ಹೋಪ್ಪ!!
ಒಂದು ತಿಂಗಳು ಕಳುದು ಮೊನ್ನೆ ಓಟಿನ ಲೆಕ್ಕಾಚಾರ ಅಪ್ಪನ್ನಾರ ಅದೊಂದು ಕಾದುನೋಡ್ಳೆ ಬಾಕಿಒಳುದಿತ್ತು.
ದೊಡ್ಡಬಾವ° ಮದಲೇ ಹೇಳಿಗೊಂಡಿತ್ತಿದ್ದ° ‘ಇನ್ನೂ ಸಮಯ ಬಯಿಂದಿಲ್ಲೆ; ಕುದ್ಕ° ಕಾದ ಹಾಂಗೆ ಕಾದು ನೋಡ್ಳೆ ಎಂತೂ ಇಲ್ಲೆ, ಉಪವೀತಿ-ಪ್ರಾಚೀನಾವೀತಿ ಹೇಳಿ ತಿತಿದಿನ ಬಟ್ಟಮಾವ° ಹೇಳಿದ ನಮುನೆ ಅಕ್ಕಷ್ಟೆ’ ಹೇಳಿಗೊಂಡು.
ಆದರೂ ಗುಣಾಜೆಕುಂಞಿ ಕಾದೇ ಕಾದ°.
ಕೊನೆಗೂ ಹಾಂಗೇ ಆತು! ಅಕ್ಕಿ ತಿಂತ ಜೆನ ಹೋಗಿ ಉಮಿ ತಿಂತ ಜೆನ ಬಂತು ಹೇಳ್ತರ ಅಡ್ಕತ್ತಿಮಾರುಮಾವನೂ ಒಪ್ಪುತ್ತವು!
ಗುಣಾಜೆಮಾಣಿ ನಿರೀಕ್ಷೆಮಡಗಿದ ಎರಡೂ ದಿಕ್ಕೆ ಮಾಪುಳೆಗಳದ್ದೇ ಕಾರ್ಬಾರು ಆವುತ್ತಿನ್ನು.
‘ಚೇ! ಕರ್ನಾಟಕಲ್ಲಿ ವಿಧಾನ ಸೌದ ಒರೆಂಗೆ ಪ್ರಭಾವಳಿ ಮಡಗಿರೂ, ಊರಿಲಿ ಸರಿ ಮಾಡ್ಳೆ ಎಡಿತ್ತಿಲ್ಲೆನ್ನೆ’ – ಹೇಳ್ತದು ಗುಣಾಜೆಮಾಣಿಯ ಬೇಜಾರು.
ಎಂತ ಮಾಡ್ತದು, ಎಲ್ಲದಕ್ಕೂ ಸಮಯ ಬರಳಿ, ಮತ್ತೆಯೇ ಸಮ ಅಕ್ಕು – ಹೇಳ್ತದು ಒಂದು ಆಶಾಭಾವ.
~
ಸಾರಡಿಲಿ ಒರಿಶಾವಧಿಪೂಜೆ ಕಳಾತಲ್ಲದೋ ಕಳುದವಾರ, ಅಲ್ಲಿ ಡೀಕೆಶಾಂಬಾವ ಸಿಕ್ಕಿ ಹೇಳುವಗಳೇ ಒಪ್ಪಣ್ಣಂಗೆ ಗೊಂತಾದ್ದು – ಗುಣಾಜೆಮಾಣಿ ಊರಿಲಿದ್ದ°, ಪುರುಸೋತಿಲಿದ್ದ° – ಹೇಳಿಗೊಂಡು.
ಊರಿಲಿದ್ದರೆ ಬೈಲಿಲಿ ಅವನ ಶುದ್ದಿ ಬಾರದ್ದೆ ಇರ – ಹೇಳಿ ಗ್ರೇಶಿಗೊಂಡೆ ಒಂದರಿ.
ಪೂಜೆ ಚೆಂದಲ್ಲಿ ಕಳಾತು, ಗಟ್ಟಿಗೆ ಹೊಟ್ಟೆತುಂಬ ಉಂಡುದೇ ಆತು. ಹೊತ್ತೋಪಾಣ ಛಾಯ ಎರಡುಗ್ಳಾಸು ಕುಡುದು ತರವಾಡುಮನೆ ಕರೆಲಿ ಆಗಿಂಡು ನಡಕ್ಕೊಂಡು, ಪಾಡಿಗೆದ್ದೆ ಕಟ್ಟಪುಣಿ ಹಿಡುದು ಬೈಲಿಂಗಿಳುದು, ಮದ್ಯಾನ್ನದ ಹೋಳಿಗೆ ಕರಗುಸುತ್ತ ಲೆಕ್ಕಲ್ಲಿ ಉದಾಕೆ ಅಜ್ಜಕಾನಬಾವನತ್ರೆ ಮಾತಾಡ್ಳೆ ನೆಡದೆ.
ಅವನ ಕಾಂಬಲೆ ಅಭಾವ ಅಪ್ಪದು ವಿಶೇಷ ಏನಲ್ಲ, ಆದರೆ ಈ ಸರ್ತಿ ಸಿಕ್ಕಿದ°.
ಮನೆ ಜೆಗಿಲಿ ಹತ್ತಿದ ಕೂಡ್ಳೇ ಮೇಜಿನ ಮೇಗೆ ಒಂದು ಬೆಳೀಕವರು ಕಂಡತ್ತು, ಗುಣಾಜೆಮಾಣಿಯ ಹೆಸರು ಬರದು ಮಡಿಕ್ಕೊಂಡದು.
ಹೇಳಿಕೆಕಾಗತ ಅಲ್ಲ, ಅಂಬಗ ‘ಇದೆಂತರ?’ ಕೇಳಿದ್ದಕ್ಕೆ ಬಿಡುಸಿ ತೋರುಸಿದ°. ಇದು ಗುಣಾಜೆಕುಂಞಿಗೆ ಇಪ್ಪದು, ಆರದ್ದೋ ಇಮಾನು ಟಿಕೇಟಡ- ಪ್ರಿಂಟುಮಾಡಿ ಮಡುಗಲೆ ಹೇಳಿದ, ಈಗ ಬತ್ತನಡ ತೆಕ್ಕೊಂಡು ಹೋಪಲೆ – ಹೇಳಿದ°.
ಅಕೇರಿಯಾಣ ಮಾತು ತಲೆಒಳಂಗೆ ಹೊಕ್ಕತ್ತು. ಗುಣಾಜೆಕುಂಞಿ ಈಗ ಬತ್ತನಾಡ!
ಈಗ ಬತ್ತೆ ಹೇಳಿರೆ ಈಗ ಬಾರ° ಅವ°. ಅದು ಬೈಲಿಂಗೇ ಅರಡಿಗು.
ಅವನ ವಾಚಿಲಿ ಒಂದು ಮುಳ್ಳು ಜಾಸ್ತಿ ಇದ್ದೋ ತೋರ್ತು. ಅಯಿದು ನಿಮಿಶ ಹೇಳಿರೆ ಅದು ಅರ್ದ ಗಂಟೆ ಅಪ್ಪದೂ ಇದ್ದು. ಒಂದು ಗಂಟೆ ಹೇಳಿರೆ ಒಂದು ದಿನ ಅಪ್ಪದೂ ಇದ್ದು ಒಂದೊಂದರಿ!
ಬತ್ತೆ ಹೇಳಿರೆ ಬಂದೇ ಬತ್ತ ಮಾಂತ್ರ, ಅಷ್ಟೊಂದು ಪ್ರೀತಿ – ನಿಯತ್ತು!!
ಅದಿರಳಿ. 😉
~
ಓಟಿನ ಸಮಯ ಕಳಿವನ್ನಾರ ಗುಣಾಜೆಕುಂಞಿ ಬೈಲಿಂಗೆ ಸಿಕ್ಕದ್ದರಲ್ಲಿ ದೊಡ್ಡ ವಿಶೇಷ ಏನಿಲ್ಲೆ.
ಓಟಿನ ಗವುಜಿ ಕಳುದು ಮತ್ತೆ ಸಿಕ್ಕಿಪ್ಪಗ ನೂರಾರು ಹೊಸ ಶುದ್ದಿ ಅವನ ಕೈಂದ ಸಿಕ್ಕುದರ್ಲಿಯೂ ದೊಡ್ಡ ವಿಶಯ ಏನಿಲ್ಲೆ!
ಈ ಸರ್ತಿಯೂ ಹಾಂಗೇ ಆವುತ್ತು, ಓಟಿನ ಗವುಜಿ ಸುರು ಆದ ಲಾಗಾಯ್ತಿಂದ, ಇಂದ್ರಾಣ ಒರೆಗಾಣ ಸುಮಾರು ಹತ್ತು ಹಲವು ವಿಚಾರಂಗೊ ಮಾತಾಡ್ಳೆ ಇಂದು ಸಿಕ್ಕಿಯೇ ಬಿಡ್ತ° ಹಾಂಗಾರೆ, ಹೇಳಿ ಅನುಸಿತ್ತು.
ಜೆಗಿಲಿಲಿ ನೀಟಂಪ ಕೂದಾತು, ಕೂದಲ್ಲಿಗೇ ಕಾಲುನೀಡಿ ಮನುಗಿ ಆತು, ಒಂದು ತಲೆಕೊಂಬು ತಪ್ಪಲೆ ಹೇಳಿದೆ ಅಜ್ಜಕಾನ ಬಾವನತ್ರೆ.
ಜೆಂಬ್ರದೂಟ ಉಂಡು ಬೆಶಿಲಿಂಗೆ ಮನುಗಿದಲ್ಲಿಗೇ ಸೆಕಗೆ ಒರಕ್ಕು ತೂಗಲೆ ಸುರು ಆತು!
~
ಕಪ್ಪುಚೋಲಿಯ ತಲೆಕೊಂಬು ತಂದುಕೊಟ್ಟದೊಂದು ನೆಂಪಿದ್ದು ಒಪ್ಪಣ್ಣಂಗೆ. ಮತ್ತೆ ಎಚ್ಚರಿಗೆ ಆದ್ದು ಗುಣಾಜೆಮಾಣಿಯ ಕಪ್ಪುಬೈಕ್ಕಿನ ಇರುಂಟಿ ಹೋರ್ನು ಅರೆದ್ದುವಗಳೇ!
ಅಪ್ಪು, ಸಣ್ಣ ಒಂದು ಒರಕ್ಕು ಹಿಡುದು, ಏರಿ, ಬಿರಿವಲಪ್ಪಗ ಗುಣಾಜೆಕುಂಞಿ ಬಂದೇ ಬಿಟ್ಟ°!
ಬೈಕ್ಕಿನ ಬುರುಬುರು ನಿಂದು, ಮನೆ ಒಳಂಗೆ ಎತ್ತುವ ಹೊತ್ತು ಒಪ್ಪಣ್ಣಂಗೆ ಮನುಗಿದಲ್ಲಿಂದ ಎದ್ದು ತಲೆಕೊಂಬು ಬೆನ್ನಿಂಗೆ ಮಡಗಿ ಗೋಡೆಗೆರಗಿ ಕಾಲುನೀಡಿ ಕೂಪಲೆ ಸರೀ ಆತು.
ಸೀತ ಒಳ ಬಂದೋನಿಂಗೆ ಅಜ್ಜಕಾನ ಬಾವನ ಕೈಲಿ ಆ ಕವರು ತೆಕ್ಕೊಂಡು ಬೇಗಿಲಿ ಹಾಕಿಂಡ ಮತ್ತೆಯೇ ಸಮಾದಾನ ಆದ್ದು.
ಆ ಸಮಾದಾನಲ್ಲಿ ಒಂದರಿ ಅತ್ತಿತ್ತೆ ತಿರುಗುವಗ ಒಪ್ಪಣ್ಣನ ಕಂಡತ್ತು ‘ಹೋ, ಇಂದೆಲ್ಲಿಗೂ ಹೋಯಿದಿಲ್ಲೆಯೋ’ ಕೇಳಿದ ಕೊಶಾಲಿಂಗೆ! ಒಂದರಿಯಾಣದ್ದು ಆಗಿ ಬಂದದು – ಹೇದೆ. 😉
ಅವಂಗೆ ಹೆರ ಎಷ್ಟು ಅಂಬೆರ್ಪು ಇದ್ದರೂ, ಚೆಂಙಾಯಿಗಳ ಮನಗೆ ಬಂದಿಪ್ಪಾಗ ಅಂಬೆರ್ಪು ತೋರುಸುತ್ತನಿಲ್ಲೆ.
ಹಾಂಗೆ, ಜೆಗಿಲಿಲಿಯೇ ಕಾಲುನೀಡಿ ಕೂದುಗೊಂಡ. ಒಂದರಿಯೇ ಬೆಶಿಬೆಶಿಯೇ ಅನುಸಿದ್ದು ಕುಂಞಿ ಬೆಶಿಲಿಂಗೆ ಬಂದ ಕಾರಣವೇ ಆಯಿಕ್ಕಟ್ಟೆ!
ಒಂದು ಗ್ಲಾಸು ನೀರು ಕುಡುದು ಮಾತಾಡ್ಳೆ ಸುರುಮಾಡಿದೋನು, ಮೂರ್ಸಂದೆ ಆಗಿ ಹೆರಡುವನ್ನಾರವೂ ಮಾತಾಡಿಗೊಂಡೇ ಇತ್ತಿದ್ದ°.
ಅದರ್ಲಿ ಓಟಿನ ವಿಶಯ ಮಾಂತ್ರ ಅಲ್ಲದ್ದೆ, ಇನ್ನೂ ಸುಮಾರು ವಿಶಯ ಬಯಿಂದು. ಅದರ್ಲಿ ಒಂದಂತೂ ಒಪ್ಪಣ್ಣಂಗೆ ತುಂಬ ನಾಟಿತ್ತು. ಅದೆಂತರ!?
~
ನೇರವಾಗಿ ಅದರ ಶುದ್ದಿ ಹೇಳುವ ಮೊದಲು ಅದಕ್ಕೆ ಸಮ್ಮಂದಪಟ್ಟದು ರೆಜಾ ಮಾತಾಡುವೊ°, ಆಗದೋ?
ಇದಾ, ಬೈಲಿಲಿ ಹಲವು ದೇವಸ್ಥಾನಂಗೊ ಇದ್ದು. ಗೊಂತಿಪ್ಪದೇ.
ನಮ್ಮ ಶ್ರದ್ಧಾಕೇಂದ್ರಂಗೊ ಆಗಿಂಡು, ತಲೆತಲಾಂತರಂದ ಭಕ್ತಿ ಭಾವನೆಯ ಬೆಳೆಸಿಂಡು, ಧಾರ್ಮಿಕ ಕೇಂದ್ರ ಆಗಿಂಡು ಇದ್ದು.
ಆಸ್ತಿಕ ಮನುಶ್ಶರಿಂಗೆ ಆಶೀರ್ವಾದ ಕೊಟ್ಟೊಂಡು, ಬದ್ಕಿಂಗೆ ನಂಬಿಕೆ – ಚೈತನ್ಯ ಕೊಟ್ಟುಗೊಂಡು, ಸನ್ಮಾರ್ಗ-ಸದಾಚಾರಲ್ಲಿ ಬೆಳವಲೆ ಪ್ರೇರೇಪಣೆ ಕೊಟ್ಟುಗೊಂಡು ಇದ್ದು. ಅಲ್ಲದೋ?
ಅದು ಆಸ್ತಿಕರ ನಂಬಿಕೆ.
ಮಾನವತ್ವದ ಮೇಗೆ ಒಂದು ಅಮಿತ ಶೆಗ್ತಿ ನೆಡೆತ್ತು – ಹೇಳ್ತ ನಂಬಿಕೆಯೇ ಜೀವನ ಪರಿಯಂತ ಇರ್ತು. ಆ ಅಮಿತ ಶೆಗ್ತಿ ಎಲ್ಲಿಯೇ ಹೋದರೂ ಇದ್ದೇ ಇರ್ತು.
ಗುಡುಗು-ಸೆಡ್ಳು-ಮಳೆ ಬರುಸುತ್ತು ಆ ಪ್ರಕೃತಿಮಾತೆ ಆಗಿಕ್ಕು, ಬೆಣಚ್ಚು ಕೊಡ್ತ ಸೂರ್ಯ ಆಗಿಕ್ಕು, ಕಾರ್ಗಾಣ ಕಸ್ತಲೆಲಿ ಬೆಣಚ್ಚಿನ ಉಂಡೆಯ ನಮುನೆ ಕಂಡು ಹುಲುಮಾನವರ ಹೆದರಿಕೆ ನೀಗುಸುತ್ತ ಚಂದ್ರ ಆಗಿಕ್ಕು, ಅಲ್ಲದ್ದರೆ ಯೇವದಾರೊಂದು ನೈಸರ್ಗಿಕ ಮೂಲವೇ ಆಗಿಕ್ಕು, ಅದೇವದೂ ಅಲ್ಲದ್ದರೆ, ಯೇವದಾರೊಂದು ರಾಜನೋ, ಚಕ್ರಾಧಿಪತಿಯೋ, ನಾಯಕನೋ – ಮಣ್ಣ ಆಗಿರ್ತು – ಒಂದಲ್ಲ ಒಂದು ರೂಪಲ್ಲೆ ಅದು ಇದ್ದೇ ಇರ್ತು.
ಮುಂದೆ ಅದುವೇ ದೈವತ್ವ ಪಡಕ್ಕೊಳ್ತು. ಅಲ್ಲದೋ?
ಜೀವನಲ್ಲಿ ಎಂತಾರು ಕಷ್ಟ ಬಂದರೆ, ನಷ್ಟ ಉಂಟಾದರೆ ‘ಎಂತಕೆ ಹೀಂಗೆ ಮಾಡಿದೆ ಚಾಮೀ’ – ಹೇಳಿ ಬೇಡಿಗೊಂಬದು ನಮ್ಮ ಕ್ರಮ.
ಆದ್ದದು ನಮ್ಮಂದಾಗ್ಗಿಯೇ ಆದರೂ, ದೇವರು ಮಾಡಿದ್ದು- ಹೇಳಿ ತಿಳ್ಕೊಂಬದು ಆಸ್ತಿಕರ ಕ್ರಮ. ಎಲ್ಲೋರುದೇ ಸಹಬಾಳ್ವೆಲಿಪ್ಪ ಸುಲಲಿತ ಸನಾತನತೆಯ ಜೀವನ ನೆಡವಲೆ ಅದುದೇ ಒಂದು ಕಾರಣ!
ಇದು ಆಸ್ತಿಕರ ಕ್ರಮ ಆದರೆ, ದೇವರೇ ಇಲ್ಲೆ, ಎಂತ ಕಾಣ್ತೋ ಅದೇ ಜೀವನ – ಹೇಳ್ತ ಇನ್ನೊಂದು ವರ್ಗ ಇದ್ದು.
ನಾಸ್ತಿಕತೆ ಹೇಳಿ ಹೆಸರಡ.
ದೇವರಿಲ್ಲೆ, ಧರ್ಮ ಇಲ್ಲೆ, ಎಂತ ಇದ್ದರೂ ಜೀವನ ನಮ್ಮ ಕೈಲೇ ಇದ್ದು. ಇಂದ್ರಾಣ ದಿನ ನಮ್ಮದು. ಇಂದಿಂಗೋಸ್ಕರ ಬದ್ಕೇಕು – ಹೇಳ್ತದು ಇದರ ಮುಖ್ಯ ತತ್ವ.
ವಿಶೇಷ ಎಂತರ ಹೇಳಿರೆ, ಇದಕ್ಕುದೇ ನಮ್ಮದರ್ಲಿ ಅವಕಾಶ ಇದ್ದಾಡ. ಈ ವಾದವ ಆರಂಭ ಮಾಡಿದ ಒಬ್ಬ ಋಷಿಯೇ ಇದ್ದನಾಡ, ಚಾರ್ವಾಕಮುನಿ ಹೇಳಿ ಹೆಸರಡ ಅವಂದು!
~
ಹಾಂಗೆ ನೋಡಿರೆ, ದೇವರು ಹೇಳಿರೆ ನಮ್ಮೊಳಾಣ ಜಾಗೃತಪ್ರಜ್ಞೆಯ ಕೇಂದ್ರೀಕೃತ ಅಂಶ. ಅಲ್ಲದೋ?
ಇದರ ಅನುಭವಿಸಲೆ ಕೆಲವು ಜೆನಕ್ಕೆ ದೇವಸ್ಥಾನಂಗೊ ಬೇಕಾವುತ್ತು, ಕೆಲವು ಜೆನಕ್ಕೆ ಬೇಕಾಗ.
ನಮ್ಮ ಹಾಂಗಿರ್ತೋರಿಂಗೆ ನಿಷ್ಟೆಲಿ ದೇವಸ್ಥಾನಲ್ಲಿ ಗುಂಡದೊಳ ಮೂರ್ತಿ ಕಂಡಪ್ಪಗ ಆ ಅನುಭವ ಅಕ್ಕು, ಅತವಾ ಬಾಯಮ್ಮಂಗೆ ನೆತ್ತರರಿವ ಯೇಶುವಿನ ಪಟ ಕಂಡಪ್ಪಗ ಅನುಭವ ಅಕ್ಕು.
ಗುರುಗೊಕ್ಕೆ, ಋಷಿಮುನಿಗೊಕ್ಕೆ ಅದೇವದೂ ಬೇಕಾಗ, ಕೂದಲ್ಲಿಯೇ ಅದರ ಅನುಭವ ಮಾಡಿಗೊಂಗು.
ಅಂತೂ ದೈವತ್ವ ಕಾಂಬಲೆ ನಿಷ್ಟೆ ಇದ್ದರೆ ಸಾಕು.
~
ಇದೆಲ್ಲ ಎಂತಕೆ ನೆಂಪಾತು – ಹೇಳಿತ್ತುಕಂಡ್ರೆ, ಗುಣಾಜೆಕುಂಞಿ ಮೊನ್ನೆ ಮಾತಾಡುವಗ ಆ ವಿಶಯ ಹೇಳಿದ°..
‘ನಮ್ಮ ಬೈಲಿನ ಒಂದು ಪ್ರಸಿದ್ಧ ದೇವಸ್ಥಾನಲ್ಲಿ ಕಮ್ಮಿನಿಷ್ಟೆಯ ವಾಸನೆ ಬಪ್ಪಲೆ ಸುರು ಆಯಿದಡ’ ಹೇಳಿಗೊಂಡು! ದೇವಸ್ಥಾನಲ್ಲಿ ದೇವರ ಚಾಕಿರಿ ಮಾಡಿಗೊಂಡಿದ್ದೋರೇ, ಕಮ್ಮಿನಿಷ್ಟೆಯ ಹಬ್ಬುಸುಲೆ ಹೆರಟುಗೊಂಡಿದ್ದವಡ!!
ಎಲ್ಲ ರಾಜಕೀಯಂದಲೂ ಹೆದರೇಕಾದ, ಅತ್ಯಂತ ಗಂಭೀರ ವಿಚಾರ ಇದು – ಹೇಳಿದ° ಕುಂಞಿ!
~
ಹೇಳಿದಾಂಗೆ, ಈ ಕಮ್ಮಿನಿಷ್ಟೆಗೆ ಹಾಂಗೆಂತಕೆ ಹೆಸರು?
ಆ ತತ್ವದ ಮೂಲ ಸಿದ್ಧಾಂತವೇ ಹಾಂಗೆಡ. ಆ ಸಿದ್ಧಾಂತಕ್ಕೆ ಭಾರತದ ಬಗ್ಗೆ, ಭಾರತೀಯತೆಯ ಬಗ್ಗೆ ಕಮ್ಮಿನಿಷ್ಟೆ. ಬದಲಾಗಿ ರಷ್ಯಾ, ಚೀನಾದ ಮೇಗೆಯೇ ಹೆಚ್ಚು ನಿಷ್ಟೆ ಇದಾ!
ದೇವರು-ಧರ್ಮ ಹೇಳಿತ್ತುಕಂಡ್ರೆ ಬಡವರಿಂಗೆ ಶ್ರೀಮಂತರು ಕುಡುಶುತ್ತ ಅಪೀಮು. ಆ ಅಮಲಿಲಿ ಜೆನಂಗೊ ಜೀವನ ಮಾಡ್ತದು.
ಬಡವರ ಸುಲಿಗೆ ಮಾಡ್ಳೆ ಇಪ್ಪ ಸಾಧನ ಧರ್ಮ. ಅದರ ಒಡೇಕು, ಮೆಟ್ಟೇಕು, ಧಿಕ್ಕರಿಸೇಕು. ಕಾರ್ಮಿಕರು – ಕೂಲಿಗಾರರು ಒಂದಾಯೇಕು-ಇತ್ಯಾದಿ ಇತ್ಯಾದಿ.
ದೇವರ, ದೇವಸ್ಥಾನವ ನಂಬಿ ಸನ್ಮಾರ್ಗಲ್ಲಿ ಚೆಂದಕೆ ಜೀವನ ನೆಡೆಶುತ್ತ ಜೆನಂಗಳಲ್ಲಿ ದೊಡ್ಡೋರುದೇ ಇದ್ದವು, ಪಾಪದೋರುದೇ
ಇದ್ದವು. ಪೈಸೆಬೇಧ, ಜಾತಿಬೇಧ, ಪ್ರಾಯ ಬೇಧ ಮರದು ಒಟ್ಟಾಗಿ ಕೆಲಸ ಮಾಡಿ ಸಮಾಜಲ್ಲಿ ಒಂದಾವುತ್ತರೆ ಅದು ದೇವಸ್ಥಾನಂಗಳಿಂದಾಗಿ – ಇದು ಎಲ್ಲೋರಿಂಗೂ ಅರಡಿಗು.
ಆದರೆ, ಅದೆಲ್ಲ ಕಮ್ಮಿನಿಷ್ಟೆಯೋರಿಂಗೆ ಅರಡಿಯ! ಅವಕ್ಕೆ ಏನಿದ್ದರೂ ಆರೋ ತಲಗೆ ತುಂಬಿದ – ನಾಕು ತಲೆಮಾರು ಹಿಂದಾಣ ತತ್ವ ಸಿದ್ಧಾಂತಂಗೊ ಗೊಂತಿಕ್ಕು, ಅಷ್ಟೆ.
ಇನ್ನೂ ಒಂದು ತಮಾಶೆ ಎಂತರ ಹೇಳಿರೆ, ಈ ಕಮ್ಮಿನಿಷ್ಟೆಯೋರು ದೇವಸ್ಥಾನಕ್ಕೆ ಬಂದು, ಭಕ್ತಿಲಿ ಪ್ರಸಾದ ತೆಕ್ಕೊಂಡು ಒಳ್ಳೆದುಮಾಡು ದೇವರೇ – ಹೇಳಿ ನಮಸ್ಕಾರ ಮಾಡಿಗೊಂಡು ಮನೆಗೆ ಹೋವುತ್ತವು!
ಪಾಪ, ಅವಕ್ಕೆಲ್ಲ ದೇವರ ನಂಬುತ್ತೆ ಹೇಳಿ ಹೇಳುಲೂ ಅಲ್ಲ, ಹೇಳದ್ದೆ ಇಪ್ಪಲೂ ಅಲ್ಲ!
ಕೇರಳಲ್ಲಿ ಅಂತೂ, ದೇವಸ್ಥಾನಂಗಳಿಂದಾಗಿಯೇ ಆದಾಯ ಬಂದು ರಾಜ್ಯ ಅಭಿವುರ್ದಿ ಆವುತ್ತು, ಆ ಮೂಲಕ ನೂರಾರು ಪಳ್ಳಿ ಕಟ್ಳಾವುತ್ತು ಹೇಳ್ತದು ಅವಕ್ಕೆ ತಲಗೆ ಹೋವುತ್ತಿಲ್ಲೆ.
ರಾಜಕೀಯಕ್ಕೋಸ್ಕರ ಮಾಂತ್ರ ಕಮ್ಮಿನಿಷ್ಟೆ ಮಡಗಿ, ಆಂತರ್ಯಲ್ಲಿ ದೈವಭಗ್ತಿ ಮಡಿಕ್ಕೊಂಡು ತಿರುಗುತ್ತದು ಇವರ ಹೇಸಿಗೆ!
~
ಈ ಕಮ್ಮಿನಿಷ್ಟೆಯೋರು ಅವರಷ್ಟಕೆ ಈ ತತ್ವವ ಹೇಳಿಗೊಂಡು ತಿರುಗಿದ್ದರೆ ಈ ಶುದ್ದಿ ಹೇಳೇಕಾದ ಅಗತ್ಯ ಇರ್ತಿತಿಲ್ಲೆ.
ಆದರೆ, ನಮ್ಮ ಬೈಲ ದೇವಸ್ಥಾನಲ್ಲಿ – ದೇವರ ಚಾಕಿರಿಗೆ ಇದ್ದೊಂಡು, ದೇವರ ಆಶೀರ್ವಾದಲ್ಲೇ ಬದ್ಕಿಗೊಂಡು, ದೇವರ ದಕ್ಷಿಣೆಲೇ ಜೀವನ ತೆಗಕ್ಕೊಂಡು, ನಿಷ್ಟೆಲಿ ಇರೆಕ್ಕಾದ ಜಾಗೆಲಿ ಕಮ್ಮಿನಿಷ್ಟೆಯ ಪ್ರಚಾರ ಮಾಡಿಗೊಂಡು ಇದ್ದರೆ ಹೇಂಗಕ್ಕು?
– ಇದುವೇ ಕುಂಞಿಯ ಪಿಸುರಿಂಗೆ ಕಾರಣ.
ನ್ಯಾಯವಾದ ಕಮ್ಮಿನಿಷ್ಟೆ ಆದರೆ, ಜೀವನಲ್ಲಿ ಅಳವಡುಸಿಗೊಂಡು, ಅವರಷ್ಟಕೇ ಬದ್ಕಿರೆ ಏನೂ ತೊಂದರೆ ಇತ್ತಿಲ್ಲೆ, ಸಾವಿರಾರು ಜೆನ ಗವುರವಲ್ಲಿ ಹಾಂಗೆ ಬದ್ಕಿ ಹೋಯಿದವು.
ಆದರೆ ಧರ್ಮಕೇಂದ್ರಲ್ಲೇ ಉಂಡುಗೊಂಡು, ಅದರೊಳವೇ ಜೀವನ ತೆಗಕ್ಕೊಂಡು ಇಪ್ಪ ಈ ಜೆನ ಹೋದೋರತ್ರೆ, ಬಂದೋರತ್ರೆ ಕಮ್ಮಿನಿಷ್ಟೆಯ ಪ್ರಚಾರ ಮಾಡ್ತದು ಎಷ್ಟು ಸರಿ?
ಬರೇ ಬಾಯಿಮಾತಿನ ಪ್ರಚಾರ ಮಾಂತ್ರ ಅಲ್ಲಾಡ, ಬದಲಾಗಿ ಕಾರವಲ್ಲಿಲಿ ಮತ್ತೆ ಬೇರೆ ಕೆಲವು ಪೇಪರುಗಳಲ್ಲಿ ಎಡ್ವಟೇಸು ಕೊಡ್ತವಡ! ಅಂಬಗ ಇವರ ಅಶನಕ್ಕೆ ಮರಿಯಾದಿ ಇದ್ದೋ – ಕೇಳಿದ ಕುಂಞಿ!
ಹಾಂಗೆ ಮೇಗಂದ ಮೇಗೆ ಒಂದೇ ಸರ್ತಿ ಪ್ರಶ್ನೆ ಕೇಳಿದ್ದಕ್ಕೆ ಒಪ್ಪಣ್ಣನ ಕೈಲಿ ಉತ್ತರ ಇತ್ತಿಲ್ಲೆ!
ಮತ್ತೆ ನಿಧಾನಕ್ಕೆ ಆಲೋಚನೆ ಮಾಡುವಗ ಅದರ ಗಂಭೀರತೆ ಅರ್ತ ಆತು.
~
ನಿಷ್ಟೆಲಿ ನೆಡಕ್ಕೊಂಡು ಬಂದ ಕಾರ್ಯ – ದೇವಸ್ಥಾನದ ಚಾಕಿರಿಗೊ.
ಅಲ್ಲಿಪ್ಪ ಒಬ್ಬೊಬ್ಬನೂ – ತಾನು ಮಾಡ್ತಾ ಇಪ್ಪದು ದೇವ ಕಾರ್ಯ ಹೇಳ್ತರ ಮನಗಂಡು, ಯೇವ ಮಹಾಶೆಗ್ತಿಯ ಕಾರ್ಯಕೈಂಕರ್ಯಕ್ಕಾಗಿ ದುಡಿತ್ತೋ, ಅಂತಹಾ ಅಮಿತ ಶೆಗ್ತಿಯ ಸೇವೆ ಮಾಡ್ತಾ ಇಪ್ಪದು ಹೇಳ್ತರ ತಿಳ್ಕೊಂಡು, ತನ್ಮೂಲಕವಾಗಿ ಶ್ರದ್ಧಾಭಗ್ತಿಲಿ ನೆಡೆತ್ತಲ್ಲದೋ – ನಿಷ್ಟೆ.
ಎಡಿಗಾರೆ ಆ ಜಾಗೆಲಿ ನಿಂದೊಂಡು ಕೆಲಸ ಮಾಡೇಕು, ಒತ್ತಾಯ ಏನಿಲ್ಲೆ. ಅಲ್ಲದ್ದರೆ, ಆ ನಿಷ್ಟೆ ಹಿತ ಆಗದ್ರೆ ಕೆಲಸ ಬಿಟ್ಟು ಮನೆಲಿ ಕೂದುಗೊಳೇಕು. ಅದು ಬಿಟ್ಟು, ಕೆಲಸ ಬೇಕು, ಆ ದೇವರ ದಕ್ಷಿಣೆ ಬೇಕು, ಆದರೆ ನಿಷ್ಟೆ ಬೇಡ – ಹೇಳಿರೆ ಎಂತ ಮಾಡೇಕು ಅಂಬಗ, ನೋಡೊ – ಕೇಳಿದ ಗುಣಾಜೆಕುಂಞಿ.
ಅಲ್ಲದ್ದರುದೇ, ಅವ ಹೇಳಿದ್ದು ಸರಿ ಇದ್ದು ಹೇಳಿ ಅನುಸಿತ್ತು ಒಪ್ಪಣ್ಣಂಗೆ!
~
ಸೌಕರ್ಯ ದೇವರದ್ದು ಬೇಕು. ಆಂತರ್ಯಲ್ಲಿ ದೇವರ ನಂಬಿಯೇ ಬದ್ಕುದು, ಆದರೂ ತೋರಿಕೆಗೆ ನಿಷ್ಟೆ ಇಲ್ಲದ್ದ ಕಮ್ಮಿನಿಷ್ಟೆಯ ಅಳವಡುಸಿಗೊಂಬದು ಆತ್ಮಕ್ಕೆ ಮಾಡ್ತ ದ್ರೋಹ ಅಲ್ಲದೋ?
ಉದರ ನಿಮಿತ್ತಮ್ ಬಹುಕೃತ ವೇಷಮ್- ಹೇಳಿ ಬದ್ಕಿರೆ ಯೇವ ತತ್ವ ಸಿದ್ಧಾಂತ ಒಲಿಗು ನವಗೆ? ಅಲ್ಲದೋ?
ಇಂತೋರನ್ನೂ ಕಾಣ್ತು, ನಮ್ಮ ನಿಷ್ಠೆಯ ದೇವಸ್ಥಾನಲ್ಲಿ! ಎಂತ ಹೇಳ್ತಿ?
ಒಂದೊಪ್ಪ: ಆತ್ಮಲ್ಲಿ ನಿಷ್ಟೆ ಇದ್ದರೆ ಪರಮಾತ್ಮನಲ್ಲಿಯೂ ನಿಷ್ಟೆ ಇರ್ತು. ಆತ್ಮಲ್ಲೇ ಕಮ್ಮಿ ನಿಷ್ಟೆ ಆದರೆ ಪರಮಾತ್ಮನ ಮೇಗೆಯೂ ಕಮ್ಮಿ ನಿಷ್ಟೆ ಆವುತ್ತು.
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
ಒಪ್ಪಣ್ಣನ ವಾರವಾರದ ಒಪ್ಪವೂ ಅದಕ್ಕೆ ಬಪ್ಪ ಒಪ್ಪವೂ ಒಪ್ಪಣ್ಣ ಓಪಾಸು ಕೊಡುವ ಒಪ್ಪಂಗಳೂ ಒಂದರ ಒಂದು ಮೀರುಸುತ್ತ ಹಾಂಗೆ ಇದ್ದು. ಗುಣಾಜೆಕುಂಜಿಯ ಸಮಾಧಾನ ಮಾಡಿಕ್ಕು ಈ ಸರ್ತಿ ಎರಡನೆಯ ಸ್ಥಾನ ಆದರೂ ಇದ್ದು ಹೇಳಿಗೊಂಡು… ಕಮ್ಮಿಕೋಟೆ ಒಳುದ್ದು ಈ ಒಂದು ರಾಜ್ಯಲ್ಲಿ ಮಾಂತ್ರ ಹೇಳಿರೆ ಅದೂ ಒಂದು ಸಮಾಧಾನವೇ ಅಲ್ಲದೋ!
niste to the god is inspired with expanding knowledge in sanathana dharma. havyaka’s as name sujest are chanters of vydic hymns on yajna As said in bagavad gita daily course of life including swasochwasa is bootha yajna. god is immortal as said in purusha sooktha ” mareechinam padamichhanthi vedasaa”
Braminism is to aquire knowledge of bramhan not to adopt suddachara in ones life. It is clearly mentioned in manu dharma to have his food by practising agriculture and have wealth which is sufficient for three months living not as practice of us for three generations.
Lure of wealth and asatisfection of attaining that is like ? when all including mahaswamis and jagadgurus are behind it rather than thinking of vaidic propagation, how this go wrong a small priest having small salary deviates just attitude not in function.
ಮೊಳೆಯಾರದ ಸಂತೋಷಣ್ಣಂಗೆ ನಮಸ್ಕಾರ ಇದ್ದು.
ನಿಂಗಳ ಒಪ್ಪ ಕಂಡು ಕೊಶಿ ಆತು.
ಆದರೆ, ಒಪ್ಪಣ್ಣಂಗೆ ಇಂಗ್ಳೀಶು ಅರಡಿಯದ್ದ ಕಾರಣ ಓದಲೆ ಎಡಿಯದ್ದೆ ಏನೂ ಅರ್ತ ಆಯಿದಿಲ್ಲೆ.
ಇದೇ ಅರ್ತ ಬಪ್ಪ ಹಾಂಗೆ ನಮ್ಮ ಅಬ್ಬೆ ಬಾಶೆಲಿ ಒಂದು ಒಪ್ಪ ಕೊಡ್ತಿರೋ?
ನಿಂಗೊ ಎಲ್ಲಿದ್ದಿ? ಎಂತ ಮಾಡ್ತಾ ಇದ್ದಿ? ಬೈಲಿಂಗೆ ಗುರ್ತಮಾಡಿಗೊಳ್ಳಿ.
ಹರೇರಾಮ…
sooper aidu oppanno.
kammi nisteyavakke devaru kammiye odagugaste.
anthu deshava lagaadi tegavale sakanne.
ondoppa laikaidu.good luck..
ತುಂಬ ಸಮಯಕಳುದು ಒಪ್ಪ ಕಂಡು ಕೊಶಿ ಆತು.
ಎಂತ ಅಂಬೆರ್ಪು ಇತ್ತೋ ಹೇಂಗೆ? 😉
ಹ್ಮ್, ಕಮ್ಮಿನಿಷ್ಟೆಯೋರ ಶುದ್ದಿಕೇಳಿ ಕಳಕಳಿ ತೋರುಸಿದ್ದು ಕೊಶಿ ಆತು.
ಹರೇರಾಮ
ಯೆ ಬಾವ
ಗುಣಾಜೆ ಮಾಣಿ ಅಲ್ಲಿಂದ ಹೆರಟವನ ಶುದ್ದಿಯೆ ಇಲ್ಲೆಪ್ಪಾ! ಯೆಡ್ಯುರಪ್ಪನೊಟ್ಟಿಂಗೆ ತೀರ್ಥಯಾತ್ರೆ ಹೋದನೋ ಹೇಂಗೆ!
ಮೊನ್ನೆ ರಾಯಚೂರಿಲಿ ಯಾತ್ರೆಗೆ ಬೈಂದ ಹೇಳಿ ಎನ್ನ ದೋಸ್ತಿ ಹೇಳಿದ! ಮಂತ್ರಾಲಯಕ್ಕೋ ಮಣ್ಣೊ ಹೋದ್ದಾಯಿಕ್ಕು!
ಅಂಬಗ ಮಾಣಿ ದಕ್ಷಿಣಕನ್ನಡದ ದೇವಸ್ಥಾನದ ಪೈಸೆಯ ಹಜ್‍ಗೆ ಕೊಡ್ತದರ ಹೇಳಿದ್ದು ಮರದತ್ತೋ ಬರವಲೆ!
ಯಮ್ಮಬ್ಬ!
ಸೂರ್ಯ ಯೇವ ಹೊಡೆಂದ ಬಂದದಪ್ಪ, ಚಂಡಿಗಡಂದಲೋ??
ಅಭಾವ ಆಗಿದ್ದ ಒಪ್ಪ ಕಂಡತ್ತು..! ಒಪ್ಪಣ್ಣಂಗೆ ಕೊಶಿ ಆತು..
{ದಕ್ಷಿಣಕನ್ನಡದ ದೇವಸ್ಥಾನದ ಪೈಸೆಯ ಹಜ್‍ಗೆ ಕೊಡ್ತದರ ಹೇಳಿದ್ದು }
ಹೇಳಿದಾಂಗೆ, ಇದರ ನೆಂಪುಮಾಡಿದ್ದು ಒಳ್ಳೆದಾತು.
ನಿಧಾನಕ್ಕೆ ಹೇಳುವೊ° ಬೈಲಿಂಗೆ!
ಕಮ್ಮಿನಿಷ್ಟೆಯೋರು ದೇವಸ್ಥಾನಕ್ಕೆ ಬಂದು, ಭಕ್ತಿಲಿ ಪ್ರಸಾದ ತೆಕ್ಕೊಂಡು ಒಳ್ಳೆದುಮಾಡು ದೇವರೇ – ಹೇಳಿ ನಮಸ್ಕಾರ ಮಾಡಿಗೊಂಡು ಮನೆಗೆ ಹೋವುತ್ತವು! ಸರಿಯಾಗಿ ಹೇಳಿದೆ ಒಪ್ಪಣ್ಣ. ನಿಜಾ ಹೇಳ್ತರೆ, ಇವಕ್ಕೆಲ್ಲ ಏವ ತತ್ವವುದೆ ಇಲ್ಲೆ. ಎಲ್ಲ ಮೇಲಾಣವು ಹೇಳಿದ್ದರ ಕಣ್ಣು ಮುಚ್ಚಿ, ಒಳ್ಳೆದೊ ಕೆಟ್ಟದೋ ಹೇಳಿ ಅರ್ಥ ಮಾಡ್ಯೊಳದ್ದೆ ಅನುಸರಿಸುತ್ತ ನೀತಿ ಇವರದ್ದು.
ಕಮ್ಮಿ ನಿಷ್ಟೆ – ಪದ ಪ್ರಯೋಗ ಲಾಯಕಾಯಿದು. ದೇವಸ್ಥಾನದ ಒಳಂಗುದೆ ಹೀಂಗಿರುತ್ತ ಕಮ್ಮಿ ನಿಷ್ಟಾ ದುಷ್ಟಂಗೊ ವಕ್ರಿಸುತ್ತದು ಕೇಳಿ ಬೇಜಾರಾತು.
ಮಾವಾ..
ಕಮ್ಮಿ ನಿಷ್ಟೆ ಮಡಿಕ್ಕೊಂಡುದೇ ದೇವಸ್ಥಾನಕ್ಕೆ ಬಂದದಿದಾ, ಹಾಂಗೆ ನಮ್ಮ ಗುಣಾಜೆಕುಂಞಿಗೆ ಪಿಚುಲು ಬಪ್ಪಲೆ ಕಾರಣ ಆತು! 😉
ಬೈಲಿಲಿ ಒಂದು ಶುದ್ದಿಯೂ ಆತಿದಾ..
ಹತ್ತು ಜೆನಕ್ಕೆ ಗೊಂತಪ್ಪಲೂ ಕಾರಣ ಆತು.
ಓಟು ಮುಗುದರೂ ಗುಣಾಜೆಮಾಣಿ ಎಂತ ಶುದ್ದಿ ಇಲ್ಲೆ ಹೇಳಿ ಯೋಚನೆ ಮಾಡ್ಯೊಂಡಿತ್ತಿದ್ದೆ! ಸಂಗತಿ ಹೀಂಗೋ ಅಂಬಾಗ! ಅವಂಗೆ ಪಿಸುರು ಬಂದದು ಸಹಜವೇ…. ಓದುತ್ತ ಹೋದ ಹಾಂಗೆ ಈ ಸಜ್ಜನರ ವೇಷಲ್ಲಿ , ದೇವರ ಸೇವೆಯ ಹೆಸರ್ಲಿ ಉಂಡ ಮನೆಗೆ ಎರಡು ಬಗೆವ ಕೆಲ್ಸ ಮಾಡ್ತೋರ ಬಗ್ಗೆ ಎನಗೂ ರಜ ಪಿಸುರು ಬಂತು.. ಇನ್ನು ಗುಣಾಜೆಮಾಣಿಗೆ ಕೋಪ ಬಾರದ್ದಿಕ್ಕೋ.. ನಮ್ಮ ಸಂಸ್ಕೃತಿಯ ಒಳಿಶಿ ಬೆಳೆಶುವಲ್ಲಿ ದೇವಸ್ಥಾನಂಗಳ ಪಾತ್ರ ಮಹತ್ವದ್ದು.. ಮನಸ್ಸಿನೊಳ ಇಪ್ಪ ಭಕ್ತಿಯ ಹೆರೆ ತೋರ್ಸಿಗೊಂಡ್ರೆ ಮರ್ಯಾದೆ ಹೋವುತ್ತೋ ಅಂಬಗ! ಆಶ್ಚರ್ಯ ಆತು.. ಹೃದಯಲ್ಲಿ ಭಕ್ತಿಯ ಲವಲೇಶವೂ ಇಲ್ಲದ್ದ್ರೂ ದೊಡ್ಡ ವಿಭೂತಿ ನಾಮ ಹಾಕಿ ಶಾಲು ಹೊದಕ್ಕೊಂಡು ದೇವಸ್ಥಾನಂಗಳಲ್ಲಿ ದೊಡ್ಡ ಸ್ಥಾನವ ಅಲಂಕರಿಸಿ ಊರಿಲಿ ಮಿಂಚುವ ಜೆನಂಗಳ ಕಂಡಿದೆ. ಆದರೆ ಒಪ್ಪಣ್ಣನ ಲೇಖನ ನೋಡಿಯಪ್ಪದ್ದೆ “ಹೀಗೂ ಉಂಟೆ!!” ಹೇಳಿ ಅನ್ಸಿಬಿಟ್ಟತ್ತು! ಆರತ್ರೆ ಕಣ್ಣುಮುಚ್ಹಾಲೆ ಆಡಿರೂ ದೇವರತ್ರೆ ಕಣ್ಣುಮುಚ್ಚಾಲೆ ಆಡ್ಲೆಡಿಯನ್ನೆ.. ಹಿರಿಯರು ’ಆತ್ಮವಂಚನೆ’ ಹೇಳಿದ್ದು ಇದನ್ನೇ ಆಗಿರೆಕ್ಕು.. ದೇವರು ಒಳ್ಳೆ ಬುದ್ದಿ ಕೊಡಲ್ಲಿ, ಕಮ್ಮಿನಿಷ್ಠೆಂದ ಸಾಧಾರಣನಿಷ್ಠೆಗಾದರೂ ಎತ್ಸಲ್ಲಿ ಹೇಳಿ ಆಶಿಸುತ್ತೆ!!
ಬಲ್ನಾಡುಮಾಣೀ..
ಅಲ್ಲದ್ದರೂ ಒಂದೊಂದರಿ ಅಲ್ಯಾಣ ಹಣೆವಾರ ಕಂಡರೆ “ಹೀಗೂ ಉಂಠೇ” ಹೇಳಿ ಅನುಸುತ್ತು.
ದೇವರನ್ನೇ ನಂಬದ್ದೋರು ಆಳ್ವಿಕೆ ಮಾಡ್ತದು ದೇವರ ರಾಜ್ಯವ. ಅಲ್ಯಾಣ ಮೂಲ ಆದಾಯ ದೇವಸ್ಥಾನಂಗೊ!
ಹೇಂಗೆ?
ಗುಣಾಜೆಕುಂಞಿಗೆ ಕೋಪ ಬಾರದ್ದೆ ಒಳಿಗೋ? ಏ°?
ನೀನೇ ಹೇಳು..
ಲೇಖನ ತುಂಬಾ ಒಪ್ಪ ಆಯಿದು…
ಧನ್ಯವಾದಂಗೊ! 🙂
ಒಪ್ಪಣ್ಣ,
ಈ ಕಮ್ಮಿ ನಿಷ್ಠರು ಸರಿಯಾದ ನಿಷ್ಟೆ ತೋರಿಸಿದ್ದು ಯಾವುದಕ್ಕಾದರೂ ಇದ್ದಾ? ಅದು ರಾಷ್ಟ್ರಕ್ಕೆ ಆದಿಕ್ಕು, ಅವರ ತತ್ವಕ್ಕೇ ಆದಿಕ್ಕು (ಹಾಂಗೊಂದು ಇದ್ದರೆ) ಇಲ್ಲದ್ದರೆ ದೈವ ದೇವರ ಬಗ್ಗೆಯೇ ಆದಿಕ್ಕು.
ತಾನೂ ಕೆಡ್ತು, ವನವನ್ನೂ ಕೆಡಿಸಿತ್ತು ಹೇಳುವದು ಇವಕ್ಕೆ ಹೇಳಿಯೇ ಬರದ ಗಾದೆ ಹಾಂಗೆ ಇದ್ದು.
ರಾಜ್ಯ ಎಲ್ಲಾ ರೀತಿಲಿಯೂ ಹಿಂದೆ ಒಳಿವಲೆ ಇವರ ಈ ನೀತಿಯೇ ಕಾರಣ ಅಲ್ಲದಾ? ಬೇವಿಂದ ಕೈಕ್ಕೆಯನ್ನೇ ನಿರೀಕ್ಷೆ ಮಾಡ್ಲೆ ಅಕ್ಕಷ್ಟೆ.
ಅಪ್ಪಚ್ಚೀ..
ಲಾಯ್ಕಂಗೆ ತೊಳದು ಒಂದು ಒಪ್ಪ ಕೊಟ್ಟಿ!
ಒಪ್ಪಣ್ಣಂಗೆ ಕೊಶಿ ಆತು, ಅದರಿಂದಲೂ ಜಾಸ್ತಿ ಗುಣಾಜೆಕುಂಞಿಗೆ ಕೊಶಿ ಆಗಿಕ್ಕು..
😉
ದೇವರ ನಾಡ್ ಹೋಗಿ ಈಗ ದೆವ್ವದ ನಾಡ್ ಆಯಿದು.
ಡಾಗ್‍ಟ್ರೇ, ಒಪ್ಪ ಕಂಡು ಕೊಶಿ ಆತು.
ನಿಂಗಳ ಒಪ್ಪ ಒಂದು ಸೂಜಿಯಷ್ಟೇ ಸಣ್ಣ, ಅಷ್ಟೇ ತೂಕ!
ಈ ಪಟಲ್ಲಿಪ್ಪ ಬಾಬೆ ಆರು?
ನಿಷ್ಟಾವಂತರು , ‘ಕಮ್ಮಿ ನಿಷ್ಟ’ರು ಅವರವರ ನಿಷ್ಟೆಗೆ, ತತ್ವಕ್ಕೆ ಬಧ್ಧರಾಗಿ ಇರೆಕ್ಕು. ಅಲ್ಲದ್ದರೆ ತಾತ್ವಿಕ ವ್ಯಭಿಚಾರ ಮಾಡಿದ ಹಾಂಗೆ ಅಕ್ಕು, ಅಲ್ಲದೋ..? ಹೀಂಗೆ ಮುಂದುವರಿದರೆ ತಾತ್ವಿಕ ವ್ಯಭಿಚಾರವೇ ಒಂದು ನಿಷ್ಟೆ ಆಗಿ ಹೋಕ್ಕೂ ಒಪ್ಪಣ್ಣಾ..?
ತೆಕ್ಕುಂಜೆಕುಮಾರಣ್ಣಂದು ಅಭಿಪ್ರಾಯ ಒಪ್ಪ ಆಯಿದು.
ತಾತ್ವಿಕವಾಗಿ, ಸೈದ್ಧಾಂತಿಕವಾಗಿ ಗಟ್ಟಿ ಇಲ್ಲದ್ದರೂ, ಓಟು ಸಿಕ್ಕುತ್ತನ್ನೇ ಅವಕ್ಕೆ – ಅದುವೇ ಗುಣಾಜೆಮಾಣಿಯ ಕೋಪಕ್ಕೆ ಕಾರಣ!
ಒಪ್ಪಣ್ಣಾ,
ಅಕ್ಕಿಯನ್ನೂ ಒಳುದ ಉಮಿಯನ್ನೂ ಸ್ವಾಹಾ ಮಾಡೊದರ್ಲಿ ಪಕ್ಷ ಬೇಧ ಇಲ್ಲದ್ದೆ ಸರ್ವರೂ ಗಟ್ಟಿಗರು ಹೇಳಿ ಕಾಣುತ್ತಾ ಇದ್ದನ್ನೆ.
ಇನ್ನು ನಿಷ್ಟೆಯ ವಿಷಯ ಬಿಡು.ಸಮಾಜವಾದ ಹೇಳಿ ಬೊಬ್ಬೆ ಹೊಡವ ಪಕ್ಷ೦ಗಳೇ ನಮ್ಮ ದೇಶಲ್ಲಿ ಎಷ್ಟು ಭೂಮಿ,ಕಟ್ಟೋಣ೦ಗಳ ತೆಕ್ಕೊ೦ಡಿದವು ಹೇಳಿ ನೋಡಿರೆ ತಲೆ ತಿರುಗುಗು.ಅವು ಹೇಳೊದು ಒ೦ದು ಮಾಡೊದು ಇನ್ನೊ೦ದು.ಇನ್ನು,ಒಳುದವು ಜೆನ೦ಗಳ ಬಡತನದ ರೇಖೆ೦ದ ಮೇಲೆ ಎತ್ತೊದರ್ಲಿಯೋ ಅಲ್ಲ ಸರ್ಕಾರ ಒಳುಶೊದರ್ಲಿಯೋ ಸಮಯಹರಣ ಮಾಡಿ ಅವರವರ ಸ್ವಕಾರ್ಯ೦ಗಳ ಮಾಡಿಗೊಳ್ತಾ ಇದ್ದವು. ಸಾಮಾನ್ಯ ಪ್ರಜೆಗೊಕ್ಕೆ ಕೈ ಬಾಯಿಗೆ ಹೋಯೆಕ್ಕನ್ನೇ ಹೇಳ್ತ ತಲೆಬೆಶಿಯ ಎಡೆಲಿ ಇದು ಯೇವದೂ ನವಗೆ ಬೇಡಪ್ಪಾ ಹೇಳಿ ಅವರ ಉದ್ಯೋಗಲ್ಲಿ ಮುಳುಗಿದ್ದವು.ಅಕ್ಬರನ ಆಸ್ಥಾನಲ್ಲಿ ಮ೦ಜುಗಡ್ಡೆ ಕೈ೦ದ ಕೈಗೆ ಪಗರಿ ಕರಗಿದ ಕಥೆ ಗೊ೦ತಿಲ್ಲೆಯೋ?ಹಾ೦ಗಿರ್ತ ಕೈಗೊ ಇ೦ತಹಾ ಪ್ರಚಾರ೦ಗಳ ಮಾಡದ್ದೆ ಇಕ್ಕೋ? ಪ್ರತಿದಿನ ಮಾರ್ಗದ ಹೊಡೆಲಿ ದೊಡ್ಡ ದೊಡ್ಡ ಬೋರ್ಡುಗಳಲ್ಲಿ ಸುಮಾರು ಜೆನ೦ಗೊ ಸ್ವಾಗತವನ್ನೊ,ಶುಭಾಶಯವನ್ನೋ ಕೊಡುವ ನಾಯಕರೆ ಚಿತ್ರ೦ಗಳ ಕಾಣುತ್ತು.ಮೂಲ ಉದ್ದೇಶ ಸಾಧನೆಗೆ ಒ೦ದೊ೦ದು ರೂಪ ಇದು ಅಷ್ಟೆ.
ಲೇಖನ ಓದಿ ಮನಸ್ಸಿ೦ಗೆ ಏನೋ ಬೇಜಾರು.ನಮ್ಮ ದೇಶವ ಈ ರಾಜಕೀಯ ಎಲ್ಲಿಯವರೆಗೆ ಇಳಿಶುಗಪ್ಪಾ ?
ಹ್ಮ್,ಎಡಕ್ಕಿಲಿ,ಕೇರಳದ ಓಟಿನ ಫಲಿತಾ೦ಶ ನೋಡುಲೆ೦ತ ಇದ್ದು,ತಿಥಿ ದಿನ ಜೆನಿವಾರ ಎಡತ್ತು ಬಲತ್ತು ಮಾಡಿದ ಹಾ೦ಗೆ ಹೇಳಿ ಚೆನ್ನೈಭಾವ ಸಮೋಸ ಕಳುದಸಿದ್ದದು ನೆ೦ಪಾಗಿ ನೆಗೆಯೂ ಬ೦ತು.
ಮುಳಿಯಭಾವಾ..
ರಾಜಕೀಯದವರ ಚೆಂದಕೆ ಹಿಡುದು ತೊಳದ್ದಿ, ಭಾರೀ ಪಷ್ಟಾಯಿದು ಹೇಳ್ತದಕ್ಕೆ ನಮ್ಮ ಒಪ್ಪ.
ನಿಷ್ಠಾವಂತರ ಪ್ರಭಾವಳಿ ಕಮ್ಮಿ ಅಪ್ಪಗ `ಕಮ್ಮಿ ನಿಷ್ತ’ರ ಹಾವಳಿ ಹೆಚ್ಚಾವ್ತು ಎಲ್ಲಾ ಕಡೆಲ್ಲಿಯುದೆ. ಸಂಸ್ಕೃತಿ ನಿಷ್ಠರು ಇರೆಕಾದ ಸಂಸ್ಕೃತ ಕ್ಷೇತ್ರಲ್ಲಿಯೂ ಹೀ೦ಗಪ್ಪಲೆ ಸುರುವಾಯಿದು.
ಡಾಮಹೇಶಣ್ಣಾ..
{ಸಂಸ್ಕೃತಿ ನಿಷ್ಠರು ಇರೆಕಾದ ಸಂಸ್ಕೃತ ಕ್ಷೇತ್ರಲ್ಲಿಯೂ ಹೀ೦ಗಪ್ಪಲೆ ಸುರುವಾಯಿದು}
ಇದೆಂತರ ಬಗೆ? ಬೈಲಿಂಗೆ ತಿಳಿಶುತ್ತಿರೋ?
ನಮ್ಮ ಒಳವೂ ಹೆರವೂ ಒಂದೇ ರೀತಿ ಇರೆಕ್ಕು..
ಒಳ ಒಂದು ಹೆರ ಒಂದು ಹೇಳಿ ಇದ್ದರೆ,
ಅವಕ್ಕೆ ಇಲ್ಲಿಯೂ ಸುಖ ಇಲ್ಲೆ ಅಲ್ಲಿಯೂ ಸುಖ ಇಲ್ಲೆ ..
ಅಲ್ಲದಾ?
ಒಳ್ಳೆ ಒಪ್ಪಕ್ಕೆ ಒಪ್ಪಂಗೊ ಮಾಣೀ!
“ಚಾರುವಾಕ ಎ೦ಬನೊರ್ವ ಭೂರಿ ಮಹಿಮನು
ಸಾರಿ ಬ೦ದನಮ್ಮ ಪುರಕೆ ಶಿಶ್ಯ ಸಹಿತನು
ವಿಕಟ ಸನ್ಯಾಸಿ ಅಲ್ಲ ನೋಡೆ ಸು೦ದರ”
ಚಾರ್ವಾಕ ಮುನಿಯ ಬಗ್ಗೆ ಓದುವಗ ನೆ೦ಪಾದ್ದು ಧರ್ಮಸ್ಥಳ ಮೇಳದ ಆಟಲ್ಲಿ ಇದ್ದ ಈ ಪದ್ಯ
ಬಹುಶ ಚಾರ್ವಾಕ ಬ೦ದದು ‘ತಾರಾಕ್ಶ ತಾಮ್ರಾಕ್ಶ ವಿದಯುನ್ಮಾಲಿ ಹೇಳುವ ಹೆಸರಿದ್ದ ರಾಕ್ಶಸರ ಕೊಲ್ಲುಲೆ ಆಗಿರೆಕ್ಕು.
ಈಗಾಣ ಕಾಲದ ಚಾರ್ವಾಕರಿ೦ದ ಯಾವ ಶುದ್ದೀಕರಣ ನಿರೀಕ್ಶಿಸುಲೆ ಅಕ್ಕು ಗೊ೦ತಿಲ್ಲೆ.
{ಈಗಾಣ ಕಾಲದ ಚಾರ್ವಾಕರಿ೦ದ ಯಾವ ಶುದ್ದೀಕರಣ ನಿರೀಕ್ಶಿಸುಲೆ ಅಕ್ಕು ಗೊ೦ತಿಲ್ಲೆ}
ಒಳ್ಳೆ ಮಾತು ಹೇಳಿದಿ ಅಣ್ಣ ನಿಂಗೊ!
ಹೇಳಿದಾಂಗೆ, ನಿಂಗೊಗೆ ಆಟದ ಮರ್ಳು (ಆಸಗ್ತಿ) ರಜ ಇದ್ದೋ ಹೇಳಿಗೊಂಡು. ಅಲ್ಲದೋ?
ಬೈಲಿಂಗೆ ಶುದ್ದಿ ಹೇಳ್ತಿರೋ?ನಿಂಗಳ ಅನುಭವವಂಗಳ?
’ಸಾಕ್ಷರ’ರ ನಾಡು ದೇವರನಾಡು ಹೇಳುತ್ತದು ಇಂದು ಕಮ್ಮಿನಿಷ್ಠೆಯೋರಿಂದಾಗಿ ’ರಾಕ್ಷಸ’ರ ನಾಡು ಹೇಳಿ ಆಯಿದು, ಎಂತ ಮಾಡುದು ಒಪ್ಪಣ್ಣೋ?
ನಮ್ಮ ಕೈಲಿ ಅಷ್ಟೆ ಎಡಿವದೂ, ಬಾಕಿದಕ್ಕೆ ಕಾಲವೇ ಉತ್ತರ ಕೊಡೆಕ್ಕಷ್ಟೆ…
ವಿಶಯ ಬರದ್ದು ಒಪ್ಪಾ ಆಯಿದು…
ಅಡ್ಕತ್ತಿಮಾರುಮಾವಾ..
ನಿಂಗೊ ಬರದ ” ಮೃತ್ಯುಂಜೇಶ್ವರನ ಶುದ್ದಿ” ಓದುವಗಳೂ ಎನಗೆ ಇದೇ ಭಾವನೆ ಬಂತು.
ರಾಕ್ಷಸರು ಬೆಳವದರ ಹೇಂಗಾರುಮಾಡಿ ನಿಲ್ಲುಸೇಕಾತನ್ನೇಪಾ!
ಆಷಾಢಭೂತಿ ವ್ಯಕ್ತಿಗಳ ಟೀಕೆ ಮಾಡಿದ ಕ್ರಮ ಲಾಯ್ಕ ಆಯಿದು.
ಗೋಪಾಲಣ್ಣಂಗೆ ಧನ್ಯವಾದಂಗೊ. 🙂
ಯಬ್ಬ, ಓದಿ ಮುಗುಶಿದೆ. ಆಚೀಚಿಗೆ ದೊಡ್ಡಭಾವ, ಅಜ್ಜಕ್ಕಾನ ಭಾವ, ಡೀಕೆಶಾಂಬಾವ,ಅಡ್ಕತ್ತಿಮಾರುಮಾವನ ನಿಲ್ಲುಸಿ ಗುಣಾಜೆಕುಂಞಿಯ ಎಳದು ಸರೀ ತಿಕ್ಕಿದ ಶೈಲಿ ನಿಂಗೊ ನಿಷ್ಠೆಲಿ ಕೂದು ಬರದಷ್ಟೇ ನಿಷ್ಠೆಲಿ ಕೂದು ಓದಿಯಪ್ಪಗ “ಆತ್ಮಲ್ಲಿ ನಿಷ್ಠೆ ಇದ್ದರೆ ಪರಮಾತ್ಮನಲ್ಲಿಯೂ ನಿಷ್ಠೆಇರ್ತು. ಆತ್ಮಲ್ಲೇ ಕಮ್ಮಿ ನಿಷ್ಠೆ ಆದರೆ ಪರಮಾತ್ಮನ ಮೇಗೆಯೂ ಕಮ್ಮಿ ನಿಷ್ಠೆ ಆವುತ್ತು.” ಹೇಳಿ ಅರ್ಥ ಮಾಡಿಗೊಂಡತ್ತು. ವಿಷಯವೂ ಬರದ್ದೂ ಒಪ್ಪ ಆಯ್ದು ಹೇಳಿಗೊಂಡು ನಮ್ಮಲ್ಲಿಂದ ಒಪ್ಪ.
ಚೆನ್ನೈಭಾವಾ..
ಬೈಲಿಂಗೆ ಉದಿ ಆಯೇಕಾರೇ ನಿಂಗೊಗೆ ಉದಿ ಆಗಿ ಕಳಿತ್ತು. ಮೂಡಹೊಡೇಣ ಚೆನ್ನೈಲಿ ಇದ್ದ ಕಾರಣವೋ ಏನೊ!
ಮೊದಾಲು ಓದಿ, ಮೊದಾಲು ಒಪ್ಪಕೊಟ್ಟು ಪ್ರೋತ್ಸಾಹಿಸುತ್ತಿರಲ್ಲದೋ – ಒಪ್ಪಣ್ಣಂಗೆ ಅಷ್ಟು ಸಾಕು.
ನಿಷ್ಟೆಯ ಶುದ್ದಿಯ ನಿಷ್ಠೆಲಿ ಓದಿ, ಅಷ್ಟೇ ನಿಷ್ಟೆಲಿ ಒಪ್ಪಕೊಟ್ಟದು ಪರಮಾನಂದ ಆತು.
ಹರೇರಾಮ.