- ಮಸರು ಕಡದು ಬೆಣ್ಣೆ ಕೂಡ್ತದಕ್ಕೆ ಗೌಜಿ ಮಾಡುದೆಂತಕೆ? - May 29, 2019
- ಒಪ್ಪಣ್ಣ ಪ್ರತಿಷ್ಠಾನಂದ ಇಸಿಜಿ ಯಂತ್ರ ಕೊಡುಗೆ - January 8, 2019
- ಬಾಳಿಲ ಪರಮೇಶ್ವರ ಭಟ್ಟ ಸ್ಮಾರಕ ಪ್ರಶಸ್ತಿ ಪ್ರದಾನ – ವರದಿ - April 29, 2015
ಒಪ್ಪಣ್ಣನ ಆನು ಭೇಟಿಯಾದ್ದು ಆಕಸ್ಮಿಕ.. ‘ಅವಲಂಬನ’ದ ಲೆಕ್ಕಲ್ಲಿ ಎಲ್ಲರೂ ಮೇಲುಕೋಟೆಗೆ ಪ್ರವಾಸ ಹೋಪ ಸಂದರ್ಭಲ್ಲಿ ಆನು ಅವನ ಭೇಟಿಯಾದ್ದು. ಅವ° ಇನ್ನೊಂದು ಬಸ್ಸಿಲ್ಲಿ ಇತ್ತ. ಆನು ಮತ್ತೊಂದರಲ್ಲಿ. ಕಾಪಿ ಕುಡಿವಲೆ ಬಸ್ಸಿನ ನಿಲ್ಲಿಸಿತ್ತವು. ಅಂಬಗ ಹೀಂಗೆ ಮಾತಾಡಿಯಪ್ಪಗ ಗುರ್ತ ಆತು. ಅಲ್ಲಿಂದ ಎಂಗಳ ಸ್ನೇಹ ಹೀಂಗೆ ಬೆಳದತ್ತು.
ಒಪ್ಪಣ್ಣನ ಬ್ಲೋಗಿನ ಖಾಯಂ ಓದುಗ ಆನು (ಈಗ ಸೈಟು). ಹವ್ಯಕ ಸರಸ್ವತಿಯ ಉಳಿಶಿ ಬೆಳೆಶೆಕ್ಕು ಹೇಳ್ತ ಉದ್ದೇಶಲ್ಲಿ ಕೆಲಸ ಮಾಡ್ತ ಇಪ್ಪ ಒಪ್ಪಣ್ಣ, ಒಂದು ದಿನ ಆನು ನಿರೀಕ್ಷೆ ಮಾಡದ್ದ ಆಮಂತ್ರಣವ ಎನ್ನ ಮುಂದೆ ಮಡುಗಿದ°. ಬೈಲಿಂಗೆ ಬಾ ಮಾರಾಯಾ ಹೇಳ್ತದು ಅವನ ಪ್ರೀತಿಯ ಕರೆಯೋಲೆ ಆಗಿತ್ತಿದು.
ಆತು ಆನು ರೆಡಿ. ಆದರೆ ವಾರ ವಾರ ಎನಗೆ ನಿನ್ನ ಹಾಂಗೆ ಬರವಲೆ ಎಡಿಯಾ ಹೇಳಿ ಹೇಳಿದೆ. ಆತು ನೀನು ಏವಾಗ balenciaga schoenen verkoop ಬೇಕಾದರೂ ಬರೆ ಹೇಳಿ, ಬೈಲಿಲ್ಲಿ ಎನಗೊಂದು ಜಾಗೆ ಮಾಡಿ ಕೊಟ್ಟಿದ° ಒಪ್ಪಣ್ಣ. ಅವಂಗೆ ಆನು ಋಣಿ .
ಎನಗೆ ಸಮಯ ಅಪ್ಪಗ ಆನು ಖಂಡಿತ ಎಂತಾರು ಗೀಚುವೆ.. ನಿಂಗೊ ಓದಿ ಒಪ್ಪ ಕೊಡೆಕು.
ನಿಂಗಳ ಪ್ರೀತಿ, ಪ್ರೋತ್ಸಾಹಕ್ಕೆ ಆನು ಚಿರಋಣಿ.
ಪ್ರೀತಿಲಿ ಡೈಮಂಡು ಭಾವ
ಕೆಪ್ಪಣ್ಣನ ಡೈಮಂಡು ಮಾಡಿದ್ದು ಸಮಾಧಾನ ಆಗಿಕ್ಕು ಒಪ್ಪಣ್ಣಂಗೆ.
ಒಪ್ಪಣ್ಣನ ಬೈಲಿಂಗೆ ಸ್ವಾಗತಂ..