೧೯೪೩ ರಲ್ಲಿ ಬಂಗಾಳಲ್ಲಿ ಭೀಕರ ಬರಗ್ಗಾಲ ಅಡ. ಉಂಬಲೆ ಅಕ್ಕಿ ಇಲ್ಲೆ, ಕುಡಿವಲೆ ನೀರಿಲ್ಲೆ, ಬೆಳವಲೆ ಶಕ್ತಿ ಇಲ್ಲೆ. ಸತ್ತವರ ಸಂಖ್ಯೆ ಇಪ್ಪತ್ತು ಲಕ್ಷದಷ್ಟು!
ದಾರಿ ದಾರಿಲಿ ಹಶು ಮಕ್ಕಳ ರೋದನ.
ಹಳ್ಳಿ ಹಳ್ಳಿಲಿ ಶವಂಗೊ. ಸಂಸ್ಕಾರ ಮಾಡ್ಳೂ ಶಕ್ತಿ ಇಲ್ಲದ್ದ ಜೆನಂಗೊ.
ಇದಕ್ಕೆಲ್ಲ ಕಾರಣ ಎಂತ್ಸರ?
~
ಬ್ರಿಟಿಶ್ ಆಡಳ್ತೆ ಸಮೆಯ; ಚರ್ಚಿಲ್ ಹೇಳ್ತ ಜೆನ ಬ್ರಿಟನ್ ಲಿ ಪ್ರಧಾನಿ ಆಗಿದ್ದತ್ತು.
ಆ ಸಮೆಯಲ್ಲಿ ಬರ್ಮಾದ ಮೇಗೆ ಜಪಾನ್ ಆಕ್ರಮಣ ಮಾಡಿ ಅಪ್ಪಾಗ – ಬಂಗಾಳಕ್ಕಿಪ್ಪ ಆಹಾರ ಪೂರೈಕೆಯ ಸಂಪೂರ್ಣ ನಿಲ್ಲುಸಿತ್ತು ಚರ್ಚಿಲ್. ಜಪಾನ್ ಬಂದು ಬರ್ಮಾವ ತನ್ನ ಆಡಳ್ತೆಂದ ತೆಗದ ಕೋಪಕ್ಕೆ, ಭಾರತದವಕ್ಕೆ ಬರೆ!
ಬಂಗಾಳಲ್ಲಿ ಹೀಂಗೆ ಅನರ್ಥ ಆವುತ್ತಾ ಇದ್ದವು, ಲಕ್ಷಗಟ್ಳೆ ಜೆನ ಸಾಯ್ತಾ ಇದ್ದವು – ಹೇದು ಚರ್ಚಿಲ್ ಗೆ ಹೇಳಿದವಾಡ; ಅಷ್ಟಪ್ಪಗ “ಎಲಿಯ ಹಾಂಗೆ ಹತ್ತತ್ತು ಹೆರ್ತವು, ಸಾಯಲಿ ಬಿಡು” – ಹೇಳ್ತ ಹೀನ ಮಾತಿನ ಹೇಳಿತ್ತಾಡ ಆ ಬೆಳಿ ಜೆರಳೆ.
~
ಈಗ ಅದೆಲ್ಲ ಎಂತಕೆ ನೆಂಪಾತು ಹೇದರೆ – ಮಲೆಮಹದೇಶ್ವರ ದ ಕತೆ ನೋಡುವಾಗ!
ಬೆಟ್ಟದ ಮೇಗೆ ಆಹಾರ ಮೇದು ಆರಾಮಲ್ಲಿ ಇದ್ದಿದ್ದ ಗೋವುಗೊ, ಈಗ ಆಹಾರ ಸಿಕ್ಕದ್ದೆ ಸಾವ ಹಂತಕ್ಕೆ ಎತ್ತಿದ್ದು.
ಮೊದಲು ಆರಾಮಲ್ಲಿ ಉಂಡುಗೊಂಡಿಪ್ಪಾಗ, ಈಗ ಎಂತ ಸಮಸ್ಯೆ ಆತು – ಕೇಳುಗು ಜೆನಂಗೊ.
ಆದ್ಸೆಂತರ ಹೇದರೆ – ಬೆಟ್ಟಲ್ಲಿ ಮೇವ ದನಗೊ ಬೆಟ್ಟಕ್ಕೆ ಬಾರದ್ದ ಹಾಂಗೆ ಬೇಲಿ ಹಾಕಿದ್ಸು!
ಇದರಿಂದಾಗಿ ಬೆಟ್ಟಕ್ಕೆ ಹೋಗಿ ಮೇದುಗೊಂಡು ಬಂದುಗೊಂಡ ದನಗೊ, ಶಾಶ್ವತವಾಗಿ ಬೆಟ್ಟಂದ ದೂರ ಆದವು.
ಬೆಟ್ಟದ ಬುಡಲ್ಲಿ ಎಂತ ಮಣ್ಣಂಗಟ್ಟಿ ಇದ್ದು ಬೇಕೆ!?
ಬುಡಲ್ಲಿಪ್ಪದು ಮಣ್ಣು ಮಾಂತ್ರ, ಬೇರೆಂತ ಪೊನ್ನಂಬ್ರವೂ ಇಲ್ಲೆ.
ಈಗ ಅಲ್ಯಾಣ ವಾತಾವರಣ ನೋಡಿರೆ – ಬಂಗಾಳದ ಹಾಂಗೇ ಇದ್ದು.
ಮನುಶ್ಯರು ಅಲ್ಲ, ದನಗೊ – ಅಷ್ಟೇ ವಿತ್ಯಾಸ.
ದಾರಿ ದಾರಿಲಿ ದನಗೊ ಬಿದ್ದುಗೊಂಡಿದ್ದವು. ಶವಸಂಸ್ಕಾರ ಸಿಕ್ಕದ್ದ ಗೋಮಾತೆಗೊ.
ಅವು ಸತ್ತದು ಹೇಂಗೆ? ಕೆಲವು ಆಹಾರ ಸಿಕ್ಕದ್ದೆ; ಮತ್ತೆ ಕೆಲವು ರೋಗ ಪಗರಿ. ರೋಗ ರುಜಿನ ಬಪ್ಪಲೆ ಸತ್ತ ದನಗಳ ಶವವೇ ಇದ್ದನ್ನೇ.
ಒಬ್ಬೊಬ್ಬ° ರೈತರ ಹತ್ರೆಯೂ ನೂರು ನೂರೈವತ್ತು ಇದ್ದಿದ್ದ ಗೋವುಗೊ ಈಗ ತೀರಾ ಕಡಮ್ಮೆ ಆಯಿದವು.
ಕಣ್ಣೆದುರೇ ತಾನು ಸಾಂಕಿದ ದನಗೊ ಸಾವದರ ನೋಡ್ಳೆ ಎಡಿಯದ್ದೆ ಒಂದರಿಯೇ ಮಾರಿ ಬಿಡ್ತವು ಕೆಲವು ರೈತರು.
ಒಟ್ಟಾರೆ ಅಸ್ತವ್ಯಸ್ತ.
ಒಂದು ದೊಡ್ಡ ಮಳೆ ಬಂದು ಎಲ್ಲವುದೇ ತಂಪಿರೆ, ಸರಿ ಆದರೆ ಒಳ್ಳೆದು – ಹೇದು ಎಲ್ಲೋರು ಗ್ರೇಶುದು.
ಆದರೆ, ಹೀಂಗಿದ್ದ ಅನಾಚಾರ ಮಾಡಿರೆ ಮಳೆ ಬಪ್ಪದು ಎಲ್ಲಿಗೆ? ಬರಗಾಲವೇ ಬಕ್ಕಷ್ಟೆ.
~
ಇದರೆಲ್ಲದರ ಕಂಡು ನಮ್ಮ ಗುರುಗೊ “ಗೋವು-ನಾವು-ಮೇವು” ಹೇದು ಯೋಜನೆ ಹಾಕಿದ್ದು.
ನಮ್ಮ ಊರಿಲಿ ಹಾಳೆಚೋಲಿ, ಕೂಂಬಾಳೆ ಇತ್ಯಾದಿಗೊ ಅಂತೇ ಕೊಳದು ಹೋಪದಿದ್ದು, ಅದರೆಲ್ಲದರ ಮೇವು ಆಗಿ ಬೆಟ್ಟಕ್ಕೆ ಸಾಗುಸಿದರೆ, ಅಲ್ಲ್ಯಾಣ ಗೋವುಗೊ ಆನಂದಲ್ಲಿ ತಿಂಗು – ಹೇಳ್ತದು ಮೂಲ ಉದ್ದೇಶ.
ಆ ಪ್ರಕಾರ ನಮ್ಮ ಊರಿನ ಹಲವಾರು ಕಾರ್ಯಕರ್ತರು, ಸ್ವಯಂಸೇವಕರು ಇದರ ಕೆಲಸ ಮಾಡ್ತಾ ಇದ್ದವು.
ನಿನ್ನೆ ಗೋವುಗೊಕ್ಕೆ ಮೇವು ಎತ್ತಿತ್ತಾಡ.
ಅವಸ್ಥೆ ಹೇದರೆ – ಕೆಲವು ಗೋವುಗೊಕ್ಕೆ ಹಸುರು ಅಗಿವ ಶೆಗ್ತಿಯೂ ಇದ್ದತ್ತಿಲ್ಲೆ.
ನಿನ್ನೆಂದ ಇಂದಿಂಗೆ ಹಲವೂ ಗೋವುಗೊ ಸುಧಾರ್ಸಿದ್ದವಡ. ಈಗ ಎದ್ದು ನಿಂದವಾಡ.
ಗೋವು ಬೆಳಗಿರೆ ಊರು ಬೆಳಗುತ್ತು, ಸಸ್ಯ ಸಂಪತ್ತುಗೊ ಬೆಳಗುತ್ತು. ಇನ್ನು ಹೆದರಿಕೆ ಇಲ್ಲೆ – ಹೇದು ಆ ಊರಿನ ರೈತರು ನೆಮ್ಮದಿಲಿ ಹೇಳ್ತವಾಡ.
ನಮ್ಮ ಗುರುಗಳ ದೂರದೃಷ್ಟಿಯ ಗೋಪ್ರೇಮವ ಕಂಡು ಮನಸ್ಸು ತುಂಬಿದವಾಡ.
~
ಒಂದೊಪ್ಪ: ಗೋವು ನೆಡೆಯದ್ದೆ ಬೆಟ್ಟದ ಹಸುರು ಒಳಿಯ. ಬೆಟ್ಟದ ಮರ ಒಳಿಯದ್ರೆ ಮಳೆ ಬಾರ, ಮಳೆ ಬಾರದ್ರೆ ಗೋವು ಒಳಿಯ!
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
ಕೊನೆಯ ವಾಕ್ಯ ಅರ್ಥಗರ್ಭಿತ