ಬೆಳ್ಳಾರೆಯ ಅನುಪಮ ವೈದ್ಯರು ಅನಿರೀಕ್ಷಿತವಾಗಿ ನಮ್ಮ ಬಿಟ್ಟು ಹೋದ ಪ್ರಸಂಗ ಕೋಡಿಬೈಲು ಬಾವಂಗೆ ಮಾಂತ್ರ ಅಲ್ಲ, ಬೆಳ್ಳಾರೆ ಆಸುಪಾಸಿನ ಎಲ್ಲೋರಿಂಗೂ ಆಘಾತ ಕೊಟ್ಟತ್ತು.
ಮನೆಮನೆಗೆ ಹೋಗಿ ಮದ್ದುಕೊಡ್ತ ಬುಲೆಟ್ಟು ಡಾಗುಟ್ರು ಹೇದರೆ ಎಲ್ಲೋರಿಂಗೂ ಧೈರ್ಯವೇ. “ಪಕ್ಕನೆ ಏನಾರಾದರೂ ತಲೆಬೆಶಿ ಇಲ್ಲೆ, ಡಾಗುಟ್ರು ಬೆಳ್ಳಾರೆಲಿದ್ದವು – ಕಾಲುಗಂಟೆಲಿ ಮನೆಗೆತ್ತುತ್ತವು” ಹೇಳ್ತ ವಿಶ್ವಾಸ ಎಲ್ಲೋರಿಂಗೂ ಇದ್ದತ್ತು. ಈಗ ಆ ಡಾಗುಟ್ರೇ ಕಣ್ಮರೆ ಆದ ಮತ್ತೆ? ಮೈಸೂರಿಲಿ ಎಂಬೀಬೀಯೆಸ್ ಕಲ್ತ ಡಾಗುಟ್ರು ಸೀತ ಬಂದು ನೆಲೆ ಊರಿದ್ದು ಬೆಳ್ಳಾರೆಲಿ.
ಹೆರ ಹೋಗಿದ್ದರೆ ಕೋಟಿಗಟ್ಳೆ ಸಂಪಾಲ್ಸಿ ದೊಡ್ಡ ಜೆನ ಅಪ್ಪಲಾವುತಿತು; ಆದರೆ ಅವು ಊರಿಲೇ ಇದ್ದುಗೊಂಡು ಹಳ್ಳಿಜೀವನಕ್ಕೆ ಅಕ್ಕಾದ ವೈದ್ಯರಾದವು.
ಈಗಾಣ ಯುವ ಪೀಳಿಗೆಯ ಡಾಗುಟ್ರು – ಮನೆಗೆ ಹೋಗಿ ಮದ್ದು ಕೊಡ್ತ ಸಂಪ್ರದಾಯವ ಬಿಟ್ಟಿದವೋದು ಸಂಶಯವೂ ಬತ್ತು! ಮದಲಾಣ ಹಾಂಗೆ ನಿಸ್ಪೃಹ ಸೇವೆ ಈಗಾಣ ವೈದ್ಯರಿಂಗೆ ಮಾಡ್ಳೆಡಿಗೋ?
ಒಟ್ಟಿಲಿ ಹೇಳ್ತರೆ, ಯುವಕರಿಂಗೆ ಸಮಾಜ ಸೇವೆ ಅರಡಿಯೇಕು, ಎಲ್ಲ ಕ್ಷೇತ್ರಲ್ಲಿಪ್ಪ ಯುವಕರೂ ಸಮಾಜಕ್ಕಾಗಿ ಎಂತಾರು ಕೊಡೆಕ್ಕು – ಹೇಳ್ತದು ಕೋಡಿಬೈಲು ಬಾವನ ಅಭಿಪ್ರಾಯ.
~
ಯುವಕರು ಹೇಳುವಾಗ ಬೇರೊಂದು ವಿಶಯ ನೆಂಪಾತು.
ಈ ಒರಿಶ ಒಂದು ವಿಶೇಷವಾದ ಒರಿಶ. ಹೈಂದವ ಸಾರ ಸತ್ವವ ವಿದೇಶಕ್ಕೆ, ಮುಖ್ಯವಾಗಿ ಪಾಶ್ಚಾತ್ಯರಿಂಗೆ ತಿಳುಶಿದ ಮಹನೀಯ ಸ್ವಾಮಿ ವಿವೇಕಾನಂದರು ಹುಟ್ಟಿದ ನೂರೈವತ್ತನೇ ಒರಿಶ!
ದೇಶಕ್ಕೆ ದೇಶವೇ ಇದರ ಒಂದು ಹಬ್ಬದ ಹಾಂಗೆ ಆಚರಣೆ ಮಾಡ್ತ ಸನ್ನಿವೇಶ ಇದ್ದಾಡ.
ಗುಣಾಜೆಮಾಣಿ ಅಂದೇ ಹೇಳಿತ್ತಿದ್ದ° – ಹಾಂಗಿದ್ದು, ಹೀಂಗಿದ್ದು, ಪ್ರಚಾರ ಸಮಿತಿಲಿ ಎನ್ನ ಸೇರ್ಸಿದ್ದವು – ಇತ್ಯಾದಿ ಸಂಗತಿಗೊ.
ಅಂಬಗ ಒಪ್ಪಣ್ಣಂಗೆ ಪಕ್ಕನೆ ತಲಗೆ ಹೋಗದ್ದರೂ – ದೇಶವೇ ಈ ಸಂಗತಿಯ ನೆಂಪುಮಾಡುವಾಗ ನಾವು ಬೈಲಿನೋರು ಅಂತೇ ಕೂದು ಹೊತ್ತು ಕಳದರೆ ಅಕ್ಕೋ?
ಅದೇ ವಿಶಯ ಮಾತಾಡುವೊ°. ಆಗದೋ?
~
ಮಾಷ್ಟ್ರುಮಾವಂಗೆ ವಿವೇಕಾನಂದರ ತತ್ವಾದರ್ಶಂಗೊ ಭಾರೀ ಇಷ್ಟ. ಅವರ ಚಿಂತನೆಗೊ, ಅವು ಮಾಡಿದ ಕಾರ್ಯಂಗೊ, ಅವರ ಜೀವನ ರೇಖೆಯೇ ಇಷ್ಟ.
ವಿವೇಕಾನಂದರು ಲೋಕಗುರು ಆಗಿದ್ದ ಕಾರಣ ಮಾಷ್ಟ್ರುಮಾವಂಗೆ ಅಷ್ಟು ಹತ್ತರೆ ಆದ್ಸೋ ಏನೋ! ಒಟ್ಟಿಲಿ ವಿವೇಕಾನಂದರನ್ನೇ ತುಂಬಾ ಗೌರವ.
ಒಂದೊಂದರಿ ವಿವೇಕಾನಂದರ ಬಗ್ಗೆ ಮಾತಾಡ್ತ ಸಂದರ್ಭ ಬಂದರೆ ವಿವರವಾಗಿ ವಿವರುಸುತ್ತವು.
ಸದ್ಯ ಒಂದರಿ ಸಿಕ್ಕಿಪ್ಪಗಳೂ ವಿವೇಕಾನಂದರ ಬಗ್ಗೆ ಮಾತಾಡುವ ಸಂದರ್ಭ ಬಂತು. ಅಷ್ಟಪ್ಪಗ ಮಾಷ್ಟ್ರುಮಾವ ಹೇಳಿದ ಕೆಲವು ಮಾತುಗೊ ಒಪ್ಪಣ್ಣಂಗೆ ಈಗಳೂ ನೆಂಪಿದ್ದು.
ಮಹಾನ್ ವೆಗ್ತಿಯ ಬಗೆಗೆ ಮಾತಾಡಿದ ಸಂಗತಿ ಆದ ಕಾರಣ ನಿಂಗೊಗೂ ನೆಂಪಿರಳಿ. ಆಗದೋ?
~
ಹತ್ತೊಂಬತ್ತನೇ ಶತಮಾನದ ಕೊನೆಯ ಹಂತಲ್ಲಿ ಹಲವು ಕೆಲವು ಜೆನಂಗೊ ಭಾರತದ ದಿಕ್ಸೂಚಿ ಆಗಿ ಬೆಳಗಿದ್ದವು.
ಅಂತದ್ದರಲ್ಲಿ ವಿವೇಕಾನಂದರು ಒಬ್ಬರಡ. ಬಂಗಾಳಲ್ಲಿ ಹುಟ್ಟಿದ್ದಾದರೂ, ಇಡೀ ದೇಶಕ್ಕೇ, ಮಾಂತ್ರ ಅಲ್ಲ – ಇಡೀ ಲೋಕಕ್ಕೇ ಗುರುಗೊ ಆಗಿ ದಿಗ್ದರ್ಶನ ಮಾಡಿದ ಮಹಾನ್ ವೆಗ್ತಿ ಆಡ.
ಬಾಲ್ಯಂದಲೇ ಸನಾತನ ಧರ್ಮದ ಬಗೆಗೆ ಅಪರಿಮಿತ ಒಲವು ಬೆಳದು ಬಯಿಂದು. ಎಲ್ಲ ಮಕ್ಕಳ ಹಾಂಗೆ ಇವು ಶಾಲಾ ವಿದ್ಯಾಭ್ಯಾಸಕ್ಕೆ ಹೋದರೂ, ಹಿಂದುತ್ವದ ಬಗ್ಗೆ ತುಂಬಿದೊಲವು ಇದ್ದತ್ತಾಡ.
ಇದಕ್ಕೆ ಮುಖ್ಯ ಕಾರಣ ಅವರ ಅಮ್ಮನ ಪ್ರೋತ್ಸಾಹವೇ ಆಗಿಕ್ಕು ಹೇಳ್ತದು ಮಾಷ್ಟ್ರುಮಾವನ ಅಭಿಪ್ರಾಯ.
ಅವರ ವೆಗ್ತಿತ್ವ ಅರ್ತ ಮಾಡಿಗೊಂಬಲೆ ಒಟ್ಟು ನಾಲ್ಕು ಮಜಲುಗೊ ಇದ್ದಾಡ.
~
ಆನಂದ:
ವಿವೇಕಾನಂದರ ಹೆಸರು ಹಾಂಗೆ ಅಪ್ಪ ಮದಲು ನರೇಂದ್ರ ಹೇಳಿ ಇದ್ದದಾಡ.
ಅದೊಂದು ದಿನ ಶಾಲೆಲಿ ಕಲಿತ್ತಾ ಇಪ್ಪಾಗ ಇಂಗ್ಳೀಶಿನ Ecstasy ಹೇಳ್ತ ಶಬ್ದ ಬಂತಾಡ. ಅದರ ಅರ್ಥ ಎಂತರ ಹೇದು ಮಾಷ್ಟ್ರ ವಿವರುಸುವಾಗ, ಸಂತೋಷಂದಲೂ ಮೇಗಾಣ ಆತ್ಮಾನಂದ – ಹೇಳಿದವಾಡ.
ಆದರೆ ಈ ಮಾಣಿಗೆ ಅಷ್ಟೇ ಹೇದರೆ ಸಾಕಾವುತ್ತೋ? ಇಲ್ಲೆ. ಮತ್ತೆ ಮತ್ತೆ ತೊಳಚ್ಚಿದ ಈ ಮಾಣಿಯ ಸಮಾದಾನ ಮಾಡುಸಲೆ – “ಆತ್ಮಾನಂದದ ಸರಿಯಾದ ಅರ್ಥ ತಿಳಿಯೇಕಾರೆ ಓ ಆ ದೇವಸ್ಥಾನದ ಪೂಜೆಬಟ್ರತ್ರೆ ಕೇಳೇಕು” ಹೇಳಿದವಾಡ.
ಹೆಸರೇ ಇಲ್ಲದ್ದ ಒಬ್ಬ ಪೂಜೆಬಟ್ರು ಇಂತಾ ಕ್ಲಿಷ್ಟ ಶಬ್ದವ ತಿಳಿಶುದೋ? ಸಂಶಯ ಬಂತು; ಅಂದರೂ – ಹೋಗಿ ಕಂಡು ಬಪ್ಪಲೆ ಹೆರಟನಾಡ.
ಮನೆ ಮಟ್ಟಿಂಗೇ ಇಪ್ಪಾಗ ರಂಗಮಾವ ಹೇಂಗಿರ್ತವು – ಒಂದು ಹದಾ ಒಸ್ತ್ರ ಸುತ್ತಿಗೊಂಡು, ಒಂದು ಮಣ್ಣಿಡ್ಕಟೆ ತೋರ್ತು ಹೊದಕ್ಕೊಂಡು – ಹಾಂಗೇ ಇಪ್ಪ ಪೂಜೆಬಟ್ರ ಕಂಡನಾಡ.
ರಾಮಕೃಷ್ಣ ಹೇದು ಅವರ ಹೆಸರು. ಅವರ ಹತ್ತರೆ ಮಾತಾಡ್ಳೆ ಸುರುಮಾಡಿ ಅಪ್ಪದ್ದೇ, ನರೇಂದ್ರಂಗೆ ಅಭೂತಾನುಭವ ಅಪ್ಪಲೆ ಸುರು ಆಗಿ, ಮುಂದಕ್ಕೆ ಅವ್ವೇ ಗುರು ಆಗಿ ನಿಂದವಾಡ.
ಅವ್ವೇ ಗುರು ರಾಮಕೃಷ್ಣ ಪರಮಹಂಸರು!!
ಆತ್ಮಾನಂದ ಹೇಳ್ತ ಶಬ್ದಂದಾಗಿ ನರೇಂದ್ರಂಗೆ ರಾಮಕೃಷ್ಣ ಗುರುಗೊ ಸಿಕ್ಕಿದವು; ರಾಮಕೃಷ್ಣ ಪರಮಹಂಸರಿಂಗೆ ವಿವೇಕಾನಂದ ಸಿಕ್ಕಿದ°! ಅಲ್ದೋ?
ಅಪ್ಪಪ್ಪು ಹೇಳುಗು ನಮ್ಮ ಬೈಲಿನ ರಾಮಕೃಷ್ಣ ಭಟ್ರು!! ಅದಿರಳಿ.
ಅಂತೂ – ಜೀವನದ ಉದ್ದಕ್ಕೂ ಆತ್ಮಾನಂದಲ್ಲೇ ಬದ್ಕಿದ ಮಹಾಸಂತ ವಿವೇಕಾನಂದ. ಆ ಆನಂದಂದಾಗಿಯೇ ಅವಕ್ಕೆ ಅಷ್ಟು ಆತ್ಮಶೆಗ್ತಿ ಬಂದದು, ಅಷ್ಟೊಂದು ಸುಧೃಢ ಕಾಯ ಬಂದದು ಹೇಳ್ತದು ಮಾಷ್ಟ್ರುಮಾವನ ಅಭಿಪ್ರಾಯ!
ಅವರ ಗುರುಗೊ ರಾಮಕೃಷ್ಣ ಪರಮಹಂಸರು ಸ್ವಾನುಭವಂದ, ಸ್ವಾಧ್ಯಾಯಂದ ಸಂಪಾಲುಸಿದ ದೈವೀ ಶೆಗ್ತಿಯ ಹಾಂಗೇ ವಿವೇಕಾನಂದರಿಂಗೆ ಧಾರೆ ಎರದ್ದವಾಡ!
ಗುರುಗಳ ದಾರಿಲೇ ಸರಿಯಾಗಿ ನೆಡದು ವಿವೇಕಾನಂದರು ಅತ್ಯುತ್ತಮ ಶಿಷ್ಯರು ಹೇಳಿಯೂ ತೋರ್ಸಿದ್ದವಾಡ! ಅಂತಾ – ಗುರು ಶಿಷ್ಯರ ಸಮಾಗಮವ ನೋಡ್ತದೇ ಒಂದು ಆನಂದ ಹೇಳ್ತವು ಮಾಷ್ಟ್ರುಮಾವ°.
~
ವಿವೇಕ:
ಯೇವಾಗಳೂ ಆನಂದವೇ ಇರೆಕು ಹೇದು ಧರ್ಮದಾರಿಯ ಮರದರೆ ಅಕ್ಕೋ? ಆಗ! ಮಾಡ್ತ ಕಾರ್ಯಲ್ಲಿ ವಿವೇಚನೆ ಬೇಕು, ವಿವೇಕ ಬೇಕು.
ಹೆಸರಿಲೇ ವಿವೇಕವ ತುಂಬುಸಿಗೊಂಡ ಮಹಾಶೆಗ್ತಿ, ಹೆಸರಿಂಗೆ ತಕ್ಕವೇ ಬದ್ಕಿದ್ದವಾಡ. ಬದ್ಕಿದ್ದದು ಕೇವಲ ಮೂವತ್ತೊಂಭತ್ತು ಒರಿಶವೇ ಆದರೂ – ಆ ಸಮಯಲ್ಲಿ ಸಾಧುಸಿದ್ದು ಅನೇಕ.
ಹಿಂದೂ ಧರ್ಮದ ಆಳ ವಿಸ್ತಾರವ ಕಲ್ತುಗೊಂಬಲೆ ವಿವೇಕ ಬೇಡದೋ?
ಧರ್ಮದ ಆಂತರ್ಯದ ಕ್ಲಿಷ್ಟ ವಿಚಾರಂಗಳ ಅರ್ಥಮಾಡ್ಳೆ ವಿವೇಕ ಬೇಡದೋ?
ಆ ಸಾರವ ಲೋಕಕ್ಕೆ ಹರಡೇಕಾರೆ ವಿವೇಕ ಬೇಡದೋ? ಬೇಕೇಬೇಕು.
ಒಪ್ಪಣ್ಣ ಸಣ್ಣ ಇಪ್ಪಾಗಳೇ ಮಾಷ್ಟ್ರುಮಾವ° ಒಂದು ಕತೆ ಹೇಳುಗು. ವಿವೇಕಾನಂದರು ಕಾವಿ ಒಸ್ತ್ರವ ಸುತ್ತಿಗೊಂಡು, ಮೈಮೇಲೆ ಎಲ್ಲ ಹೊದ್ದುಗೊಂಡು – ಹೇಂಗೆ?
ನಮ್ಮ ಸುಭಗಣ್ಣನ ಹಾಂಗೆ ಮಡಿಕ್ಕೆ ಶಾಲು ಹೊದ್ದುಗೊಂಡದಲ್ಲ – ಕಾವಿ ಒಸ್ತ್ರವ ಮೈಮೇಲೆ ಎಲ್ಲ ಹೊದ್ದುಗೊಂಡ ಈ ಸನ್ಯಾಸಿ ಅಮೇರಿಕಕ್ಕೆ ಹೋದವಾಡ.
ಅಷ್ಟಪ್ಪಗ ಅಲ್ಯಾಣೋರಿಂಗೆ ಹಿಂದೂಧರ್ಮವ ಅಷ್ಟಾಗಿ ಆರಿಂಗೂ ಗುರ್ತ ಇಲ್ಲೆ. ಗುರ್ತ ಇದ್ದರೂ ವಿವರ ಗೊಂತಿತ್ತಿಲ್ಲೆ. ಅಂತಾ ಸಂದರ್ಭಲ್ಲಿ ಈ ಗೋಸಾಯಿ ಆರು ಬಂದದಪ್ಪಾ ಹೇದು ಎಲ್ಲೋರುದೇ ಓರೆಗಣ್ಣಿಲಿ ನೋಡಿದವಾಡ.
ಲೋಕದ ಎಲ್ಲಾ ಧರ್ಮದ ವೆಗ್ತಿಗೊ ಅಲ್ಲಿ ಮಾತಾಡ್ಲಕ್ಕಾದ ಸಮ್ಮೇಳನ ಅದು. ಚಿಕಾಗೊ ಹೇಳ್ತ ಊರಿಲಿ ನೆಡದ್ಸು. ಎಷ್ಟಪ್ಪಾ ಇಸವಿ – ಅದೊಂದು ಒಪ್ಪಣ್ಣಂಗೆ ಸಮಗಟ್ಟು ನೆಂಪೊಳಿವಲಿಲ್ಲೆ; ಮಾಷ್ಟ್ರುಮಾವ ಹೇಳಿತ್ತಿದ್ದವು, ಮರದತ್ತು. ಅದಿರಳಿ.
ಆ ಸಮ್ಮೇಳನಲ್ಲಿ ನಮ್ಮ ಧರ್ಮದ ಬಗ್ಗೆ ಮಾತಾಡೇಕಾದ ಸಂದರ್ಭ ಬಂತು. ಮಾತಾಡ್ಳೆ ಸಿಕ್ಕಿದ್ದೇ ಕಡಮ್ಮೆ ಹೊತ್ತು. ಅಲ್ಲೆಲ್ಲ ಗಂಟೆಗಟ್ಳೆ ಮಾತಾಡ್ತೇನೆ ಹೇದರೆ ಮೈಕ್ಕವೂ ಸಿಕ್ಕುತ್ತಿಲ್ಲೆ – ಅಷ್ಟುಮಾತಾಡಿರೆ ಕೇಳುವೋರೂ ಇಲ್ಲೆ!
ಕೇವಲ ನಾಕೇ ನಾಕು ನಿಮಿಷ ಮಾತಾಡಿ – ಹೇಳಿ ಮೈಕ್ಕ ಕೊಟ್ಟವಾಡ. ಹ್ಮ್, ಈ ಕೇಸರಿ ಒಸ್ತ್ರ ಮೈಮೇಲೆ ಪೂರ ಸೊರುಗಿಂಡ ಗೋಸಾಯಿ ಎಂತರ ಮಾತಾಡುಸ್ಸು – ಹೇದು ಅಲ್ಯಾಣೋರು ಕೈಲಿದ್ದ ಪೇಪರು ಓದಲೋ – ಎಂತೆಲ್ಲ ಸುರುಮಾಡಿದವಾಡ ಕೆಲವು ಜೆನ. ಆದರೆ, ಮೈಕ್ಕದ ಎದುರು ಬಂದು “ಸಹೋದರ ಸಹೋದರಿಗಳೇ…” ಹೇದು ಭಾಷಣ ಸುರು ಮಾಡಿಅಪ್ಪದ್ದೇ, ಎಲ್ಲೋರುದೇ ಚೆಲ, ಇದಾರಪ್ಪಾ – ವೇದಿಕೆಲಿ ನಿಂದುಗೊಂಡು, ಸೇರಿದ ಎಲ್ಲೋರನ್ನೂ ಸಾಹೋದರ್ಯ ಭಾವಲ್ಲಿ ಕಾಂಬ ಆಶ್ಚರ್ಯದ ಜೆನ! – ಹೇದು ಗ್ರೇಶಿಂಡವಾಡ. ಓದಲೆ ತೆಗದ ಪೇಪರು ಹಾಂಗೇ ಅಡಿಯಂಗೆ ಹೋತು.
ರಕ್ತಸಂಬಂಧವೇ ಇಲ್ಲದ್ದ ಈ ಜೆನ ನಮ್ಮೆಲ್ಲರನ್ನೂ ಅಣ್ಣ-ತಮ್ಮ-ಅಕ್ಕ-ತಂಗೆಯ ಹಾಂಗೆ ಕಂಡ ಅಲ್ಲದೋ – ಹೇದು ಎಲ್ಲೋರಿಂಗೂ ಕೊಶಿ ಆತು.
ಆ ಕೊಶಿಲೇ, ಎಂತ ಮಾಡೇಕು ಹೇದು ಅರಡಿಯದ್ದೆ ಪಟಪಟನೆ ಚೆಪ್ಪಾಳೆ ತಟ್ಟಿಂಡು ಕೂದವಾಡ, ಗೋಸಾಯಿಗೊ!
ಕಂಚಿನ ಕಂಠದ ನಿರರ್ಗಳ ಮಾತು ಚಪ್ಪಾಳೆಯ ಎಡೆಲಿಯೂ ಮುಂದುವರುದತ್ತು. ಅಲ್ಯಾಣೋರಿಂಗೂ ಹಿಂದೂ ಧರ್ಮದ ಆಂತರಿಕ ಸಾರ, ಮೌಲ್ಯಂಗಳ ತಿಳಿಶಿದವಾಡ. ಸಿಕ್ಕಿದ ಆ ಕಡಮ್ಮೆ ಹೊತ್ತಿನ ಎಡೆಲಿ ಅತ್ಯಂತ ಚೆಂದಕೆ, ಎಲ್ಲೋರ ಮನಸ್ಸು ಮುಟ್ಟುವ ಹಾಂಗೆ, ಗಮನವ ಎಳದು ಮಡಿಕ್ಕೊಂಬ ಹಾಂಗೆ ಮಾತಾಡ್ತ ವಿವೇಚನೆ ವಿವೇಕಾನಂದರಿಂಗೇ ಇದ್ದದು!
ಅದಕ್ಕೇ ಅವರ ವಿವೇಕ ಇಪ್ಪ ಸ್ವಾಮಿಗೊ ಹೇಳ್ತದು ಕೆಲವು ಜೆನಂಗೊ.
~
ಸನ್ಯಾಸ:
ನರೇಂದ್ರರ ಬಾಲ್ಯಲ್ಲೇ ಅಸಾಧಾರಣ ಬುದ್ಧಿಮತ್ತೆಯ ಕಂಡಿದವಾಡ ಮನೆಯೋರು. ಮುಂದೆ ಅದೇ ಬುದ್ಧಿಮತ್ತೆಯೇ ಅವಕ್ಕೆ ಕಲಿಯುವಿಕೆಗೆ ಸಹಕಾರಿ ಆದ್ಸು. ಯೇವದರ? ಕ್ಲಾಸಿಲಿ ಕಲಿಶುತ್ತರ ಮಾಂತ್ರ ಅಲ್ಲ, ಇನ್ನೂ ಹೆಚ್ಚಿಂದರ.
ಆ ಕಾಲಲ್ಲೇ ಡಿಗ್ರಿ ಓದಿದ ಮಹಾ ವಿದ್ಯಾವಂತ ಜೆನ ಆಗಿ ಸಾಹಿತ್ಯಲ್ಲಿ ಜ್ಞಾನ ಇದ್ದರೂ, ಆಸಕ್ತಿ ಬೆಳದ್ದು ಆಧ್ಯಾತ್ಮಲ್ಲೇ ತಲ್ಲೀನ ಆದನಾಡ.
ರಾಮಕೃಷ್ಣ ಪರಮಹಂಸರ ಪರಿಚಯ ಆದ ಮತ್ತೆ ಅಂತೂ – ಜೀವನದ ದಿಕ್ಕೇ ಬದಲಿತ್ತು.
ಆನಂದ – ಆತ್ಮಾನಂದ – ಪರಮಾನಂದ ಹೇದು ಜೀವನಲ್ಲಿ ಬಂಧವೇ ಇಲ್ಲದ್ದ ದೈವತ್ವವ ಹುಡ್ಕುತ್ತ ಮನಸ್ಸಾಗಿಬಿಟ್ಟತ್ತು. ರಾಮಕೃಷ್ಣರ ಮಾರ್ಗದರ್ಶನಲ್ಲಿ, ಗುರು-ಕರ-ಕಮಲ-ಸಂಜಾತರಾಗಿ ಭಗವದ್ಗೀತೆ, ಯೋಗ, ಪುರಾಣಂಗಳ ಮೇಗೆ ಹಿಡಿತ ಸಾಧನೆ ಆರಂಭ ಆತು. ತನ್ನ ಜೀವನ ಹಿಂದುತ್ವ, ಈ ನೆಲದ ಸಂಸ್ಕಾರಕ್ಕೇ ಇಪ್ಪದು ಹೇಳ್ತ ಸಂಗತಿ ನಿಗಂಟು ಆತು. ಹತ್ತು ಹಲವು ಸಹಪಾಠಿಗಳ ಒಟ್ಟಿಂಗೆ ರಾಮಕೃಷ್ಣ ಗುರುಗಳ ಆಶ್ರಮಲ್ಲಿ ಅಧ್ಯಯನ ಸಾಂಗವಾಗಿ ನೆಡದತ್ತು.
ಮುಂದೆ ರಾಮಕೃಷ್ಣರು ತೀರಿಗೊಂಡ ಮೇಗೆ ಅಂತೂ – ಸಹಪಾಠಿಗೊಕ್ಕೆ ಬೇರೆ ದಿಕ್ಕೇ ಇಲ್ಲೆ – ಹೇಳ್ತ ಹಾಂಗೆ ಆತು.
ಕೆಲವು ಜೆನ ಮಕ್ಕೊ ಒಪಾಸು ಮನೆಗೆ ಹೋಗಿ ಸಂಸಾರದ ರುಚಿ ಅರ್ತುಗೊಂಡು ತೋವೆ ಸಾಂಬಾರು ದಾಸನಸಾರು ಉಂಡುಗೊಂಡು ಗೃಹಸ್ಥಾಶ್ರಮಲ್ಲಿ ಬದ್ಕಿದವು. ಆದರೆ ನರೇಂದ್ರರ ಮನಸ್ಸು ಅದಾಗಲೇ ವೈರಾಗ್ಯವ ಅಪ್ಪಿಗೊಂಡಾಗಿತ್ತು.
ಒಪಾಸು ಗೃಹಸ್ಥ ಜೀವನಕ್ಕೆ ಹೋಪಲಿಲ್ಲೆ ಹೇಳ್ತ ಧೃಡ ಸಂಕಲ್ಪದ ಒಟ್ಟಿಮ್ಗೆ – ವಿಭಿದಿಶಾನಂದ ಹೇಳ್ತ ನಾಮಾಂಕಿತರಾಗಿ ಸನ್ಯಾಸಿಗೊ ಆದವಾಡ.
ಮುಂದೆ ಖೇತ್ರಿಯ ಮಹಾರಾಜರು ಅವಕ್ಕೆ “ವಿವೇಕಾನಂದ” ಹೇಳ್ತ ನಾಮಾಂಕಿತವ ಮಡಗಿದವಾಡ.
ಹಾಂಗೊಬ್ಬ ವೀರ ಸನ್ಯಾಸಿ ವಿವೇಕಾನಂದರ ಉದಯ ಆತು.
~
ಹೊಸತನ:
ಸನ್ಯಾಸ ಸ್ವೀಕಾರ ಮಾಡಿದಲ್ಲಿಗೇ ಅವರ ಸಾಹಸ ನಿಂದಿದ್ದರೆ – ಭಾರತ ದೇಶದ ಎಷ್ಟೋ ಸನ್ಯಾಸಿಗಳ ಪೈಕಿ ಇವುದೇ ಒಬ್ಬರು ಹೇಳ್ತ ಹಾಂಗೆ ಆಗಿಹೋವುತಿತವು.
ಆದರೆ, ಇವು ಹಾಂಗೆ ಅಲ್ಲೇ ಬಾಕಿ ಆಯಿದವಿಲ್ಲೆ – ನಿತ್ಯ ಹೊಸತನಕ್ಕೆ ಹರಿವ ನೀರಿನ ಹಾಂಗೆ ಆಗಿತ್ತಿದ್ದವು. ಆಂತರ್ಯಲ್ಲಿ ಸನ್ಯಾಸ ಇದ್ದರೂ ಆಧುನಿಕತೆಗೆ ಒಗ್ಗಿಗೊಂಡು ಬದ್ಕಿದವು ವಿವೇಕಾನಂದರು.
ಸಮಾಜದ ಮೇಲು-ಕೀಳು ಇತ್ಯಾದಿಗಳ ದೂರೀಕರುಸಲೆ ಸುರು ಮಾಡಿದವು; ಹಲವು ಸಾಮಾಜಿಕ ಚಿಂತಕರಿಂಗೆ ಇದರ ಬಗ್ಗೆ ತಿಳಿವಳಿಕೆ ಹೇಳಿದವು. ಹಿಂದೂ ಸಮಾಜ ಒಂದಾಗಿ ಬಾಳುಲೆ ಕಾರಣರಾದವು.
ವೇದದ ಸಾರ ನಮ್ಮ ಹತ್ತರೆ ಮಾಂತ್ರ ಇಪ್ಪದಲ್ಲ, ಆಸಕ್ತ ಎಲ್ಲೋರಿಂಗೂ ಸಿಕ್ಕುತ್ತ ಹಾಂಗೆ ಆಯೇಕು, ಎಲ್ಲೋರುದೇ ಅದರ ಕಲಿಯೇಕು ಹೇಳ್ತ ಆಶೆ ಅವರದ್ದಾಗಿತ್ತು; ಹಾಂಗಾಗಿ ಇಂಗ್ಳೀಶ್ ಮಾಧ್ಯಮಲ್ಲಿ ವೇದಸಾರಂಗಳ ಲೋಕೋತ್ತರ ಮಾಡಿದವು.
ಭಾರತಲ್ಲಿ ಸಂಚಾರ ಮಾಡಿ ಹಲವು ವಿದ್ವಾಂಸರ, ರಾಜರುಗಳ, ಒಯಿವಾಟುಗಾರಂಗಳ ಭೇಟಿಮಾಡಿಗೊಂಡು ಲೋಕಹಿತದ ಕಾರ್ಯಂಗಳ ಅವರ ಕೈಂದ ಮಾಡುಸಿದ್ದವು.
(ಒಂದರಿ ಟಾಟಾ ಕಂಪೆನಿಯ ಟಾಟಾನ ಹತ್ತರೆ ಮಾತಾಡಿ ಟಾಟಾ ಮಾಡ್ತ ಮದಲು ಒಂದು ಸಂಗತಿ ಹೇಳಿದವಾಡ- ಭಾರತಲ್ಲಿ ವೈಜ್ಞಾನಿಕ ವಿಶಯಂಗಳಲ್ಲಿ ಉನ್ನತ ಶಿಕ್ಷಣಕ್ಕೆ ಅಪ್ಪ ಹಾಂಗೆ ಒಂದು ಸಂಸ್ಥೆಯ ಮಾಡಿರೆ ಒಳ್ಳೆದು – ಹೇಳ್ತ ಸೂಚನೆ ಕೊಟ್ಟವಾಡ. ಮುಂದೆ ಇದೇ ಸಲಹೆಂದಾಗಿ ಬೆಂಗ್ಳೂರಿಲಿ ಟಿ.ಐ.ಎಪ್.ಆರ್ / ಐ.ಐ.ಎಸ್.ಸಿ ಬಂತಾಡ.) ಹೀಂಗೇ ಇನ್ನೂ ಅನೇಕಾನೇಕ ಸಂಗತಿಗೊ.
ಸಮುದ್ರ ದಾಂಟಿ ಹೋಪಲಾಗ, ಹಾಂಗೆ ಹೀಂಗೆ- ಹೇಳಿ ನಮ್ಮದರ್ಲಿದ್ದ ಹಲವು ಆಚಾರಂಗಳ ಮೆಟ್ಟಿನಿಂದು ಭಾರತೀಯತೆಯ ಭಾರತದ ಸೀಮೆಂದಲೂ ಹೆರಾಂಗೆ ವಿಸ್ತರಿಸಿದವು.
ಚಿಕಾಗೋಕ್ಕೆ ಹೋಗಿ ಸರ್ವಧರ್ಮ ಸಮ್ಮೇಳನಲ್ಲಿ ನಮ್ಮ ಹಿರಿಮೆಯ ಹೇಳಿದವು. ಚಿಕಾಗೊಲ್ಲಿ ಅವರ ಗುರ್ತ ಆದ ಹಲವು ಜೆನ ಎಂಗಳಲ್ಲಿಗೆ ಬನ್ನಿ, ಎಂಗಳಲ್ಲಿಗೆ ಬನ್ನಿ – ಹೇದು ಸಾಲುಗಟ್ಟಿದವಾಡ, ಅವರೆಲ್ಲರ ಆಹ್ವಾನವನ್ನೂ ಸ್ವೀಕಾರ ಮಾಡಿಗೊಂಡು, ಎಲ್ಲೋರನ್ನೂ ಭೇಟಿ ಆಗಿ, ಅವಕ್ಕೆ ನಮ್ಮತ್ವದ ಸಾರವ ತಿಳಿಶುತ್ತ ಸಣ್ಣ ಸಣ್ಣ ಭಾಷಣಂಗಳ ಮಾಡಿದವಾಡ. ವಿವೇಕಾನಂದರ ಮೂಲಕ ವಿಶ್ವವೇ ನಮ್ಮ ಸಂಸ್ಕೃತಿಯ ತೂಕವ ತಿಳಿವ ಹಾಂಗಾತು.
ಸಮುದ್ರೋಲ್ಲಂಘನ ಮಾಡ್ಳಾಗ ಹೇದು ಸರ್ವಧರ್ಮ ಸಮ್ಮೇಳನಕ್ಕೆ ಇವು ಹೋಗದ್ದೆ ಇದ್ದಿದ್ದರೆ ಎಂತಾವುತಿತು? ಹಿಂದೂ ಧರ್ಮದ ಬಗ್ಗೆ ಜೆನರಿಂಗೆ ಅರಿವೇ ಬತ್ತಿತಿಲ್ಲೆ. ಆಫ್ರಿಕಾದ ಕಾಡು ಜೆನಂಗಳ ಹಾಂಗೇ ಇನ್ನೊಂದು ಸಮುದಾಯ ಭಾರತೀಯರು ಹೇಳ್ತ ತಿಳಿವಳಿಕೆ ಎಲ್ಲೋರಿಂಗೂ ಇರ್ತಿತು! ಇವು ಹೋಗಿ ನಮ್ಮ ಹಿಮಾಲಯ, ವೇದ, ಋಷಿಗೊ, ಆಧ್ಯಾತ್ಮ – ಇದೆಲ್ಲದರ ತಿಳಿಶಿದ ಕಾರಣ ಅವಕ್ಕೆ ಹೋ, ಹೀಂಗೊಂದಿದ್ದಾ ಹೇಳ್ತದು ಅರಡಿಗಾದ್ಸು! ಅಲ್ಲದೋ?
ಮಾಷ್ಟ್ರುಮಾವನ ಅಭಿಪ್ರಾಯವೇ ನಮ್ಮ ಅಭಿಪ್ರಾಯವು.
ಕನ್ಯಾಕುಮಾರಿಯ ಸಮುದ್ರ ಕೊಡಿಂದ ಮುಂದೆ ಇದ್ದಿದ್ದ ಒಂದು ಬಂಡೆಕಲ್ಲಿಲಿ ಧ್ಯಾನ ಮಾಡ್ತದು ವಿವೇಕಾನಂದರ ಅತಿ ಪ್ರಿಯ ಸಂಗತಿ ಆಡ. ಕಡಲಕರೆಂಗೆ ಹೋಗಿ ದುಳುಂಕನೆ ನೀರಿಂಗೆ ಹಾರಿತ್ತು, ಸೀತ ಈಜಿಂಡೇ ಆ ಬಂಡೆಕಲ್ಲಿಂಗೆ ಹೋತು. ಪುನಾ ಅಲ್ಲಿಂದ ಈಜಿಂಡೇ ಬಂತು, ಭರತಭೂಮಿಯ ಬಂದು ಮುಟ್ಟಿತ್ತು. ಸಮುದ್ರದ ಅಲೆಗಳ ಎದುರಿಸಿ ಈಜಿಂಡು ಹೋಪೆ ಹೇಳ್ತ ಆತ್ಮವಿಶ್ವಾಸ ಎಷ್ಟು ಜೆನಕ್ಕೆ ಇದ್ದು? ಈಗಾಣ ಯುವ ನೇತಾರರ ಒಂದರಿ ನೀರಿಂಗೆ ಹೊತ್ತಾಕಿ ನೋಡಿ ಬೇಕಾರೆ! 😉
~
ಒಟ್ಟಿಲಿ ಹೇಳ್ತರೆ, ಹೊಸತನ, ಸನ್ಯಾಸ, ವಿವೇಕ, ಆನಂದ- ಇದೆಲ್ಲದರ ಸಮ್ಮಿಶ್ರಣವೇ ವಿವೇಕಾನಂದ.
ಅವರಿಂದಾಗಿ ಭಾರತೀಯ ಸಂಸ್ಕೃತಿಗೆ ಎಂತ ಉಪಕಾರ ಆಯಿದು ಹೇದು ಗೊಂತಾಯೇಕಾರೆ, ಅವಿಲ್ಲದ್ದರೆ ಎಂತೆಲ್ಲ ನೆಡೆತ್ತಿತಿಲ್ಲೆ- ಹೇಳ್ತದರ ಅರ್ಥಮಾಡಿಗೊಂಡ್ರೆ ಗೊಂತಕ್ಕು. ಇಂತಾ ಶ್ರೇಷ್ಟ ವೆಗ್ತಿತ್ವಕ್ಕೆ ಗೌರವ ಕೊಡ್ತ ಲೆಕ್ಕಲ್ಲಿ ನಮ್ಮ ಊರಿಲಿ ರಾಮಜ್ಜ, ಮತ್ತಿತರರು ಸೇರಿ ಮಾಡ್ತ ಕೋಲೇಜಿಂಗೆ ಅವರ ಹೆಸರನ್ನೇ ಮಡಗಿದವಾಡ. ವಿವೇಕಾನಂದ ಕೋಲೇಜು ಹೇಳ್ತದು ಈಗ ದೇಶಪ್ರಸ್ತಿದ್ಧಿ ಆಯಿದು. ಯುವಕರ ಆದರ್ಶಮೂರ್ತಿಯಾದ, ಭಾರತೀಯ ಸಂಸ್ಕೃತಿಯ ಪುನರ್ದ್ರಷ್ಟಾರರಾದ ವಿವೇಕಾನಂದರ ಹೆಸರು ಹೊತ್ತು ಆ ಮಹಾಮೂರ್ತಿಗೂ ಗೌರವ ಕೊಟ್ಟಿದು, ಕೋಲೇಜುದೇ ಗೌರವ ಪಡಕ್ಕೊಂಡಿದು. ಬೌಶ್ಷ ಇದೇ ಕಾರಣಕ್ಕೇಯೋ ಏನೋ – ಮನೆಯ ಎಲ್ಲೋರನ್ನುದೇ ಅದೇ ಕೋಲೇಜಿಂಗೆ ಕಳುಗಿದ್ದು ಮಾಷ್ಟ್ರುಮಾವ!!
~
ಅದೇನೇ ಇರಳಿ, ಆ ಮಹಾಮೂರ್ತಿಯ ಅವತಾರ ಆಗಿ ಇದು ನೂರ ಐವತ್ತನೇ ಒರಿಶ ಆಡ.
ನಮ್ಮ ಸಮಾಜದ ಸಮಸ್ಯೆಗಳ ದೂರೀಕರುಸಲೆ ಗುರುಗೊ ಆಗಿ,
ಸಮಾಜದ ಉತ್ತರೋತ್ತರ ಅಭಿವೃದ್ಧಿಗೆ ಮಾರ್ಗದರ್ಶಕ ಆಗಿ,
ಬ್ರಿಟಿಷರ ವಿರುದ್ಧ ಹೋರಾಡ್ಳೆ ಆತ್ಮವಿಶ್ವಾಸವ ತುಂಬಿ,
ಯುವ ಭಾರತದ ನೇತಾರ ಆಗಿ ಬೆಳದ ಆ ಮಹಾ ಚೈತನ್ಯಕ್ಕೆ ಒಂದು ನಮಸ್ಕಾರ ಮಾಡಿಕ್ಕುವೊ.
ಕನಿಷ್ಟ ಅಷ್ಟಾದರೂ ಮಾಡದ್ದರೆ – ನಮ್ಮ ಬಾರತಮಾತೆಗೆ ಖಂಡಿತಾ ಬೇಜಾರಕ್ಕು!
ವಿವೇಕಾನಂದರ ಆನಂದ, ಆವೇಶ, ವಿವೇಕ, ಸಮರ್ಪಣಾ ಭಾವ, ವೈರಾಗ್ಯ, ಹೊಸತನದ ಕುತೂಹಲ – ನಮ್ಮೆಲ್ಲರಿಂಗೂ ಬರಳಿ. ಹೊಸ ಭಾರತದೇಶ ಕಟ್ಟುಲೆ ಶೆಗ್ತಿಯ ಆ ವಿವೇಕಾನಂದರೇ ಕೊಡ್ಳಿ ಹೇಳ್ತದು ಒಪ್ಪಣ್ಣನ ಆಶಯ.
~
ಒಂದೊಪ್ಪ: ದೇಶಕ್ಕೇ ಆತ್ಮವಿಶ್ವಾಸ ತುಂಬಿದ ಧೀರ ಸನ್ಯಾಸಿಯ ಮರದರೆ ಆತ್ಮವಿಶ್ವಾಸವನ್ನೇ ಮರದ ಹಾಂಗೆ.
~
ಸೂ:
- ವಿವೇಕಾನಂದರ ಬಗ್ಗೆ ಇನ್ನಷ್ಟು ಮಾಹಿತಿ, ಸಂಗತಿ, ಶುದ್ದಿಗೊ ಇಲ್ಲಿದ್ದು:
- ನೂರ ಐವತ್ತನೇ ಜನ್ಮದಿನಾಚರಣೆಯ ಕುರಿತಾದ ವೆಬ್-ಸೈಟು ವಿವರ ಇಲ್ಲಿದ್ದು:
- ಬೈಲು: http://vivek150.org
- ಮೋರೆಪುಟ: www.facebook.com/vivek150.
official - ಟ್ವಿಟ್ಟರು: www.twitter.com/vivek_150
- ಈ ಆಚರಣೆಲಿ ಎಲ್ಲೋರುದೇ ಸೇರಿ ಕೈಜೋಡುಸೇಕಡ, ಗುಣಾಜೆಮಾಣಿ ಪ್ರತ್ಯೇಕ ಹೇಳಿಕೆ ಹೇಳಿದ್ದ°.
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
ಲಾಯಿಕ ಶುದ್ದಿ , ಲಾಯಿಕಾಯಿದು ಬರದ್ದು. ಒಪ್ಪಣ್ಣಂಗೆ ಒಪ್ಪಂಗೊ
ಎಲ್ಲೋರಿಂಗೂ ಆದರ್ಶಪ್ರಾಯರಾದ ವಿವೇಕಾನಂದರ ಬಗೆಲಿ ಒಪ್ಪಣ್ಣನ ಶೈಲಿಲಿ ಬಂದ ಶುದ್ದಿ ಲಾಯಕಿತ್ತು. ಆ ದಿವ್ಯ ಚೇತನಕ್ಕೆ ನಮೋ ನಮಃ . ಸಂದರ್ಭೋಚಿತ ಲೇಖನ. ಧನ್ಯವಾದಂಗೊ.
ಪರಮಾನಂದವ ಸಾಕ್ಷಾತ್ಕರಿಸಿಕೊಳ್ಳೆಕಾರೆ ಸಾಧಾರಣಮಟ್ಟಿನ ವಿವೇಕ ಸಾಕಾಗ. ಜಾಗ್ರತವಾದ ವಿವೇಕವುದೇ ಅಚಲವಾದ ನಿರ್ಧಾರವುದೇ ಮನುಷ್ಯನ ಯಾವ ಎತ್ತರಕ್ಕೆ ಏರುವಹಾಂಗೆ ಮಾಡುತ್ತು ಹೇಳುವ ಪ್ರತ್ಯಕ್ಷ ನಿದರ್ಶನದ ಬಗ್ಗೆ ಬರದ ಲೇಖನ ಮನಸ್ಸಿಂಗೆ ಹತ್ತರೆ ಆತು.
ಬಾಲ್ಯದ ಹೆಸರೇ ಹಾಂಗನ್ನೆ- ಅಬ್ಬೆಅಪ್ಪ ಯಾವ ಆಶಯಂದ ‘ನರೇಂದ್ರ’ ಹೇಳಿ ಮಡುಗಿದವೋ ಆ ಮಗನೂ ಆ ಹೆಸರಿಂಗೂ ಒಂದು ಸಾರ್ಥಕತೆ ಬಪ್ಪಹಾಂಗೆ ಬದುಕಿದ’ -ಆ ದಿವ್ಯಚೇತನ ಎಲ್ಲೋರಿಂಗೂ ಚೈತನ್ಯ ತುಂಬಲಿ ಹೇಳಿ ಹಾರೈಸುತ್ತೆ.
ಸಂದರ್ಭೋಚಿತ ಲೇಖನಕ್ಕೆ ಧನ್ಯವಾದಂಗೊ .
mahaan chetanakke namana..shuddige ondu oppa
harerama
vivekanandara jeevana charithre aanu highschoolalli eppaga odithidde. eega rivijanu madida hangatu oppannaa. dhanyavadango hareraama.
ಹರೇ ರಾಮ…
ಸಕಾಲಿಕ ಶುದ್ದಿ. ಹರೇ ರಾಮ.
ಭಾರತೀಯ ಸಂಸ್ಕೃತಿಯ ವಿಶ್ವಕ್ಕೆ ಸಾರಿ ಸನಾತನ ಭಾರತದ ಕೀರ್ತಿ ಪತಾಕೆಯ ಎತ್ತಿ ಹಿಡುದ ಧೀಮಂತ ಸ್ವಾಮಿ ವಿವೇಕನಂದರ 150ನೇ ಜನ್ಮೋತ್ಸವದ ಈ ಶುದ್ಧಿ ಲಾಯಕ ಆಯ್ದು. ನಮೋ ನಮಃ .
ಇಲ್ಲಿಯೂ ನಾಳಂಗೆ ಸ್ವಾಮಿ ವಿವೇಕಾನಂದರ ಜನ್ಮ ದಿನ ಆಚರಣೆ ಕಾರ್ಯಕ್ರಮ ಹಲವು ದಿಕ್ಕೆ ಹಮ್ಮಿಗೊಂಡಿದವು. ನವಗೂ ಹೋಪಲೆ ಇದ್ದು.
ಸ್ವಾಮಿ ವಿವೇಕನಂದರ ಚೇತನಕ್ಕೆ ಗೌರವಾರ್ಪಣ ಸೂಚಕವಾಗಿ ಓ ಇಲ್ಯೊಂದು ಹಾಡು ಕಂಡತ್ತು. ‘ಸಂಸ್ಕೃತ ಭಾರತಿ’ಯವು ಇದನ್ನೇ ಹಾಡುತ್ತಿದ್ದವು. – http://www.youtube.com/watch?v=wgiKQDkQdos
ಸ್ವಾಮಿ ವಿವೇಕಾನಂದ ಭಾರತದ ಅಭಿಮಾನದ ಪ್ರತೀಕ. ಸ್ವಾತಂತ್ರ್ಯ ಚಳವಳಿಗೆ ಅವರಿಂದಾಗಿ ಪ್ರೇರಣೆ ಸಿಕ್ಕಿತ್ತು.ರಾಮಕೃಷ್ಣ ಮಿಶನ್ ನವು ತುಂಬಾ ಸಮಾಜಸೇವಾಕಾರ್ಯಂಗಳ ಮಾಡುತ್ತಾ ಬೈಂದವು.ಗೀತೆಯ ಬಗ್ಗೆ, ಧಾರ್ಮಿಕ ವಿಷಯಗಳ ಬಗ್ಗೆ ಉತ್ತಮ ಗ್ರಂಥಂಗಳ ಪ್ರಕಟಿಸಿದ್ದವು. ವಿವೇಕಾನಂದರು ಹಾಕಿದ ಗಿಡ ಸುಪುಷ್ಟವಾಗಿ ಬೆಳೆದ್ದು ಸಂತೋಷದ ವಿಷಯ.
ವಾಹ್ ಒಪ್ಪಣ್ಣಾ, ಅಂತಹಾ ಮಹಾನ್ ವ್ಯಕ್ತಿಯ ಬಗ್ಗೆ ಬರದ ಶುಧ್ಧಿ ಭಾರೀ ಲಾಯಿಕಾಯಿದು. ತುಂಬಾ ಖುಶಿ ಆವುತ್ತು ಓದುವಗ…. ಆ ಮಹಾನ್ ಚೇತನಕ್ಕೆ ಒಂದು ನಮನ.
ಹೇಂಗೇಂಗಿಪ್ಪ ಲಾಯಿಕ ಲಾಯಿಕ ಶುಧ್ಧಿಯ ನಮ್ಮ ಹವ್ಯಕಲ್ಲಿ ಎಷ್ಟು ಚಂದಕ್ಕೆ ಬರೆತ್ತೆ ಒಪ್ಪಣ್ಣ ನೀನು?
ಖುಷಿ ಆತು.
ಅಷ್ಟು ಉತ್ತಮ ಜನ ಅಂತಹಾ ಸಣ್ಣ ಪ್ರಾಯಲ್ಲಿ ತೀರಿ ಹೋದ್ದು ಮಾತ್ರ ಬೇಜಾರ.
ಚೆನ್ನೈ ಭಾವಾ…. ಇಂದು ಆನು ಮದಾಲೂಊಊಊಊಊಊಊಊಊ…..
ಏ ನಿಂಗಳೇ….. 🙁