ವಾಗ್ವರ್ಧನಾರ್ಥಂ, ತತ್ರಾಪಿ ಸಂಸ್ಕೃತ ವಾಗ್ವರ್ಧನಾರ್ಥಂ ಕಾರ್ಯಾಗಾರಮೇಕಂ ಪ್ರಚಲತಿ…. – ಹೇದು ನಮ್ಮ ಗುರುಗೊ ಸಂಸ್ಕೃತಲ್ಲಿ ಆಶೀರ್ವಚನ ಕೊಡುವಗ ಒಪ್ಪಣ್ಣಂಗೆ ಕೂದಲ್ಲೇ ರೋಮಾಂಚನ ಆತು. ಚೇ, ಗುರುಗೊ ಮಾತಾಡುವಷ್ಟು ಸುಲಲಿತವಾಗಿ ಸ್ಪಷ್ಟವಾಗಿ ಎಲ್ಲೋರುದೇ ಮಾತಾಡುವ ಹಾಂಗಿದ್ದರೆ, ಸಮಾಜದ ಎಲ್ಲೋರಿಂಗೂ ಅರ್ತ ಅಪ್ಪ ಹಾಂಗೆ ಇದ್ದರೆ, ನಮ್ಮ ಬೈಲಿನ ಹಾಂಗೇ ಸಂಸ್ಕೃತಕ್ಕೇ ಒಂದು ಬೈಲು ಇದ್ದಿದ್ದರೆ – ಹೇದು ಅನುಸುಲೆ ಸುರು ಆತು.
ಇದೆಲ್ಲ ಮಾಡ್ಳೆಡಿಯದ್ದ ಕೆಲಸವೂ ಅಲ್ಲ, ಆದರೆ ಅದೆಲ್ಲದರಿಂದ ಮೊದಲು ನಮ್ಮಲ್ಲಿ “ವಾಗ್ವರ್ಧನೆ” ಆಯೇಕು; ಸಂಸ್ಕೃತಲ್ಲಿ ಮಾತಾಡುವ ಸಾಮರ್ಥ್ಯ ಸಮಾಜಲ್ಲಿ ವೃದ್ಧಿ ಆದರೆ ಇದೆಲ್ಲವೂ ಎಡಿತ್ತು ಒಪ್ಪಣ್ಣಾ – ಹೇಯಿದವು ಗಣೇಶಮಾವ°.
ಗಣೇಶಮಾವ° ಎಲ್ಲಿ ಸಿಕ್ಕಿದವು, ಎಂತ ಇತ್ತು? ಎಲ್ಲ ವಿವರವಾಗಿ ಮಾತಾಡುವೊ°.
ಮೊನ್ನೆ ಮಂಗಳವಾರ ಬೈಲಿನ ಸಹಯೋಗಲ್ಲಿ ಒಂದು ಕಾರ್ಯಕ್ರಮ ನೆಡದತ್ತು.
ಅದೆಂತದು?
~
ಮುಜುಂಗಾವು ವಿದ್ಯಾಪೀಠಲ್ಲಿ ಮೊನ್ನೆ ಹತ್ತೊಂಬತ್ತನೇ ತಾರೀಕಿಂಗೆ “ಸಂಸ್ಕೃತ ವಾಗ್ವರ್ಧನ ಕಾರ್ಯಾಗಾರ“ – ಹೇಳ್ತ ಒಂದು ವೈಶಿಷ್ಟ್ಯಪೂರ್ಣ ಕಾರ್ಯಕ್ರಮ ನೆಡದತ್ತು.
ಬೈಲಿನ ನೆಂಟ್ರುಗಳ ಸಹಯೋಗಲ್ಲಿಯೂ, ಮುಳ್ಳೇರ್ಯ ಮಂಡಲದ ಧರ್ಮಪ್ರಧಾನರ ಸಹಯೋಗಲ್ಲಿಯೂ ನೆಡದ ಈ ಕಾರ್ಯಕ್ರಮಲ್ಲಿ ಸಂಸ್ಕೃತ, ಸಂಸ್ಕಾರಂಗಳ ಕಲಿಶಿ ಕೊಟ್ಟಿದವಾಡ. ಮುಳ್ಳೇರಿಯ ಮಂಡಲದ ಧರ್ಮ ಪ್ರಧಾನರು, ಊರ ಕೋಣಮ್ಮೆ ಬಟ್ಟಮಾವ°, ಪಳ್ಳತ್ತಡ್ಕ ಬಟ್ಟಮಾವ° – ಇತ್ಯಾದಿ ಹಲವು ಸಮಾಜ ಚಿಂತಕರು ಈ ಕಾರ್ಯಲ್ಲಿ ಹೆಗಲು ಕೊಟ್ಟು ನೆರವೇರ್ಸಿದವು. ಬೈಲಕರೆ ಗಣೇಶಮಾವ°, ಬೈಲಿನ ವೈದಿಕ ಸಮಿತಿಯ ಸಂಚಾಲಕರೂ ಆದ ಕಾರಣ – ಅವರ ವಿಶೇಷ ಆಸಕ್ತಿ, ಉಸ್ತುವಾರಿಲಿ ನೆಡದತ್ತು.
ನಮ್ಮ ಬೈಲಿಲಿ ಸಂಸ್ಕೃತ ಆಸಕ್ತರು ಆರಿದ್ದವೋ – ಅವುದೇ ಬನ್ನಿ – ಹೇದು ಹೇಳಿಕೆಯೂ ಹೇಳಿದ್ದತ್ತು.
ಆ ಪ್ರಕಾರಲ್ಲಿ, ಉದಿಯಪ್ಪಗ ಕೋಣಮ್ಮೆ ಬಟ್ಟಮಾವ° ದಿವ್ಯಹಸ್ತಲ್ಲಿ ಉದ್ಘಾಟನೆ ಮಾಡಿದವು. ವೇದಪೂರ್ವಕ ಮಂತ್ರೋಚ್ಚಾರಣೆಯ ಸೇರಿದೋರು ಮಾಡಿದವು. ಶುಭಹಾರೈಕೆ ಮಾತಿನ ಅಲ್ಯಾಣ – ಶರ್ಮಮಾಷ್ಟ್ರು ಮಾಡಿದ್ದವು. ಬಂದೋರಿಂಗೆ ಸ್ವಾಗತವ ಶರ್ಮಪ್ಪಚ್ಚಿ ಮಾಡಿದವು. ಕಾರ್ಯಕ್ರಮ ಸುರು ಆತು. ಡಾ ಮಹೇಶಣ್ಣ ತರಗತಿ ಸುರುಮಾಡಿದ್ದೇ – ನೇರವಾಗಿ ಸಂಸ್ಕೃತ ಭಾಶೆಯ ಕಲಿಶಲೆ ಸುರುಮಾಡಿದವು, ಅದಾಗಿ ಪೆರ್ಲ ಮಾಷ್ಟ್ರು ಸುಭಾಶಿತ ತರಗತಿ ಮಡಿದವು. ಮಜ್ಜಾನ ಎಯ್ಯೂರು ಬಾವನ ಕೈ ಅಡಿಗೆ ಊಟ. ಮಜ್ಜಾಂತಿರುಗಿ ಬೆಂಗ್ಳೂರು ಲೋಹಿತಣ್ಣನ ತರಗತಿ. ಒರಕ್ಕು ತೂಗದ್ದ ಹಾಂಗೆ ಕಶಾಯ. ಹೊತ್ತೋಪಗ ಸಮಾರೋಪ.
ಸಮಾರೋಪಕ್ಕೆ ಪಳ್ಳತಡ್ಕ ಬಟ್ಟಮಾವ° ಬಂದವು. ಸಂಸ್ಕೃತದ ಬಗ್ಗೆ ಚೆಂದಲ್ಲಿ ಮಾತು ಹೇಳಿದವು. ಬದಿಯೆಡ್ಕ ಮೂರ್ತಿ ಮಾವ° ನೆಗೆಮೋರೆಲೇ ಶುಭಹಾರೈಕೆ ಮಾಡಿದವು, ಮಾಷ್ಟ್ರುಮಾವ° ಪ್ರತಿಸ್ಪಂದ ಹೇದು ಮಾತಾಡಿದವು, ಒಳುದ ಎಲ್ಲೋರುದೇ ಅವರವರ ಅಭಿಪ್ರಾಯ ತಿಳುಶಿ – ಕೊಶಿ ಆತು ಹೇದು ಸಂತೋಷ ಪಟ್ಟವು. ಈಗಷ್ಟೇ ರಾಜಕೀಯಕ್ಕೆ ಇಳುದು ಗೆದ್ದ ನಮ್ಮ ಸತ್ಯಣ್ಣ ಅವರ ಕೊಶಿಯ ಹಂಚಿಗೊಂಡವು.
~
ದಿನ ಇಡೀ ಒಳ್ಳೊಳ್ಳೆ ಮಾತುಗೊ, ಸುಭಾಶಿತಂಗೊ ಕೇಳಿರೂ – ಹೊತ್ತೋಪಗ ಮಾತಾಡುವಾಗ ಮಾಷ್ಟ್ರುಮಾವ° ಒಂದು ಅಭಿಪ್ರಾಯ ಹೇಳಿದವಿದಾ – ತುಂಬಾ ಕೊಶಿ ಆತು ಒಪ್ಪಣ್ಣಂಗೆ.
ಅದು ಕಾರ್ಯಕ್ರಮದ ಬಗ್ಗೆ ಅಲ್ಲ, ಸಂಸ್ಕೃತದ ಬಗ್ಗೆ ಇಪ್ಪ ಅಭಿಪ್ರಾಯ.
ನಾವೆಲ್ಲರೂ ಒಂದೊಂದು ಭಾಶೆ ಮಾತಾಡ್ತು, ಅದುವೇ ನಮ್ಮ ಭಾಶೆ ಹೇದು ಗಟ್ಟಿ ಮಾಡಿಗೊಳ್ತು. ಆ ಭಾಶೆಯೇ ಮೂಲ, ಅದುವೇ ಅತ್ಯಂತ ಪ್ರಾಚೀನ ಹೇದು ತಿಳ್ಕೊಳ್ತು.
ಆದರೆ, ಅದೊಂದು ಗೆಲ್ಲು ಮಾಂತ್ರ.
ಮೂಲ ಮರ ಬೇರೆಯೇ ಇದ್ದು – ಆ ಮೂಲ ಮರವೇ ಸಂಸ್ಕೃತ ಭಾಷೆ.
ಪ್ರತಿ ಭಾಶೆಯ ಮೂಲ ಹುಡ್ಕಿಂಡು ಹೋದರೆ, ಅದು ಸಂಸ್ಕೃತಲ್ಲೇ ಇರ್ತು. ಹಾಂಗಾಗಿ, ನಾವು ಯೇವದು ನಮ್ಮ ಭಾಶೆ ಹೇದು ತಿಳ್ಕೊಳ್ತೋ – ಅದು ಸಂಸ್ಕೃತಂದಲೇ ಸಿಕ್ಕಿದ ಒಂದು ಪ್ರಸಾದ ಅಷ್ಟೆ. ಹಾಂಗಾಗಿ, ನಮ್ಮ ಮೂಲ ಭಾಶೆ ಸಂಸ್ಕೃತವ ನಾವು ಸದಾ ಒಳಿಶಿ ಬೆಳೆಶೆಕ್ಕು.
ಗೆಲ್ಲುಗಳ ಹಿಡ್ಕೊಂಡು – ಹೋ, ಇದುವೇ ಸರ್ವಸ್ವ – ಹೇದರೆ ಆತಿಲ್ಲೆ, ಮರ ಬೇರೆಯೇ ಇದ್ದು, ಆ ಮರಕ್ಕೂ ತಾಯಿಬೇರು ಇರ್ತು. ಆ ತಾಯಿಬೇರು ಕೊಟ್ಟ ಪ್ರಸಾದಂದಲೇ ಮರ ಒಳಿಸ್ಸು – ಹೇದು ಮಾಷ್ಟ್ರುಮಾವ° ಚೆಂದಲ್ಲಿ ವಿವರ್ಸಿ ತೋರ್ಸಿದವು.
~
ಎದುರಾಣ ಸಾಲಿಲೇ ಕುರ್ಶಿಲಿ ಕೂದ ವಿಜಯತ್ತೆ ತಲೆದೂಗಿದವು. ಈ ಉದಾಹರಣೆ ತುಂಬ ಕೊಶಿ ಆತಾದ ಎಲ್ಲೊರಿಂಗೂ. ಇದೊಂದೇ ಅಲ್ಲ, ಆ ದಿನದ ಕಾರ್ಯಕ್ರಮಲ್ಲಿ ಎಲ್ಲೋರ ಬಾಯಿಲಿಯೂ ಈ ನಮುನೆ ಒಳ್ಳೆ ಮಾತುಗೊ ಬತ್ತಾ ಇದ್ದತ್ತು – ಹೇದರೆ ಅಂಬಗ ಕಾರ್ಯಕ್ರಮ ಎಷ್ಟು ಚೆಂದಾದಿಕ್ಕು ಆಲೋಚನೆ ಮಾಡಿ ನಿಂಗೊ!
~
ಆ ದಿನ ಕಾರ್ಯಕ್ರಮಕ್ಕೆ ಬಂದ ಎಲ್ಲೋರಿಂಗೂ, ಕಾರ್ಯಕ್ರಮಲ್ಲಿ ಭಾಗವಹಿಸಿದ ಎಲ್ಲೋರಿಂಗೂ ಬೈಲು ಆಭಾರಿ.
ಕಾರ್ಯಕ್ರಮ ನೆಡೆಶಿಕೊಟ್ಟ ಡಾಮಹೇಶಣ್ಣಂಗೆ, ಲೋಹಿತಣ್ಣಂಗೆ, ಮತ್ತೆ ಪೆರ್ಲ ಮಾಷ್ಟ್ರಿಂಗೆ, ಕಲ್ಪನೆಗೆ ಬೆಂಬಲ ಕೊಟ್ಟ ವಿದ್ವಾನಣ್ಣಂಗೆ – ಬೈಲು ಸದಾ ಅಭಿನಂದಿಸುತ್ತು.
ಅಂಬೆರ್ಪಿಲಿ ಇದ್ದರೂ ಆ ದಿನ ಪುರುಸೊತ್ತು ಮಾಡಿಗೊಂಡು ಬೇಕು ಬೇಕಾದ ಹಾಂಗೆ ಹೇಳಿ ಕೊಟ್ಟು ತೋರ್ಸಿ ಮಾಡಿದ ಶ್ರೀಅಕ್ಕಂಗೆ, ಅವರ ಆ ದಿನ ಕಳುಸಿ ಕೊಟ್ಟ ಕಾನಾವು ಡಾಗುಟ್ರಿಂಗೆ, ಕಾರ್ಯಕ್ರಮದ ಸಮಗ್ರ ಉಸ್ತುವಾರಿ ತೆಕ್ಕೊಂಡ ನಮ್ಮ ಬೈಲಿನ ಗಣೇಶಮಾವಂಗೆ, ಅವಕ್ಕೆ ಹೆಗಲು ಕೊಟ್ಟ ಮುಳ್ಳೆರ್ಯ ಮಂಡಲದ ಕೂಟೇಲು ಕೇಶವಣ್ಣಂಗೆ, ಆ ದಿನ ಕೆಮರದ ಒಟ್ಟಿಂಗೆ ಪುರುಸೊತ್ತು ಮಾಡಿಗೊಂಡ ಹಳೆಮನೆ ಅಣ್ಣ-ತಮ್ಮಂದ್ರಿಂಗೆ, ನೆಗೆಮೋರೆಲಿ ಮನೆಜೆಂಬ್ರದ ಹಾಂಗೇ ಕೆಲಸ ಮಾಡಿಗೊಂಡ ವಿಜಯತ್ತೆಗೆ, ಶಾಮಣ್ಣಂಗೆ – ಎಲ್ಲೋರಿಂಗೂ ಬೈಲು ತುಂಬ ಆಭಾರಿ ಆಗಿರ್ತು.
ಇದೆಲ್ಲದಕ್ಕೂ ಮುಕುಟ ಮಡಗಿದ ಹಾಂಗೆ ನವಗೆ ಇನ್ನೂ ಕೊಶಿಯ ವಿಶಯ ” ಶ್ರೀ ಗುರು ಆಶೀರ್ವಚನ “ – ಆ ದಿನಕ್ಕೆ ವಿಶೇಶವಾಗಿ ಒದಗಿ ಬಂದ್ಸು.
ಅದೂ – ಸಂಸ್ಕೃತಲ್ಲಿ.
ಈ ಶುದ್ದಿಯ ಸುರೂವಿಂಗೆ ಹೇಳಿದ “ವಾಗ್ವರ್ಧನಾರ್ಥಂ…” – ಈ ಗೆರೆ ಗುರುಗಳೇ ನಮ್ಮ ಶಿಬಿರಕ್ಕಾಗಿ ಹೇಳಿದ ಮಾತುಗೊ.
ಶಿಬಿರದ ಸುರೂ…ವಿಂಗೆ ಈ ಆಶೀರ್ವಚನವ ನೋಡಿಯೇ ಕಾರ್ಯಕ್ರಮ ಆರಂಭ ಆತಾಡ.
~
ಸಕಾಲಕ್ಕೆ ಆಶೀರ್ವಚನ ಕರುಣಿಸಿದ ಶ್ರೀ ಸಂಸ್ಥಾನಕ್ಕೆ ಸಾಷ್ಟಾಂಗ ಪ್ರಣಾಮ ಮಾಡ್ತು ನಮ್ಮ ಬೈಲು.
~
ಆ ವೀಡ್ಯವ ಬೈಲಿಂಗೆ ಎತ್ತುಸುಲೆ ಸಹಕರುಸಿದ ಪರಿವಾರದ ಅಣ್ಣಂದ್ರಿಂಗೂ, ಆ ವೀಡ್ಯವ ಆಯೆತ ಮಾಡಿ ಕೊಟ್ಟ ಹಳೆಮನೆ ಅಣ್ಣತಮ್ಮಂದ್ರಿಂಗೂ ಸದಾ ಕೃತಜ್ಞತೆಗೊ.
ಒಟ್ಟಿಲಿ ಇಷ್ಟೊಳ್ಳೆ ಶಿಬಿರವ ಜೋಡುಸ್ಲೆ, ಪ್ರತ್ಯಕ್ಷ – ಪರೋಕ್ಷವಾಗಿ ಸೇರಿದ ಎಲ್ಲೋರುದೇ ಸದಾ ಸ್ಮರಣೀಯರು.
ಮುಂದೆಯೂ – ಈ ನಮುನೆ ಕಾರ್ಯಕ್ರಮಂಗಳಲ್ಲಿ ಒಟ್ಟುಸೇರಿ, ಹರಸೇಕು – ಹೇದು ಬೈಲಿನ ಒಪ್ಪಣ್ಣನ ಕಳಕಳಿಯ ವಿನಂತಿ.
~
ಒಂದೊಪ್ಪ: ವಾಗ್-ವರ್ಧನೆ ಆಯೇಕಾರೆ ಅದಕ್ಕೆ ಸೇರಿಗೊಳೇಕು ಹೇಳ್ತ ಆಸಕ್ತಿಯೂ ವರ್ಧನೆ ಆಯೇಕು.
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
ಗುರುಗೊ ಸಂಸ್ಕೃತಲ್ಲಿ ಮಾತಾಡಿದ್ದು ವಾಟ್ಸಪ್ಪಿಲ್ಲಿ ಕೇಳಿ ತುಂಬಾ ಸಂತೋಷ ಆತು. ಸರಳ ಸುಂದರವಾಗಿತ್ತು. ಒಪ್ಪಣ್ಣ ಮುಜುಂಗಾವು ಶಿಬಿರದ ಬಗ್ಗೆ ಕೊಟ್ಟ ವರದಿಯುದೆ ಲಾಯಕಿತ್ತು. ಅಪ್ಪು, ಸಂಸ್ಕೃತ ಕಲಿಯಲೆ ನಮ್ಮ ಆಸಕ್ತಿ ವರ್ಧನೆ ಅಪ್ಪಲೇ ಬೇಕು.
ಒಳ್ಳೆದಾಯಿದು
“ಕೊಂಬೆ ಹಿಡ್ಕೊಂಡು ನೇತರೂ ಮೂಲ ಮರವ ಮರವಲಾಗ ” ಒಳ್ಳೆ ವಿಷ್ಲೇಷಣೆ ಒಪ್ಪಣ್ಣ!. ಈ ವಾಕ್ಯ ಓದುವಾಗ ಒಂದು ನುಡಿಗಟ್ಟು “ಕೊಂಬೆ ಏರುವಾಗ ಬೇರಿನ ಮರವಲಾಗ ” [ಇದರ ಆನು ಬಯಲಿಲ್ಲಿ ಬರದ್ದಿತ್ತಿದ್ದೆ ] ನೆಂಪಾತು.ವರದಿ ಸರಿಯಾಗಿ ಬಯಿಂದು.
ಕಾರ್ಯಕ್ರಮದ ವರದಿ ಕೇಟು ತುಂಬ ಕೊಶಿ ಆತಿದ. ಶ್ರೀಸಂಸ್ಥಾನದ ಆಶೀರ್ವಚನದೊಟ್ಟಿಂಗೆ ಈ ಕಾರ್ಯಕ್ರಮ ಆಯೋಜಿಸಿದ, ನಡೆಶಿಕೊಟ್ಟ, ಭಾಗವಹ್ಸಿದ ಪ್ರತಿಯೊಬ್ಬಂಗೂ ಅಭಿನಂದನೆಗೊ.
ಇಂತ ಕಾರ್ಯಕ್ರಮ ಇನ್ನಷ್ಟು ದಿಕ್ಕೆ ಆಯೇಕು. ಇನ್ನಷ್ಟು ಜನ ಇದರ ಫಲಾನುಭವಿಗೊ ಆಯೆಕು, ನಮ್ಮ ನೆತ್ತರಿಲ್ಲಿಯೇ ಇಪ್ಪ ಸಂಸ್ಕೃತ ಕಂಗೊಳುಸೆಕು, ಇದು ಮುಂದಾಣ ಹಂತಕ್ಕೆ ನಾಂದಿಯಾಗಲಿ ಹೇಳ್ಸು ನಮ್ಮ ಸದಾಶಯ. ಹರೇ ರಾಮ