೨೦೧೪ ರಲ್ಲಿ ನಮ್ಮ ಮಠದ ಷಾಖಾಮಠವಾದ ಕೆಕ್ಕಾರಿಲಿ ಗುರುಗೊ ಚಾತುರ್ಮಾಸ್ಯ ವ್ರತ ಕೈಗೊಂಡವು.
ಜಯ ಸಂವತ್ಸರ ಆದ ಕಾರಣ ಜಯಚಾತುರ್ಮಾಸ್ಯ ಹೇಳ್ತ ಹೆಸರಿಲಿ ಗುರುತಿಸಿಗೊಂಡತ್ತು.
ಆ ಸರ್ತಿ ಇಡೀ ಶಿಷ್ಯವರ್ಗಕ್ಕೇ ಭಯ, ಭಕ್ತಿ, ಗಾಬರಿ, ಹೆದರಿಕೆ, ಬೇಜಾರ, ಕುಶಿ – ಎಲ್ಲವೂ ಇದ್ದತ್ತು ಹೇದರೆ ಒಪ್ಪಲೇ ಬೇಕು.
ಪ್ರತಿ ದಿನವೂ – ಇಂದೆಂತ ಆವುತ್ತೋ, ನಾಳೆ ಎಂತಾವುತ್ತೋ – ಹೇಳ್ತ ಚಿಂತೆ.
ಅಂತೂ – ಚಾತುರ್ಮಾಸ್ಯ ವ್ರತವ ಯಶಸ್ವಿಯಾಗಿ ಜಯಿಸಿ – ಜಯ ಚಾತುರ್ಮಾಸ್ಯ ಅಪ್ಪು ಹೇದು ತೋರ್ಸಿಕೊಟ್ಟವು ನಮ್ಮ ಗುರುಗೊ.
ಅದಿರಳಿ.
~
ಗುರುಗೊ ಪೀಠಕ್ಕೆ ಬಂದಪ್ಪದ್ದೇ- ಶ್ರೀ ಭಾರತೀ ಪ್ರಕಾಶನ – ಹೇದು ಒಂದು ಸಾಹಿತ್ಯ ಪ್ರಕಾಶನ ಮಾಡ್ತ ವಿಭಾಗವ ಸುರು ಮಾಡಿದವಡ.
ಜನರಲ್ಲಿ ಧರ್ಮಜಾಗೃತಿಗೆ, ಸಾಹಿತ್ಯ ಸಂಪದಭಿವೃದ್ಧಿಗೆ ಈ ಸಂಸ್ಥೆ.
ಗುರುಪೀಠದ ಸಾಹಿತ್ಯ ಪ್ರೋತ್ಸಾಹದ ನೇರ ಫಲವೇ ಈ ಭಾರತೀ ಪ್ರಕಾಶನ.
ಸದರಿ, ಈ ಪ್ರಕಾಶನ ವಿಭಾಗದ ಜೆವಾಬ್ದಾರಿ ಹೊತ್ತದು ನಮ್ಮ ವಿದ್ವಾನಣ್ಣನೇ.
ಚಾತುರ್ಮಾಸ್ಯಲ್ಲಿ ಎಲ್ಲ ವಿಭಾಗಕ್ಕೂ ಚುರುಕು ಇರ್ತು, ಅಷ್ಟಪ್ಪಗ ಈ ಸಾಹಿತ್ಯ ವಿಭಾಗಲ್ಲಿ ಎಂತರ ಹೊಸತ್ತು ಮಾಡ್ಳೆಡಿಗು – ಹೇಳ್ತ ಯೋಚನೆ ಅವಕ್ಕೆ ಬಂತಾಡ.
ಸಾಹಿತ್ಯ ಹೇದರೆ ಜಡ, ಬಲ್ಲಿದರಿಂಗೆ ಮಾಂತ್ರ ಇಪ್ಪದು – ಹೇಳ್ತ ಕಲ್ಪನೆ ನಮ್ಮ ಮಧ್ಯ ಇಪ್ಪಗಳೇ- ಒಂದು ವಿಶೇಷ ಕಾರ್ಯಕ್ಕೆ ಕೈ ಹಾಕಿತ್ತು ಭಾರತೀಪ್ರಕಾಶನ.
ಅದೆಂತರ ಹೇದರೆ – ಚಾತುರ್ಮಾಸ್ಯ ಇರ್ಸು ಅರುವತ್ತು ದಿನ. ಅದೂ ವಿಶೇಷವಾಗಿ ಗುರುಗಳ ಮಹತ್ತಿನ ಸಾರುವ ದೃಷ್ಟಿಲಿಯೇ ಮೂಲ ಉದ್ದೇಶವ “ಪೂರ್ಣತೆಯಿಂದ ಪರಿಪೂರ್ಣತೆಯ ಪ್ರಯಾಣ” ಹೇಳಿ ಮಾಡಿದ್ದಡ್ಡ.
ಅರುವತ್ತು “ಋಷಿಗಳ” ಹೆಸರು ಪಟ್ಟಿ ಮಾಡಿ, ಒಬ್ಬೊಬ್ಬರ ಬಗ್ಗೆಯೂ ಒಂದೊಂದು ಪುಸ್ತಕ ಬರದು, ಚಾತುರ್ಮಾಸ್ಯದ ಪ್ರತಿ ದಿನವೂ ಒಂದೊಂದು ಪುಸ್ತಕವ ಗುರುಗಳ ಅಮೃತ ಹಸ್ತಂದ ಬಿಡುಗಡೆ ಮಾಡ್ಸುದು!
ಗುರುಗೊಕ್ಕೆ ಪ್ರತಿ ದಿನ ಚಾತುರ್ಮಾಸ್ಯದ ವ್ರತ.
ಪ್ರತಿ ದಿನ ಪೀಠಕ್ಕೆ ಬಪ್ಪದು.
ಪ್ರತಿ ದಿನ ಮಂತ್ರಾಕ್ಷತೆ ಕೊಡುದು.
ಅದರೊಟ್ಟಿಂಗೆ – ಪ್ರತಿದಿನ ಒಂದು ಪುಸ್ತಕ ಬಿಡುಗಡೆ!
– ಚಾತುರ್ಮಾಸ್ಯದ ಅರುವತ್ತು ದಿನವೂ ಪುಸ್ತಕ ಪ್ರಕಾಶನ!
ಅಬ್ಬಾ!
~
ಎಷ್ಟೋ ಜೆನಕ್ಕೆ ಒಂದು ಪುಸ್ತಕ ಪ್ರಕಾಶನ ಮಾಡುಸ್ಸು ಹೇದರೆ ಜೀವಮಾನದ ಚಿಂತನೆ ಆಗಿರ್ತು.
ಎರಡು – ಮೂರು – ಹತ್ತು ಪುಸ್ತಕ ಪ್ರಕಶಿಸೆಕ್ಕಾರೆ ಸಾಕೋಸಾಕು ಆವುತು.
ಅದರಲ್ಲೂ – ಅರುವತ್ತು ಪುಸ್ತಕ ಒಂದೇ ಪೆಟ್ಟಿಂಗೆ ಮಾಡಿರೆ!
ಕಾರ್ಯ ಸಾಫಲ್ಯವೂ ಆತು!!
ಚಾತುರ್ಮಾಸ್ಯ ಕಳುದ ಮತ್ತೆ ತಿರುಗಿ ನೋಡುವಾಗ – ಅರುವತ್ತು ಲೇಖಕರು ಬರದ, ಅರುವತ್ತು ಋಶಿಗಳ ಕುರಿತಾದ ಅರುವತ್ತು ಪುಸ್ತಕ – ತಯಾರಾತು.
ಈ ಪುಸ್ತಕ ಅರುವತ್ತು ಒರಿಶದವಂಗೂ ಓದಲೆಡಿತ್ತು, ಹದಿನಾರು ಒರಿಶದವಂಗೂ ಓದಲೆಡಿತ್ತು.
ಸಣ್ಣ ಮಕ್ಕೊಗೆ ಸಂಸ್ಕಾರ ಕಲಿಶೆಕ್ಕು – ಹೇದು ಇದ್ದರೆ, ಈ ಪುಸ್ತಕದ ಕತೆ ಹೇಳಿರೆ ಸಾಕಕ್ಕು.
ನಮ್ಮ ಪೈಕಿ ಆರಿಂಗಾರು ಉಪನಯನ ಒಸಗೆ ಕೊಡೆಕ್ಕು ಹೇದು ಆದರೆ, ಈ ಪುಸ್ತಕ್ದ ಕಟ್ಟ ಕೊಟ್ರಕ್ಕು.
ನಮ್ಮ ಹತ್ತರಾಣ ಶಾಲೆಗೆ ಉಡುಗೊರೆ ಕೊಡೆಕ್ಕು ಹೇದರೆ – ಈ ಪುಸ್ತಕದ ಕಟ್ಟ ಕೊಟ್ರಾತು!
ಹಾಂಗಿಪ್ಪ ಅಮೋಘ ಸಂಗ್ರಹ ಅದು.
~
ಈಗ ಹೊಸ ಒರ್ತಮಾನ ಎಂತರ ಹೇದರೆ – ಆ ಅರುವತ್ತು ಪುಸ್ತಕದ ಸಾಧನೆಗೆ – ಲಿಮ್ಕಾ ದಾಖಲೆ -ಹೇದು ಪ್ರಶಸ್ತಿ ಕೊಟ್ಟಿದವಾಡ.
ದಿನವೂ ಒಂದು ಪುಸ್ತಕದ ಹಾಂಗೆ – ಒಂದೇ ಕಡೆಲಿ – ಅತಿಹೆಚ್ಚು ಪುಸ್ತಕ ಬಿಡುಗಡೆ ಮಾಡಿದ ಉದಾಹರಣೆ – ಬೇರೆ ಎಲ್ಲಿಯೂ ಇಲ್ಲೇಡ.
ಅದು ನಮ್ಮಲ್ಲಿ ಮಾಂತ್ರ!
~
ಹಲವು ಗೌಜಿಗಳ, ಹಲವು ವೈಶಿಷ್ಟ್ಯಗಳ, ಹಲವು ಹೊಸತನಗಳ, ಹಲವು ಅಪೂರ್ವಂಗಳ ಸಮ್ಮಿಲನ ನಮ್ಮ ಮಠ.
ಆ ಪಟ್ಟಿಗೆ ಈ ಲಿಮ್ಕಾ ರೆಕಾರ್ಡುದೇ ಸೇರಿದ್ದು ಸಾಹಿತ್ಯಾಸಕ್ತರಿಂಗೆ ತುಂಬಾ ಕೊಶಿ ಆಯಿದು.
~
ಒಂದೊಪ್ಪ: ಅರುವತ್ತು ಸಂವತ್ಸರಂಗಳಲ್ಲೂ ಅರುವತ್ತು ಪುಸ್ತಕದ ಕಂಪು ಶೋಭಿಸಲಿ.
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ದೂರದರ್ಶಿತ್ವ, ಅದರ ಕಾರ್ಯಕ್ಕೆ ತಪ್ಪಲೆ ಶ್ರಮವಹಿಸಿದ ಭಾರತೀ ಪ್ರಕಾಶನಕ್ಕೆ,ಇದಕ್ಕಾಗಿ ಶ್ರಮವಹಿಸಿ ಲೇಖನ ಒದಗಿಸಿದ ಲೇಖಕರಿಂಗೆ ಅಭಿನಂದನೆಗೊ, ಅನಂತಾನಂತ ಧನ್ಯವಾದಂಗೊ.
ನಮ್ಮ ಗುರುಪೀಠಕ್ಕೆ ಹೆರಾಣ ಪ್ರಪಂಚಂದ ಬಂದ ವಿಶೇಷ ಗೌರವ ನಮ್ಮ ಸಮಾಜಕ್ಕೆ ಒಂದು ಹೆಮ್ಮೆ.ಹರೇರಾಮ .
ಹರೇರಾಮ, ಪ್ರಯತ್ನಕ್ಕೆ ,ಸಾಧನಗೆ , ಸಾಫಲ್ಯತೆ ಇದ್ದು ಇದು ಒಳ್ಳೆಯ ಉದಾಹರಣೆ. ಲಿಮ್ಕಾ ಪ್ರಶಸ್ತಿ ನಮ್ಮ “ಗುರುಗ್ರಂಥಮಾಲಿಕೆ”ಗೆ ಬಂದ ದಿನ ವಾಟ್ಸಪ್ ಗ್ರೂಪಿಲ್ಲಿ ಓದಿಯಪ್ಪಗಳೇ ಬಹು ಸಂತೋಷಾತು . ಒಪ್ಪಣ್ಣ ಹೇಳಿದ್ದು ಸರಿ. ಹಿಂಗಿದ್ದ ಪುಸ್ತಕ ನಮ್ಮ ಮಕ್ಕೊಗೆ ಸಿಕ್ಕೆಕ್ಕು,ಅವು ಅದರ ಒದೆಕ್ಕು. ನಮ್ಮ ಮುಜುಂಗಾವು ಶಾಲಗೆ ತರ್ಸೆಕ್ಕಾತು .
ಲಿಮ್ಕಾ ದಾಖಲೆ ಸಿಕ್ಕಿದ್ದು ತುಂಬಾ ಕೊಶಿಯ ಸಂಗತಿ. ಉಡುಗೊರೆ ಕೊಡ್ತದು ಒಳ್ಳೆ ಐಡಿಯ. ಹರೇರಾಮ.
ಒಳ್ಳೇದು. ಅದು ಎಲ್ಲಿ ಸಿಕ್ಕುತ್ತು?
“ನಮ್ಮ ಪೈಕಿ ಆರಿಂಗಾರು ಉಪನಯನ ಒಸಗೆ ಕೊಡೆಕ್ಕು ಹೇದು ಆದರೆ, ಈ ಪುಸ್ತಕ್ದ ಕಟ್ಟ ಕೊಟ್ರಕ್ಕು.
ನಮ್ಮ ಹತ್ತರಾಣ ಶಾಲೆಗೆ ಉಡುಗೊರೆ ಕೊಡೆಕ್ಕು ಹೇದರೆ – ಈ ಪುಸ್ತಕದ ಕಟ್ಟ ಕೊಟ್ರಾತು!
ಹಾಂಗಿಪ್ಪ ಅಮೋಘ ಸಂಗ್ರಹ ಅದು.”
ನಿಜ, ಇದರಲ್ಲಿ ಒಂದು ಮಹೇಶಣ್ಣನ್ನೂ ಬರದ್ದ..ಒಳ್ಳೆಯ ಕಲ್ಪನೆ, ಅರುವತ್ತು ದಿನಲ್ಲಿ ಅರುವತ್ತು ಪುಸ್ತಕ..ದಾಖ್ಲೆಯ ಸಾಧನೆಯೂ ಆತು