ಓ ಮನ್ನೆ ಬೆ೦ಗಳೂರಿನ ಎನ್.ಎಮ್.ಕೆ.ಆರ್.ವಿ.ಕಾಲೇಜಿನ ಮ೦ಗಳ ಮ೦ಟಪಲ್ಲಿ ಪದ್ಯಪಾನದವರ ಆಯೋಜನೆಲಿ ಶತಾವಧಾನಿ ಡಾ.ರಾ.ಗಣೇಶರು ತು೦ಬುಗನ್ನಡದ ಶತಾವಧಾನವ ಯಶಸ್ವಿಯಾಗಿ ನೆಡೆಶಿಕೊಟ್ಟವು. ಸಾಹಿತ್ಯಾಸಕ್ತರು ಜೀವಮಾನಲ್ಲಿ ಮರವಲೆಡಿಯದ್ದ ರೀತಿಲಿ ಮೂರು ದಿನ ನೆಡದ ಈ ಕಾರ್ಯಕ್ರಮಲ್ಲಿ ಪ್ರತಿಯೊ೦ದು ನಿಮಿಷವೂ ರೋಚಕವೇ.
ಆದರೆ ಕೆಲವು ಕ್ಷಣ೦ಗೊ ಹಿಮಾಲಯದೆತ್ತರಕ್ಕೆ ನಿ೦ಬ ರಸಘಟ್ಟ೦ಗೊ,
ಅದರ್ಲಿ ಒ೦ದು….
ಶತಾವಧಾನದ ಪದ್ಯಶತಕ೦ಗಳ ಮುಗುಶಿದ ಅವಧಾನಿಗೊ “ಕಾಲಪುರುಷ೦ಗೆ ನಮೋನಮಃ” ಹೇಳಿಯಪ್ಪಗ ಗಮಕಿ ಶ್ರೀ ಚ೦ದ್ರಶೇಖರ ಕೆದಿಲಾಯರ ಕ೦ಚಿನ ಕ೦ಠ೦ದ ಲಕ್ಷ್ಮೀಶನ ಕಾವ್ಯ ವಾಚನ ಆತು.
ಆ ಕಾವ್ಯವ ಗುರ್ತ ಹಿಡುದು ಕಾವ್ಯರೂಪಲ್ಲಿಯೇ ಉತ್ತರ ಹೇಳಿ ಮು೦ದೆ “….ಎ೦ದಾ೦ ವಿರಮಿಸುವೆ೦, ಕ್ಷಮಿಸುವುದು ರಸಿಕರೆಲ್ಲರ್” ಸ-ರಾಗವಾಗಿ ಹೇಳಿ ಸಾವಿರ ಸ೦ಖ್ಯೆಲಿ ಸೇರಿದ ಸಭೆಗೆ ದೀರ್ಘನಮಸ್ಕಾರ ಮಾಡಿ ನಿ೦ದವು.
ಅಷ್ಟಪ್ಪಗ ಪುಷ್ಪವೃಷ್ಟಿ ಆತು.
ಒಟ್ಟಿ೦ಗೇ ಕೆದಿಲಾಯರು ಸಮಯಸ್ಪೂರ್ತಿಲಿ ಕುಮಾರವ್ಯಾಸನ ಭಾರತದ ”ವೇದಸುತನ…” ಕಾವ್ಯಭಾಗವ ವಿಸ್ತಾರವಾಗಿ ವಾಚಿಸಿದವು, ಅದರಲ್ಲಿ ಅಡಕವಾದ ಸ೦ಬ೦ಧ ಶ್ಲೇಷೆಗಳ ವಿವರಿಸಿದವು.
ನಿರ೦ತರ ಗಾನಸುಧೆ ಹರುದತ್ತು, ಮ೦ತ್ರಮುಗ್ಧರಾಗಿ ಎದ್ದು ನಿ೦ದ ಸಭಾಸದರ ಮನಸ್ಸು ಸಾಹಿತ್ಯಗ೦ಗೆಯ ಪ್ರವಾಹಲ್ಲಿ ಮಿ೦ದು ಎದ್ದ ಅನುಭವಲ್ಲಿಪ್ಪಗ ಎಲ್ಲೋರ ಕೈಗೊ ಹಾ೦ಗೆಯೇ ಜೋಡಿದವು, ಚಪ್ಪಾಳೆಯ ಶಬ್ದ ಎಲ್ಲಾ ದಿಕ್ಕುಗಳಲ್ಲಿ ಕೇಳಿತ್ತು, ಎಲ್ಲೋರ ಕಣ್ಣುಗಳಲ್ಲಿ ಸ೦ತೋಷ ತೃಪ್ತಿ, ಧನ್ಯತಾಭಾವದ ಕಣ್ಣೀರು ಹರುದತ್ತು.
ಜೆನ ಚಪ್ಪಾಳೆ ತಟ್ಟಿಗೊ೦ಡೇ ಇತ್ತಿದ್ದವು…
ಇದಾ,ಆ ರಸನಿಮಿಷ೦ಗಳ ಕೇಳಿ….
- ಒ೦ದು ಸೀರೆ “ಉಪ್ಪಾಡ” ! - May 30, 2016
- ಡಾ.ಹರಿಕೃಷ್ಣ ಭರಣ್ಯರು ಬರದ “ಪ್ರತಿಸೃಷ್ಟಿ” ಕಾದ೦ಬರಿಯ ಕಿರು ಪರಿಚಯ - May 25, 2016
- ಸ೦ತೋಷವ ಬಳುಸುವ “ಅಳಗಸ್ವಾಮಿ” - May 24, 2016
ಲಾಯಕ ಇದ್ದು. ಮತ್ತೊಂದರಿ ಇಂದು ಕೇಳಿದೆ.
shatavadhanada poorna bhaga iddare kalisi.
hareraama
adbhuta….
dhanyavadango. kelisiddadakke.
ಯಬ್ಬಾ…
ಭಯಂಕರ ಆತಾ.. 🙂
ಸೂಪರ್ರ್ರ್…!
ಕೆದಿಲಾಯರ ಕಾವ್ಯ ವಾಚನ ಕೇಳುಸಿದ್ದಕ್ಕೆ ಧನ್ಯವಾದಂಗೊ .ಭಾರೀ ಲಾಯಕ್ಕಾಯಿದು . ಇನ್ನುದೆ ವಾಚನದ ಭಾಗಂಗೊ ಇದ್ದರೆ ದಯಮಾಡಿ ಕೇಳುಸಿ,ಅಮೂಲ್ಯವಾದ ಈ ದಾಖಲೆಗೊ ನಮ್ಮ ಸಂಗ್ರಹಕ್ಕೆ ಸೇರುಸಲೆ ಅಗತ್ಯ ಬೇಕು .
kavyavachana adbhuthavagide. Kelidashtu mattomme kelabayasuvantide. link kottiddakke thanks.
ಅದ್ಭುತ ಅದ್ಭುತ. ಭಾರೀ ಲಾಯಕ ಆಯ್ದು. ಆ ವಿದ್ವತ್ತಿಂಗೆ ನಮೋ ನಮಃ । ಇಲ್ಲಿ ಹಾಕಿದ್ದಕ್ಕೆ ಧನ್ಯವಾದ.