ಮಾರ್ನೆಮಿ ಬಂದರೆಂತಾತು ಈಗೀಗ ಕೊರಗ್ಗನ ವೇಶ ಇಲ್ಲೆನ್ನೆ! ಒಳುದ ಗವುಜಿಗೊ ಮಾಂತ್ರ.
ಪಾರೆ ಅಜ್ಜಿಯ ಸ್ಥಾನಂದ ಹಿಡುದು ಪೊಳಲಿ, ಕಟೀಲು, ಕೊಲ್ಲೂರಿನ ದೊಡ್ಡ-ಅಮ್ಮಂದ್ರ ವರೆಗೆ ಎಲ್ಲೋರಿಂಗೂ ಸಂಭ್ರಮದ ಗವುಜಿಯ ವಾತಾವರಣ ಈಗ.
ಏಕೇದರೆ ಇದು ನವರಾತ್ರಿ.
ಅಂದೊಂದರಿ ನವರಾತ್ರಿಯ ಗೌಜಿಯ ಬಗ್ಗೆ ಮಾತಾಡಿದ್ದು ನಾವು – ನವನವೋನ್ಮೇಷ ಶಾಲಿನಿಯಾದ ಆ ಅಬ್ಬೆಯ ಬಗ್ಗೆ ಶುದ್ದಿ ಅದು.
ಓದಿದ್ದರನ್ನೇ.. (https://oppanna.com/?p=303)
~
ಓ ಮನ್ನೆ ತರವಾಡುಮನೆಗೆ ಹೋಗಿತ್ತಿದ್ದೆ, ಹೊತ್ತೋಪಗ.
ಮಾಷ್ಟ್ರುಮನೆ ಬದ್ಧ ಕಳಾತಲ್ಲದೋ – ಹೊತ್ತೋಪಗಾಣ ಚಾಯಕ್ಕೆ ಹೋದರೆ ಮಿಕ್ಷರೋ, ಕಾರಕಡ್ಡಿಯೋ ಎಂತಾರು ಸಿಕ್ಕುಗು ಹೇದು ಹೋದ್ಸು.
ಅಲ್ಲಿಂದ ಒಪಾಸು ಬಪ್ಪಗ ಮೂರ್ಸನ್ಧ್ಯೆ ಆಯಿದು, ತರವಾಡು ಮನೆ ಜಾಲಿಂಗೆ ಎತ್ತುವಾಗ.
ಮೂರ್ಸಂಧ್ಯೆ ಹೊತ್ತಿಂಗೆ ತರವಾಡು ಮನೆಲಿ ಒಂದು ಚಾಯ ಕುಡಿತ್ತ ಕ್ರಮ ಇದ್ದಿದಾ -ಹಾಂಗೆ ಅಲ್ಲಿಗೂ ಸೇರಿಗೊಂಡತ್ತು.
ಪಾತಿ ಅತ್ತೆ ಚಾಯ ತಂದು ಮಡಗುದೂ, ವಿದ್ಯಕ್ಕ ಭಕ್ತಿಗೀತೆ ಪದ್ಯ ಹಾಕಿ ದೇವರ ಕೋಣೆಗೆ ಹೋಪದೂ ಸರೀ ಆಯಿದು.
ನಾವು ಚಾಯ ಕುಡ್ಕೊಂಡೇ ದೇವರ ನೆಂಪು ಮಾಡಿತ್ತು.
ಹಿಂದಿ ಚಿತ್ರ ಗೀತೆಯ ಹಾಂಗಿಪ್ಪ ಹಿಂದೀ ಭಕ್ತಿ ಗೀತೆ ಅದು.
ರಜ ಹೊಸ ನಮುನೆ, ಆದರೆ ಆರತಿ ಮಾಡ್ಳೆ ಆವುತ್ತ ಹಾಂಗೆಯೂ ಇದ್ದತ್ತು.
ಹಲವು ಜೆನರ ಮೊಬೈಲಿಲಿಯೋ, ಕೆಲವು ಸರ್ತಿ ರೇಡ್ಯಲ್ಲಿಯೋ ಎಲ್ಲ ಕೇಳಿ ಅರಡಿಗು ಒಪ್ಪಣ್ಣಂಗೂ. ಈಗ ಅದು ವಿದ್ಯಕ್ಕನ ಹತ್ತರೆಯೂ ಇದ್ದಿದಾ.
ಆಗಲಿ, ಎಲ್ಲೋರುದೇ ಕೇಳ್ತವು, ನಾವುದೇ ಕೇಳಿಂಡು ಕೂದತ್ತು.
~
ಚಾಯ ಮುಗುದಪ್ಪಗ ತರವಾಡು ಮನೆ ಶ್ಯಾಮ್ಭಾವ ಎತ್ತಿದ. ಮನೆ ಒಳ ಎತ್ತಿ ಅಪ್ಪದ್ದೇ ಈ ಭಜನೆ ಪದ್ಯ ಕೇಳಿತ್ತಲ್ಲದೋ – ಕೇಸೆಟ್ಟಿನ ಒಟ್ಟಿಂಗೆ ತಾನೂ ಹಾಡಿಗೊಂಡು ಒಳ ಹೋದ.
ಒಸ್ತ್ರ ಮಾತಿಕ್ಕಿ ಬಂದು ಕಾಲುನೀಡಿ ಇಶ್ಚೇರಿಲಿ ಕೂದುಗೊಂಡ.
ಆಹ, ಆ..ಹ್ – ಹೇದು ಎರಡು ಸರ್ತಿ ಹೇಳಿದ, ಪದ್ಯ ಕೇಳಿಗೊಂಡು.
ಹೇಳಿಗೊನ್ಡೇ ಒಪ್ಪಣ್ಣನ ಒಂದರಿ ನೋಡಿಕ್ಕಿದ – ಒಪ್ಪಣ್ಣಂಗೆ ಈ ಪದ್ಯದ ತಲೆಬುಡ ಗೊಂತಿಲ್ಲೆ ಹೇದು ನಮ್ಮ ನೋಡುವಾಗಳೇ ಶ್ಯಾಂಭಾವಂಗೆ ಗೊಂತಾತು ಕಾಣ್ತು.
ಇದು ಗುಲ್ಶನ್ ಕುಮಾರ್ ದೇವಿ ಭಜನೆಗೊ ಒಪ್ಪಣ್ಣಾ – ಹೇದ.
ಗುಲ್ಶನ್ ಕುಮಾರೋ – ಹಾಂಗೆ ಹೇದರೆ ಆರು? – ಕೇಟೆ. ವಿವರ್ಸಿದ.
~
ಹೆಚ್ಚುಕಮ್ಮಿ ರಂಗಮಾವನ ಪ್ರಾಯದ ಒಂದು ಜೆನ ಆಡ. ಓ ಅಲ್ಲಿ, ದೆಹಲಿಯ ಯೇವದೋ ಮಾರ್ಗದ ಕರೆಲಿ ಛಾಯ,ಜ್ಯೂಸಿನ ಅಂಗುಡಿ ಮಡಗಿದ ಅಪ್ಪಮ್ಮಂಗೆ ಹುಟ್ಟಿದ ಬುದ್ಧಿವಂತ, ದೈವ ಭಕ್ತ ಮಾಣಿ.
ಮಾಣಿ ಬೆಳವ ಸಮಯಲ್ಲಿ ಅಪ್ಪಂಗೆ ಒಂದು ಕೇಸೆಟ್ಟಿನ ಅಂಗುಡಿ ಬಂತು. ಹಾಂಗಾಗಿ ಸಣ್ಣಾಗಿಪ್ಪಾಗಳೇ ಧ್ವನಿಮುದ್ರಣಂಗಳಲ್ಲಿ ಆಸಕ್ತಿ ಬಂದಿತ್ತಿದ್ದು.
ಮುಂದೆ, ಬೆಳದು ದೊಡ್ಡ ಆದ ಮತ್ತೆ ಇದರನ್ನೇ ಒಂದು ಜೀವನಾಸಕ್ತಿಯಾಗಿ, ಜೀವನಾಧಾರವಾಗಿ ಮಾಡಿಗೊಂಡತ್ತು.
ಟೀ-ಸೀರೀಸು ಹೇಳ್ತ ಒಂದು ಕಂಪೆನಿ ಸುರು ಮಾಡಿತ್ತು. ಹಿಂದಿ ಸಿನೆಮಂಗೊ, ಭಕ್ತಿ ಗೀತೆಗೊ ಇತ್ಯಾದಿಗಳ ಸಾಲು ಸಾಲು ಯಶಸ್ವೀ ಧ್ವನಿಮುದ್ರಿಕೆಗೊ ಬಂತು.
ತೊಂಭತ್ತು-ತೊಂಭತ್ತೈದರ ಆಸುಪಾಸಿನ ಇಸವಿಲಿ ಅತ್ಯಂತ ಹೆಚ್ಚು ಆದಾಯದ ಶ್ರೀಮಂತ ಆಗಿದ್ದತ್ತು.
ಎಲ್ಲ ಒಯಿವಾಟುಗಾರನ ಹಾಂಗೆ ಈ ಒಯಿವಾಟುಗಾರನೂ ಬೆಳದು ದೊಡ್ಡ ಆತು. ಬಡತನದ ಬಾಲ್ಯಂದ ಬಂದು ಸಾವಿರಾರು ಕೋಟಿಯ ಯಶಸ್ವೀ ಉದ್ಯಮಿ ಆತು.
ಅದರ್ಲಿ ಎಂತ ಇದ್ದು ವಿಶೇಷ? ವಿಶೇಷ ಇದ್ದು.
~
ಎಲ್ಲ ಪೈಶೆಕ್ಕಾರಂಗಳದ್ದು ಒಂದು ನಮುನೆ ಜೀವನ ಆದರೆ, ಈ ಜೆನರದ್ದು ಇನ್ನೊಂದೇ ನಮುನೆ ಆಗಿತ್ತು.
ದೇವರನಾಮ, ಹರಿಕತೆಯ ನಮುನೆ ಕೇಸೆಟ್ಟುಗಳ ಮಾಡುಸ್ಸು ಮಾಂತ್ರ ಅಲ್ಲ, ಆ ಭಜನೆಗಳ ಹಾಡುಸ್ಸು ಮಾಂತ್ರ ಅಲ್ಲ, ಸ್ವತಃಅ ದೈವಭಕ್ತ ಆಗಿತ್ತಾಡ.
ಅದರ್ಲಿಯೂ ವಿಶೇಷವಾಗಿ – ಕಾಶ್ಮೀರಲ್ಲಿಪ್ಪ ವೈಷ್ನೋದೇವಿಯ ಭಕ್ತನಾಗಿತ್ತಾಡ.
ನವರಾತ್ರಿಯ ದೇವಿಯ ಸಾವಿರಾರು ಹಾಡುಗಳ ಹಾಡ್ಸಿದ್ದಡ, ಹಾಡಿದ್ದಡ. ಸುಮಾರು ಸರ್ತಿ ವೈಷ್ಣೋದೇವಿಯ ಸನ್ನಿಧಿಗೆ ಹೋಯಿದಾಡ.
ಅಷ್ಟು ಮಾಂತ್ರ ಅಲ್ಲ, ವೈಷ್ಣೋದೇವಿಯ ದೇವಸ್ಥಾನದ ಆಸುಪಾಸಿನ ಹಲವಾರು ಜಾಗೆಗಳ ಅಭಿವೃದ್ದಿ ಮಾಡಿ, ಬಪ್ಪ ದರ್ಶನಾರ್ಥಿಗೊಕ್ಕೆ ಉಳ್ಕೊಂಬಲೆ ವೆವಸ್ತೆ, ಊಟೋಪಚಾರದ ವೆವಸ್ಥೆ – ಇತ್ಯಾದಿಗಳ ಆರಂಭ ಮಾಡಿ, ಇದು ಯೇವತ್ತಿಂಗೂ ನೆಡೆತ್ತ ಹಾಂಗೆ ಶಾಶ್ವತ ಏರ್ಪಾಡುಗಳ ಮಾಡಿತ್ತಾಡ.
ಸಮಾಜಂದ ಸಿಕ್ಕಿದ ಬಂಡವಾಳದ ಒಂದಂಶವ ಸಮಾಜಕ್ಕೇ ಕೊಟ್ಟತ್ತು.
ಅಬ್ಬೆ ಕೊಟ್ಟದರ ಒಪಾಸು ಅಬ್ಬೆಗೇ ಕೊಟ್ಟತ್ತು.
ಇಂದಿಂಗೂ – ವೈಷ್ಣೋದೇವಿಯ ಕಾಂಬಲೆ ಹೋವುತ್ತ ಜೆನಂಗೊ ಈ ಗುಲ್ಷನ್ ಕುಮಾರನ ಏರ್ಪಾಡುಗಳ ಬಳಸಿಗೊಂಡು, ಆ ಜೆನಕ್ಕೆ ಎರಡು ಮಾತಿನ ಆಶೀರ್ವಾದವ ಮನಸ್ಸಿಲೇ ಗ್ರೇಶಿಗೊಳ್ತವಾಡ.
ಏಕೇದರೆ, ಆ ಬೆಶ್ಚಂಗೆ ಏರ್ಪಾಡುಗೊ ಇಪ್ಪದು ಎಲ್ಲ ಸವುಕರ್ಯ ಸಿಕ್ಕುತ್ತ ಕೆಳ ಅಲ್ಲ, ಓ ಅಲ್ಲಿ, ಕಾಶ್ಮೀರದ ಗುಡ್ಡೆ ತಲೆಲಿ.
~
ಇರಳಿ. ಎಲ್ಲ ಒಳ್ಳೆದಕ್ಕೂ ಒಂದೊಂದು ಅಂತ್ಯ ಇದ್ದಾಡ. ಈ ಜೆನಕ್ಕೂ ಹಾಂಗೇ ಆತು.
ಒಂದು ದಿನ, ಯೆತಾವತ್ತಿನ ಹಾಂಗೇ ದೇವಸ್ತಾನಕ್ಕೆ ಹೋಗಿ ಬಪ್ಪಗ – ಆರೋ ಬಂದು ಬೆಡಿ ಬಿಟ್ಟವಾಡ.
ದಾವೂದು ಇಬ್ರಾಯಿಯ ಪೈಕಿಯೋರು ಹೇದು ಮತ್ತೆ ಗೊಂತಾತಾಡ.
ದಾವೂದು ಬ್ಯಾರಿ ’ಕೇಳಿದಷ್ಟು ಪೈಶೆ ಕೊಡದ್ರೆ ಕೊಲ್ಲುತ್ತೆ’ – ಹೇದು ಎರಡು ಮೂರು ಸರ್ತಿ ಹೆದರ್ಸಿದ್ದಾಡ. ಆದರೆ ಆ ಸರ್ತಿ ಬದ್ಕಿಗೊಂಬಲೆ ಎಡಿಗಾತಿಲ್ಲೆ.
ತಾನೇ ಕಟ್ಟಿದ ಒಂದು ದೇವಸ್ತಾನದ ಎದುರೆ ತೀರಿಗೊಂಡತ್ತು.
ಶೂನ್ಯಂದ ಆರಂಭ ಮಾಡಿ, ದೊಡ್ಡ ಒಯಿವಾಟುಗಾರ ಆಗಿ ಬೆಳದು, ಅತಿ ಶ್ರೀಮಂತ ಆದರೂ – ದುರ್ಗಾರಾಧನೆ ಮಾಡಿಗೊಂಡು, ವೈಶ್ಣೋದೇವಿಯ ಮಗ ಆಗಿ, ಸಮಾಜ ಸೇವೆಗಳ ಮಾಡಿದ ಆ ಜೆನ, ರಾಕ್ಶಸರ ಗುಂಡಿಂಗೆ ತೀರಿಹೋಯೇಕಾದ ಪರಿಸ್ಥಿತಿ ಬಂತು. ಛೇ!
ತರವಾಡು ಮನೆ ವಿದ್ಯಕ್ಕಂಗೆ ಆ ಹಿಂದಿ ಭಜನೆಗೊ ತುಂಬಾ ಇಷ್ಟಂಗೊ. ಹಾಂಗೇ ಕೋಟ್ಯಂತರ ಜೆನಂಗೊಕ್ಕೆ ಇಂದಿಂಗೂ ಅದರ ಭಜನೆಗೊ ತುಂಬಾ ಇಷ್ಟ ಅಡ.
ಅದಿರಳಿ.
~
ಭಾರತದ ಕೊಡೀಲಿ ಇಪ್ಪ ದೇವಿ ದೇವಸ್ತಾನವ ಬೆಳೆಶಿದ, ಅಬ್ಬೆಯ ಮಗನ ಬಗ್ಗೆ ಶುದ್ದಿಯ ನವರಾತ್ರಿಯ ಸಮಯಲ್ಲಿ ಹೇಳುವೊ – ಹೇದು ಕಂಡತ್ತು.
ಇನ್ನೂ ಹಲವಾರು ಜೆನಂಗೊ ಈ ನಮುನೆಲಿ ಸಮಾಜಂದ ಸಿಕ್ಕಿದ್ಸರ ಸಮಾಜಕ್ಕೆ ಕೊಡ್ಳೆ ಪ್ರೇರಣೆ ಆಗಲಿ – ಹೇದು ಬೈಲಿನ ಹಾರೈಕೆ.
ಎಲ್ಲೋರಿಂಗೂ ನವರಾತ್ರಿಯ ಶುಬಾಶಯಂಗೊ.
~
ಒಂದೊಪ್ಪ: ಅಬ್ಬೆ ಕೊಟ್ಟದರ ಹಂಚಿ ತಿಂಬವನೇ ನಿಜವಾಗಿ ಉಶಾರಿ ಅಪ್ಪದು.
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
ಹೊಸ ಶುದ್ದಿ. ವಿಷಯ ಲಾಯಕಿತ್ತು. ಒಳ್ಳೆ ಕೆಲಸ ಮಾಡಿದವಕ್ಕೆ ಹೀಂಗಿಪ್ಪ ಗತಿ ಬಂತಾನೆ ಹೇಳಿ ಕೇಳಿ ಬೇಜಾರಾತು.
ತಾನು ನಂಬಿದ ವೈಷ್ಣೋ ದೇವಿ ದೇವಸ್ಥಾನದ ಎದುರೇ ದುಷ್ಟರ ಗುಂಡಿಂಗೆ ಆಹುತಿ ಆದ್ದು ದುರಾದೃಷ್ಟವೇ ಸೈ.
ಜೆನಂಗೊಕ್ಕೆ ಅನುಕೂಲ ಮಾಡಿ ಕೊಟ್ಟ ಸಮಾಜ ಸೇವೆ, ಅವನ ಹೆಸರು ಚಿರಸ್ಥಾಯಿಯಾಗಿ ಒಳಿತ್ತು ಹೇಳುವದರಲ್ಲಿ ಯಾವ ಸಂಶಯವೂ ಇಲ್ಲೇ.
ಸಮಾಜ ಸೇವೆಗೆ ಇದು ಸ್ಪೂರ್ತಿದಾಯಕ
ಒಳ್ಳೆದಾಯಿದು