Oppanna.com

ದೈವ ದೇವರ ಸೇವೆ, ಲೋಕ ಪಾಲ’ಕರ-ಸೇವೆ’…

ಬರದೋರು :   ಒಪ್ಪಣ್ಣ    on   15/02/2013    4 ಒಪ್ಪಂಗೊ

ನಮ್ಮೂರಿನ ಆಸ್ತಿಕ ಭಕ್ತರಿಂಗೆ ಈ ಒರಿಶ “ಬ್ರಹ್ಮಕಲಶದ ಒರಿಶ”ವೋ ಹೇದು!
ವಿಟ್ಳದರಸುವಿನ ಸೀಮೆದೇವರು ಪಂಚಲಿಂಗೇಶ್ವರಂಗೆ ಬ್ರಮ್ಮಕಲಶದ ಗವುಜಿ ಗೊಂತಿದ್ದನ್ನೇ,
ಆಚಹೊಡೆಲಿ ಮಾಯಿಪ್ಪಾಡಿ ಅರಸುವಿನ ಸೀಮೆದೇವರು ಅಡೂರಿಲಿಯೂ ಬ್ರಹ್ಮಕಲಶದ ಗೌಜಿ!
ಅಡೂರು ಆದ ಮತ್ತೆ ಯೇವದು? ಮಧೂರು ಅಲ್ಲದೋ – ಅದುದೇ ಬ್ರಹ್ಮಕಲಶಕ್ಕೆ ತೆಯಾರಾಯಿದು!
ಅಲ್ಲೇ ಆಚೊಡೆಲಿ ಬೆಟ್ಟಂಪಾಡಿ ದೇವರಿಂಗೂ ಬ್ರಹ್ಮಕಲಶದ ಗವುಜಿ, ನಾಳ್ತಿಂದ!
ಈಚ ಹೊಡೆಲಿ ಪುತ್ತೂರ ಸೀಮಾಧೀಶ್ವರನಾದ ಮಹಾಲಿಂಗೇಶ್ವರಂಗುದೇ – ಬ್ರಹ್ಮಕಲಶದ ಗವುಜಿ!!
ಇದರೆಡಕ್ಕಿಲಿ –ಬೈಲಿನ ಹತ್ತು ಹಲವು ದೇವಸ್ಥಾನಂಗೊ, ದೈವಸ್ಥಾನಂಗೊ ಇದೇ ಸಂದರ್ಭಲ್ಲಿ ಜೀರ್ಣೋದ್ಧಾರ ಆವುತ್ತಾ ಇಪ್ಪದು ಬೇರೆ!
~
ಪುತ್ತೂರಿಲಿ ಬ್ರಹ್ಮಕಲಶದ ಗವುಜಿ ಎಳಗಿದ್ದು ಒಪ್ಪಣ್ಣಂಗೆ ಅಂದೇ ಗೊಂತಾಯಿದು.
ಆಚಮನೆ ದೊಡ್ಡಮ್ಮಂಗೆ ಕನ್ನಡ್ಕ ಬದಲುಸುತ್ತ ಲೆಕ್ಕಕ್ಕೆ ಕಾನಾವು ಡಾಗುಟ್ರಲ್ಲಿಗೆ ಕರಕ್ಕೊಂಡು ಹೋಪಲೆ ಹೋಗಿತ್ತಿದ್ದೆ ಅಲ್ಲದೋ – ಅಂಬಗಳೇ ಡಾಗುಟ್ರುಬಾವ° ಹೇಳಿತ್ತಿದ್ದವು; “ಪುತ್ತೂರಿಲಿ ಈ ಸರ್ತಿ ಜೋರ್ಣೋದ್ಧಾರದ ಗೌಜಿ ಇದ್ದು” – ಹೇದು. ಡಾಗುಟ್ರುಭಾವ ಯೇವಗಳೂ ಅಂಬೆರ್ಪಿಲೇ ಇಪ್ಪ ಕಾರಣ, ಆ ದಿನ ಎಂತೂ ಮಾತಾಡ್ಳಾಯಿದಿಲ್ಲೆ.
ಸುಮಾರು ಸಮೆಯ ಕಳುದು ಚೂರಿಬೈಲು ಸಂಧಿಶಾಂತಿಲಿ – ಪುರುಸೋತಿಲಿ ಸಿಕ್ಕಿಪ್ಪಗ ಸುಮಾರು ಮಾತಾಡಿತ್ತಿದ್ದವು.
~
“ಪುತ್ತೂರ ದೇವಸ್ಥಾನ ಜೀರ್ಣೋದ್ಧಾರ ಆಯೇಕು” ಹೇದು ಪ್ರಶ್ನೆಲಿ ಕಂಡತ್ತಾಡ.
ಈ ಒರಿಶವೇ ಸುರು ಆಗಲಿ – ಹೇದು ತಂತ್ರಿಗೊ ಅಭಿಪ್ರಾಯ ಪಟ್ಟವಾಡ.
ಈ ಒರಿಶವೇ ಮುಗುದರೆ ಆತು, ಒಂದು ವೇಳೆ ಈ ಒರಿಶ ಕೊಡಿ ಎತ್ತದ್ದೆ ತಡವಾದರೆ ಮತ್ತೆ ಪಕ್ಕಕ್ಕೆ ಮುಗಿಯ – ಹೇದು ಜೋಯಿಶರು ಹೆದರುಸಿದ್ದವಾಡ.
ಹಾಂಗಾಗಿ – ಈ ಒರಿಶವೇ ಸುರು ಆಯೇಕು ಹೇದು ತಂತ್ರಿಗೊ, ಈ ಒರಿಶವೇ ಮುಗಿಯೇಕು ಹೇದು ಜೋಯಿಶರು!!
ಮಾಲಿಂಗೇಶ್ವರಾ.. ಇಬ್ರೂ ಸೇರಿ ಉಪಕಾರ ಆದ್ಸು ಆರಿಂಗೆ? ಊರ ದೇವರಿಂಗೆ!!
ಒಂದೇ ಒರಿಶದ ಒಳ ಹೊಸ ಮನೆ ಮಹಾಲಿಂಗೇಶ್ವರಂಗೆ ತಯಾರಪ್ಪದು!

ಪುತ್ತೂರ ದೇವಸ್ಥಾನ ಎಷ್ಟು ದೊಡ್ಡದು ಗೊಂತಿದ್ದನ್ನೇ?
ಅಷ್ಟು ದೊಡ್ಡ ದೇವಸ್ಥಾನ ಒಂದು ಒರಿಶಲ್ಲಿ ಪೂರ್ತಿ ಒಡದು, ಸಮ ಮಾಡಿ, ಕಟ್ಟಿ, ಪುನಾ ಪ್ರತಿಷ್ಠೆ ಮಾಡುದು ಹೇದರೆ ಮಕ್ಕಳಾಟಿಕೆಯೋ?
ಸುವಸ್ತುಗೊಕ್ಕೆ, ಸಾಮಾನುಗೊಕ್ಕೆ, ವ್ಯವಸ್ಥೆಗೆ – ಎಲ್ಲದಕ್ಕೂ ಖರ್ಚಿಲ್ಲೆಯೋ? ಅಷ್ಟು ಧನಸಂಗ್ರಹ ಆಗೆಡದೋ?
ಬರೇ ಪೈಸೆ ಸಂಗ್ರಹಣೆ ಆದರೆ ಸಾಕೋ? ಕೈ ಕೆಲಸ ಇಲ್ಲೆಯೋ? ಸಾವಿರಾರು ಆಳು ಕೆಲಸ ಸಾಗೆಡದೋ? ಅದಕ್ಕಿಪ್ಪ ಜೆನ ಸಂಗ್ರಹ ಆಗೆಡದೋ?
ಈಗ ತೋಟ ಇಪ್ಪೋರಿಂಗೆ ಅರಡಿಗು – ಒಂದೆರಡು ಜೆನವೇ ಬಪ್ಪಲೆ ಎಷ್ಟು ಬಂಙ ಇದ್ದು; ಅದರ್ಲಿ ದೇವಸ್ಥಾನದ ಕಾರ್ಯದಷ್ಟು ದೊಡ್ಡ – ಸಾವಿರಗಟ್ಳೆ ಆಳುಗೊ ದುಡಿಯೇಕಾದ ಕಾರ್ಯಕ್ಕೆ ಕೆಲಸದೋರ ತಪ್ಪದು ಎಲ್ಲಿಂದ?
ತಂದರೂ ಖರ್ಚು ಎಷ್ಟು ಬೀಳುಗು!? – ಕೇಳಿದವು. ಖರ್ಚು ಲೆಕ್ಕ ಹಾಕಿ ರಪಕ್ಕನೆ ಹೇಳುಲೆ ಡಾಗುಟ್ರುಭಾವ ಎಂತ ಸುಭಗಣ್ಣನೋ?!
ಅದಿರಳಿ.

ಅಷ್ಟು ಖರ್ಚಿನ ಭರುಸುಲೆ ಊರೋರೇ ಆಗೆಡದೋ?
ಸರ್ಕಾರದ ಪೈಸೆ ಪಳ್ಳಿಗೂ- ಇಂಗ್ರೋಜಿಗೂ ಹೋಗಿ ಮುಗಿತ್ತಿಲ್ಲೆಯೋ – ಹೇದು ಕಂಡತ್ತು ಒಪ್ಪಣ್ಣಂಗೆ!
ಪುತ್ತೂರಿನ ದೇವಸ್ಥಾನದ ಹಾಂಗಿರ್ತ ಕಟ್ಟುತ್ತ ಕಾರ್ಯವ ಒಬ್ಬಿಬ್ಬರಿಂದ, ರುಪಾಯಿಂದ ಅಳವಲೆಡಿಯ.
ಹಾಂಗಾಗಿಯೇ, “ಕರಸೇವೆ” ಹೇಳ್ತ ಕಲ್ಪನೆ ಮೂಲಕ ಸಾಕಾರಗೊಳುಸುವ ಮಹತ್ತರ ಯೋಜನೆ ಅಳವಡುಸಿಗೊಂಡಿದವು – ಹೇಳಿದವು ಡಾಗುಟ್ರುಭಾವ.
~
ಕರಸೇವೆ! ಇದೆಂತರ? ಹೆಸರೇ ಹೇಳ್ತ ಹಾಂಗೆ – ಎಲ್ಲೋರುದೇ ತನ್ನ ಕೈಲಿ ಅಪ್ಪಷ್ಟು ಸೇವೆ ಸಲ್ಲುಸುತ್ತ ಸಂಗತಿ.
ನೂರಾರು- ಸಾವಿರಾರು ಜೆನಂಗೊ ಒಂದೇ ಉದ್ದೇಶಲ್ಲಿ ಸೇರಿ, ದೈಹಿಕವಾಗಿ ಕೆಲಸ ಮಾಡಿ ಯೇವದೋ ಒಂದು ನಿರ್ದಿಷ್ಟ ಗುರಿಯ ಎತ್ತುದು ಕರಸೇವೆಯ ಮುಖ್ಯ ಹಿರಿಮೆ.

ಉದಾಹರಣೆಗೆ, ಒಬ್ಬನೇ ಮೇಸ್ತ್ರಿ ಒಂದು ದಿನಕ್ಕೆ ಒಂದು ಕೋಲು ಎತ್ತರಕ್ಕೆ ಕಲ್ಲು ಕಟ್ಟುತ್ತರೆ,
ಇಬ್ರು ಮೇಸ್ತ್ರಿಗೊ ಬಂದರೆ ಎರಡು ಕೋಲಲ್ಲ, ಮೂರು ಕೋಲು ಎತ್ತರಕ್ಕೆ ಕಲ್ಲು ಕಟ್ಳೆಡಿಗು.
ಎಂತಗೆ? ಒಬ್ಬ ಇನ್ನೊಬ್ಬನ ಕಾಂಬಗ ಹುರುಪು, ಉತ್ಸಾಹ ಬತ್ತು. ಅದರಿಂದಾಗಿ ಕೆಲಸ ಬೇಗ ಸಾಗುತ್ತು.
ಒಬ್ಬಂದ ಇಬ್ರಿಂಗೇ ಅಷ್ಟು ವಿತ್ಯಾಸ ಇದ್ದರೆ, ನೂರಾರು ಜೆನ ಇದ್ದರೆ ಎಷ್ಟು ಬದಲುಗಪ್ಪೋ!?

~
ಲಂಕೆಗೆ ಸಂಕ ಕಟ್ಟುವಗ ರಾಮನ ಸಂಘಟನೆ ಇಕ್ಕು,
ಅಯೋಧ್ಯೆಲಿ ದೇವಸ್ಥಾನ ಕಟ್ಟುತ್ತ ಲೆಕ್ಕಲ್ಲಿ ರಾಮಭಕ್ತರ ಸಂಘಟನೆ ಇಕ್ಕು,
ದನಗಳ ಕಳ್ಳುತ್ತ ಗೋಮುಖ ವ್ಯಾಘ್ರಂಗಳ ಹಿಡಿಯಲೆ ರಾಮಸೇನೆಯ ಸಂಘಟನೆ ಇಕ್ಕು,
ರಾಮಾಯಣವ ಕಣ್ಣೆದುರು ತೋರ್ಸುತ್ತ ರಾಮಕಥೆಯ ತಂಡದ ಕತೆ ಇಕ್ಕು – ಯೇವದೇ ದೊಡ್ಡಮಟ್ಟಿನ ಕಾರ್ಯ ಆದರೂ ಅದರ ಹಿಂದೆ ಒಂದು ಸಂಘಟನೆಯ ಶೆಗ್ತಿ ಇರ್ತು.
ಕರಸೇವೆಗಳಲ್ಲಿ ಕೆಲಸ ಮಾಂತ್ರ ಅಪ್ಪದಲ್ಲದ್ದೆ, ಸಂಘಟನೆಯೂ ಗಟ್ಟಿ ಆವುತ್ತು – ಹೇಳ್ತದರ ಕಾನಾವು ಡಾಗುಟ್ರೂ ಒಪ್ಪುಗು.
~
ಇತಿಹಾಸ ಕಾಲಲ್ಲೇ ಹಲವು ಕಾರ್ಯಂಗಳ ಸೇವೆಲೇ ಮಾಡಿದ್ದಡ.
ದೊಡ್ಡ ದೊಡ್ಡ ಕೋಟೆಗೊ, ಗೋಡೆಗೊ, ಗೆದ್ದೆಗೊ, ಕೆರೆಗೊ – ಇದೆಲ್ಲವನ್ನೂ ಕಟ್ಟಿದ್ದು ಸೇವೆಲೇ.
ನಮ್ಮ ಊರಿಲಿ ಮಾಂತ್ರ ಅಲ್ಲ, ತಂಜಾವೂರಿನ ನೂರುಗಟ್ಳೆ ಕೋಲು ಎತ್ತರದ ಬೃಹದೀಶ್ವರ ದೇವಸ್ಥಾನ ಇಕ್ಕು, ಚೀನಾದ ಮಹಾಗೋಡೆ ಇಕ್ಕು, ಈಜಿಪ್ಟಿನ ಪಿರಮಿಡ್ ಇಕ್ಕು – ಎಲ್ಲವುದೇ ನಾಕು ಕೈ ಸೇರಿಯೇ ಆದ ಬಗೆಗೊ.
ನಮ್ಮ ದೇವಸ್ಥಾನಂಗಳಲ್ಲಿಯೂ ಇದೇ ಪರಿಕಲ್ಪನೆ ಇದ್ದಷ್ಟೇ!
~

ಮಹಾಲಿಂಗೇಶ್ವರನ ಗರ್ಭಗುಡಿಯ ಕರಸೇವೆ, ಭಕ್ತರಿಂದ..!
ಮಹಾಲಿಂಗೇಶ್ವರನ ಗರ್ಭಗುಡಿಯ ಕರಸೇವೆ, ಭಕ್ತರಿಂದ..!

ಮದಲಿಂಗೇ ಈ ಸಂಗತಿ ಇತ್ತಾಡ ನಮ್ಮ ಹಳ್ಳಿಗಳಲ್ಲಿ. “ಬಿಟ್ಟಿ” ಹೇಳಿಗೊಂಡಿದ್ದದಾಡ.
ದೇವಸ್ಥಾನದ ಜಾತ್ರೆ ಸಮಯಲ್ಲಿ ಎಲ್ಲೋರುದೇ ಸೇರಿ “ಬಿಟ್ಟಿ”ಚಾಕ್ರಿ ಮಾಡುಸ್ಸು.
ಚೆಪ್ಪರ ಹಾಕುದು, ಸಗಣ ಬಳುಗುದು, ದಾ ಮಾಲೆ ಕಟ್ಟಿ ಆಯೆತ ಮಾಡುದು, ರಂಗೋಲಿ ಹಾಕುದು – ಹೀಂಗೆಲ್ಲ – ಆಯಾ ಊರಿಂಗೆ ಸಮ್ಮಂದಪಟ್ಟ ಕೆಲಸ ಕಾರ್ಯಂಗಳ ಊರವೆಲ್ಲ ಸೇರಿ ಮಾಡ್ತದೇ “ಬಿಟ್ಟಿ”.
(ಚೆಂಬಿನ ಹೊದಕ್ಕೆ ಇಲ್ಲದ್ದ ಗರುಡಕಂಬ ಇಪ್ಪ ದೇವಸ್ಥಾನಂಗಳಲ್ಲಿ ಅಂತೂ – ಗರುಡಕಂಬ ನಿಲ್ಲುಸುತ್ತ ಕಾರ್ಯವೂ ಇದ್ದತ್ತು.
ಬೇಸಗೆಲಿ ಮಾಂತ್ರ ನಿಲ್ಲುಸಿದ ಆ ಗರುಡಗಂಬವ ಮಳೆಗಾಲಕ್ಕಪ್ಪಗ ಒಪಾಸು ಮಾಡಡಿಲಿ ಮಡಗೆಕ್ಕು; ಅಲ್ಲದ್ದರೆ ಮಳೆನೀರಿಂಗೆ ಆ ಮರ ಕುಂಬಕ್ಕಿದಾ!)

ಈಗಳೂ ಈ ಬಿಟ್ಟಿ ಇದ್ದು.
ಆದರೆ ರಜ ಚೆಂದ ಹೆಸರಿಲಿ “ಶ್ರಮದಾನ” ಅತವಾ “ಕರಸೇವೆ” ಹೇಳಿ ಹೇಳ್ತವು.
ಹೆಸರು ಯೇವದೇ ಇದ್ದರೂ ಉದ್ದೇಶ ಒಂದೇ – ಈಶ ಸೇವೆ.
ಪ್ರತಿಫಲಾಪೇಕ್ಷೆ ಇಲ್ಲದ್ದೆ ಶ್ರದ್ಧೆಲಿ ಎಂತದೋ ಕಾರ್ಯ ಮಾಡಿರೆ – ಅದುವೇ ಸೇವೆ.
ದಿನ ಇಡೀ ಒಂದೇ ಶ್ರದ್ಧೆಲಿ ಹಲವು ಜೆನ ಸೇರಿ ಕೆಲಸ ಮಾಡ್ತವಲ್ಲದೋ – ಅಷ್ಟಪ್ಪಗ ದೇಹಕ್ಕೆ ವ್ಯಾಯಾಮ ಆದಷ್ಟೇ, ಮನಸ್ಸಿಂಗೂ ವ್ಯಾಯಾಮ ಆವುತ್ತಾಡ.
ಆರಿಂಗೆ ಬೇಕಾಗಿ ಇಷ್ಟು ಶ್ರಮ ತೆಕ್ಕೊಂಡು ಮಾಡುಸ್ಸು?
ದೇವರಿಂಗೆ ಬೇಕಾಗಿ – ಹೇಳ್ತ ಚಿಂತನೆ ಮನಸ್ಸಿಲಿ ಇರ್ತಲ್ಲದೋ? – ಆ ದೈವಚಿಂತನೆಯೇ ಮನಸ್ಸಿನ ಶುದ್ಧೀಕರುಸುತ್ತಾಡ.
ಹಾಂಗೆ, ಕಾನಾವು ಡಾಗುಟ್ರು ಮಾತಾಡಿಂಡಿಪ್ಪಗಾಳೇ, ಮನಸ್ಸಿಲಿ ಎಂತೆಂತದೋ ಯೇಚನೆ ಬಂತು.
~
ಪುತ್ತೂರಿಲಿಯೂ ಬ್ರಹ್ಮಕಲಶ ಸುರು ಆದ ಲಾಗಾಯ್ತಿಂದ “ಕರಸೇವೆ” ಚಾಲ್ತಿಲಿ ಇದ್ದಾಡ.
ಆಸುಪಾಸಿನ ಸುಮಾರು ಸಂಘ ಸಂಸ್ಥೆಗೊ, ಸಂಘಟನೆಗೊ, ಸ್ವಸಹಾಯ ಗುಂಪುಗೊ – ಎಲ್ಲರುದೇ ಒಂದರಿ ಮಾಲಿಂಗೇಶ್ವರನ ಎದುರು ಬಂದು, ಕೈಲಾದಷ್ಟು ಕರಸೇವೆ ಮಾಡಿಂಡಿದ್ದವಾಡ; ಡಾಗುಟ್ರುಬಾವ ಹೇಳಿದವು.
ಕೆಲವು ಜೆನ ಅಂತೂ – ಹಲವು ಸಂಘಟನೆಗಳ ಹೆಸರಿಲಿ, ಹಲವು ಗುಂಪುಗಳ ಹೆಸರಿಲಿ ಹಲವಾರು ಸರ್ತಿ ಬಂದು ಕೆಲಸ ಮಾಡಿಕ್ಕಿ ಹೋದವು.
ಅಂಗಿ ಬೇರೆಬೇರೆ ಆದರೂ ಜೆನ ಅವ್ವೇ ಅಲ್ಲದೋ!
ಯೇವ ಲೆಕ್ಕಲ್ಲೇ, ಯೇವ ನೆಪಲ್ಲೇ ಆಗಿರಳಿ – ದೇವಸೇವೆ ಮಾಡಿರೆ ಪುಣ್ಯ ಎಲ್ಲಿಗೂ ಹೋಗ ಬಿಟ್ಟಿಕ್ಕಿ. ನಮ್ಮ ಪುಣ್ಯಕಾರ್ಯದ ಪುಣ್ಯ ನಮ್ಮ ಕೈಲೇ ಇಕ್ಕಷ್ಟೆ!

ದೈವ, ದೇವರ ಸೇವೆ ಮಾಡಿತ್ತು ಕಂಡ್ರೆ, ಅದು ನಮ್ಮ ಪಾಪ ತೊಳೆತ್ತ ಕಾರ್ಯ.
ನಾವು ಮಾಡಿದ ತಪ್ಪುಕಾರ್ಯಂಗೊ, ಪಾಪತ್ವಂಗೊ ಎಲ್ಲವೂ ತೊಳದು ಶುಭ್ರ ಆಯೇಕು ಕಂಡ್ರೆ, ದೈವದೇವರುಗಳ ಸೇವೆಯ ನಾವು ಮಾಡೇಕು – ಹೇಳ್ತದು ಡಾಗುಟ್ರುಭಾವನ ಅಭಿಪ್ರಾಯ.
~
ಮಾತಾಡಿಂಡಿದ್ದ ಹಾಂಗೇ – “ನಮ್ಮ ಬೈಲಿನ ಲೆಕ್ಕಲ್ಲಿಯೂ ಒಂದು ಕರಸೇವೆ ಮಾಡಿರೆಂತ ಡಾಗುಟ್ರುಬಾವಾ” ಕೇಳಿದೆ.
“ಆಗದ್ದೆ ಇಲ್ಲೆ!” ಹೇಳಿದವು.
ದೇವಸ್ಥಾನಲ್ಲಿ ಕರಸೇವೆ ನೋಡಿಗೊಂಬ ಜೆನರ ಡಾಗುಟ್ರಿಂಗೆ ಸರೀ ಗುರ್ತ ಇದ್ದ ಕಾರಣ, ಆಯಿತ್ಯವಾರ ಬಪ್ಪ ಒಂದೊಳ್ಳೆ ದಿನ ನೋಡಿ ಮಡಗಲೆ ಅಂಬಗಳೇ ಹೇಳಿ ಮಡಗಿತ್ತು ನಾವು.
ಚೂರಿಬೈಲು ಸಂಧಿಶಾಂತಿ ಊಟ ಉಂಡಾತು. ಎದ್ದು ಹೆರಟೂ ಆತು.

ಬೈಲಿನೋರ ಕರಸೇವೆಗೆ ಹೇಳಿಕೆ...
ಬೈಲಿನೋರ ಕರಸೇವೆಗೆ ಹೇಳಿಕೆ…

~
ಅದಾಗಿ ಸುಮಾರು ಸಮಯ ಕಳುದು – ಆಚಮನೆ ದೊಡ್ಡಮ್ಮನ ಕನ್ನಡ್ಕ ಸರಿಯಾದ್ಸರ ತೋರ್ಸಲೆ ಬಂದಿಪ್ಪಾಗ ಕಾನಾವು ಡಾಗುಟ್ರು ಮಾತಾಡ್ಳೆ ಸಿಕ್ಕಿತ್ತಿದವಲ್ಲದೋ
– ಆ ದಿನ ಹೇಳಿದವು, “ಪೆಬ್ರವರಿ ಹದಿನೇಳು ಆಯಿತ್ಯವಾರ ಕರಸೇವೆ ಮಾಡ್ತರೆ ಅವಕಾಶ ಇದ್ದಾಡ” ಹೇದು!!

ಉದಿಯಪ್ಪಗ ಎಂಟೂವರೆಗೆ ನಮ್ಮ ಕ್ರಮದ ವಸ್ತ್ರಧರರಾಗಿ ಅಲ್ಲಿ ಬಂದು ಸೇರೇಕಡ.
ಹತ್ತುಗಂಟೆಗೆ ಚಾಯ ಕುಡಿಯಲೆ ಪುರುಸೊತ್ತು. ಮತ್ತೆ ಪುನಾ ಕೆಲಸ ಸುರುಮಾಡಿರೆ, ಮಜ್ಜಾನ ಪೂಜೆಗಪ್ಪಗ ನಿಲ್ಲುಸುದು.
ಪೂಜೆ ಪ್ರಸಾದ ಆಗಿ, ಭೋಜನವೂ ಅದಮತ್ತೆ ಬೇಕಾರೆ ರಜಾ ವಿಶ್ರಾಂತಿ.
ಅದಾದ ಮತ್ತೆ ಪುನಾ ಕೆಲಸ ಸುರುಮಾಡಿರೆ, ಅವಕ್ಕವಕ್ಕೆ ಎಡಿಗಾಷ್ಟು ಹೊತ್ತು ಮಾಡಿಕ್ಕಿ, ದೇವರಿಂಗೆ ಅಡ್ಡಬಿದ್ದಿಕ್ಕಿ, ಅವರವರ ಮನೆಗೆ ಹೋವುಸ್ಸು – ಕರಸೇವೆಯ ವೇಳಾಪಟ್ಟಿ ಆಡ.

~
ಪೆಬ್ರವರಿ ಹದ್ನೇಳೋ? ಅಕ್ಕು; ನವಗೆ ಆಗದ್ದೆ ಇಲ್ಲೆ, ಬೈಲಿನ ಒಳುದೋರಿಂಗೆ ಹೇಂಗೆ?
ನಾವೆಲ್ಲೋರುದೇ ಪುತ್ತೂರಿಂಗೆ ಹೋಗಿ, ಮಾಲಿಂಗೇಶ್ವರ ದೇವರಿಂಗೆ ಕರಸೇವೆ ಕೊಡುವನೋ?
ಬೈಲಿನ ಆಸ್ತಿಕವರ್ಗ ಎಲ್ಲ ಸೇರಿಗೊಂಡು ಮಹಾಲಿಂಗೇಶ್ವರನ ಹೊಸಮನೆ ಕೆಲಸಲ್ಲಿ ಸೇರುವನೋ?
ನಮ್ಮ ನಮ್ಮ ಮನೆಗೆ ಶ್ರೀರಕ್ಷೆ ಕೊಡ್ಳೆ ಕೇಳಿಗೊಂಬನೋ?
ನಮ್ಮಂದ ಮದಲೂ ಸದ್ಯಕ್ಕೆ ಈ ಕಾರ್ಯ ಆರಿಂಗೂ ಸಿಕ್ಕಿದ್ದಿಲ್ಲೆ,
ಇನ್ನು ಮುಂದೆಯೂ ಸದ್ಯಕ್ಕೆ ಈ ಕಾರ್ಯ ಸಿಕ್ಕ.
ತಲೆಮಾರಿಂಗೇ ಅಪೂರ್ವವಾದ ಈ “ಕರಸೇವೆ” ಕಾರ್ಯಕ್ರಮಕ್ಕೆ ಬೈಲಿನ ಸಮಸ್ತರೂ ಬಂದು ಸೇರುವನೋ?
~

ಎಂತ ಹೇಳ್ತಿ?

~
ಒಂದೊಪ್ಪ: ದೇವರ ಗುಡಿಯ ಕಟ್ಳೆ ನಾವು ಸೇರಿರೆ, ನಮ್ಮ ಜೀವನ ಕಟ್ಳೆ ದೇವರೂ ಸೇರುಗು..!

4 thoughts on “ದೈವ ದೇವರ ಸೇವೆ, ಲೋಕ ಪಾಲ’ಕರ-ಸೇವೆ’…

  1. ಅಬ್ಬಾ! ಪುತ್ತೂರು ಪುಟ್ಟಕ್ಕ ವಾವಾಸು ಬೈಲಿ೦ಗೆ ಬ೦ತದ!!! 😉
    ರಜ್ಜ ದಿನ ಬೈಲಿ೦ಗೆ ದಾರಿ ಸಿಕ್ಕಿತ್ತಿದಿಲ್ಲೆ…ಎಲ್ಲಿಗೋ ಹೋಗಿತ್ತಿದೆ…ಈಗ ದಾರಿ ಸಿಕ್ಕಿತ್ತು… 😉
    ಇನ್ನು ಯಾವಾಗಳೂ ಬತ್ತೆ.ಆತೋ ಒಪ್ಪಣ್ಣ?? 😉

  2. ಕರಸೇವೆ ನೆರವೇರಲಿ…ಶುಭಮಸ್ತು

  3. ಒಂದೊಪ್ಪ ಕೊಶಿಯಾತು. ಕರಸೇವೆ ಮಹತ್ವ ತಿಳಿಶಿದ್ದು ಸಕಾಲಿಕ ಲಾಯಕ ಆತು. ಪೆ 17ಕ್ಕೆ ಇದೊಂದು ಸ್ಪೂರ್ತಿಯಾಗಿರಲಿ ಹೇದು ಆಶಿಸೋಣ ಆವ್ತು ಇತ್ಲಾಗಿಂದ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×