ಮಾಷ್ಟ್ರುಮಾವನ ಮಗಳ ಮದುವೆಯ ಲೆಕ್ಕಲ್ಲಿ ನಾವು ಬೆಷಿಯೋ ಬೆಷಿ. ಸುದಾರಿಕೆ ಹೇದರೆ ಹಾಂಗೇ ಅಲ್ದೋ, ಆಹಾರ, ನಿದ್ರೆ – ಯೇವದೂ ಇಲ್ಲದ್ದೆ ಇಳಿಯೆಕ್ಕಾವುತ್ತು.
ಹಾಂಗೆ ನಾವುದೇ ಅಂಬೆರ್ಪಿಲಿ ಇದ್ದಿದ್ದ ದಿನಂಗೊ ಕಳುದ ವಾರ ಹೇದರೆ.
ಮದುವೆ ಚೆಂದಲ್ಲಿ ಕಳಾತು – ಹೇಳುಸ್ಸು ಅದೇ ಸಂತೋಷ.
ಮದುವೆಗೆ ಒತ್ತಾಯದ ಹೇಳಿಕೆಯ ಬದ್ಧಂದ ಮದಲೇ ಹೇಯಿದ ಕಾರಣ ಬೈಲಿನೋರು ಮದುವೆಗೆ ಬಪ್ಪ ಏರ್ಪಾಡಿನ ಅವರಷ್ಟಕ್ಕೇ ಮಾಡಿತ್ತಿದ್ದವು. ಇದರೆಡಕ್ಕಿಲಿ, ಚೆನ್ನೈಭಾವ ಮದುವೆಗೆ ಬಪ್ಪಲೆ ಹೇದು ಟಿಗೇಟು ತೆಗದು ಮಡಗಿದ್ಸು ಬೈಲಿಲಿ ಶುದ್ದಿ ಆಯಿದು, ಅಂದರೂ ಅವು ಗ್ರೇಶಿದ್ದೇ ಒಂದು, ಆದ್ಸೇ ಒಂದು. ಅದೆಂತ್ಸರ?
~
ಭಾರತದ ಪೂರ್ವ ಕರಾವಳಿಲಿ ಬಂದ ಅನಿರೀಕ್ಷಿತ ಮಳೆ!
ಧಾರಾಧಾರೆ ಮಳೆ.
ಇಡೀ ಊರು ಚೆಂಡಿ.
ಚೆಂಡಿ ಮಾಂತ್ರ ಅಲ್ಲ ಬೊದುಳಿತ್ತು.
ಬೊದುಳಿದ್ದು ಮಾಂತ್ರ ಅಲ್ಲ, ತೇಲಿತ್ತು.
ಎಂತೆಲ್ಲ ತೇಲಿದ್ದು? ಕಾರು ಬೈಕ್ಕು ಇತರೇ ವಾಹನಂಗೊ, ಮನೆಯ ಪಾತ್ರೆ ಸಾಮಾನುಗೊ – ಎಲ್ಲವುದೇ.
ನೀರು ಇಳಿವನ್ನಾರ ಜೆನಸಂಚಾರ, ಊಟೋಪಚಾರ, ಸಂಪರ್ಕ – ಎಂತದೂ ಇಲ್ಲೆ.
ಶೋ!
ಈ ಮಳೆಂದಾಗಿಯೇ ಚೆನ್ನೈಬಾವಂಗೆ ಮದುವೆಗೆ ಬಪ್ಪಲೆ ಎಡಿಯದ್ದದು! ಚೇ!
~
ಮದುವೆ ಸಟ್ಟುಮುಡಿ ಎಲ್ಲ ಕಳುದು ಒಂದರಿ ಪುರುಸೊತ್ತಿಲಿ ಮಾತಾಡಿದವು ಚೆಬಾವ.
ಎಂತ ಬಾವೋ – ಮಳೆ ನೀರು ಹೇಂಗಿದ್ದು? – ಕೇಟೆ.
ಅಲ್ಯಾಣ ಚಿತ್ರಣ ಎಲ್ಲ ವಿವರ್ಸಿದವು, ತುಂಬ ಬೇಜಾರದ ಸಂಗತಿಗೊ!
ಕಷ್ಟ, ನಷ್ಟ, ಬೇನೆ, ಬೇಗುದಿಒ – ಎಲ್ಲವನ್ನೂ ವಿವರ್ಸಿದವು.
ಅದರೊಟ್ಟಿಂಗೆ, ಚೆನ್ನೈ ಲಿ ಬಂದ ನೆರೆನೀರಿಂದ ಪ್ರಕೃತಿ ಮನುಷ್ಯಂಗೆ ಕಲುಶಿದ ಪಾಠಂಗೊ ಯೇವದೆಲ್ಲ – ಹೇದೂ ವಿವರ್ಸಿದವು.
~
ಪ್ರಕೃತಿ ಮಾತೆಯೇ ಅಂತಿಮ:
ಮನುಷ್ಯರು ಅವರ ಅಭಿವ್ರುದ್ಧಿಗೋಸ್ಕರ ಭೂಮಿಯ ಬೇಕು ಬೇಕಾದ ಹಾಂಗೆ ಬದಲುಸಿಗೊಂಡು, ಬಳಸಿಗೊಂಡು ಇದ್ದವು. ಸ್ವಾಭಾವಿಕವಾಗಿ ಇದ್ದ ಕೆರೆಗಳ ಮುಚ್ಚಿ ಅಲ್ಲಿ ಮನೆಗಳ ಕಟ್ಟಿದವು, ತೋಡುಗಳ ಕಲ್ಲುಕಟ್ಟಿ ನೆಗ್ಗಿ ಅಲ್ಲಿ ಮಾರ್ಗ ಮಾಡಿದವು, ಪಳ್ಳಂಗಳ ಮುಚ್ಚಿ ಅಲ್ಲಿ ಪಾರ್ಕು ಮಾಡಿದವು. ಸಹನಾ ಧರಿತ್ರಿ – ಭೂಮಾತೆ ಸುಮ್ಮನೆ ಕೂದತ್ತು. ಆದರೆ – ಒಂದರಿ ಅದೆಲ್ಲದರ ಹಂತ ದಾಂಟಿ ಅಪ್ಪಗ – ಮತ್ತೆ ಕ್ಶಮೆ ಇಲ್ಲೆ, ಮತ್ತೆ ತಡೆತ್ತೂ ಇಲ್ಲೆ. ಒಂದೇ ದಿನ ಉತ್ತರ ಕೊಟ್ಟತ್ತು.
ಜೋರು ಮಳೆ ಬಂದಪ್ಪಗ ಸತ್ಯ ಗೊಂತಾತು – ಮನುಷ್ಯರು ಮಾಡಿದ ಬದಲಾವಣೆಗೊ ಎಲ್ಲವೂ ಕ್ಷಣಿಕ, ಪ್ರಕೃತಿ ಮಾತೆಯೇ ಅಂತಿಮ – ಹೇದು ಅರಡಿಗಾತು.
~
ಒಳ್ಳೆ ಮನಸ್ಸು ನೆರೆಮನೆಲಿಯೂ ಇರ್ತು:
ಹೀಂಗಿರ್ಸ ಮಾಹಾಮಾರಿಯ ನೀರು ಬಂದಪ್ಪಗ – ಊರಿಡೀ ನೀರು ನಿಲ್ಲುತ್ತು.
ಎರ್ಕಿದ ನೀರು ಇಳಿವಲೆ ಒಂದು ವಾರ ಆದರೂ ಬೇಕು. ನೀರು ನಿಂಬದು ಹೇದರೆ, ಮೂರು ನಾಲ್ಕು ಮಾಳಿಗೆ ಮನೆಲಿ – ಕೆಳಾಣ ಹಂತದ ಮನೆಗಳ ಒಳ ಎಲ್ಲ ನೀರೇ.
ಅಲ್ಲಿ ಅಡಿಗೆ ಕೋಣೆ, ಟೀವಿ ಕೋಣೆ, ಮನುಗುವ ಕೋಣೆ – ಎಲ್ಲವೂ ಕಂಬುಳದ ಗೆದ್ದೆಯ ಹಾಂಗೆ ಆಗಿತ್ತು.
ಮತ್ತೆಂತ ಮಾಡುಸ್ಸು, ಅನಿವಾರ್ಯವಾಗಿ ಕೆಳಾಣ ಮನೆಗಳಲ್ಲಿ ಇರ್ತೋರು ಅವರಿಂದಲೇ ಮೇಗಾಣ ಮನೆಗೊಕ್ಕೆ ಹೋಗಿ ವಾಸ ಮಾಡೆಕ್ಕಾಗಿ ಬಂತು.
ಮುನ್ನಾಣ ದಿನ ವರೆಗೂ – ನಮ್ಮ ನೆರೆಕರೆಲಿ ಆರಿದ್ದವು ಹೇದು ಗುರ್ತ ಇಲ್ಲದ್ದೆ ಆಗಿದ್ದತ್ತು. ಮೇಗಾಣ ಮನೆಯೋರಿಂಗೂ ಅಷ್ಟೇ, ಕೆಳಾಣ ಮನೆಯ ಜೆನಂಗಳ ಕಂಡು ಗೊಂತಿತ್ತೇ ವಿನಹ ಅದಾರು, ಎಲ್ಯಾಣೋರು ಅವರ ಸುಕದುಕ್ಖ ಏವದೂ ಗೊಂತಿತ್ತಿಲ್ಲೆ. ಆ ದಿನಂದಾಗಿ ಪರಸ್ಪರ ಪರಿಚಯ ಅಪ್ಪ ಹಾಂಗಾತು. ಒಂದೇ ಒಲೆಲಿ ಅಡಿಗೆ ಮಾಡ್ಲಾತು, ಒಂದೇ ಅಳಗೆ ಅಶನ ಉಂಬಲಾತು. ಕ್ರಮೇಣ ನೆರೆಕರೆಯೋರು ಹೇದರೆ ಒಳ್ಳೆಯೋರೂ ಇರ್ತವು – ಹೇದು ತಿಳಿವಳಿಕೆ ಬಪ್ಪಲಾತು.
~
ಅಹಂಕಾರ ಕ್ಷಣಿಕ:
ಮನುಷ್ಯನ ಅಸ್ತಿತ್ವ, ಅಹಂಭಾವ, ಹುಸಿ ಜಂಭ – ಇದೆಲ್ಲವೂ ಕ್ಷಣಿಕ. ಪ್ರಕೃತಿಯ ಎದುರು ಮನುಶ್ಯ ನಿರ್ಮಿತ ಏವ ವಸ್ತುಗೊಕ್ಕೆ ಬಾಳ್ತನ ಇಲ್ಲೆ. ನಿನ್ನೆ ಒರೆಂಗೆ ಕೋಟ್ಯಧೀಶ ಆಗಿದ್ದೋನು – ಮರದಿನ ಭಿಕಾರಿ. ನಿನ್ನೆ ವರೆಂಗೆ ಲಕ್ಷ ಮೌಲ್ಯದ ಕಾರಿಲಿ ಓಡಾಡಿದೋನು ಇದ್ದೋನು – ಮರದಿನ ನೆಡವಲೂ ಗೆತಿ ಇಲ್ಲೆ. ಸಾವಿರಗಟ್ಳೆ ರುಪಾಯಿಯ ಬೂಟ್ಸು ಹಾಕಿದೋನ ಬೂಟ್ಸು ಬೆಳ್ಳಕ್ಕೆ ಹೋಗಿತ್ತು, ಒಟ್ಟಿಂಗೆ ಅದರ ಮೆಟ್ಟಿ ನಿಂಬ ಅಹಂಕಾರವೂ. ಪೂರ್ತಿ ಹೈ ಕ್ಲಾಸು ಪೈಂಟು ಕೊಟ್ಟು ಮಾಡಿದ ಮನೆ – ಅಡಿಪಾಯವೇ ಒಳಿಯದ್ದೆ ಬಿದ್ದು ಹೋಗಿದ್ದತ್ತು. ದಿನಾ ವಿಮಾನಲ್ಲೇ ಓಡಾಡ್ತ ಭಾವಯ್ಯಂಗೆ ವಿಮಾನ ನಿಲ್ದಾಣವೇ ಮುಳುಗಿ ವಿಮಾನ ಇಲ್ಲದ್ದೆ ಆಗಿದ್ದತ್ತು.
ಎಲ್ಲ ಕೃತಕ ಅಹಂಕಾರವೂ ಕ್ಷಣಿಕ – ಯೇವದೂ ಶಾಶ್ವತ ಅಲ್ಲ. ನಾಲ್ಕು ದಿನದ ಜೀವನಲ್ಲಿ ಪರಸ್ಪರ ಸೌಹಾರ್ದವೇ ಅಂತಿಮ – ಹೇದು ನಾವು ಅರ್ತುಗೊಳೇಕು – ಹೇದವು ಚೆನ್ನೈಭಾವ.
~
ಪೈಶೆ-ನೋಟಿನ ತಿಂಬಲೆಡಿಯ:
ಓ ಆ ಭಾವಯ್ಯ ಕೋಟ್ಯಧಿಪತಿ.
ಒತ್ತೆಪೋಕನ ಹಾಂಗೆ ಸ್ವಂತ ಮನೆ ಮಾಡಿಗೊಂಡು ಓ ಆಚ ಹೊಡೆಲಿ ಬದ್ಕುದಾಡ. ಯೇವ ದಿನದ ಯೇವ ಹೊತ್ತಿಂಗೆ ಹೋದರೂ – ಲಕ್ಷ ರುಪಾಯಿಯ ನೋಟುಗೊ ಅವರ ಗೋಡ್ರೇಜಿಲಿ ಸದಾ ಇಕ್ಕು. ಮೂರು ಮಾಳಿಗೆ ಮನೆಯ ಕೆಳಾಣ ಹಂತಲ್ಲಿ ಇದ್ದಿದ್ದ ಅಡಿಗೆಕೋಣೆ, ಅಲ್ಲಿ ಹೇಮಾರ್ಸಿ ಮಡಗಿದ ಅಕ್ಕಿ-ಕಾಯಿ-ಕೊತ್ತಂಬರಿ-ಜೀರಿಗೆ ಎಲ್ಲವೂ ಇರುಳು ಉದಿ ಆಯೇಕಾರೆ ಬೆಳ್ಳಕ್ಕೆ ಹೋಯಿದು. ಬಾಕಿ ಒಳುದ್ದು ಬಾವಯ್ಯನ ಮನೆಲಿ ಇದ್ದಿದ್ದ ಪೈಶೆ ಮಾಂತ್ರ.
ಪೈಶೆ ಕೊಡ್ತೆ ಒಂದು ಹಿಡಿ ಅಶನ ಕೊಡು ಹೇದರೆ ಕೇಲುಲೂ ಜೆನ ಇಲ್ಲೆ. ತಪ್ಪಲೂ ಜೆನ ಇಲ್ಲೆ.
ಅದರಿಂದ – ಓ ಅತ್ಲಾಗಿ ಎಲ್ಲೋರ ಒಟ್ಟಿಂಗೆ ಪಾಪದೋರ ಹಾಂಗೆ ಬದ್ಕಿದ ಇನ್ನೊಬ್ಬ ಭಾವಯ್ಯ – ಹಂಚಿ ತಿಂದುಗೊಂಡು ಆರಾಮಲ್ಲಿ ಇದ್ದಿದ್ದನಾಡ.
~
ಬಣ್ಣದ ನಾಯಕರು – ನಿಜವಾದ ನಾಯಕರು ಬೇರೆಬೇರೆ:
ನಾವು ಟೀವಿಲಿ ಒಂದಷ್ಟು ಖಾನುಗೊ, ಕಪೂರುಗೊ ನಾಯಕಂಗಳ ನಿತ್ಯವೂ ಕಾಣ್ತು. ಅವರ ಪಿಚ್ಚರುಗೊ, ಹೊಸ ಸಿನೆಮಂಗೊ ಎಲ್ಲವನ್ನೂ ನಾವು ಅನುಭವಿಸುತ್ತು. ಬೆಳ್ಳಿ ಪರದೆಲಿ ಯೇವದೋ ಕೂಸಿಂಗೆ ಅಪ್ಪ ಅನ್ಯಾಯವ ತಡವಲೆ ನೂರು ಜೆನರ ಒಟ್ಟಿಂಗೆ ಲಡಾಯಿ ಕಟ್ಟುತ್ತವು. ಯೇಅವ್ದೋ ಊರಿಂಗೆ ಅಪ್ಪ ತೊಂದರೆ ಒಳಿಶಲೆ ವಿದೇಶಕ್ಕೆ ಹೋವುಸ್ಸರ ತಡದು ನಿಲ್ಲುತ್ತವು.
ಆದರೆ – ಅದೆಲ್ಲ ಪರದೆಯ ಎದುರು ಮಾಂತ್ರ. ಪರದೆಯ ಹಿಂದೆ ಅವರದ್ದು ಬೇರೆಯೇ ಆಟ.
ಪೋಕಾಲವೂ ಇಲ್ಲೆ. ನಾಯಕತ್ವದ ಲವ ಲೇಷವೂ ಇರ್ತಿಲ್ಲೆ ಅವಕ್ಕೆ.
ನಿಜವಾದ ನಾಯಕಂಗೊ ಆರು ಹೇದರೆ – ಮಾಳಿಗೆ ಮನೆಲಿ ಕೆಳ ಇಳಿವಲೆ ಎಡಿಯದ್ದೆ ಬಾಕಿ ಆದ ಅಜ್ಜಜ್ಜಿಯ ಜಾಣ್ಮೆಲಿ, ನಿಧಾನವಾಗಿ ಜಾಗ್ರತೆಲಿ ಇಳುಶಿ ತಂದ ಸ್ವಯಂಸೇವಕರು, ಸೈನಿಕರು ನಿಜವಾದ ನಾಯಕಂಗೊ.
~
ಇನ್ನೂ ಹಲವು ಸಂಗತಿಗೊ ಇದೇ ನಮುನೆ ಬಂತು. ಚೆನ್ನೈಭಾವ ವಿವರ್ಸಿಗೊಂಡು ಹೋದಾಂಗೆ ಅಪ್ಪನ್ನೇ’ದು ಕಂಡತ್ತು.
ನಿಜವಾಗಿಯೂ ಇದು ಮನುಕುಲಕ್ಕೇ ದೊಡ್ಡ ಪಾಠ. ನಾವೆಲ್ಲೋರುದೇ ಒಟ್ಟಾಗಿ ಅರ್ತುಗೊಂಡು ಒಂದಾಗಿ ಮುಂದುವರಿಯೆಕ್ಕು. ಎಂಕಿಂಚ, ಎನ್ನದು ಹೀಂಗೆ, ಎನಗೆ ಎನ್ನದೇ ಧರ್ಮ, ಎನ್ನದೇ ನಂಬಿಕೆ – ಇತ್ಯಾದಿಗಳ ಹೇಳಿಗೊಂಡು ಜಾತಿ-ಜಾತಿಯ ನೆಡುಕೆ, ಧರ್ಮ-ಧರ್ಮದ ನೆಡುಕೆ ತೊಂದರೆಗಳ ತಂದು ಮನುಷ್ಯ ಸಮುದಾಯವ, ತನ್ಮೂಲಕ ಇಡೀ ಲೋಕವ ಹಾಳು ಮಾಡ್ಳೆ ಹೆರಡುವ ದುಷ್ಟ ಶೆಗ್ತಿಗಳ ವಿರುದ್ಧ ಒಟ್ಟಾಗಿ ನಾವು ಹೋರಾಡೆಕ್ಕು. ಎಂತ ಹೇಳ್ತಿ?
ಒಂದೊಪ್ಪ: ಪ್ರಕೃತಿ ನಮ್ಮ ಒಳಿಶೆಕ್ಕಾರೆ ನಾವು ಪ್ರಕೃತಿಯ ಒಳಿಶೆಕ್ಕು. ಅಲ್ದೋ?
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
ಯಬ್ಬ, ಚೆನ್ನೈಯ ಅವಸ್ಥೆ ಆರಿಂಗು ಬೇಡಪ್ಪ. ಚೆನ್ನೈ ಭಾವಯ್ಯನ ವರದಿ ಕೇಳಿಯಪ್ಪಗಳೇ ಚಳಿ ಕೂದತ್ತು. ಪ್ರಕೃತಿಯ ವಿರುದ್ಧ ನೆಡವಲೆ ಆರಿಂಗೂ ಎಡಿಯ. ಒಪ್ಪಣ್ಣನ ಸಕಾಲಿಕ ಶುದ್ದಿಗೆ ಒಂದೊಪ್ಪ.
Good morning, my name is Emmanuel Godwin, no matter very important I would like to discuss with you, because of the confidentiality of the subject, please contact me back directly on this my private email address provided on this message here (emmanuelgodwin113@gmail.com) . that will allow me to explain it to you.
ಪ್ರಕೃತಿಲಿ ನಾವೂ ಒಂದು ಹೇಳ್ಸರ ಅರ್ತುಗೊಳ್ಳದ್ದೆ ಪ್ರಕೃತಿಯ ಪೊರ್ಳು ಮಾಡ್ತೆ ಹೇದು ವಿಕೃತಗೊಳುಸಿರೆ ಪಕೃತಿ ಒಂದು ಕ್ಷಣ ತನ್ನ ಆಟವ ತೋರುಸಿರೆ ನಾವು ಬಾಯಿ ಬಡ್ಕೊಂಡು ಕೊಣಿಯಕ್ಕಷ್ಟೇ ಹೇಳ್ಸು ಮನುಷ್ಯ ಆಗಿಪ್ಪವಕ್ಕೆ ಅರ್ತ ಆತು. ಒಂದಿನಿಕ್ಕೆ ನಡದ ಘಟನೆ ಅದೆಷ್ಟು ದಿನ ಪ್ರಭಾವ ತೋರಿಸಿತ್ತೋ , ಅದರ ಸರಿಹೊಂದುಸುಲೆ ಅದೆಷ್ಟು ಸಮಯ ಬೇಕಾವ್ತೋ ಎಂತದೇ ಆದರೂ ಹೋದ್ದು ಹೋದ್ದೇ ಅಲ್ಲದ! ಕಾಲೇ ವರ್ಷತು ಪರ್ಜನ್ಯಃ…. ಹೇಳ್ಸು ಅಕ್ಷರಶಃ ಸತ್ಯವಾಗ್ಯೊಂಡರಲಿ ಹೇಳ್ಸೇ ನಮ್ಮ ನಿತ್ಯ ಪ್ರಾರ್ಥನೆ.