ಆಚಕರೆ ತರವಾಡುಮನೆಯ ಶಂಬಜ್ಜº ಈಗ ಇಲ್ಲೆ!
ಅವರ ಯೆಜಮಾಂತಿ ಕಾಂಬುಅಜ್ಜಿಯುದೇ ಇಲ್ಲೆ..!!
‘ಒಪ್ಪಣ್ಣ ಅತ್ತೆಕ್ಕಳ ಶುದ್ದಿ ಬಾರೀ ಜೋರು ಮಾತಾಡ್ತº’ ಹೇಳಿ ಅಜ್ಜಕಾನಬಾವ ಕೋಂಗಿ ಮಾಡ್ತºಲ್ದ, ಅದಕ್ಕೆ ಈ ವಾರ ಅಜ್ಜಿಯ ಬಗ್ಗೆ. 😉
ಶಂಬಜ್ಜನ ಶ್ರಮಕ್ಕೆ ಹೆಗಲಾಗಿ, ಧರ್ಮಕ್ಕೆ ಸಹಚಾರಿಣಿ ಆಗಿ ಜೀವನವ ಸೌಖ್ಯಲ್ಲಿ ಕಳದ ಆ ಕಾಂಬುಅಜ್ಜಿಯ ಶುದ್ದಿ ಈ ವಾರ ಮಾತಾಡುವೊº!
ಈ ಅಜ್ಜಿದು ನಿಜವಾಗಿ ಮೂಕಾಂಬಿಕಾ ಹೇಳಿ ಹೆಸರು. ಆದರೆ, ಸಣ್ಣ ಇಪ್ಪಗಳೇ ದಿನಿಗೆಳಿದ ಅಡ್ಡಹೆಸರು ‘ಕಾಂಬು’ ಜೀವಮಾನ ಇಡೀ ಗಟ್ಟಿ ನಿಂದಿದು.
ನಾಮಕರಣದ ದಿನ ಬಟ್ಟಮಾವº ಮಾಂತ್ರ ಅವರ ಪೂರ್ತಿ ಹೆಸರು ಹೇಳಿದ್ದಾಯಿಕ್ಕು ಆ ಮನೆಲಿ – ಮತ್ತೆ ಆರುದೇ ಆ ಹೆಸರು ಬಳಸಿದ್ದಿರವು.
ಎಲ್ಲೊರುದೇ ಪ್ರೀತಿಲಿ ಕಾಂಬು ಹೇಳಿಯೇ ಹೇಳಿಗೊಂಡು ಇದ್ದದು. ಮನೆಯವು, ಸಮಪ್ರಾಯದವು ಪೂರಾ ಹಾಂಗೇ ದಿನಿಗೆಳಿದ್ದಲ್ಲದ್ದೆ, ಮತ್ತಾಣವುದೇ ಅದೇ ಹೆಸರಿಂಗೆ ಸಂಬಂಧ ಸೇರುಸಿ ಹೇಳುಲೆ ಸುರು ಮಾಡಿದವು!
ಕಾಂಬು, ಕಾಂಬು ಅಕ್ಕ, ಕಾಂಬು ಅತ್ತೆ, ಕಾಂಬು ಚಿಕ್ಕಮ್ಮ.. ಮತ್ತೆ ಪುಳ್ಳಿಯಕ್ಕಳುದೇ ಅದೇ ನಮುನೆ ‘ಕಾಂಬು ಅಜ್ಜಿ’ ಹೇಳಿಯೇ ಹೇಳುದು!
ಕಾಂಬು ಅಜ್ಜಿಯ ಅಪ್ಪನ ಮನೆ ಓ ಮಾಯಿಪ್ಪಾಡಿ ಹೊಡೆಲಿ ಅಡ.
ಮದಲಿಂಗೆಲ್ಲ ಹಾಂಗೇ, ಆರೆಂಟು ಮೈಲಿಂಗೆ ಊರೇ ಬದಲಿತ್ತು. ಸಂಬಂಧ ನೆಡಕ್ಕೊಂಡು ಇದ್ದದೂ ಅಷ್ಟೇ ದೂರಲ್ಲಿ!
ಸುಸಂಸ್ಕೃತ ಮನೆಲಿ ಹುಟ್ಟಿದ ಕಾರಣ, ಮದುವೆ ಅಪ್ಪ ಮದಲೇ ಸುಮಾರು ಕೆಲಸಂಗೊ, ಹಾಡುಗೊ, ರಾಶಿ-ಸಂವತ್ಸರದ ಹೆಸರುಗೊ, ದೇವರನಾಮಂಗೊ, – ಎಲ್ಲ ಬಕ್ಕು!
ಅಪ್ಪಮ್ಮನ ಅಕೇರಿಯಾಣ ಕೂಸು ಆದ ಕಾರಣ ದೊಡ್ಡ ಅಕ್ಕಂದ್ರದ್ದು, ಅಣ್ಣಂದ್ರದ್ದು ಎಲ್ಲೊರದ್ದುದೇ ಪ್ರೀತಿ, ಕೊಂಗಾಟ! ಬೆಣ್ಣೆಯ ಹಾಂಗೆ ಬೆಳದಿತ್ತು!
ಒಂಬತ್ತೊರಿಶ ಅಪ್ಪನ್ನಾರವೂ ಆ ಮನೆಲಿ ಪುಟುಪುಟು ಓಡಾಡಿ ಎಲ್ಲೊರ ಪ್ರೀತಿಗಳಿಸಿತ್ತಿದ್ದು ಪುಟ್ಟು ಕೂಸು ಕಾಂಬು!
ಶಂಬಜ್ಜನ ಅಪ್ಪº, ಎಂಕಪ್ಪಜ್ಜº ಅದಾಗಲೇ ‘ಮಗಂಗೆ ಪ್ರಾಯ ಕಳ್ಕೊಂಡಿದ್ದು, ಬೇಗ ಮದುವೆ ಮಾಡೆಕ್ಕು’ ಹೇಳಿ ಅಂಬೆರ್ಪು ಮಾಡಿದವಡ.
ನೆರೆಕರೆಲಿ ವಿಚಾರುಸುವಗ ‘ಮಾಯಿಪ್ಪಾಡಿ ಹೊಡೆಲಿ ಒಂದು ಜಾತಕ ಇದ್ದೂ..’ ಹೇಳಿ ಗೊಂತಾತು. ಸಂಬಂದ ಕೂಡಿ ಬಂತು – ಮದುವೆ ಆಗಿಯೇ ಬಿಟ್ಟತ್ತು.
ಮದುವೆ ಅಪ್ಪಗ ಕಾಂಬುಅಜ್ಜಿಗೆ ಒಂಬತ್ತೊರಿಶ, ಶಂಬಜ್ಜಂಗೆ ಬರೇ ಹದಿಮೂರು!
(ಚೆ, ಮೊದಲೇ ಹುಟ್ಟೆಕ್ಕಾತು! ಹೇಳಿ ಆಚಕರೆಮಾಣಿ ಕೆಲವು ಸರ್ತಿ ಕೊದಿಬಿಡ್ತº!)
ಮದಲಿಂಗೆ ಹಾಂಗೆಯೇ, ಸಣ್ಣ ಪ್ರಾಯಲ್ಲಿ ಮದುವೆ ಮಾಡಿಬಿಡುದು. ಸಣ್ಣಪ್ರಾಯ ಹೇಳಿರೆ – ದೊಡ್ಡ ಆಯೇಕಾರೆ ಮದಲೇ!
ಮಕ್ಕೊಗೆ ಬುದ್ಧಿ ತಿಳುದು, ರಜ ಬಾಲ್ಯಸಂಸ್ಕಾರಂಗೊ ಬಂದ ಕೂಡ್ಳೆ ಮದುವೆಪ್ರಾಯವೇ.
ಅಷ್ಟು ಸಮಯ ಅಪ್ಪಮ್ಮನ ಪ್ರೀತಿಲಿ ಬೆಳದಿರ್ತು ಆ ಮಗಳು, ಅಲ್ಲಿಂದ ಮತ್ತೆ ಅತ್ತೆ-ಮಾವನ ಪ್ರೀತಿಯುದೇ!
ಆ ಮನೆಲಿ ಹುಟ್ಟಿದ ಮಗಳು ಹೇಂಗೂ ಇನ್ನೊಂದು ಮನಗೆ ಹೋಪದನ್ನೆ, ಬಂದ ಕೂಸೇ ಮನೆಮಗಳು, ಅಲ್ಲದೋ?
ಅಂತೂ ಅಮ್ಮನ ಮೊಟ್ಟೆಂದ (ಮಡಿಲಿಂದ) -ಶಂಬಜ್ಜನ ಅಮ್ಮ- ಸರಸುಅಜ್ಜಿಯ ಮೊಟ್ಟಗೆ ಬಂತು, ಕೊಂಗಾಟದ ಪುಟ್ಟು ಕೂಸು, ಒಂಬತ್ತೊರಿಶದ ಕಾಂಬು.
ಸುರು ಒಂದು ರಜ ಸಮಯ ಅಮ್ಮನ, ಅಪ್ಪನ ಮನೆಯ ಎಲ್ಲ ನೆಂಪಾಗಿ ಕೂಗುಲೆ ಬಂದುಗೊಂಡು ಇತ್ತು.
ಆ ಬೇಜಾರು ಕಳವಲೆ ಸರಸಜ್ಜಿ ನೆಗೆಮಾಡುಸಿ – ಕೊಂಗಾಟಲ್ಲಿ ಮಾತಾಡುಸುಗು. ಕ್ರಮೇಣ ಅಪ್ಪನಮನೆಯ ಕಳಕ್ಕೊಂಡ ಭಾವನೆ ದೂರ ಆವುತ್ತಾ ಬಂದು, ಅತ್ತೆಯೇ ‘ಅಮ್ಮ’ನ ಸ್ಥಾನ ತುಂಬುದು ಮನದಟ್ಟಾತು!
ರಜ್ಜವೇ ಸಮಯಲ್ಲಿ ಕಾಂಬು ಅದರ ಅತ್ತೆಗೆ ಹೊಂದಿಗೊಂಡು ಕೊಶಿಲಿ ಈ ಮನೆಯ ಕೆಲಸಕಾರ್ಯ ಕಲ್ತುಗೊಂಬಲೆ ಸುರುಮಾಡಿತ್ತು.
ಎಷ್ಟು ಹೊಂದಾಣಿಕೆ ಹೇಳಿತ್ತುಕಂಡ್ರೆ, ಸರಸಜ್ಜಿ ನೆರೆಕರೆ ಜೆಂಬ್ರಕ್ಕೆಲ್ಲ ಹೋಪಗ ಕಾಂಬು ಒಟ್ಟೀಂಗೆ ಇಪ್ಪದರ ಎಲ್ಲೊರುದೇ ‘ಅತ್ತೆಯ ಬೀಲ’ ಹೇಳಿ ನೆಗೆಮಾಡುಗು ಅಂಬಗಾಣ ದೊಡ್ಡವು! ಅಷ್ಟುದೇ ಹೊಂದಾಣಿಕೆ! ಮೂರುಹೊತ್ತುದೇ ಅತ್ತೆಯ ಒಟ್ಟಿಂಗೇ – ಉಂಬದು, ತಿಂಬದು, ಕೆಲಸಮಾಡುದು, ತೋಟಕ್ಕೆ ಹೋಪದು, ಹುಲ್ಲು ತಪ್ಪದು, ದನಗಳ ಚಾಕ್ರಿ ಮಾಡುದು, ಮತ್ತೆ ಮನುಗಿ ಒರಗುದು – ಎಲ್ಲವುದೇ ಒಟ್ಟಿಂಗೇ! ಒಟ್ಟಿಂಗೇ ಇದ್ದ ಕಾರಣ ಅತ್ತೆಗೆ ಸೊಸೆಯ ದಿನಿಗೆಳೆಕ್ಕಾಗಿಯೇ ಬಂದಿರ, ಒಂದು ವೇಳೆ ಬೇಕಾರೂ ಕಾಂಬು ಹೇಳಿಯೇ ದಿನಿಗೆಳಿಕ್ಕಷ್ಟೆ.
ಮನೆಯ ಮುದ್ದಿನ ಸೊಸೆ ಆಗಿ ಅತ್ತೆಯ ಪ್ರೀತಿಗಳಿಸಿತ್ತು ಈ ಕಾಂಬು ಅಜ್ಜಿ..!
ಕಾಂಬುವಿನ ಮಾವ ಎಂಕಪ್ಪಜ್ಜº- ತುಂಬಾ ಶ್ರಮ ಜೀವಿ, ಅಷ್ಟೇ ಮೃದುಹೃದಯಿ. ಆರಿಂಗೂ ಬೇನೆ ಮಾಡವು.
ಕಾಂಬುಗೆ ಅವರ ಸುರುವಿಂಗೆ ನೋಡುವಗ ಬಾರೀ ಜೋರಿನವರ ಹಾಂಗೆ ಕಂಡಿತ್ತಿದ್ದು.
ಆದರೆ ಮದುವೆ ಆಗಿ ಇವರ ಮನೆಗೆ ಬಂದ ಮತ್ತೆಯೇ ಸರಿಯಾಗಿ ಗೊಂತಾದ್ದು – ತುಂಬಾ ಸಮದಾನಿ ಹೇಳಿಗೊಂಡು!
ಕೆಲಸ ಮಾಡಿ ಬಚ್ಚಿ ಮನೆಗೆ ಬಂದ ಎಂಕಪ್ಪಜ್ಜಂಗೆ ಆಸರಪ್ಪಗ ಸರಸಜ್ಜಿಯ ಹತ್ರೆ ನೀರು ತಪ್ಪಲೆ ಕೇಳುದಿದ್ದನ್ನೆ, ಸರಸಜ್ಜಿ ಕಾಂಬುವಿನ ಕೈಲಿ ಒಂದು ಚೆಂಬು ನೀರು, ಗ್ಲಾಸಿಲಿ ಎರಡುತುಂಡು ಬೆಲ್ಲ – ಕೊಟ್ಟು ಕಳುಸಿಗೊಂಡು ಇತ್ತು.
ಎಂಕಪ್ಪಜ್ಜ ಬೆಲ್ಲತುಂಡು ಬಾಯಿಗೆ ಹಾಕಿ ಗ್ಲಾಸಿನ ಒಡ್ಡುಗು – ಕಾಂಬು ಅಜ್ಜಿ ನೀರೆರವಲೆ!
‘ನಡುಗುದು ಎಂತಕೆ ಕಾಂಬು?’ ಹೇಳಿ ಕೆಲವು ಸರ್ತಿ ಕೊಂಗಾಟಲ್ಲಿ ಕೇಳಿ ನೆಗೆಮಾಡುಗು ಎಂಕಪ್ಪಜ್ಜ, ಬೆಲ್ಲ ಅಗುಕ್ಕೊಂಡು!
ಕಾಂಬು ಸುರುಸುರುವಿಂಗೆ ಮಾತಾಡ್ಳೆ ಹೆದರುಗು, ಮತ್ತೆ ಅಭ್ಯಾಸ ಆತಲ್ದ, ಪ್ರತೀ ಸರ್ತಿ ಮಾವº ಎಂತಾರು ಮಾತಾಡುಸಿಗೊಂಡು, ಬಾಯಿಗೆ ಕೋಲು ಹಾಕಿಯೊಂಡು – ಇತ್ತಿದ್ದವು.
ಈ ಮಾವ – ಪೇಟಗೆ ಹೋಗಿದ್ದರೆ, ಬಪ್ಪಗ ‘ಪುಟ್ಟುಕೂಸು ಕಾಂಬುಗೆ ತಿಂಬಲೆ’ ಹೇಳಿಗೊಂಡು ಎಂತಾರು ತಕ್ಕು.
ಹೇಳದ್ರೂ ತಕ್ಕು – ತಂದು ಸರಸಜ್ಜಿಯ ಕೈಲಿ ಕಟ್ಟಿನ ಕೊಡುಗು, ಸರಸಜ್ಜಿ ಅದರಿಂದ ಒಂದೊಂದೇ ತೆಗದು ಕೊಡುಗು.
ಹೆದರಿಕೆ ಪೂರ ಹೋದಮತ್ತೆ, ಮಾವನ ಅಪ್ಪನಸ್ಥಾನಲ್ಲೇ ನೋಡಿ – ಪ್ರೀತಿಲಿ, ಗೌರವಲ್ಲಿ ಕಂಡುಗೊಂಡಿತ್ತು ಈ ಮುದ್ದು ಸೊಸೆ!
ಕಾಂಬು ಅಜ್ಜಿ ನೆಡುಪ್ರಾಯಕ್ಕೆ ಬಂದ ಮತ್ತೆ ಆ ಹೆದರಿಕೆ ದಿನಂಗಳ ಗ್ರೇಶಿ ಎಷ್ಟೋ ಸರ್ತಿ ಅದರಷ್ಟಕ್ಕೇ ನೆಗೆ ಮಾಡಿದ್ದು!
ಮನೆಮಗಳಾಗಿ ಎಲ್ಲೊರ ಹೊಂದುಸಿಗೊಂಡು ಕೊಂಡೋಪ ಈ ಸೊಸೆಯ ಕಂಡರೆ ತುಂಬಾ ಪ್ರೀತಿ, ಮಾವ ಎಂಕಪ್ಪಜ್ಜಂಗೆ.!
ಮದುಮ್ಮಾಳುಕೂಸು ಕಾಂಬು ಪ್ರೌಡಾವಸ್ಥೆಗೆ ಬಪ್ಪನಾರವೂ ಶಂಬಜ್ಜನ ಸಂಸರ್ಗಕ್ಕೆ ಬಯಿಂದಿಲ್ಲೆ.
ಅತ್ತೆಮಾವಂಗೆ ಸೊಸೆ ಆಗಿ, ಆ ಮನೆಯ ಒಂದು ಸದಸ್ಯೆ ಆಗಿದ್ದರೂ, ಶಂಬಜ್ಜಂಗೆ ಹೆಂಡತ್ತಿ ಆಗಿತ್ತಿಲ್ಲೆ!
ಹೆಂಡತ್ತಿ ಆಗಿ ಒಟ್ಟಿಂಗೇ ಜೀವನ ಮಾಡ್ಳೆ ಸುರು ಮಾಡಿದ ಮತ್ತೆಯೇ ಶಂಬಜ್ಜನ ಸರಿಯಾಗಿ ಅರ್ತ ಅಪ್ಪಲೆ ಸುರು ಆದ್ದು.
ಅಪ್ಪನ ಹಾಂಗೇ ಶ್ರಮಜೀವಿ ಶಂಬಜ್ಜಂದೇ. ಉದಿಯಪ್ಪಗ ಎದ್ದು ತೋಟಕ್ಕೆ ಹೋದರೆ, ಹತ್ತುಗಳಿಗೆಯ ಹೊತ್ತಿಂಗೆ ನೀರುಕುಡಿವಲೆ ಬಕ್ಕು – ಕಾಂಬು ಪ್ರೀತಿಲಿ ಬೆಲ್ಲ ನೀರು ಕೊಡುಗು,ನೀರೆರವಗ ಕೈ ನಡುಗ!
ಪುನಾ ತೋಟಕ್ಕೆ ಹೋದರೆ, ಉಂಬಲಪ್ಪಗ ಬಕ್ಕು. ಉಂಡಿಕ್ಕಿ ಒಂದೊರಕ್ಕು ಒರಗ್ಗು – ಕೋಳಿಒರಕ್ಕು. ಮತ್ತೆ ಪುನಾ ತೋಟಕ್ಕೆ ಹೋಕಿದಾ. ಪ್ರತಿ ಸರ್ತಿಯುದೇ ಮನೆಗೆ ಬಪ್ಪಗ ಕೆಲಸದ ಬಚ್ಚಲು ಅರ್ತು ಚೆಂದಕೆ ನೋಡಿಗೊಂಡು ಇತ್ತು ಈ ಕಾಂಬು!
ಶಂಬಜ್ಜ ಅಂತೂ ತೋಟಲ್ಲೇ ಇಕ್ಕು, ಹಡಿಲು ಬಿದ್ದ ಆ ತೋಟವ ಅಷ್ಟು ಪಲವತ್ತು ಮಾಡಿದ್ದೇ ಶಂಬಜ್ಜº ಇದಾ..!
ಶಂಬಜ್ಜ ತೋಟಕ್ಕೆ ಹೋಪಗ ಕಾಂಬುಅಜ್ಜಿ ಏನೂ ಸುಮ್ಮನೆ ಕೂರ, ಅದುದೇ ಏನಾರು ಕೆಲಸ ಮಾಡಿಗೊಂಡು ಇಕ್ಕು.
ಎಲ್ಲೊರು ಇಪ್ಪಗ ಶಂಬಜ್ಜº – ‘ಏ..’, ‘ಕೇಳಿತ್ತೋ..’,‘ಅಪ್ಪೋ..’, ‘ಎಲ್ಲಿದ್ದೇº..’, ‘ಇದಾº..’ ಹೇಳಿ ಎಲ್ಲ ಗಂಭೀರವಾಗಿ ಹೇಳಿರೂ, ಆರೂ ಇಲ್ಲದ್ದೆ ಇಬ್ರೇ ಇದ್ದರೆ ಕೊಂಗಾಟಲ್ಲಿ ‘ಕಾಂಬೂ…!!’ (KaaaambOO0óº°””) ಹೇಳುಗು!
ಕಾಂಬುಅಜ್ಜಿ ಎರಡೂ ಸರ್ತಿಯೂ ಅಷ್ಟೇ ಪ್ರೀತಿಲಿ ನೆಗೆಮಾಡಿಗೊಂಡು ಎದುರುಗೊಂಗು!
ಶಂಬಜ್ಜಂಗೆ, ಅವರ ಶ್ರಮಕ್ಕೆ ಹೆಗಲು ಕೊಡುವ ಕಾಂಬುವಿನ ಕಂಡ್ರೆ ತುಂಬಾ ಪ್ರೀತಿ..!
ಶಂಬಜ್ಜಂಗೆ ಮದುವೆ ಅಷ್ಟು ಬೇಗ ಆದರೂ, ಮಕ್ಕೊ ಅಪ್ಪಗ ತಡವಾಯಿದು.
ತಡವಾಗಿ ಮಕ್ಕೊ ಆದರೆ ದಂಪತಿಗೊ ಹೆಚ್ಚು ಅನ್ಯೋನ್ಯವಾಗಿ ಇಪ್ಪದಡ!
ಅಷ್ಟು ಸಮಯವುದೇ ಕುಟುಂಬಲ್ಲಿ ಇಬ್ರೇ ಇಪ್ಪದು – ಸುಖದುಃಖಕ್ಕೆ ಇವಿಬ್ರೇ ಕಾರಣೀಭೂತರಲ್ದಾ, ಹಾಂಗಾಗಿ!
(ಈ ಗಾದೆ ಈಗಾಣೋರಿಂಗೆ ಅನ್ವಯ ಆಗ, ಎಂತಕೇಳಿರೆ ಈಗ ಮಕ್ಕೊ ಅದಾಗಿ ಅಪ್ಪದಲ್ಲ, ಬೇಕಪ್ಪಗ ಮಾಡುದು! ಒಂದೊಂದರಿ ಡಾಗುಟ್ರುಬಾವ ಪರಂಚುಗು!)
ಸುಬ್ರಮಣ್ಯಕ್ಕೋ – ತಿರುಪತಿಗೋ ಎಲ್ಲ ಈ ವಿಚಾರಲ್ಲಿ ನಂಬಿಗೊಂಡವಡ, ಶಂಬಜ್ಜº.
ಒಂದು ಸುದಿನ ಪ್ರೀತಿಯ ಮಗº ಹುಟ್ಟಿದº! ಸುರುವಾಣದ್ದು ಮಾಣಿ ಆಯೆಕ್ಕು ಹೇಳಿ ಶಂಬಜ್ಜº ಹೇಳಿಗೊಂಡು ಇತ್ತಿದ್ದವು – ಹಾಂಗೇ ಆತುದೇ.
ತಿರುಪತಿಯ ನೆಂಪಿಂಗೂ ಆತು, ಅಜ್ಜನ ಹೆಸರೂ ಆತು ಹೇಳಿಗೊಂಡು ವೆಂಕಟ್ರಮಣ ಹೇಳಿ ಹೆಸರು ಮಡಗಿದವು.
ರಂಗº ರಂಗº ಹೇಳುದು ಎಲ್ಲೊರುದೇ – ಮನೆಯ ಎಲ್ಲೊರ ಕೊಂಗಾಟ ತೆಕ್ಕೊಂಡು ಗುಂಡುಗುಂಡಾಗಿ ಬೆಳದº, ಕಾಂಬು ಅಜ್ಜಿಯ ಮುದ್ದು ಮಗº!
ರಂಗಮಾವಂಗೆ ಐದೊರಿಶ ಆದಿಪ್ಪಗ ಮಾಲಚಿಕ್ಕಮ್ಮ ಹುಟ್ಟಿತ್ತು, ಅದಾ, ಪಂಜಕ್ಕೆ ಕೊಟ್ಟದು – ಅದರ.
ಇಬ್ರೂ ಪುಳ್ಯಕ್ಕೊ ಮನೆಯ ಮಾಡು ಹಾರುವ ಹಾಂಗೆ ಬೊಬ್ಬೆ – ಗಲಾಟೆ – ಆಟ – ಕೂಟ – ಊಟ ಮಾಡಿಗೊಂಡು ಪ್ರಾಯದ ಅಜ್ಜಜ್ಜಿಯಕ್ಕೊಗೂ, ನೆಡುಪ್ರಾಯದ ಅಪ್ಪಮ್ಮಂದ್ರಿಗೂ ಉಪದ್ರ, ಕುಶಿ ಕೊಟ್ಟೊಂಡು ಇತ್ತಿದ್ದವು.
ಕಾಂಬುಅಜ್ಜಿಯ ಮಕ್ಕೊಗೆ ಅಂತೂ ಅಮ್ಮ ಹೇಳಿರೆ ತುಂಬಾ ಪ್ರೀತಿ..!
ಈಗೀಗ ಸರಸಜ್ಜಿ ಹೇಂಗೂ ಮನೆಲೇ ಸುತ್ತ ಬಪ್ಪದಿದಾ, ಮಾವಂಗೂ ಏನೂ ತುಂಬಾ ಕಾರ್ಬಾರು ಎಡಿಯ, ಇಬ್ರಿಂಗೂ ಪ್ರಾಯ ಆತು!
ಅಡಿಗೆ ಕೋಣೆಯ ಸಮಸ್ತ ಜೆವಾಬ್ದಾರಿಯೂ ಕಾಂಬುವಿಂಗೇ ಬಂತು! ಹಾಂಗೆ, ಒಳಾಣ ಕೆಲಸ ಅಲ್ಲದ್ದೆ, ಹುಲ್ಲಿಂಗೆ ಹೋಪದೋ – ಹೊಳ್ಳಚ್ಚು (ಸೌದಿ) ತಪ್ಪಲೆ ಹೋಪದೋ, ಹೀಂಗೆಂತಾರು ಕೆಲಸ ಇದ್ದುಗೊಂಡು ಇತ್ತು!
ಎಲ್ಲವನ್ನುದೇ ಅಚ್ಚುಕಟ್ಟಾಗಿ ಮಾಡುಗು. ಎಲ್ಲೊರನ್ನುದೇ ಪ್ರೀತಿಲಿ ನೋಡಿಗೊಂಗು!
ಸರಸಜ್ಜಿಗೆ ತುಂಬ ಪ್ರಾಯ ಆತು, ದೇಹ ತುಂಬ ಜೀರ್ಣ ಆತು!
ಅಕೇರಿ ದಿನಂಗಳಲ್ಲಿ ಅವು ರಜಾ ಮಕ್ಕಳ ಹಾಂಗೆ ಮಾಡಿಗೊಂಡು ಇತ್ತಿದ್ದವಡ (- ಮುದಿಮರುಳು ಹೇಳ್ತವಡ ಅದಕ್ಕೆ, ಡಾಗುಟ್ರುಬಾವ ಹೇಳಿದ್ದು.)
ಅಷ್ಟಪ್ಪಗ ಕಾಂಬುಅಜ್ಜಿಯೇ ಆ ಅತ್ತೆಯ, ಪುಟ್ಟುಬಾಬೆಯ ನೋಡಿಗೊಂಡ ಹಾಂಗೆ – ಚೆಂದಕೆ ಮಾತಾಡುಸಿಗೊಂಡು ನೋಡಿದ್ದು.
‘ಅದ,ಅದೆಂತ ಮಾಡುದು ಅತ್ತೆ!’, ‘ಸುಮ್ಮನೆ ಮನಿಕ್ಕೊಳಿ ನಿಂಗೊ, ಹಾº!’ ಹೀಂಗೆ – ಮಕ್ಕೊಗೆ ಹೇಳಿದಹಾಂಗೆ ಕೊಂಗಾಟಲ್ಲಿ ಜೋರು ಮಾಡಿಗೊಂಡು!
ತಾನು ಸೊಸೆ ಆಗಿ ಬಂದ ಸಮೆಯಲ್ಲಿ ಸರಸಜ್ಜಿ ನೋಡಿಗೊಂಡ ಕಾಳಜಿ ನೆಂಪಾಗಿ, ತನ್ನ ಬಾಳಂತನಲ್ಲಿ ಈ ಅತ್ತೆ ತೋರಿದ ಆರೈಕೆ ನೆಂಪಾಗಿ, ಈಗ ತಾನು ಮಾಡ್ತಾ ಇಪ್ಪದು ಅದರೆದುರು ಎಂತದೂ ಇಲ್ಲೆ ಹೇಳಿ ಒಂದೊಂದರಿ ಕಾಂಬು ಅಜ್ಜಿಗೆ ದುಃಖ ಬಂದುಗೊಂಡು ಇತ್ತು!
ಅಂದು ಅಮ್ಮ ಆಗಿ ಕಂಡ ಅತ್ತೆಯ ಈಗ ಮಗಳಾಗಿ ನೋಡಿಗೊಂಬ ಸೌಭಾಗ್ಯ!
ಸರಸಜ್ಜಿಯ ಕೊನೆಗಾಲದ ಅಷ್ಟೂ ಚಾಕ್ರಿಯ ಈ ಸೊಸೆ ಕಾಂಬುವೇ ಮಾಡಿದ್ದು, ಹೆಮ್ಮೆಲಿ! ಪ್ರೀತಿಯ ಅತ್ತೆಯ ಚೆಂದಕೆ ಕಳುಸಿ ಕೊಟ್ಟತ್ತು ಈ ಸೊಸೆ.
ಅಮ್ಮನ ಬಿಟ್ಟ ಅಸಕ್ಕವ ಈ ಅತ್ತೆ ದೂರ ಮಾಡಿತ್ತಿದ್ದು, ಅತ್ತೆಯ ಬಿಟ್ಟ ಅಸಕ್ಕ ಹೇಂಗೆ ದೂರ ಹೋಕು?!
ಶಂಬಜ್ಜº, ವೆಂಕಪ್ಪಜ್ಜನಿಂದಲೂ ಹೆಚ್ಚಿಗೆ ಸರಸಜ್ಜಿಯ ಹಚ್ಚಿಗೊಂಡದು ಈ ಕಾಂಬುಅಜ್ಜಿಯೇ ಅಲ್ಲದಾ!
ಸರಸಜ್ಜಿ ದಿನಕಳುದಪ್ಪಗ ಕಾಂಬುಗೆ ಒಂದು ತಿಂಗಳು ಊಟವೇ ಸೇರಿದ್ದಿಲ್ಲೆ! ಅಟ್ಟುಂಬೊಳ ಹೋದರೆ ಅದೇ ನೆಂಪು!! ಅಲ್ಯಾಣ ಪ್ರತಿ ಶೆಕ್ಕರೆಡಬ್ಬಿಗಳಲ್ಲಿ ಸರಸಜ್ಜಿಯೇ ಕಂಡಹಾಂಗೆ ಆಗಿಯೊಂಡು ಇತ್ತು ಈ ಕಾಂಬುಗೆ!
ರಜ್ಜವೇ ಸಮಯಲ್ಲಿ ಎಂಕಪ್ಪಜ್ಜಂದೇ ಹೋದವು.
ಮೂಲ ಕಾರಣ ಅನಾರೋಗ್ಯ ಆದರುದೇ, ಸರಸಜ್ಜಿಯ ನಿಧನದ ಮತ್ತೆ ‘ಇನ್ನು ಆನೆಷ್ಟು ದಿನವೋ’ ಹೇಳಿ ಬೇಜಾರು ಮಾಡುಗಡ!
ದೈಹಿಕ, ಮಾನಸಿಕ ಎರಡೂ ಆರೋಗ್ಯ ಕೆಳಬಂದರೆ ಜೆನ ಎಷ್ಟುಸಮೆಯ ಒಳಿಗು ಬೇಕೇ! ಹಾಂಗೆ ಆರು ತಿಂಗಳಿನ ಅಂತರಲ್ಲಿ ವೆಂಕಪ್ಪಜ್ಜಂದೇ ತೀರಿಗೊಂಡವು.
ಪ್ರೀತಿಯ ಅತ್ತೆ ಮಾವನ ಕಳಕ್ಕೊಂಡ ಕಾಂಬುಅಜ್ಜಿ ಸೊರಗಿದ್ದು ಎದ್ದು ಕಂಡುಗೊಂಡು ಇತ್ತು!
~
ಮತ್ತಾಣ ಇತಿಹಾಸ ಹೆಚ್ಚು ಸ್ಪಷ್ಟ.
ಹೆರಿಯೋವು ಹಾಕಿದ ದಾರಿಲೇ ಈ ಕಾಂಬುಅಜ್ಜಿ ಹೆಜ್ಜೆಹಾಕಿತ್ತು.
ಶಂಬಜ್ಜº ತೋಟವ ಬೆಳಗುಸಿದವು, ಕಾಂಬು ಅಜ್ಜಿ ಮನೆ ಬೆಳಗುಸಿತ್ತು.
ಇಬ್ರೇ ಮಕ್ಕೊ, ಮದಲಾಣ ಕಾಲಕ್ಕೆ ಕಮ್ಮಿಯೇ. ಮಕ್ಕೊ ಹೇಳಿರೆ, ದೇವರು ಕೊಟ್ಟಹಾಂಗೆ ಅಪ್ಪದು, ಅಲ್ಲದೋ!
ಹೆಸರು ಹೇಳುಸುವ ಎರಡು ಮಕ್ಕೊ ದಾರಾಳ ಸಾಕು! ಹೇಳಿಗೊಂಡವು ಆ ಆದರ್ಶ ದಂಪತಿಗೊ!
ಮನೆ ಬೆಳಗಿಯೋಂಡೇ ಇತ್ತು.
ಮಕ್ಕೊ ದೊಡ್ಡ ಆದವು. ತೋಟಲ್ಲಿಪ್ಪ ಅಪ್ಪನಿಂದಲೂ, ಮನೆಲೇ ಇಪ್ಪ ಅಮ್ಮನ ಮೇಲೆ ಮಕ್ಕೊಗೆ ವಿಶೇಷ ಮಮತೆ.
ಕಾಲುನೀಡಿ ಕೂದುಗೊಂಡ ಕಾಂಬುಅಜ್ಜಿಯ ಕಂಡ್ರೆ ರಂಗಮಾವº ತಲೆಮಡಗಿ ಮನಿಕ್ಕೊಂಗು, ದೊಡ್ಡಾದ ಮೇಲುದೇ.
ಮಾಲಚಿಕ್ಕಮ್ಮಂದೇ ಹಾಂಗೆಯೇ, ಅಮ್ಮಂಗೆ ಅಂಟಿಗೊಂಡೇ ಬೆಳದ್ದು.
ಕಾಂಬುಅಜ್ಜಿಯ ನಗುಮುಖವೂ, ತಾಳ್ಮೆಯೂ ಇದಕ್ಕೆ ಕಾರಣ ಹೇಳಿ ಎಲ್ಲೊರುದೇ ಹೇಳುಗು.
ಶಂಬಜ್ಜº ಮಕ್ಕಳ ಮದುವೆ ಬಗ್ಗೆ ಯೋಚನೆ ಮಾಡಿದವು. ಕಾಂಬು ಅಜ್ಜಿಯುದೇ ಅದಕ್ಕೆ ಸೇರಿಗೊಂಡತ್ತು.
ರಂಗಮಾವಂಗೆ ಕೋಳಿಯೂರು ಸೀಮೆಂದಡ – ಕೂಡಿಬಂತು. ಪಾರ್ವತಿ ಹೇಳಿ ಹೆಸರು – ಮನೆಲಿ ಪಾತಿ ಹೇಳಿ ದಿನಿಗೆಳುದಡ.
ಗೌಜಿಲಿ ಜೆಂಬ್ರ ಕಳುತ್ತು – ಸೊಸೆಯ ಕುಶೀಲಿ ಒಳಮಾಡಿತ್ತು, ಈ ಕಾಂಬು ಅಜ್ಜಿ.
ಆ ಮನೆಗೆ ಬಪ್ಪಗ ಕಾಂಬು ಅಜ್ಜಿಗೆ ಆದ ಪ್ರಾಯದ ಎರಡುಪಾಲು ಆಗಿತ್ತು ಪಾತಿ ಅತ್ತೆಗೆ.
ಹಾಂಗಾಗಿ ಕಾಂಬುಅಜ್ಜಿಗೆ ಇದ್ದ ಹಾಂಗೆ ಬಾಲ್ಯಾವಸ್ಥೆಯ ತುಂಟತನ ಪಾತಿಅತ್ತೆಗೆ ಇಲ್ಲೆ, ಪ್ರೌಢಾವಸ್ಥೆಯ ಗಾಂಭೀರ್ಯ ಬಂದಾಗಿತ್ತು. ಅದರ ಹೇಂಗೆ ನೋಡಿಗೊಳೆಕ್ಕೋ – ಹಾಂಗೆ ಕಾಂಬುಅಜ್ಜಿ ಚೆಂದಕ್ಕೆಮಾತಾಡುಸಿಗೊಂಡು,
ಪಾತಿಅತ್ತೆಗೆ ಅಪ್ಪನಮನೆ ಬದಲಿದ್ದೇ ಗೊಂತಾಯಿದಿಲ್ಲೆ ಹೇಳುವಷ್ಟರ ಮಟ್ಟಿಂಗೆ ಚೆಂದಲ್ಲಿ ಈ ಕಾಂಬು ಅಜ್ಜಿ!
ನಾವು ಪ್ರೀತಿ ಕೊಟ್ರೇ ಅಲ್ಲದೋ – ನವಗೂ ಪ್ರೀತಿ ತೋರುಸುತ್ತದು, ಮದುಮ್ಮಾಳು ಪಾತಿಗೂ ಕಾಂಬು ಅತ್ತೆಯ ತುಂಬ ಹಿಡುಸಿ ಹೋತು!
ಕಾಂಬು ಅಜ್ಜಿ ಹೇಳಿರೆ, ಪಾತಿ ಅತ್ತೆಯ ಪ್ರೀತಿಯ ಅತ್ತೆ ಆತು!
ರಜ್ಜವೇ ಸಮೆಯಲ್ಲಿ ಮಾಲಚಿಕ್ಕಮ್ಮಂಗೆ ಸಂಬಂಧ ಕೂಡಿಬಂತು.
ಕಾಲ ರಜ ಮುಂದುವರುದ ಕಾರಣ ಹತ್ತೈವತ್ತು ಮೈಲು ದೂರದ – ಪಂಜಂದ ಸಂಬಂದ. ರಜ ದೂರ ಆತೋ ಹೇಳಿ ಕಾಂಬುಅಜ್ಜಿಗೆ ಒಂದರಿ ಬೇಜಾರಾದರೂ, ಹೆಚ್ಚಿರೆ ಮುಕ್ಕಾಲುಗಂಟೆ ದಾರಿ – ಬದಿಯೆಡ್ಕಕ್ಕೆ ನೆಡದು ಎತ್ತುವಗ ಪಂಜಕ್ಕೆ ವಾಹನಲ್ಲಿ ಎತ್ತುತ್ತು – ಹೇಳಿ ಶಂಬಜ್ಜº ಸಮಾದಾನ ಮಾಡಿದ ಮತ್ತೆ ಒಪ್ಪಿದವು. ಪಂಜದ ಚಿಕ್ಕಯ್ಯ ಮಾಲಚಿಕ್ಕಮ್ಮನ ಮದುವೆ ಗೌಜಿಲಿ ಆಗಿ ಕರಕ್ಕೊಂಡು ಹೋದವು.
ಅಲ್ಲಿಗೆ ಶಂಬಜ್ಜº-ಕಾಂಬುಅಜ್ಜಿಯ ಒಂದು ಹಂತದ ಜೆವಾಬ್ದಾರಿ ಮುಗಾತು!
ಪಂಜ ಚಿಕ್ಕಯ್ಯ ಬಂದರೂ ಹಾಂಗೇ, ತುಂಬಾ ಚೆಂದಕ್ಕೆ ಅಳಿಯನ ನೋಡಿಗೊಂಡು, ಬೇಕಾದ ಹಾಂಗೆ ಮಾತಾಡುಸಿಗೊಂಡು ತುಂಬ ಪ್ರೀತಿಲಿ ನೋಡಿಗೊಂಡಿದಲ್ದ, ಈ ಕಾಂಬು ಅಜ್ಜಿ.
ಹಾಂಗಾಗಿ ಅಳಿಯ ಪಂಜ ಚಿಕ್ಕಯ್ಯಂಗೂ ಕಾಂಬುಅಜ್ಜಿಯ ತುಂಬ ಪ್ರೀತಿ! ಮನೆಯ ಅಮ್ಮನ ಹಾಂಗೇ!
ಪಾತಿಅತ್ತೆ – ರಂಗಮಾವಂಗೆ ಮಗº ಹುಟ್ಟಿದº, ಶಾಮಕಿರಣ – ಶಾಂಬಾವ ಹೇಳುದು ಎಂಗೊ ಎಲ್ಲ, ಅಜ್ಜನ ಹೆಸರು ಮಡಗೆಕ್ಕು ಹೇಳಿಗೊಂಡು ಆ ಹೆಸರೋ ತೋರ್ತು!
ಪುಳ್ಳಿಮಾಣಿ ಬಂದ ಹೇಳಿ ಬಾರೀ ಕುಶಿ ಈ ಅಜ್ಜ-ಅಜ್ಜಿಗೆ. ಎಲ್ಲೋರತ್ರೂ ಹೇಳುಗು, ಅವನ ಶುದ್ದಿಯ. ಈ ಶಾಂಬಾವº ಸಣ್ಣ ಇಪ್ಪಗ ಮಹಾ ಬಿಂಗಿ ಅಡ, ಆಚಕರೆ ಮಾಣಿಯ ಹಾಂಗೆ. ಆರ ಮಾತೂ ಕೇಳº, ಆದರೆ ಅಜ್ಜಿ ಹೇಳಿರೆ ಆತು!
ಮುಂದೆ ಹುಟ್ಟಿದ ಮಗಳು – ಲಕ್ಷ್ಮಿಅತ್ತಿಗೆಗೂ ಹಾಂಗೆ, ಕಾಂಬುಅಜ್ಜಿಯೇ ಹೆಚ್ಚು. ಅದರ ಮೀಶುದು, ಪೋಚಕಾನ ಮಾಡುದು – ಎಲ್ಲವುದೇ ಅಜ್ಜಿಯೇ. ಶಂಬಜ್ಜನತ್ತರೆ ಹೋಪಲೆ ಗುರ್ತನೋಡುಗು, ಆದರೆ ಕಾಂಬುಅಜ್ಜಿ ಅಕ್ಕು ಅವಕ್ಕೆ!
ಮಕ್ಕಳ ತುಂಬ ಕೊಂಗಾಟಲ್ಲಿ ನೋಡುವ ಜೆನ ಅಲ್ಲದೋ!
ಹಾಂಗಾಗಿ ಈ ಪುಳ್ಯಕ್ಕೊಗುದೇ ಕಾಂಬುಅಜ್ಜಿಯ ಮೇಲೆ ತುಂಬಾ ಪ್ರೀತಿ.!
ಮಾಲ ಚಿಕ್ಕಮ್ಮನ ಮಕ್ಕಳನ್ನೂ ಹಾಂಗೇ, ಅದೇ ನಮುನೆ ಕೊಂಗಾಟಲ್ಲಿ ಕಂಡು, ಮುದ್ದಿಲಿ ಬೆಳೆಶಿದ್ದು. ಪಾತಿಅತ್ತೆ, ಮಾಲಚಿಕ್ಕಮ್ಮನ ಬಾಳಂತನಂದ ಹಿಡುದು ಮಕ್ಕೊ ದೊಡ್ಡ ಅಪ್ಪನಾರವೂ ಕಾಂಬುಅಜ್ಜಿದೇ ಆರೈಕೆ, ಉಪಚಾರ.
ಮನೆಮಗಳಕ್ಕಳ ಬಾಳಂತನ ಮಾಂತ್ರ ಅಲ್ಲದ್ದೇ, ಅಂಬಗಾಣ ಸುಮಾರು ಜೆನ ಹೆಮ್ಮಕ್ಕಳ ಬಾಳಂತನ ಅದೇ ಮನೆಲಿ ಆದ್ದು ಇದೇ ಕಾಂಬು ಅಜ್ಜಿಯ ದೊಡ್ಡ ಮನಸ್ಸಿಂದಾಗಿ. ಕೌಟುಂಬಿಕ ವೆವಸ್ಥೆಗೆ ಅತ್ಯಂತ ಬೆಲೆ ಕೊಟ್ಟು ಬಾಳಿದ ಈ ಕಾಂಬು ಅಜ್ಜಿ, ತನ್ನ ಕುಟುಂಬವ ಬೆಳಗುಸಿದ್ದು. ಹೆಂಡತ್ತಿ ಮಕ್ಕಳ ಸರಿಯಾಗಿ ನೋಡಿಗೊಳದ್ದ ಯೇವದಾರು ಕಂಡ್ರೆ ಸಮಾಬೈಗು. ಅಂಥಾ ಸ್ಥಾನ ಇತ್ತು ಈ ಅಜ್ಜಿಗೆ, ಪ್ರೀತಿಯ ರಾಜ್ಯಲ್ಲಿ!
ನೆಂಟ್ರವರ್ಗಲ್ಲಿ ಕಾಂಬುಅಜ್ಜಿಯ ಕಂಡ್ರೆ ಎಲ್ಲೊರಿಂಗೂ ಪ್ರೀತಿಯೇ!
ನೆರೆಕರೆಯ ಅಷ್ಟೂ ಮನೆಯವಕ್ಕುದೇ ಈ ಕಾಂಬುಅಜ್ಜಿ ಹೇಳಿರೆ ತನ್ನ ಮನೆಯ ಹೆರೀತಲೆ ಇದ್ದ ಹಾಂಗೇ. ಎಂತಾರು ಅನುಭವ ಕೇಳೆಕ್ಕಾರೆ, ಎಂತಾರು ಬೇಜಾರಾದರೆ ಎಲ್ಲ ಈ ಕಾಂಬುಅಜ್ಜಿಯ ಹತ್ತರೆ ಬಂದು ಮಾತಾಡುಗು. ಮನೆಯೋರು, ನಮ್ಮೋರು ಮಾಂತ್ರ ಅಲ್ಲ, ಕೆಲಸಕ್ಕೆ ಬತ್ತವರ ಮನೆಯ ಕಷ್ಟ ನಷ್ಟಂಗಳೂ ಹೇಳಿಯೊಂಗು. ಅವೆಲ್ಲ ಈ ಕಾಂಬು ಅಜ್ಜಿಯ ಮನೆಅಮ್ಮನ ಹಾಂಗೇ ನೋಡಿಗೊಂಗು!
ನೆರೆಕರೆಯ ಎಲ್ಲೊರಿಂಗೂ ಈ ಕಾಂಬುಅಜ್ಜಿ ಹೇಳಿರೆ ತುಂಬಾ ಪ್ರೀತಿ!
ಈಗ ಅವು ಇಲ್ಲೆ!
ತೀರಾ ಪ್ರಾಯ ಆಗಿ ತೀರಿಯೊಂಡು ಸುಮಾರು ಇಪ್ಪತ್ತೊರಿಶ ಕಳಾತು!
ಪ್ರಾಯಂದಲೇ ತೀರಿ ಹೋದ್ದು, ಸುಖಮರಣ – ಪುಣ್ಯವಂತರಿಂಗೆ ಹಾಂಗೇ ಅಲ್ಲದೋ! ಕಾಂಬು ಅಜ್ಜಿ ತೀರಿಯೊಂಡ ದಿನ, ಎಲ್ಲೊರುದೇ – ಅಷ್ಟು ಪ್ರಾಯ ಆದ ಶಂಬಜ್ಜನೂ ಕಣ್ಣೀರು ಹಾಕಿತ್ತಿದ್ದವು. ನೆಂಟ್ರು – ನೆರೆಯವು ಸುಮಾರು ಜೆನ ಸೇರಿ, ಚೆಂದಕ್ಕೆ ಕಳುಶಿಕೊಟ್ಟಿದವು. ಆ ಊರಿನ ಒಬ್ಬ ಹಿರೀಯ ವೆಗ್ತಿ ಹೋದ ‘ಖಾಲಿತನ’ ಬಂದು ಬಿಟ್ಟತ್ತು.
ಮತ್ತೆ ಒಂದೈದು ಒರಿಶ ಆದ ಸಮೆಯ, ಕಾಂಬು ಅಜ್ಜಿಯ ನಾಕನೇ ತಿತಿ – ಶಂಬಜ್ಜನೂ ತೀರಿಗೊಂಡವು. ತರವಾಡು ಮನೆಯ ಆ ತಲೆ ಇಲ್ಲೆ ಈಗ!
ಹತ್ತು-ಹದಿನೈದು ಒರಿಶ ಕಳಾತು ತೀರಿಗೊಂಡು.
~
ಪಾತಿ ಅತ್ತೆಗೆ ಇದೆಲ್ಲ ಕೂದಂಡು ನೆಂಪಾವುತ್ತು, ಅಂಬಗಂಬಗ. ಈಗೀಗ ಜೋರು.
ಈಗ ರಂಗಮಾವ ಪಾತಿಅತ್ತೆಯೇ ಮನೆಗೆ ಹಿರಿಯೋವು! ಕೊಂಗಾಟದ ಮಗಳ ಸುಳ್ಯಹೊಡೆಂಗೆ ಕೊಟ್ಟಿದು, ಸೌಖ್ಯಲ್ಲಿದ್ದು.
ಮಗº, ಶಾಂಬಾವಂಗೆ ಮದುವೆ ಆಯಿದು, ಐದೊರಿಶ ಆತು! ನಾಕೊರಿಶದ ಮಗನೂ ಇದ್ದº ಅವಕ್ಕೆ. ಪಾತಿಅತ್ತೆಯ ಪುಳ್ಳಿಮಾಣಿ ವಿನು!
ಶಾಂಬಾವಂಗೆ ಮದುವೆ ಆದ್ದು ಪೆರಿಯ ಹೊಡೆಂದ, ವಿದ್ಯº ಹೇಳಿ ಹೆಸರಡ.
ಬೆಳಿಬಣ್ಣ, ಹಿಡಿಸುಡಿಕಡ್ಡಿಯಷ್ಟು ಸಪುರ. ಬೆಶಿಲಿಂಗೆ ಹೋದರಲ್ಲದೋ – ಕಪ್ಪಪ್ಪದು!
ಕೆಲಸ ಏನು ಅರಡಿಯ. ಶರ್ರ ಸಪೂರ ಆದ ಕಾರಣ ಕೆಲಸ ಮಾಡ್ಳೆ ಎಡಿತ್ತಿಲ್ಲೆ, ಜಾಸ್ತಿ ತಿಂಬಲಿಲ್ಲೆ – ತೋರ ಅಪ್ಪಲಾಗ ಹೇಳಿಗೊಂಡು!
ಮತ್ತೆ ಕೆಲಸ ಅರಡಿವದೆಲ್ಲಿಗೆ ಬೇಕೆ, ತೋರ ಅಪ್ಪದೆಲ್ಲಿಗೆ ಬೇಕೇ!
ನೆಡುಪ್ರಾಯ ಕಳುದರೂ ಮನೆಕೆಲಸಂಗಳ ಪಾತಿಅತ್ತೆಯೇ ಮಾಡುದು.
ಇಡೀ ಮನೆಯವಕ್ಕೆ ಬೇಶಿಹಾಕುದು ಮಾಂತ್ರ ಅಲ್ಲದ್ದೆ, ಅಡಿಗೆಗೆ ಬೇಕಾದ ವೆವಸ್ಥೆ, ಬೆಶಿನೀರಿಂಗೆ ಕಿಚ್ಚು ಹಾಕುತ್ಸು, ಎಲ್ಲವುದೇ ಪಾತಿಅತ್ತೆಯೇ – ಈಗಳೂ!
ಅದರ ಸೊಸೆಯ ಅವಸ್ಥೆ ಕಂಡು, ಬೇಡಬೇಡ ಹೇಳಿರೂ ಕಾಂಬುಅಜ್ಜಿಯ ನೆಂಪಪ್ಪದು ಈ ಪಾತಿಅತ್ತೆಗೆ.
ಮನೆಲಿ ಅವಕ್ಕೆ ಇಬ್ರಿಂಗೆ – ಮಗ, ಸೊಸೆಗೆ – ಜಗಳ ಆವುತ್ತು – ಅಲ್ಲ ಈಗೀಗ ಅದು ಸಾಮಾನ್ಯ ಹೇಳುವೊ – ಜಗಳ ಆದ ದಿನ ಅಂತೂ ಕಾಂಬು ಅಜ್ಜಿ, ಶಂಬಜ್ಜನ ಅನ್ಯೋನ್ಯತೆಯ ನೋಡಿ ಕಣ್ಣಿಲಿ ನೀರೇ ಬಂದು ಬಿಡ್ತು!
ನಿತ್ಯ ಪೇಂಟಂಗಿ ಹಾಕಿ ಮನೆಲಿ ತಿರುಗುತ್ತ ಸೊಸೆಯ ಮೋರೆಲಿ – ಹಣೆ ಇಡೀ ಕುಂಕುಮ ಮಡಗಿಯೊಂಡು ಇದ ಅತ್ತೆಯ ಕಾಣ್ತು!
ಎರಡುದಿನಕ್ಕೊಂದರಿ ಕೊಡೆಯಾಲಕ್ಕೆ ಹೋಗಿ ಕಣ್ಣಿನ ಹುಬ್ಬು ಸರಿಮಾಡಿ, ಬೆಳಿ ಪಯಿಂಟು ಉದ್ದಿಗೊಂಡು ಬಪ್ಪ ಸೊಸೆಯ ನೋಡುವಗ – ಮೋರೆ ಇಡೀ ಅರುಶಿನ ಹೊಡಿ ಮೆತ್ತಿದ ಕಾಂಬು ಅಜ್ಜಿಯ ನೆಂಪಾವುತ್ತು!
ನೋಡಿಗೊಂಡು ಇದ್ದ ಹಾಂಗೇ ತರವಾಡುಮನೆ ಬದಲಾಯಿದು! ಚೆ!
ನಿತ್ಯ ಜಗಳ. ಶಾಂಬಾವº ಎಂತ ಮಾಡಿರೂ ಅದಕ್ಕೆ ಸರಿ ಅಪ್ಪಲಿಲ್ಲೆಡ.
‘ಎನ್ನ ಪ್ರೀತಿ ಮಾಡ್ತಿಲ್ಲೆ ನೀನು’ (- ನೀನು ಹೇಳಿಯೇ ಹೇಳುದು ಅದು, ಹಿಂದಾಣೋರ ಹಾಂಗೆ ನಿಂಗೊ ಹೇಳ್ತಿಲ್ಲೆ) – ಹೇಳಿ ಯಾವಗಳೂ ಅದರ ಪರಂಚಾಣ.
ಪಾಪ, ಅವº ಅಂಗುಡಿಂದ ಬಚ್ಚಿ ಬಪ್ಪದಲ್ಲದೋ! ( ಅವಂಗೆ ಕಾರಿಂಗೆ ಬೇಕಪ್ಪ ತುಂಡುಗಳ ಅಂಗುಡಿ ಇದಾ, ಕಾಸ್ರೋಡಿಲಿ! )
ಅದಕ್ಕೆ ರಜ ಬೇಜಾರ ಆದರೆ ರೂಮಿನ ಒಳದಿಕೆ ಹೋಗಿ ಕೂಬದು. ಮಗº – ವಿನುವಿನ ಹತ್ತರೂ ಮಾತಾಡ ಮತ್ತೆ! ಕಾಂಬು ಅಜ್ಜಿ ಮನಿಕ್ಕೊಂಡಿದ್ದ ಕೋಣೆಯೇ ಅದು!!
ಸಮಾದಾನ ಮಾಡುವೊº ಹೇಳಿ ಪಾತಿ ಅತ್ತೆ ಗ್ರೇಶುತ್ತು, ಆದರೆ ಕೈಗೆ ಸಿಕ್ಕೆಕ್ಕನ್ನೆ, ಚಿಲ್ಕ ಹಾಯ್ಕೊಂಡು ಒಳ ಕೂದರೆ ಮಾಡುದೆಂತರ!
‘ಹೊಂದಾಣಿಕೆ ಇಲ್ಲದ್ರೆ ಅಪ್ಪದಿಷ್ಟೇ ಇದಾ’ ಹೇಳಿ ರಂಗಮಾವº ಪಿಸುಮಾತಿಲಿ ಪಾತಿಅತ್ತೆಗೆ ಹೇಳುಗು, ಕರವಲೆ ಹೋದಲ್ಲಿ – ಹಟ್ಟಿ ಕರೆಲಿ!
~
ನಾಳ್ತು, ಆಯಿತ್ಯವಾರ ಪ್ರೇಮಿಗಳ ದಿನ ಅಡ.
ಈಗ ಎಲ್ಲ ಹಾಂಗೇ ಅಲ್ಲದೋ – ಪ್ರತಿ ಒಯಿವಾಟಿಂಗೂ ಒಂದೊಂದು ದಿನ ಹೇಳಿ ಮಡಗಿದ್ದವು.
ಪ್ರೀತಿ ಮಾಡ್ಳೆ ಒಂದು ದಿನ, ಸೊತಂತ್ರಕ್ಕೆ ಒಂದು ದಿನ, ಅಮ್ಮಂದ್ರಿಂಗೆ ಒಂದು ದಿನ, ಅಪ್ಪಂದ್ರಿಂಗೆ ಒಂದು ದಿನ, ಮಕ್ಕಳ ದಿನ – ಆ ದಿನ ಈ ದಿನ ಹೇಳಿ.
ಹಾಂಗೆ ಪೆಬ್ರವರಿ 14 ಹೇಳಿರೆ – ಹಳಬ್ಬರಿಂಗೆ ಒಂದೋ ಕುಂಬಸಂಕ್ರಮಣವೋ, ಅಲ್ಲದ್ರೆ ಶಿವರಾತ್ರಿಯೋ ಎಂತಾರು ಬಕ್ಕು.
ಆದರೆ ಈಗಾಣೋರಿಂಗೆ ಅದು ಪ್ರೇಮಿಗಳ ದಿನ ಅಡ! ಆರನ್ನಾರು ಪ್ರೀತಿ ಮಾಡ್ತರೆ ಆ ದಿನ ವಿಶೇಷವಾಗಿ ತೋರುಸೆಕ್ಕಡ.
‘ನಿಜವಾಗಿ ಪ್ರೀತಿ ಮಾಡ್ತರೆ ನೀನು ಎನ್ನ ಕೊಡೆಯಾಲಕ್ಕೆ ಕರಕ್ಕೊಂಡು ಹೋಗಿ ಸಿನೆಮ ನೋಡುಸೆಕ್ಕು’ – ಹೇಳಿ ನಿನ್ನೆ ರಂಪಾಟ ಮಾಡಿದ್ದಡ ಪಾತಿಅತ್ತೆಯ ಸೊಸೆ!
ಪಾಪ, ಹಾಂಗೆ ಶಾಂಬಾವº ಆ ದಿನ ಹೆಂಡತ್ತಿ ಕರಕ್ಕೊಂಡು ಕೊಡೆಯಾಲಕ್ಕೆ ಹೋವುತ್ತನಡ. ಮಗನನ್ನೂ ಒಟ್ಟಿಂಗೆ ಕಟ್ಟಿಗೊ ಹೇಳಿ ಪಾತಿ ಅತ್ತೆ ಹೇಳಿದ್ದು, ಎರಡು ಮೂರು ಸರ್ತಿ. ಇನ್ನು ಎಂತ ಮಾಡ್ತನೋ ಗೊಂತಿಲ್ಲೆ!
ಚೆ! ಇದರೆಲ್ಲ ಕಣ್ಣಾರೆ ಕಾಂಬಗ ಪಾತಿ ಅತ್ತೆಗೆ ಅನುಸುದು:
ನಾವು ಇನ್ನೊಬ್ಬನ ಪ್ರೀತಿ ಮಾಡಿರೆ ತಾನೇ, ನಮ್ಮನ್ನುದೇ ಇನ್ನೊಬ್ಬ ಪ್ರೀತಿ ಮಾಡುದು!
ಒರಿಶದ ಎಲ್ಲಾ ದಿನ ನಾಯಿ-ಪುಚ್ಚೆ ಮಾಡಿಕ್ಕಿ, ಒಂದು ದಿನ ‘ಪ್ರೇಮಿಗಳ ದಿನ’ ಹೇಳಿಗೊಂಡು ತಿರುಗುದರಿಂದ, ಕಾಂಬುಅಜ್ಜಿಯ ಕ್ರಮವೇ ಒಳ್ಳೆದಲ್ಲದೋ?
ನಿತ್ಯವೂ ಎಲ್ಲೊರನ್ನುದೇ ಪ್ರೀತಿಂದಲೇ ಕಂಡ ಆ ಅಜ್ಜಿಗೆ, ನಿತ್ಯವೂ ಎಲ್ಲೊರುದೇ ಪ್ರೀತಿ ತೋರುಸುವವೇ!
ಅಪ್ಪನ ಮನೆಯವು, ಈ ಮನೆಯ ಅತ್ತೆ-ಮಾವ, ಗೆಂಡ, ಮಗ, ಸೊಸೆ, ಪುಳ್ಯಕ್ಕೊ, ನೆಂಟ್ರು, ನೆರೆಕರೆ, – ಎಲ್ಲೊರ ಕೈಂದಲೂ ಪ್ರೀತಿ-ಗೌರವ ಪಾತ್ರರಾದ ಆ ಕಾಂಬು ಅಜ್ಜಿಯ ವೆಗ್ತಿತ್ವ ಒಳ್ಳೆದಲ್ಲದೋ?
364 ದಿನ ಮುಸುಡು ಬೀಗುಸಿಗೊಂಡು, ಒಂದು ದಿನ ಮಾಂತ್ರ ಕೆಂಪಂಗಿ ಹಾಯ್ಕೊಂಡು, ನೆಡಿರುಳೊರೆಂಗೆ ಹಸಿಮೈದದ ಪಿಜ್ಜ ನೆಕ್ಕಿಯೊಂಡು, ಪ್ರೇಮಿಗಳ ದಿನ ಹೇಳಿ ಲಾಗ ಹಾಕಿಯೊಂಡು, ಪ್ರೀತಿಮಾಡುವವರ ಒಟ್ಟಿಂಗೆ ತಿರುಗುದರಿಂದ,
ಕಾಂಬುಅಜ್ಜಿಯ ಹಾಂಗೆ ಎಲ್ಲೊರನ್ನುದೇ ಪ್ರೀತಿಲಿ ಕಂಡುಗೊಂಡು, ನಗುಮುಖಂದ ಬದುಕ್ಕಿರೆ ಒರಿಶಪೂರ್ತಿ, ಇಡೀ ಲೋಕವೇ ಪ್ರೀತಿ ಗೌರವ ತೋರುಸುತ್ತು.
ಅಂತವಕ್ಕೆ ನಿತ್ಯವೂ ‘ಪ್ರೇಮಿಗಳ’ ದಿನವೇ ಆಗದೋ? – ಹೇಳಿ ಪಾತಿ ಅತ್ತೆಗೆ ಅನುಸಿ ಹೋಪದು!
ಒಂದೊಪ್ಪ: ಸಿನೆಮಕ್ಕೆ ಮಗº ಬಂದರೆ ಪ್ರೈವಸಿ ಸಿಕ್ಕುತ್ತಿಲ್ಲೆ ಹೇಳಿ ಶಾಂಬಾವನತ್ರೆ ಅವನ ಹೆಂಡತ್ತಿ ಹೇಳಿದ್ದಡ! ಅಮ್ಮನ ಪ್ರೇಮ ಸಿಕ್ಕೆಕ್ಕಾದ ಮಗನೇ ಒಟ್ಟಿಂಗಿಪ್ಪಲಾಗದ್ರೆ, ‘ಪ್ರೇಮಿಗಳ ದಿನ’ ಆವುತ್ತೋ?
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
ಶಂಬಜ್ಜಂಗೂ ಅವರ ಯೆಜಮಾಂತಿ ಕಾಂಬುಅಜ್ಜಿಗೂದೇ ಇನ್ನೊಂದಾರಿ ‘ಹೆಪ್ಪಿ ವೆಲಂಟೈನ್’ ಹೇಳದ್ದೆ ಕಳಿಯ. 🙂
ಆನು ಇದರ ಈಗಳೇ ಓದಿದ್ದು.
ಕಳುದೊರಿಶ ಈ ವಾರದ ಶುದ್ದಿ..
ಪ್ರೇಮದ ಕಲ್ಪನೆಗೇ ಒಂದು ಶುದ್ದಿ… 🙂
1. Gurikkarre, Adu aane baraddu oppa Jorina Mani heluva hesarili….minchanche hakadde.. 🙁
2. Bingi koose, neenu talebeshi madeda..neenu heliddu sari heluvavu namma samajalli bekadashtu jena iddavu..aanude obba avaralli 🙂
hange heli gendana bahuvachanalli dinigolude tappu athava maryadege koratte heluva bhavaneya bitre olledu ansuttu. Avravara bhavakke bitre olledu idara. Entha helte..?? Adarottinge uttarakannadavu sari, uludavu tappu thava mattondu heludu illi ashtu sari kantille..Illi naavu yaranno hurt madudu, avara egokke pettu kottu matadudu ashtu sari kantille.. !!
Helidahange indu aanu todina karenge banditte, ninna hudkiondu…kandattillenne. Naale aachodila ippa mavina maradatra batte.. Sikkuttiya?? Ninnatra matadekku heli avuttu 🙂
3. Maani, neenu helidenne..nammalli prashnisuva guna iddu..adu bappalaga heli. Manushyange prashnisuva guna, alochisuva shakti ippa karanave ava ishu ettarakke beladdu..illadre avanoo uluda pranigala haange irtita. Naavu charchisi , nantara yavdudu sari tappu heludara nirnaya maduva. Agodo??
ತುಂಬಾ ಕುಶಿ ಆತು ಒಪ್ಪಣ್ಣ ಬಿಂಗಿಕೂಸಿನ ತರ್ಕವ ಬಾಯಿಲೇ ಹೇಳದ್ದೆ ಖಂಡಿಸಿದ್ದಕ್ಕೆ. ಥ್ಯಾಂಕ್ಸ್. ಸುಪೀರಿಯರ್ ಸ್ಥಿತಿಯ ಕಟ್ಟಿಕೊಂಡು ಕೂರಿ. ಒಂದಲ್ಲ ಒಂದು ದಿನ ಮುಳು ಅಕ್ಕು.ಹಾಂಗಾಗದ್ದಿರಲೀ ಹೇಳಿಯೇ ಎನ್ನ ಆಶಯ. ಕಾಂಬ. ಗುಡ್ ಬೈ.
ಈ ಶುದ್ದಿಯ ಬಗೆಗೆ ಆದ ಮಾತುಕತೆಲಿ ಕೆಲವು ಒಪ್ಪಂಗಳ ಇಲ್ಲಿಂದ ತೆಗದು ಮಡಗಿದ್ದು.
ಇಲ್ಲಿ ಆದ ಚರ್ಚೆಯ ಹಿಂದೆ ಇಪ್ಪ ಆಶಯ ಒಳ್ಳೆದೇ.
ಆದರೂ ಕೆಲವು ಒಪ್ಪಂಗಳಲ್ಲಿ ಶಬ್ದವಿತ್ಯಾಸ ಬಂದಕಾರಣ, ಹಾಂಗೇ, ಕೆಲವು ಒಪ್ಪಂಗಳಲ್ಲಿ ಮಿಂಚಂಚೆ ವಿಳಾಸ ಇಲ್ಲದ್ದ ಕಾರಣ – ಆ ‘ಅನಾಮಿಕ’ ನಮುನೆಯ ಒಪ್ಪಂಗಳ ಈ ಪುಟಂದ ತೆಗದ್ದು.
ಯೇವತ್ತುದೇ ಒಪ್ಪ ಕೊಟ್ಟದು ಕೊಶಿಯ ವಿಚಾರವೇ ಆದರೂ, ಆರು ಕೊಟ್ಟದು ಹೇಳಿ ಗೊಂತಾದರೆ ಇನ್ನೂ ಕೊಶಿ.
ಅಲ್ಲದೋ?
ಚರ್ಚೆ ಆಗಲಿ, ಆದರೆ ಜಗಳ ಬೇಡ.
ಒಪ್ಪ ಕೊಡುವವು ಮಿಂಚಂಚೆ ತುಂಬುಸಿ..
ನಮಸ್ಕಾರ..
~
ನಿಂಗಳ ಪ್ರೀತಿಯ,
ಗುರಿಕ್ಕಾರ°
ಸಣ್ಣ ಸಣ್ಣ ವಿಷಯಕ್ಕೆ ಜಗಳ ಮಾಡಡಿ.. ಒಪ್ಪಣ್ಣ ಅಷ್ಟು ಲಾಯ್ಕಕ್ಕೆ ಶುದ್ದಿ ಹೇಳ್ತ. ಅದರ ಕೇಳಿ ಖುಶಿ ಪಡಿ. ಅವಂಗೆ ಪ್ರೋತ್ಸಾಹ ಕೊಡಿ. ಅಥವಾ ಒಂದು ನಾಕು ತಮಾಷೆ ಮಾತಾಡಿ. ಅದರ ಬಿಟ್ಟು ನಮ್ಮ ನಮ್ಮಲ್ಲಿಯೇ ಜಗಳ ಮಾತ್ರ ಮಾಡಡಿ.
ಪ್ಲೀಸ್ !
ಎಲ್ಲ ಬೈಲಿನವರ ಪರವಾಗಿ ಇದೊಂದು ರಿಕ್ವೆಸ್ಟ್.
🙂
ನಿಂಗಳ ,
ಪೋಕಿರಿ ಮಾಣಿ
valentine love munde nijavada bere preethige bele ille eega!
enna kaalalli hinge priti madule heli dina ittille. evaglu priti madugu jena. oppanna sariyagi helidde ninu. iganavu nammatana va munduvareshigondu hoyekku.
ಎಲ್ಲರೂ ಪಾತಿ ಅತ್ತೆಯ ಸೊಸೆಯ ಹಾಂಗೆ ಇರ್ತವಿಲ್ಲೆ. ಹಾಂಗೆ ಆಗಾಣ ಕಾಲಲ್ಲೂ ಕಾಂಬು ಅಜ್ಜಿಯ ಹಾಂಗೆಯೂ ಇತ್ತಿದ್ದವಿಲ್ಲೆ.
ಈಗಾಣ ಕಾಲಲ್ಲಿ ಕೂಸುಗಳ ಸ್ಥಾನ ಚೇಂಜ್ ಆಯಿದು. ಹಾಂಗಾಗಿ ಎಲ್ಲಾ ಕಾಲಕ್ಕೂ ಪ್ರೀತಿ ಇರೆಕ್ಕು ಹೇಳಿ ಬಿಟ್ಟರೆ, ಕಾಂಬು ಅಜ್ಜಿಯ ಹಾಂಗೆ ಇಪ್ಪಲೆ ಅಷ್ಟು ಸುಲಭ ಇಲ್ಲೆ. ಮನೆ ಹೆಮ್ಮಕ್ಕೊ ಎಲ್ಲರ ಪ್ರೀತಿ ಗಳಿಶಿದ್ದಲ್ಲಿಗೆ ಎಲ್ಲವೂ ಅವ್ತು ಹೇಳುದು ಈಗಾಣ ಒಂದು ಬ್ರಮೆ ಹೇಳಿ ಕಾಣ್ತು.
ಅಂದಹಾಂಗೆ ಗೆಂಡನ ‘ನೀನು’ ‘ನಿಂಗೊ’ ಹೇಳಿ ದಿನಿಗೇಳುವಲ್ಲಿನ ವೆತ್ಯಾಸ ಎಂತಕೆ? ಹೇಳುಲೆಡಿಗೋ? ( ಜಾಗ್ರತೆ ಮಹಿಳಾವಾದಿಗೊ ಇದ್ದವು ! )
ಅಪ್ಪು ಜೋರಿನ ಮಾಣಿ. ಹಂಡ್ರೆಂಡ್ ಪರ್ಸಂಟ್ ನಿಜ.
ಗೆಂಡನ ಮರ್ಯಾದೆಲಿ ದಿನಿಗೇಳೆಕ್ಕಡ. ಅಜ್ಜಿಯಕ್ಕೊ, ಅತ್ತೆಯಕ್ಕೊ ಎಲ್ಲರದ್ದುದೇ ಇದೇ ಕಂಪ್ಲೇಟಿರ್ತು.
ಏಕವಚನ, ಬಹುವಚನಲ್ಲಿ ಪ್ರೀತಿ ವೆತ್ಯಾಸ ಆವ್ತಾ? ಗೆಂಡ-ಹೆಂಡತಿ ಮದ್ಯೆ ದಿನಿಗೇಳುದರಲ್ಲಿ ಮರ್ಯಾದೆ ಹೋವ್ತು, ಬತ್ತು ಹೇಳಿ ಆದರೆ ಅದೆಂತ ಸಂಸಾರವೋ? ವ್ಯವಹಾರವೋ? ಸಣ್ಣ ಸಣ್ಣದಕ್ಕೆಲ್ಲಾ ಮರ್ಯಾದೆಗೆ ತೊಂದರೆ ಆವ್ತರೆ ಅಂತಹ ಮರ್ಯಾದೆ ಇದ್ದೂ ಎಂತ ಸಾದಿಸುಲಿದ್ದು ಅಂಬಗ?
ಎನ್ನ ಮನೆಯಾ? ನಿನ್ನ ಮನೆಯ ತೋಡಕರೆಂದ ಮೇಲೆ ಗುಡ್ಡೆ ಇದ್ದಲ್ದಾ?ಅದರ ಬುಡಕ್ಕೆ ಇಪ್ಪದು.ಅಷ್ಟೂ ಗೊಂತಾಯಿದಿಲ್ಯಾ? ಮರತ್ತು ಹೋದ್ದಾ?
ಇವೆಲ್ಲವೂ ಅವರವರ ಭವಕ್ಕೆ ಅವರವರ ತಾಳಕ್ಕೆ ಇದ್ದ ಹಾಗೆ. ಗಂಡನಿಗೆ, ಹಿರಿಯರಿಗೆ ಬಹುವಚನದಲ್ಲಿ ಮಾತನಾಡಿಸುವುದು ಗೌರವ ಸೂಚಕ. ನೀವು ಕೊಡದಿದ್ದರೆ ಯಾವ ವ್ಯತ್ಯಸವೂ ಆಗುವುದಿಲ್ಲ. ಅದು ಅವರು ಅರ್ಥ ಮಾಡಿಕೊಂಡ ರೀತಿಯಲ್ಲಿ ಇರುತ್ತೆ. Give respect and take respect ನಾವು ಕೊಟ್ಟರೆ ತಾನೆ ನಮಗೆ ಸಿಗುವುದು. ಮಕ್ಕಳ ಎದುರು ನಮ್ಮ ಒಂದೋಂದು ಮಾತು ಗಣನೆಗೆ ಬರುತ್ತೆ.
ಈ ರೀತಿಯ ಯೋಚನೆಗಳು ನಮ್ಮಲ್ಲಿ ಬರುತ್ತಿರುವುದರಿಂದಲೇ ಈ ರೀತಿ ಪ್ರೇಮಿಗಳ ದಿನ ಇದ್ದರೆ ಏನಾಗುತ್ತೆ?, ಯಾಕೆ ಆಚರಣೆ ಮಾಡಬಾರದು?, ಯಾಕೆ ಬಹುವಚನ ಬೇಕು? ಹೀಗೆ…….. ಅನೇಕ ವಿರೋಧಗಳನ್ನ ವ್ಯಕ್ತಪಡಿಸುವಲ್ಲಿ ಸಮಯ ವ್ಯರ್ಥ ಮಾದುತ್ತಿದ್ದರೆ ಸಮಾಜ ಸರಿ ಆಗುವುದಾದರೂ ಹೇಗೆ.
ಹಾಂಗರೆ ನಿಂಗಳ ಪ್ರಕಾರ ಗೆಂಡಂಗೆ ಹಿರಿಯರ ಸ್ಥಾನದ ಪೊಸಿಷನ್. ಹೆಂಡತಿಗೆ ಬೇಡದೋ? ಹೆಂಡತಿಗೆ ನಿಂಗೊ ಹೇಳಿದ ಪ್ರಕಾರ ಗೀವ್ ರೆಸ್ಪೆಕ್ಟ್, ಟೇಕ್ ರೆಸ್ಪೆಕ್ಟ್ ಹೇಳಿ ಬೇಡದೋ? ಒಂದು ಕಣ್ಣಿಂಗೆ ಬೆಣ್ಣೆ ಇನ್ನೊಂದು ಕಣ್ಣಿಂಗೆ ಸುಣ್ನವಾ? ಪ್ರೇಮಿಗಳ ದಿನಕ್ಕೂ ಸಂಬೋಧನೆಗೂ ಅದೆಂತೆಹ ಸಮ್ಬಂಧ ಇದ್ದೋ ದೇವರೇ ಬಲ್ಲ!
ಇಲ್ಲೇ ನೀವು ಎಡವಿರೋದು, ಅವರಿಗೆ ಯಾಕೆ ನಂಗ್ಯಾಕೆ ಇಲ್ಲ, ಈ ರೀತಿ ಕೇಳುವುದು ನಾವು ಬೇರೆಯವರಿಂದ ನಿರಿಕ್ಷೆ ಮಾಡಿದಾಗ. ಅದು ನಮ್ಮ ಭಾರತೀಯ ಸಂಸ್ಕೃತಿ ಆಗುವುದಿಲ್ಲ, ನಮ್ಮ ಸಂಸ್ಕೃತಿಯಲ್ಲಿ ಪ್ರತಿಫಲಾಪೆಕ್ಷೆ ಕಲಿಸಿಕೊಟ್ಟಿಲ್ಲ. ಗಂಡನಿಗಿಂತ ಹೆಂಡತಿ ಚಿಕ್ಕವಳು ಅನ್ನುವ ಕಾರಣಕ್ಕಾಗಿ ಏಕವಚನ ಅಲ್ಲದೆ ಬೇರೆ ಯವ ಕಾರಣಕ್ಕೂ ಅಲ್ಲ. ಒಂದು ವೇಳೆ ನೀವು ಆ ರೀತಿ ಕರೆಯದಿದ್ದಲ್ಲಿ ನಿಮ್ಮ ಮಕ್ಕಳು ಏಕವಚನದಲ್ಲೆ ಕರಿಯುತ್ತಾರೆ. ಆಗ ಇದೇ BLOG ನಲ್ಲಿ ಮಗನೂ ನಿಮ್ಮ ಹಾಗೆ ಖಂಡಿತ ಪ್ರಶ್ನೆ ಮಾಡಿಯೇ ಮಡಬಹುದು. ಅಮ್ಮ ಅಪ್ಪಂಗೆ ನಾವು ಮಾತ್ರ ಯಾಕೆ ಬಹುವಚನದಲ್ಲಿ ಕರೀಬೇಕು? ಅಂತ ಅಲ್ವಾ?.
ಅದಕ್ಕೆ ಲೇಖ್ನದಲ್ಲಿ ಕಾಂಬು ಅಜ್ಜಿ ಗಂಡನಿಗೆ ಅಷ್ಟು ಗೌರವ ಕೊಟ್ಟ ಕಾರಣ ಅವಳಲ್ಲಿ ಆ ಪ್ರೀತಿ ಸಂಪಾದನೆ ಮಾಡಲು ಸಾಧ್ಯವಾಯಿತು. ಇಲ್ಲವಾದಲ್ಲಿ ಖಂಡಿತ ಸಾಧ್ಯ ಆಗುತ್ತಿರಲಿಲ್ಲ.
———————————————————————————————-
ಅಪ್ಪು ಜೋರಿನ ಮಾಣಿ. ಹಂಡ್ರೆಂಡ್ ಪರ್ಸಂಟ್ ನಿಜ.
ಗೆಂಡನ ಮರ್ಯಾದೆಲಿ ದಿನಿಗೇಳೆಕ್ಕಡ. ಅಜ್ಜಿಯಕ್ಕೊ, ಅತ್ತೆಯಕ್ಕೊ ಎಲ್ಲರದ್ದುದೇ ಇದೇ ಕಂಪ್ಲೇಟಿರ್ತು.
ಏಕವಚನ, ಬಹುವಚನಲ್ಲಿ ಪ್ರೀತಿ ವೆತ್ಯಾಸ ಆವ್ತಾ? ಗೆಂಡ-ಹೆಂಡತಿ ಮದ್ಯೆ ದಿನಿಗೇಳುದರಲ್ಲಿ ಮರ್ಯಾದೆ ಹೋವ್ತು, ಬತ್ತು ಹೇಳಿ ಆದರೆ ಅದೆಂತ ಸಂಸಾರವೋ? ವ್ಯವಹಾರವೋ? ಸಣ್ಣ ಸಣ್ಣದಕ್ಕೆಲ್ಲಾ ಮರ್ಯಾದೆಗೆ ತೊಂದರೆ ಆವ್ತರೆ ಅಂತಹ ಮರ್ಯಾದೆ ಇದ್ದೂ ಎಂತ ಸಾದಿಸುಲಿದ್ದು ಅಂಬಗ?
……………. ಈ ವಿಷಯ ಬಂದಿರುವುದರಿಂದ ಆ ರೀತಿ ಉತ್ತರಿಸಬೇಕಾಯಿತು
———————————————————————————————-
ಈಗಾಣ ಕಾಲಲ್ಲಿ ಕೂಸುಗಳ ಸ್ಥಾನ ಚೇಂಜ್ ಆಯಿದು.
—— ಈ ರೀತಿ ಆದ ಕರಣವೇ ಪ್ರಶ್ನೆ ಮಾದುವ ಸಂಸ್ಕೃತಿ ಹೆಚ್ಚಗುತ್ತಿರುವುದು. ದೇವರಿಗೆ ಕೈಚ್ಗ್ಗಿದೇ ನಮಸ್ಕಾರ ಮಾಡಬೇಕು. ಅದರ ಬದಲಾಗಿ ಸೆಲ್ಯೂಟ್ ಹೊದೆದರೆ ಹೇಗಗುತ್ತೆ???????????
ಏವುದಲ್ಲಿ ಸಣ್ಣದು ಹೆಂಡತಿ? ವಯಸ್ಸಿಲಿ.ಅಲ್ದೋ? ಅದು ಅಂದ್ರಾನ ಕಾಲ ಆದಿಕ್ಕು. ವಯಸ್ಸಿಲಿ ಕಡಮ್ಮೆ ಆದ ಮಾತ್ರಕ್ಕೆ ಸಂಭೋಧನೆಯೂ ಹಾಂಗೆ ಆಯೆಕ್ಕು ಹೇಳುವ ರೂಲ್ಸು ಇಲ್ಲೆ ಮಾಣಿ.
ಇದೆಲ್ಲಾ ನಿಂಗೊ ಗೆಂಡು ಮಕ್ಕೊ ಮಾಡಿಕೊಂಡ ನಿಯಮಂಗೊ. ಅಷ್ಟೇ. ಸಣ್ಣದಿರಿಂದಲೆ ಗೆಂಡ ಏಕವಚನಲ್ಲಿ ಮಾತಾಡ್ಸಿಕೊಂಡು ಇಪ್ಪ ಕಾರಣ ಮಕ್ಕೊಗೂ ಏಕವಚನವೇ ಬಂತೇ ವಿನಾ, ಅಮ್ಮನನ್ನೂ ಬಹುವಚನಲ್ಲೇ ದಿನಿಗೇಳಿಕೊಂಡಿರ್ತಿದ್ರೆ ಬಹುವಚನವೇ ಅಭ್ಯಾಸ ಆಗಿಬಿಡ್ತಿತ್ತು.
ಅಪ್ಪನ ನೀನು,ತಾನು ಹೇಳಿ ದಿನಿಗೇಳುವ ಕ್ರಮ ತಪ್ಪು ಹೇಳುದು ಇತ್ಲಾಗೆ ದಕ್ಷಣ ಕನ್ನಡದ ಬ್ರಾಮ್ಮರ ಅಭ್ಯಾಸ. ಅದೇ ಎಂಗಳ್ ಕಡೀಕೆ ಅಪ್ಪನನ್ನೂ ಏಕವಚ್ನದಲ್ಲೇ ಕರ್ಯೋದು ರೂಢಿ ಆಗೋಯ್ಜು. ಈ ಕಡೀಕೆ ಗಂಡ್ನನನ್ನ ಬಹುವಚನದಲ್ಲೇ ಕರೀಬೇಕಂತ ಭ್ರಮೆ ಹುಟ್ಸಿಕೊಂಡೀರಿ ಗಂಡಸ್ರು! ಅದರಿಂದ್ಲೇ ಪ್ರೀತಿ ಎಲ್ಲಾನೂ ಅನ್ನೋ ಚಾಪೆ ಹಾಸ್ಕೊಂಡೀರಿ. ಹ್ಹೆ.ಹ್ಹೀ.
ಅಷ್ಟಕ್ಕೂ ಮೊದಲಿನ ಕಾಲದಲ್ಲೇ ಮಾತಾಡೋದಾದ್ರೆ ಮಾತೃಪ್ರಧಾನ ವೆವಸ್ತೆ ಹೇಂಗಿತ್ತು ಕಾಣಿ.ಆಗ ಅರ್ತ ಅಗೋವ್ದು.
Point No. 1 – ಏವುದಲ್ಲಿ ಸಣ್ಣದು ಹೆಂಡತಿ? ವಯಸ್ಸಿಲಿ.ಅಲ್ದೋ? ಅದು ಅಂದ್ರಾನ ಕಾಲ ಆದಿಕ್ಕು. ವಯಸ್ಸಿಲಿ ಕಡಮ್ಮೆ ಆದ ಮಾತ್ರಕ್ಕೆ ಸಂಭೋಧನೆಯೂ ಹಾಂಗೆ ಆಯೆಕ್ಕು ಹೇಳುವ ರೂಲ್ಸು ಇಲ್ಲೆ ಮಾಣಿ.
………….. ಹಾಗಾದರೆ ಮುಂದೆ ಒಂದು ದಿನ ನಿಮ್ಮ ಮಕ್ಕಳು ಇದೇ ಪ್ರಶ್ನೆ ನಿಮಗೆ ಕೇಳಿದರೆ ನಿಮ್ಮ ಉತ್ತರ ಎನು?
Point No. 2 – ಗೌರವ ಕೊಡುವುದು ನಮಗೆ ಬಿಟ್ಟಿದ್ದು. ಕೊಟ್ಟರೆ ಗೌರವ ಸಿಕ್ಕುತ್ತೆ ಕೊಡದಿದ್ದರೆ ಯಾರು ತಾನೆ ಕೊಡುವ್ರು?
Point No. 3 – ಹಾಗೆ ನಮ್ಮ ಸಂಸ್ಕೃತಿಯಲ್ಲಿ ಯವುದನ್ನೂ Rules ಅಂತಾ ಮಾಡಿಲ್ಲ. ಒಂದಿಷ್ಟು ಪದ್ಧತಿಗಳು-ಸಂಪ್ರದಾಯಗಳನ್ನ ಹಿರಿಯರು ತಿಳಿಸಿದ್ದರೆ. ಅದನ್ನು ಸ್ವೀಕಾರ ಮಾಡೋದು ಬಿಡೊದು ನಮ್ಮ ನಮ್ಮ ಬುದ್ಧಿಗೆ ಬಿಟ್ಟಿದ್ದು. ಸ್ವೀಕಾರ ಮಾಡಿದರೆ ನಮ್ಮ ಪದ್ಧತಿಗಳು ಮುಂದಿನ ಪೀಳಿಗೆ ಗೊತ್ತಗುತ್ತದೆ. ಇಲ್ಲವಾದಲ್ಲಿ ಹೋಸ ಪದ್ಧತಿಯನ್ನ ನಿಮ್ಮ ಮಕ್ಕಳಿಗೆ ಕಲಿಸುತ್ತೀರಾ ಅಷ್ಟೆ. ಪ್ರಷ್ನೆ ಎಷ್ಟೂ ಮಾಡಲು ಸಾಧ್ಯ ಆದರೆ ಆ ಅನುಭವ ನಮಗೇ ಆದಾಗ ನಮ್ಮ ನಿಲುಮೆ ಎನಾಗಿರುತ್ತದೆ ಎಂದು ಯೋಚಿಸಿ ಪ್ರಶ್ನಿಸುವುದು ಸೂಕ್ತ ಎಂದು ನನ್ನ ನಂಬಿಕೆ.
ನಿಮ್ಮ ಮಾತು ಕೇಳಿದ್ರೆ ನೀವು ಯವ್ದೊ ಬೇರೆ ಲೋಕದವರು ಅನ್ನಿಸುತ್ತೆ, ನಿಮ್ಮ ಮನೆಯ ಪದ್ಧತಿಯನ್ನ ಜಗತ್ತಿಗೆ ಅನ್ವಯಿಸೋದದ್ರೆ ಹೇಗೆ ಕೂಸೆ? ಅದು ನಿಮ್ಮ ಮನೆಯಲ್ಲಿ ಮಾತ್ರ. ಅದನ್ನ ಜಗತ್ತು ಒಪ್ಪೊಲ್ಲ. ನಿಮ್ಮ ಹಾಗೆ ಉಲ್ಟಾ ಪ್ರಶ್ನೆ ಮಾಡೊ ಮಹಿಳಾ ಮಣಿಗಳಿರೋದ್ರಿಂದಲೇ ಒಪ್ಪಣ್ಣ ಹೇಳಿದ ರೀತಿಯ ಮನೆಗಳು ನೋಡಲು ಸಿಕ್ತಿಲ್ಲ.
ಏನೆ ಇರಲಿ, ನಿಮ್ಮ ಕ್ರಮ ನಿಮ್ಗೆ ಸಮಾಜದ ಕ್ರಮ ಸಮಜಕ್ಕೆ ಇರಲಿ. ಅದನ್ನು ಬದಲಾಯಿಸಲು ಸಾಧ್ಯ ಇಲ್ಲ.
ನೀವು ಈ ರೀತಿ ಏಷ್ತೇ ಪ್ರಶ್ನೆ ಕೇಳಿದ್ರು. ನಮ್ಮ ಪದ್ಧತಿಗಳು ತಪ್ಪು ಅಂತಾ ಯಾರು ಹೇಳೋದಿಲ್ಲ. ನಮ್ಮ ಹಿರಿಯರು ಸರಿಯದ ರೀತಿಯಲ್ಲೇ ಇವೆಲ್ಲವನ್ನು ಮಾಡಿದ್ದು, ಅದರ ಹಿಂದಿರುವ ಭ್ಹಾವನೆಯನ್ನು ತಿಳಿಯುವ ಪ್ರಯತ್ನ ಮಾಡಿದ್ರೆ ಗೊತ್ತಗುತ್ತೆ ಯಾಕೆ ಅಂತಾ.
ಇರ್ಲಿ ಈ ಚರ್ಚೆ ಇಲ್ಲಿಗೆ ಮುಗಿಸುವ ಅದು ಒಪ್ಪಣ್ಣನ BLOG ನಲ್ಲಿ ಯಾಕೆ. ಸಾಧ್ಯ ಆದ್ರೆ ಒಪ್ಪಣ್ಣ ವರ್ಷದಲ್ಲಿ ಒಮ್ಮೆ ಈ ರೀತಿ ಚರ್ಚೆ ಮಾಡಲೆಂದೆ ಒಂದು ಅವಕಾಶ ಕಲ್ಪಿಸಲಿ. ಅಲ್ಲಿ ಮಾತಡುವ.
ಒಳ್ಳೆದಾಗಲಿ.
ಹ್ಹ ಹ್ಹ … ಹೇಂಡತಿ ಗಂಡಂಕಿಂತ ಹಿರೀಕಳಾಗಿದ್ರೆ ಗಂಡ ಎಂತ ಅಂತ ಕರೀಲಕ್ಕು ಅಂಬಗ ? ಈ ರೀತಿ ಅಗೋದದ್ರೆ ಅದು ನಿಮ್ಮ ಮದ್ವೆ ಅಗಿರುತ್ತೆ ಖಂಡಿತ. ಯಾಕಂದ್ರೆ ಗಂಡನಿಂದ ಬಹುವಚನ ಹೇಳಿಸ್ಕೊಳ್ಳೋಕಾದ್ರು ಈ ರೀತಿ ಮದ್ವೆ ಮಾಡ್ಕೋತೀರ ಅಂತಾ ಅನ್ನಿಸುತ್ತೆ ನೀವು. ಹಾಗೆ ಅದಾಗ್ಲೂ ಸಹಿತ ಮನೆ ಯಜಮಾನ ಅನ್ನೋ ಪಟ್ಟ ಮಾತ್ರ ಅವರದ್ದೇ ತಾನೆ. ಅದೆಲ್ಲ ಸೂಕ್ಷ್ಮ ವಿಚಾರಗಳು ಬಿಂಗಿ ಕೂಸುಗಳಿಗೆಲ್ಲ ಅರ್ಥ ಆಗೋಲ್ಲಾ ಅನ್ನಿಸುತ್ತೆ ಅದಕ್ಕಗಿ ಈ ರೀತಿ ಪೊಳ್ಳು ಪ್ರಶ್ನೆಗಳನ್ನ ಹಾಕ್ತಿರ್ತಾರೆ.
ಇಷ್ಟು ಪುರತನ ತಲೆಮಾರಿನಿಂದ ಬಂದಿರೋದನ್ನೇ ಪ್ರಷ್ನಿಸುವ ಸಾಮರ್ಥ್ಯ ಇದ್ದರೆ ಮಾತ್ರ ಮಾತಡುವುದು ಉಚಿತ. ಕೇವಲ ಸುಮ್ಮನೇ ಮಾತಡುವುದು ಎಂದಾದರೆ ಅದಕ್ಕೆ ಅರ್ಥ ಇಲ್ಲ.
ಒಪ್ಪಣ್ಣ ಭಾವ ಸುದ್ದಿ ಪ್ರಸ್ತುತ ಸಮಯಲ್ಲಿ ಹೇಳೆಕ್ಕಾದ್ದೆ.. ಕಾಂಬು ಅಜ್ಜಿಯಂತವು ಈಗ ಸಿಕ್ಕದ್ರೂ ಪಾತಿ ಅತ್ತೆಯಂತವಾದ್ರೂ ಕಾಣಲಿ ಹೇಳಿ ಎನ್ನ ಆಶೆ.. ತರವಾಡು ಮನೆ ಅಜ್ಜ ಅಜ್ಜಿ, ಮಗ ಸೊಸೆ, ಪುಳ್ಯಕ್ಕ ಎಲ್ಲಾ ಸೇರಿ ಇಪ್ಪ ಜಾಗೆಯೇ ಆಗಿರಲಿ ಹೇಳುದು ಎನ್ನ ಆಶಯ.. ನೀನೆಂತ ಹೇಳ್ತೆ ಭಾವಾ…
oppanno,
Lekhana mana muttuva hangittu….
Ondu kutoohala tadavale edittille… Vidyakka & shyama bhavana bagge baravaga avara permission tekkondideyo illeyo heli??
ಏವುದೋ ಶುದ್ದಿ ಬರೆದು ಎನ್ನ ಹೆಸರು ಸೇರಿಸುವ ಈ ಒಪ್ಪಣ್ಣ ಪ್ರೇಮಿಗಳ ದಿನ ಎನ್ನ ಕೈ ಬಿಟ್ಟದು ಮಾತ್ರ ತುಂಬ ಬೇಜಾರಾತು. Ctrl+F ಒತ್ತಿ “ಗುಣಾಜೆ ಮಾಣಿ” ಹೇಳಿ ಕೊಟ್ಟರೂ ಎನ್ನ ಹೆಸರು ಈ ಸರ್ತಿ ಸಿಕ್ಕುತ್ತಿಲ್ಲೆ.
ಅಂತೆ, ಹೀಂಗಾದರೂ ಎನ್ನ ಹೆಸರು ಬರಲ್ಲಿ ಹೇಳಿ ಬರದ್ದಷ್ಟೆ. ಹೆಚ್ಚು ಬರವಲೆ ಪುರುಸೊತ್ತಿಲ್ಲೆ. ಪೇಪರಿಲ್ಲಿ ಪ್ರೇಮಿಗಳ ದಿನದ ಶುದ್ದಿ, ಮುತಾಲಿಕ್ ಗಲಾಟೆ ಎಂತಾತು ಹೇಳಿ ಓದೆಕ್ಕು.
ಒಂದೊಪ್ಪ: ಮುತಾಲಿಕಿನ ಮೋರೆಂದ ಮಸಿ ತೊಳೆದಪ್ಪಗ ಹೋತಡ. ಕಾಂಗ್ರೆಸ್ಸಿನವರ ಕಾರು ಹೊತ್ತಿದ್ದು ನೀರು ಹಾಕಿದ ಮತ್ತೆಯೂ ಕಪ್ಪೇ ಇತ್ತಡ.
ಗುಣಾಜೆ ಮಾಣಿಗೆ ಪುರುಸೋತ್ತು ಎಲ್ಲಿ ಸಿಕ್ಕುಗು.. ಅಲ್ಲಿ ಲವ್ ಜಿಹಾದ್.. ಇಲ್ಲಿ ಮುತಾಲಿಕ್.. ಇನ್ನು ದೇವೆಗೌಡ ಗೋಹತ್ಯೆ ನಿಷೇಧ ಕಾಯ್ದೆ ವಿರೋಧಿಸಿದ್ದರ ಬೆಚ್ಚ ಕೂಡ ಎಡೆಕ್ಕಿಲಿ.. ಹೀಂಗೆಲ್ಲ ಹೋಪಲೆ ಇಪ್ಪಗ ಅವ ಸಿಕ್ಕುದೆಲ್ಲಿ.. ರಜಾ ಕಂಟ್ರೋಲ್ ಇರಲಿ ಆತೋ.. ಗಡಿಬಿಡಿ ಮಾಡಿಕ್ಕೆಡ.. ಎಂಗೊಗೆ ಕೋರ್ಟಿಂಗೆ ಬಪ್ಪಲೆ ಕಷ್ಟ ಆವುತ್ತಿದ.. ಮೊದಲೆ ಅಡಕ್ಕೆಗೆ ರೇಟಿಲ್ಲೆ..
ಕಾಂಬು ಅಜ್ಜಿಯ ಎಲ್ಲೋರೊಟ್ಟಿಂಗಿದ್ದ ಪ್ರೀತಿ ಕಂಡು ಕಣ್ಣು ತುಂಬಿ ಬಂತು. ಮನಸ್ಸಿಂಗೆ ತಟ್ಟಿದ ಲೇಖನ. ಇತ್ತೀಚೆಗಿನ ಸೊಸೆಯ ವರ್ಣನೆ ಲಾಯಕಾಯಿದು, ನಿಜಕ್ಕೆ ಹತ್ರೆ ಇದ್ದು. ಇದು ಕತೆಯಲ್ಲ. ಜೀವನ!
ಅಮ್ಮನ ಪ್ರೇಮ ಸಿಕ್ಕೆಕ್ಕಾದ ಮಗನೇ ಒಟ್ಟಿಂಗಿಪ್ಪಲಾಗದ್ರೆ, ‘ಪ್ರೇಮಿಗಳ ದಿನ’ ಆವುತ್ತೋ? ಬಹಳ ಒಳ್ಳೆಯ ಒಪ್ಪ.
ಈ ಸರ್ತಿ ಒಪ್ಪಣ್ಣ ಶಿವರಾತ್ರಿ ಬಗೆ ಬರಗು ಹೇಳಿ ಗ್ರಹಿಸೆಂಡಿತ್ತಿದ್ದಿದ್ದೆ. ಪ್ರಸ್ತುತ ಬಹಳ ಚಿಂತನೆಯ ವಿಚಾರ ಪ್ರೇಮಿಗಳ ದಿನದ ಬಗ್ಗೆ ಬರದು ಪ್ರೇಮದ ಮಹತ್ವವ ವಿವರಿಸಿದ್ದ. ಅಭಿನಂದನೆಗೊ.
ಸತ್ಯೋದಯ
ಒಪ್ಪಣ್ಣ ಬರವ ಇಂತ ಕತಗೊ ಓದಲೆ ಖುಷಿ ಆವುತ್ತು. ಮೂರ್ನ್ನಾಲ್ಕು ತಲೆಮಾರಿನ ಈ ಕತೆ ತಲೆಮಾರಿಂದ ತಲೆಮಾರಿಂಗೆ ಆದ ಬದಲಾವಣಗಳ ಭಾರೀ ಲಾಯಿಕಿಲ್ಲಿ ವಿವರುಸುತ್ತು. ಮದಲೆ ಬ್ಲಾಗಿಲ್ಲಿ ಬರಕ್ಕೊಂಡಿದ್ದ ಈ ರೀತಿಯ ಬರವಣಿಗೆ ಹೆಚ್ಚು ಬರಲಿ, ಒಪ್ಪಣ್ಣ!
ಒಪ್ಪಣ್ಣ…. ಹಟ್ಸ್ ಆಫ್!! ಬರದ್ದು ಸೂಪರಪ್ಪ!! ನೈಜವಾಗಿ ಮೂಡಿ ಬಯಿಂದು. ಚೆ!! ಆಂಬು ಅಜ್ಜಿಯ ಸೊಸೆ ಆದ್ರು ಅಪ್ಪಲಾವ್ತಿತ್ತು.. ರಜ ಹಿಂದೆ ಹುಟ್ಟೆಕ್ಕಿತ್ತು 😉
oppanno…. shambhu ajja kaambu ajjiya kala, bhaari hinde hode…..
kushi aatu.anthaha preethi kelave managalalli kaambale sikkugasteya heli…
ajja- ajji, makko, soseyakko, pulliyakko heli ottu kutumba aadare bhari kushi.aldo?
eegana preetige beleye ille heli kaanthu….
mangaloorili yava cinema oppanno 3 idiots heli kaantu…adara branthu elloringu suru aidu…haangippa preethi shashvatava.?adella kshanika helikaanthu.adella bittu abbe appa hiriyara munde ellavannu heli mundarisali eegaana yuvakaru allada ? oppanno…premigana dina aadastu bega nillali allada…adara badalu grand mothers day..grand father’s day barali allada.?
good luck, hare rama.
ಒಪ್ಪಣ್ಣ, ಒಂದು ಮನೆ ಸರಿಯಾಗಿ ನಡೆಯೆಕ್ಕಾರೆ ಎರಡು ಹಿರಿಯರ ಆಶೀರ್ವಾದ ಯೇವಾಗಳು ಬೇಕು..
ಮನೆಯ, ಕುಟುಂಬದ, ಸಂಬಂಧದ ವಿಷಯಂಗಳ ಮುಂದಾಣವಕ್ಕೆ ಹೇಳುಲೆ..,
ಕ್ರಮ ಪ್ರಕಾರಲ್ಲಿ ವ್ರತಾಚರಣೆಗಳ ನಡೆಶುವ ಹಾಂಗೆ ಮಾಡುಲೆ,
ಕಿರಿಯರು ದಾರಿ ತಪ್ಪದ್ದ ಹಾಂಗೆ ನೋಡಿಗೊಮ್ಬಲೆ ಹಿರಿಯರು ಬೇಕು..
ಪುಳ್ಳಿ ಯಕ್ಕೊಗೆ ಅಪ್ಪ, ಅಮ್ಮ ಹೇಳಿದ್ದದರಂದಲೂ ಬೇಗ ಅಜ್ಜ,ಅಜ್ಜಿ ಹೇಳಿದರೆ ಕೇಳುತ್ತವು..
ಅವಕ್ಕೆ ಅಪ್ಪ,ಅಮ್ಮನ್ದರಿಂದ ಹೆಚ್ಚು ತಾಳ್ಮೆ ಅಲ್ಲದ,ಅವು ಲೋಕ ತಿಳುದವು ಅಲ್ಲದ..
ಹಾಂಗೆ ಲಾಯಕ ತಿಳಿಶಿ ಹೇಳುಗು..
ಈಗಾಣ ಮಕ್ಕೊಗೆ ಅಜ್ಜ,ಅಜ್ಜಿಯ ಜಾಗೆಯ T V ತೆಕ್ಕೊಂಡಿದು.. ಎಲ್ಲೋರಿಂಗು ಕಾಂಬಜ್ಜಿಯ ಹಾಂಗಿಪ್ಪವರ ಆಶೀರ್ವಾದ ಇರ್ತಿಲ್ಲೆನ್ನೆ…
ಮೂರು ಸಂಧ್ಯೆ ಅಪ್ಪಗ ಶ್ಲೋಕ, ನಕ್ಷತ್ರ ಹೇಳುವ ಹೊತ್ತಿಂಗೆ ಕಾರ್ಟೂನ್ ನೆಟ್ವರ್ಕ್, ಪೋಗೋ ಹೇಳಿ ಕೈಲಿ ರಿಮೋಟು ಹಿಡುಕ್ಕೊಂದು ಕೂರುಗು..
ಅಪ್ಪ,ಅಮ್ಮ ಹೇಳಿದರೆ ಇವರದ್ದು ಯಾವಾಗಲು ಮುಗಿತ್ತಿಲ್ಲೇ ಹೇಳಿ ಪರಂಚುತ್ತವು…
ನೋಡಿ ಅನುಕರಣೆ ಮಾಡ್ಲೆ ಮನೇಲಿ ಹಿರಿಯರು ಬೇಡದ?
ಅಮ್ಮನ ಸ್ವರ ಇಡೀ ದಿನ ಕೇಳಿ ಕೇಳಿ ಸಾಕಾಗಿರ್ತು .. ಅಪ್ಪ ಸಿಕ್ಕುತ್ತವಿಲ್ಲೆ ಇದಾ …
ಕೆಲಸ ಅಲ್ಲದಾ?
ಈಗಾಣ ಸಣ್ಣ ಸಣ್ಣ ಆವುತ್ತಾ ಇಪ್ಪ ಕುಟುಮ್ಬಂಗಳಲ್ಲಿ ಮುಂದಂಗೆ ನಡವ ದಾರಿ ತೋರುಸುಲೆ ಕಾಂಬಜ್ಜಿಯ ಹಾಂಗೆ ಇಪ್ಪವು, ಎಲ್ಲೋರ ಪ್ರೀತಿಲಿ ನೋಡುವವು, ಮನೆಯ ಚೊಕ್ಕಕ್ಕೆ ನಡೆಶುವವರ ಅಗತ್ಯ ಇದ್ದು..
ಹಿಂದಾಣ ಸಂಪ್ರದಾಯದ ಒಟ್ಟಿನ್ಗೆ ಈಗಾಣ ಹೆರಾಣ ಲೋಕ ಮಿಕ್ಸ್ ಆಗಿ ತ್ರಿಶಂಕುವಿಲಿ ಇಪ್ಪ ಈಗಾಣೋರ ಕಾಪಾಡ್ಲೆ ಯಾವ ದೇವರ ಅವತಾರ ಆಯೆಕ್ಕೋ
ಹೇಳಿ ಗೊಂತಿಲ್ಲೆ..
ಲೇಖನ ತುಂಬಾ ಚನ್ನಗಿ ಮೂಡಿಬಂದಿದೆ.
ಹಿಂದೆ ಎಲ್ಲವೂ ಚನ್ನಾಗಿತ್ತು, ಸ್ವಲ್ಪ ಸಮಯದ ಹಿಂದೆ ಸ್ವಲ್ಪ ಸರಿ ಇತ್ತು, ಆದರೆ ಈಗ ಯಾವದೂ ಸರಿ ಇಲ್ಲ. ಇದಕ್ಕೆಲ್ಲ ಏನು ಕಾರಣ ಎಂದು ಗಾಳ ಹಾಕುತ್ತಾ ಹೋದರೆ ನಮಗೆ ಉತ್ತರ ಸ್ಪಷ್ಟವಾಗಿ ಸಿಗುತ್ತದೆ.
ಕಾಂಬು ಅಜ್ಜಿ ಕಾಲದಲ್ಲಿ ಈ ಪಾಶ್ಚಿಮಾತ್ಯ ಅಂಧಾನುಕರಣೆ ಮನೆಯ ಒರಗೆ, ಮನದ ಒರಗೆ ತಲುಪಿರಲಿಲ್ಲ. ಹಾಗಾಗಿ ಈ ದಿನಗಳ ಕಲ್ಪನೇಯೇ ನಮ್ಮ ಜನರಲ್ಲಿ ಇರಲಿಲ್ಲ. ದಿನಗಳದಂತೆ ಸಿನಿಮಾ ರಂಗದಲ್ಲಿ Black and White ನಿಂದ Colour ಗೆ ಬದಲಾವಣೆ ಬಂದಿತೋ ಹಾಗೆ ನಮ್ಮ ಜನರಲ್ಲಿ ಹೊಸ ಹೊಸ ವಿಚಾರಗಳು ಬರಲು ಪ್ರಾರಂಭವಾದವು. ಅಲ್ಲಿ ಶುರುವಾಯ್ಥು ಈ ಅಂಧಾನುಕರಣೆಯ ಯಾತ್ರೆ.
ಇಂದು ನಾವು ಅಗ್ಗದ ಬದುಕಿಗೆ ಮಾರು ಹೋಗಿದ್ದೇವೆ. ಎಲ್ಲವೂ ಸುಲಭದಲ್ಲಿ ಆಗಬೇಕು. ಪರಿಶ್ರಮ ಹಾಕದೆ ಎಲ್ಲವೂ ಸಿಗಬೇಕು. ಈ ಲೇಖನದಲ್ಲಿ ಉಲ್ಲೇಖೇಸಿರುವ ಕಾಂಬು ಅಜ್ಜಿ ನಿತ್ಯವೂ ಪರಿಶ್ರಮದಿಂದ ಎಲ್ಲರ ಪ್ರೀತಿ ಸಂಪಾದನೆ ಮಾಡಿದಳು. ಆದರೆ ಇಂದಿನ ಜನರಲ್ಲಿ ಅದು ಇಲ್ಲದಾಗಿದೆ. ಅಂದರೆ ಪ್ರೀತಿ ಕೂಡಾ ಸುಲಭದಲ್ಲಿ ಸಿಗಬೇಕು. ಒಂದು ಸಂಗತಿ ಇಲ್ಲಿ ಉಲ್ಲೇಖ ಮಾಡುವುದು ಉಚಿತ. “ಯಾವುದು ಸುಲಭದಲ್ಲಿ ದಕ್ಕುತ್ತದೆಯೋ, ಅದು ಬಹು ಕಾಲ ಉಳಿಯುವುದಿಲ್ಲ”.
ನಾವು ಎಲ್ಲವನ್ನು ಸುಲಭದಲ್ಲಿ ಪಡೆಯಲು ಮುಂದಾಗುತ್ತೇವೆ. ಹೀಗಿರುವಾಗ ಪ್ರೀತಿ ಎನ್ನುವುದು ಸಹ ಒಂದು ದಿನದಲ್ಲಿ ಸಿಗಬೇಕು ಎಂದು ಒಂದುದಿನ ಪ್ರೀತಿ ಎಂಬ ಮಾಯವೀ ಜಿಂಕೆಯ ಹಿಂದೆ ನಮ್ಮ ಯುವ ಪೀಳಿಗೆ ಓಡುತ್ತಿದೆ. ಸೀತೆ ಈ ರೀತಿಯ ಮಾಯಾವೀ ಜಿಂಕೆಯ ಹಿಂದೆ ಹೋಗಿ ರಾಮಾಯಣದಲ್ಲಿ ದೊಡ್ಡ ಯುದ್ಧವೇ ನಡೆಯಿತಲ್ಲವೇ?. ಈ ಅಂಧಾನುಕರಣೆಯೂ ಹಾಗೆ ಜಿಂಕೆಯ ಥರಹದ್ದು. ನಮ್ಮನ್ನು ಹಿಂದೆ ಹಿಂದೆ ಓಡಿಸಿಕೊಂಡು ಹೋಗುತ್ತದೆ ನಾವು ಓಡಿದರೆ ಅದು ನಮಗೆ ಮಾರಕವಾಗಿ ಪರಿಣಮಿಸುತ್ತದೆ. ಇದನ್ನು ಅರಿತುಕೊಳ್ಳುವುದು. ಅತ್ಯವಶ್ಯಕವಾಗಿದೆ.
ಇವತ್ತಿನ “ಓಂದು ದಿನದ ಪ್ರೀತಿ” ಕೇವಲ ದೇಹ ಪ್ರೀತಿ. ಪ್ರೀತಿಯ ವ್ಯಾಪ್ತಿ ಬಹು ವಿಶಾಲವದ್ದು. ಅದು ಕಾಂಬು ಅಜ್ಜಿಯ ಪ್ರೀತಿಯ ಹಾಗೆ ನಿತ್ಯ ನಿರಂತರವಾದದ್ದು. ಹಾಗೆ ಎಲ್ಲರನ್ನೂ ಒಂದೇ ರೀತಿಯಲ್ಲಿ ಕಾಣುವ ನಿರ್ಮಲ ಪ್ರೀತಿ. ಆದರೆ ಈ ರೀತಿಯ ಕಾಂಬು ಅಜ್ಜಿ ಅಂತಹ ಜನರು ಕಾಣಲು ಸಿಗುವುದಿಲ್ಲ.
ನಾವು ಇನ್ನೋಬ್ಬರನ್ನು ಪ್ರೀತಿಸಿದರೆ ತಾನೆ ನಾವು ಅವರಿಂದ ಅದನ್ನೆ ಅಪೇಕ್ಷಿಸುವ ಹಾಕ್ಕು ಪಡೆಯುವುದು. ಏನನ್ನು ಕೊಡದೇ ಕೇವಲ ಪಡೆಯುತ್ತ ಹೋದಲ್ಲಿ ಸರಿ ಆಗುವುದಾದರೂ ಹೇಗೆ. ಅದಕ್ಕಾಗಿ ಒಂದು ದಿನ, ಎರಡು ದಿನ ಎನ್ನದೇ ಪ್ರತೀಯೊಂದು ಹಂತದಲ್ಲಿ ಕಾಂಬು ಅಜ್ಜಿಯ ರೀತಿಯಲ್ಲಿ ನಿರ್ಮಲತೆಯಿಂದ ಎಲ್ಲರನ್ನು ಪ್ರೀತಿಸಿದರೆ ಬದುಕಿಗೊಂದು ಸಾರ್ಥಕತೆ ಖಂಡಿತ ಸಿಗುತ್ತದೆ.
ಸಮಯಕ್ಕೆ ಸರಿಯಾಗಿ ಲೇಖನ ಪ್ರಕಟಗೊಂಡಿದೆ. ಸಮಾಜಕ್ಕೆ ಪೂರಕವಾದ ಈ ರೀತಿ ಜಾಗ್ರುತಿಯನ್ನುಂಟುಮಾಡುವ ಮತ್ತು ಚಿಂತನೆ ಹಚ್ಚುವ ಲೇಖನಗಳು ಒಪ್ಪಣ್ಣನ್ನಿಂದ ಪ್ರಕಟಗೊಳ್ಳಲಿ.