Oppanna.com

ಚಂದ್ರನ ಕಾಣೆಕ್ಕಾರೆ ಆಕಾಶ ನೋಡಿಯೇ ಆಯೆಕ್ಕೋ?

ಬರದೋರು :   ಒಪ್ಪಣ್ಣ    on   08/07/2016    5 ಒಪ್ಪಂಗೊ

ಸೂರಃ ಸೌಮ್ಯ ಸಿತಾವರೀ ರವಿಸುತೋ ಮಧ್ಯೋಪರೇತ್ವನ್ಯಥಾ… – ಹೇದು ಜೋಯಿಶಪ್ಪಚ್ಚಿ ಕವುಡೆ ತಿರುಗುಸುಲೆ ಸುರು ಮಾಡಿರೆ ಇಡೀ ಬ್ರಹ್ಮಾಂಡವೇ ಅವರ ಎದುರಿಪ್ಪ ಮಣೆಲಿ ಕಾಂಗು. ಸೂರ್ಯಚಂದ್ರಾದಿ ಗ್ರಹಂಗೊ, ಮೇಷವೃಷಭಾದಿ ರಾಶಿಗೊ, ಅಶ್ವಿನ್ಯಾದಿ ನಕ್ಷತ್ರಂಗೊ, ಪ್ರಭವಾದಿ ಸಂವತ್ಸರಂಗೊ – ಎಲ್ಲವೂ ನಾಲಗೆ ಕೊಡಿಲಿ ಬಕ್ಕು.
ನವಗಲ್ಲ – ಜೋಯಿಶಪ್ಪಚ್ಚಿಗೆ!;-)
ಬೈಲಕರೆ ಜೋಯಿಶಪ್ಪಚ್ಚಿಗೂ ಬಕ್ಕು, ಗೆಡ್ಡದ ಜೋಯಿಷರಿಂಗೂ ಬಕ್ಕು, ಕುಂಬ್ರಜೋಯಿಷರಿಂಗೂ ಬಕ್ಕು – ಒಬ್ಬಂಗೆ ಇಬ್ರಿಂಗೆ ಅಲ್ಲ – ಶಾಸ್ತ್ರೀಯವಾಗಿ ಕಲ್ತ ಎಲ್ಲ ಜ್ಯೋತಿಷಿಗೊಕ್ಕೂ ಈ ವಿವರಂಗೊ ಕೂದಲ್ಲಿಂಗೇ ಬಕ್ಕು!
ಕಲ್ತರೆ ನವಗೂ!

~

ನಮ್ಮ ಅಜ್ಜಂದ್ರ ಲೆಕ್ಕವೇ ಹಾಂಗೆ – ಪಂಚಾಂಗ ಬಿಡುಸಿ ಒಂದರಿ ನೋಡೆಕ್ಕು.
ಘಟಿ-ವಿಘಟಿ, ರಾಶಿ-ಭಾಗೆ-ಕಲೆ ಯ ವರೆಗೂ ಅತ್ಯಂತ ನಿಖರವಾದ ಲೆಕ್ಕಾಚಾರ…
ಇಂತಾ ದಿನ ಇಂತಾ ಗ್ರಹ ಇಂತಲ್ಲಿಯೇ ಇರ್ತು – ಇಂತಿಷ್ಟು ಹೊತ್ತಿಂಗೆ ಕಾಂಬಲೆ ಸುರು ಆವುತ್ತು – ಇಂತಾ ಹೊತ್ತಿಂಗೆ ಅಸ್ತ ಆವುತ್ತು – ಹೇಳ್ತದು ಅತ್ಯಂತ ನಿಖರವಾಗಿ ಬರದ್ದವು.
ಆರು ಬರದ್ದು? ಬರದೋರೂ ಜೋಯಿಷಪ್ಪಚ್ಚಿಯೇ.
ಈಗಾಣೋರಲ್ಲ – ಸಾವಿರಾರು ಒರಿಶ ಮೊದಲಾಣೋರು ಅಷ್ಟೇ ಉಳ್ಳೊ.
~
ಪ್ರತಿದಿನ ಹಗಲಿರುಳು ಕೂದು ಬರಿಗಣ್ಣಿಲೇ ಆಕಾಶ ನೋಡಿಂಡು ಒರಕ್ಕು ಕೆಟ್ಟೊಂಡು ಕೂಡುಸಿ ಗುಣುಸಿ ಗಣಿತ ಮಾಡಿ – ಆಕಾಶ ಕಾಯಂಗೊಕ್ಕೆ ಹೆಸರು ಕೊಟ್ಟು – ಅದರ ತಿರುಗುವಿಕೆ, ಬಾಗುವಿಕೆ ಇತ್ಯಾದಿಗಳ ಲೆಕ್ಕಾಚಾರ ಹಾಕಿ – ಮಾಡಿದ ಶ್ರಮ ಇದ್ದಲ್ಲದಾ – ಇದು ಸಾಧಾರ್ಣ ಮನುಷ್ಯರ ಅಳತೆ ಮೀರಿದ ಬಗೆ.
ಸಾಯನ-ನಿರಯನ:
ವಿಶ್ವ ದೊಡ್ಡ ಆವುತ್ತಾ ಇದ್ದಾಡ. ಈ ಒರಿಶ ಈ ದಿನ ಬಂದ ಜಾಗೆಲಿ ಭೂಮಿ ಬಪ್ಪ ಒರಿಶ ಇದೇ ದಿನ ಬತ್ತಿಲ್ಲೆ. ಅಲ್ಲಿಂದ ಸುಮಾರು ಬದಲಿರ್ತು.
ಭೂಮಿ ಒಂದೇ ಹೀಂಗೆ ಬದಲ್ತಾ ಇಪ್ಪದಲ್ಲ, ಒಟ್ಟಿಂಗೆ ಸೂರ್ಯನೂ, ಒಟ್ಟಿಂಗೆ ಇತರ ಗ್ರಹಂಗಳೂ, ಅಷ್ಟಪ್ಪಗ ಇವುಗಳ ಸ್ಥಾನವ ಆಧರುಸಿ ಇಪ್ಪ ಇತರ  ಸಹಸ್ರಾರು ವರ್ಷ ಮೊದಲಾಣ ಲೆಕ್ಕ ಇದಾ,
ಅದರ್ಲಿಯೂ – ಒಂದು ಸಾವಿರ ವರ್ಷ ಹಳೆಯ ಲೆಕ್ಕಾಚಾರಲ್ಲಿ ರಜಾ ವಿತ್ಯಾಸ ಬಂತು ಹೇಳ್ತ ಕಾರಣಕ್ಕೆ ಕೆಲವು ನೂರು ವರುಷ ಮೊದಲು ಅದಕ್ಕೆ “ಅಯನಾಂಶ” ಹೇಳ್ತ error correction factor ಸೇರ್ಸಿ ಲೆಕ್ಕಾಚಾರ ಮಾಡ್ಳೆ ಸುರುಮಾಡಿದವು. ಅದರ ಸೇರ್ಸಿದ ಮೇಲೆ – ಪುನಾ ಒಂದು ಸಾವಿರ ಒರಿಶ ಮೊದಲು ಆ ಕಾಲಕ್ಕೆ ಹೇಂಗೆ ನಿಖರವಾಗಿತ್ತೋ – ಈಗಾಣ ಕಾಲಕ್ಕೂ ಅಷ್ಟೇ ನಿಖರತೆ ಬಂತು. ಹಳತ್ತರ ಸೂರ್ಯಸಿದ್ಧಾಂತ ಹೇದವು, ಹೊಸತ್ತು ದೃಷ್ಟಿಗೆ ಕಾಣ್ತ ನಮುನೆ ಇಪ್ಪ ಕಾರಣ – ಅಯನಾಂಶ ಸೇರ್ಸಿದ ಕಾರಣ – ದೃಕ್ ಸಿದ್ಧಾಂತ ಹೇಳಿದವು.
ಈಗಾಣ ದೃಕ್ ಸಿದ್ಧಾಂತದ ಲೆಕ್ಕಾಚಾರ ಕಲ್ತ ಎಲ್ಲ ಜೋಯಿಷಪ್ಪಚ್ಚಿಯಕ್ಕಳೂ – ಗಣಿತ ಕೂಡುಸಿ ಕಳದು ಮಾಡಿರೆ – ಪ್ರತಿ ಆಕಾಶಕಾಯದ ಜಾಗೆಯ ತಿಳುಸುಗು.
~
ಇದೆಲ್ಲ ಈಗ ಎಂತಕೆ ನೆಂಪಾತು ಒಪ್ಪಣ್ಣಂಗೆ?
ಅದೇ – ನಮ್ಮ ಈದುಂಙಿಯ ಲೆಕ್ಕಾಚಾರದ ಬಗ್ಗೆ ಮಾತಾಡುವಾಗ ಬಂದದು.

ಗುಣಾಜೆಮಾಣಿ ಮೊನ್ನೆ ಊರಿಂಗೆ ಬರೆಕ್ಕಾತು, ಎಲ್ಲ ಸರಿ ಆಗಿದ್ದರೆ. ಮರದಿನ ಬೀರಂತಡ್ಕಲ್ಲಿ ಪೂಜೆ ಇದಾ – ಹಾಂಗೆ ಹೆರಟು ಬಪ್ಪ ಏರ್ಪಾಡು ಆಗಿದ್ದತ್ತು.
ಆದರೆ ಇನ್ನೇನೊ ಹೆರಡೆಕ್ಕು – ಹೇಳುವಾಗ ಹೊತ್ತೋಪಗ ಸರ್ಕಾರಂದ ಒಂದು ಕಾಗತ ಸಿಕ್ಕಿತ್ತಾಡ – ನಾಳೇಣ ರಜೆ ಎಲ್ಲ ಕೇನ್ಸಲು ಆಯಿದು, ಅದು ನಾಳ್ತಿಂಗೆ ಆಯಿದು – ಹೇದು.
ಮರದಿನ ಆಪೀಸುಗೊ ಇದ್ದರೆ, ಒಂದರಿ ವಿಧಾನಸೌದಕ್ಕೆ ಹೊಗದ್ದೆ ಕಳೀಯ ಇದಾ; ಹಾಂಗಾಗಿ ಬೆಂಗ್ಳೂರಿಲೇ ಬಾಕಿ!
ಅಯ್ಯನಮಂಡೇ – ಹೇದು ತಲೆಬೆಶಿ ಮಾಡಿಂಡು ಕೂದ್ಸೇ ಬಂತು ಬೆಂಗ್ಳೂರಿಲಿ.
ಬೀರಂತಡ್ಕದ ಹೋಳಿಗೆ ಗ್ರೇಶಿದ್ದೇ ಬಂತು.
ಊರಿಂಗೆ ಹೆರಡ್ತ ಏರ್ಪಾಡು ಬಾಕಿಯೇ.
ಮರದಿನ ಆಪೀಸಿಲಿ ಇಡೀ ಇದೇ ಚಿಂತೆ – ಛೇ! ಇದೆಂತ ಹೀಂಗಾತು ಹೇದು!
ಅಂಬಗ ಅವಕ್ಕೆ ಮೊದಲೇ ಲೆಕ್ಕ ಹಾಕಲೆ ಎಡಿತ್ತಿಲ್ಲೆಯೋ? ಓಟು ಮಾಂತ್ರ ಲೆಕ್ಕ ಹಾಕಲೆ ಎಡಿವದೋ – ಹೇದು ತುಂಬ ಬೇಜಾರು ಮಾಡಿಗೊಂಡ°.
~
ಅವರ ನೋಂಬು ಬಿಡೆಕ್ಕಾರೆ ಚಂದ್ರನ ಕಾಣೇಕು.
ಚಂದ್ರನ ಕಾಣೇಕಾರೆ ಹೊತ್ತೋಪಗ ಬಾಂಕಿಂಗೆ ಚಂದ್ರೋದಯ ಆಯೇಕು.
ಹಬ್ಬ ನಿಘಂಟಾಯೇಕಾರೆ ಮೊಯಿಲಾರಿಗೆ ಚಂದ್ರನ ಕಂಡತ್ತು – ಹೇಳ್ಸು ನಿಘಂಟಾಯೇಕು.
ಹಾಂಗೆ ಚಂದ್ರ ಕಾಣೇಕಾರೆ ಆಕಾಶ ನೋಡಿಯೇ ಆಗೆಡದೋ – ಹೇಳ್ತು ಅವರ ವಾದ
~
ಆದರೆ, ಜೋಯಿಶಪ್ಪಚ್ಚಿಯ ಹತ್ರೆ ಕೇಳಿರೆ – ಅದೇಂಗೆ ಅದಕ್ಕೆ ಅಮಾಸೆಲಿ ಚಂದ್ರನ ಕಂಡತ್ತು? – ಕೇಳುಗು ಕೂದಲ್ಲೇ ಗಳಿಗೆ ಲೆಕ್ಕ ಹಾಕಿ.
ಅಪ್ಪು, ಪಂಚಾಂಗಲ್ಲಿ ಅಮಾಸೆ ಇದ್ದರೂ – ಆಕಾಶಲ್ಲಿ ಚಂದ್ರನ ಕಾಣ್ತು ಅವಕ್ಕೆ.
ನಮ್ಮ ಹಿರಿಯರಿಂಗೆ – ಆಕಾಶದ ಗ್ರಹಂಗಳ ನೋಡ್ಳೆ ಆಕಾಶ ನೋಡೇಕು ಹೇಳಿ ಇಲ್ಲೆ, ನೋಡ್ತರೂ ಟೆಲಿಸ್ಕೋಪು ಮಡಗೆಕ್ಕು ಹೇಳಿ ಇಲ್ಲೆ. ಅದಿಲ್ಲದ್ದೇ ಸಾಧನೆ ಮಾಡಿದ್ದವು.
ಅದು ಹೇಂಗೆ?
ಅಂಬಗ ಅಜ್ಜಂದ್ರ ಲೆಕ್ಕ ಸರಿಯೋ? ಹಶುಹೊಟ್ಟೆಲಿ ಆಕಾಶ ನೋಡಿದ ಲೆಕ್ಕ ಸರಿಯೋ?
ಹೇಂಗೆ ನೋಡಿರೂ ಪಂಚಾಂಗವೇ ಸರಿ.
ಚಂದ್ರೋದಯ ಇಂತಿಷ್ಟು ಹೊತ್ತಿಂಗೆ ಹೇದು ಮೊದಲೇ ಪ್ರಿಂಟು ಮಾಡ್ತವು ಧಾರ್ಮಿಕ ಪಂಚಾಂಗಲ್ಲಿ – ಆ ಹೊತ್ತಿಂಗೆ ಹೋಗಿ ನೋಡಿರೇ ಚಂದ್ರನ ಕಾಂಗಷ್ಟೆ.
~
ಈಗಾಣದ್ದು, ಈ ಒರಿಷದ್ದು ಮಾಂತ್ರ ಅಲ್ಲ – ಇನ್ನು ಮುಂದಾಣ ಒಂದು ಸಾವಿರ ವರ್ಷದ್ದೂ ಲೆಕ್ಕ ಹಾಕುಲೆ ಎಡಿಗು ನಮ್ಮ ಅಜ್ಜಂದ್ರಿಂಗೆ.
ಇವಕ್ಕೆ ನೋಂಬು ಬಿಡುದು ಬುಧವಾರವೋ, ಗುರುವಾರವೋ ನಿಘಂಟಾಯೆಕ್ಕಾರೆ ಮಂಗಳವಾರ ಬಾರದ್ದೆ ಎಡಿತ್ತಿಲ್ಲೆ!

ಅದಕ್ಕೇ ಜೋಯಿಶಪ್ಪಚ್ಚಿ ಒಂದೊಂದರಿ ಕೇಳುದು – ಚಂದ್ರನ ನೋಡೇಕಾರೆ ಆಕಾಶವೇ ನೋಡಿ ಆಯೇಕೋ? ಪಂಚಾಂಗ ನೋಡಿರೆ ಗೊಂತಾವುತ್ತಿಲ್ಲೆಯೋ – ಹೇದು.
~
ಒಂದೊಪ್ಪ: ಪಾಡ್ಯದ ಚಂದ್ರನೂ ಸ್ಫುಟವಾಗಿ ಕಾಣೆಕ್ಕಾದರೆ ಸಾವಿರಾರು ವರ್ಷದ ಸಂಸ್ಕಾರದ ಬಲ ಬೇಕು. ಬಲ ಇಲ್ಲದ್ದವಂಗೆ ಕಣ್ಣಿಂಗೆ ಕಂಡದು ಚಂದ್ರ ಆಗಿ ಹೋಕು!

5 thoughts on “ಚಂದ್ರನ ಕಾಣೆಕ್ಕಾರೆ ಆಕಾಶ ನೋಡಿಯೇ ಆಯೆಕ್ಕೋ?

  1. ಅದೆ, ಮನ್ನೆ ಕೆಲೆಂಡರಿಲ್ಲಿ ರಜೆ ಇದ್ದರುದೆ, ಆಫೀಸಿಂಗೆ ಹೋಗಿ ಕೆಲಸ ಮಾಡಿದವರಲ್ಲಿ ಆನೂ ಒಬ್ಬ. ಕೆಲಸ ಮಾಡುವಗ ಒಪ್ಪಣ್ಣ ಹೇಳಿದ ಸತ್ಯಾಂಶ ಎನ್ನ ಮನಸ್ಸಿಂಗುದೆ ಬಯಿಂದು. ಪಂಚಾಂಗವ ನೋಡಿರೆ ಅಷ್ಟು ಕರಾರುವಾಕ್ಕಾಗಿ ಚಂದ್ರ ಏವಗ ಮೋರೆ ತೋರುಸುತ್ತ ಹೇಳಿ ಗೊಂತಾವ್ತಿಲ್ಲೆಯೊ. ಜೋತಿಷ್ಯವ ನಂಬಿರೆ ಹೇಂಗೆ? ಅದು ಈ ದೊಣೆಯಂಗವಕ್ಕೆ ಮೂಡನಂಬಿಕೆ ಅಲ್ಲದೊ ? ಮತ್ತೆ ನಂಬುತ್ತು ಹೇಂಗೆ?!!
    ಓಟು ಲೆಕ್ಕ ಹಾಕಲೆಡಿತ್ತವಕ್ಕೆ, ಈ ಲೆಕ್ಕಾಚಾರ ಅರಡಿತ್ತಿಲ್ಲೆಯೊ, ಲಾಯಕ್ ಹೇಳಿದೆ ಒಪ್ಪಣ್ಣಾ. ಅಂತೂ ಒಪ್ಪ ಶುದ್ದಿ.

  2. ಒಳ್ಳೆ ಶುದ್ದಿ. ಅಪ್ಪು ಅವು ಅಮವಾಸ್ಯೆ ದಿನ ಚಂದ್ರನ ಕಂಡತ್ತು ಹೇದೊಂಡು ಮರದಿನ ಹಬ್ಬ ಮಾಡಿದ್ಸ್ಸೂಇದ್ದಡ .ಹೆರಿಯೋವು ಹೇಳುದು ಕೇಳಿದ್ದೆ. ಎನ್ನ ಅಪ್ಪ ಹೇಳಿ ನೆಗೆಮಾಡುಗು “ಅಮವಾಸ್ಯೆ ದಿನ ಲೈಟು ಹಿಡುದು ನೋಡಿಯಪ್ಪಗ ಚಂದ್ರನ ಕಂಡತ್ತಾಯಿಕ್ಕು.”!!!.

  3. ಎಂತದೋ ಒಂದು ಲೆಕ್ಕ ..ಹೋಗಲಿ ಬಿಡಿ.ಅಂತೂ ರಜೆ ಹೇಳಿ ಹೋದವು ಅಲ್ಲೇ ಬಾಕಿ.ಹೆರಡದ್ದವು ಇಲ್ಲೇ ಬಾಕಿ !

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×