- ಮಹಾನಗರದ ಮಹಾನ್ ಸಾಧಕಿ – ಡಾ.ಸುನಂದ ನಾರಾಯಣ ಭಟ್. - May 18, 2015
- ರಾಮಾಯಣ ಅಲ್ಲ ಪಿಟ್ಕಾಯನ - April 4, 2015
- ಪಾರುವ ಸ್ವಗತ - June 23, 2014
ಹೊಸ ವರ್ಷ ಬಂತು.ಉದಿಯಪ್ಪಗ ಎದ್ದಿಕ್ಕಿ ಮನೆಲಿಪ್ಪ ಹಳೆ ಕ್ಯಾಲೆಂಡರಿನ ತೆಗದು ಹೊಸತ್ತರ ನೇಲ್ಸಿ ಆತು.ಚೆನ್ನೈಭಾವ ಕಳುಸಿದ ಹೊಸ ಡೈರಿಲಿ ಒಪ್ಪಕ್ಕೆ ಎನ್ನ ಹೆಸರು ಬರದೂ ಆತು.”ಇಂದು ಆಫೀಸಿಂಗೆ ರಜೆ” ಹೇದು ಶುರುವಾಣ ತಿಂಗಳಿನ ಶುರುವಾಣ ತಾರೀಕಿನ ಅಡಿಲಿ ಶುರುವಾಣ ಗೆರೆಲಿ ಒಪ್ಪಕ್ಕೆ ಬರದೂ ಆತು. ಅದು ಬಿಟ್ರೆ ವಿಷು-ಯುಗಾದಿಯ ಆಚರಿಸುತ್ತ ಹಾಂಗೆ ಬೇರೆಂತ ವಿಶೇಷ ನವಗಂತೂ ಇಲ್ಲೆ ಬಿಡಿ.
ಕಳುದ ವರ್ಷ ಇಡೀ ನಮ್ಮ ಬೈಲಿಲಿ “ಸಮಸ್ಯಾಪೂರಣ”ಂದಲಾಗಿ ಸುಮಾರು ನಮುನೆ ಛಂದಸ್ಸಿನ ಪರಿಚಯ ಆಯಿದು.ಸುಮಾರು ಜೆನ ಹೊಸ ಪ್ರತಿಭೆಗಳ ಪರಿಚಯವೂ ಆಯಿದು.ಕನ್ನಡ ಛಂದಸ್ಸಿನ ಚೌಕಟ್ಟಿಲಿ ಹವ್ಯಕ ಭಾಷೆಲಿಯೂ ಪದ್ಯ ರಚನೆ ಮಾಡ್ಲೆ ಎಡಿಗಾವುತ್ತು ಹೇಳ್ತದರ ಬರದು ತೋರ್ಸಿದ್ದವು.2014 ಹೇಳ್ವಗ ಕನ್ನಡ ಛಂದಸ್ಸಿನ ಒಂದು ಪ್ರಕಾರ ಎನ್ನ ಗಮನಕ್ಕೆ ಬತ್ತು. ಅದರ ಬಗ್ಗೆಯೇ ಈ ಶುದ್ದಿ.ಇದು 20-14ರ ಚೌಕಟ್ಟಿಪ್ಪ ಪದ್ಯ.ಪ್ರತೀ ಪದ್ಯಲ್ಲಿಯೂ 14 ಸಾಲು, ಪ್ರತಿ ಸಾಲಿಲಿಯೂ 20 ಮಾತ್ರೆ (ನಾಲ್ಕು ಪಂಚಮಾತ್ರಾ ಗಣ) ಇಪ್ಪ ಪದ್ಯ – ಅದುವೇ ಕನ್ನಡದ ಸೋನೆಟ್.14 ಪಾದಲ್ಲಿಪ್ಪ ಕಾರಣ ‘ಚತುರ್ದಶಪದಿ’ ಹೇಳಿಯೂ,8-6 ರ ಎರಡು ಖಂಡಲ್ಲಿಪ್ಪ ಕಾರಣ ‘ಅಷ್ಟಷಡ್ಪದಿ’ ಹೇಳಿಯೂ ಹೆಸರಿದ್ದು.’ಸುನೀತ’ ಹೇಳ್ತ ಸದೃಶ ಹೆಸರೂ ಇದಕ್ಕಿದ್ದು. ಇದರ ಬಗ್ಗೆಯೇ ನಾವಿಂದು ಮಾತಾಡುವೋ.
ಇಟಲಿ ಸೋನೆಟ್ಟಿನ ತವರೂರಡ.ಇಟಲಿಯನ್ ಪದ “ಸೊನೆತ್ತೊ – ಸಣ್ಣ ಪದ್ಯ(ಕವನ)” ಶಬ್ದಂದ ಸೋನೆಟ್ ಹುಟ್ಟಿತ್ತು ಹೇಳ್ತವು.14 ಪಾದ ಇಪ್ಪ ಪದ್ಯವ 8-6 ರ ವಿಭಜನೆ ಮಾಡಿ ನಿರ್ದಿಷ್ಟ ಅಂತ್ಯ ಪ್ರಾಸದ ನಿಯಮವ ಹಾಕಿ ಪೆಟ್ರಾರ್ಕ ಹೇಳ್ತ ಕವಿ ಇದಕ್ಕೆ ಪರಿಶ್ಕೃತ ರೂಪ ಕೊಟ್ಟು “ಪೆಟ್ರಾರ್ಕನ್” ಮಾದರಿಲಿ ಕವನ ಬರದು ಪ್ರಸಿದ್ಧಿಗೆ ತಂದದು ಹೇಳಿ ಗೊಂತಾವುತ್ತು.ಈ ಮಾದರಿಲಿ ಶುರುವಾಣ 8 ಸಾಲಿನ ಖಂಡಲ್ಲಿ ಎಬಿಬಿಎ ಎಬಿಬಿಎ ರೀತಿಲಿಯೂ, ಮತ್ತಾಣ 6 ರ ಖಂಡಲ್ಲಿ ಸಿಸಿಡಿ ಸಿಸಿಡಿ ಅಥವಾ ಸಿಡಿಸಿಡಿಸಿಡಿ ಅಥವಾ ಸಿಡಿಇ ಸಿಡಿಇ ರೀತಿಯ ಅಂತ್ಯಪ್ರಾಸ ವಿನ್ಯಾಸ ಇದ್ದು.ಮುಂದೆ ಇಂಗ್ಳೀಷಿನ ಕವಿಗೊ ಮಿಲ್ಟನ್,ಕೀಟ್ಸ್,ವುಡ್ಸ್ ವರ್ಥ್ ಸೋನೆಟ್ಟಿಲಿ ಸುಮಾರು ಕವನ ಬರದವು.ಷೇಕ್ಸ್ ಪಿಯರಿನ ಸೋನೆಟ್ಟುಗೊ ತುಂಬಾ ಪ್ರಸಿದ್ಧಿ ಪಡದ್ದವು.ಆದರೆ ಇವೆಲ್ಲೋರು ಬರದ ಸೋನೆಟ್ಟು ಒಂದೇ ಮಾದರಿಲಿ ಇತ್ತಿಲೆ ಹೇಳ್ವದು ಗಮನಾರ್ಹ.ಹೆಚ್ಛಿನವು 8-6 ಮಾದರಿಲಿ ಬರದರೂ ಪ್ರಾಸ ವಿನ್ಯಾಸ ಒಂದೇ ನಮುನೆಲಿ ಇತ್ತಿಲೆ.ಮೂರು ಚತುಷ್ಪದವೂ ಒಂದು ದ್ವಿಪದವೂ ಸೇರಿ ವಿಭಿನ್ನ ಅಂತ್ಯಪ್ರಾಸ ಇಪ್ಪದು ಷೇಕ್ಸ್ ಪಿಯರ್ ಮಾದರಿ.(ಪ್ರಾಸ ವಿನ್ಯಾಸ – ಎಬಿಬಿಎ ಸಿಡಿಡಿಸಿ ಇಎಫ್ ಇಎಫ್ ಜಿಜಿ) ಇದರಲ್ಲಿ ಅಕೇರಿಯಾಣ ದ್ವಿಪದ ಕವನಕ್ಕೆ ಪರಿಣಾಮಕಾರಿಯಾದ ಮುಕ್ತಾಯ ಕೊಡ್ತು.
ಕನ್ನಡಲ್ಲಿ ಸೋನೆಟ್ಟುಗೊ
ಕನ್ನಡಲ್ಲಿ ಆದಿಪ್ರಾಸ ನಿಯಮವ ಬಿಟ್ಟು ಕವನ ರಚನೆ ಶುರು ಮಾಡಿದ ರಾಷ್ಟ್ರಕವಿ ಗೋವಿಂದ ಪೈಗಳು ಕನ್ನಡಲ್ಲಿ ಸೋನೆಟ್ ಬರದು ಪ್ರಚಾರಕ್ಕೆ ತಂದವು.ಅವರ ಕವನಂಗೊ ಹೆಚ್ಚಿನವು ಷೇಕ್ಸ್ ಪಿಯರ್ ಮಾದರಿಲಿಪ್ಪದು. ಮಾಸ್ತಿ, ಕುವೆಂಪು, ಬೇಂದ್ರೆ, ವಿನಾಯಕ, ಆಡಿಗ, ಜಿ.ಎಸ್.ಶಿವರುದ್ರಪ್ಪ ಇತ್ಯಾದಿ ಕವಿಗೊ ಸೋನೆಟ್ಟಿಲಿ ಕವನ ಬರದ್ದವು.ಕೆಲವು ಪೆಟ್ರಾರ್ಕನ್ ಮಾದರಿಲಿಯೂ, ಇನ್ನು ಕೆಲವು ಷೇಕ್ಸ್ ಪಿಯರ್ ಮಾದರಿಲಿಯೂ ಇಪ್ಪದು.ಮುಖ್ಯವಾಗಿ ಎರಡು ಮಾದರಿಯಾದರೂ, ಬೇರೆ ಬೇರೆ ಕವಿಗೊ ವಿಭಿನ್ನ ಖಂಡ ವಿಭಜನೆ ಮತ್ತೆ ಪ್ರಾಸ ವಿನ್ಯಾಸವ ಅಳವಡಿಸಿಗೊಂಡು ಸ್ವತಂತ್ರ ರೂಪ ಕೊಟ್ಟಿದವಡ. ಈ ಬಗ್ಗೆ ಡಾ|ಟಿ.ವಿ. ವೆಂಕಟಾಚಲ ಶಾಸ್ತ್ರಿಗೊ “ಕನ್ನಡ ಛಂದಃಸ್ವರೂಪ” ಪುಸ್ತಕಲ್ಲಿ ವಿಶದವಾಗಿ ವಿಮರ್ಶೆ ಮಾಡಿದ್ದವು.
ಇದೇ ಪುಸ್ತಕಲ್ಲಿ ಸೋನೆಟ್ಟಿನ ಸಾಮಾನ್ಯ ಗುಣ ಲಕ್ಷಣಂಗಳ ಕ್ರೋಢೀಕರಿಸಿ ಕೊಟ್ಟಿದವು.
- 14 ಸಾಲುಗೊ : 8-6 ರ ಎರಡು ಖಂಡಂಗೊ,ಅಥವಾ 4-4-4ರ ಮೂರು ಖಂಡ+2ರ ಒಂದು ಖಂಡ.
- ಪ್ರತೀ ಸಾಲಿಲಿ ನಾಲ್ಕು ಪಂಚಮಾತ್ರಾ ಗಣಂಗೊ ಇರೆಕ್ಕು
- ಇಡೀ ಸೋನೆಟ್ಟಿಲಿ ಒಂದೇ ಭಾವನೆ ಅಥವಾ ಚಿಂತನೆ ಇರೆಕ್ಕು.
- ಖಂಡ ವಿಭಜನೆ ಅಪ್ಪಲ್ಲಿ ಭಾವದ ತಿರುವು ಬಪ್ಪಲಕ್ಕು.
- ಅಂತ್ಯ ಪ್ರಾಸ ವಿನ್ಯಾಸಲ್ಲಿ ವೆತ್ಯಾಸ(ಭಿನ್ನತೆ) ಬಪ್ಪಲಕ್ಕು.
- ಭಾವನೆಯ ಅಥವಾ ಚಿಂತನೆಯ ಪ್ರವೇಶ,ಬೆಳವಣಿಗೆ,ಸಮರ್ಥನೆ,ಮುಕ್ತಾಯ – ಈ ನಾಲ್ಕು ವಿಭಾಗ ಅನುಕ್ರಮವಾಗಿ ಮೂರು ಚತುಷ್ಪದ ಮತ್ತೆ ಒಂದು ದ್ವಿಪದ ಖಂಡಲ್ಲಿ ಬರೆಕ್ಕಪ್ಪದು ಸಾಮಾನ್ಯ ನಿಯಮ.
ಕನ್ನಡಲ್ಲಿ ಈ ಛಂದಸ್ಸಿಂಗೆ “ಸುನೀತ” ಹೇಳಿ ಚೆಂದದ ಹೆಸರು ಸೂಚಿಸಿದ್ದು ಕವಿ ವಿನಾಯಕರು(ವಿ.ಕೃ.ಗೋಕಾಕ).ಅವು ಬರದ ಸುನೀತಂಗಳಲ್ಲಿ ಉಪಯೋಗಿಸಿದ ಅಂತ್ಯಪ್ರಾಸ ವಿನ್ಯಾಸ ಕನ್ನಡಕ್ಕೆ ಹೆಚ್ಚು ಸೂಕ್ತ ಹೇಳ್ತದು ಅವರ ಅಭಿಪ್ರಾಯ.
- ಅಆಆಅ ಅಆಆಅ ಇಈಉ ಇಈಉ/ ಅಆಆಅ ಇಈಈಇ ಉಊಎ ಉಊಎ
- ಅಆಅಆ ಇಈಇಈ ಉಊಉಊ ಎಏ
ಒಂದೊಪ್ಪ : ಹೊಸ ಕ್ಯಾಲೆಂಡರ್ ವರ್ಷ 2014 ಕ್ಕೆ 20-14 ರ ‘ಸುನೀತ’ ಹವಿಗನ್ನಡಲ್ಲಿಯೂ ಬೈಲಿಂಗೆ ಹರುದು ಬರಲಿ.ಬೈಲ ಬಂಧುಗೊಕ್ಕೆಲ್ಲ ಶುಭಾಶಯಂಗೊ.
ಸೂಚನೆ : ಹೆಚ್ಚಿನ ಮಾಹಿತಿಗೆ ಡಾ.ವೆಂಕಟಾಚಲ ಶಾಸ್ತ್ರಿಗಳ “ಕನ್ನಡ ಛಂದಃಸ್ವರೂಪ” ಓದಿ.
ಸುನೀತನ ಪರಿಚಯ ಮಾಡಿಕೊಟ್ಟ ಕುಮಾರಣ್ಣಂಗೆ ಧನ್ಯವಾದಂಗೊ.
ಸಾನೆಟ್ಟು ಎನ್ನಂದೆಡಿಯ. ಬೇಕಾರೆ ನುಸಿನೆಟ್ಟಿನ ವಿಷಯಲ್ಲಿ ನವ್ಯಕವನ ಬರವಲಕ್ಕು 🙂
ಸೋನೆಟ್ಟು ಎಡಿಯದ್ದರೆ ಹೋಗಲಿ ಬಿಡಿ.ನವ್ಯಕವನ ಬರವಲೆ “ಸುನೀತ”ನ ಪರಿಚಯ ಇದ್ದರೆ ಸಾಕು.
ಮಾವ,
ಕನ್ನಡ ಕವಿತಾಲೋಕದ ಹೊಸ ಬಾಗಿಲು ತೆಗದು ಹವ್ಯಕ ಭಾಷೆಲಿಯೂ ಪ್ರಯತ್ನ ಮಾಡುಲೆ ಉತ್ಸಾಹ ತು೦ಬುವ ಶುದ್ದಿಗೆ ಧನ್ಯವಾದ. ಅ೦ತರ್ಜಾಲಲ್ಲಿ ‘ಸುನೀತ’ ದ ಬಗ್ಗೆ ಸಿಕ್ಕಿದ ಮಾಹಿತಿ ಇಲ್ಲಿದ್ದು.
http://kn.wikipedia.org/wiki/ಕುವೆಂಪು_ಕವಿತೆ_:_ಕವಿಶೈಲ_(ಸಾನೆಟ್ಟುಗಳು)