ಹೇಯಿದ್ದು ಕೇಳದ್ದ ಮಕ್ಕಳ ಕಂಡ್ರೆ ಅಪ್ಪಮ್ಮಂಗೆ ಪಿಸುರು ಬಪ್ಪದು ಸಹಜವೇ. ಎಂತಾ ಲೂಟಿ ಅಪ್ಪಾ ಈ ಜೆನ – ಹೇದು ಪರಂಚುದು ಇಪ್ಪದೇ.
ಆದರೆ ಹೊಸತ್ತರ ಕಲಿಯೇಕಾರೆ ಅವು ಇಪ್ಪ ವ್ಯಾಪ್ತಿಯ ಮೀರಿ ಹೆರ ಹೋಯೇಕನ್ನೇ’ದು?
ಪ್ರತಿ ಹೊಸತ್ತರ ಕಲಿಯೇಕಾದರೂ ತನ್ನ ಈಗಾಣ ವ್ಯಾಪ್ತಿಯ ಮೀರೇಕಾವುತ್ತು. ಇದುವೇ ದಿನ ನಿತ್ಯದ ಸೀಮೋಲ್ಲಂಘನ.
~
ನಮ್ಮ ಗುರುಗಳ ಈ ಒರಿಶದ ಚಾತುರ್ಮಾಸ್ಯ ಮೊನ್ನೆ ಮುಗಾತು.
ಬೆಂಗ್ಳೂರಿನ ಮಠಲ್ಲಿ ಚಾತುರ್ಮಾಸ್ಯ ವ್ರತಕ್ಕೆ ಕೂದ ಶ್ರೀ ಗುರುಗೊ ದಿನ ನಿತ್ಯವೂ ಪೂಜೆ-ಪ್ರವಚನದ ಮೂಲಕ ಧರ್ಮಕರ್ಮ ಯಜ್ಞಂಗಳ ಮಾಡಿ ನಿರಂತರ ಅರುವತ್ತು ದಿನ ವ್ರತ ಕೈಗೊಂಡವು.
ಅವರ ಧರ್ಮಶ್ರದ್ಧೆ, ಶ್ರೀರಾಮನ ಆನುಗ್ರಹಂದಾಗಿ ಸಕಲ ತೊಂದರೆಗಳೂ ದೂರ ಆಗಿ ಮೊನ್ನೆ ಸೀಮೋಲ್ಲಂಘನ ಆತು.
ವಿಶ್ವಾಮಿತ್ರನ ಯಜ್ಞಕ್ಕೆ ರಾಮದೇವರು ಸ್ವತಃ ನಿಂದು ಯಜ್ಞ ರಕ್ಷಣೆ ಮಾಡಿದ ಹಾಂಗೇ ನಮ್ಮ ಗುರುಗಳ ಚಾತುರ್ಮಾಸ್ಯವೂ ಶ್ರೀರಾಮ ರಕ್ಷೆಲಿ ನೆಡದತ್ತು.
ಚಾತುರ್ಮಾಸ್ಯ ಯೇವದೇ ವಿಘ್ನ ಇಲ್ಲದ್ದೆ ಸುಸಂಪನ್ನ ಆತು.
~
ಯೇವದೇ ಒಂದು ಕಾರ್ಯ ತೊಡಗಿದ್ಸು ಮುಗ್ತಾಯ ಹೇದು ಆಯೇಕಾರೆ ಅದಕ್ಕೊಂದು ಕಾರ್ಯ ಮಾಡೇಕಾವುತ್ತು.
ಉದಾಹರಣೆಗೆ, ಊಟ ಮುಗ್ತಾಯ ಆಯೇಕಾರೆ ಮಜ್ಜಿಗೆ ಬರೆಕ್ಕು, ಯಜ್ಞ ಮುಕ್ತಾಯ ಆಯೇಕಾರೆ ಪೂರ್ಣಾಹುತಿ ಆಯೇಕು, ಹಾಂಗೇ – ಚಾತುರ್ಮಾಸ್ಯ ಮುಕ್ತಾಯ ಆಯೇಕಾದರೆ ಸೀಮೋಲ್ಲಂಘನ ಆಯೇಕು.
ಎರಡು ತಿಂಗಳು ಒಂದೇ ದಿಕ್ಕೆ ಕೂದ ಯತಿಗೊ ವ್ರತ ಪೂರ್ಣ ಆದ ಲೆಕ್ಕಲ್ಲಿ ಆ ವ್ಯಾಪ್ತಿ-ಪರಿಧಿಯ ಮೀರಿ ಹೆರ ಎಲ್ಯಾರು ಒಂದಿಕ್ಕೆ ದೇವರ ದರ್ಶನ ಮಾಡಿದ ಮತ್ತೆ ಮುಕ್ತಾಯ.
ಹಾಂಗೇ ಆತು ಮೊನ್ನೆಯುದೇ – ಬೆಂಗ್ಳೂರಿಂದ ಹೆರ ಓ ಅತ್ಲಾಗಿ ಮಾಗಡಿಲಿ ಇಪ್ಪ ಒಂದು ಹನುಮಂತನ ದೇವಸ್ತಾನಕ್ಕೆ ಹೋಗಿ ಶ್ರೀದರ್ಶನ ಮಾಡಿ ಅಪ್ಪಾಗ ಚಾತುರ್ಮಾಸ್ಯ ಪರಿಸಮಾಪ್ತಿ ಆತು.
ಇಪ್ಪ ವ್ಯಾಪ್ತಿ-ಸೀಮೆಯ ಉಲ್ಲಂಘನ ಮಾಡಿದ ಕಾರಣವೇ ಅದು “ಸೀಮೋಲ್ಲಂಘನ” ಆದ್ಸು.
~
ಇದು ಯತಿಗಳ ಚಾತುರ್ಮಾಸ್ಯಕ್ಕೆ ಮಾಂತ್ರ ಅನ್ವಯ ಅಪ್ಪದಲ್ಲ, ನಮ್ಮ ನಿಜಜೀವನಲ್ಲಿಯೂ ಹಲವೂ ಸರ್ತಿ ಸೀಮೋಲ್ಲಂಘನ ಮಾಡೆಕ್ಕಾವುತ್ತು; ಮಾಡ್ತು.
ಕುಂಞಿ ಬಾಬೆಯ ಸೀಮೆ ತುಂಬ ಸಣ್ಣದು. ಅದರ ಮನುಶಿದ ಹಸೆ ಮಾಂತ್ರ.
ಆದರೆ, ಬೆಣಚ್ಚನ್ನೇ ನೋಡಿ ನೋಡಿ ಬೆಳೆತ್ತ ಬಾಬೆಗೆ ಕ್ರಮೇಣ ಆ ಹಸೆಂದ ಹೆರ ಹೋಯೇಕು – ಹೇದು ಅನುಸುಲೆ ಸುರು ಆವುತ್ತು.
ಅದಕ್ಕಾಗಿ ಮನುಗಿದಲ್ಲೇ ಕವುಂಚುಲೆ ಸುರು ಮಾಡ್ತು..
ಮತ್ತೆ ಪುನಾ ಮೊಗಚ್ಚುತ್ತು, ಪುನಾ ಕವುಂಚುತ್ತು..
ಮತ್ತೆ ಹೊಟ್ಟೆ ಎಳಕ್ಕೊಂಡು ಮುಂದೆ ಮುಂದೆ ಹೋವುತ್ತು..
ಮತ್ತೆ ಉಂಬೆಯ ಹಾಂಗೆ ನಾಲ್ಕು ಕಾಲಿಲಿ ನೆಡವಲೆ ಸುರು ಮಾಡ್ತು..
ಮತ್ತೆ ಎಂತಾರು ಹಿಡುದು ನಿಲ್ಲುತ್ತು..
ಮತ್ತೆ ಕೈ ಬಿಟ್ಟು ನೆಡೆತ್ತು..
ಮತ್ತೆ ಓಡಿ ಓಡಿ – ಇಡೀ ಮನೆ ಒಂದು ಮಾಡ್ತು..
ಇದು ಬಾಬೆಯ ಬೆಳವಣಿಗೆಯ ಹಂತ.
ಪ್ರತಿ ಸರ್ತಿಯೂ – ಅದೊಂದು ಸೀಮೋಲ್ಲಂಘನದ ಹಂತ.
ಪ್ರತಿ ಸೀಮೋಲ್ಲಂಘನವೂ – ಬಾಬೆಯ ಬೆಳವಣಿಗೆಯ ಮೆಟ್ಳು.
ಮತ್ತೆಯೂ ಹಾಂಗೆ – ಲೂಟಿ ಮಾಣಿ ಬೆಳೆಸ್ಸು ಸೀಮೋಲ್ಲಂಘನ ಮಾಡಿಗೊಂಡೇ.
ಬೆಳವ ಬಾಬೆಗೆ ಎಲ್ಲವುದೇ ಕುತೂಹಲಕಾರಿಯಾಗಿ ಕಾಣ್ತು. ಹಾಂಗಾಗಿ ಎಲ್ಲವನ್ನೂ ಹಿಡಿಯೆಕ್ಕು, ಮುಟ್ಟೆಕ್ಕು – ಹೇದು ಕಾಂಬದು.
ಆ ಕುತೂಹಲವೇ ಬಾಬೆಯ ಕಲಿವಿಕೆಯ ಕಾರಣ.
ಹಾಂಗಾಗಿಯೇ ಪ್ರತಿಯೊಂದು ಹೊಸ ಹೊಸ ಬೆಳವಣಿಗೆಯೂ ಸೀಮೋಲ್ಲಂಘನವೇ.
ಮೊಟ್ಟೆಯ ಸೀಮೆ ಒಳಾಂದ ಆ ಕುಂಞಿ ಹೆರ ಬಪ್ಪದು – ಅದೊಂದು ಸೀಮೋಲ್ಲಂಘನ.
ಅಲ್ಲಿಂದ ದೊಡ್ಡ ಆಗಿ ರೆಕ್ಕೆ ಬೆಳೆಶುದು – ಅದೊಂದು ಸೀಮೋಲ್ಲಂಘನ.
ಅದಾದ ಮತ್ತೆ ರೆಕ್ಕೆಯ ಉಪಯೋಗುಸಲೆ ಕಲಿಸ್ಸು – ಅದೂ ಒಂದು ಸೀಮೋಲ್ಲಂಘನ.
ರೆಂಕೆಯ ಬಳಕೆ ಗೊಂತಾದ ಕೂಡ್ಳೇ – ಓ ಅಲ್ಲಿ – ದೂರಕ್ಕೆ ಹಾರಿ ಹೋವುತ್ತಲ್ದ, ಅದುದೇ ಒಂದು ಸೀಮೋಲ್ಲಂಘನವೇ.
~
ಸೀಮೆ ಇಪ್ಪದು ಗುರ್ತಕ್ಕೆ ಮಾಂತ್ರ. ಸೀಮೆ ಇಪ್ಪದೇ ಉಲ್ಲಂಘನೆ ಮಾಡ್ಳೆ – ಹೇಳುಗು ಕೆಲವರ ಮತ.
ಸೀಮೆಯ ದಾಂಟಿರೆ ಜ್ಞಾನ ಸಿಕ್ಕುತ್ತು. ಬೆಳವಣಿಗೆ ಸಿಕ್ಕುತ್ತು. ಆನಂದ ಸಿಕ್ಕುತ್ತು.
ಮೊನ್ನೆ ಗುರುಗೊ ಚಾತುರ್ಮಾಸ್ಯ ಕಳುದ ಮತ್ತೆ ಮಾಡಿದ ಸೀಮೋಲ್ಲಂಘನವೂ ಜ್ಞಾನ, ಆನಂದ, ಬೆಳವಣಿಗೆ, ನೆಮ್ಮದಿ ಸಿಕ್ಕಲೇ ಮಾಡಿದ್ದು.
ಇಪ್ಪತ್ತೆರಡು ಒರಿಶ ಚಾತುರ್ಮಾಸ್ಯ ಮಾಡಿ, ಇದೀಗ ಇಪ್ಪತ್ತ ಮೂರನೇ ಒರಿಶದ ಸಂನ್ಯಾಸ ಆರಂಭ.
ಅಷ್ಟು ಒರಿಶದ ಅನುಭವವವೂ ಒಟ್ಟಾಗಿ ನಮ್ಮ ಸಮಾಜಕ್ಕೇ ಧಾರೆ ಎರೆತ್ತ ಕಾರಣ – ಪ್ರತಿ ಸೀಮೋಲ್ಲಂಘನವೂ ಹೊಸ ಹೊಸ ದೃಷ್ಟಿಕೋನವ ನಮ್ಮ ಸಮಾಜಕ್ಕೆ ಕೊಡ್ಳಿ – ಹೇಳುಸ್ಸು ನಮ್ಮ ಹಾರೈಕೆ.
~
ಸೀಮೆ ಬೇಕು. ಸೀಮೆಯ ಉಲ್ಲಂಘನವೂ ಬೇಕು. ಒಳ್ಳೆ ಕಾರಣಕ್ಕಾಗಿ ಸೀಮೋಲ್ಲಂಘನ ಒಳ್ಳೆದೇ.
ಒಂದೊಪ್ಪ: ಸೀಮೋಲ್ಲಂಘನವೇ ಮಾಡದ್ದರೆ ಹೊಸತ್ತರ ಕಲಿತ್ತೇ ಇಲ್ಲೆ – ಹೇದು ಅರ್ತ.
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
ಸೀಮೋಲ್ಲಂಘನ ವಿಕಾಸಕ್ಕೆ , ಅದರ ಅರಡಿಯದ್ದೆ ಉಲ್ಲಂಘನೆ ಮಾಡಿರೆ ವಿನಾಶಕ್ಕೆ. ಅಲ್ಲದ್ದೆ ಕೂದರೆ ಬಾವಿಯೊಳಾಣ ಕೆಪ್ಪೆ!!
ಶುದ್ದಿಗೊಂದು ಒಪ್ಪ
ಸೀಮೋಲ್ಲಂಘನದ ಬಗೆಲಿ ಶುದ್ದಿ ಲಾಯಕಿತ್ತು.
ಒಂದು ಸೀಮೆಂದ ಮತ್ತೊಂದು ಸೀಮೆಗೆ ಟ್ರಾನ್ಸ್ ಫರ್ ಅಪ್ಪದುದೆ ಸೀಮೋಲ್ಲಂಘನ ಹೇಳ್ಲಕ್ಕಲ್ಲದೊ ? ಈ ಬೇಂಕಿನವಕ್ಕೆ ಟ್ರಾನ್ಸ್ ಫರಿನದ್ದೇ ತಲೆಬೆಶಿಯಿದ. ಹಾಂಗಾಗಿ ಹೇಳಿದೆ ಅಷ್ಟೆ.
ಹುಟ್ಟಿದ ಮಗು ಹೇಂಗೆ ಬೆಳವಣಿಗೆಯ ಒಂದೊಂದು ಹಂತವ ಮೀರುತ್ತಾ, ಕಲಿತ್ತಾ ಹೋವ್ತು ಹೇಳ್ತರ ಸೀಮೋಲ್ಲಂಘನದೊಟ್ಟಿಂಗೆ ಹೋಲುಸಿ ಬರದ್ದು ಲಾಯಿಕ ಆಯಿದು. ಸೀಮೆಯ ಪರಿಧಿ ಒಳದಿಕ್ಕೇ ಇದ್ದರೆ ಬಾವಿಲಿ ಇಪ್ಪ ಕೆಪ್ಪೆಯ ಕತೆ ಆಗಿ ಹೋಕು ಅಲ್ಲದಾ?
ಒಳ್ಳೆದಕ್ಕಾಗಿ ಸೀಮೋಲ್ಲಂಘನ ಎಲ್ಲರ ಜೀವನಲ್ಲಿಯೂ ನೆಡೆತ್ತಾ ಇರಲಿ.