರಕ್ಕೆ ಮಂತ್ರ ಹೇಳುಲೆ.
    ಸುರು ಸುರುವಿಂಗೆ ರುದ್ರಲ್ಲಿ ಇದ್ದ ಮನಸ್ಸು ಮತ್ತೆ ಮತ್ತೆ ಪೈಸೆಗೆ ಹೋಪಲೆ ಸುರು ಅಪ್ಪಗ,
    ಹೋಪದನ್ನೇ ನಿಲ್ಸಿದೆ.
    ಈಗ ಪೈಸೆ ಕೊಡ್ತವಿಲ್ಲೆ – ಸೇವೆ ಹೇಳುವಲ್ಲಿಗೆ ಮಾತ್ರ ಹೋಪದು.

    ಪೈಸೆ ಯಾವಾಗಳೂ ಕಿಸೆಲಿ ಇರೆಕಾದ್ದು ತಲೆಲಿ ಅಲ್ಲ. ಮೂಗಿಲ್ಲೂ ಬಾಯಿಲೂ ಎರಡರಲ್ಲೂ ತಿಂಬಲಾಗ. – ಎನ್ನ friendನ ಗೆಂಡ ಹೇಳಿದ್ದು..
    ಎಷ್ಟು ಸತ್ಯ ಅಲ್ಲದಾ?

  20. ತು೦ಬಾ ಲಾಯಿಕಾಯಿದು. .”ಮನೆ ಜೆಂಬ್ರದ ಹಾಂಗೇ – ಅಪ್ಪಚ್ಚಿ, ಚಿಕ್ಕಮ್ಮ, ಅತ್ತೆ, ಮಾವ, ಅಣ್ಣ ತಮ್ಮ, ಅಕ್ಕ ತಂಗೆಕ್ಕೊ ಸುಮಾರು ಜೆನ ಸಿಕ್ಕಿದವು. ಇದು ಕೊಶಿಯೇ ಅಲ್ಲದೋ?”–ಅಪ್ಪು ಎ೦ಗೊಗುದೆ ಹಾ೦ಗೆ ಆಯಿದು. ಆರನ್ನು ನೋಡಿ ಗೊನ್ತಿಲ್ಲದ್ದರೂ ಯಾವಾಗಲೂ ಶುದ್ದಿ ಬರವ ಕೆಲವು ಜನರ ಎ೦ಗೊಗೆ ತು೦ಬಾ ಪರಿಚಯ ಇಪ್ಪಹಾ೦ಗೆ ಆಯಿದು. ಸಂ— “ಭಾವನೆಯ” ಖ೦ಡಿತವಾಗಿಯು ಅನುಬವಿಸಿದ್ದೆಯ. ” ಒಪ್ಪಣ್ಣ೦ಗೆ ಅರ್ಹವಾದ ಸ೦ಭಾವನೆ ಕೊಡ್ಲೆಡಿಗೋ …'” ಇದು ನಿಜವಾಗಿಯೂ ಅಪ್ಪು ಪೆರ್ವದಣ್ಣ.

  21. ಭಾವಯ್ಯೋ,
    ಭಾವನೆಯೇ ಇಲ್ಲದ್ದವರತ್ರೆ ಸಂಭಾವನೆ ಕೊಟ್ಟು ಬರಶುತ್ತದರಲ್ಲಿ ಅರ್ಥ ಇದ್ದೋ…?
    ಸಂಭಾವನೆಗೋಸ್ಕರ ಬರವವರತ್ರೆ ಸಂ- ಭಾವನೆ ಮಾತ್ರಾ ಇಕ್ಕಷ್ಟೆ ಅಲ್ಲದೋ….?
    ಸಂಭಾವನೆ ಹೇಳಿ ಪೈಸೆಕೊಡದ್ದರುದೇ ಸಂ-ಭಾವಂದ್ರು, ಸಂ-ಅಕ್ಕಂದ್ರು, ಸಂ-ಮಾವಂದ್ರು,ಸಂ-ಅತ್ತೆಕ್ಕೊ ಸಂಪೂರ್ಣವಾಗಿ ಅವರವರ ಮನಸ್ಸಿನ ಭಾವನೆಯ ಸಂಭಾವನೆ ರೂಪಲ್ಲಿ ಒಪ್ಪುಸುತ್ತಾ ಇಪ್ಪದರಷ್ಟು ದೊಡ್ಡ ಸಂಭಾವನೆಯ ಯಾರಿಂದಾದರೂ ಕೊಡುಲೆ ಎಡಿಗೋ…?
    ಸಂಭಾವನೆಗೋಸ್ಕರ ಸಂ-ಭಾವನೆ ತೋರುಸುತ್ತ ಸಿನೆಮಾ ನಟನಟಿಯರ ಹಾಂಗೆ ನಾವಾಯೆಕ್ಕೋ..?
    ನಮ್ಮ ಭಾವನೆಗಳ ಪೈಸಗೆ ಮಾರುದೋ…?
    ಒಂದುವೇಳೆ ಹಾಂಗಾದರೆ ಆಭಾವನಗೆ ಬೆಲೆ ಎಷ್ಟು…?
    ಅವರ ಭಾವನೆಯ ಬೆಲೆ ಕೇವಲ ಐನೂರು ಸಾವಿರ ರೂಪಾಯಿ ಮಾತ್ರವೋ….?
    ಎಲ್ಲಕೇಳಲಿ ಎಂದು ನಾನು ಹಾಡುವುದಿಲ್ಲ ……., ಹೇಳ್ತಹಾಂಗಿಪ್ಪ ಭಾವನೆಗೊಕ್ಕೆ ಬೆಲೆ ಕಟ್ಟುಲೆಡಿಗೋ..?
    ಆಲೋಚನೆ ಮಾಡೆಕ್ಕಾದ್ದೇ…..,
    ಒಪ್ಪ ಆಯಿದು ಹೇಳಿ ಒಪ್ಪ.

  22. ಈ ಬೈಲಿಲ್ಲಿ ಸಿಕ್ಕುವ ಒಪ್ಪ೦ಗೊಕ್ಕೆ ಬೆಲೆ ಕಟ್ಟುಲೆ ಎಡಿಯ ಹೇಳಿ ಕಾಣ್ತು.
    ಇಲ್ಲಿ ಬಪ್ಪ ವಿಚಾರ೦ಗ, ಅದರ ಮೇಲೆ ಅಪ್ಪ ಚರ್ಚೆಗ, ವಿಚಾರ ವಿನಿಮಯ೦ಗ, ಪರಸ್ಪರ ನೋಡದ್ದೋರತ್ತರೂ ಬೆಳವ ಭಾವನಾತ್ಮಕ ಗೆಳೆತನವೇ ಬಹು ದೊಡ್ಡ ಸ೦ಭಾವನೆ.

  23. ಸದ್ಭಾವನೆ ಸಂಭಾವನೆಂದ ಮಿಗಿಲು.
    ಬರೆವದನ್ನೇ ವೃತ್ತಿಯಾಗಿ ಮಾಡಿಕೊಂಡಿದ್ದರೆ[ಕಾರಂತ,ತ.ರಾ.ಸು.,ಎನ್.ನರಸಿಂಹಯ್ಯ ಅವರ ಹಾಂಗೆ]ಸಂಭಾವನೆ ಕೇಳದ್ದೆ ತೆಕ್ಕೊಳದ್ದೆ ಸುಧಾರ್ಸಲೆ ಎಡಿಯ.ಆದರೆ ಹವ್ಯಾಸಿಗೊ ಸಂಭಾವನೆಗೆ ಹೆಚ್ಚು ಆಶೆ ಮಾಡುಲಾಗ.ಪತ್ರಿಕೆಗೊ ವಾಣಿಜ್ಯ ದೃಷ್ಟಿಲಿಯೇ ಪ್ರಕಟ ಆವುತ್ತ ಕಾರಣ ಅವರಿಂದ ನಮ್ಮ ಬರಹಕ್ಕೆ ಸಂಭಾವನೆ ಸಿಕ್ಕಿರೆ ತೆಕ್ಕೊಂಬಲೆ ಅಡ್ಡಿಲ್ಲೆ.ಇದು ಎನ್ನ ಅಭಿಪ್ರಾಯ.
    ಒಪ್ಪಣ್ಣಾ,ಬೈಲಿಲಿ ಇಪ್ಪವು ಎಲ್ಲಾ ಆತ್ಮೀಯರು.ಯಾವುದೋ ಒಂದು ಮೈತ್ರಿ ಇಲ್ಲಿ ನಮ್ಮ ಸೆಳೆದ್ದು.ಇಲ್ಲಿ ಪೈಸೆಯ ವ್ಯವಹಾರ ಬೇಡ.
    ಲೇಖನ ಲಾಯ್ಕ ಆಯಿದು.

  24. ”ಎಲ್ಲದಕ್ಕೂ ಸಂಭಾವ ನೆ ನಿರಿಕ್ಷಿಸುವ ಮನೋ ಭಾವ” ವ ಒಪ್ಪಣ್ನ ಲಾಯಿಕಲ್ಲಿ ವಿವರಿಸಿದ್ದ.

  25. ಮನಸ್ಸಿ೦ಗೆ ಬೇಜಾರಾತು ಒಪ್ಪಣ್ಣ ಈ ಶುದ್ದಿ ಓದಿಯಪ್ಪಗ. ಸ೦ಭಾವನೆಗೆ ಬೇಕಾಗಿ ಶುದ್ದಿ ಹೇಳ್ತವರ ಶುದ್ದಿ ನವಗೆ ಬೇಕೋ??.. ಇಲ್ಲಿ ಶುದ್ದಿ ಬರೆತ್ತವರೆ, ಒಪ್ಪ ಕೊಡ್ತವರ ಹೆಚ್ಚಿನ ಜನರನ್ನೂ ಎನಗೆ ವಯುಕ್ತಿಕವಾಅಗಿ ಪರಿಚಯ ಇಲ್ಲೆ, ಆದರುದೆ, ಒ೦ದು ನಮುನೆ ನಿವೃತ್ತಿ ಇದ್ದರೆ ಹೇ೦ಗಾರು ಪುರುಸೊತ್ತು ಮಾಡಿ೦ಡು ಬೈಲಿ೦ಗೆ ಬಪ್ಪ ಕಾರಣ ಎಲ್ಲೋರ ಹತ್ರುದೆ ಒ೦ದು ಪ್ರೀತಿ, ನಮ್ಮವೇ ಹೇಳ್ತ ಒ೦ದು ಮಾನಸಿಕ ಸಾಮೀಪ್ಯ ನಾವರಡಿಯದ್ದೆ ಬಯಿ೦ದು. ಸ೦ಭಾವನೆಗೆ ಬೇಕಾಗಿ ಕೆಲಸ ಮಾಡ್ತವರ ಹತ್ರೆ, ಶುದ್ದಿ ಬರೆತ್ತವರ ಹತ್ರೆ, ಸುಧರಿಕೆ ಮಾಡ್ತವರ ಹತ್ರೆ, ಯಾವುದೇ ಕೆಲಸ ಮಾಡ್ತವರ ಹತ್ರೆ ನವಗೆ ಆ ಭಾವನೆ ಬಕ್ಕೊ?
    ಎಲ್ಲ ಸರಿ, ಒಪ್ಪಣ್ಣ೦ಗೆ ಅರ್ಹವಾದ ಸ೦ಭಾವನೆ ಕೊಡ್ಲೆಡಿಗೋ …. ಪೈಸೆಯ ಸ೦ಭಾವನೆ ಕೊಡ್ತರೆ ಎಷ್ಟು ಕೊಡೆಕು?!!!!!
    ಒಪ್ಪ೦ಗೊ ಒಪ್ಪಣ್ಣಾ..

    1. ಲಾಯಕ ಹೇಳಿದಿ ಗಣೇಶಣ್ಣ. ನವಗಂತೂ ಕುರ್ಚಿಲಿ ಕೂದು (ಸರಿ., ನಿಂಗೊ ನೆಲಕ್ಕಲ್ಲಿ ಕೂದು) ಸಮಯದ ಒಂದು ಕರ್ಚಿ ಮಾತ್ರ. ಅದಷ್ಟು ವಿಷಯ ಸಂಪತ್ತುಗಳ ಹೊತ್ತು ಈ ಬೈಲು ತಲೆ ನೆಗ್ಗಿ ನಿಂಬಲೆ ಒಪ್ಪಣ್ಣನ ಕರ್ಚಿ ನಮ್ಮ ಹಾಂಗೆ ಅಲ್ಲನ್ನೆ. ಸಮಯ, ಸಂಯಮ, ಸಹೃದಯ, ಶ್ರಮ, ರಜಾ ಧನ ಬಂಡವಾಳ ಎಲ್ಲವೂ ಒಪ್ಪಣ್ಣನ ತಲಗೇ ಭಾರ. ಇದಕ್ಕೆ ಅವಂಗೆ ಸಿಕ್ಕುವ ಸಂಭಾವನೆ ಹತ್ತು ಒಪ್ಪ. ಇದರ್ಲಿ ಸಿಕ್ಕುವ ಆತ್ಮತೃಪ್ತಿ ಬೇರೆ ಎಲ್ಲಿಯೂ, ಬೇರೆ ಆರಿಂಗೂ ಖಂಡಿತ ಸಿಕ್ಕ ಅಲ್ಲದೋ ಗಣೇಶಣ್ಣ. ಒಪ್ಪಣ್ಣನ ಎಡಬಲಲಿ ಅ.ಭಾವ, ಅಪ್ಪಚ್ಚಿ, ಅಕ್ಕ° … ಇವೆಲ್ಲರ ಸಹಕಾರ. ಹೀಂಗಿರ್ತರ ಆನೂ ಮಾಡ್ತೆ ಹೇಳಿ ಆರಾರು ಮಾಡ್ಳೆ ಹೆರಟ್ರೆ …!!!!(ಎಂತಾಯ್ದು ಹೇಳಿ ಹಲವರಿಂಗೆ ಗೊಂತಿದ್ದು).

  26. ‘ಸಂಭಾವನೆ, ಸಂ-ಭಾವನೆ’ ಹೃದಯಸ್ಪರ್ಶಿ ಆಯ್ದು. ಅಕ್ಕ ಭಾವ ಮಾವ ಅಣ್ಣ ತಮ್ಮ ಹೇಳಿ ಎಲ್ಲೋರ ಭಾವನೆಯ ತಟ್ಟಿದ ಈ ಶುದ್ಧಿಯ ಓದಿ ಆಳಕ್ಕಿಳುದ ನಮ್ಮ ಭಾವನೆಂದ ಹೆರ ಬರೆಕ್ಕಾರೆ ಚೂರು ಹೊತ್ತು ಹಿಡಿಗು. ಇಲ್ಲಿ ಇಪ್ಪಷ್ಟು , ಸಿಕ್ಕುವಷ್ಟು ಭಾವನೆ ಯಾವ ಪುಟಕ್ಕೆ ಹೋದರೂ ಸಿಕ್ಕ. ಇದೇ ಉತ್ಸಾಹಲ್ಲಿ, ಪ್ರೋತ್ಸಾಹಲ್ಲಿ ಬೈಲು ಹೆಚ್ಚೆಚ್ಚು ವಿಶಾಲವಾಗಿ ಕಂಗೊಳುಸಲಿ ಹೇಳಿ ಹೇಳುವದು – ‘ಚೆನ್ನೈವಾಣಿ’

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×