ಯೇನಂಕೂಡ್ಳಣ್ಣನ ಸಣ್ಣಕೆ ಗುರ್ತ ಮಾಡೆಡದೋ?!ಗುರ್ತ ಮಾಡ್ಳೆಂತರ ಇದ್ದು, ಎಲ್ಲೋರಿಂಗೂ ಗೊಂತಿಪ್ಪೋರೇ!ಹೆಗಲಿಲಿ ಒಂದು ಕೆಮರವ ಬ್ರಹ್ಮವಸ್ತ್ರದ ಹಾಂಗೆ ಹಾಕಿಯೊಂಡು, ತಟುಪುಟು ಅತ್ತಿತ್ತೆ ಓಡಿಗೊಂಡು ಇದ್ದರೆ ‘ಈ ಜೆನ ಎಂತಾ ಚುರುಕ್ಕು!’ ಹೇಳಿ ಮಾತಾಡಿಗೊಂಬ ಅತ್ತೆಕ್ಕಳೇ ಜಾಸ್ತಿ!!
ಕೆಮರ ಕೈಗೆ ಎತ್ತಿರೆ ಅವು ಚುರುಕ್ಕೇ ಇದಾ!ಚೆಂದ ಪಟ ತೆಗೆತ್ತವು! ರಾಮಜ್ಜನ ಕೋಲೇಜಿಲಿ ಕಲಿವಗಳೇ ಅವಕ್ಕೆ ಕೆಮರದ ಮರುಳು ಸುರು ಆದ್ದಡ, ಹಳೆಮನೆ ಅಣ್ಣನ ಹಾಂಗೆ!ಹಳೆಮನೆ ಅಣ್ಣ ನೈಸರ್ಗಿಕ ಪರಿಸರದ್ದು ಹೆಚ್ಚು ತೆಗದರೆ, ಯೇನಂಕೂಡ್ಳಣ್ಣ ಮಾನವ ಪರಿಸರದ್ದು ಹೆಚ್ಚು ತೆಗವದು..!ಇವರದ್ದೆಲ್ಲ ಕಣ್ಣಿಂಗೆ ಹಿಡಿತ್ತ ಹಾಂಗಿರ್ತ ಪಟಂಗ! ಆದರೆ, ಅಂದಿಂದಲೇ ಕೆಮರವ ಕಣ್ಣಿಂಗೆ ಹಿಡುದು ಹಿಡುದು – ಕಣ್ಣು ಬಚ್ಚಿದ್ದೋ ಏನೋ – ಈಗ ಕೊಡೆಯಾಲಲ್ಲಿ ಕಣ್ಣಿನ ಠೆಷ್ಟು ಮಾಡ್ತಲ್ಲಿ ಒಂದು ಷ್ಟೂಲು ಮಡಿಕ್ಕೊಂಡು ಕೂಯಿದವು!
ಓ ಮೊನ್ನೆ ಕೊಡೆಯಾಲಕ್ಕೆ ಹೋಗಿಪ್ಪಗ ಚಾಯ ಕುಡಿವಗ ಸಿಕ್ಕಿ ಬಿಲ್ಲು ಕೊಟ್ಟವು, ಸಂತೋಷ ಆತೊಂದರಿ!! ;-)ಪಟ ಕೊಟ್ಟು ಕಳುಸಿ, ಬೈಲಿಂಗೆ ತೋರುಸುವನಾ? – ಹೇಳಿದೆ.ಸಂತೋಷಲ್ಲಿ ಒಪ್ಪಿದವು.ಇನ್ನೊಂದು ವಿಶ್ಯ ಇದ್ದು, ಅವು ಬೈಲಿಂಗೆ ಬಂದು ಮಾತಾಡ್ಳೆ ಸುರು ಮಾಡಿರೆ ಶೇಡಿಗುಮ್ಮೆ ಬಾವನ ಬಗ್ಗೆ ಬಂದೇ ಬಕ್ಕು. “ಇಂದಿರತ್ತೆ ಎಂತ ಮಾಡ್ತವು ಒಪ್ಪಣ್ಣಾ…” ಹೇಳಿ! ‘ಎನಗೆಂತ ಗೊಂತು, ಕೆಮರ ಇಪ್ಪದು ನಿನ್ನತ್ರೆ’ ಹೇಳುದಾನು ಯೇವಗಳುದೇ.!!ನಮ್ಮ ಬೈಲಿಂಗೆ ಬಂದು ಅವು ತೆಗದ ಪಟಂಗಳ ನೋಡುಸುತ್ತವಡ.ಚೆಂದಲ್ಲಿ ನೋಡುವ, ಕೊಶಿ ಆದರೆ ಪಟಂಗೊಕ್ಕೆ ಒಪ್ಪ ಕೊಡುವ.. ಆತೋ?
[ಸೂ: ನಿಂಗೊ ನೋಡ್ತ ಒಪ್ಪಣ್ಣನ ಪಟ ತೆಗದ್ದು ಇದೇ ಯೇನಂಕೂಡ್ಳಣ್ಣ ಇದಾ..! ಪಟ ಚೆಂದ ಬಂದರೆ ಅವರತ್ರೆ ಹೋಗಿ ನಿಂಗಳದ್ದೂ ತೆಗೆಶಿ..!!]
ಕಿಶೋರಣ್ಣ,
ಪಟ೦ಗ ಎಲ್ಲ ಲಾಯಕ ಇದ್ದು. ಒ೦ದರಿ ನೋಡೆಕ್ಕಾದ ವಿಶಯವೆ..
ಅದ್ಭುತ ಫಟಂಗೊ ಕಿಶೋರಣ್ಣ. ಎಲ್ಲವೂ ಲಾಯ್ಕ ಬೈಂದು.
ಸಿಂಗಾರದ ಪರಿಮಳಲ್ಲಿ ನಾಗಂಗೆ ತುಂಬಾ ಕೊಶಿ ಆದಿಕ್ಕು. ನಾಗಮಂಡಲದ ರುದ್ರ ನರ್ತನ ನೋಡ್ಳೆ ತುಂಬಾ ಚೆಂದ. ಅವರ ಕಣ್ಣುಗಳ ನೋಡ್ಳೇ ಹೆದರಿಕೆ ಹುಟ್ಟುಸುತ್ತು. ಫೊಟೋಂಗೊ, ಚೆಂದ ಬಯಿಂದು. ಕೆಲವು ಕ್ಲೋಸ್ ಅಪ್ ಫೊಟೋಂಗೋ ಮತ್ತೂ ವಿಶೇಷವೇ. ಏನಂಕೋಡ್ಳು ಅಣ್ಣಂಗೆ ಧನ್ಯವಾದಂಗೊ.
ಪಟಂಗೊ ಎಲ್ಲವುದೇ ಲಾಯಿಕಿದ್ದು ….. ಈ ಒಂದು ಎರಡು ಕೆಳಂದ ಮೇಗೆ ಹತ್ತಿದ್ದರಲ್ಲಿ ಎಂತಾರು ವಿಶೇಶತೆ ಇದ್ದೋ…?
ಚೆಂದ ಬೈಂದು.
ಭಾರೀ ಚೆಂದ ಬೈಂದು.
ಫೊಟೊ ಎಲ್ಲವೂ ಬಾರೀ ಲಾಯ್ಕಿದ್ದು..
ಖಂಡಿತವಾಗಿಯೂ ಲಾಯಕ ಇದ್ದು ಪಟಂಗೊ. ಇದರ ವಿವರಣೆ ಶುದ್ದಿಯೂ ಬೇಕಾತು.
ನಾಗಮಂಡಲದ ಪಟಂಗೊ ಚೆಂದ ಇದ್ದು…
ಸೂಪರ್..
ಪೊಟೊ ಚೆ೦ದ ಬೈ೦ದು, ಧನ್ಯವಾದ೦ಗೊ…