ಮಾಂಬುಳ ಒಣಗಿತ್ತೋ…

May 28, 2011 ರ 12:00 pmಗೆ ನಮ್ಮ ಬರದ್ದು, ಇದುವರೆಗೆ 25 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹೋ ಶಿವನೇ.. ಬೈಲಿನ ಹೊಡೆಂಗೆ ಬಾರದ್ದೆ ಎಷ್ಟು ಸಮೆಯ ಆತಪ್ಪಾ… ಪುರುಸೊತ್ತಿಪ್ಪಾಗ ಕರೆಂಟಿರ.. ಕರೆಂಟು ಇಪ್ಪಾಗ ಎಂತಾರು ಅಂಬೆರ್ಪು ಇಕ್ಕು… ದೊಡ್ಡ ಪುಳ್ಳಿಗೆ ಪರೀಕ್ಷೆಯುದೇ ಹತ್ತರೆ ಬಂತಿದಾ.. ಆ ಕೇಯೀಬೀಯವಕ್ಕೆ ಈ ಸಮೆಯಲ್ಲೇ ಕರೆಂಟು ಮುಗಿತ್ತದಡ… ಮಕ್ಕ ಪರೀಕ್ಷೆಗೆ ಓದುಲಪ್ಪಾಗಳೇ ಕರೆಂಟು ತೆಗದಿಕಿತ್ತವು…
ಒಯಿಶಾಕ ಅಲ್ಲದೋ… ನೀರಿಲ್ಲದ್ದೆ ಕರೆಂಟು ಬತ್ತಿಲ್ಲೆಡ… ಉಮ್ಮ ನೀರಿಂದ ಹೇಂಗೆ ಕರೆಂಟು ತೆಗೆತ್ಸೋ… ಶರ್ಮಣ್ಣ ನೀರಿಂದ ಕರೆಂಟು ಮಾಡ್ತದು ಹೇಳಿಯಪ್ಪಗ ನಾಕು ದಿನ ನೀರು ಮುಟ್ಟುಲೆ ಹೆದರಿಕೆ ಆಗಿಯೊಂಡಿದ್ದತ್ತು, ಕರೆಂಟು ಬಡುದರೆ ಹೇಳಿಗೊಂಡು… ಹಾಂಗಾವುತ್ತಿಲ್ಲೆ ಹೇಳಿ ನಾಕು ನಾಕು ಸರ್ತಿ ವಿವರುಸಿಯಪ್ಪಗ ಅರ್ತ ಆತು ಅಂತೂ.. ನವಗೆ ಅದೆಲ್ಲ ಅರಡಿಗೋ…

ಹ್ಮ್.. ಅದಿರಳಿ… ಹೇಳಿದಾಂಗೆ ಈ ವಯಿಶಾಕಲ್ಲಿ ಮಾವಿನಹಣ್ಣು ಒಳ್ಳೆತ ಸಿಕ್ಕಿಕ್ಕಲ್ಲದೋ… ಒಳ್ಳೆ ಫಲ ಬಯಿಂದು ಈ ಸರ್ತಿಲಿ…
ಪುಳ್ಯಕ್ಕೊಗೆಲ್ಲ ಕೊಶಿಯೋ ಕೊಶಿ.. ಮಾವಿನಹಣ್ಣು ತಿಂದಷ್ಟೂ ಬೊಡಿಯ ಇದಾ… ಮತ್ತೆ ಅದರ ಗೊಜ್ಜಿ, ಸಾಸಮೆ, ರಸಾಯನ ಹೇಳಿಗೊಂಡು ಬೇಕಾದಷ್ಟು ವೈವಿಧ್ಯಂಗಳ ಮಾಡುಲಾವುತ್ತಲ್ಲದೋ… ತರವಾಡಿನ ಶಂಭಣ್ಣ ಹೇಳಿಗೊಂಡಿದ್ದಿದ್ದವದ, ಆಯಾಯ ಕಾಲಕ್ಕೆ ಆಯಾಯ ಫಲಂಗಳ ಸಿಕ್ಕುವಷ್ಟು ತಿನ್ನೇಕು ಹೇಳಿ…

ಮಾವಿನಹಣ್ಣಿಲೂ ಎಷ್ಟು ಬಗೆ ಇದ್ದಲ್ಲದೋ.. ನೆಕ್ಕರೆ, ಕಶಿ, ಕಾಟು, ತೋತಾಪುರಿ, ಹೊಳೆಮಾವು, ಜೀರಿಗೆ ಪರಿಮ್ಮಳದ್ದು ಅದು ಇದು ಹೇಳಿಗೊಂಡು.. ಒಂದೊಂದಕ್ಕೆ ಒಂದೊಂದು ರುಚಿ…
ಈಗ ಅದು ಸಿಕ್ಕೊಗ ಹಣ್ಣು ತಿಂಬಲಕ್ಕು.. ಮುಗುದ ಮತ್ತೆ ಬೇಕೂಳಿ ಆದರೆ ಎಂತರ ಮಾಡ್ತದು… ಅದಕ್ಕೇಳಿಯೇ ನಾವು ಮಾಂಬುಳ ಮಾಡಿ ಮಡುಗುತ್ತದಲ್ಲದೋ…
ಆನು ಮೊನ್ನೆಯೇ ಹೇಳೇಕು ಹೇಳಿ ಗ್ರೇಶಿಗೋಂಡಿದ್ದದು ಇದರ.. ಆತೇ ಇಲ್ಲೆ ಅದಾ…
ಮಳೆ ಸರೀ ಸುರು ಅಪ್ಪ ಮೊದಲು ಕೇಳಿಕ್ಕುವೊ ಹೇಳಿ ಪುರುಸೋತು ಮಾಡಿ ಬಂದದೀಗ…

ಓ ಮೊನ್ನೆ ಬಂಡಾಡಿಲೂ ರೆಜಾ ಮಾಂಬುಳ ಎರದಿತ್ತಿದು… ಅದರ ಮಾಡುಲೆ ಹಾಂಗೆ ದಣಿಯ ಬಂಙ ಎಂತ ಇಲ್ಲೆ ಇದಾ… ಲಾಯಿಕದ ಕಾಟು ಮಾವಿನಹಣ್ಣು ಇದ್ದರಾತು…
ಹಣ್ಣಿನ ಚೆಂದಕೆ ತೊಳದು, ತೊಟ್ಟು ಕೆತ್ತಿ, ಚೋಲಿ ತೆಗೆತ್ತದು.. ಮತ್ತೆ ಚೋಲಿಯನ್ನೂ, ಹಣ್ಣನ್ನೂ ಹಿಂಡಿ ಎಸರು ತೆಗವದು… ನೀರು ಸೇರುಸುಲಾಗ.. ಬರೇ ಹಣ್ಣಿನ ಎಸರು..
ತುಂಬ ಹಣ್ಣು ಇದ್ದರೆ ಪುರುಂಚಿ ಎಸರು ತೆಗವಗ ಕೈ ಬೇನೆ ಅಕ್ಕು.. ಹಾಂಗಿದ್ದರೆ, ಹಣ್ಣಿನ ರೆಜಾ ಕಡವಲಕ್ಕು.. ಸುಲಬ ಆವುತ್ತಿದಾ ಎಸರು ತೆಗವಲೆ…
ಹಾಂಗೆ ಹಿಂಡಿದ ಎಸರಿನ ಒಂದು ಒಸ್ತ್ರಲ್ಲಿ ಹರಡುದು.. ಕೆರಿಶಿಲಿಯೂ ಮಡುಗಲಕ್ಕು.. ಇಲ್ಲದ್ದರೆ ಮಣೆ ಮೇಗೆ ನಾಕು ಹೊಡೆಂಗೆ ಬಾಳೆದಂಡು ಮಡುಗಿ, ಅದರ ಮೇಗೆ ಲಾಯಿಕದ ಒಸ್ತ್ರ ಹಾಕಿ.. ಎಸರಿನ ಎರವದು… ಸುತ್ತ ಬಾಳೆದಂಡು ಇದ್ದುಗೊಂಡು ನಡುಕೆ ಗುಂಡಿ ಜಾಗೆ ಆವುತ್ತಿದಾ… ಕೆರಿಶಿಲಿ ಆದರೆ ಸೀತ ಒಸ್ತ್ರ ಹರಡಿ ಎರವಲಕ್ಕು.. ಕೆರಿಶಿಯೇ ಗುಂಡಿ ಇರ್ತನ್ನೇ…
ಅಡಿಯಂಗೆ ಬೇಕಾದರೆ ಒಂದು ಪ್ಲೇಶ್ಟಿಕು ಹಾಕಿಗೊಂಬಲಕ್ಕು…
ಹಾಂಗೆ ಎರದ್ದರ ಬೆಶಿಲಿಲಿ ಒಣಗುಸುತ್ತದು ಮತ್ತೆ… ಒಣಗಿದಷ್ಟೂ ಒಳ್ಳೆದು ಅದು.. ಒಳ್ಳೆತ ಒಣಗಿದರೆ ಒಳ್ಳೆ ಬಾಳಿಕೆ ಬತ್ತುದೇ… ಹತ್ತಿಪ್ಪತ್ತು ಬೆಶಿಲಿಲಿ ಒಣಗಿರೆ ಎರಡು ವರ್ಷಕ್ಕೆಲ್ಲ ಹಾಳಾಗದ್ದೇ ಒಳಿಗು…
ಆದರೆ ಒಂದು, ಒಣಗುಸುತ್ತ ಸಮೆಯಲ್ಲಿ ಎರುಗಿನ ಕಣ್ಣಿಂಗೆ ಬೀಳದ್ದಾಂಗೆಯೂ, ನೆಗೆಮಾಣಿಯ ಕಣ್ಣಿಂಗೆ ಕಾಣದ್ದಾಂಗೆಯೂ  ಮಡುಗೇಕಾವುತ್ತು.. ಇಲ್ಲದ್ದರೆ ಅದು ಒಳಿವದು ಸಂಶಯವೇ..

ಹಾಂಗೆ ರೆಜ ಮಾಡಿ ಮಡುಗಿದ್ದದ ಮೊನ್ನೆ.. ಮತ್ತೆ ಎಡೆಡೆಲಿ ಮಳೆಯೂ ಬಂದುಗೊಂಡಿದ್ದತ್ತು.. ಹಾಂಗೆ ದಣಿಯ ಮಾಡ್ಳಾತಿಲ್ಲೆ.. ನಿಂಗಳೂ ಮಾಡಿದ್ದಿರೋ… ಲಾಯಿಕಕ್ಕೆ ಒಣಗಿತ್ತೋ..?
ಅಜ್ಜಿಗೂ ರೆಜ ಕೊಟ್ಟಿಕ್ಕಿ ಆತೋ ರುಚಿ ನೋಡುಲೆ…

ಮಾಂಬುಳ ಒಣಗಿತ್ತೋ..., 5.0 out of 10 based on 2 ratings
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 25 ಒಪ್ಪಂಗೊ

 1. Mrs.Shetty

  bere mavinahannininda MAMBULA aagallave?????????????( Mambula can do in any other types of Mnago????)

  [Reply]

  ಮುಳಿಯ ಭಾವ

  ರಘು ಮುಳಿಯ Reply:

  ಅಕ್ಕಾ,
  ಮಾ೦ಬಳ ಎಲ್ಲಾ ಮಾವಿನ ಹಣ್ಣಿನದ್ದಾದೀತು.
  ಕಶಿ ಮಾವಿನ ಹಣ್ನುಗಳ ಮಾ೦ಬಳ ಮಾಡಿ ಅಸಲಾಗ ಮತ್ತೆ ಕಾಟು ಮಾವಿನ ಹಣ್ಣಿನ ಹುಳಿಮಿಶ್ರಿತ ರುಚಿ ಮಾ೦ಬಳಕ್ಕೆ ಹೇಳಿಯೇ ದೇವರು ತಯಾರು ಮಾಡಿದ್ದು..

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಿನಯ ಶಂಕರ, ಚೆಕ್ಕೆಮನೆಪುಟ್ಟಬಾವ°ಹಳೆಮನೆ ಅಣ್ಣಕಾವಿನಮೂಲೆ ಮಾಣಿಶೀಲಾಲಕ್ಷ್ಮೀ ಕಾಸರಗೋಡುವೆಂಕಟ್ ಕೋಟೂರುಶ್ಯಾಮಣ್ಣಎರುಂಬು ಅಪ್ಪಚ್ಚಿಬಟ್ಟಮಾವ°ನೀರ್ಕಜೆ ಮಹೇಶಬೊಳುಂಬು ಮಾವ°ಅನುಶ್ರೀ ಬಂಡಾಡಿವಾಣಿ ಚಿಕ್ಕಮ್ಮಪುಣಚ ಡಾಕ್ಟ್ರುಕಜೆವಸಂತ°ಕೊಳಚ್ಚಿಪ್ಪು ಬಾವಕೇಜಿಮಾವ°ಮುಳಿಯ ಭಾವಮಾಲಕ್ಕ°ಜಯಶ್ರೀ ನೀರಮೂಲೆಸುವರ್ಣಿನೀ ಕೊಣಲೆಪುತ್ತೂರಿನ ಪುಟ್ಟಕ್ಕವೇಣೂರಣ್ಣಶಾ...ರೀದೊಡ್ಮನೆ ಭಾವಕಳಾಯಿ ಗೀತತ್ತೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ