ವೇಣಿಯಕ್ಕ° 17/07/2012
ಹಲಸಿನ ಹಣ್ಣು ಪೆರಟಿ ಬೇಕಪ್ಪ ಸಾಮಾನುಗೊ: 2-3 ಸಾಧಾರಣ ಗಾತ್ರದ ಹಲಸಿನ ಹಣ್ಣು 2-3 ಚಮ್ಚೆ ಸಕ್ಕರೆ (ಬೇಕಾದರೆ ಮಾತ್ರ) ಮಾಡುವ ಕ್ರಮ: ಕೈಗೆ ರೆಜ್ಜ ಎಣ್ಣೆ ಪಸೆ ಮಾಡಿ, ಹಲಸಿನ ಹಣ್ಣಿನ ಕೊರದು ಕಡಿ ಮಾಡಿ, ಗೂಂಜು ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕಡಿಂದ ಸೊಳೆಯ ತೆಗೆರಿ. ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಪ್ರತಿ ಸೊಳೆಂದ ಪೊದುಂಕುಳು, ಹೂಸಾರೆ, ಬೇಳೆ ಎಲ್ಲ ತೆಗೆರಿ. ಹಲಸಿನ ಹಣ್ಣಿನ ಒಂದು ಬಾಣಲೆ ಅಥವಾ ಉರುಳಿಲಿ ಹಾಕಿ ಬೇಶಿ. (ಬೇಕಾದರೆ ಹಲಸಿನ ಹಣ್ಣಿನ ಮಿಕ್ಸಿಲಿ ಹಾಕಿ ರೆಜ್ಜ ಕ್ರಶ್ ಮಾಡ್ಲೆ ಅಕ್ಕು). ಇದರ ಹದ ಕಿಚ್ಚಿಲ್ಲಿ ಗಟ್ಟಿ ಅಪ್ಪನ್ನಾರ ಕಾಸಿ. (ತುಂಬ ಗಟ್ಟಿ ಮಾಡದ್ದರೆ ಇದರ ಪ್ರಿಜ್ ಲ್ಲಿ ಮಡುಗೆಕ್ಕು) ತಣುದ ಮೇಲೆ ಇದಕ್ಕೆ 2-3 ಚಮ್ಚೆ ಸಕ್ಕರೆ ಉದುರ್ಸಿ, ಲಾಯಿಕಲಿ ತೊಳಸಿ, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಉಂಡೆ ಮಾಡಿ, ಒಂದು ಪ್ಲಾಸ್ಟೀಕು ಕರಡಿಗೆಲಿ ತೆಗದು ಮಡುಗಿ.