Oppanna.com

‘ಮನೆತುಂಬಿದ’ ಕದಿರು ನವರಾತ್ರಿಲಿ ‘ಹೊಸ್ತು’ ಆಗಿ ಬೆಳಗಲಿ..

ಬರದೋರು :   ಒಪ್ಪಣ್ಣ    on   19/10/2012    14 ಒಪ್ಪಂಗೊ

ಕಾವೇರಿ ಶೆಂಕ್ರಾಂತಿ ಬಂದಪ್ಪದ್ದೇ ಮುಜುಂಗರೆಲಿ ಸಾವಿರಾರು ಆಸ್ತಿಕರು ಮಿಂದುಗೊಂಡವು.
ಪಿತೃಪಕ್ಷ ಮುಗಿತ್ತಲೆಕ್ಕಲ್ಲಿ ಹಲವೂ ದಿಕ್ಕೆ ಅಷ್ಟಗೆ ಮಾಡಿ ಹೆರಿಯೋರ ನೆಂಪುಮಾಡಿಗೊಂಡವು.
ಭೂಕಂಪ ಆದ ಲೆಕ್ಕಲ್ಲಿ ಎಲ್ಲೋರುದೇ ಅಬ್ಬೆಯ ಒಂದರಿ ನೆಂಪುಮಾಡಿಗೊಂಡವು.
ಅಂಬಾಗಿರಿಲಿ ಅಂಬಾಕಥೆ ಸುರು ಆದ ಲೆಕ್ಕಲ್ಲಿ ಹಲವು ಜೆನ ಶಿರಸಿ ಬಸ್ಸು ಹತ್ತಿಗೊಂಡವು.
ನೋಡಿಂಡಿದ್ದ ಹಾಂಗೇ ಶರದೃತು – ಆಶ್ವಯುಜ ಮಾಸ- ಶರನ್ನವರಾತ್ರಿಯೂ ಬಂತು.

~
ಪಾಡ್ಯಂದ ನವಮಿ ಒರೆಂಗೂ ಒಂದೊಂದು ದೇವಿಯ ಪೂಜೆ ಮಾಡಿ, ದಶಮಿ ದಿನ ವಿದ್ಯಾಧಿದೇವತೆ ಶಾರದೆಯ ಪೂಜಿಸಿ ಅಮ್ಮನ ಆಶೀರ್ವಾದ ಬೇಡ್ತ ಕಾಲವೇ ಈ ನವರಾತ್ರಿ.
ಒರಿಶ ಒರಿಶ ಕಳುದ ಹಾಂಗೇ; ಒರಿಶದ ಅದೇ ಮಾಸಂಗೊ ಮತ್ತೆ ಮತ್ತೆ ತಿರುಗಿಂಡ್ರೂ – ಎಡಕ್ಕಿಲಿ ಬಂದೇ ಬತ್ತು ಈ ನವರಾತ್ರಿ.
ಹೆಸರೇ ಹೇಳ್ತ ಹಾಂಗೆ ಒಂಭತ್ತು ದಿನದ ಈ ಆಚರಣೆಯ ವಿಶೇಷತೆಯ ನಮ್ಮ ವಿಜಯತ್ತೆ ನಿನ್ನೆ ನವಗೆ ಹೇಳಿದ್ದವು. (https://oppanna.com/lekhana/navaratriya-navavidha-pooje)
ಅಬ್ಬೆಯ ಆದಿಮಾಯೆ ಹೇಳ್ತವು. ಸೃಷ್ಟಿ ಆರಂಭ ಆಯೇಕಾರೆ ಮದಲೇ ಈ ಅಬ್ಬೆ ಇದ್ದಿದ್ದವಾಡ; ಬಾಬೆ ಕಣ್ಣುಬಿಡುವ ಮದಲೇ ಅಬ್ಬೆ ಹಸನ್ಮುಖಿಯಾಗಿ ಇಪ್ಪ ಹಾಂಗೆ.
ಅಬ್ಬೆ ಹೇದರೆ ಪ್ರಾಚೀನತೆಯ ಸಂಕೇತ.
~
ಸೃಷ್ಟಿ ಹೇದರೆ ಹೊಸತ್ತು ಹೇದು ದ್ವನ್ಯಾರ್ಥ.
“ಹೊಸತನ”ದ ಸೃಷ್ಟಿಯ ಪ್ರತೀಕವೂ, ನವನವೋನ್ಮೇಷ ಶಾಲಿನಿಯೂ ಆದ ಆ ಮಹಾಚೇತನವೂ – ಆದಿಮಾಯೆ ಅಬ್ಬೆಯೇ.
ಅದಕ್ಕೆ ಪೂಜೆ ಮಾಡ್ತ ಕಾರಣ ನವರಾತ್ರಿ ಹೇಳ್ತ ಇನ್ನೊಂದರ್ಥವೂ ಬತ್ತಾಡ; ಚೌಕ್ಕಾರುಮಾವ ಹೇಳಿತ್ತಿದ್ದವು.
ಅಂಬಗ ನವಗೆ ಸಮಗಟ್ಟು ಅರ್ತ ಆಗದ್ದರೂ ತಲೆ ಆಡುಸಿತ್ತಿದ್ದು.
ಆದರೆ ಈಗ ಕೂದೊಂಡು ಬೈಲಿಲಿ ಶುದ್ದಿ ಹೇಳುವಾಗ ಅಪ್ಪನ್ನೇದು ಕಾಣ್ತು.
ಹಾಂಗಾಗಿ, ನವೀನ ಭಾವವಾದ ಆ ಪ್ರಕೃತಿ ಆರಾಧನೆಯ ದಿನಂಗಳೇ ನವರಾತ್ರಿ.
~

ಹಬ್ಬದ ಗವುಜಿಗೆ ಮನಸ್ಸು ತುಂಬುತ್ತು. ನವರಾತ್ರಿ ಹಬ್ಬಕ್ಕೆ ಎಲ್ಲವೂ ಹೊಸತ್ತೇ.
ಹೊಸ ಆವೇಶ, ಹೊಸ ಹುರುಪು, ಹೊಸ ಶಕ್ತಿ.. ಎಲ್ಲವೂ.
ಎಲ್ಲವೂ ಹೊಸತ್ತಾಗಿಪ್ಪಾಗ – ನಮ್ಮ ಊರಿಲಿ ಇನ್ನೊಂದು ಆಚರಣೆ ಇದ್ದು. ಅದುವೇ “ಹೊಸ್ತು”.
ಮನಸ್ಸು ತುಂಬಿದ್ದ ಸಂದರ್ಭಲ್ಲಿ ಮಾಡ್ತ ಆಚರಣೆ ಇದ್ದು – ಅದುವೇ “ಮನೆ ತುಂಬುಸುದು”.
ನವರಾತ್ರಿ ಸಂದರ್ಭಲ್ಲಿ ಮಾಡ್ತ – ಈಗೀಗ ಕಮ್ಮಿ ಆದ ಈ ಆಚರಣೆ ಬಗ್ಗೆ ಈ ವಾರ ಬೈಲಿಲಿ ಶುದ್ದಿ ಮಾತಾಡುವನೋ?

~

ಮನೆ ತುಂಬುಸುದು; ಹೊಸ್ತು – ಎರಡು ಆಚರಣೆಗೊ, ಒಂದಕ್ಕೊಂದು ಸಮ್ಮಂದ ಇಪ್ಪಂತಾದ್ದು.
ತರವಾಡುಮನೆಲಿ ಈಗ ರಂಗಮಾವ ಎಲ್ಲವನ್ನೂ ತೂಷ್ಣಿಲಿ ಮಾಡ್ತವು; ಅದರ ಬೈಲಿಂಗೆ ಹೇಳುದಲ್ಲ.
ಹೇಳ್ತರೆ – ಮದಲಿಂಗೆ ಶಂಬಜ್ಜ ಮಾಡಿಂಡಿದ್ದದರ ನೆಂಪುಮಾಡಿ ಹೇಳೇಕು.
ನೆಂಪು ಮಾಡಿ ಹೇಳೇಕಾರೆ ಆರಾಯೇಕು? ಆಚಮನೆ ದೊಡ್ಡಪ್ಪನೇ ಆಯೇಕಟ್ಟೆ.
ಬೈಲಿಲೇ ನೆಡಕ್ಕೊಂಡು ಆಚಮನೆ ದೊಡ್ಡಪ್ಪನಲ್ಲಿಗೆ ಹೋದೆ. ಹೋಪ ಹೊತ್ತಿಂಗೆ ಒಂದರಿಯಾಣ ಕೆಲಸ ಎಲ್ಲ ಆಗಿ ಮಾಷ್ಟ್ರುಮಾವನ ಮನೆಗೆ ಹೋಗಿತ್ತವು ದೊಡ್ಡಪ್ಪ. ಕಾರ್ಯ ಇದ್ದೊಂಡಲ್ಲ, ಹೀಂಗೇ ಹೋಪದು ಬೈಲಿನೊಳ; ನಾವು ಆಚಮನೆ ದೊಡ್ಡಪ್ಪನಲ್ಲಿಗೆ ಹೋದ ಹಾಂಗೆ. ನಾವುದೇ ಹೋತು ಮಾಷ್ಟ್ರುಮಾವನ ಮನಗೆ.

ಬೈಲಿನ ಮಂಗನ ಉಪದ್ರಕ್ಕೆ ಮಂಗಂಗಳ ಹಿಡಿಶಿರಕ್ಕೋ – ಹೇದು ಏನೋ ಒಯಿವಾಟು ಮಾತಾಡಿಂಡಿತ್ತವು ಆಚಮನೆ ದೊಡ್ಡಪ್ಪ. ಮಾಷ್ಟ್ರುಮಾವ ಬಾಯಿಲಿ ಎಲೆ ಮಡಿಕ್ಕೊಂದು ಹೂಂಕುಟ್ಟಿಗೊಂಡಿದ್ದವು, ಜಾಲಿಂಗೇ ಕೇಳ್ತು.
ಮೆಲ್ಲಂಗೆ ಹೋಗಿ ಮಾತುಕತೆಲಿ ನಾವುದೇ ಸೇರಿಗೊಂಡತ್ತು. ಒಂದರಿಯಾಣ ಮಾತುಕತೆ ಮುಗುಕ್ಕೊಂಡಿದ್ದ ಸಮಯ ನೋಡಿಗೊಂಡು ಈ ಶುದ್ದಿತೆಗದೆ.
ಮನೆತುಂಬುಸುದು – ಹೊಸ್ತು ಇತ್ಯಾದಿಗಳ ಬಗ್ಗೆ ಮೆಲ್ಲಂಗೆ ಒಂದೊಂದೇ ವಿಶಯ ಬಂದ ಮತ್ತೆ, ಶಂಬಜ್ಜ ಹೇಂಗೆ ಮಾಡಿಂಡಿತ್ತವು ದೊಡ್ಡಪ್ಪಾ – ಕೇಳಿದೆ. ಜಾಲಕೊಡಿಯಂಗೆ ಹೋಗಿ, ಒಂದರಿ ಎಲೆ ತುಪ್ಪಿದವು. ಅಲ್ಲಿಂದಲೇ ವಿಶಯ ಸುರುಮಾಡಿಂಡು ಒಪಾಸು ಬಂದವು. “ಹಾಂಗೊ, ಹಳೆ ಕ್ರಮದಂತೆ ನೋಡ್ತರೆ ಸುಮಾರಿದ್ದು…” ಹೇದು ವಿಶಯ ವಿವರಣೆ ಸುರುಮಾಡಿದವು.
ಇದು ನಮ್ಮ ಬೈಲಿಲಿ ಎಷ್ಟೋ ಶಂಬಜ್ಜಂದ್ರು ಮಾಡಿಂಡಿದ್ದ ಕ್ರಮ ಅದುವೇ ಆದ ಕಾರಣ, ಒಂದರಿ ನೆಂಪುಮಾಡುವೊ.
ಅಲ್ಲದೋ?

~

ಶಂಬಜ್ಜನ ಕಾಲಲ್ಲಿ ಗೆದ್ದೆಬೇಸಾಯ ಇತ್ತಲ್ಲದೋ – ಅದು ಶಂಬಜ್ಜನೇ ಮಾಡಿದ್ದದಲ್ಲ, ಅವರ ಅಪ್ಪ ಎಂಕಪ್ಪಜ್ಜನೂ ಅಲ್ಲ – ಅವರಿಂದಲೂ ಎಷ್ಟೋ ಹಿಂದಾಣ ಹೆರಿಯೋರು ಮಾಡಿದ್ದು ಆ ಗೆದ್ದೆ, ಕಟ್ಟಪುಣಿ, ನೀರಾವರಿ ಇತ್ಯಾದಿಗಳ ವೆವಸ್ತೆ.
ಮದಲಿಂಗೆಲ್ಲ ಪತ್ತನಾಜೆ ಕಳುದು ಹೂಡಿ ಮಡಗಿರೆ ಒಂದರಿಯಾಣ ಮಳೆ ಬಂದ ಕೂಡ್ಳೆ ಬಿತ್ತುದು.
ಬಿತ್ತಿದ್ದು ಹುಟ್ಟಿದ ಕೂಡ್ಳೇ ಮಳೆ ಒಳ್ಳೆತ ಬಕ್ಕಿದಾ, ಲಾಯ್ಕಲ್ಲಿ ನೇಜಿನೆಟ್ಟು, ಬೇಸಾಯ ಮಾಡುಗು.

ಮತ್ತೆ ಇಡೀ ಮಳೆಗಾಲವೇ – ಆಟಿ, ಸೋಣೆ ಎಲ್ಲ ಕಳುದು, ಕನ್ನೆ ತಿಂಗಳೂ ಕಳುದಪ್ಪಗ – ಹತ್ತರತ್ತರೆ ತೊಂಭತ್ತು ದಿನದ ಬೆಳೆ ಬೆಳದು ನಿಲ್ಲುತ್ತು. ಭತ್ತದ ಸೆಸಿಗಳಲ್ಲಿ ಕದುರು ಬಂದು, ಕದುರುಗಳಲ್ಲಿ ಹಾಲು ಎರ್ಕಿ, ಗಟ್ಟಿ ಆವುತ್ತಾ – ಅಕ್ಕಿಯ ರೂಪ ಪಡದಿರ್ತು. ಕದ್ರಿನ ಬಾದಿಗೆ ಸೆಸಿಗೊ ರಜರಜವೇ ಬಗ್ಗಿರ್ತು – ಪಾಂಡಿತ್ಯ ಇಪ್ಪೋರ ವಿನಯದ ಹಾಂಗೆ.
ಅದೇ ಸಂದರ್ಭಲ್ಲಿ ಅದರ ಕೊಯ್ಯೇಕಾದ್ಸು ಇದಾ!

ಮದಲಿಂಗೆ ಕಾಲನ ಹೊಂದಾಣಿಕೆ ಹೇಂಗಿತ್ತು ಹೇದರೆ – ಕೊಯ್ವ ಸಮಯ ನವರಾತ್ರಿಯೇ ಆಗಿಕ್ಕು.
ನವರಾತ್ರಿಯ ಶುಭ ಪರ್ವಲ್ಲಿ ಹೊಸ ಬೆಳೆ ಮನೆಗೆ ಬಪ್ಪಲೆ.
ಹೊಸ ಒರಿಶದ ಹೊಸ ಅಕ್ಕಿಯ ಬೆಳೆ ಮನೆಗೆ ಲಕ್ಷ್ಮಿ ಆಗಿ ಸೇರಿಗೊಳ್ತು.
ಹೊಸ ದಿನಂಗಳಲ್ಲಿ ಹೊಸ ಅಕ್ಕಿಯ ಊಟ!! ನವರಾತ್ರಿಗೆ ನವಾನ್ನ!

~

ಮನೆ ತುಂಬುಸುದು:

ಮದುವೆ ಆಗಿ ಕೂಸಿನ ಗೃಹಲಕ್ಷ್ಮಿಯಾಗಿ ಮನೆತುಂಬುಸುತ್ತ ಸಂಗತಿ ನವಗೆಲ್ಲೋರಿಂಗೂ ಅರಡಿಗು.
ಆದರೆ, ಈ ನವರಾತ್ರಿಲಿ ಮನೆತುಂಬುಸುದು ಅದರ ಅಲ್ಲ; ನಮ್ಮ ಗೆದ್ದೆಲಿ ಬೆಳದ ಧಾನ್ಯಂಗಳ “ಧಾನ್ಯಲಕ್ಷ್ಮಿ” ಆಗಿ ಮನೆತುಂಬುಸುದು.
ಗೆದ್ದೆಂದ ಮನೆಗೆ ತರೆಕ್ಕಾರೆ ಸೀತ ತಪ್ಪದೋ? ಅಲ್ಲ; ಹೆರಿಯೋರ ಪ್ರಕಾರ ಅದಕ್ಕೊಂದು ನಿರ್ದಿಷ್ಟ ಕ್ರಮ ಇದ್ದು.
ಶಂಬಜ್ಜ ಎಂತೆಲ್ಲ ಮಾಡಿಗೊಂಡಿತ್ತವು ಹೇಳ್ತದರ ಆಚಮನೆ ದೊಡ್ಡಪ್ಪ ನೆಂಪುಮಾಡಿಗೊಂಡೇ ಹೋದವು.

ಗೌರಿಬಳ್ಳಿ, ಪೊಲಿಬಳ್ಳಿ, ಬೆದುರು ಸೊಪ್ಪು, ಹಲಸಿನ ಕೊಡಿ, ಮಾವಿನ ಕೊಡಿ, ಗೋಳಿ ಸೊಪ್ಪು, ಅತ್ತಿ ಸೊಪ್ಪು, ದಡ್ಡಾಲ ಸೊಪ್ಪು, ದಡ್ಡಾಲದ ನಾರು – ಇಷ್ಟರ ಮುನ್ನಾಣ ದಿನವೇ ತಂದು ತೊಳಶಿಕಟ್ಟೆಯ ಬುಡಲ್ಲಿ ಮಡಗ್ಗಡ, ಶಂಬಜ್ಜ°.
ಇದೆಲ್ಲ ಮರದಿನದ ಕದುರು ತುಂಬುಸುವ ಕಾರ್ಯಕ್ಕೆ ಇಪ್ಪ ಸರಂಜಾಮುಗೊ.
ಈ ಕಾರ್ಯಕ್ಕೆ ಪರಿಕರ್ಮಿ ಕಾಂಬುಅಜ್ಜಿಗೆ ಹೇಳಿ ಆಗೆಡ; ಎಲ್ಲವೂ ಬಾಯಿಪಾಟ ಇದ್ದತ್ತು.
ಇದೆಲ್ಲ ಸೊಪ್ಪುಗೊ ಸಿಕ್ಕಿತ್ತಿಲ್ಲೆ ಹೇದರೆ ಬೇಜಾರಿಲ್ಲೆ- ಹಲಸು ಮಾವಿನ ಎಲೆ ಪ್ರಧಾನವಾಗಿದ್ದೊಂಡು – ಯೇವದಾರು ಐದು ಬಗೆ ಸೊಪ್ಪುಗಳ ತಂದರೆ ಸಾಕು – ಹೇಳ್ತದು ಕಾಂಬುಅಜ್ಜಿಗೆ ಗೊಂತಿತ್ತು.

ಕದುರು ಮನೆತುಂಬುಸುವ ದಿನ ಉದಿಅಪ್ಪಗಳೇ ಎದ್ದು ಸೀತ – ಗೆದ್ದೆಗೆ ಹೋಕು – ಕತ್ತಿ ಹಿಡ್ಕೊಂಡು. ಫಲತುಂಬಿ ತೂಗುವ ತೆನೆಯ ಭತ್ತದ ಸೆಸಿಗಳ ಒಂದಷ್ಟು ಕೊಯಿದು ತೆಕ್ಕೊಂಡು ಬಕ್ಕು.
ಗೆದ್ದೆ ಬೇಸಾಯ ಇಲ್ಲದ್ದೋರುದೇ ಕದ್ರುತುಂಬುಸಲೆ ಇದ್ದು; ಹತ್ತರಾಣ ಗೆದ್ದೆಂದ ಕೊಯ್ಕೊಂಡು ಬಂದರಾತು.
ಆದರೆ – “ಕದ್ರು ಕೊಯ್ಕೊಳ್ತೆ” ಹೇದು ಕೇಳುವ ಕ್ರಮ ಇಲ್ಲೆ. ಕೇಳದ್ದೆ ಕೊಯ್ಕೊಂಡು ಬಂದರೆ “ಮನೆ ತುಂಬುಸುಲೆ ಆಯಿಕ್ಕು” ಹೇಳ್ತದು ಗೆದ್ದೆ ಎಜಮಾನಂಗೂ ಅರಡಿಗು.
ಊರ ಕಟ್ಟುಪಾಡೇ ಹಾಂಗಡ, ದೊಡ್ಡಪ್ಪ ಹೇಳಿದವು. ಅದಿರಳಿ.

ತಂದ ಕದುರಿನ ಕಟ್ಟವ ತೊಳಶಿಕಟ್ಟೆಲಿ ಮಡಗ್ಗು. ಅದಾದಮತ್ತೆ, ಯೇವತ್ರಾಣಂತೆ ಮಿಂದು ನಿತ್ಯಾನುಷ್ಠಾನ, ಜೆಪ, ತಪ ಎಲ್ಲ ಆಗಿಯೇ ಕದುರು ತುಂಬುಸುತ್ತ ಕಾರ್ಯ ಮುಂದುವರಿಶುತ್ತದು.
ತಂದು ಮಡಗಿದ ಸುವಸ್ತುಗಳ ಮೇಗಂಗೆ ಉಂಬೆದನದ ತಂಬಾಲು ಪ್ರೋಕ್ಷಣೆ ಮಾಡುಗು ಶಂಬಜ್ಜ.

ತಂಬಾಲು ಸಿಕ್ಕದ್ದ ಅನಿವಾರ್ಯ ಕಾಲಲ್ಲಿ ಕಾಯಾಲುದೇ ಅಕ್ಕಾಡ; ದೊಡ್ಡಪ್ಪ ನೆಂಪುಮಾಡಿಗೊಂಡವು.
ಇದಾಗಿ, ಮನೆಯೋರೆಲ್ಲ ಸೇರಿಗೊಂಡು – ಶಂಖ ಜಾಗಟೆಯ ಧ್ವನಿಲಿ, ಬಾಯಿಲಿ “ಹಿರಣ್ಯ ವರ್ಣಾಂ ಹರಿಣೀಂ..” ಶ್ರೀಸೂಕ್ತವೂ – ಹೇಳಿಗೊಂಡು ಲಕ್ಷ್ಮಿಯ ಹೊಸ್ತಿಲು ದಾಂಟುಸಿ ದೇವರೊಳ ದೇವರೆದುರು ಮಡಗ್ಗು.

ಹಾಂ- ತಪ್ಪಗ ಮುಂಡಾಸು ಕಟ್ಟಿಗೊಳೇಕು; ಬರೀ ತಲೆಲಿ ತಪ್ಪಲಾಗ ಹೇದು ನೆಂಪುಮಾಡಿಗೊಂಡವು ದೊಡ್ಡಪ್ಪ.

~

ತಂದು?
ದೇವರೊಳ ಸಣ್ಣಕೆ “ಧಾನ್ಯಲಕ್ಷ್ಮಿ” ಪೂಜೆ ಮಾಡುದು.
ಲಕ್ಷ್ಮಿಯ ರೂಪಲ್ಲಿಪ್ಪ ಧಾನ್ಯ – ಆ ಭತ್ತ ಮನೆಯ ಉದ್ಧರುಸೇಕು ಹೇಳ್ತ ಸಣ್ಣದೊಂದು ಪ್ರಾರ್ಥನೆಯೂ ಮಾಡುದು.
ಚೆಕ್ಕರ್ಪೆ ನೈವೇದ್ಯ ಆ ದಿನಕ್ಕೆ ವಿಶೇಷ. ವಿದ್ಯಕ್ಕನ ಹಾಂಗೆ ಹೋವುತ್ತ ಬತ್ತ ತಿಂದರೆ ಒಳಿಯ; ಅಲ್ಲದ್ದರೆ ಈ ಸಮಯಲ್ಲಿ ಚೆಕ್ಕರ್ಪೆ ಕಷ್ಟ ಇಲ್ಲೆ ಇದಾ.

ಪೂಜೆ ಮಂಗಳಾರತಿ ಆದ ಮತ್ತೆ ಪ್ರಸಾದ ಸ್ವೀಕಾರ.
ಕದುರು ಆ ದಿನದ ವಿಶೇಷ ಪ್ರಸಾದ. ಹಲಸು, ಮಾವು, ದಡ್ಡಾಲದ ಎಲೆಗಳಲ್ಲಿ –ಸಮಸಂಖ್ಯೆಲಿ (2, 4, 6, ..) ಕದುರಿನ ಮಡಗಿ, ಬಳ್ಳಿಲಿ ಕಟ್ಟಿದ್ದದೇ ಆ ದಿನದ ಪ್ರಸಾದ.
ಅದರ ಮನೆತುಂಬವೂ ಕಟ್ಟುಸ್ಸು ಆ ದಿನದ ವಿಶೇಷ ಕಾರ್ಯ.
ದೇವರ ಮಂಟಪಕ್ಕೆ / ಜೆಂಗಕ್ಕೆ, ತೊಳಶಿಕಟ್ಟೆಯ ತೊಳಶಿಸೆಸಿಗೆ, ತೊಟ್ಳಿದ್ದರೆ ತೊಟ್ಳಿಂಗೆ, ದನದ ಹಟ್ಟಿಗೆ – ಪ್ರಧಾನ ಆದ ಇಷ್ಟು ಜಾಗೆಗೆ ಕಟ್ಟಿ ಆದ ಮತ್ತೆಯೇ ಪೂಜೆ ಉದ್ವಾಸನೆ.
ಉದ್ವಾಸನ ಆದ ಮತ್ತೆ ಬೇಕಾರೆ ಮನೆ ಹತ್ತರಾಣ ತೆಂಗಿನ ಮರ, ಹಲಸಿನ ಮರ, ಮಾವಿನ ಮರ, ಅಡಕ್ಕೆ ಮರ – ಹೀಂಗಿರ್ಸಕ್ಕೆ ಕಟ್ಟುಲಕ್ಕು; ಅವರವರ ಆಸಕ್ತಿ ಭಕ್ತಿಯ ಮೇಗೆ ಹೊಂದಿಂಡು.
ಅಲ್ಲಿಗೆ ಹೊಸತನದ ಹಬ್ಬ ನವರಾತ್ರಿಗೆ ಹೊಸ ಧಾನ್ಯ ಮನೆತುಂಬಿತ್ತು.

ನವರಾತ್ರಿ ಆದರೆ ದಿನ ನೋಡೇಕು ಹೇದು ಏನಿಲ್ಲೆ; ನವರಾತ್ರಿಗೆ ಅವಕಾಶ ಒದಗಿ ಬಾರದ್ದರೆ – ಮನೆ ಎಜಮಾನಂಗೆ ಸೇರುವ ಯೇವ ನಕ್ಷತ್ರವೇ ಇರಳಿ; ಒಳ್ಳೆ ದಿನ ಆದರೆ ಆತು. ಅಷ್ಟೇ.

~

ಹೊಸ್ತು:

ಹೆಸರೇ ಹೇಳ್ತ ಹಾಂಗೆ ಹೊಸ ಧಾನ್ಯದ ಬಳಕೆ ಆರಂಭಕ್ಕೆ ಹೊಸ್ತು ಹೇಳುದು.
ಗೆದ್ದೆಲಿ ಆದ ಬತ್ತವ ಕೊಯಿದು, ಬಡುದು, ಒಣಗುಸಿ, ಬತ್ತ ಮೆರುದು – ಅಕ್ಕಿಯ ತಂದು – ಹೊಸತ್ತಾಗಿ ಅಶನ ಮಾಡಿ – ಮನೆದೇವರಿಂಗೆ ಮಡಗಿ, ಅಡ್ಡಬಿದ್ದು, ಆ ಮಹಾಪ್ರಸಾದವ ಉಂಬದೇ ಈ ಸಂಭ್ರಮ.
ಹಾಲು ಪರಮಾನ್ನ ಮಾಡಿ ದೇವರಿಂಗೆ ಮಡಗಿ ಕೊಶೀಲಿ ಉಂಬದೇ ಆ ದಿನದ ಗವುಜಿ. ಕೆಲವು ದಿಕ್ಕೆ ಶೆಕ್ಕರೆ ಹಾಕದ್ದೆ ಚಪ್ಪೆ ಪಾಚವೂ ಮಾಡ್ತವಾಡ.
ಮದಲಿಂಗೆ – ಗೆದ್ದೆ ಇಪ್ಪ ಕಾಲಲ್ಲಿ ಹೊಸ ಅಕ್ಕಿಯ ಅನ್ನವೇ ಮಾಡುಗು; ಹಾಂಗಾಗಿ ಮನೆತುಂಬುಸಿ ಆದ ಮೇಗೆ – ಹೊಸ್ತು ಆಚರಣೆ ಮಾಡ್ಳೆ ರಜ ಸಮಯ ಹಿಡಿಗು.
ರಂಗಮಾವನ ಕಾಲಲ್ಲಿ ಗೆದ್ದೆ ಬೆಳೆ ಬಪ್ಪನ್ನಾರ ಕಾಯವು – ಮನೆ ತುಂಬುಸಿದ ದಿನವೇ, ಮಾಡಿದ ಹಾಲು ಪರಮಾನ್ನಕ್ಕೆ ಕದುರಿಂದ ಹತ್ತು ಅಕ್ಕಿಯ ಬಿಡುಸಿ ಹಾಕುಗು. ಹೊಸ ಅಕ್ಕಿಯ ಪಾಚ ಹೇಳ್ತದರ ಮನಸ್ಸಿಲೇ ಕಲ್ಪನೆ ಮಾಡಿಂಡು ನೆಮ್ಮದಿಲಿ ಉಂಗು.

ಆಚರಣೆಯ ಸಾರ್ಥಕ್ಯ ಮನಸ್ಸಿನ ನೆಮ್ಮದಿಲಿ ಇದ್ದು. ಅಲ್ಲದೋ?

~
ಅಂದೊಂದರಿ ಕೊಡವರ ಹುತ್ತರಿಯ ಬಗ್ಗೆ ನಾವು ಮಾತಾಡಿದ್ದು ಬೈಲಿಲಿ; ಅಲ್ಲದೋ? (https://oppanna.com/oppa/huttari-kandira)
ಅದು ಕಾವೇರಿ ಮಕ್ಕೊ – ಕೊಡವರ ಕತೆ ಆತು. ನವರಾತ್ರಿಯ “ಕದ್ರು ತುಂಬುದು” ಮತ್ತೆ “ಹೊಸ್ತು” ಹೇಳ್ತ ಎರಡು ಆಚರಣೆಗೊ ನಮ್ಮ ಬೈಲಿಲೇ ಪ್ರಚಲಿತ ಇದ್ದು / ಇದ್ದತ್ತು.
ನಮ್ಮದೇ ಸಂಸ್ಕೃತಿಲಿ ಸಂಸ್ಕಾರಲ್ಲಿ ಬೆಳದು ಬಂದ ಈ ಆಚರಣೆಗಳ ನಾವು ಮರದರಕ್ಕೋ?
ನಮ್ಮ ಆಚರಣೆಗಳ ಪುನಾ ಪುನಾ ನೆಂಪುಮಾಡುವೊ°, ಶಂಬಜ್ಜಂದ್ರು ಆಚಮನೆ ದೊಡ್ಡಪ್ಪಂಗೆ ತೋರ್ಸಿಕೊಟ್ಟ ಹಾಂಗೆ ನಾವುದೇ ನಮ್ಮ ಮುಂದಾಣೋರಿಂಗೆ ಹೇಳಿಕೊಡುವೊ° – ಹೇದು ಈ ವಾರ ಈ ಶುದ್ದಿಯನ್ನೇ ಹೇಳಿದ್ದು.
ಆಚಮನೆ ದೊಡ್ಡಪ್ಪ ಎಲೆಯಿಂಬಲೆ ಅಡಕ್ಕೋಳು ಮಾಡಿಅಪ್ಪದ್ದೇ – ನಾವು ಮೆಲ್ಲಂಗೆ ಹೆರಟತ್ತು.
ಹಳತ್ತರ ನೆಂಪುಮಾಡಿ ಹೇಳಿದ್ದಕ್ಕೆ ಒಂದು ಧನ್ಯವಾದಭಾವ ಅವರ ಬಗ್ಗೆ ಒಪ್ಪಣ್ಣಂಗೆ ಬಂತು. ಒಂದು ವಾರದ ಶುದ್ದಿಗೆ ಬೇಕಾದಷ್ಟು ಮಾಹಿತಿಗಳೂ ಸಿಕ್ಕಿತ್ತು. ಇನ್ನೂ ಏನಾರು ಸಂಶಯ ಇದ್ದರೆ ನಿಂಗಳೇ ಅವರತ್ರೆ ಕೇಳಿಕ್ಕಿ, ಆತೋ?

~

ಒಂದೊಪ್ಪ: ಮನೆತುಂಬಿದ ಕದಿರು ಮನಸ್ಸನ್ನೂ ತುಂಬಿರಳಿ. ಧಾನ್ಯಲಕ್ಷ್ಮಿ ಸಂಸಾರಕ್ಕೆ ಮೃಷ್ಟಾನ್ನವ ಕೊಡಲಿ.

ಸೂ:

 

  • ಕದುರಿನ ಕೊರಳು ಹೇಳಿಯೂ ಹೇಳ್ತವು, ಬೈಲಿನ ಕೆಲವು ಮನೆಗಳಲ್ಲಿ.
  • ಅಡ್ಕತ್ತಿಮಾರು ಮಾವ (ಸಂಕೊಲೆ), ಬೀಸ್ರೋಡು ಮಾಣಿ (ಸಂಕೊಲೆ) ಬೈಲಿಂಗೆ ತೋರ್ಸಿದ ಗೆದ್ದೆ ಚಿತ್ರಂಗೊ:

14 thoughts on “‘ಮನೆತುಂಬಿದ’ ಕದಿರು ನವರಾತ್ರಿಲಿ ‘ಹೊಸ್ತು’ ಆಗಿ ಬೆಳಗಲಿ..

  1. ಮನೆ ತುಂಬುವ ಲೇಖನ ಮನವ ತುಂಬಿತ್ತು. ಹಳತ್ತೆಲ್ಲವೂ ನೆಂಪಾತು, ಎಲ್ಲವುದೆ “ಹೊಸ್ತು” ಆತು, ಧನ್ಯವಾದಂಗೊ.

  2. ಒಪ್ಪಣ್ಣಾ… ಆನು ಸಣ್ಣಾದಿಪ್ಪಗ ಎಂಗಳ ಮನೆಲಿಯೂ ಕದುರು ತುಂಬುಸುದು, ಹೊಸ್ತು ಎಲ್ಲಾ ಮಾಡ್ತ ಇತ್ತವು. ಆದರೆ ಈಗ ಇಲ್ಲೆ 🙁
    ಈಗ ಇಂತಹ ಆಚರಣೆಗೊ ಬಿಟ್ಟು ಅದಕ್ಕೆ ಬೇಕಾದ ಸಾಮಾನುಗಳೇ ಸಿಕ್ಕುಲೆ ಕಷ್ಟ ಇದ್ದು. ಹಾಂಗೆ ಆಯಿದು ಪರಿಸ್ಥಿತಿ.
    ರಬ್ಬರಿನ ಹಾವಳಿಲಿ ಗದ್ದೆಗೊ, ಗೋಳಿ ಮರಂಗೊ ಎಲ್ಲಾ ಕಾಣೆ ಆಯ್ಕೊಂಡು ಬೈಂದು ಅಲ್ಲದಾ…
    ಲೇಖನ ಒಪ್ಪ ಆಯಿದು.. ಹಳೇ ಆಚರಣೆಯ ಪುನ: ಒಂದರಿ ನೆನಪಿಸಿದ್ದಕ್ಕೆ ಒಪ್ಪಣ್ಣಂಗೆ ಧನ್ಯವಾದಂಗೊ 🙂

  3. ಒಳ್ಳೇ ಸಕಾಲಿಕ ಲೇಖನ, ಧನ್ಯವಾದ೦ಗೊ ಒಪ್ಪಣ್ಣಾ.. ನಿಜವಾಗಿಯು ಚಿತ್ರ೦ಗೊ ನೋಡುವಗ ಮನಸು ತು೦ಬಿ ಬತ್ತು.

  4. ಕದ್ರು ಕ೦ಬಕ್ಕೆ ಕಟ್ಟಿದಲಿ, ಗುಬ್ಬಿಗ ಬ೦ದು ,ಹೊಸ್ತು ಊಟಕ್ಕೆ ಕೂಪ ಚ೦ದ,ಚಿಲಿ ಪಿಲಿ,— ಮಧುರ೦ಕಾನ ಕವಿಗ ಹೇಳುವ ಶೈಲಿಲಿ—- ಮರವಲೆಡಿಗ ?

  5. ಒಪ್ಪನ್ನ, ಹೊಸ್ತಿನ ಬಗ್ಗೆ ಬರದ ಲೇಖನ ಒಳ್ಲೆದಾಯಿದು ಮಿನಿಯ, ಎನ್ನ ಮದುವೆ ಆದ ಸ೦ದರ್ಬದ ತೊಡ ಹೊಸ್ತು ನೆ೦ಪಾತು ಹಾ೦ಗೆಹೊಸ್ತಿನ ಬೆ೦ದಿ ಹೇಳಿ ಇದ್ದು ಮತ್ತೆ ಹೊಸ್ತಿನ ಊಟ ಉ೦ಬಾಗ ಅರಿಶಿನ ಎಲೆ ಬಾಳೆ ಅಡಿಯ೦ಗೆ ಮಡುಗುವದು ನೆ೦ಪಾತು ಹೊಸ್ತು ಉ೦ದಿಕ್ಕಿ ಎಲೆ ಅದಕ್ಕೆ ತಿ೦ದು ತೊದಿ ಕೆ೦ಪು ಮಾದುವದು ಎಲ್ಲ ಈಗ ಸವಿ ನೆನಪಿನಸಾಲಿ೦ಗೆ ಸೆರಿತ್ತು

  6. ಒಪ್ಪಣ್ಣಾ,
    ನೆಂಪಿನ ಹಿಂದಕ್ಕೆ ತೆಕ್ಕೊಂಡು ಹೋತು. ಧನ್ಯವಾದಂಗೊ
    ಸಣ್ಣ ಇಪ್ಪಗ ಈ ಅಚರಣೆಗಳ ಕಂಡಿದು, ಅದರಲ್ಲಿ ಭಾಗವಹಿಸಿದ್ದು.
    ಹೊಸ್ತು ಊಟ ಹೇಳಿ ಕೆಲವು ದಿಕೆ ನೆಂಟ್ರು ಇಷ್ಟರ ಬಪ್ಪಲೆ ಹೇಳ್ತ ಕ್ರಮವೂ ಇತ್ತಿದ್ದು.
    ಪುರ್ಬುಗೊ ಕೂಡಾ “ಕುರಾಳು ಪರ್ಬ” ಹೇಳಿ ಆಚರಣೆ ಮಾಡ್ತವು. ಇದು ನಮ್ಮ ಸಂಸ್ಕೃತಿಯ ಅನುಕರಣೆಯೇ ಆಗಿಕ್ಕಷ್ಟೆ.

  7. ಹಳೆ ನೆನಪುಗೊ ಮರುಜೀವ ಪಡೆದಾಂಗಾತು ಒಪ್ಪಣ್ಣಾ . ಧನ್ಯವಾದಂಗೊ.

  8. ಹೊಸ್ತಿನ ಬಗ್ಗೆ ಬರದು ಒಪ್ಪಣ್ಣ ನಮ್ಮ ಬಾಲ್ಯದ ಕಾಲಕ್ಕೆ ಕೊಂಡೋದವು. ಧನ್ಯವಾದಂಗ. ಆಗ ಹೊಸ್ತು ಹೇಳಿದರೆ ಎಂಗೋಗೆ ಮಕ್ಕೋಗೆ ಒಂದು ರೀತಿಯ ಗೌಜಿ. ಎಂತಕೆ ಹೇಳಿದರೆ ಆ ದಿನ ಮಕ್ಕೊಗೆಲ್ಲಾ ವೀಳ್ಯ ಹಾಕುಲೆ ಪರ್ಮಿಶನ್ ಇದ್ದು. ಹಾಂಗಾಗಿ ಇಂದು ಎಲೆ ತಿಂಬಲೆ ಇದ್ದು ಹೇಳುವ ಗೌಜಿ.
    ಆ ಕಾಲಲ್ಲಿ ಊರ ಮನಗಳಲ್ಲಿ ಗುಬ್ಬಿ ಹಕ್ಕಿಗೊಕ್ಕೆ ಒಂದು ಗೂಡು ಇಕ್ಕು. ಆ ಗೂಡಿಲಿ ಅಪ್ಪ ಗುಬ್ಬಿ, ಅಮ್ಮ ಗುಬ್ಬಿ, ಮಕ್ಕ ಗುಬ್ಬಿ ಎಲ್ಲಾ ಸೇರಿ ಚಿಲಿಪಿಲಿ ಮಾಡಿಗೊಂಡಿಕ್ಕು. ಹೊಸ್ತಿನ ದಿನ ಅವಕ್ಕೆ ಕದಿರಿನ ಬತ್ತ ತಿಂಬ ಗೌಜಿ.
    ಎಂಗಳಲ್ಲಿ ಹೊಸ್ತಿಂಗೆ ಕೆಸವು ಹರುವೆ ಬೆಂದಿ ಆಗಲೇ ಬೇಕು. ಚಪ್ಪೆ ಅಕ್ಕಿ ಪಯಸವುದೇ ಆಗಲೇ ಬೇಕು.ಮಕ್ಕ ಎಲ್ಲಾ ಚಪ್ಪೆ ಪಾಯಸಕ್ಕೆ ಸಕ್ಕರೆ ಹಾಕಿ ತಿಂಗು. ದೊಡ್ಡೋರು ಹಾಂಗೆ ತಿಂಗು.
    ಸವಿನೆನಪಗಳು ಬೇಕು ಸವಿಯಲೀ ಬದುಕು. ನಮ್ಮ ಆ ಸವಿನೆನಪಿಂಗೆ ಕೊಂಡು ಹೋದ ಒಪ್ಪಣ್ಣಂಗೆ ಅನಂತಾನಂತ ಧನ್ಯವಾದಂಗ.

  9. ಹೊಸ್ತು ಮನೆ ಮನಗಳ ತುಂಬಲಿ..

  10. ಮನಸ್ಸಿನ ಮೂಲೆಲಿ ಮಸುಕು ಮಸುಕಾಗಿ ನೆನಪಿಪ್ಪ/ ಆಧುನಿಕತೆಯ ವೇಗಕ್ಕೆ ಮರೆತ್ತಾ ಇಪ್ಪ೦ತಹ ನಮ್ಮ ಸ೦ಪ್ರದಾಯ, ಆಚರಣೆಗಳ ಮತ್ತೆ ಮತ್ತೆ ನೆನಪಿಗೆ ತಪ್ಪ೦ತಹ ಒಪ್ಪ೦ಹಗಳ ಕೊದ್ತಾ ಇಪ್ಪದಕ್ಕೆ ಒಪ್ಪಣ್ಣ೦ಗೆ ಧನ್ಯವಾದ.

  11. ಚಪ್ಪೆ ಮತ್ತೆ ಸೀವು ಪರಮಾನ್ನ ಹೊಸ್ತಿಂಗೆ ಮಾಡುತ್ತವು-ಮನೆ ತುಂಬುವ ಗೌಜಿ ಎಲ್ಲಾ ನೆಂಪು ಮಾಡಿದ್ದರಿಂದ ಮನಸ್ಸು ಬಾಲ್ಯಕಾಲಕ್ಕೆ ಹೋತು.ಎಂಗಳಲ್ಲಿ ಗದ್ದೆ ಇಲ್ಲೆ-ಹತ್ತರಾಣ ಮನೆಯವರ ಗದ್ದೆಂದ ಕೇಳದ್ದೆ ಕೊಯ್ದ ಕದುರಿಂದ[!] ಮನೆ ತುಂಬಿಸುದು ಇತ್ತು.ಅಂದು ಎಂಗೊಗೆಲ್ಲಾ ದೊಡ್ಡ ಗಮ್ಮತ್ತು.ಪೊಲಿ ಬಳ್ಳಿಯ ಹೊಸ್ತಿನ ಪರಮಾನ್ನದ ಪಾತ್ರಕ್ಕೆ ಕಟ್ತುಗು.ಅರಸಿನ ಎಲೆಲಿ ಉಂಬದು ಹೇಳುವ ಶಾಸ್ತ್ರಕ್ಕೆ ಊಟದ ಬಾಳೆ ಅಡಿಂಗೆ ಅರಸಿನ ಎಲೆ ತುಂಡು ಮಡುಗುದು. ಅಂಗಡಿಂದ ತಂದ ಬೆಣ್ತಕ್ಕಿಂದ ಮಾಡಿದ ಪರಮಾನ್ನಕ್ಕೆ ಹತ್ತು ಹೊಸಭತ್ತ ಚೊಲ್ಲಿ ಹಾಕುದು. ಊಟಕ್ಕೂ ಕೆಲವೊಮ್ಮೆ ಮುಳ್ಳುಸೌತೆ ಪಾಯಸವೂ ಇಕ್ಕು.ಒಂದೊಂದು ವರ್ಷ ಅವಿಲು ಇಕ್ಕು.ಸೌಕರ್ಯ ಆಗದ್ದರೆ ನಿತ್ಯದ ಹಾಂಗೆ ಮೇಲಾರ ಇಕ್ಕು. ಎಂತದೇ ಆಗಲಿ ಎಂಗಳ ಸಂಭ್ರಮಕ್ಕೆ ಮಿತಿ ಇಲ್ಲೆ!
    ಈಗ ಎಂತಾಯಿದು ಹೇಳಿರೆ,ಎಂಗಳ ನೆರೆಕರೆಯವು ಬೇಸಾಯ ನಿಲ್ಲಿಸಿದ್ದವು. ಕದುರು ಹತ್ತರೆ ಇಲ್ಲೆ. ಹಾಂಗಾಗಿ ಮನೆ ತುಂಬುವ ಗೌಜಿ ವಿಸ್ಮೃತಿಗೆ ಸಂದುಹೋಯಿದು!
    ಈ ಕಳುದ ವರ್ಷ ಮದುವೆ ಆದವಕ್ಕೆ ಇದು ತೊಡಹೊಸ್ತು! ಎಲ್ಲಾದರೂ ಮಾಡಿದ್ದವೊ?

  12. ಹಳತ್ತರ ನೆಂಪುಮಾಡಿ ಕದುರು ಮನೆ ತುಂಬುಸಲೆ ಇಲ್ಲದ್ದರೂ ಮನ ತುಂಬಿಸ್ಯೊಂಡತ್ತು ಇದಾ. ಶುದ್ದಿಗೊಂದು ಧನ್ಯವಾದ ಭಾವ.
    ಹೇಳಿದಾಂಗೆ… ಮದಲಿಂಗೆ ಭಟ್ಟಜ್ಜ° ಆ ತೊಳಶಿಕಟ್ಟೆಂದ ತಲೆಲಿ ಮಡಿಕ್ಕೊಂಡು ತೊಳಶಿಕಟ್ಟಗೆ ಸುತ್ತುಬಂದು ಮನೆಯೊಳ ಕೊಂಡೋಪಗ “ಪೊಲಿ ಪೊಲಿಯೋ ಪೊಲಿ….” ಹೇಳಿ ಹೇಳ್ಯೋಂಡು ಒಳಬತ್ತದು ನೆಂಪಾತು. ಹೀಂಗೆ ಹೇಳ್ಸು ಸ್ಥಳೀಯವೋ ಅಲ್ಲಾ ನಮ್ಮ ಹೊಡೆ ಎಲ್ಲ ಸೀಮೆಲಿ ಇದ್ದೋ..?

    1. ಚೆನ್ನೈ ಭಾವಾ.. ಎನಗೆ ಗೊ೦ತಿಪ್ಪ ಹಾ೦ಗೆ ಓಣ೦, ವಿಷುವಿನ ಸಮಯಲ್ಲಿ ಕೇರಳಲ್ಲಿ ‘ಪೊಲಿ ಪೊಲಿಯೋ ಪೊಲಿ.. ಹೇಳಿ ಪದ್ಯ ಹೇಳ್ತದು ಗೊ೦ತಿದ್ದು, ಒ೦ದು ವೇಳೆ ತೆ೦ಕ್ಲಾಗಿಯಾಣ ಪ್ರಭಾವ ಆಯಿಕ್ಕೋ ಇದು?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×