ಮಳೆ ಸುರು ಅಪ್ಪಗ ಮರದಡಿಲಿ ನಿಲ್ಲೇಕಡ, ಮರದೆಲೆಗಳ ಎಡಕ್ಕಿಲಿ ನೀರು ಬಾಕಿ ಆಗಿರ್ತು. ಆದರೆ ಮಳೆ ಬಿಟ್ಟ ಕೂಡ್ಳೆ ಮಳೆಂದ ಹೆರ ಬರೆಕ್ಕಡ, ಅಲ್ಲದ್ದರೆ ಮರದ ಎಲೆಂದ ನೀರು ಬಿದ್ದುಗೊಂಡೇ ಇರ್ತು.
ದೊಡ್ಡವರ ಸಹವಾಸ ಹೇಂಗಿರೇಕು – ಹೇದು ಮಾಷ್ಟ್ರುಮಾವ° ಒಂದೊಂದರಿ ಉದಾಹರಣೆಗೆ ಹೇಳುಗು.
ದೊಡ್ಡ ಹಿಮಾಲಯದ ಕರೆಲೇ ಮನಿಕ್ಕೊಂಡು ನಿತ್ಯವೂ ಹಿಮಾಲಯದ ತಿಳಿನೀರಿನ ಹಿರಿಮೆಯ ಪಡಕ್ಕೊಂಡ ದೇಶಕ್ಕೆ ಆ ಹಿಮಾಲಯವ ಬಿಟ್ಟಿಕ್ಕಲೆ ಗೊಂತಿಲ್ಲದ್ದ ಕಾರಣ ಎಷ್ಟು ಸಮಸ್ಯೆ ಇರ್ತು – ಹೇದು ಗೊಂತಾಯೇಕಾರೆ – ನೇಪಾಳದ ಭೂಕಂಪ ನೋಡೇಕು ಅಪ್ಪೋ!
~
ನೇಪಾಳ ಹೇದರೆ ಹಿಮಾಲಯ ಗುಡ್ಡೆಕರೆಲಿ ತಂಪಾಗಿ ಒರಗಿಂಡಿಪ್ಪ ಸಂಪದ್ಭರಿತ ದೇಶ.
ದೇಶ ಎಂತರ, ಭಾರತದ ಒಂದು ರಾಜ್ಯದಷ್ಟೇ ದೊಡ್ಡದು; ಆದರೆ ಅಲ್ಯಾಣ ರಾಜಾಡಳ್ತೆಯ ಬ್ರಿಟಿಶರು ಮದಲೇ ಬೇರೆ ಕಂಡ ಕಾರಣ ಅದು ದೇಶ ಆಗಿ ಒಳುತ್ತು. ಇರಳಿ- ಅಂತೂ ಅದೊಂದು ಬೇರೆಯೇ ದೇಶ.
ಮೊನ್ನೆ ಮೊನ್ನೆ ವರೆಂಗೆ ಶುದ್ಧ ಹಿಂದೂ ರಾಷ್ಟ್ರ ಆಗಿತ್ತು. ಹತ್ತೊರಿಶ ಹಿಂದೆ ರಾಜಾಡಳ್ತೆ ಕೊನೆ ಆದ್ಸರ ಒಟ್ಟಿಂಗೇ, ಹಿಂದೂ ರಾಷ್ಟ್ರ ಹೇಳ್ತ ಹಿರಿಮೆಯೂ ಕೊನೆ ಆಗಿ,ಈಗ ಜಾತ್ಯತೀತ ದೇಶ ಆಗಿ ಹೋತು – ಭಾರತದ ಹಾಂಗೇ!
ನಮ್ಮ ರಾಮಾಯಣ ಮಹಾಭಾರತಂಗಳಲ್ಲಿ, ಪುರಾಣ ಇತಿಹಾಸಂಗಳಲ್ಲಿ ಬಪ್ಪ ಹಲವೂ ಊರ ಹೆಸರುಗೊ ಈಗ ನೇಪಾಳಲ್ಲಿ ಇದ್ದು.
ರಾಮಾಯಣದ ಸೀತಾಮಾತೆಯ ಅಪ್ಪನ ಮನೆಯೇ ಉದಾಹರಣೆ. ಸಾಲಿಗ್ರಾಮ ಶಿಲಾತೋಯಂ – ಹೇದು ನಾವು ಅಭಿಷೇಕ ಮಾಡ್ತ ಕರಿಶಾಲಿಗ್ರಾಮ ಬತ್ತದು ನೇಪಾಳದ ಗಂಡಕೀ ನದಿಂದ ಅಡ, ಅಂದೊಂದರಿ ಭಟ್ಟಮಾವ° ಹೇಳಿತ್ತಿದ್ದವು.
ಪುರಾಣಲ್ಲಿ ನಮೂದಿ ಮಾಡಿಪ್ಪ ಹಾಂಗೆ ನೇಪಾಳ ಹೇದರೆ ದೇವತೆಗಳ ಸಂಚಾರಭೂಮಿ! ಅವರ ಕೃಪೆಗೋಸ್ಕರ ಇಂದಿಂಗೂ – ಯೇವದೇ ದಿನ ತೆಕ್ಕೊಳಿ ನಿಂಗೊ – ಆ ದಿನ ಭಾರತದ ಸಾವಿರಾರು ಜೆನಂಗೊ ನೇಪಾಳಲ್ಲಿ ಯಾತ್ರೆ ಮಾಡಿಗೊಂಡು ಇರ್ತವು.
ಹಲವಾರು ಧರ್ಮಶ್ರದ್ಧಾಸಂಸ್ಕೃತಿ ಕೇಂದ್ರಂಗೊಕ್ಕೆ ಹೋಗಿ ಚಾಮಿಗಳ ಕಂಡಿಕ್ಕಿ ಬತ್ತಾ ಇರ್ತವು.
ಮದಲಿಂದಲೂ ನಮ್ಮ ಧರ್ಮಶ್ರದ್ಧಾಸಂಸ್ಕೃತಿ ಕೇಂದ್ರಂಗೊ ಹಲವೂ ಇಪ್ಪ ಜಾಗೆ.
ಧಾರ್ಮಿಕವಾಗಿ ಮಾಂತ್ರ ಅಲ್ಲ, ಭೌಗೋಳಿಕವಾಗಿ, ರಾಜಕೀಯವಾಗಿ ಆ ದೇಶ ಭಾರತಕ್ಕೆ ಅಂಟಿಗೊಂಡೇ ಇದ್ದು.
ಮೂರೂ ಹೊಡೆಂದ ಭಾರತವ ಅಪ್ಪಿ ಹಿಡ್ಕೊಂಡ ಬಾಬೆ ದೇಶ ಅದು. ಇಂದಿಂಗೂ ಬಾಬೆಯೇ.
ಆಹಾರ, ವ್ಯವಸ್ಥೆ, ಉಪಕರಣೆ, ಸಲಕರಣೆ – ಎಲ್ಲದರ್ಲಿಯೂ ಆ ದೇಶ ಭಾರತವ ಆಶ್ರಯಿಸಿಗೊಂಡೇ ಇಪ್ಪದು.
~
ಮೊನ್ನೆ ಇದ್ದಕ್ಕಿದ್ದ ಹಾಂಗೇ ಭೂಮಾತೆಗೆ ಎಂತಾತೋ ಅರಡಿಯ – ಒಂದರಿಯೇ ಮೈಕುಲ್ಕೇಕು ಹೇದು ಕಂಡತ್ತು.
ನೋಡಿಂಡಿಪ್ಪ ಹಾಂಗೇ ಭೂಮಿ ಅದುರಿತ್ತು. ಬೆಳದು ನಿಂದ ಮರ, ಕಟ್ಟಿದಂದಿಂದ ಬಾನ ಮುಟ್ಟಿ ನಿಂದ ಕಟ್ಟೋಣ, ಎದ್ದು ನಿಂದ ಬಾವುಟ – ಎಲ್ಲವುದೇ ಅಬ್ಬೆಯ ಮೊಟ್ಟೆಲಿ ಮನಿಕ್ಕೊಂಡವು.
ಅದರೊಟ್ಟಿಂಗೆ ಜೀವಚರಂಗಳುದೇ! ಕ್ಷಣಾರ್ಧಲ್ಲಿ ಎಲ್ಲವೂ ನೆಲಸಮ.
ಅಬ್ಬೆಗೆ ಪಿಸುರು ಬಂದರೆ ಪಾಪದ ಮಕ್ಕೊ ಎಂತ ಮಾಡೇಕು? ಅಬ್ಬೆಯ ಮಡಿಲಿಂಗೇ ಹೋಯೇಕಷ್ಟೆ. ಹಾಂಗೇ ಆತು.
ಎಲ್ಲ ದೈವೇಚ್ಛೆ.
~
ಗುಬ್ಬಿಯ ಮೇಗೆ ಬ್ರಹ್ಮಾಸ್ತ್ರ ಬಿಟ್ಟ ಹಾಂಗೆ ಅಸಾಧಾರಣ ಹಾನಿ ಆ ದೇಶಕ್ಕಾತು.
ಹಿಮಾಲಯದ ಮಂಜು ಮುರುದು ಬಿದ್ದತ್ತು, ಇತ್ಲಾಗಿ ವೈಪರೀತ್ಯಂದಾಗಿ ಮಳೆ ಬಡುದತ್ತು, ಮಂಜು ಕರಗಿದ ನೀರು ಹೊಳೆ ಹರುದತ್ತು – ಎಲ್ಲವುದೇ ಒಟ್ಟೊಟ್ಟಿಂಗೆ.
ಜೆನಂಗೊಕ್ಕೆ ಪಾಪ ಮನೆ ಇಲ್ಲೆ, ಊಟ ಇಲ್ಲೆ, ತಿಂಡಿ ಇಲ್ಲೆ! ಎಲ್ಲವೂ ಹರೋಹರ.
ಪಶುಪತಿನಾಥನ ಆಟಕ್ಕೆ ಎಲ್ಲವುದೇ ನೀರಾತು. ಎಲ್ಲವುದೇ ಮಣ್ಣುಪಾಲಾತು.
ಒಂದು ಕ್ಷಣ ಮೊದಲಿನವರೆಗೆ ಎಲ್ಲವೂ ಇದ್ದವ° ಕೂಡಾ ಬರಿಗೈದಾಸ° ಆದ ಹಾಂಗೆ ಆತು.
ನೇಪಾಳಿಗಳ ಒಟ್ಟಿಂಗೆ ಪ್ರವಾಸಿಗರುದೇ, ತೀರ್ಥಯಾತ್ರಿಕರುದೇ ಬಂಙಬಂದವು.
ಕೆಲವು ಜೆನ ಅವಶೇಷಂಗಳ ಎಡಕ್ಕಿಲಿ ಸಿಕ್ಕಿ ತೀರಿಗೊಂಡವು, ಕೆಲವು ಜೆನ ಗಾಯಗೊಂಡವು, ಕೆಲವು ಜೆನ ಅರೆಜ್ಜೀವಲ್ಲಿ ಬದ್ಕಿಗೊಂಡವು.
ಇಂಥಾ ತೊಂದರೆಗಳ ಎಡಕ್ಕಿಲಿಯೂ – ಇನ್ನೂ ಜೀವಚೈತನ್ಯ ಹಿಡ್ಕೊಂಡು ಬದ್ಕಿಗೊಂಡು ಇಪ್ಪ ನೇಪಾಳಿಗೊಕ್ಕೆ ಕೈಲಾಸವಾಸಿಯೇ ಆತ್ಮಸ್ಥೈರ್ಯ ಕೊಡ್ತಾ ಇದ್ದ° ಹೇಳೇಕಷ್ಟೆ.
~
ಆದರೆ, ಅಬ್ಬೆಯ ಸ್ಥಾನಲ್ಲಿ ನಿಂದ ಭಾರತ ದೇಶ ಮಾಂತ್ರ ಅತ್ಯಂತ ಚೆಂದಲ್ಲಿ ಸನ್ನಿವೇಶಕ್ಕೆ ಕೈಜೋಡುಸಿ ಸಹಕರುಸಿದ್ದಾಡ.
ವಿಷಯ ಗೊಂತಪ್ಪದ್ದೇ – ಬೇಕಾದ ವೆವಸ್ತೆಗೊ, ವಿಮಾನಂಗೊ, ಸೈನಿಕರು, ಆಹಾರ – ಇತ್ಯಾದಿಗಳ ಕಳುಸಿಕೊಟ್ಟು – ಅಬ್ಬೆಯ ಸ್ಥಾನ ಇದು – ಹೇದು ತೋರುಸಿಕೊಟ್ಟಿದಾಡ.
ಅಲ್ಯಾಣ ಜನಸಮುದಾಯಕ್ಕೆ ಸಕಾಯ ಮಾಡುದಲ್ಲದ್ದೇ, ಅಲ್ಲಿಪ್ಪ ವಿದೇಶೀಯರನ್ನೂ ಅತ್ಯಂತ ನಯನಾಜೂಕಿಲಿ ನಮ್ಮ ದೇಶಕ್ಕೆ ಕರಕ್ಕೊಂಡು ಬತ್ತಾ ಇದ್ದಾಡ.
ಪ್ರತಿ ಒಂದೆರಡು ಗಂಟೆಗೆ ಒಂದರ ಹಾಂಗೆ ವಿಮಾನ ಅಲ್ಲಿಂದ ಭಾರತಕ್ಕೆ ಹಾರ್ತಾಡ.
ಸಿಕ್ಕಿ ಹಾಕೆಂಡ ಸಂತ್ರಸ್ತರ ಒಬ್ಬೊಬ್ಬನನ್ನೇ ಅಲ್ಲಿಂದ ಕರಕ್ಕೊಂಡು ಬಂದು ಭಾರತಭೂಮಿಗೆ ಎತ್ತುಸುತ್ತಾ ಇದ್ದಾಡ.
ಅವಘಡಲ್ಲಿ ಕೈಜೋಡುಸಿದೋರೇ ನಿಜವಾದ ’ಅಕ್ಕಾದೋರು’. ಅಲ್ಲದೋ?
~
ಇಂದು ಭೂಕಂಪ, ಅಂದು ಸುನಾಮಿ, ಮತ್ತೊಂದರಿ ಜ್ವಾಲಾಮುಖಿ, ಇನ್ನೊಂದರಿ ಪ್ರಳಯ – ಇದೆಲ್ಲ ಎಂತರ ತೋರ್ಸುತ್ತು ನವಗೆ – ಹೇದರೆ – ನಾವು ಎಷ್ಟೇ ಬೆಳದರೂ ಆ ಅಗೋಚರ ಶಕ್ತಿಯ ಎದುರು ಎಂತದೂ ಅಲ್ಲ – ಹೇದು.
ಮನುಶ್ಯರು ಅವರ ಉಪಯೋಗಕ್ಕೆ ಭೂಮಾತೆಯ ಬೇಕಾದಾಂಗೆ ತುಂಡುಸಿ ಬಳಸಿಗೊಳ್ತು, ಆದರೆ ಭೂಮಿ – ಒಂದು ಸರ್ತಿ ಮೈ ಕುಡುಗಿರೆ ಸಾಕು – ನಾವು ಎಂತದೂ ಇಲ್ಲದ್ದೆ ಹೋಗಿಬಿಡ್ತು.
ಎತ್ತರ ಎತ್ತರಕ್ಕೆ ಕಟ್ಟಿದ ಬಹುಮಹಡಿ ಸಿಮೆಂಟು ಕಟ್ಟೋಣಂಗೊ, ಸಂಕಂಗೊ, ಕಾಲುವೆಗೊ, ಮಾರ್ಗಂಗೊ – ಎಲ್ಲವುದೇ ನೀರಹೋಮ.
ಎಲ್ಯಾರು ಇನ್ನುದೇ ಸರ್ತ ನಿಂದುಗೊಂಡು ಇದ್ದರೆ ಅದು ಪ್ರಕೃತಿಯ ಒಟ್ಟಿಂಗೆ ಒರ್ಮೈಸಿಗೊಂಡು ಇಪ್ಪ ಮರಂಗಳೋ – ದೇವಸ್ಥಾನಂಗಳೋ ಮಾಂತ್ರ ಆಗಿಕ್ಕಷ್ಟೆ.
ಇಂಥಾ ಅವಘಡಂಗೊ ಬಂದರೆ ಸಹಸ್ರಾರು ಜೀವಹಾನಿ ಅಪ್ಪದು ಇಪ್ಪದೇ. ಆದರೂ ಆ ಕೈಲಾಸವಾಸಿಯ ಎದುರು ಮಾನವನ ಶಕ್ತಿ ಎಷ್ಟು – ಹೇದು ಗೊಂತಪ್ಪಲೆ ಒಂದೊಂದು ಅವಕಾಶಂಗೊ ಆಗಿರ್ತು.
ಮನುಷ್ಯನ ಬೆಳವಣಿಗೆಗೊ, ಬದಲಾವಣೆಗೊ ಏನಿದ್ದರೂ – ಅದು ಕ್ಷಣಿಕ. ಆ ದೈವೀ ಶಕ್ತಿಯ ಎದುರು ಎಂತದೂ ಇಲ್ಲೆ – ಹೇಳ್ತದು ಮತ್ತೊಂದರಿ ನಿಜ ಆತು.
ಭೂಮಾತೆಗೆ ಪಿಸುರು ಬಯಿಂದು. ಪಿಸುರು ತೋರ್ಸಿತ್ತು. ನಾವು ಎಷ್ಟಾದರೂ ಮಕ್ಕೊ, ಸಹನಾಧರಿತ್ರೀ – ಹೇದು ತೀರಾ ಉಪದ್ರವ ಮಾಡ್ಳಾಗ ಹೇಳ್ತ ಪಾಠ ಆತು.
ಉಪದ್ರ ಮಾಡ್ತ ಮಕ್ಕೊಗೆ ಎರಡು ಪೆಟ್ಟು ಸೌಮ್ಯಲ್ಲಿ ಆದರೂ ಅಬ್ಬೆ ಹಾಕಿಯೇ ಹಾಕುತ್ತು ಅಲ್ಲದಾ? ಒಪ್ಪ ಬುದ್ಧಿ ಬಪ್ಪಲೆ!!
ಅಬ್ಬೆಯ ಪೆಟ್ಟಿನ ಓಘವ ಗ್ರಹಿಸಿದವ° ಬಾಳಿ ಬದ್ಕಿದ°, ಅಲ್ಲದ್ದವ° ಮಣ್ಣಾದ ಇದು ಲೋಕಲ್ಲಿ ನೆಡವದು ಅಲ್ಲದೋ?
~
ಎಂತದೇ ಆದರೂ – ನವಗೆ ಎಲ್ಲದಕ್ಕೂ ಭೂಮಿಯೇ ಆಗೆಡದೋ?
ಬೇರೆಯವರಿಂದ ಬೇಜಾರಾದರೆ ಅಮ್ಮನತ್ರೆ ಕೂಗುತ್ತು. ಅಮ್ಮನಿಂದ ಬೇಜಾರಾದರೂ – ಅಮ್ಮನತ್ರೇ ಕೂಗುತ್ತು ಹೇದು ಶ್ರೀಅಕ್ಕ° ಹೇಳಿದ ಮಾತು ಒಂದರಿ ನೆಂಪಾತು.
ಭೂಮಾತೆಯೂ, ಕೈಲಾಸವಾಸಿಯೂ ನೇಪಾಳಿಗರ ಪಾಲುಸಲಿ.
ಅವರ ಅನ್ನಾಹಾರ ಜೀವನದ ಸಕಲ ಸೌಕರ್ಯವನ್ನೂ ಅನುಗ್ರಹಿಸಲಿ.
ಅವರ ಅಸಹಾಯಕತನವ ಉಪಯೋಗ ಮಾಡಿ ಅದರಲ್ಲಿ ಬೇಳೆ ಬೇಶುವವಕ್ಕೆ ಪಶುಪತಿನಾಥ ಪಾಶ ಹಿಡಿಯಲಿ.
~
ಒಂದೊಪ್ಪ: ದೇವನೇ ಪಾಲುಸಲಿ, ದೇವನೇ ಮೋಕ್ಷಕೊಡ್ಳಿ.
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
ಹೃದಯಕ್ಕೆ ತಟ್ಟುವ ಶುದ್ದಿ.
ಪ್ರಕೃತಿಯ ಮೀರಿ ಯಾವ ಶಕ್ತಿಯೂ ಇಲ್ಲೆ ಹೇಳ್ತರ ಮತ್ತೊಂದರಿ ತೋರಿಸಿಕೊಟ್ಟತ್ತು.
ತನು ಮನ ಧನ ಸಹಕಾರ ಕೊಟ್ಟು ನಮ್ಮ ಸಂಸ್ಕೃತಿ ಹೇಳಿರೆ ಎಂತರ ಹೇಳಿ, ಸರಿಯಾಗಿ ತೋರಿಸಿದ್ದು ನಮ್ಮದೇಶ.
ಇದರೆಡೆಕ್ಕಿಲಿ, ತಮ್ಮ ಬೇಳೆ ಬೇಶಲೆ ಹೆರಟ ಪಾತಕಿಗೊ, ಶುದ್ಧ ಹಿಂದೂ ದೇಶಕ್ಕೆ, ದನದ ಮಾಂಸವ ಸರಬರಾಜು ಮಾಡಿದವು. ಇನ್ನೊಂದು ಕೂಟದವು ತಮ್ಮ ಗ್ರಂಥವ ವಿಮಾನಲ್ಲಿ ತಂದು ಹಂಚಿದವು. ಮನುಷ್ಯತ್ವ ಇಲ್ಲದ್ದವರ ಆ ಪಶುಪತಿಯೇ ನೋಡಿಗೊಳೆಕ್ಕಷ್ಟೆ.
ಎಲ್ಲ ದೈವ ಲೀಲೆ.
ಅಪ್ಪು. ’ಮಳೆ ಬಿಟ್ಟಪ್ಪಗ ಮರದಡಿಲಿ ನಿಂಬಲಾಗ ಅಬ್ಬೆ ಸತ್ತ ಮತ್ತೆ ಅಪ್ಪನ ಮನೆಲಿ ನಿಂಬಲಾಗ’ ಈ ಮಾತು ಒಪ್ಪಣ್ಣನ ಶುದ್ದಿಯ ಪೀಠಿಕೆ ಓದುವಗ ಎನ ನೆಂಪಾತು.ನೇಪಾಳದ ಭೂಮಿ ವಿಕೋಪ ನಿಜಕ್ಕೂ ಎದೆ ನೆಡುಗುಸುತ್ತು. ಮನುಷ್ಯರು ಎಷ್ಟು ಕಲ್ತರೂ ಪ್ರಕೃತಿ ವಿಕೋಪಕ್ಕೆ ಎದುರಾಗಿ ಎಂತ ಮಾಡ್ಳೂ ಎಡಿತ್ತಿಲ್ಲೆನ್ನೆ!!..
ಎಲ್ಲಾ ಜನ ಸುಖವಾಗಿ ಇರಲಿ . ನೇಪಾಳಕ್ಕೆ ಭಾರತ ಸಹಾಯ ಮಾಡಿದ್ದು ಒಳ್ಳೆ ಕ್ರಮ.
ಎಂತಕೆ ಆವ್ತೋ ಹೇಂಗೆ ಆವ್ತೋ ಏವಾಗ ಆವ್ತೋ … ಪ್ರಕೃತಿ ಅಬ್ಬೆ ಮೈಕೊಡವಿರೆ ಎಂತ ಮಾಡಿಕ್ಕಲೂ ಎಡಿಯ ಹೇಳ್ಸು ಅಂಬಗಂಬಗ ನೆಂಪು ಮಾಡ್ತಾ ಇದ್ದು. ಸರ್ವೇ ಭವಂತು ಸುಖಿನಃ …… ಓಂ ಶಾಂತಿಃ ಶಾಂತಿಃ ಶಾಂತಿಃ ಹೇದು ನಿತ್ಯ ನಾವು ಪ್ರಾರ್ಥನೆ ಮಾಡುವೊ. ಎಡಿಗಾದ ಸಕಾಯವ ಅತ್ತಿತ್ತೆ ಮಾಡುವೊ. ಅದುವೇ ಭಗವಂತಂಗೆ ಪ್ರೀತಿ ಹೇಳ್ವ ನಂಬಿಕೆ ನವಗೆ ಸದಾ ಇರಳಿ.