ವಿಜ್ಞಾನ ಕಲಿವಲೆ ಸುರು ಅಪ್ಪದು ಪ್ರಕೃತಿಯ ವೀಕ್ಷಣೆಂದ, ಸಿ.ವಿ. ರಾಮನ್ ಅವರಂತಹ ಮೇಧಾವಿ ವಿಜ್ಞಾನಿಗಳ ಜೀವನವ ನೋಡಿ ಪಾಶ್ಚಾತ್ಯರ ಅನುಕರಣೆ ಬಿಟ್ಟು ದೇಶ ಪ್ರೇಮ, ದೇಶದ ಅಭಿವೃದ್ಧಿ ಮೊದಲಾದ ಸದಾಚಾರಂಗಳ ಬೆಳೆಸಿಕೊಳ್ಳೆಕ್ಕು ಹೇಳಿ ಹೇಳಿಕೊಂಡು ಸಿ.ವಿ. ರಾಮನ್ ಅವರ ಪೂರ್ತಿ ಜೀವನ ಚರಿತ್ರೆಯ ಮಕ್ಕೊಗೆ ಅರ್ಥಗರ್ಭಿತವಾಗಿ ಹೇಳಿಕೊಟ್ಟು ಪ್ರಚೋದಕ ಭಾಷಣ ಕಾಸ್ರೋಡಿಲ್ಲಿ ಮಾಡಿದ್ದು ಅಂತಿಂಥವಲ್ಲ, ಕೇರಳ ಸರ್ಕಾರದ ಪ್ರಿನ್ಸಿಪಾಲ್ ಸೆಕ್ರೆಟರಿ.
ಲೆಕ್ಕ ಮಾಡದ್ರೆ ವಿಜ್ಞಾನ ಸೊನ್ನೆ, ಅದೇ ರೀತಿ ವೈಜ್ಞಾನಿಕ ಆಧಾರ ಇಲ್ಲದ್ದೆ ಮಾಡ್ಲೆ ಹೆರಟರೆ ಅಭಿವೃದ್ಧಿಯ ಕಾರ್ಯವೂ ಒಂದು ದೊಡ್ಡ ಸೊನ್ನೆ, ವಿಜ್ಞಾನವೇ ಅಭಿವೃದ್ಧಿಗೆ ಆಧಾರ, ವಿಜ್ಞಾನವ ಲಾಯಕಕ್ಕೆ ಕಲ್ತು ಉಷಾರಿಆಗಿ ದೇಶದ ಅಭಿವೃದ್ಧಿ ಮಾಡೆಕ್ಕು ಈಗಾಣ ಮಕ್ಕೊ.
ಹೀಂಗೆ ಹೇಳಿದ್ದು ಶ್ರೀಮತಿ ರಾಜಲಕ್ಷ್ಮಿ ಮೇಡಂ, ಕಾಸ್ರೋಡು ಸರ್ಕಾರೀ ಕೋಲೇಜಿನ ಪ್ರಿನ್ಸಿಪಾಲ್ತಿ, ಅವು ಲೆಕ್ಕದ ಪ್ರೊಫೆಸರು.
ದೂರ ಸಂವೇದಕಂಗಳ ಬಳಕೆ, ಅದರ ಮೂಲಕ ತೆಗದ ಪಟಂಗಳ ಬಳಕೆ, ಅದರ ಮೂಲಕ ಭೂಮಿಯ ಅಧ್ಯಯನ, ಪಟ್ಟಣಂಗಳ, ಕೃಷಿಯ, ಹವಾಮಾನವ ಎಲ್ಲಾ ತಿಳ್ಕೊಂಡು ಯೋಜನಗಳ ಮಾಡುವ ಕ್ರಮಂಗಳಿಂದ ಸ್ಪಷ್ಟ ಮತ್ತೆ ನಿಖರ ವ್ಯವಸ್ಥಗೊ ಇದ್ದು ಹೇಳಿ ರವೀಂದ್ರನ್ ಹೇಳುವ ಪಯ್ಯನ್ನೂರಿನ ರಿಮೋಟ್ ಸೆಂಸಿಂಗಿನ ರಿಟೈರ್ಡ್ ವಿಜ್ಞಾನಿ ಮಕ್ಕಳ ಆ ವಲಯಕ್ಕೆ ಸೆಳಕ್ಕೊಂಡವು.
ಮೊನ್ನೆ ನವಂಬರ ೭ ನೇ ತಾರೀಕಿಂಗೆ ಎಂಗೊ ಕಾಸ್ರೋಡು ಸರ್ಕಾರೀ ಕೋಲೇಜಿನ ಸಭಾಮಂಟಪಲ್ಲಿ ವಿಜ್ಞಾನಿ ಸಿ.ವಿ. ರಾಮನ್ ಅವರ ಹುಟ್ಟುಹಬ್ಬದ ದಿನ ಸ್ವದೇಶೀ ವಿಜ್ಞಾನ ಸಮ್ಮೇಳನದ ಅಂಗವಾಗಿ, “ವಿದ್ಯಾರ್ಥಿ – ವಿಜ್ಞಾನಿ ಮುಖಾಮುಖಿ” ಕಾರ್ಯಕ್ರಮ ವಿದ್ಯಾನಗರಲ್ಲಿ ಮಾಡಿತ್ತಿದ್ದಿಯೊ°. ಅಲ್ಯಾಣ ವಿಚಾರ ಇನ್ನುದೇ ತುಂಬಾ ಹೇಳ್ಲೆ ಇದ್ದು.
ಶುರುವಿಂಗೆ ಕಾರ್ಯಕ್ರಮಕ್ಕೆ ಮಕ್ಕೊ ಬಂದು ಕೂಬಲೆ ಸುರು ಮಾಡುವಗಳೇ ಅಲ್ಲಿ ಬಂದಿತ್ತಿದ್ದ ಡಾ. ವಿ.ಪಿ.ಎನ್. ನಂಬೂರಿ ಹೇಳ್ತ ಕೊಚ್ಚಿಯ ಫಿಸಿಕ್ಸ್ ಪ್ರೊಫೆಸರು, ಖ್ಯಾತ ಲೆಕ್ಕದ ಮೇಧಾವಿ ಶ್ರೀನಿವಾಸ ರಾಮಾನುಜನ್ ಅವರ ೧೫೦ನೆ ವರ್ಷದ ನೆಂಪಿಂಗೆ ಒಂದು ಸಂಕ್ಷಿಪ್ತ ವಿಡಿಯೋ ಚಾಲನೆ ಮಾಡಿ ಮಕ್ಕಳ ಚಿಂತನೆಯ ಕೆಂದ್ರೀಕೃತ ಮಾಡಿದವು.
ಕಾರ್ಯಕ್ರಮ ಸುರು ಅಪ್ಪಗ ಡಿಗ್ರಿಗೆ ಕಲಿವ ಒಂದು ಮಲೆಯಾಳಿ ಕೂಸು ಲೋಕಗೀತೆ ಹಾಡಿ ಪ್ರಾರ್ಥನೆ ಮಾಡಿತ್ತು. ಪ್ರಿನ್ಸಿಪಾಲ್ ಸೆಕ್ರೆಟರಿ ದೀಪ ಹೊತ್ತುಸಿ ಕಾರ್ಯಕ್ರಮವ ಔಪಚಾರಿಕವಾಗಿ ಉದ್ಘಾಟನೆ ಮಾಡಿದವು.
ಪ್ರತಿಯೊಬ್ಬ ಮಕ್ಕೊಗುದೆ ರಾಮನ್, ವಿಶ್ವೇಶ್ವರಯ್ಯ, ಅಬ್ದುಲ್ ಕಲಾಂ, ಹರ್ ಗೋಬಿಂದ್ ಖೊರಾನಾ, ಬೋಸ್, ರಾಮಾನುಜ, ಆರ್ಯಭಟ, ವಾಗ್ಭಟ, ಸುಶ್ರುತ, ಅಪ್ಪಲೆ ಸಂದರ್ಭ ಒದಗುಸಿ ಕೊಡೆಕಾದ್ದದು ಮತ್ತೆ ಅವಕ್ಕೆ ಆ ರೀತಿ ಆಯೆಕ್ಕು ಹೇಳುವ ಆಶೆ ಬೇಕಾದ್ದದೇ ಮುಖ್ಯ. ಆರದ್ದುದೆ ಬುದ್ಧಿ ಶಕ್ತಿ – ಪ್ರತಿಭೆ – ಸಂದರ್ಭ ಕಮ್ಮಿ ಅಲ್ಲ. ನಮ್ಮ ಇಂದ್ರಾಣ ಮಕ್ಕೊ ನಾಳೆ ದೊಡ್ಡ ದೊಡ್ಡ ವಿಜ್ಞಾನಿಗೊ ಆಗಿ, ಚೈನಾ, ಅಮೇರಿಕಾ, ರಷ್ಯಾ, ಜರ್ಮನಿ, ಜಪಾನ್ ಗೊ ನಮ್ಮ ಹಿಂದೆ ಬಪ್ಪ ಹಾಂಗೆ ಸುಶೋಭಿತ ಭಾರತ ನಿರ್ಮಾಣ ಮಾಡೆಕ್ಕು ಹೇಳಿ ಡಾ. ಜಿ.ಎಂ ನಾಯರ್ ಹೇಳಿದವು.
ವಾತಾವರಣ, ಮಣ್ಣು, ಜೀವ ಸಂಪನ್ಮೂಲಂಗೊ ಇವುಗಳ ಅತಿಯಾದ ದುರ್ಬಳಕೆ, ಪರಿಸರ ವಿನಾಶ, ನೈಸರ್ಗಿಕ ವಿಕೋಪ ಮುಂತಾದ್ದರ ಬಗ್ಗೆಯೂ, ಅದರ ಉಳಿಸಿಕೊಂಡು, ಕೆಟ್ಟು ಹೋಪದರ ಸರಿಪಡಿಸಿಕೊಂಡುದೆ ಹೋಪಲೆ ವಿಜ್ಞಾನವ ಉಪಯೋಗುಸಿರೆ ಈ ಭೂಮಿಲಿ ಹೆಚ್ಚು ಸಮಯ ಜೀವನ ನೆಡೆಶಿಕೊಂಡು ಸುಸ್ಥಿರವಾಗಿ ಇಪ್ಪಲಕ್ಕು ಹೇಳಿ ಡಾ. ಉನ್ನಿ ಹೇಳಿದವು.
ಈ ಕಾರ್ಯಕ್ರಮಲ್ಲಿ ಭಾಗವಹಿಸಿದ ವಿಜ್ಞಾನಿಗೊ ಇಲ್ಲಿ ಕೆಳ ಕೊಟ್ಟ ಪಟ್ಟಿಯ ಪ್ರಕಾರ ಇದ್ದವು:
- ಸ್ವದೇಶೀ ವಿಜ್ಞಾನ ಪ್ರಸ್ಥಾನದ ಅಧ್ಯಕ್ಷ, ಒಟ್ಟಿಂಗೇ ಕೊಚ್ಚಿ ಯುನಿವರ್ಸಿಟಿಯ ಲೇಸರ್ ಫಿಸಿಕ್ಸ್ ಎಮೆರಿಟಸ್ ಪ್ರೊಫೆಸರ್ ಡಾ. ವಿ.ಪಿ.ಎನ್. ನಂಬೂರಿ
- ಕೇರಳ ಸರ್ಕಾರದ ವಿಜ್ಞಾನ, ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ – ಯು.ಜಿ.ಸಿ., ಇಗ್ನೋ ಮೊದಲಾದಲ್ಲಿ ಕುಲಪತಿ ಆಗಿತ್ತಿದ್ದ ಶ್ರೀ ರಾಜಶೇಖರನ್ ಪಿಳ್ಳೆ
- ಕೇಂದ್ರೀಯ ವಿಶ್ವವಿದ್ಯಾಲಯ ಕಾಸ್ರೋಡು ಇದರ ಬಯೋಟೆಕ್ನೋಲಜಿ ಪ್ರೊಫೆಸರ್ ಡಾ. ಜಿ.ಎಮ್. ನಾಯರ್
- ರಾಷ್ಟ್ರೀಯ ದೂರ ಸಂವೇದಿ ವಿಭಾಗದ ವಿಜ್ಞಾನಿ ಆಗಿ ಅಸ್ಸಾಂ ಇಂದ ವೃತ್ತಿ-ನಿವೃತ್ತಿ ಆದ ಪಯ್ಯನ್ನೂರಿನ ಡಾ. ಕೆ.ವಿ. ರವೀಂದ್ರನ್
- ಜೋರ್ಹಾಟ್ ಅಸ್ಸಾಮಿಲ್ಲಿಪ್ಪ ಸಿ.ಎಸ್.ಐ.ಆರ್. ಪೂರ್ವೋತ್ತರ ಇಲಾಖೆಯ ಮುಖ್ಯ ಬಯೋಟೆಕ್ನಾಲಜಿ ವಿಜ್ಞಾನಿ ಡಾ. ಬಿ.ಜಿ. ಉನ್ನಿ
- ಸಿ.ಪಿ.ಸಿ.ಆರ್.ಐ. ಯ ಸಾಮಾಜಿಕ ವಿಜ್ಞಾನ ವಿಭಾಗದ ಹೆಡ್ ಮತ್ತೆ ಸ್ಟಾಟಿಸ್ಟಿಷಿಯನ್ ಡಾ. ಕೆ. ಮುರಲೀಧರನ್
- ಸರ್ಕಾರೀ ಕೋಲೇಜು ಜುವಾಲಜಿ ಪ್ರೊಫೆಸರ್ ಡಾ. ಎಸ್.ಎಮ್. ಘೋಷ್
- ಸಿ.ಪಿ.ಸಿ.ಆರ್.ಐ. ಯ ತಂತ್ರಜ್ಞಾನ ಮಾಹಿತಿ ಅಧಿಕಾರಿ ಶ್ರೀ ಮುರಲಿಕೃಷ್ಣ ಹಳೆಮನೆ.
ಮಕ್ಕೊ ಕೇಳಿದ ತುಂಬ ಪ್ರಶ್ನಗೊಕ್ಕೆ ವಿಜಾನಿಗೊ ಸಮರ್ಪಕ ಉತ್ತರ ಕೊಟ್ಟವು. ಕಡೇಂಗೆ ಕೆಲವು ಮಕ್ಕೊಗೆ ತುಂಬ ಪ್ರಶ್ನೆಗಳೂ, ಸಂಶಯಂಗಳೂ ಬಪ್ಪಲುದೆ, ಅಭಿರುಚಿ ಉಕ್ಕಿ ಹರಿವಲುದೆ ಶುರು ಆತು. ಆದರೆ ಸಮಯದ ಅಭಾವಂದ ಅವರ ಹತ್ರೆ ಪ್ರಶ್ನೆಗಳ ಬರದು ತೆಕ್ಕೊಂಡು ಮತ್ತೆ ಹೆಚ್ಚಿನ ಸಂಶಯಂಗಳ ಶಾಲೆಯ ಮಾಸ್ಟ್ರಕ್ಕಳೊಟ್ಟಿಂಗೆ ಆಲೋಚಿಸಿಕೊಂಡು ಸ್ವದೇಶೀ ವಿಜ್ಞಾನ ಪ್ರಸ್ಥಾನದ ಕಾಸ್ರೋಡು ಶಾಖಗೆ ಮಿಂಚಚೆ ಕಳುಸುಲುದೇ ಹೇಳಿಕೊಂಡು ಕಾರ್ಯಕ್ರಮ ಮುಗಿಸಿಕೊಂಡದು.
ಮತ್ತುದೇ ಸುಮಾರು ಅರ್ಧ ಗಂಟೆ ಮಕ್ಕೊ ವಿಜ್ಞಾನಿಗಳ ಸುತ್ತು ಹಾಕಿಕೊಂಡು ಪ್ರಶ್ನೆ ಕೇಳಿಕೊಂಡೇ ಇತ್ತಿದ್ದವು. ಇನ್ನು ಹೆಚ್ಚಿನ ಸಂವಾದ ಇಂಟರ್ನೆಟ್ಟಿಲ್ಲಿ ಮುಂದುವರಿಗು.
ಚರ್ಚಗೆ ಬಂದ ಕೆಲವು ವಿಚಾರಂಗೊ ಈ ರೀತಿ ಇದ್ದು.
- ಹಿಗ್ಸ್ ಪಾರ್ಟಿಕಲ್ – ದೇವ ಕಣ
- ಲೇಸರ್ ಕಿರಣವ ಆಯುಧಲ್ಲಿ ಬಳಕೆ
- ಬೆಣ್ಚಿಂದ ವೇಗದ ಚಲನೆ
- ನ್ಯೂಟ್ರಿನೊ ಪ್ರೋಜೆಕ್ಟಿನ ವಿಚಾರ
- ಗ್ರಹಂಗಳ ಭ್ರಮಣ ಪಥಂಗೊ
- ರೋಕೆಟ್ ಉಡಾವಣೆ
- ಕಂಪ್ಯೂಟರ್ ವೈರಸ್
- ಇಲೆಕ್ಟ್ರಿಕ್ ಮತ್ತೆ ಇಲೆಕ್ಟ್ರಾನಿಕ್ ಉಪಕರಣಂಗೊ
- ಖನಿಜ ಸಂಪತ್ತು
- ಪರಿಸರ ಸಂರಕ್ಷಣೆ
- ಮೊಬೈಲ್ ವಿಕಿರಣದ ಮಾರಣಾಂತಿಕ ಬಾಧೆ
- ಟೋಟಿಪೊಟೆನ್ಸಿಯುದೇ, ಡೀಲಿಮಿಟೆಡ್ ಬೆಳವಣಿಗೆಯುದೆ
- ಜ್ಯೋತಿಷ್ಯದ ವೈಜ್ಞಾನಿಕತೆ
- ಹಕ್ಕಿಗಳ ವಲಸೆ
ಇತ್ಯಾದಿ..
ಸುತ್ತುಮುತ್ತಾಣ ಹಲವಾರು ಶಾಲೆಯ ಮಕ್ಕಳ ಸೇರುಸಿಕೊಂಡು ಮಾಸ್ಟ್ರಕ್ಕೊ ಬಯಿಂದವು. ಭಾಗವಹಿಸಿದ ಶಾಲಗಳ ಹೆಸರುದೆ ಇಲ್ಲಿ ಕೆಳ ಪಟ್ಟಿಲಿ ಸೇರುಸಿದ್ದು:
೧. ಶ್ರೀ ಕೃಷ್ಣ ವಿದ್ಯಾಲಯ, ಶೇಡಿಕಾವು, ಕುಂಬ್ಳೆ,
೨. ಶ್ರೀ ಭಾರತೀ ವಿದ್ಯಾಪೀಠ, ಮುಜುಂಗರೆ
೩. ನವಜೀವನ ಹೈಸ್ಕೂಲು ಪೆರಡಾಲ,
೪. ಶ್ರೀ ಸತ್ಯನಾರಾಯಣ ಹೈಸ್ಕೂಲು ಪೆರ್ಲ
೫. ಚಿನ್ಮಯ ವಿದ್ಯಾಲಯ ವಿದ್ಯಾನಗರ
೬. ಚಿನ್ಮಯ ವಿದ್ಯಾಲಯ ನೀಲೇಶ್ವರ
೭. ಕೇಂದ್ರೀಯ ವಿದ್ಯಾಲಯ, ಸಿ.ಪಿ.ಸಿ.ಆರ್.ಐ.
೮. ಕೇಂದ್ರೀಯ ವಿದ್ಯಾಲಯ, ವಿದ್ಯಾನಗರ
೯. ಲಿಟ್ಲ್ ಲಿಲ್ಲಿ ಇಂಗ್ಲಿಷ್ ಮೀಡಿಯಂ ಶಾಲೆ, ನಾಯ್ಕಾಪು
೧೦. ಜೈ ಮಾತಾ ಶಾಲೆ, ಉಳಿಯತ್ತಡ್ಕ
೧೧. ಎಸ್ಸಾ ಶಾಲೆ, ಕುಂಬ್ಳೆ
೧೨. ಅಪ್ಸರಾ ಶಾಲೆ ಕಾಸ್ರೋಡು
೧೩. ಸೈಂಟ್ ಮೇರೀಸ್ ಶಾಲೆ, ಬೇಳ
೧೪. ಡಿ.ಐ.ಎ.ಟಿ. ಮಾಯಿಪ್ಪಾಡಿ
೧೫. ಸರ್ಕಾರೀ ಕೋಲೇಜು ಕಾಸ್ರೋಡು
ಎಂಗಳ ಪರಿಚಯದ ಕೆಲವು ಮಾಸ್ಟ್ರಕ್ಕಳುದೆ, ಮಕ್ಕಳುದೆ ಈ ಕಾರ್ಯಕ್ರಮಕ್ಕೆ ಬಂದು ಎಂಗೊಗೆ ಹೆಮ್ಮೆ ತಯಿಂದವು.
ಕಾರ್ಯಕ್ರಮ ನೆಡೆಶಿ ಕೊಡುಲೆ ಬೈಲಿನ ವ್ಯಕ್ತಿ ಹಳೆಮನೆ ಹರೀಶಣ್ಣ ಸಕ್ರಿಯ ಪಾತ್ರ ವಹಿಸಿದ್ದವು. ಪಟ ತೆಗದ್ದದು ಅವುದೇ ಕುಂಚಿನಡ್ಕ ಶಾಮಣ್ಣನುದೇ ಸೇರಿಕೊಂಡು.
ಎಂಗೊ ಈ ಕಾರ್ಯಕ್ರಮ ಮಾಡಿದ್ದರ ಉದ್ದೇಶ ವಿಜ್ಞಾನ ಕಲಿವ ಆಸಕ್ತಿ ಮಕ್ಕಳಲ್ಲಿ ಕುದುರುಸುವದು, ಭಾರತೀಯ ಅಪ್ರತಿಮ ವಿಜ್ಞಾನಿಗಳ ಬಗ್ಗೆ ಅರಿಕೆ ಮೂಡುಸಿ ಪಾಶ್ಚಾತ್ಯ ವಿಜ್ಞಾನವೇ ದೊಡ್ದ, ನಾವು ಭಾರತೀಯರು ಎಂತಕ್ಕೂ ಬೇಡದ್ದವು ಹೇಳುವ ತಪ್ಪು ಕಲ್ಪನೆ ಬೆಳೆಯದ್ದ ಹಾಂಗೆ ಪ್ರೋತ್ಸಾಹ ಕೊಡುವದು, ಪ್ರಾದೇಶಿಕ ಬೆಳವಣಿಗೆ, ದೇಶಪ್ರೇಮ ಮುಂತಾದ ಆಶಯಂಗಳ ಬೆಳೆಸುವದು, ವಿಜ್ಞಾನ, ತಂತ್ರಜ್ಞಾನಲ್ಲಿ ಕೇವಲ ವೃತ್ತಿಪರ ಅಭಿಪ್ರಾಯಂದ, ಹೆಚ್ಚು ಉನ್ನತ ಶಿಕ್ಷಣ, ಸಂಶೋಧನೆ ಇದರ ಅಗತ್ಯದ ಕುರಿತು ಜಾಗೃತಿ ಮೂಡುಸುವದು, ಈ ರೀತಿ..
ಹೀಂಗಿತ್ತಿದ್ದು ಉದಿಯಪ್ಪಗ ೯:೩೦ ಕ್ಕೆ ಶುರುವಾಗಿ ಮಧ್ಯಾನ ಒಂದೂವರೆ ವ್ರೆಗೆ ವಿದ್ಯಾರ್ಥಿ – ವಿಜ್ಞಾನಿ ಮುಖಾಮುಖಿ. ಮತ್ತೆ ಎಲ್ಲೋರಿಂಗುದೆ ಚಪಾತಿ ಗಸಿಯುದೆ – ಚಾಯವುದೆ… ಈಟಿಂಗು ಇಲ್ಲದ್ರೆ ಮೀಟಿಂಗು ಪೂರ್ತಿ ಆಗ ಹೇಳಿ ಅಲ್ಲ… ವೆನ್ ದ ಬ್ರೈನ್ ಈಸ್ ಹಂಗ್ರೀ, ಸ್ಟೋಮಕ್ ಶುಡ್ ನಾಟ್ ಬಿ ಕೆಪ್ಟ್ ಹಂಗ್ರೀ ಹೇಳಿ..
ನಿಂಗಳುದೇ ಎಂಗಳ ಈ ಕಾರ್ಯಲ್ಲಿ ಕೈ ಜೋಡುಸಿ..
ಮಿಂಚಂಚೆ: hmkrishna@outlook.com
ಕೆಲವು ಪಟಂಗೊ:
- ತೆಂಗಿನ ಮರಂಗೊಕ್ಕೆ ಕೀಟದ ಹಾವಳಿ - November 12, 2017
- ಕಾರಿಂಜ ಹಳೆಮನೆ ಶ್ರೀ ಶಂಭಟ್ಟರು ಇನ್ನಿಲ್ಲೆ - August 25, 2014
- ಸಿ.ಪಿ.ಸಿ.ಆರ್.ಐ.ಯ ತೆಂಗು, ಅಡಕೆ, ಕೊಕ್ಕೋಗೆ ಅಪೇಕ್ಷೆ ಸಲ್ಲುಸಲಕ್ಕು - December 29, 2013
ಒಳ್ಳೆ ಒಂದು ಕಾರ್ಯಕ್ರಮದ ಶುದ್ದಿ ಓದಿ ಕೊಶಿ ಆತು ಭಾವ.
murali bhava, anude ade college na old student karyakramada v vara odi tumba khushi atu anu allige banda hange atu dhanyavadango
ಸ್ವದೇಶೀ ವಿಜ್ಞಾನ ಪ್ರಸ್ಥಾನ ಕೇರಳ http://www.ssmkerala.org ಈಗಾಗಲೇ ಎರಡು ರಾಷ್ಟ್ರೀಯ ಪುರಸ್ಕಾರಂಗಳ ವಿಜ್ಞಾನ ಪ್ರಸಾರಕ್ಕಾಗಿ ಪಡಕ್ಕೊಂಡಿದು. ಅವರ ಈ ರೀತಿಯ ಹಲವಾರು ಕಾರ್ಯಕ್ರಮಂಗೊ ಮಾಡುಲೆ ನಮ್ಮ ಕೆಲಸ – ವೇದಿಕೆ ನೀಡುವದು, ಮತ್ತೆ ಶ್ರೋತೃಗಳ ಸೇರುಸುವದು, ಇಷ್ಟೇ. ಆದರೆ ಶ್ರೋತೃಗಳ ಸೇರುಸುವದು ಚೂರು ಕಷ್ಟದ ಕೆಲಸವೇ. ಕಾಸ್ರೋಡಿಲ್ಲಿಪ್ಪವಕ್ಕೆ ಈ ವಿಷಯಲ್ಲಿ ಚೂರು ಹಿಂಜರಿಕೆ ಹೆಚ್ಚು. ಹಾಂಗಾಗಿ ಪುನ್ಃ ಪುನ್ಃ ನೆಂಪು ಮಾಡುಸಿ ಆಹ್ವಾನುಸೆಕ್ಕಾವುತ್ತು.
ವಿಜಯತ್ತಿಗೆ, ಶರ್ಮಣ್ಣ ಇವರ ಶುಭ ಹಾರೈಕಗೆ ಧನ್ಯವಾದಂಗೊ.
ಒಳ್ಳೆ ಕಾರ್ಯಕ್ರಮವ ಆಯೋಜಿಸಿದ CPCRI ಟೀಮಿಂಗೆ ಅಭಿನಂದನೆಗೊ. ಈ ಎಲ್ಲಾ ಕಾರ್ಯಕ್ರಮ ಯಶಸ್ವಿ ಅಪ್ಪಲೆ ಹೆಗಲು ಕೊಟ್ಟು ಕೆಲಸ ಮಾಡಿ, ವರದಿಯ ಪ್ರಸ್ತುತಪಡಿಸಿದ ಮುರಳಿಗೆ ಧನ್ಯವಾದಂಗೊ
ಇದೊಂದು ಪ್ರಥಮ ಹಂತ ಆಗಿ, ಇನ್ನು ಮುಂದಾಣ ಕಾರ್ಯಕ್ರಮಂಗೊ ದೊಡ್ಡ ಮಟ್ಟಿಂಗೆ ಯಶಸ್ವಿ ಆಗಲಿ ಹೇಳಿ ಹಾರೈಕೆಗೊ
ಕಾರ್ಯಕ್ರಮ ಲಾಯಿಕಾದ ಬಗ್ಗೆ ಶಾಲೆಲಿ ಮಕ್ಕೊ ಹೇಳಿದವು ಹಿ೦ಗಿದ್ದ ಕಾ ರ್ಯಕ್ರಮ ಇನ್ನು ಇನ್ನೂ ಬರಲಿ
ಗ್ರ೦ಥಪಾಲಕಿ, ವಿದ್ಯಾಪೀಟ ಮುಜು೦ಗಾವು
ಒಂದು ಒಳ್ಳೆ ಕಾರ್ಯಕ್ರಮದ ಲಾಯ್ಕ ವರದಿ. ಕಾಸ್ರೋಡು ಜಿಲ್ಲೆಯ ಹದಿನೈದು ವಿದ್ಯಾಸಂಸ್ಥೆಂದ ಮಕ್ಕೊ ಬಂದು ಭಾಗವಹಿಸಿದ್ದು ಕಾರ್ಯಕ್ರಮ ಯಶಸ್ವಿ ಆದ್ದಕ್ಕೆ ಸಾಕ್ಷಿ.
ಎಂಗೊಗೆ ೫೦೦ ಮಕ್ಕಳ ಸೇರುಸಿಕೊಂಬ ಲಕ್ಷ್ಯ ಇತ್ತಿದ್ದು, ಆದರೆ ಆಂದು, ಮರದಿನ ಕಾಸ್ರೋಡು ಉಪಜಿಲ್ಲೆಯ ವಿಜ್ಞಾನ ಮೇಳವುದೇ ಇತ್ತಿದ್ದ ಕಾರಣ ಪಾಲ್ಗೊಂಬವರ ಸಂಖ್ಯೆ ಕಮ್ಮಿ ಆತು. ಇನ್ನು ಮುಂದೆಯೂ ಈ ರೀತಿ ಕಾರ್ಯಕ್ರಮ ಮಾಡುವ ಯೋಚನೆ ಇದ್ದು.