Oppanna.com

ತುಪ್ಪ ಕೊಟ್ಟು ಕುಪ್ಪಿ ಕೇಳ್ತ ಹೆಮ್ಮಕ್ಕಳ ಶುದ್ದಿ

ಬರದೋರು :   ಒಪ್ಪಣ್ಣ    on   02/10/2009    15 ಒಪ್ಪಂಗೊ

ಒಪ್ಪಣ್ಣ ಎಂತ ಹೆಮ್ಮಕ್ಕಳ ಶುದ್ದಿ ಬರವಲೆ ಶುರುಮಾಡಿದ್ದು ಹೇಳಿ ಗ್ರೇಶಿಕ್ಕೆಡಿ ಆತೋ!
ನಮ್ಮೋರಲ್ಲಿ ಮನೆಯ ಹೆರಾಣ ಕಾರ್ಬಾರು ಹೆಚ್ಚಿಂದುದೇ ಗೆಂಡುಮಕ್ಕೊ ಮಾಡಿರುದೇ, ಒಳಾಣ ಕೆಲಸ, ಮೇಲುಸ್ತುವಾರಿ, ಕೆಲಸ ಎಲ್ಲ ಹೆಮ್ಮಕ್ಕಳದ್ದೇ. ಈ ಕಾರಣ ನಿತ್ಯಜೀವನಲ್ಲಿ ಅವರ ಪ್ರಭಾಕ್ಷೇತ್ರದ ಪಾಲು ಐವತ್ತು ಶೇಕಡಾ ಇದ್ದಲ್ದಾ? ಹಾಂಗಾಗಿ ರಜರಜ ಅದರ ಶುದ್ದಿಯುದೇ ಬಕ್ಕು. ಬಾರ ಹೇಳಿ ಏನಿಲ್ಲೆ! ಏ°?
ಯೇವತ್ತೂ ಮಾವಂದ್ರ ನೆಗೆ ಮಾಡಿ ಮಾಡಿ ಬೇಜಾರಾತು. ಇನ್ನು ರಜಾ ಅತ್ತೆಕ್ಕಳನ್ನುದೇ ನೆಗೆ ಮಾಡ್ಳೆ ಸುರುಮಾಡೆಕ್ಕು, ಮಾವಂದ್ರಿಂಗೆ ಕುಶಿ ಅಪ್ಪಲೆ ಬೇಕಾಗಿ ಆದರೂ. 😉 ಅಲ್ದೋ?

ಹಳೆಕಾಲಲ್ಲಿ ನಮ್ಮ ಊರು ಹೇಂಗಿತ್ತು ಹೇಳಿರೆ, ಹಳ್ಳಿ-ಪೇಟೆ ಈಗಾಣಷ್ಟು ಹತ್ತರೆ ಇತ್ತಿಲ್ಲೆ.
ಹಳ್ಳಿ ಒಳಾಣ ಜೀವನ ಹಳ್ಳಿಗೆ ದಕ್ಕಿತ. ಹಳ್ಳಿಲಿ ಉಪಯೋಗುಸುತ್ತ ಸಾಮಾಗ್ರಿಗೊ, ಅಲ್ಯಾಣ ಜೀವನ ಶೈಲಿಗೊ, ಆಂತರಿಕ ನಿಬಂಧನೆಗೊ ಎಲ್ಲ ಬೇರೆ ಬೇರೆ. ಸಂಪರ್ಕವೂ ಅಷ್ಟಾಗಿ ಇತ್ತಿಲ್ಲೆ ಇದಾ. ಹಾಂಗಾಗಿ ಕೇವಲ ಹತ್ತು ಮೈಲಿನ ಅಂತರಲ್ಲಿದೇ ಭಾಷೆ, ವೇಷ, ವೆವಸ್ತೆ, ಊಟ, ಉಪಚಾರಲ್ಲಿ ಕಂಡಾಬಟ್ಟೆ ವೆತ್ಯಾಸ ಇತ್ತು. ಈಗಾಣಷ್ಟು ಸಂಪತ್ತು ಜನರ ಕೈಲಿ ಓಡಾಡಿಗೊಂಡು ಇತ್ತಿಲ್ಲೆ. ಮುಖ್ಯವಾಗಿ ಹಳ್ಳಿಲಿ ಬಡಪ್ಪತ್ತು (ಬಡತನ) ಇತ್ತು.

ಮನೆಗೆಲ್ಲ ಪೇಟೆಂದ ವಸ್ತುಗೊ ಸಾಮಾನ್ಯವಾಗಿ ಬತ್ತೇ ಇಲ್ಲೆ. ಬಂದರುದೇ ಬಾರೀ ಅಪುರೂಪ. ಪೇಟೆಂದ ಎಂತಾರು ತಂದರೆ, ಅದರಲ್ಲಿಪ್ಪ ಪ್ರತಿಯೊಂದು ವಸ್ತುವನ್ನುದೇ ಉಪಯೋಗುಸುದೇ. ಯೇವದನ್ನುದೇ ಇಡ್ಕಲಿಲ್ಲೆ. ಹಳ್ಳಿಲೇ ಹುಟ್ಟಿ ಬೆಳದು, ಹಳ್ಳಿಲೇ ಜೀವನ ನಡೆಶಿದವಕ್ಕೆ ಪೇಟೆ ವಸ್ತುಗಳ ಮೇಲೆ ಕೊದಿ ಜಾಸ್ತಿ ಇದಾ!

ಬೆಲ್ಲವೋ, ಶೆಕ್ಕರೆಯೋ ಎಂತಾರು ತಂದರೆ, ಆ ತೊಟ್ಟೆಯ ಒಸ್ತ್ರ ಒಗವಗ ಒಗದು, ತಣಿಲಿಂಗೆ ಒಣಗುಸಿ, ಮಡುಸಿ ಮಡುಗ್ಗು. ಎಂತಾರು ತುಂಬುಸಲೆ ಬೇಕು ಹೇಳಿಗೊಂಡು.
ಅವಲಕ್ಕಿಯೋ, ಹೊದಳೋ ಎಂತಾರು ಕಾಗತಲ್ಲಿ ಕಟ್ಟಿ ಕೊಟ್ರೆ ಆ ಕಟ್ಟಿದ ಬಕ್ಕಿನಬಳ್ಳಿಯ ಮೇಗೆ ಕೊದಿ. ಅದರ ಸುರುಳಿಸುತ್ತಿ ತೆಗದು ಮಡಗ್ಗು, ಎಂತಾರು ಕಟ್ಟುಲೆ ಬೇಕಾವುತ್ತು ಹೇಳುಗು ಕೇಳಿರೆ. ಈಗ ಆ ನಮುನೆ ಕಟ್ಟುದು ಕಡಮ್ಮೆ, ಪೂರ ತೊಟ್ಟೆ ಬಯಿಂದಲ್ದ!
ಪುತ್ತೂರಿನ ಸಂಜೀವ ಶೆಟ್ಟಿಯಲ್ಲಿಂದ ಒಸ್ತ್ರವೋ, ಎಂತಾರು ಜವುಳಿ ತೆಗದರೆ ಅದರ ತುಂಬುಸಿ ತಂದ ತೊಟ್ಟೆಯ ಮೇಲೆ ಕೊದಿ. ವಸ್ತ್ರಂದ ಮೊದಲು ಅದರ ಮಡುಸಿ ಮಡಗ್ಗು. ಸಾಮಾನ್ಯ ನಮ್ಮ ಊರಿನ ಎಲ್ಲ ಬಟ್ಟಕ್ಕಳ ಟ್ರೇಡುಮಾರ್ಕು ಅದು, ಅಲ್ದೋ?
ಮಾರ್ಜಿನು ಪ್ರೀ ಅಂಗುಡಿಂದ ಕೊಡ್ತ ತೊಟ್ಟೆಯ – ಹರಿಯದ್ದ ಹಾಂಗೆ ಕಟ್ಟ ಬಿಡುಸಿ, ಒಳ ಇಪ್ಪ ಸಾಮಾನುಗಳ ಕರೆಲಿ ಮಡಗಿದ ಕೂಡ್ಳೆ – ಮಡುಸಿ ಮಡುಗ್ಗು. ದೊಡ್ಡ ತೊಟ್ಟೆ ಇದಾ, ಎಂತಕಾರು ಬೇಕಾವುತ್ತು ಹೇಳಿಗೊಂಡು.
ಮುಳಿಯದ ಮಾವನಲ್ಲಿಂದ ಚಿನ್ನವೋ, ಗೆಜ್ಜೆಯೋ ಎಂತಾರು ತಂದರೆ, ಅದರ ಮಡಿಕ್ಕೊಂಡಿಪ್ಪ ಪೆಟ್ಟಿಗೆ ಮೇಗೆ ಕೊದಿ. ಮೊದಾಲು ಅದರ ಚೆಂದ ನೋಡುಗು, ಮತ್ತೆ ಚಿನ್ನದ್ದು.

ಕುಪ್ಪಿಗಳ ತೊಳದು ಒಣಗುಲೆ ಮಡುಗಿದ್ದು

ಪುಳ್ಳಿಮಾಣಿಗೆ ಕುಡಿವಲೆ ಹೇಳಿಗೊಂಡು ಹೋರ್ಲಿಕ್ಸೋ ಮತ್ತೋ ತಂದರೆ, ಹೊಡಿ ಮುಗುದ ಕೂಡ್ಳೆ ಆ ಕುಪ್ಪಿಯ ತೊಳದು ಒಣಗುಸಿ ಮಡುಗ್ಗು, ಅದೊಂದು ಕೊದಿ. ಎಡಿಯಪ್ಪ ಈ ಹೆಮ್ಮಕ್ಕಳತ್ರೆ!!!
ಬಂಡಾಡಿ ಅಜ್ಜಿ ಅಂತೂ ಪುಳ್ಳಿಯಕ್ಕೊ ತಂದ ಜ್ಯೂಸಿನ ಕುಪ್ಪಿಯೋ, ನೀರಿನ ಕುಪ್ಪಿಯೋ ಎಲ್ಲ ತೆಗದು ಮಡಗಿದ್ದವಡ. ಪುತ್ತೂರಿಂಗೆ ಹೋವುತ್ತರೂ ಅದರ್ಲೇ ನೀರು ತುಂಬುಸಿ ಕುಡ್ಕೋಂಡು ಹೋಪದಡ.

ಹೀಂಗೆ ತೆಗದು ಮಡಗಿದ ತೊಟ್ಟೆಗಳ, ಕುಪ್ಪಿಗಳ ಎಲ್ಲ ಅಡಿಗೆಕೋಣೆ ಕರೆಲಿ ಒಂದು ದೊಡ್ಡ – ಗಡಿಯಾರವೋ ಎಂತಾರು ತಂದ – ತೊಟ್ಟೆಯ ಒಳ ಕ್ರಮಲ್ಲಿ ಮಡಿಕ್ಕೊಂಗು ಹೆಮ್ಮಕ್ಕೊ. ಅಂಬೆರ್ಪಿಂಗೆ ಎಂತಾರು ಬೇಕಾಗಿ ಬಂದರೆ ಕೊಡ್ಳೆ.
ಅಂತೂ, ಈಗ ಬೆಂಗ್ಳೂರಿನ ಶುಭತ್ತೆಯ ಮನೆಲಿ ಕಸವು ಕಸವು ಹೇಳಿಗೊಂಡು ಯೇವದರ ಎಲ್ಲ ಇಡ್ಕುತ್ತವೋ, ಹೆಚ್ಚಿಂದುದೇ ಅಂದು ನಮ್ಮೋರ ಹೆಮ್ಮಕ್ಕೊಗೆ ಕೊದಿಯ ವಿಷಯ ಆಗಿತ್ತು. ಎಲ್ಲವನ್ನುದೇ ಜೋಡುಸಿ ತೆಗದು ಮಡುಗುತ್ತ ಕಾರ್ಯ ನಮ್ಮ ಹಳಬ್ಬರಿಂಗೆ. ಶುಬತ್ತೆಯ ಮನೆಲಿ ಅದರ ಅಬ್ಬೆ ಒಂದು ತಿಂಗಳು ನಿಂದದರ್ಲಿ ರಾಶಿ ಕಸವು ತುಂಬಿತ್ತಡ, ತೊಟ್ಟೆ-ಕುಪ್ಪಿ-ಬಳ್ಳಿಗೊ. ಅವು ಹೆರಡುವನ್ನಾರ ಇಡ್ಕಲೆ ಎಡಿಗಾಯಿದಿಲ್ಲೆ ಅದಕ್ಕೆ. ಅಲ್ಲಿ ಕಸವು ಇಡ್ಕಲೂ ಪೈಸೆ ಕೊಡೆಕ್ಕು. ಪಾಪ!

ಮೊದಲಾಣ ಕಾಲಲ್ಲಿ, ನಿತ್ಯಜೀವನಕ್ಕೆ ಉಪಯೋಗುಸಿಗೊಂಡು ಇದ್ದದು ಹಳ್ಳಿ ವಸ್ತುಗಳನ್ನೇ, ಹೆಚ್ಚಾಗಿ. ನಿತ್ಯೋಪಯೋಗಕ್ಕೆ ಬೇಕಷ್ಟು ಮನೆಲೇ ಮಾಡಿಗೊಂಗು. ಉದ್ದು, ಹಸರು, ಮೆಣಸು, ತರಕಾರಿ, ತೆಂಗಿನ ಕಾಯಿ, ಅಕ್ಕಿ, ಅದು ಇದು – ಯೇವದುದೇ ಪೇಟೆಂದ ತಂದು ಉಪಯೋಗುಸುತ್ತ ಪರಿವಾಡಿ ಇತ್ತಿಲ್ಲೆ. ಎಲ್ಲ ಮನೆದೇ.
ಅತಿಮೀರಿ ಮನೆಲಿ ಇಲ್ಲೆ ಹೇಳಿ ಆದರೆ, ಆಚಮನೆಂದ ತಪ್ಪದು. ಅಲ್ಲದ್ರೆ ನೆಂಟ್ರಲ್ಲಿಂದ. ಅಲ್ಲಿ ಇಲ್ಲದ್ದರ ಇಲ್ಲಿಂದ ತೆಕ್ಕೊಂಡೋಗಿ ಕೊಡುದು. ಪೈಸದ ಪರಿಕಲ್ಪನೆ ಇಲ್ಲದ್ದೇ.

ಈ ಕೊಡು-ಕೊಳ್ಳುವಿಕೆ ಇದ್ದಲ್ದ, ಅದುವೇ ನೆರೆಕರೆಯ ಸಂಬಂಧವ ಗಟ್ಟಿ ಮಾಡುದು. (ಅಪುರೂಪಕ್ಕೆ ಕೆಲವು ಸರ್ತಿ ಹಾಳು ಮಾಡುದುದೇ ಇದ್ದು, ಅದು ಬೇರೆ.) ಗೆಂಡುಮಕ್ಕೊ ಅವರ ಗಟ್ಟಿ ಒಯಿವಾಟಿಂಗೆ (ವ್ಯವಹಾರಕ್ಕೆ) ಬೇಕಾದ ವಸ್ತುಗಳ ವಿನಿಮಯ ಮಾಡಿಗೊಳ್ತವೋ, ಅದೇ ನಮುನೆ ಹೆಮ್ಮಕ್ಕಳದ್ದುದೇ ಕಾರ್ಬಾರು ಇರ್ತು. ಹೆಚ್ಚಿನವು ಗಮನುಸದ್ದೇ ಇದ್ದರೂ, ಹಳ್ಳಿಯ ಬೈಲ ಜೀವನ ಅರಡಿವವಕ್ಕೆ ಇದರ ಸರೀ ಪರಿಚಯ ಇಕ್ಕು.

ನಮ್ಮ ಮನೆಲಿ ಆದ್ದು, ನವಗೆ ಆಗಿ ಒಳುದರೆ ಆಚಮನಗೆ, ಅಲ್ಲಿ ಎಂತಾರು ನೆಟ್ಟಿತರಕಾರಿ ಮಾಡಿದ್ದು ಕೊಯಿವ ಸಮಯಲ್ಲಿ ಈಚ ಮನೆಗೆ ಕೊಡುದು, ಉಪ್ಪಿನಕಾಯಿ ಮೆಡಿ ಧಾರಾಳ ಆದರೆ ಈ ಸರ್ತಿ ಮೆಡಿಯೇ ಸಿಕ್ಕದ್ದ ನೆಂಟ್ರಮನೆಗೆ, ಆಚಕ್ಕಂಗೆ ಚೆಕ್ಕರ್ಪೆ ಇಷ್ಟ ಹೇಳಿ ಗೊಂತಾದ ಈಚಕ್ಕ ಕೊಯಿದ ದಿನ ಎರಡು ತೆಕ್ಕೊಂಡು ಹೆರಡುಗು, ಬಪ್ಪಗ ಅಲ್ಲಿಂದ ಇಷ್ಟದ ಅರುವತ್ತೆಸಳಿನ ಮಲ್ಲಿಗೆ ಗೆಡುವೋ, ಎರವಂತಿಗೆ ತುಂಡೋ ಎಂತಾರು ಹಿಡ್ಕೊಂಡು ಬಕ್ಕು, ದೊಡ್ಡಜಾತಿ ದನವೂ, ದೊಡ್ಡ ಮನಸ್ಸೂ ಇಪ್ಪ ಹೆಮ್ಮಕ್ಕ ಕರವಲಿಲ್ಲದ್ದ ಮನೆಗೆ ಒಂದು ಕುಡ್ತೆ ಹಾಲು ತೆಕ್ಕೊಂಡು ಹೊತ್ತಪ್ಪಗ ಹೆರಡುಗು, ಬಪ್ಪಗ ಅಲ್ಲಿಂದ ನಿನ್ನೇಣ ಪೇಪರು ಹಿಡ್ಕೊಂಡು ಬಕ್ಕು – ಪದಬಂದ ತುಂಬುಸಲೆ, ಜೆಂಬ್ರದ ಮನೆಲಿ ಒಳುದ ಮೇಲಾರವ ಒಂದು ಪಾತ್ರಲ್ಲಿ ಹಾಕಿ ಆಚೀಚ ಮನೆಗೆ ಕೊಡುಗು, ಮರದಿನ ಆ ಪಾತ್ರಲ್ಲಿ ಮಲ್ಲಿಗೆ ಮುಗುಟೋ ಎಂತಾರು ತುಂಬುಸಿ ಒಪಾಸು ಎತ್ತುಸುಗು, – ಹೀಂಗಿಪ್ಪ ಒಂದು ಅವಿನಾಭಾವ ಸಂಬಂಧ ನಮ್ಮೂರ ನಮ್ಮೋರ ಹೆಮ್ಮಕ್ಕೊಗೆ ಇರ್ತು.

ನಮ್ಮ ಬೈಲಿನ ಯೇವದಾರು ಮನೆಗೆ ಬಂದಿಪ್ಪಗ ಮದ್ಯಾನ ಊಟಕ್ಕೆ ನಿಂದರೆ ಗೊಂತಾವುತ್ತು. ತರಕಾರಿಯ ವೈವಿಧ್ಯದ ಊಟ. ಎಲ್ಲವೂ ಅವರ ಮನೆಲೇ ಆದ್ದದು ಆಗಿರ. ಕೆಲವೆಲ್ಲ ನೆರೆಕರೆಯ ವಸ್ತುಗಳೂ ಇಕ್ಕು.
ಆಚಕರೆಂದ ತಂದ ಬಸಳೆಯ ಕೊದಿಲೋ, ಈಚಕರೆಂದ ಕೊಟ್ಟ ಮುಂಡಿಯೋ, ಪಾರೆ ಮಗುಮಾವ ತಂದ ಅಮುಂಡವೋ (ದೊಡ್ಡ ಜಾತಿಯ ಬಾಳೆಕಾಯಿ – ಕೊದಿಲೋ, ಪೋಡಿಯೋ ಎಂತಾರು ಮಾಡ್ತ ಕ್ರಮ), ಪಾಲಾರಣ್ಣನ ಮನೆಂದ ಕೊಟ್ಟು ಕಳುಸಿದ ಬೀಜದ ಬೊಂಡೋ (- ಅವಕ್ಕೆ ಬೀಜದ ಗುಡ್ಡೆ ಇದ್ದಿದಾ ದೊಡ್ಡದು), ಶೇಡಿಗುಮ್ಮೆ ಬಾವನಲ್ಲಿಂದ ಬಂದ ಗುಜ್ಜೆಯೋ-( ಅವನಿಂದಲೂ ಉರೂಟಿಂದು), ಆಚಮನೆ ದೊಡ್ಡಣ್ಣ ತಂದು ಕೊಟ್ಟ ಹಲಸಿನಣ್ಣಿನ ಪಾಯ್ಸವೋ, ಪಂಜೆ ಚಿಕ್ಕಮ್ಮನಲ್ಲಿಂದ ಬಂದ ಅಳತ್ತೊಂಡೆಯ ಮೇಲಾರವೋ, ಮುಳಿಯಾಲದಪ್ಪಚ್ಚಿಯಲ್ಲಿಂದ ಬಂದ ಹಲಸಿನ ಹಪ್ಪಳವೋ, ಶೇಣಿ ಬಾವನಲ್ಲಿಂದ ತಂದ ಬದನೆ ಬೋಳುಕೊದಿಲೋ, ಅಜ್ಜಕಾನ ಬಾವನಲ್ಲಿಂದ ತಂದ ತೊಂಡೆಕಾಯಿಯ ತಾಳೋ, ಮಾಷ್ಟ್ರುಮನೆಂದ ಬಂದ ದಾರೆಯೋ, ದೀಪಕ್ಕನಲ್ಯಾಣ ಪೀರೆಯೋ – ಎಂತಾರು ಇದ್ದೇ ಇಕ್ಕು.
ಇದೆಲ್ಲ ಅವರ ಮನೆಂದ ಪ್ರೀತಿಲಿ ಕಳುಸಿಕೊಟ್ಟ ವಸ್ತುಗೊ. ಅದಕ್ಕೆ ಪ್ರತಿಯಾಗಿ ಈ ಮನೆಂದಲೂ ಎಂತಾರು ಹೋಗಿರ್ತು, ಹೋಗಿರದ್ರೆ ಹೋವುತ್ತು – ಒಂದಲ್ಲ ಒಂದು ಕಾಲಲ್ಲಿ.
ಎರಡಕ್ಕೂ ಪೈಸೆ ಲೆಕ್ಕ ಹಾಕಲೆ ಇಲ್ಲೆ. ಈಗಾಣ ಭಾಷೆಲಿ ಹೇಳ್ತರೆ ಅದುದೇ ’ಫ್ರೀ’ ಇದುದೇ ’ಫ್ರೀ’!!
ಈ ಕೊಡುಕೊಳ್ಳುವಿಕೆಂದಾಗಿ ಎಲ್ಲ ಮನೆಲಿದೇ ಎಲ್ಲ ಕಾಲಲ್ಲಿದೇ ಸಮೃದ್ಧ ಊಟ ಇರ್ತು, ಒಂದ್ಸಮಯ ಒಂದು ಮನೆಲಿ ಯೇವದೇ ತರಕಾರಿ ಇಲ್ಲದ್ರೂ ನಡೆತ್ತು, ಆಚೀಚ ಮನೆಂದ ಬಂದಿರ್ತು. ಅತ್ತೆ ಸೊಸೆ ಸಂಬಂಧದಷ್ಟೇ ಗಟ್ಟಿಯಾಗಿ ನೆರೆಕರೆ ಸಂಬಂಧವೂ ಬಂದಿರ್ತು. ತಲೆತಲಾಂತರಂದ.ಇಂತಹ ಉತ್ತಮ ಸಂಬಂಧವ ನಡೆಶಿಗೊಂಡು ಬಂದದು ನಮ್ಮ ಮನೆಯ ಹೆಮ್ಮಕ್ಕಳ ಹೆಮ್ಮೆಗಾರಿಕೆಯ ವಿಷಯ. ಇದರ ಬಗ್ಗೆ ಎರಡು ಮಾತಿಲ್ಲೆ. ಮೆಚ್ಚೆಕ್ಕಾದ್ದೇ.

ಈ ಕೊಡುಕೊಳ್ಳುವಿಕೆಲಿ ಒಂದು ಗಮ್ಮತ್ತಿನ ಸಂಗತಿ ಇದ್ದು.
ಇಷ್ಟೆಲ್ಲ ಕೊಡ್ತ ಹೆಮ್ಮಕ್ಕೊ ಎಷ್ಟೇ ದಾರಾಳಿಗೊ ಆದರೂ, ಒಂದೊಂದು ವೀಕುನೆಸ್ಸು ಇದ್ದೇ ಇರ್ತು. ಅದೆಂತದು?
ಒಂದು ಮನೆಂದ ಇನ್ನೊಂದು ಮನೆಗೆ ಎಂತಾರು ವಸ್ತು ಕೊಡ್ತರೆ, ಅತೀ ಅಗತ್ಯ ಬಂದರೆ ಮಾಂತ್ರ ಆಗ ಹೇಳಿದ ಪ್ರೀತಿಯ ವಸ್ತುಗಳ ತೆಗಗಷ್ಟೆ. ನಾಕು ಅಳತ್ತೊಂಡೆ ಮಾಂತ್ರ ಆದರೆ ಅಂತೇ ಬಾಳಬಳ್ಳಿಲಿ ಕಟ್ಟಿ ಕೊಡುಗಷ್ಟೆ, ಅದರೊಟ್ಟಿಂಗೆ ಹತ್ತು ತೊಂಡೆಕಾಯಿದೇ ಕೊಡ್ಳಿದ್ದರೆ ಮಾಂತ್ರ ತೊಟ್ಟೆಲಿ ಹಾಕಿ ಕೊಡುಗು, ಅನಿವಾರ್ಯ ಆದ ಕಾರಣ. ತೊಟ್ಟೆ ಅಷ್ಟು ಬೆಲೆಬಾಳುವ ವಸ್ತು ಅಲ್ದೋ? ಹಾಂಗೆ. ಬಳ್ಳಿಲಿ ಅಳತ್ತೊಂಡೆ ಅಷ್ಟು ಕಮ್ಮಿ ಆದರೂ ಚಿಂತೆ ಇಲ್ಲೆ, ತೊಳದು ಒಣಗುಸಿ ತೆಗದುಮಡಗಿದ ತೊಟ್ಟೆ ಕಟ್ಟಲ್ಲಿ ಒಂದು ತೊಟ್ಟೆ ಕಮ್ಮಿ ಆತನ್ನೆ, ಅದು ರಜಾ ಬೇಜಾರಿನ ಬಗೆ. ;-(

ಓ ಮೊನ್ನೆ ಮಾಷ್ಟ್ರಮನೆ ಅತ್ತೆ ಹೇಳಿದ ಶುದ್ದಿ ಒಂದಿದ್ದು, ಹೇಳ್ತೆ ಕೇಳಿ:
ಚೂರಿಬೈಲು ದೀಪಕ್ಕನ ಮನೆಗೆ ಒಂದರಿ ಅದರ ಚಿಕ್ಕಮ್ಮನ ಮಗ ಹೋಗಿಪ್ಪಗ ಒಂದು ಕುಪ್ಪಿ ಬರ್ತಿ ತುಪ್ಪ ಕೊಟ್ಟತ್ತಡ. ಕರವದು ಕಮ್ಮಿ ಇಪ್ಪ ನೆಂಟ್ರ ಮನಗೆ ತುಪ್ಪ ಕೊಟ್ಟು ಕಳುಸುದು ಇಪ್ಪದೇ. ಅಲ್ಲದೋ? ಒಳ್ಳೆ ಪರಿಮ್ಮಳದ ಉತ್ಕೃಷ್ಟ ಗುಣಮಟ್ಟದ ತುಪ್ಪ. ಡಾಕ್ಟ್ರುಬಾವಂಗೆ ಆಯುರ್ವೇದದ ಮದ್ದು ಕಾಸಲುದೇ ಅಪ್ಪಂತದ್ದು. ಪೇಟೆಲಿ ಸುಮಾರು ರುಪಾಯಿ ಎಲ್ಲ ಅಕ್ಕದಕ್ಕೆ, ಪ್ರೀತಿಲಿ ಕೊಟ್ಟದಕ್ಕೆ ಕ್ರಯ ನೋಡ್ಳಾಗ ನಾವು! ಒಂದು ಕೇಜಿ ಹೋರ್ಲಿಕ್ಸು ಹೊಡಿ ಹಿಡಿತ್ತ ಕುಪ್ಪಿಲಿ ಕಂಠಮಟ್ಟ. ಕೊಡುವಗ ಒಂದು ಮಾತು ಹೇಳಿತ್ತಡ: “ಇನ್ನಾಣ ಸರ್ತಿ ಬಪ್ಪಗ ಕುಪ್ಪಿ ತಾ, ನೆಂಪಿಲಿ, ಮರೇಡಾ.. ಏ°?” ಹೇಳಿ. ಪಾಪ, ಆ ಮಾಣಿಗೆಂತ ಗೊಂತು, ತುಪ್ಪಂದಲೂ ಕ್ರಯ ಆ ಕುಪ್ಪಿಗೆ ಇಪ್ಪದು ಹೇಳಿಗೊಂಡು. ಅಲ್ಲದ್ರುದೇ, ಆ ಹೆಮ್ಮಕ್ಕಳ ದೃಷ್ಟಿಲಿ ಇನ್ನೂರು ರುಪಾಯಿ ತುಪ್ಪಂದ ಎರಡುರುಪಾಯಿಯ ಕುಪ್ಪಿ ಹೆಚ್ಚು ಮುಖ್ಯ.
ತುಪ್ಪಕ್ಕೆಲ್ಲ ಆರು ಕ್ರಯ ಹಿಡಿತ್ತ° ಬೇಕೆ, ಕುಪ್ಪಿ ಆದರೆ ಇನ್ನೊಂದರಿ ಹೋರ್ಲಿಕ್ಸು ತಂದರೆ ಮಾಂತ್ರ ಸಿಕ್ಕುಗಷ್ಟೆ. ಅಲ್ಲದೋ?

ರೂಪತ್ತೆ ಮಗ ಜರ್ಮನಿಗೆ ಹೆರಡುವಗ, ಒಳ್ಳೆ ಪರಿಮ್ಮಳದ ಮಾವಿನ ಮೆಡಿ ಉಪ್ಪಿನಕಾಯಿಯ ಪ್ಲೇಶ್ಟಿಕು  ಬರಣಿಲಿ (ಕುಪ್ಪಿಲಿ) ತುಂಬುಸಿ ಕೊಟ್ಟತ್ತಡ ಪಂಜದ ಅಜ್ಜಿ. ’ಈ ಪ್ಲೇಶ್ಟಿಕು ಕುಪ್ಪಿಯ ಒಪಾಸು ತರೆಕ್ಕು ಮಾಣೀ’ ಹೇಳಿ ರಾಗ ಎಳದೇ ಎಳದತ್ತಡ ಕೊಡುವಗ. ’ವಿದೇಶಲ್ಲಿ ಅದರ ಎಲ್ಲ ಇಡ್ಕುದೇ, ತಪ್ಪಲಿಲ್ಲೆ, ತಪ್ಪಲೆ ಕರ್ಚು ಉಪ್ಪಿನಕಾಯಿಂದ ಜಾಸ್ತಿ ಅಕ್ಕು’ ಹೇಳಿದ ಮಾಣಿಯ ಮೇಲೆ ಒಳ್ಳೆತ ಕೋಪಮಾಡಿಗೊಂಡಿದು. ಅಷ್ಟೆಲ್ಲ ಕುಪ್ಪಿಯ ಇಡ್ಕುತ್ತರೆ ಅದರ ತಪ್ಪಲೆ ಹೇಳಿಗೊಂಡೇ ಅಲ್ಲಿಗೆ ಹೆರಡ್ತ ಏರ್ಪಾಡು ಮಾಡಿದ್ದಡ ಆ ಅಜ್ಜಿ, ಅಜ್ಜಕಾನ ಬಾವ° ಹೇಳಿದ್ದು. ಸರೀ ಗೊಂತಿಲ್ಲೆ.

ಅಂತೂ ಇಂತೂ, ಈಗಾಣ ಕಾಲಕ್ಕೆ ಎಷ್ಟೇ ತಮಾಶೆ ಕಂಡರುದೇ, ಅಂದ್ರಾಣ ಕಾಲಘಟ್ಟಕ್ಕೆ ಬೇಕಾದ ಹಾಂಗೆ ಜೀವನ ನಡೆಶಿ, ಲಭ್ಯ ಇಪ್ಪ ವಸ್ತುಗಳ ಚೆಂದಕ್ಕೆ ಜೋಡುಸಿಗೊಂಡು, ಗೆಂಡನ ವೆವಹಾರಕ್ಕೆ ಸಹಕಾರಿಣಿ ಆಯ್ಕೊಂಡು, ಮನೆ, ನೆಂಟ್ರು, ನೆರೆಕರೆ ಎಲ್ಲವನ್ನೂ ಸಂಬಾಳಿಸಿಗೊಂಡುಬಂದ ಹೆಮ್ಮಕ್ಕಳ ಸಾಮರ್ಥ್ಯ ಗ್ರೇಶಿರೆ ಒಳ್ಳೆ ಕುಶೀ ಅಪ್ಪದು ಕೆಲವು ಸರ್ತಿ. ಈಗಾಣ ಕೂಸುಗೊಕ್ಕೆ ಇದೆಲ್ಲ ಅರಡಿಗೋ? ತರವಾಡುಮನೆ ಶಾಂಬಾವನ ಹೆಂಡತ್ತಿ ಅಂತೂ ಎಲ್ಲ ಕುಪ್ಪಿಯನ್ನುದೇ ಇಡ್ಕುದೇ, ಪಾತಿಅತ್ತೆಯ ಹಾಂಗೆ ತೊಳದು ಒಣಗುಸಲೆ ಗೊಂತೇ ಇಲ್ಲೆ.

ಅಂಬಗಾಣ ಜೀವನದ ಅಗತ್ಯತೆಂದಾಗಿ ಕೆಲವೆಲ್ಲ ವಿಶಯ ಕಲ್ತಿದವು, ಈಗಂಗೆ ರಜಾ ಆಧುನಿಕತೆಯ ಗಾಳಿ ಬತ್ತಾ ಇದ್ದು, ಬರೆಕ್ಕಷ್ಟೆ. ಪೂರ್ತಿ ಬಂದರೆ ಮತ್ತೆ ಬೆಂಗ್ಳೂರಿನ ಶುಬತ್ತೆಯ ಹಾಂಗಕ್ಕು, ಅದು ಬೇಡ. ರಜ ಹೀಂಗಿದ್ದರೇ ಚೆಂದ. ಎಂತ ಹೇಳ್ತಿ?

ಒಂದೊಪ್ಪ: ಈಗ ಪೇಟೆಲಿ ಕಸದಿಂದ ರಸ ಹೇಳಿ ಬೊಬ್ಬೆ ಹೊಡವದು ಅಂದ್ರಾಣ ಅಜ್ಜಿಯಕ್ಕಳ ಇದೇ ಕ್ರಮವ ಅಲ್ದೋ?

15 thoughts on “ತುಪ್ಪ ಕೊಟ್ಟು ಕುಪ್ಪಿ ಕೇಳ್ತ ಹೆಮ್ಮಕ್ಕಳ ಶುದ್ದಿ

  1. ಲಾಯ್ಕಾಯಿದು….
    ಒಂದೇ ರೀತಿಯ ಕುಪ್ಪಿ ಆಯೆಕ್ಕು ಹೇಳಿ, ಮಕ್ಕೊಗೆ ಬೊಡುದರುದೆ ಬಿಡದ್ದೆ, ತಿಂಗಳುಗಟ್ಲೆ ಹೋರ್ಲಿಕ್ಸನ್ನೇ ತರುಸಿಗೊಂಡಿದ್ದ ಪಾಚಕ್ಕನ ನೆಂಪಾತು.
    ಚೆಂದದ ಕುಪ್ಪಿ, ಪ್ಲೇಶ್ಟಿಕು ಎಲ್ಲ ಸಿಕ್ಕುತ್ತೂಳಿ ಆದರೆ ಅದಕ್ಕೆ ಎಷ್ಟು ಕರ್ಚಾದರೂ ತರುಸುತ್ತವು ಕೆಲವು ಅತ್ತೆಕ್ಕೊ… 🙂
    ಹ್ಮ್…ಒಳ್ಳೆ ಲೇಖನ… ಮದಲಾಣ ಆ ಕೊಡು-ಕೊಳ್ಳುವಿಕೆ ಈಗ ಕಮ್ಮಿ ಆವುತ್ತಾ ಇದ್ದಲ್ದ… 🙁

  2. ಭಾರಿ ಲಾಯ್ಕ ಆಯ್ದು ಒಪ್ಪಣ್ಣ ಬರದ್ದು..ಹುಳಿಮಾವು ಮನೆಯ ಅಟ್ಟಲ್ಲಿ(!) ಸುಮಾರು ಕುಪ್ಪಿ ಇದ್ದಡ??!! ಅದುದೆ ತೊಳೆಯದ್ದು(: ಎಬೆಕ್ಲೆ(:

    ನಿಜವಾಗಿ ಚೆಂದ ಅಲ್ಲದಾ ಆ ಕೊಡು-ಕೊಳ್ಳುವಿಕೆ ಕ್ರಮ..ಒಳ್ಳೊಳ್ಳೆ ಸಂಬಂಧ,ನೆಂಪುಗ ಸಿಕ್ಕುತ್ತು ಅದರಿಂದ..
    ಹೀಂಗೆ ಒಳ್ಳೆ ಸಲಿಗೆ ಇಪ್ಪ ಮನೆಲಿ ಆದರೆ ಕಾಯಿ ಬರ್ಪಿ ಮಾಡಿ ೧ ವಾರ ಕಳುದ ಮತ್ತುದೆ ಬಂದು 'ಎನಗೆ ಬರ್ಪಿ ಎಲ್ಲಿದ್ದು ಚಿಕ್ಕಮ್ಮಾ' ಹೇಳಿಯುದೆ ಕೆಳ್ಳಾವ್ತು ಅಲ್ಲದೋ ಒಪ್ಪಣ್ಣಾ..???:)
    ಅದರ್ಲಿ ಬರ್ಪಿ ಅಲ್ಲ ಬೇಕಪ್ಪದು ನಿಜವಾಗಿ..ಕೇಳಿದವಕ್ಕೂ ಕೊಶಿ ಇರ್ತು;ಕೇಳ್ಸಿಗೊಂಡ ಚಿಕ್ಕಮ್ಮಂಗೂ ಕೊಶಿ ಆವ್ತು…:)
    ಮನೆಲಿ ಅತ್ತೆಕ್ಕೊ ಇಲ್ಲದ್ರೆ ಮಾವಂದ್ರು ಆಚಮನಗೆ ಹೋಗಿ 'ನಾಳೆ ಕಾಪಿಗೆ ಬತ್ತೆ ಅತ್ತಿಗೆ'ಹೇಳ್ತವು ; ಇದು ಬರವಲೆ ಬಾಕಿ ಆತೋ??:)

    ಒಳ್ಳೆ ಬರಹ..ಸಂಬಂಧಂಗೊ ಎಲ್ಲ ದೂರ ದೂರ ಆವ್ತಾ ಇಪ್ಪ ಟೈಮಿಲಿ ಒಳ್ಳೆ ಲೇಖನ..

  3. ಲಾಯ್ಕ ಬರದ್ದೆ………… 🙂
    ಅಮ್ಮ ಹೇಳಿದ್ದು ಸರಿ … ಎಷ್ಟು ಸರ್ತಿ ಹೋದರೂ ದೀಪಕ್ಕ ಬರಿ ಕೈಲಿ ಕಳುಸುತ್ತಿಲ್ಲೆ ಅಲ್ಲದೋ ?????????
    ಹಪ್ಪಳ, ಮಲ್ಲಿಗೆ ಮುಕುಟು, ಗುಲಾಬಿ, ಅಳತ್ತೊಂಡೆ, ಬೆಂಡೆ , ಹಾಗಲಕಾಯಿ ಹೀಂಗೆ ಎಂತಾದರು ಕೊಟ್ಟೇ ಕೊಡ್ತು….
    ಹ್ಮ್….. ಅಮ್ಮ ಈಗಳುದೇ ಸಂಜೀವ ಶೆಟ್ಟಿ ತೊಟ್ಟೆಯ ಚಂದಕೆ ಮಡುಸಿ ತೆಗದು ಮಡುಗುತ್ತು………. 🙂 😉

    ಇನ್ನಾಣ ಲೇಖನದ ನಿರೀಕ್ಷೆಲಿ ………………….

  4. ಏ ಒಪ್ಪಣ್ಣೋ,,,ಎಂತ ಇದು….ಶೇಡಿಗುಮ್ಮೆ ಭಾವನ ಒಂದಾರಿಯೂ ನೋಡದ್ದ ಹಾಂಗತನ್ನೆ ಕಥೆ……..ಗುಜ್ಜೆ ಹಾಂಗೆ ಉರುಟಿಪ್ಪದು ಅವನ ಮೋರೆ ಮಾಂತ್ರ ಆತೋ….ಅವ ಸಪೂರವೆ….ಉದ್ದ ಇದ್ದ ಮಹಾರಾಯ……ಇದ ಈ ಒಪ್ಪಣ್ಣ ಹೆಳ್ತ ಮಾತುಗಳ ಎಲ್ಲ ಸತ್ಯ ಹೇಳಿ ನಂಬಿಕ್ಕೆಡಿ ಆತೊ………ಎಡೆಡೆಲಿ ಒಂದೊಂದಾರಿ ರೈಲುದೆ ಬಿಡ್ತ…..(ಪಟ್ಟೆ ಇಲ್ಲದ್ದ…..)…..ಹೆ ಹೆ ಹೆ…ಎಂತ ಒಪ್ಪಣ್ಣೋ……

  5. @ Ravishankar Doddamani

    ದೊಡ್ಡಬಾವಂದು ಒಳ್ಳೆ ಪಂಚಾತಿಗೆ.
    ಈ ಬೇಂಕಿನವು ಎಂತ ಕರೆಂಟುಕಂಬದ ಹಾಂಗೆ ಒಂದೇ ದಿಕ್ಕೆ ಇರ್ತವೋ?
    ಇಂದು ನೀರ್ಚಾಲು, ನಾಳೆ ಹೈದ್ರಾಬಾದು, ನಾಳ್ತು ಬೊಂಬಾಯಿ, ಆಚ ನಾಳ್ತು ಪುತ್ತೂರು – ಟ್ರಾನ್ಸ್ವರು ಆವುತ್ತನ್ನೆ ಬಾವ ಅವಕ್ಕೆ!

    ಕಳುದೊರಿಷ ನೀರ್ಚಾಲು ಬ್ರೇಂಚಿಲಿ ಇತ್ತಿದ್ದ ನೆಂಪು. ಈ ಒರಿಷ ಎಲ್ಲಿ ಅಪ್ಪ..
    ನೋಡೊ°, ಅವರತ್ರೇ ಕೇಳುವೊ° .. ಆಗದೋ? ಏ°?
    ಸುಮ್ಮನೆ, ಮತ್ತೆ 'ಒಪ್ಪಣ್ಣ ಲೊಟ್ಟೆ ಹೇದ°' ಹೇಳಿ ಮನಸ್ಸಿಂಗೆ ಬಪ್ಪಲಾಗ ಇದಾ! 😉

  6. ಈ ಬೇಂಕಿನ ಪ್ರಸಾದ ಹೇದರೆ ನೀರ್ಚಾಲು ಕರ್ನಾಟಕ ಬೇಂಕಿಲ್ಲಿ ಅಸಿಸ್ಟೆಂಟು ಮೆನೇಜರ ಅಡ. ಹೇಳಿ ಇಲ್ಲೆಲ್ಲೋ ಓದಿದ ನೆಂಪು. ಹೋಗಿ ಕರ್ನಾಟಕ ಬೇಂಕಿಲ್ಲಿ ಹುಡ್ಕಿ ಸಾಕಾತು. ಅವರ ಅಲ್ಲಿ ಕಂಡಿದಿಲ್ಲೆ. ಇಲ್ಲಿ ಹಾಂಗಿಪ್ಪವ ಇಲ್ಲೆ ಹೇದವು ಮೇನೇಜರು.

  7. ಒಪ್ಪಣ್ಣ,
    ನೀನು ಹೇಳಿಯಪ್ಪಗ ನೆಮ್ಪಾತು.ಆನು ಮೊನ್ನೆ ಚೂರಿಬೈಲು ದೀಪಕ್ಕನ ಮನೆಗೆ ಅದರ ಮಾಷ್ಟ್ರು ಮಾವನಲ್ಲಿಗೆ ಕರಕ್ಕೊಂಡು ಬಪ್ಪಲೆ ಉದಿಯಪ್ಪಗ ಹೋಯಿದೆ ಅಲ್ದಾ?ಅಮ್ಬಗ ಒಂದು ದೊಡ್ಡ ಪ್ಲಾಸ್ಟಿಕ್ ಕರಡಿಗೆಲಿ ಅರ್ಧಸೇರು ಅಪ್ಪಷ್ಟು ಅಕ್ಕಿ ತುಮ್ಬುಸಿತ್ತು.ಎನಗೆ ಎಂತಕೆ ಹೇಳಿಯೇ ಅರ್ಥ ಆಯಿದಿಲ್ಲೆ…ಇಂದು ಬಪ್ಪಗ ಚಿಲ್ಯದ್ಕ ಮಾವನಲ್ಲಿಂದ ಜೀಗುಜ್ಜೆ ಕೊದಿಲು ತಪ್ಪಲಿದ್ದು ,"ಎನ್ಗೊಗೆ ಮೂರು ಹೊತ್ತಿಂಗೆ ಆಯೆಕ್ಕನ್ನೆ.ತೋಟಲ್ಲಿ ಆಳುಗಳೂ ಇಪ್ಪಗ ಎನಗೆ ಅಡಿಗೆ ಕೆಲಸ ಮಾಡ್ಲೇ ಆವ್ತಿಲ್ಲೇ ಗಣೇಶ "ಹೇಳಿ ನಮ್ಮ ಹತ್ರೆ ಸೌಂಡುಬೊಕ್ಷು ಊದಿತ್ತು.ಈಗ ಮೈಲು ಗಟ್ಟಲೆ ದೂರ ಇದ್ದರೂ ಹೀನ್ಗಿಪ್ಪ ಎಣ್ಣೆ ಮಜಲು ಗೆಣಪ್ಪ ಭಾವ ಮಾಡುವ ಕೊದಿಲು ಅಷ್ಟು ಫೇಮಸ್ಸು ಹೇಳಿ ಗೊಂತಾದ್ದೆ ಅಮ್ಬಗ..
    ಹಾಂಗೆ ಹೇಳಿ ಮತ್ತೊಂದು ವಿಷಯ..ಆನು ದೀಪಕ್ಕನ ಮನೇಲಿ ಕಾಪಿ ಕುಡಿವಲೆ ಉಂಬ ಒಳಾನ್ಗೆ ಹೊವ್ತೆ..ಅಲ್ಲಿ ಕತೆಯೇ ಬೇರೆ.ಎಂತಾ ಗೊಂತಿದ್ದಾ? ಒಂದು ಹೋರ್ಲಿಕ್ಸು ಕರಡಿಗೆಗೆ ಹಳೆ ವಸ್ತ್ರವ ಎಲ್ಲ ತುಂಡು ತುಂಡು ಮಾಡಿ ಅದರ ಬೇರೆ ಬೇರೆ ಬಣ್ಣದ ನೂಲಿಲಿ ಹೊಲಿತ್ತ ಇತ್ತು ..ಇದರ ರಜ ಮುಗಿಸಿಗೋಳ್ತೆ ಆತ'ಹೇಳಿತ್ತು ..ಆತು ಹೇಳಿದೆ..ನವಗೆ ಅಲ್ಲಿಗೆ ಹೋದ ಮೇಲೆ ಅದು ಹೇಳಿದ ಹೊತ್ತಿಂಗೆ ಹೆರಟು ಅದರ ಪದಂಕಾಣ ಸಾಮಾನು ಎಲ್ಲ ತುಂಬ್ಸಿ ನೆರ್ಪಕ್ಕೆ ಮನೆಗೆ ಎತ್ತದ್ರೆ ಮಾಷ್ಟ್ರತ್ತೆ ಎನಗೆ ಜೋರು ಮಾಡುಗು ಇದ?ಇಲ್ಲದ್ರೆ ರಪ್ಪ ಫೋನು ಹೊಡಗು ದೀಪಕ್ಕ..ಗಣೇಶ ಅರ್ಜೆಂಟು ಮಾಡಿದ ಹೇಳಿ…ಹಾಂಗೆ ಅಡಿಗೆ ಮಾಡ್ಲೇ ಪುರುಸೊತ್ತು ಇಲ್ಲದ್ರೂ ಹೀನ್ಗಿಪ್ಪ ಕಸೂತಿ ಕೆಲಸ ಬೇಕಷ್ಟು ಕಾಂಗು ಅಲ್ಲಿ.ನೀನು ಹೇಳಿದ ಹಾನ್ಗಿಪ್ಪ ಇಡ್ಕುತ್ತ ಪ್ಲಾಸ್ಟಿಕು ಕರಡಿಗೆ ತೊಟ್ಟೆ.ಅಲ್ಲಿ ರೂಪಾಂತರ ಆವ್ತು..
    ಇನ್ನಾಣ ಸರ್ತಿ ದೀಪಕ್ಕ ಎನ್ನ ಬಪ್ಪಲೆ ಹೇಳುಗಾ ಒಪ್ಪಣ್ಣ?

  8. ಲಾಯ್ಕಾಯಿದು ಬರದ್ದು….
    ತೆಗದು ಮಡುಗಿದ್ದದರ ಕೊಂಡೋಪಲೆ ಎಲ್ಲೊರಿಂಗೂ ಬೇಕಾವುತ್ತು… ಅದರ ಚೆಂದಲ್ಲಿ ತೆಗದು ಮಡುಗುಲೆ ಆರಿಂಗೂ ತಾಳ್ಮೆ ಇಲ್ಲೆ… ಹೀಂಗಿಪ್ಪಾಗ ಅತ್ತೆಕ್ಕಳ ಕೋಂಗಿ ಮಾಡುದೆಂತಕೆ ನೋಡೊ…..
    ನಿಜಕ್ಕೂ ಆ ಕೊಡುಕೊಳ್ಳುವಿಕೆ ಎಷ್ಟು ಚೆಂದ ಅಲ್ದೊ…
    ಒಳ್ಳೆ ಶುದ್ದಿ….

  9. oppanno neenu heengella baravalaga idarinda mavandra comentu madekkakku.kuppi hopaga kondu hodare deepakka vapas bappaga entaru kodtanne.ante kalusuva kramave illenne.entade adaru hemarsekkare hemmakkale aayekku heli gontiddanne. idarinda hechhu labha appadu mavandringe allada.adu attekkala olle gunave allada oppanno.mavandru aadare basava eddattu bala beesittu heluvange eddikki nadagu.ondu maneya alivu ulivu attekkala kailiddu. idara credit mavandringe allada oppanno aanu helide heli heengippadara bare adakkondu majave bere aata.good luck.

  10. yentha oppanno budakke madugidde? allada………….,oodi negemadi sakatu yenagude bavangude innana blogna nireeksheli……….

  11. ಅಂತೂ ಒಪ್ಪಣ್ಣ ತುಪ್ಪದ ಕುಪ್ಪಿಗೆ ಕೈ ಹಾಕಿದ…ಪಸೆ ಕೈಗೆ ಅಕ್ಕು ಮಿನಿಯಾ. ಅದು ಏವುದು ಬಾವ ಉತೃಷ್ಟ ಗುಣಮಟ್ಟದ ತುಪ್ಪ -… ನಂದಿನಿಯಾ ಅಥವಾ ಗರಿ ಗರಿಯಾದ ಮರಳು ಮರಳಾದ ಜಿಆರ್‌ಬಿ ತುಪ್ಪವಾ?
    ಒಳ್ಳೆಯ ಲೇಖನ ಮಾರಾಯಾ.
    ಹೆಮ್ಮಕ್ಕ ತುಪ್ಪವ ಹೇಮಾರಿಸಿ ಮಡುಗ್ಗು ಬಾವ ಅನುಶುದ್ದಿ ಆದ ನಂತರ ಮೆಯಿಗೆ, ತಲೆಗಾ ಕಿಟ್ಟಿಗಿದಾ.. ಅಕೇರಿಗೆ ಗಣಹೋಮಕ್ಕೆ ಬಟ್ಟಮಾವ ಕೇಳುಗಿದಾ ಅಂಬಗ ಕೊಡ್ಲೆ ಆತು ಹೇಳಿ ಹೇಳುಗಿದಾ…
    ಬಾವ… ಮತ್ತೆ, ಈ ಬೇಂಕಿನ ಪ್ರಸಾದ ಬಾವ ಎಂತಕಡ ಕುಪ್ಪಿ ಮನೆಗೆ ತಂದದು. ಅವಂಗೆ ಗೊಂತಿಲ್ಲೆಯ ಬಿಸ್ಲೆರಿ ನೀರು ಕುಡಿದು ಅದರ ಕ್ರಶ್‌ ಮಾಡೆಕ್ಕು ಹೇಳಿ. ಅವನುದೆ ಹೆಮ್ಮಕ್ಕಳ ಬುದ್ಧಿ ತೋರಿಸಿದಾ):-ಅಲ್ದೋ?

    ಒಳ್ಳೆಯ ಲೇಖನ
    ಮುಂದಿನ ಬರಹದ ನಿರೀಕ್ಷೆಲಿ…

  12. ಮೊನ್ನೆ ಎಂಗಳಲ್ಲಿ ತಿತಿ ಇತ್ತಿದಾ ಹದಿನಾಲ್ಕಕ್ಕೆ… ಮುನ್ನಾಣ ದಿನ ಬೇಂಕಿಂದ ಹತ್ತು ನೀರ ಕಾಲಿ ಬಾಟ್ಲಿ ತಂದಿತ್ತಿದ್ದೆ. ಅಲ್ಲಿ ಹೀಂಗೆ ಇದಾ ಅಕ್ವಾ ಗಾರ್ಡು ಆಯೆಕ್ಕಷ್ಟೇ ಹಾಂಗಾಗಿ ಬಿಸ್ಲೇರಿ ನೀರು ತಪ್ಪದು. ದಿನಕ್ಕೆ ಎರಡು ಲೀಟರಿನ ಬಾಟ್ಲಿ ಮುಗಿತ್ತು. ಅಂತೇ ಇಡ್ಕುವ ಮನಸಾಗದ್ದೆ ಹೊತ್ತೊಂಡು ಬಂದೆ ಮನಗೆ. ಅಮ್ಮನ ಸಂಭ್ರಮ ಎಂತ ಕೇಳ್ತೆ… ಕೊಣಿವದು ಒಂದೇ ಬಾಕಿ. ಮರದಿನ ತಿತಿಗೆ ಬಂದ ಅತ್ತೆಕ್ಕೋ, ಅಜ್ಜಿಯಕ್ಕೋ, ಒಪ್ಪಕ್ಕಂಗ, ಅತ್ತಿಗೆಯಕ್ಕೋ ಎಲ್ಲಾ ಎನಗೆ ಎನಗೆ ಹೇಳಿ ಕೇಳಿದವು.. ಅಮ್ಮ ಧಾರಾಳಿ ಇದಾ, ತೆಗದೂ ತೆಗದೂ ಕೊಟ್ಟತ್ತು. ಎನಗೆ ಆಶ್ಚರ್ಯ.. ಹೀಂಗೂ ಇದ್ದಾ ಹೇಳಿ. ನಂತರ ಮರದಿನವೇ ಮತ್ತೆ ಹತ್ತು ಕುಪ್ಪಿ ತಂದು ಕೊಟ್ಟೆ… ಅಮ್ಮ ಕೆಳುದು, ಬೇಂಕಿಲಿ ಇನ್ನುದೆ ಇದ್ದಾ ಹೇಳಿ… ನಾಳೆ ಪುನಾ ತರೆಕ್ಕಷ್ಟೇ…

  13. ಈ ಭಾಷೆ ಪರಿಚಯ ಇದ್ದಾ..'ಖೊಟ್ಟ ಖೊಟ್ಟ ಹೇಮಾರಿಸಿ ಮಡುಗುದು' ಹ್ಹೆ..ಹ್ಹೆ.

  14. ಏ ಒಪ್ಪಣ್ಣ, ಎನ್ನ ಮನೇಲೂ ಇದೇ ಪಂಚಾಯ್ತಿಕೆ. ಒಂದೊಂದರಿ 'ಹೇಮಾರಿಸಿ ಮಡುಗುದು.ಎಲ್ಲದನ್ನೂ ಜೆಮೆ ಮಾಡುದು ಯಾರಿಂಗೋ ! ಎಲ್ಲಿ ನೋಡಿರೂ ಕುಪ್ಪಿ, ಪ್ಲಾಶ್ಟಿಕ್ಕು.; ಕ್ಲೀನಿಲಿ ಚೆಂದಗೆ ಕಾಂಬ ಹಾಂಗೆ ಮಡುಗುಲೆ ಎಡಿತ್ತಿಲ್ಲೆ' ಹೇಳಿ ಅಮ್ಮಂಗೆ ಪರಂಚುಲಿದ್ದು. ಆದರೆ ಕೇಳಿಯಪ್ಪಾಗೆಲ್ಲಾ, ಏವ ಮಾಯಕಲ್ಲೋ ಗೊಂತಿಲ್ಲೆ, ಪ್ಲಾಷ್ಟಿಕ್ಕು ಪಳಪಳ ಹೇಳಿಗೊಂಡು ಎದುರು ನಿಂಬಲಿದ್ದು. ಈ ನಮ್ಮ ಅಮ್ಮ, ಅಜ್ಜಿಯಂದ್ರಿಂಗೆ ವಸ್ತುಗಳ ಬೆಲೆಯೂ, ಉಪಯೋಗುಸುವ ಕ್ರಮವೂ ಗೊಂತಿದ್ದು ಮಿನಿಯಾ.. ನವಗೂ ಅಭ್ಯಾಸ ಮಾಡ್ಸುತ್ತವು. ಆದರೆ ನಮ್ಮದೆಲ್ಲಾ ಎಡಬಿಡಂಗಿ ಸ್ಥಿತಿ. ಅತ್ಲಾಗೆ ಹಳತ್ತೂ ಅಲ್ಲ. ಇತ್ಲಾಗೆ ಹೊಸತ್ತೂ ಅಲ್ಲ ಹೇಳಿಯೊಂಡು !ಪೇಟೆಲಿ ಹುಟ್ಟಿದರೂ ಚೂರು ಹಳ್ಳಿ ಮನಸ್ಸಿಪ್ಪ ಕೂಸುಗಳ ಹಣೆಬರಹ ಇದು ! ಎಂತ ಮಾಡುದು ?
    ಏ ಒಪ್ಪಣ್ಣ.., ಜಂಬ್ರಲ್ಲೆಲ್ಲಾ ಹೋಳಿಗೆ, ಲಾಡು, ಜುಲೂಬಿ ಮಾಡಿರೆ ಊಟಂದಲೂ, ಎಲ್ಲರೂ ಹೊರಡುವಾಗ ಅದರ ಲಾಯ್ಕಕ್ಕೆ ಕಟ್ಟಿಕೊಡುವ ಸಂಭ್ರಮವೇ ಜಾಸ್ತಿ ಅಲ್ಲದೋ? ಮಾಷ್ಟ್ರ ಮಾವನ ಮನೆ ಜಂಬ್ರಕ್ಕೆ ಅತ್ತೆ ಕಾಗದಲ್ಲಿ ಚೆಂದಕ್ಕೆ ಹೋಳಿಗೆ ಕಟ್ಟು ಮಾಡಿ ಕೊಟ್ಟಿದವಿದ. ಅದದ ನಮ್ಮಲ್ಲಿಪ್ಪ ಒಳ್ಳೆ ಸಂಸ್ಕೃತಿ. ಬಾಕಿದ್ದವರ ಜೆಂಬ್ರದ ಹಾಂಗೆ ಹೆಚ್ಚಾದರೆ ಇಡುಕುವ ವಯಿವಾಟು ಇಲ್ಲೆ. ಕಡಮ್ಮೆ ಆದರೂ, ಒಂದಾದರೂ ಹಂಚಿ ತಿಂಗು. ಹಾಂಗೆ ಹೇಳಿ ಕೊಡದ್ದರೂ ಹೆಮ್ಮಕ್ಕೊ ಹೇಳಿಯೊಂಡು ಬಕ್ಕು- ' ಇಡುಕ್ಕಿದರೂ ಕೊಡುಲೆ ಮನಸ್ಸು ಬಾರ' ಹೇಳಿ ! ಹ್ಹೆ.ಹ್ಹೆ.ಹವೀಕರ ಹೆಮ್ಮಕ್ಕಳ ಕತೆ ಸುಮಾರಿದ್ದು !:-)
    ಸಣ್ಣದಿಪ್ಪಾಗ ಎಂಗಳ ಮನೆ ಮೇಲೆಕಾಂಬ ಕಲ್ಯಾಣಮಂಟಪಕ್ಕೋ, ದೇವಸ್ಥಾನಕ್ಕೋ ಜೆಂಬ್ರಕ್ಕೆ ಹೋದರೆ ಮನೆಯವು ಕೊಟ್ರೂ-ಕೊಡದ್ರೂ ಅಡಿಗಭಟ್ಟಕ್ಕೊ ಕರದು ಕೊಡುಗಿದ. ಅದೆಲ್ಲಾ ನೆಂಪಾವ್ತು.ಇಂದಿಂಗೂ ಎನ್ನ ತಮ್ಮ 'ಚಟ್ ಪಟಾಕಿ' ಗೆ ದೇವಸ್ಥಾನದ ಜೆಂಬ್ರಂದ ಅಪ್ಪಚ್ಚಿ ಹಿಡುಕ್ಕೊಂಡು ಬಪ್ಪ 'ಪಲಾವಿ'ನ ಮೇಲೆ ಹೇಳಿ ಮುಗಿಯದ್ದಷ್ಟು ಬಾಯಿಲಿ ನೀರು ! ಹಾಂ..
    ಅಂದಹಾಂಗೆ ಆಚೆಕರೆ ಮಾಣಿಯ ಶುದ್ಧಿ ಕೇಳಿದ್ದೆಯಾ? ಆಚಾಣ ಕರೆಲಿ ಅವನ ಮನೆ ಇಪ್ಪಾಗ, ಬರೆ ಜರುದಪಾಗ ನೆರೆಮನೆಯವು ಹೇಂಗೆಲ್ಲಾ ಕೈಕೂಡಿಶಿದವು ಹೇಳಿ ! ಕೇಳಿಕ್ಕು ಬಿಲಿಯಾ !

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×