ಇಂದ್ರಾಣ ದಿನಲ್ಲಿ ಬದುಕಿಂಗೆ ಶಿಕ್ಷಣ ಹೇಳುದು ಮೂಲಭೂತ ಅವಶ್ಯಕತೆ. ಎರಡು ಮುಷ್ಟಿ ಅಶನ ಬಾಯಿಗೆ ಹೋಪಾಂಗೆ ಆಯೆಕ್ಕು, ನಮ್ಮ ಸ್ವಂತ ಕಾಲ ಮೇಲೆ ನಾವು ನಿಲ್ಲೆಕ್ಕು, ಸಮಾಜಲ್ಲಿ ಗುರುತಿಸಿಗೊಳ್ಳೆಕು, ಎಡಿಯದ್ದವಕ್ಕೆ ಕೈ ನೀಡೆಕು ಹೇಳುವ ಚಿಂತನೆಗೆ ಪ್ರೇರಣೆಯೂ, ಅದರ ಸಫಲ ಮಾಡ್ಲೆ ಪೂರಕವೂ ಆಗಿಪ್ಪ ಏಕೈಕ ವಿಷಯ ಅದು.
ಇಂದು ಹಲವಾರು ಶಾಲೆ, ಕೊಲೇಜು ಇದ್ದು. ಮಕ್ಕಳ ಶಾಲೆಗೆ ಸೇರ್ಸುವ ಹೊತ್ತಿಂಗೆ ‘ಯಾವುದಾರು’ ಒಂದಕ್ಕೆ ಸೇರ್ಸಿರೆ ಆತು ಕಲ್ತುಗೊಳ್ತವು ಹೇಳಿ ಇಲ್ಲೆ. ನಮ್ಮ ಮಾಣಿಗೆ, ಕೂಸಿಂಗೆ ಆ ಶಾಲೆ ಅಕ್ಕೋ.. ಅಲ್ಲಿ ಎಂತ ಹೇಳಿಕೊಡ್ತವು? ಮೌಲ್ಯಾಧಾರಿತ ಶಿಕ್ಷಣ ಇದ್ದೋ, ಸಂಸ್ಕೃತಿ, ಚಿಂತನೆಗಳ ತಿಳುಶುವ, ಸತ್ಪ್ರಜೆ ಆಗಿ ರೂಪಿಸುವ ಆಟ-ಪಾಠಂಗ ಇದ್ದೋ ಹೇಳಿಯೂ ನಾವು ನೋಡಿಗೊಳ್ತು. ಅಂಥದ್ದೊಂದು ಹುಡುಕಾಟಲ್ಲಿಪ್ಪವಕ್ಕೆ, ಜೀವನ ರೂಪಿಸುಲೆ ಆಧುನಿಕ ಶಿಕ್ಷಣ ಅದರೊಟ್ಟಿಂಗೆ ನಮ್ಮ ನೆಲೆದ ಸತ್ವವ ಮಕ್ಕಳ ಮನಸ್ಸಿಲಿ ಕೂರ್ಸುವ, ತನು ಮನಕ್ಕೆ ಭಾರತೀಯತೆಯ ಅಮೃತ ಉಣ್ಸುವ ಕೋಲೇಜು ನಮ್ಮ ಶ್ರೀ ಭಾರತೀ ಕಾಲೇಜು.
ಹೆಚ್ಚು ದೂರದ ಊರಿನದ್ದಲ್ಲ.. ಓ ಇಲ್ಲೇ, ನಮ್ಮ ಬೈಲ ಕರೆಂದಲೇ ಆಚಿಗೆ ಮಂಗಳೂರು ಪೇಟೆಗೇ ತಾಗಿಗೊಂಡು ರಾಷ್ಟ್ರೀಯ ಹೆದ್ದಾರಿ 17ರ ಕರೇಲಿ ಸುಂದರ ಪರಿಸರಲ್ಲಿಪ್ಪ ಕೋಲೇಜು. ನಮ್ಮ ಸಮಾಜದವ್ವು ಮದಲಿಂಗೇ ವೇದ ವಿದ್ಯೆ, ಶಿಕ್ಷಣ ಕ್ಷೇತ್ರಲ್ಲಿ ಹೆಸರು ಮಾಡಿದವು ಹೇಳುದು ಎಲ್ಲರಿಂಗೂ ಗೊಂತಿಪ್ಪ ಸಂಗತಿಯೇ.. ಅದಲ್ಲಿ ಅತಿಶಯೋಕ್ತಿಯೂ ಇಲ್ಲೆ. ಆ ಪ್ರಕಾರವಾಗಿ ನಮ್ಮ ಗುರುಗಳಾದ ಶ್ರೀ ರಾಘವೇಶ್ವರ ಭಾರತಿ ಶ್ರೀಗಳ ಚಿಂತನೆಲಿ ಹುಟ್ಟಿದ್ದು, ಸಮಾಜಕ್ಕೆ ಒಂದು ಒಳ್ಳೆ ಶಿಕ್ಷಣ ನೀಡುವ, ಒಳ್ಳೆ ಪ್ರಜೆಗಳ ಹುಟ್ಟುಹಾಕುವ ಒಂದು ಶಿಕ್ಷಣ ಸಂಸ್ಥೆ ಸ್ಥಾಪಿಸೆಕ್ಕು ಹೇಳಿ. ಅದರ ಫಲವೇ ಶ್ರೀ ಭಾರತೀ ಕಾಲೇಜು. ಶಿಶು ಕೇಂದ್ರಂದ, ಸ್ನಾತಕೋತ್ತರ ಪದವಿವರೆಗೆ ಇದಲ್ಲಿ ಕಲುಶುವ ಹಾಂಗೆ ಆಯೆಕ್ಕು ಹೇಳ್ತದು ಗುರುಗಳ ದೂರದೃಷ್ಟಿಯೂ ಅಪ್ಪು. ಮೊದಲಿಂಗೆ ಪದವಿ (ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್) ಕಲುಶುತ್ತ ಕೋಲೇಜು ಶುರುವಾಯ್ದು. ಗುರುಗಳ ಕನಸಿನ ಈಡೇರುಸುಲೆ ಭಾರತೀ ಕೊಲೇಜಿನ ಧರ್ಮಚಕ್ರ ಟ್ರಸ್ಟ್ ಟೊಂಕ ಕಟ್ಟಿದ್ದು, ಆಡಳಿತವನ್ನೂ ಅದುವೇ ನೋಡ್ತಾ ಇದ್ದು.
ಪ್ರಸಕ್ತ ಸಾಲಿಲಿ ಇಂಗ್ಲಿಷ್ ಮಾಧ್ಯಮಲ್ಲಿ ಹೈಸ್ಕೂಲು 9ನೇ ಕ್ಲಾಸು ಶುರುವಾಯ್ದು. ಇದರೊಟ್ಟಿಂಗೆ 8/9ಕ್ಕೆ ಪ್ರತಿಭಾನ್ವಿತ, ಮಕ್ಕಳ ಭವಿಷ್ಯ ಚೆಂದಕ್ಕೆ ರೂಪುಸುವ ಹೊಸ ಮಾಷ್ಟ್ರಕ್ಕ, ಕಂಪ್ಯೂಟರ್ ಶಿಕ್ಷಣವೂ ಕೊಡ್ಲೆ ಯೋಚನೆ ಮಾಡಿದ್ದು. ಇದೆಲ್ಲದರ ನೇತೃತ್ವವ ಈ ವರ್ಷಂದ ಹೊಸ ಪ್ರಾಶುಪಾಲರಾಗಿ ನೇಮಕವಾದ ಡಾ. ಜಿ. ಎನ್. ಭಟ್ ವಹಿಸಿದ್ದವು.
- ಭಾರತೀ ಕೋಲೇಜಿಲಿ ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿ ಕೊಡುವ ಕಾರ್ಯಕ್ರಮ ಆವ್ತಾ ಇದ್ದು ಹೇಳುವುದಕ್ಕೆ ಸಾವಿರ ಚಿಂತನೆಗ, ಅದರ ಕಾರ್ಯರೂಪಕ್ಕೆ ಇಳುಶುವ ಕೆಲಸ ಆವ್ತಾ ಇದ್ದು.
- ಅದಕ್ಕೆ ತಕ್ಕಂತೆ ನಮ್ಮ ವೇದಂಗಳ ಕಲಿಯುವ, ಆ ಬಗ್ಗೆ ಸಂಶೋಧನೆ ಮಾಡುವ ‘ವೇದ ವಿದ್ಯಾ ಸಂಸ್ಕಾರ ಮತ್ತು ಸಂಶೋಧನಾ ಕೇಂದ್ರ‘ ಇದೇ ವರ್ಷ ಏಪ್ರಿಲಿಂದ ಶುರು ಆಯ್ದು.
- ಡಿಗ್ರಿ, ಪಿಯುಸಿ ಕಾಲೇಜಿಲಿ ಬಪ್ಪ ಹೊಸ ಮಕ್ಕೊಗೆ ಅನುಕೂಲ ಅಪ್ಪಾಂಗೆ 9 ಸಾವಿರ ಚದರ ಅಡಿಯ ಹೆಚ್ಚುವರಿ ಜಾಗೆ, ಕಟ್ಟೋಣ ಮಾಡಿದ್ದು. ಕೋಲೇಜು ಸೇರಿದ ಮಕ್ಕೊಗೆ ಎಲ್ಲಾ ವಿಧದ ಪುಸ್ತಕ ಸಿಕ್ಕೆಕ್ಕು, ಪಠ್ಯಕ್ಕೆ ಸಂಬಂಧ ಪಟ್ಟ ಹೊಸ ಆವೃತ್ತಿಯ ಪುಸ್ತಕಂಗಳೂ ಲಭ್ಯ ಆಯೆಕ್ಕು ಹೇಳಿ 10 ಸಾವಿರ ಪುಸ್ತಕಂಗಳ ಈ ಸರ್ತಿ ಗ್ರಂಥಾಲಯಕ್ಕೆ ಸೇರ್ಸಿದ್ದು.
- ಮಕ್ಕೊ ಕೇವಲ ಪುಸ್ತಕದ ಮೂಲಕ ಕಲ್ತರೆ ಸಾಲ. ಅವಕ್ಕೆ ದೃಶ್ಯ-ಶ್ರವಣ ಮಾಧ್ಯಮದ ಮೂಲಕವೂ ಕಲುಶೆಕ್ಕು ಹೇಳುದು ಆಡಳಿತ ಮಂಡಳಿಯ ಚಿಂತನೆ. ಪಾಠ ಹೆಚ್ಚು ಮನಸ್ಸಿಂಗೆ ತಟ್ಟೆಕ್ಕಾದರೆ ಇದು ಅಗತ್ಯ. ಅದಕ್ಕಾಗಿ ಪರಿಣಾಮಕಾರಿ ದೃಶ್ಯ-ಶ್ರವಣ ವ್ಯವಸ್ಥೆಯ ಮಾಡಿದ್ದು.
- ಕೆಲವು ಮಕ್ಕೊಗೆ ಅಷ್ಟಾದರೆ ಸಾಕಾವ್ತಿಲೆ. ಕೆಲವರ ಕಲಿಕಾ ಸಾಮರ್ಥ್ಯ ಕಮ್ಮಿ ಇಕ್ಕು ಹಾಂಗೇಳಿ ಅವು ಹಿಂದೆ ಬೀಳ್ಳಾಗ. ಕಲಿವ ಮಕ್ಕಳೊಟ್ಟಿಂಗೆ ಅವರನ್ನೂ ಮುಂದಂಗೆ ಕಳುಹಿಸೆಕ್ಕು ಹೇಳ್ತ ಪ್ರಕಾರ, ಸೀಮಿತವಾಗಿ ವಿಶೇಷ ಮಾರ್ಗದರ್ಶನ ವ್ಯವಸ್ಥೆ, ವೈಯಕ್ತಿಕವಾಗಿ ಅವಕ್ಕೆ ಗಮನ ಕೊಡ್ಲುದೇ ವ್ಯವಸ್ಥೆ ಇದ್ದು.
- ಕೇವಲ ಒಂದು ವಿಧದ ಕೋರ್ಸುಗ ಕಲ್ತರೆ ಇಂದ್ರಾಣ ದಿನಂಗಳಲ್ಲಿ ಕೆಲಸ ಹುಡ್ಕುಲೆ ಸಾಕಾವ್ತಿಲೆ. ಅದಕ್ಕೆ ಬೇಕಾಗಿ, ಜಾಬ್ ಓರಿಯೆಂಟೆಡ್ ಕೋರ್ಸುಗ, ಡಿಗ್ರಿ ಮಕ್ಕೊಗೆ ಕೆಲಸ ಸುಲಭ ಅಪ್ಪಲೆ ಕೆಲವು ಕೋರ್ಸುಗ, ಪರಿಣತರಿಂದ ತರಬೇತಿ ಕೊಡುವ ವ್ಯವಸ್ಥೆ ಮಾಡಿದ್ದು.
- ಕೆಲವು ಮಕ್ಕೊ ಕಲಿವಲೆ ಉಷಾರಿ ಆದರೆ ಪೈಸೆಗೆ ಕಷ್ಟ. ಅಪ್ಪ-ಅಮ್ಮಂಗೆ ಹಣಕಾಸಿನ ಅಡಚಣೆ೦ದಾಗಿ ಕಲುಶುಲೇ ಎಡಿತ್ತಿಲ್ಲೆ ಹೇಳಿ ಇದ್ದರೆ, ಒಂದರಿ ಭಾರತೀ ಕಾಲೇಜಿನ ಹೊಡೆಂಗೆ ಚಿಂತನೆ ಮಾಡುದೊಳ್ಳೆದು. ಬಡ ಮಕ್ಕೊಗೆ ಸಂಪೂರ್ಣ ಪೈಸೆ ಸಕಾಯ ಮಾಡುವ ಯೋಜನೆ ಕಾಲೇಜು ಆಡಳಿತ ಮಂಡಳಿಲಿದ್ದು. ಮತ್ತೆ ಶೇ.85ಕ್ಕಿಂತ ಹೆಚ್ಚು ಮಾರ್ಕ್ಸ್ ತೆಗೆದ ಮಕ್ಕೊಗೆ ಪ್ರೋತ್ಸಾಹಕವಾಗಿ ಟ್ಯೂಷನ್ ದರವ ಕಡಮ್ಮೆ ಇದ್ದು. ಕಮ್ಮಿ ಮಾರ್ಕ್ಸ್ ತೆಗದವರನ್ನೆ ಕೈಬಿಡದ್ದೆ, ವಿಶ್ವವಿದ್ಯಾಲಯ ಮಟ್ಟದ ಪರೀಕ್ಷೆಗೆ ತಯಾರು ಮಾಡ್ಲೆ ಮಾಸ್ಟ್ರಕ್ಕಳೂ ಇಲ್ಲಿ ಹೆಚ್ಚು ಮನಸ್ಸು ಕೊಡ್ಲೆ ಯೋಚನೆ ಮಾಡಿದ್ದವು.
- ಇದು ಪಠ್ಯದ ವಿಷಯ ಆತು. ಹಾಂಗೇಳಿ ಮಕ್ಕ ಪಠ್ಯೇತರ ಚಟುವಟಿಕೆ, ಹವ್ಯಾಸ ರೂಢಿಸಿಗೊಂಬದಲ್ಲಿಯೂ ಹಿಂದೆ ಬೀಳ್ಳಾಗನ್ನೆ? ಅದಕ್ಕೆ ಬೇಕಾಗಿಯೇ, ಕ್ರೀಡಾ ತರಬೇತಿ, ಯೋಗ ತರಬೇತಿ, ಹವ್ಯಾಸಂಗಳ ಬೆಳೆಶುಲೆ ಪ್ರೋತ್ಸಾಹಿಸುಲೆ ಸೂಕ್ತ ವ್ಯವಸ್ಥೆಯೂ ಇಲ್ಲಿದ್ದು.
- ಒಳ್ಳೆ ಶಿಕ್ಷಣ ಬೇಕಾದರೆ ಕೆಲವು ದಿಕ್ಕೆ ಮಕ್ಕೋ ಮನೆಂದ ದೂರ ಇಪ್ಪದು ಅನಿವಾರ್ಯ. ಹಾಂಗೇಳಿ ‘ಅವರ ಅಲ್ಲಿ ಒಂದು ದಿಕ್ಕೆ ಕಲಿವಲೆ ಹಾಕಿದ್ದು’ ಹೇಳ್ತ ಭಾವನೆ ಅಪ್ಪ-ಅಬ್ಬೆಗಾಗಲಿ.. ಕಲಿವಲೆ ಹೇಳಿ ಇಲ್ಲಿ ಬಂದು ಕಷ್ಟ ಪಡೇಕು ಹೇಳಿ ಮಕ್ಕೊಗೆ ಕಾಂಬಲಾಗ. ಅದಕ್ಕೆ ಬೇಕಾಗಿ, ಶಿಕ್ಷಣ ವ್ಯವಸ್ಥೆಗೆ ಪೂರಕವಾಗಿ ಮಕ್ಕೊಗೆ ವಸತಿ-ಊಟ ಬೇಕಾವ್ತು. ಅದೆರಡು ಸರಿಯಾಗಿದ್ದರೆ ಮಕ್ಕ ಒಳ್ಳೆಯದಾಗಿ ಕಲಿವಲೆ ಸಹಕಾರವೂ ಆವ್ತು. ಆ ದೃಷ್ಟಿಲಿ ಗೆಂಡು-ಹೆಣ್ಮಕ್ಕಳ ಒಳ್ಳೆ ಹಾಸ್ಟೆಲ್ ರೂಪಿಸಿದ್ದು. ಮಕ್ಕೊ ಹಶುವಪ್ಪಗ ಪೇಟೆಲಿ ಹೋಗಿ ತಿರುಗಿ ತಿಂಬದು ಬೇಡ, ಒಳ್ಳೆಯ ಆಹಾರ ಕೋಲೇಜಿನೊಳವೇ ಸಿಕ್ಕೆಕ್ಕು ಹೇಳಿ ಹೊಸ ಕ್ಯಾಂಟೀನ್ ವ್ಯವಸ್ಥೆಯೂ ಮಾಡಿದ್ದು.
ಮಕ್ಕೊ ಹೇಂಗೋ ಕಲಿತ್ತಾವಿದ್ದು, ನವಗೆ ತೋಟದ ಕೆಲಸಲ್ಲಿ ಹೋಪಲಾವ್ತಿಲೆ ಹೇಳುವ ಸಂಭವ ಈಗೀಗ ಕಮ್ಮಿ. ಎಲ್ಲರೂ ಮಕ್ಕಳ ಭವಿಷ್ಯದ ಬಗ್ಗೆ ಹೆಚ್ಚು ಚಿಂತನೆ ಮಾಡುದು ಗೊಂತಿಪ್ಪದೇ. ಅದಕ್ಕೆ ಬೇಕಾಗಿಯೇ, ಮಕ್ಕಳ ಚಟುವಟಿಕೆ, ಇನ್ನೂ ಪರಿಣಮಕಾರಿ ಶಿಕ್ಷಣ ಕೊಡುವ ಬಗ್ಗೆ, ಸಲಹೆ ಸೂಚನೆ ತೆಕ್ಕೊಂಬಲೆ, ಹೆತ್ತವರ, ಮಾಸ್ಟ್ರಕ್ಕಳ, ಆಡಳಿತ ಮಂಡಳಿ ಸಭೆ ಪ್ರತಿ ಮೂರು ತಿಂಗಳಿಗೆ ನಡೆತ್ತು. ಈ ಎಲ್ಲದರೊಟ್ಟಿಂಗೆ ಸಮಾಜಕ್ಕೆ ಪೂರಕವಪ್ಪ ಕೆಲಸಂಗಳ ಬಗ್ಗೆಯೂ ಚಿಂತನೆ ನಡೆತ್ತಾ ಇದ್ದು. ಅದೆಲ್ಲವನ್ನೂ ಸಮಯಕ್ಕೆ ತಕ್ಕಹಾಂಗೆ ರೂಪಿಸುಲೆ ಆಡಳಿತ ಮಂಡಳಿ ಕಾಯಾ ವಾಚಾ ಮನಸಾ ಯತ್ನಿಸುತ್ತಾ ಇದ್ದು. ಗುರುಗಳುದೆ, ವರ್ಷಕ್ಕೆ ಕನಿಷ್ಟ 2ಸರ್ತಿಯಾದರೂ ಬಂದು ಎಲ್ಲ ಬೆಳವಣಿಗೆಗಳ ಬಗ್ಗೆ ತಿಳ್ಕೊಂಡು ಮಾರ್ಗದರ್ಶನ ಮಾಡ್ತಾ ಇದ್ದವು.
ಒಂದು ಮನವಿ: ನಮ್ಮ ಕೊಲೋಜಿನ ಬಗ್ಗೆ ಕೇಳಿದಿರಲ್ಲದೋ.. ಇದು ಇಷ್ಟಕ್ಕೇ ನಿಂದಿದಿಲ್ಲೆ. ಕನಸುಗ ನಿರಂತರ ಅದರ ಸಾಕಾರ ಮಾಡ್ಲೂ ವಿಶೇಷ ಪ್ರಯತ್ನ ಆವ್ತಾ ಇದ್ದು.
ಅದು ಅಲ್ಲಿಗೆ ನಿಂದರೆ, ಅದಕ್ಕೆ ಫಲವೂ ಇಲ್ಲೆ. ಅದಕ್ಕಾಗಿಯೇ, ಸಮಾಜದ ಎಲ್ಲ ವರ್ಗವೂ ಕೊಲೇಜಿನ ಉನ್ನತಿಗೆ ಪ್ರಯತ್ನಿಸೆಕ್ಕು, ಕೈ ಸೇರ್ಸೆಕ್ಕು ಹೇಳಿ ಎಂಗಳ ಆಶಯ.
ನಮ್ಮ ಸಮಾಜಲ್ಲಿ ಕೃಷಿಕರಿಂದ ಹಿಡುದು, ದೊಡ್ಡ ದೊಡ್ಡ ಹುದ್ದೆಲಿಪ್ಪವು, ಪ್ರತಿಭಾನ್ವಿತರು, ಮೇಧಾವಿಗ, ವಿದ್ವಾಂಸರು ಎಲ್ಲರೂ
ಇದ್ದವು. ವಿದ್ಯಾರ್ಥಿಗಳ ಭವಿಷ್ಯ ರೂಪುಸುವ ಕಾಲೇಜಿನ ಸಮಗ್ರ ಬೆಳವಣಿಗೆಗೆ ಪ್ರತಿಯೊಬ್ಬನ ಸಹಾಯವೂ ಅಗತ್ಯ ಇದ್ದು. ಮೂಲಭೂತ ಸೌಕರ್ಯ ಹೆಚ್ಚುಸುದು, ಗ್ರಂಥಾಲಯಕ್ಕೆ ಕನಿಷ್ಟ 20 ಸಾವಿರ ಪುಸ್ತಕ ರೂಢುಸುದು, ಮಳೆಕೊಯ್ಲು ವ್ಯವಸ್ಥೆ, ನೀರಾವರಿ, ಗೆಡು ನೆಡುದು, ನಿರ್ವಹಣೆ ಇತ್ಯಾದಿ ಮಾಡೆಕ್ಕಾದ ಕೆಲಸಂಗೊ ಅಗಾಧವಾಗಿದ್ದು.
ಆ ದೃಷ್ಟಿಂದ ಸಮಾಜದ ಎಲ್ಲಾ ಬಾಂಧವರು, ತನು, ಮನು, ಧನ ಸಹಾಯ ಮಾಡೆಕ್ಕು, ಕಾಲೇಜಿನ ಬೆಳವಣಿಗೆಲಿ ನಿಂಗಳೂ ಪಾಲುದಾರಂಗ ಆಯೆಕ್ಕು ಹೇಳುದು ಆಶಯ.
ಇಷ್ಟೆಲ್ಲ ಹೇಳಿದ ಮೇಲೆ ಕೋಲೇಜು, ಅಲ್ಯಾಣ ಕಾರ್ಯಕ್ರಮಂಗ ಎಂತರ ಹೇಳಿ ನೋಡೆಕ್ಕು ಹೇಳಿ ನಿಂಗೊಗೆ ಕಂಡಿಕ್ಕು. ಅಪ್ಪು.. ಒಂದಾರಿ ನಿಂಗ ಖಂಡಿತ ಕೋಲೇಜಿಂಗೆ ಬರೆಕು, ವಿದ್ಯೆ ನೀಡುವ ಪವಿತ್ರ ಕೆಲಸಲ್ಲಿ ಭಾಗಿ ಆಯೆಕ್ಕು.. ಬತ್ತಿರಲ್ದಾ..?
- ಬದುಕಿಂಗೊಂದು ದಾರಿ ದೀಪ : ಶ್ರೀ ಭಾರತೀ ಕಾಲೇಜು - May 22, 2012
ಮಾಹಿತಿ ಲಾಯಕ್ಕಿದ್ದು.
ವೇದ ವಿದ್ಯಾ ಸಂಸ್ಕಾರ ಮತ್ತು ಸಂಶೋಧನಾ ಕೇಂದ್ರದ ಬಗ್ಗೆ ವಿವರ ಅಗತ್ಯ.
ಶ್ರೀ ಶಂಕರ ನಮಗೆ ಎಷ್ಟೋಂದು ಅವಕಾಶಗಳನ್ನು ತೆರೆದಿದ್ದಾನೆ,
ವಿವರವಾದ ಪರಿಚಯ ಕೊಟ್ಟದಕ್ಕೆ ವೈ.ವಿ. ಮಾವಂಗೆ ಧನ್ಯವಾದ. ನಮ್ಮಿಂದ ಎಡಿಗಾದಷ್ಟು ಸಹಕಾರ,ಸಹಾಯ ಮಾಡುಲೆ ಕೈ ಸೇರ್ಸುವೊ°. ಇನ್ನೊಂದರಿ ರಜೆಲಿ ಬಂದಿಪ್ಪಗ ಶಾಲೆಗೆ ಬಪ್ಪಲೆ ಪ್ರಯತ್ನ ಮಾಡ್ತೆ.
ಹರೆರಾಮ.
ಧನ್ಯವಾದಂಗೊ
ಕೊಡೆಯಾಲಲ್ಲಿ ಒಂದು ನಮ್ಮ ಭಾರತೀ ಕೋಲೇಜು ಇದ್ದಡ ಹೇಳಿ ಅಷ್ಟೇ ಎನ್ನ ಹಾಂಗಿರ್ತ ಹಲವರಿಂಗೆ ಗೊಂತಿದ್ದದು. ನಮ್ಮ ಬೈಲ ಕರೇಲಿ ಆಚೊಡಿಲಿ ಇಪ್ಪ ಈ ಕಾಲೇಜಿನ ಕಿರು ಪರಿಚಯ ಮಾಹಿತಿ ನೀಡಿದ್ದು ಲಾಯಕ ಆಯ್ದು ವೈ.ವಿ ಮಾವ°.
‘ಹನಿಗೂಡಿ ಹಳ್ಳ’ ಹೇಳ್ವಾಂಗೆ ನಾವು ಪ್ರತಿಯೊಬ್ಬನೂ ಸ್ವಯಂಸ್ಪೂರ್ತಿಂದ ಯಥಾಶಕ್ತಿ ದೇಣಿಗೆ ಸಹಿತ ತನುಮನ ಸಹಾಯವನ್ನೂ ಮಾಡುವೋ°, ಮಾಡೆಕು. ಅಕ್ಕೊ, ಎಡಿಗೊ, ಅಪ್ಪಲಿಪ್ಪದೋ ಹೇಳಿ ಹೆರ ನಿಂದೊಂಡು ಚರ್ಚೆ ಮಾಡುತ್ತದರ ಬದಲು ಅಕ್ಕು, ಆಯೇಕು, ಅಪ್ಪಲೇಬೇಕು ಹೇಳ್ವ ಮನೋಭಾವಂದ ನಾವೆಲ್ಲ ಸಹಕರುಸುವೊ°, ಶ್ರೀ ಭಾರತೀ ಕಾಲೇಜು ಅದ್ಭುತ ಸಾಧನೆ ಮತ್ತು ಯಶಸ್ಸುಗಳುಸೇಕು ಹೇಳಿ ಶುಭಕಾಮನೆಗೊ.
ನವಗೆ ಇದರ ಬಗ್ಗೆ ಕೇಳಿ ಗೊತ್ತಿತ್ತು..ವಿವರವಾಗಿ ತಿಳಿಸಿದಕ್ಕೆ ಧನ್ಯವಾದ..ಹೀಂಗೆ ಇನ್ನೊಂದು ಮುಜುಂಗಾವಿಲಿ ಶುರು ಆಗಿ ಎಂಗ ಎಲ್ಲ ಕಲ್ತಿಕ್ಕಿ ಈಗ ರಜ್ಜಅ ಕಷ್ಟಲ್ಲಿ ಇದ್ದು..ಎನ್ನ ಅಭಿಪ್ರಾಯ ಎಂಥ ಹೇಲಳಿರೆ ಕೇವಲ ನಮ್ಮ ಸ್ಂಸ್ಕೃತಿ ಸಂಪ್ರದಾಯ ಉಳುಶುವ ಆಲೋಚನೆ ಒಟ್ಟಿಂಗೆ ಕಲ್ತವಕ್ಕೆ ಉದ್ಯೋಗದ ವ್ಯವಸ್ಥೆ ಅಪ್ಪ ಕೋರ್ಸುಗಳನ್ನು ಮಡುಗೆಕ್ಕು ಅದಲ್ಲದ್ದೆ ಕಲ್ತಿಕ್ಕಿ ಉದ್ಯೊಗ ಸಿಕ್ಕುಲೆ ಸಮಸ್ಯೆ ಇಪ್ಪವಕ್ಕೆ ಒಂದು ಪರಿಹಾರವು ನಾವೆ ಮಾಡೆಕ್ಕು..ಎನ್ನ ಅಭಿಪ್ರಾಯ ಮಾತ್ರ..
Elloru kai serusidare enta bekadaru madlakku. Banni idu ellora samsthe. Idu namage bekaddu. Namma gurugala kansu. Bettukaje manige ondu suddi. “innana besageli “employability” heli 2 tingala programme madutheyo. Placement arrangement kooda iruthu.
ಖಂಡಿತ ಅಪ್ಪಚ್ಚಿ..ಎನ್ಂಗ ಇದ್ದೆಯ ಇದರ ನಾವೆ ಬೆಳೆಸೆಕ್ಕು..ಅದು ಒಲ್ಲೆಯ ಕಾರ್ಯಕ್ರಮ..ಹಂಡಿತ ಬತ್ತೆ…ಎನ್ನ ಸಹಕಾರ ಎಡಿಗಾದ ರೀತಿಲಿ ಮಡುವೆ..