ಜೋರು ಮಳೆ ಬಂದರೆ ಅಸಕ್ಕಪ್ಪದೂ ಜೋರೇ.
ಮಳೆಯ ಬೊರೋ ಶಬ್ದಕ್ಕೆ ಒಬ್ಬನೇ ಕೂದರೆ ಹಳತ್ತೆಲ್ಲ ನೆಂಪಪ್ಪದು, ಆರನ್ನೋ ನೆಂಪಪ್ಪದು, ದೂರಲ್ಲಿಪ್ಪೋರಿಂಗೆ ಹತ್ತರಾಣೋರ ನೆಂಪಪ್ಪದು – ಇನ್ನೂ ಎಂತೆಂತದೋ ಅಪ್ಪದು.
ಅಸಕ್ಕಪ್ಪಗ ಬಾಯಿ ಆಡುಸುಲೆ ಎಂತಾರು ಇದ್ದರೆ ಕೊಶೀ ಅಪ್ಪದು ನವಗೆ.
ಅದಕ್ಕೆ ಬೊರೋ ಶಬ್ದದ ಒಟ್ಟಿಂಗೆ ಬಾಯಿಲಿ ಕರುಕುರು ಶಬ್ದ ಬಂದರೆ ಲಾಯಿಕಾವುತ್ತಾಡ; ಹಾಂಗಾಗಿಯೇ ಬೇಸಗೆಲಿ ಮಾಡಿದ್ದರ ಮಳೆಗಾಲ ಮುಗುಶುದು.
ಬೇಸಗೆಲಿ ಮಾಡಿ ಕಟ್ಟಕಟ್ಟಿ ಮಡಗಿದ ಹಪ್ಪಳ, ಸೆಂಡಗೆ, ಉಂಡ್ಳಕಾಳು ಸಾಹಿತ್ಯ, ಹೀಂಗಿರ್ಸರ ಎಲ್ಲ ತೆಗದು ತೆಗದು ಗೆತಿ ಕಾಣುಸುದು ಇದೇ ಕಾರಣಕ್ಕೆ.
ಅದಪ್ಪು, ಹೀಂಗೆ ಮಳೆಬಂದರೆ ಹಳ್ಳಿಮನೆಗಳಲ್ಲಿ ಅಟ್ಟಲ್ಲಿ ಪರಡಿರೆ ಎಂತಾರು ಸಿಕ್ಕುಗು – ಹಪ್ಪಳವೋ – ಉಂಡ್ಳಕಾಳೋ ಎಂತಾರು;
~
ಬೆಶಿಲು ಹಾಳು ಮಾಡ್ಳೆ ಮನಸ್ಸು ಬಾರದ್ದೆ, ಪುಳ್ಳರುಗೊ ಸೇರಿ ಭರ್ತಿ ನಲುವತ್ತು ಹಲಸಿನ ಕಾಯಿ ತೆಗದು, ಹಿಟ್ಟುಕಡದು, ಉಂಡೆ ಮಾಡಿ ಹಪ್ಪಳ ಹಸ್ಸಿದ್ದು ಗೊಂತಿದ್ದನ್ನೇ?
ಟೀಕೆಪಿ ಮನೆಲಿ ನೆಡದ ಕತೆ ಇದು.
ನಲುವತ್ತಕ್ಕೆ ನಲುವತ್ತರದ್ದೂ ಹಪ್ಪಳ ಮಾಡ್ಳೆಡಿಯದ್ದೆ ಮತ್ತೆ ರಜ ಹಿಟ್ಟಿನ ಗೊಬ್ಬರದ ಗುಂಡಿಗೆ ಹಾಕೆಕ್ಕಾಗಿ ಬಂತಡ.
ಬೆಶಿಲು ಹಾಳುಮಾಡ್ಳಾಗ ಹೇದು ಹೆರಟೋರು ಹಿಟ್ಟು ಹಾಳುಮಾಡಿದವು – ಹೇದು ಮನೆಒಳಂದ ಪರಂಚುದು ಕೇಳಿದ್ದಾಡ; ಕೇಳಿದೋರು ಹೇಳಿದ್ದು ಒಪ್ಪಣ್ಣಂಗೆ.
ಅದಿರಳಿ, ಅಂತೂ ಅವಕ್ಕೆ ಈ ಸರ್ತಿ ಹಪ್ಪಳ ಮಾಡ್ಳೆಡಿಗಾದ್ಸು ದೊಡ್ಡ ಸಂಗತಿ.
ಟೀಕೆಪಿ ಬಾವನ ಮನೆಲಿ ಹಪ್ಪಳ ಮಾಡಿದವು, ಆದರೆ ಎಲ್ಲರ ಮನೆಲಿ ಎಡಿಗಾತೋ? ಪಾರೆ ಮಗುಮಾವನ ಮನೆಲಿ ಈ ಸರ್ತಿ ಬೆಶಿಲು ಮುಗಿವನ್ನಾರವೂ ಬೆಳದ್ದಿಲ್ಲೇಡ.
ಬೈಲಕರೆ ಗಣೇಶಮಾವನ ಮನೆಲಿ ಮಾಡಿದ ಹಪ್ಪಳದ ಕಟ್ಟಲ್ಲಿ ಅರೆವಾಶಿ ಮೈಸೂರಿನ ತಂಗೆಮನೆಗೂ, ಇನ್ನರೆವಾಶಿ ಕಟ್ಟವ ಬೆಂಗ್ಳೂರಿನ ತಂಗೆಮನೆಗೂ ಕೊಟ್ಟಿದವಾಡ, ಪಂಜೆ ಕುಂಞಜ್ಜಿ!
ಹಾಂಗೆ, ಬೈಲಿಲಿಯೇ ಹಲವೂ ಮನೆಗಳಲ್ಲಿ ಹಪ್ಪಳ ಕಾಲಿ ಆದ ಸುದ್ದಿಗೊ ತಿರುಗುತ್ತಾ ಇದ್ದು.
ಹಳ್ಳಿಲಿಯೇ ಹೀಂಗೆ, ಇನ್ನು ಪೇಟೆಲಿ ಎಂತ ಕತೆಯೋ!?
ಪೇಟೆಮನೆಲಿ ಇರ್ತೋರಿಂಗೆ ಹೀಂಗಿರ್ಸರ ತಿನ್ನೇಕಾರೆ ಎಂತ ದಾರಿ?
ಕುಂಬ್ಳೆಜ್ಜನ ಹಾಂಗೆ ಊರಿಂದ ಬೆಂಗ್ಳೂರಿಂಗೆ ಹೋಪೋರಿದ್ದರೆ ಬೇಗಿಲಿ ತುಂಬುಸಿ ತೆಕ್ಕೊಂಡು ಹೋಪದೇ ದಾರಿ!
~
ಮೊನ್ನೆ ಜೋರು ಮಳೆ ಬಂತಲ್ಲದೋ – ಸೂರಂಬೈಲಿಂಗೆ ಹೋಗಿತ್ತಿದ್ದೆ.
ಒಪಾಸು ಬಪ್ಪಗ ಸಾರಡಿತೋಡಿಲಿ ನೀರು ದಾಂಟ್ಳೆಡಿಯದ್ದಷ್ಟು ಬಂದಿತ್ತು. ತೋಡಕರೆಲಿ ಕಾದು ಕೂಪಲೆ ನಾವೆಂತ ಜಾಲ್ಸೂರಿನ ಜೆನವೋ, ಅಲ್ಲ.
ಹಾಂಗಾಗಿ ಎಂತ ಮಾಡುದು? ಅಲ್ಲೇ ಇಲ್ಲೆಯೋ – ಸಾರಡಿ ಅಪ್ಪಚ್ಚಿಯ ಮನೆ; ಹೊಕ್ಕತ್ತು.
ನೋಡಿರೆ, ಎನ್ನ ಹಾಂಗೇ ಅಲ್ಲಿಗೆ ಮತ್ತೆ ಇಬ್ರು ಬಂದಿತ್ತಿದ್ದವು; ಪಾರೆ ಮಗುಮಾವಂದೇ, ಬೈಲಕರೆ ಗಣೇಶಮಾವಂದೇ; ನೀರಿಳಿವನ್ನಾರ ಕಾದು ಕೂರ್ತೋರು.
ಮಳೆ ಚೆಂಡಿಯ ಚಳಿ ಬಿಡ್ಳೆ ಹೇದು ಸಾರಡಿ ಅಪ್ಪಚ್ಚಿ ಬೆಶಿಬೆಶಿ ಚಾಯ ಮಾಡ್ಸಿದವು;
ಸಾರಡಿ ಪುಳ್ಯಕ್ಕೊಗೆ ಅಸಕ್ಕಪ್ಪಗ ಬಾಯಾಡ್ಸಲೆ – ಹೇದು ಚಿಕ್ಕಮ್ಮ ಹಪ್ಪಳವೂ ಹೊರುದಿತ್ತಿದ್ದವು; ಎಂಗೊಗೂ ಸಿಕ್ಕಿತ್ತು.
ಪಾರೆ ಮಗುಮಾವನ ಮಗಂಗೆ ಬೆಂಗುಳೂರಿಲಿ ಕೆಲಸ ಇದಾ; ಅವಂಗೆ ಹಪ್ಪಳ ಸೆಂಡಗೆ ಹೇದರೆ ಬಾರೀ ಇಷ್ಟ ಆಡ.
ಅಲ್ಲಿಗೆ ಕೊಂಡೋಪಲೂ ಈ ಸರ್ತಿ ಮಾಡ್ಳಾಯಿದಿಲ್ಲೇದು ಬೇಜಾರು ಮಾಡಿಗೊಂಡವು.
ಮುರುದು ಹಪ್ಪಳ ತಿಂಬಗ, ಬೆಶಿಯ ಚಾಯ ನುಂಗುವಾಗ ಬಂದ ಒಟ್ಟು ಮಾತುಕತೆಯೇ ಇಂದ್ರಾಣ ಶುದ್ದಿಗೆ ಆಹಾರ.
~
ಕೆಲಸದ ಮೇಗೆಯೋ, ಮದುವೆ ಆಗಿಯೋ, ಪಾಲು ಆಗಿಯೋ – ನಾನಾ ಕಾರಣಲ್ಲಿ ಹಳ್ಳಿ ಬಿಟ್ಟು ಪೇಟಗೆ ಹೋದ ಹಲವು ನೆಂಟ್ರುಗೊ ಇದ್ದವು.
ಪೇಟಗೆ ಹೋದ ಕೂಡ್ಳೇ ಹಳ್ಳಿಯ ಆಹಾರಪದ್ಧತಿ ಬಿಡ್ಳೆಡಿತ್ತೋ? ಇಲ್ಲೆ.
ಹಾಂಗಾರೆ, ಪೇಟೆಲಿರ್ತೋರಿಂಗೆ ಹಳ್ಳಿಯ ವಸ್ತುಗೊ, ಆಹಾರಂಗೊ ಸಿಕ್ಕೇಕಾರೆ ಎಂತ ಆಯೇಕು?
ಮೂರು ದಾರಿ ಇದ್ದು,
– ಒಂದೋ ಪೇಟೆಯೋರು ಊರಿಂಗೆ ಬಂದು ಕೊಂಡೋಯೇಕು;
– ಅಲ್ಲದ್ದರೆ ಊರಿಂದ ಪೇಟೆಗೆ ಹೋವುತ್ತೋರು ಕೊಂಡೋಯೇಕು;
– ಅದೂ ಅಲ್ಲದ್ದರೆ, ಅಲ್ಲೇ ಅಂಗುಡಿಲಿ ಸಿಕ್ಕಿದ್ಸರ ತೆಕ್ಕೊಳೇಕು.
ಸುರೂವಾಣ ಎರಡು ಸಾಧ್ಯವಾದ ಮಾತೇ ಆದರೂ, ಪ್ರತಿ ಸರ್ತಿ, ಪ್ರತೀ ಕಾಲಲ್ಲಿ ಅತ್ಲಾಗಿತ್ಲಾಗಿ ಹೋವುತ್ತೋರು ಎಲ್ಲಿ ಸಿಕ್ಕುತ್ತವು?
ಕೆಲವು ಮನೆಗೊಕ್ಕೆ ಊರಿನ ಸಂಪರ್ಕವೇ ಇಲ್ಲದ್ದೆ ಹೋವುತ್ತು. ಊರಿಂದ ಹೋಪೋರೂ ಇಲ್ಲೆ, ಊರಿಂಗೆ ಬಪ್ಪೋರೂ ಇಲ್ಲೆ.
ಬಂದರೂ – ಊರಿಲಿ ಇರ್ತು ಹೇಳಿಯೂ ಧೈರ್ಯ ಇಲ್ಲೆ, ಪಾರೆ ಮಗುಮಾವಂಗೆ ಆದ ಹಾಂಗೆ ಅಪ್ಪಲೂ ಸಾಕು.
ಮತ್ತೆ, ಅಂಗುಡಿಂದ ತೆಗದರೆ ಕತೆ ಅಕ್ಕೋ?
ಕೆಲವು ಸರ್ತಿ ಬೂಸುರು ಬಂದ ವಸ್ತುಗೊ ಇಕ್ಕು, ಅದಲ್ಲದ್ದರೆ ಎಂತಾರು ರಾಸಾಯನಿಕ ಮಿಶ್ರ ಮಾಡಿ ಮಾರ್ತದಿಕ್ಕು, ಅದೂ ಅಲ್ಲದ್ದರೆ ಒಂದಕ್ಕೆ ಹತ್ತು ಕ್ರಯ ಹೇಳಿದ ನಮುನೆದು ಇಕ್ಕು;
ಅಂತೂ – ಪ್ರಕೃತಿ ಸಹಜವಾದ ವಸ್ತುಗಳ, ಅಷ್ಟೇ ಪರಿಶುದ್ಧವಾಗಿ ಎತ್ತುಸಲೆ ಎಂತ ವೆವಸ್ತೆ?
ಗ್ರಾಮ್ಯ ವಸ್ತುಗಳ ಉತ್ಪನ್ನಂಗಳ ರಾಜ್ಯವ್ಯಾಪಿ ಎತ್ತುಸಲೆ ಎಂತ ವೆವಸ್ತೆ?
ಸಾರಡಿ ಅಪ್ಪಚ್ಚಿ ಅದನ್ನೇ ವಿವರ್ಸಿದ್ದು ಓ ಮೊನ್ನೆ. ಅದುವೇ “ಗ್ರಾಮರಾಜ್ಯ”.
~
ನಮ್ಮ ಗುರುಗಳ ಮಹದಾಕಾಂಕ್ಷೀ ಯೋಜನೆಗಳಲ್ಲಿ ಈ ಗ್ರಾಮರಾಜ್ಯವೂ ಒಂದಡ.
ಹಳ್ಳಿಯ ಉತ್ಪನ್ನಂಗಳ ಪೇಟಗೂ, ಪೇಟೆಯ ಉತ್ಪನ್ನಂಗಳ ಹಳ್ಳಿಗೂ ಶುದ್ಧರೂಪಲ್ಲಿ ಎತ್ತುಸಲೆ ಇಪ್ಪ ವ್ಯವಸ್ಥೆಯೇ ಗ್ರಾಮರಾಜ್ಯ ಆಡ.ಈಗ ಪೇಟೆಗಳಲ್ಲಿ ಇದು ತುಂಬ ಪ್ರಚಾರ ಆವುತ್ತಾ ಇದ್ದರೂ, ಕ್ರಮೇಣ ಹಳ್ಳಿಗೂ ವಿಸ್ತರಣೆ ಮಾಡ್ತ ಆಲೋಚನೆ ಇದ್ದಾಡ.
ಈ ಗ್ರಾಮರಾಜ್ಯ ಹೇದರೆ ಎಂತ್ಸು? – ಸಾರಡಿ ಅಪ್ಪಚ್ಚಿ ಸುಲಾಬಲ್ಲಿ ವಿವರ್ಸುತ್ತವು.
ಊರಿಂಗೊಬ್ಬರ ಹಾಂಗೆ “ಗ್ರಾಮರಾಜ್ಯ ಪ್ರತಿನಿಧಿ” ಹೇದು ನಿಘಂಟು ಮಾಡಿದ್ದವಾಡ; ಗುರಿಕ್ಕಾರ್ರು ಇಪ್ಪ ನಮುನೆ.
ಗ್ರಾಮರಾಜ್ಯದ ಆಸಕ್ತರು ಈ ಪ್ರತಿನಿಧಿಯ ಸಂಪರ್ಕ ಮಾಡಿ “ಸದಸ್ಯತ್ವ” ತೆಕ್ಕೊಳೇಕಡ.ಪ್ರತಿ ತಿಂಗಳೂ ಒಂದು ಸಾಮಾನುಪಟ್ಟಿ ಈ ಸದಸ್ಯರಿಂಗೆ ಎತ್ತುಸುತ್ತವಾಡ.
ಆ ಪಟ್ಟಿಲಿ ಇಪ್ಪ ಸಾಮಾನುಗಳ ನೋಡಿ, ತನಗೆ ಯೇವದು ಬೇಕೋ – ಅದರ ಎಲ್ಲ ಪಟ್ಟಿಮಾಡಿ, ಅದಕ್ಕೆ ಅಪ್ಪ ಪೈಶೆಯ ಆ ಪ್ರತಿನಿಧಿಗೆ ಕೊಟ್ಟುಬಿಡೇಕಡ.
ಸಾಮಾನುಗೊ ಎಂತರ? ಬದಿಯಡ್ಕದ ಹಲಸಿನ ಹಪ್ಪಳ, ವಿಟ್ಳದ ಬಾಳ್ಕು, ಸುಬ್ರಮಣ್ಯದ ಜೇನ, ಹೊನ್ನಾವರದ ಕುಚ್ಚಿಲು ಅಕ್ಕಿ, ಪುತ್ತೂರಿನ ತೆಂಗಿನ ಎಣ್ಣೆ – ಹೀಂಗಿರ್ಸ ಗ್ರಾಮೋತ್ಪನ್ನಂಗೊ.
ಪೈಶೆಯೂ ಹಾಂಗೇ, ಅಂಗುಡಿಲಿ ಇಪ್ಪ ಕ್ರಯಂದ ಸುಮಾರು ಕಮ್ಮಿಯೇ.
ನೇರವಾಗಿ ಅದರ ಎಜಮಾನ್ರ ಕೈಂದಲೇ ಎತ್ತುಸುತ್ತ ಕಾರಣ ಎಡಕ್ಕಿನ ದಳ್ಳಾಳಿ ತೇಮಾನು ಬೇಕಾವುತ್ತಿಲ್ಲೆ.
ಹಾಂಗಾಗಿ ಪೈಶೆ ಕಮ್ಮಿ – ಹೇದು ಸಾರಡಿಅಪ್ಪಚ್ಚಿ ಹೇಳಿದವು.ಅಂತೂ – ಆ ಪೈಶೆಯ ಪ್ರತಿನಿಧಿಗೆ ಕೊಡೇಕಡ.
ಪ್ರತಿನಿಧಿ ಆ ಊರಿನ ಪಟ್ಟಿಗಳನ್ನೂ, ಪೈಶೆಯನ್ನೂ ಒಟ್ಟುಮಾಡಿ ಸಂಚಾಲಕರಿಂಗೆ ಎತ್ತುಸುತ್ತವಾಡ.
ಸಂಚಾಲಕರು ಎಲ್ಲಾ ಊರಿಂದ ಬಂದ ಪಟ್ಟಿಗಳ ಎದುರು ಮಡಿಕ್ಕೊಂಡು – ಒಟ್ಟು ಎಷ್ಟು ಬೇಕು – ಹೇದು ಆಯಾ ಸಾಮಾನಿನ ತರುಸುತ್ತವಾಡ.
ಒಟ್ಟು ಬಂದದರ ಪುನಾ ಬೇರೆಬೇರೆ ಪೇಕು ಮಾಡಿ, ಪ್ರತಿನಿಧಿಗೊಕ್ಕೆ ಕೊಟ್ಟು ಕಳುಸುತ್ತವಾಡ.
ಪ್ರತಿನಿಧಿಗೊ ಸಾಮಾನು ಕಟ್ಟವ ಸದಸ್ಯರ ಮನೆಗೆ ಎತ್ತುಸುತ್ತವಾಡ.ಚೆ, ಎಷ್ಟು ಚೆಂದ! ಮನೆಲೇ ಕೂದು ಏವದೆಲ್ಲ ಬೇದು ಹೇದು ಪಟ್ಟಿ ಕೊಟ್ರೆ ಆತು, ಆಯಾ ಸಾಮಾನುಗೊ ನಮ್ಮ ಮನೆಬಾಗಿಲಿಂಗೆ ಬತ್ತು.
ಶುದ್ಧ, ತಾಜಾ, ಸಾವಯವ ಆದ ಸಾಮಾನುಗೊ!
~
ಸಾರಡಿಅಪ್ಪಚ್ಚಿಯ ಅಣ್ಣನ ಪೈಕಿ ಬೆಂಗುಳೂರಿಲಿ ಇದ್ದವಲ್ಲದೋ – ಅವಕ್ಕೆ ಈ ಗ್ರಾಮಾರಾಜ್ಯಂದಾಗಿ ತುಂಬಾ ಉಪಕಾರ ಆಯಿದಾಡ
ಊರಿನ ವಸ್ತುಗೊ ತುಂಬಾ ಲಾಯಿಕಕ್ಕೆ ಮನೆಬುಡಕ್ಕೆ ಬಂದು ಎತ್ತುತ್ತ ಕಾರಣ ಅವರ ಮನೆಯೋರಿಂಗೂ ಕೊಶಿಯೇ ಆಡ.
ಹಪ್ಪಳ ಮುಗುಶಿದ ಗಣೇಶಮಾವಂಗೂ ಇದೊಳ್ಳೆ ಆಲೋಚನೆ – ಹೇದು ಕಂಡತ್ತೋ ಏನೋ,
ಆದರೆ ಪಾರೆ ಮಗುಮಾವ ಅಂತೂ ಅವರ ಮಗಂಗೆ ಗ್ರಾಮರಾಜ್ಯ ಪ್ರತಿನಿಧಿಯ ಭೇಟಿಅಪ್ಪಲೆ ಹೇಳುಲೆ ಗ್ರೇಶಿಗೊಂಡವು.
~
ಶುಬತ್ತೆಯ ಹಾಂಗಿರ್ತ ಕೆಲವು ಮನೆಗಳಲ್ಲಿ ಒರಿಶಕ್ಕೊಂದರಿ ಊರಿಂಗೆ ಬಪ್ಪದು; ಊರಿಂದ ಅಲ್ಲಿಗೆ ಹೋಪೋರು ಬಾರೀ ಕಮ್ಮಿ ಇಪ್ಪದಿದಾ.
ಹಾಂಗಾಗಿಯೇ ಆ ಮಕ್ಕೊಗೆ ಊರಿನ ಆಹಾರ ಪದ್ಧತಿ, ಹಪ್ಪಳ, ಗೆಣಸಲೆ, ಉಂಡ್ಳಕಾಳು – ಇತ್ಯಾದಿಗೊ ಮೆಚ್ಚದ್ದದು.
ಹೀಂಗೆ ಗ್ರಾಮರಾಜ್ಯದ ಹಾಂಗಿಪ್ಪ ವ್ಯವಸ್ಥೆಗೊ ತಂದುತಂದು ಕೊಟ್ರೆ, ಇನ್ನಾಣ ಮಕ್ಕೊಗೆ ಆದರೂ ರುಚಿ ಮರವಲಿಲ್ಲೆ ಇದಾ.
ಪಿಜ್ಜಾ, ಬೊಜ್ಜ ಎಲ್ಲ ಹೇಳಿಅಪ್ಪಗ ತಂದು ಕೊಡ್ತವು. ಹಾಂಗಾಗಿ ಬೇಕಾದೋರು, ಬೇಡದ್ದೋರು ಎಲ್ಲೋರುದೇ ಅದರ ಗುರ್ತ ಮಡಿಕ್ಕೊಳ್ತವು.
ನಮ್ಮ ಆಹಾರಂಗಳೂ ಹಾಂಗೇ ಮನೆಬಾಗಿಲಿಂಗೆ ಎತ್ತಿರೆ, ಇದನ್ನೂ ಗುರ್ತ ಮಡಿಕ್ಕೊಂಗಲ್ಲದೋ? – ಕೇಳಿದವು ಪಾರೆ ಮಗುಮಾವ.
~
ಮಳೆಬಿಟ್ಟತ್ತು, ತೋಡಿಲಿ ನೀರಿಳುದತ್ತು. ಗೂಡಿಂದ ನಾಯಿ ಜಾಲಿಂಗಿಳುದತ್ತು, ಎಂಗೊ ಮನೆ ಹೊಡೆಂಗೆ ಹೆರಟೆಯೊ.
ಹೀಂಗೆ ಗ್ರಾಮಂಗಳ ಉತ್ಪನ್ನಂಗೊ ರಾಜ್ಯ ಇಡೀ, ದೇಶ ಇಡೀ ಪ್ರಸಾರ ಆಗಿ, ಗ್ರಾಮೋದ್ಯೋಗಿಗಳ ಕೈಗೆ ಸಂಪತ್ತು ಬಂದರೆ, ಊರಿಂಗೆ ಊರೇ ಉದ್ಧಾರ ಆಗದೋ?
ಪೇಟೆ – ಹಳ್ಳಿಗಳ ಸಮಸ್ತ ಜನವೂ ಸಿರಿವಂತರಾದರೆ, ಬೇಕುಬೇಕಾದ್ದರ ಸಿಕ್ಕುವ ಹಾಂಗಾದರೆ, ಅದುವೇ ಅಲ್ಲದೋ ರಾಮರಾಜ್ಯ?
ಈ ಆಶಯ ಯಶಸ್ವಿ ಅಪ್ಪಲೆ ನಾವೆಲ್ಲೋರುದೇ ಕೈಜೋಡುಸೇಕಡ, ಗ್ರಾಮರಾಜ್ಯದ ಕುರಿತು ನಮ್ಮ ಪೈಕಿ ಪೇಟೆಲಿಪ್ಪೋರಿಂಗೆ ಹೇಳೇಕಡ, ಸಾರಡಿ ಅಪ್ಪಚ್ಚಿ ಹೇಳಿದವು.
~
ಒಂದೊಪ್ಪ: ಗ್ರಾಮರಾಜ್ಯ ಉದಯ ಆದರೆ ರಾಮರಾಜ್ಯ ದೂರ ಇಲ್ಲೆ!
ಸೂ:
- ಗ್ರಾಮರಾಜ್ಯದ ಬಗ್ಗೆ ಹೆಚ್ಚಿನ ವಿವರಕ್ಕೆ ಅಧಿಕೃತ ಸಂಪರ್ಕ:
- ಮಿಂಚಂಚೆ:
- gramarajya@hareraama.in /
- samparka@hareraama.in /
- geervaanee@gmail.com
- ಪೋನು:
- 9449595208 /
9448506897
- 9449595208 /
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
ಉತ್ತಮ ಯೋಜನೆ, ಶುಭವಾಗಲಿ.. ಪರ್ದೆಶಿಗವಕ್ಕು ಎತ್ಸುವ ವ್ಯವಸ್ತೆ ಇದ್ದೊ /
ಶ್ರೀಗುರುಗಳ ಗ್ರಾಮರಾಜ್ಯ ಪರಿಕಲ್ಪನೆ ಬಹಳ ಒಳ್ಳೆದಿದ್ದು. ಪೇಟೆಲಿಪ್ಪವಕ್ಕೆ ಖಂಡಿತಾ ಇದರ ಪ್ರಯೋಜನ ಸಿಕ್ಕುಗು.
ಮಧ್ಯವರ್ತಿಗಳ ಕಿರಿಕಿರಿಯಿಲ್ಲದ್ದೆ, ಹಳ್ಳಿಯವಕ್ಕೂ ನಿರೀಕ್ಷಿಸಿದ ಬೆಲೆ ಸಿಕ್ಕುವ ಹಾಂಗಾಗಿ, ಪೇಟೆಲಿಪ್ಪವಕ್ಕೂ ಒಳ್ಳೆ ಉತ್ಪನ್ನಂಗೊ ಸಿಕ್ಕಿದರೆ, ಅದಕ್ಕಿಂತ ದೊಡ್ಡದು ಬೇರೆಂತ ಇದ್ದು. ಕೊಡೆಯಾಲದ ಗ್ರಾಮರಾಜ್ಯದ ಪ್ರತಿನಿಧಿ ಆರೂ ಹೇಳಿ ಈಗಳೇ ನೋಡೆಕು.
ಧನ್ಯವಾದ ಒಪ್ಪಣ್ಣಾ.
ತುಂಬಾ ಲಾಯಿಕ ಬರದ್ದೆ ಒಪ್ಪಣ್ಣ.
ಎಂಗೊ ಗ್ರಾಮರಾಜ್ಯದ ಸದಸ್ಯತ್ವವ ತೆಕ್ಕೊಂಡಿದೆಯೊ°. ನಾವು ಗುರ್ತಮಾಡಿಕೊಟ್ಟ ಸಾಮಾನುಗಳ ಹತ್ತು-ಹದಿನೈದು ದಿನದವಳ ಮನೆ ಬಾಗಿಲಿಂಗೆ ತಂದುಕೊಡುತ್ತವು. ಅಕ್ಕಿ, ಅವಲಕ್ಕಿ, ಬೇಳೆಗೊ, ಹಪ್ಪಳ, ಚಿಪ್ಸು, ಅರಸಿನ, ಕುಂಕುಮ ಗವ್ಯದ ಉತ್ಪನ್ನಂಗೊ- ಎಲ್ಲವೂ ಇದ್ದು. ಗುಣಮಟ್ಟವೂ ಲಾಯ್ಕಿದ್ದು. ಆನು ಹಪ್ಪಳ ತರಿಸಿದ್ದೇ ಬಂತು- ಹಪ್ಪಳದ ಕಟ್ಟು ಮನೆಯೊಳ ಬಪ್ಪದ್ದೇ ಮಳೆ ಪುಡ್ಚೋ! ಹಾಂಗಾಗಿ ಹಪ್ಪಳ ಹೊರುದು, ತಿಂದು ರುಚಿ ಹೇಂಗಿದ್ದು ಹೇಳಿ ನೋಡೆಕ್ಕಷ್ಟೆ ! ಈ ವ್ಯವಸ್ತೆ ಇದೇರೀತಿ ಮುಂದುವರ್ಕೊಂಡು ಹೋದರೆ ಗ್ರಾಮಂಗೊ ರಾಮರಾಜ್ಯದತ್ತ ಮೋರೆ ಮಾಡುದು ಖಂಡಿತ. ಮಧ್ಯವರ್ತಿಗಳ ನುಂಗಾಣ ಇಲ್ಲದ್ರೆ ಮಾಡಿದವಕ್ಕೋ, ಬೆಳದವಕ್ಕೋ ಅದರ ಲಾಭ ಸಿಕ್ಕುಗನ್ನೆ.
Engoge happalave ille 🙁 ningo öndondu heli kodi barusudu..
hare raama happaLa hELuvaaga kodi aavuttida Isarti happaLmaaDLe halasinakaayi aayidEille oppaNNa. innu oppaNNa hELida haange maLe dhireene hoyvaga asakka aavuttu aadare happaLalli nivrthi aavuthooille ententO chiMte suruaavuttu. adakke baravaNigeyEoLLedu miniya (enna swaMta maTTiMge) aMtoo Easakka enagoo appa viShaya oLLe suddi oppaNNa idakkoMdu oppa
ಶ್ರೀ ಗುರುಗಳ ಯೋಜನೆಗೋ, ಕಾರ್ಯಕ್ರಮಂಗೋ ಎಲ್ಲವುದೆ ತುಂಬಾ ಒಪ್ಪೊಪ್ಪ ಇದ್ದು.
ಹಾಂಗೇ ಈ ಗ್ರಾಮರಾಜ್ಯ ಯೋಜನೆ ಕೂಡಾ ಲಾಯಿಕ ಇಪ್ಪದರ ಇಂದ್ರಾಣ ಶುಧ್ಧಿಲಿ ಓದಿ ಸಂತೋಷ ಆತು.
ಸಾರಡಿ ತೋಡಿಲಿ ಅಷ್ಟು ಬೆಳ್ಳ ಬಂದರೂ ದಾಸನ ಗೆಡುವಿಂಗೆ ಎಂತಾಯ್ದಿಲ್ಲೆನ್ನೆ ಪುಣ್ಯ !
ಎಲಾ! ಮಳೆ ಬಂತೋ!! ಇದಾ ಮಳೆ ಬಂತು ಹೇದು ಹಪ್ಪಳ ಮಾಡ್ಸು ನಿಲ್ಸಿಕ್ಕೇಡಿ. ಹಲಸಿನಾಯಿ ಇತ್ತೆ ತನ್ನಿ. ಇಲ್ಲಿ ಬೆಶಿಲು ಕಾಯ್ತು ಎಕ್ಕಸಕ.
ಓಹ್! ಗ್ರಾಮರಾಜ್ಯ ಯೋಜನೆ ಲಾಯಕ ಇದ್ದನ್ನೇ. ಈ ಊರಿಂಗೂ ಎತ್ತುಸತ್ತವೋ? ಉಮ್ಮಾ ನಾಳಂಗೆ ಎಂಗಳ ಗುರಿಕ್ಕಾರ್ರತ್ರೆ ಕೇಳಿ ನೋಡ್ತೆ. ಹರೇ ರಾಮ.