Oppanna.com

ಸಂಘದ ಗಣವೇಶ ಜನಗಣಕ್ಕೆ ಗುಣವೇಶವೂ ಆಗಿರ್ತು.. !

ಬರದೋರು :   ಒಪ್ಪಣ್ಣ    on   18/03/2016    2 ಒಪ್ಪಂಗೊ

ಒಂದು ಇತಿಹಾಸಂದಾಗಿ ಒಂದು ದೇಶ ಹೇದು ಆವುತ್ತು.
ಯೇವದೇ ಒಂದು ದೇಶವ ಪರಿಗಣನೆ ಮಾಡಿರೂ – ಅದಕ್ಕೆ ಪ್ರತ್ಯೇಕವಾದ ಇತಿಹಾಸ ಇರ್ತು. ಚೀನಾ, ಜಪಾನು, ಗ್ರೀಕು, ಇಂಗ್ಲೇಂಡು – ಹೀಂಗೆ, ಆಯಾ ದೇಶ ಅವರವರ ಇತಿಹಾಸಂದ ಗುರುತಿಸಲ್ಪಡ್ತು.
ನಮ್ಮ ದೇಶದ ಇತಿಹಾಸ ಇಪ್ಪದು ನಮ್ಮ ಧರ್ಮಲ್ಲಿ.
ಹಾಂಗಾಗಿ ಧರ್ಮವನ್ನೇ ನಂಬಿಗೊಂಡು ಆ ಸನಾತನೆತೆಲೇ ಭಾರತ ಕಟ್ಟೇಕು – ಹೇಳ್ತ ಉದ್ದೇಶಲ್ಲಿ ಹಲವೂ ಸಂಘಟನೆಗೊ ಅದರದ್ದೇ ಆದ ವೇಗಲ್ಲಿ ಕೆಲಸ ಮಾಡ್ತಾ ಇದ್ದು.
ಈ ಪ್ರಬೇಧ ದ ಸಂಘಟನೆಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ – ಅತ್ಯಂತ ಪ್ರಧಾನವಾದ್ದು.
~
ಸುಮಾರು ತೊಂಭತ್ತು ಒರಿಶ ಮೊದಲೇ, ನವರಾತ್ರಿಯ ವಿಜಯದಶಮಿಯ ದಿನ ನಾಗಪುರಲ್ಲಿ “ರಾಷ್ಟ್ರೀಯ ಸ್ವಯಂಸೇವಕ ಸಂಘ” – ಹೇಳ್ತ ಒಂದು ಸಂಘಟನೆ ಹುಟ್ಟಿತ್ತು. ಆ ಊರಿನ ಸಮಾಜಸೇವಕ ಡಾಗುಟ್ರು ಕೇಶವ ಬಲಿರಾಮ ಹೆಡಗೇವಾರು, ಇದರ ಸ್ಥಾಪಕರು. ಅವು ಸೊತಹ ಡಾಗುಟ್ರು ಆದ ಕಾರಣ “ಡಾಕ್ಟರ್ ಜಿ” – ಹೇದು ಇವರ ಒಪ್ಪ ಹೆಸರು.
ಆದರೆ ಇದು ಮಾಂತ್ರ ಸಮಸ್ಥವಾಗಿ ಮುಂದುವರಿತ್ತಾ ಇದ್ದು. ಎಂತಗೆ?
ಏಕೇದರೆ – ಇಲ್ಲಿ ವ್ಯಕ್ತಿ ಮುಖ್ಯ ಅಲ್ಲ, ತತ್ವ ಮುಖ್ಯ – ಹೇಳ್ತ ಉದ್ದೇಶ.
ಅದೇ ರೀತಿಲಿ, ಡಾಕ್ಟರ್ ಜೀ ಅವಕ್ಕೆ ಇನ್ನೂ ಸಾಮರ್ಥ್ಯ ಇಪ್ಪಗಳೇ ಅವರಿಂದ ಮತ್ತೆ ಒಬ್ಬರು ಯುವ ಸರಸಂಘ ಚಾಲಕರ ಹುಡ್ಕಿ, ಮಾಧವ ಸದಾಶಿವ ಹೊಲ್ವಲ್ಕರ್ – ಹೇಳ್ತ ಒಬ್ಬ ಸಂತನ ನಿಯಮಿಸಿದ್ದವಡ. ಇವ್ವೇ ಮುಂದೆ ಗುರೂಜಿ – ಹೇದು ಎಲ್ಲೋರ ಬಾಯಿಲಿ ಪ್ರಸಿದ್ಧ ಆದವು.
ಅಲ್ಲಿಂದ ಇಂದಿನ ವರೆಗೆ, ಈಗಾಣ ಸರಸಂಘ ಚಾಲಕರಾದ ಮೋಹನ್ಜೀ ಭಾಗವತ್ – ವರೆಗೆ, ಒಂದೇ ಒಗ್ಗಟ್ಟಿಲಿ, ಅದ್ವೈತ ತತ್ವಲ್ಲಿ ಆ ಸಂಘಟನೆ ನೆಡದು ಬತ್ತಾ ಇದ್ದು.
೯೦ ಒರಿಶದ ಸಮೆಯಲ್ಲಿ ಹಲವೂ ಸಂಘಟನೆಗೊ ಹುಟ್ಟಿದ್ದು. ಆದರೆ, ಅವೆಲ್ಲ ಹೇಳ ಹೆಸರಿಲ್ಲದ್ದೆ ಇಂದಿಂಗೆ ನಾಶ ಆಯಿದು. ಹೆಮ್ಮರದ ಹಾಂಗೆ ನಿಂದದು “ಸಂಘ” ಮಾಂತ್ರ!
ಇದಕ್ಕೆ ಕಾರಣ ಅಲ್ಲಿಪ್ಪ ಲಕ್ಷಾಂತರ ನಿಃಸ್ವಾರ್ಥ ಸೇವಕರು – ಸ್ವಯಂ ಸೇವಕರು.
~

೯೦ ಒರಿಶ ನಿಂಬಲೆ ಇನ್ನೂ ಒಂದು ಕಾರಣ ಇದ್ದು. ಅದೆಂತರ?
ಕಾಲಕ್ಕೆ ತಕ್ಕ ಹಾಂಗೆ ಮಾಡ್ತ ಆಂತರಿಕ ಬದಲಾವಣೆಗೊ.
ಅದರ ಬಗ್ಗೆಯೇ ಇಂದ್ರಾಣ ಶುದ್ದಿ.
~

ಸಂಘ ಎಷ್ಟೇ ಪ್ರಾಚೀನ ತತ್ವವ ಪ್ರತಿಬೋಧಿಸುತ್ತರೂ, ಜೆನಂಗಳ ಮನಸ್ಥಿತಿಯಂತೆ ಈಗಾಣದ್ದರ ಮೂಲಕವೇ ಅದರ ಪಡೆತ್ತು.
೯೦ ಒರಿಶದ ಹಿಂದೆ ಆರಂಭ ಅಪ್ಪಗಳೂ ಹಾಂಗೇ – ಅಂಬಗಾಣ ಸರಸಂಘ ಚಾಲಕರಾದ ಡಾಕ್ಟರ್ ಜಿ, ಅವು ಶುದ್ದ ಪೌರೋಹಿತ್ಯ ಮನೆತನದೋರು ಆದರೂ, ಸನಾತನ ಧರ್ಮ ರಕ್ಷಣೆಗೆ ಮಾಡಿದ್ದಾದರೂ – ಸಂಘದ ಗಣವೇಶ ಮಾಂತ್ರ – ಆ ಕಾಲಕ್ಕೆ ಆಧುನಿಕ ಹೇದು ಅನುಸುವ ಅಂಗಿ-ಚಡ್ಡಿ-ಕಪ್ಪುಟೊಪ್ಪಿ!
ಇದರ ಬದಲು ಪಂಚೆ, ಒಸ್ತ್ರ ಮಾಡ್ಳಾವುತಿತಿಲ್ಲೆಯೋ – ಹೇದು ಅಂಬಗ ಕೋಂಗಿ ಮಾಡ್ತೋರು ಅಂಬಗಳೂ ಇದ್ದಿಕ್ಕು. ಆದರೆ, ಧರ್ಮ ರಕ್ಷಣೆಗೆ, ರಾಷ್ಟ್ರ ರಕ್ಷಣೆಗೆ ಮೊದಲು ಬೇಕಾದ್ದು ಗಟ್ಟಿಮುಟ್ಟು, ಮತ್ತೆ ಅದಕ್ಕೆ ಸರಿಯಾದ ಗಟ್ಟಿ ವೇಶ.
ಸ್ವಯಂ ಸೇವಕರು ಹೇದರೆ ಎಲ್ಲ ಕೆಲಸಕೆ ತಯಾರು ಇಪ್ಪವ್ವು ಹೇದು ಅರ್ಥ.
ಸಂಘದ ಕೆಲಸಂಗಳ ನಾವು ನಮ್ಮ ದೇಶದ ಆಪತ್ಕಾಲಲ್ಲಿ ಕಂಡಿದು. ಆ ನಿಸ್ವಾರ್ಥ ಸೇವೆಗೆ ಅವರ ಅಭಿನಂದಿಸಿಯೂ ಇದ್ದು.
ಮೈಲಿ ಇಪ್ಪ ವಸ್ತ್ರದ ಬಗ್ಗೆ ಗಮನ ಕೊಡದ್ದೆ ಕೆಲಸಕ್ಕೆ ಮನಸ್ಸು ಹೋಯೆಕ್ಕು ಹಾಂಗಿಪ್ಪ ಒಸ್ತ್ರಸಂಹಿತೆ ಆಯೆಕ್ಕು ಹೇದು ವಿಚಾರ ಮಾಡಿದ್ದದು ಸಂಘದ ಹೆರಿಯೋರು. ಈಗಾಣ ಕಾಲಕ್ಕೆ ತಕ್ಕ ಹಾಂಗೆ ಇಪ್ಪ ಬದಲಾವಣೆಯನ್ನೂ ತಂದವು.
ಹಲವು ಭೌಗೋಳಿಕ ವೆತ್ಯಾಸಂಗ ಇಪ್ಪ ನಮ್ಮ ದೇಶಲ್ಲಿ ಎಲ್ಲ ಕಡೆಂಗೆ ಒಂಬುವಂತ ಒಸ್ತ್ರ ಆಗಲಿ ಹೇಳ್ತ ಸಂಗತಿ. – ಹೇದು ನಿರ್ಧಾರ ಮಾಡಿ ಆ ಗಣವೇಶ ತಯಾರು ಮಾಡಿದವು.

೧೯೨೫ ರಲ್ಲಿ ಆರಂಭ ಅಪ್ಪಗ – ಪೋಲೀಸು ಬಣ್ಣದ ಅಂಗಿ, ಅದೇ ಬಣ್ಣದ ಚಡ್ಡಿ, ಚರ್ಮದ ಬೆಳ್ಟು, ಮಿಳ್ಟ್ರಿ ಬೂಟ್ಸು, ಕಪ್ಪು ಟೊಪ್ಪಿ ಇದ್ದತ್ತು.
ಕ್ರಮೇಣ ೧೯೩೯ ರಲ್ಲಿ ಅಂಗಿಯ ಬಣ್ಣ ಬದಲಿತ್ತು, ಖಾಕಿಯ ಬದಲು ಬೆಳಿ ಅಂಗಿ ಬಂತು, ಇಂದಿನ ವರೆಗೂ ಶುಭ್ರತೆಯ ಸಂಕೇತ ಆದ ಬೆಳಿ ಬಣ್ಣವೇ ಇದ್ದು.
ಆರಂಭಲ್ಲಿ ಇದ್ದಿದ್ದ ಮರಾಟೀ ಪ್ರಾರ್ಥನೆಯ ಬದಲು ಈಗ ಇಪ್ಪ ಸಂಸ್ಕೃತ ಭಾಶೆಯ “ನಮಸ್ತೇ ಸದಾ ವತ್ಸಲೇ..” – ಪ್ರಾರ್ಥನೆ ಬಂತು.
ಮುಂದೆ ಚರ್ಮದ ಬೆಳ್ಟಿನ ಬದಲು ನೈಲಾನು ಬೆಳ್ಟು ಬಂತು, ಮಿಲಿಟ್ರಿ ಬೂಟ್ಸಿನ ಬದಲು ಕೇನ್ವಾಸು ಬೂಟ್ಸು ಬಂತು, ಮುಂದೆ ಇನ್ನೂ ಬದಲಿ – ಯೇವದೇ ಬೂಟ್ಸು ಅಕ್ಕು, ಕಪ್ಪು ಬಣ್ಣದ್ದು – ಹೇದು ಬದಲಾತು.
ಕಳುದ ವಾರ ನೆಡದ ಕಾರ್ಯಕಾರಣಿಲಿ ಅಂತೂ – ಖಾಕಿ ಚಡ್ಡಿ ಬೇಡ, ಅದರ ಬದಲಾಗಿ ಕಡುಕಂದು – ಕಾಪಿ – ಬಣ್ಣದ ಪೇಂಟು ಅಕ್ಕು – ಹೇದು ತೀರ್ಮಾನ ಆತಾಡ.

ಇದರೆಲ್ಲ ನೋಡಿರೆ ಎಂತ ಅನುಸುತ್ತು – ಹೇದರೆ..
ಒಂದು ಸಂಘಟನೆ ಹೇದರೆ ನಿಂದ ನೀರಾಗಿಪ್ಪಲಾಗ; ಬದಲಾವಣೆ ಸದಾ ಇರೆಕ್ಕು.
ಹೊಸ ಜೆನಂಗೊ ಬಪ್ಪಗ ಅವರೊಟ್ಟಿಂಗೆ ಅವರ ಇಷ್ಟಂಗಳೂ ಬತ್ತು..
ಹರಿವ ನೀರಿದ್ದರೇ ಹೊಳೆ ನೊಂಪಾಗಿಕ್ಕಷ್ಟೆ… ಒಳಹರಿವು ಸದಾ ಇರೆಕ್ಕಾರೆ ಸಂಘಟನೆಲಿ ನಿರಂತರತೆ ಇರೆಕ್ಕು – ಹೇಳ್ತದು ಮುಖ್ಯವಾಗಿ ನಾವು ಸಂಘಲ್ಲಿ ಕಾಮ್ಬಲಕ್ಕು.

ಜನಗಣಕ್ಕೆ ಗುಣ ಅಪ್ಪ ಹಾಂಗಿಪ್ಪದೇ ಗಣವೇಶ.
ಅಲ್ಲದೋ?
~
ರಾಷ್ಟ್ರೀಯ ಮಟ್ಟಲ್ಲಿ ಸಂಘವ “ಚಡ್ಡಿ ಚಡ್ಡಿ” – ಹೇದು ನೆಗೆ ಮಾಡ್ತೋರು ಇನ್ನು ಮುಂದೆ ಎಂತ ಹೇಳ್ತವೋ, ಛೇ – ಹೇದು ಗುಣಾಜೆಮಾಣಿ ಅವರನ್ನೇ ನೆಗೆಮಾಡಿದ°.
ಎಷ್ಟೇ ಪ್ರತಿಕೂಲಂಗೊ ಬಂದರೂ, ಬ್ಯಾನ್ ಬಂದರೂ, ಅಪಪ್ರಚಾರ ಬಂದರೂ, ವಿರೋಧ ಬಂದರೂ – ಸದಾ ಬೆಳವಣಿಗೆ ಹಂತಲ್ಲಿಪ್ಪ ಸಂಘ ಇತರ ಸಂಘಟನೆಗೊಕ್ಕೆ ಮಾದರಿ – ಹೇಳ್ತದು ನಿಃಸಂಶಯ.

~
ಒಂದೊಪ್ಪ: ಭಾರತದ ಜನಗಣಮನವೇ ಗಣವೇಶಲ್ಲಿ ಒಂದಾವುತ್ತು.

2 thoughts on “ಸಂಘದ ಗಣವೇಶ ಜನಗಣಕ್ಕೆ ಗುಣವೇಶವೂ ಆಗಿರ್ತು.. !

  1. (ಮಾಧವ ಸದಾಶಿವ ಹೊಲ್ವಲ್ಕರ್) ಅವರ ಹೆಸರು ಮಾಧವ ಸದಾಶಿವ ರಾವ್ ಗೋಲ್ವಲ್ಕರ್ .

  2. ನಮಸ್ತೇ,,, ಒಪ್ಪಣ್ಣ. ಒಳ್ಳೆ ಶುದ್ದಿ. ಗಣವೇಶಲ್ಲಿ ಬಂದು ಕೊಡೆಯಾಲಲ್ಲಿ ಮೆರವಣಿಗೆಲಿ ಭಾಗವಹಿಸಿಂಡಿದ್ದಿದ್ದು ನೆಂಪಾತು. ಸಂಘಶಕ್ತಿಲಿಪ್ಪ ಶಿಸ್ತು ಸ್ನೇಹಂಗಳ ಎಂದೂ ಮರವಲೆಡಿಯ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×