ಪತ್ರೊಡೆ ರೋಸ್ಟ್

October 1, 2013 ರ 8:00 amಗೆ ನಮ್ಮ ಬರದ್ದು, ಇದುವರೆಗೆ ಒಂದೇ ಒಪ್ಪ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಪತ್ರೊಡೆ ರೋಸ್ಟ್

ಬೇಕಪ್ಪ ಸಾಮಾನುಗೊ:

  • 40-45 ತುಂಡು ಸುರುಳಿ ಪತ್ರೊಡೆ ಅಥವಾ ಪತ್ರೊಡೆ
  • 2-3 ಹಸಿಮೆಣಸು
  • 5-6 ಎಳೆ ಕೊತ್ತಂಬರಿ ಸೊಪ್ಪು
  • ಚಿಟಿಕೆ ಇಂಗು
  • 5-6 ಬೇನ್ಸೊಪ್ಪು
  • 1 ಚಮ್ಚೆ ಎಳ್ಳು
  • 1 ಚಮ್ಚೆ ಸಾಸಮೆ
  • 1/2 ಚಮ್ಚೆ ಜೀರಿಗೆ
  • 1-2 ಮುರುದ ಒಣಕ್ಕು ಮೆಣಸು
  • 3-4 ಚಮ್ಚೆ ಎಣ್ಣೆ

ಮಾಡುವ ಕ್ರಮ:

ಪತ್ರೊಡೆಯ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ 1/2 ಇಂಚು ದಪ್ಪ, 1 ಇಂಚು ಉದ್ದಕೆ ಕೊರದು ಮಡುಗಿ. ಹಸಿಮೆಣಸಿನ ಉದ್ದಕೆ ಸಿಗುದು ಮಡುಗಿ. ಕೊತ್ತಂಬರಿ ಸೊಪ್ಪಿನ ಸಣ್ಣಕೆ ಕೊಚ್ಚಿ ಮಡುಗಿ.

ಕಾವಲಿಗೆ/ಪಾನ್ಲ್ಲಿ ಸಾಸಮೆ, ಜೀರಿಗೆ, ಎಳ್ಳು, ಒಣಕ್ಕು ಮೆಣಸು, ಎಣ್ಣೆ ಹಾಕಿ ಬೆಶಿ ಮಾಡಿ. ಒಗ್ಗರಣೆ ಹೊಟ್ಟುವಗ, ಇಂಗು, ಬೇನ್ಸೊಪ್ಪು, ಹಸಿಮೆಣಸು ಹಾಕಿ ರೆಜ್ಜ ಹೊತ್ತು ಬಾಡ್ಸಿ.

ಒಗ್ಗರಣೆಯ ಕಾವಲಿಗೆ ಮೇಲೆ ಲಾಯಿಕಲಿ ಹರಡಿ, ಕೊರದ ಪತ್ರೊಡೆಯ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಜೋಡ್ಸಿ.

ಪತ್ರೊಡೆಯ ಎಲ್ಲ ಹೊಡೆಯನ್ನೂ ಸಾಧಾರಣ 15 ನಿಮಿಷ ಸಣ್ಣ ಕಿಚ್ಚಿಲ್ಲಿ ರೋಸ್ಟ್ ಮಾಡಿ. ಇದಕ್ಕೆ ಕೊಚ್ಚಿದ ಕೊತ್ತಂಬರಿ ಸೊಪ್ಪು, ರೆಜ್ಜ ಸಕ್ಕರೆ, ಉಪ್ಪು ಮೇಲಂದ ಉದುರ್ಸಿ.

ಪುನಃ ಲಾಯಿಕಲಿ ತೊಳಸಿ, ಪತ್ರೊಡೆಯ ಎಲ್ಲ ಹೊಡೆಯನ್ನೂ ಸಾಧಾರಣ 15-20 ನಿಮಿಷ ಸಣ್ಣ ಕಿಚ್ಚಿಲ್ಲಿ ರೋಸ್ಟ್ ಮಾಡಿ. ಬೆಶಿ ಬೆಶಿ ತಿಂಬಲೆ ಕೊಡಿ.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~

ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ ಒಂದು ಒಪ್ಪ

  1. ಬೆಟ್ಟುಕಜೆ ಮಾಣಿ
    ಬೆಟ್ಟುಕಜೆ ಮಾಣಿ

    ವೇಣಿಯಕ್ಕ ನಿಂಗ ಹೀಂಗೆ ಇಪ್ಪ ಪ್ರಯೋಗ ಮಾಡ್ವಾಗ ಎಂಗೊಗೆ ಒಂದು ಸುದ್ದಿ ಮೊದಲೇ ಹೇಳಿ ಎಂಗ ಬತ್ತೆಯ ರುಚಿ ನೊಡ್ಲೆ..ಆಗದಾ?

    [Reply]

    VN:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕಳಾಯಿ ಗೀತತ್ತೆಬೊಳುಂಬು ಮಾವ°vreddhiಯೇನಂಕೂಡ್ಳು ಅಣ್ಣದೇವಸ್ಯ ಮಾಣಿಬಟ್ಟಮಾವ°ಶರ್ಮಪ್ಪಚ್ಚಿಗೋಪಾಲಣ್ಣಶೀಲಾಲಕ್ಷ್ಮೀ ಕಾಸರಗೋಡುರಾಜಣ್ಣಅಡ್ಕತ್ತಿಮಾರುಮಾವ°ಅನಿತಾ ನರೇಶ್, ಮಂಚಿಕಜೆವಸಂತ°ಉಡುಪುಮೂಲೆ ಅಪ್ಪಚ್ಚಿವಿಜಯತ್ತೆಡಾಗುಟ್ರಕ್ಕ°ತೆಕ್ಕುಂಜ ಕುಮಾರ ಮಾವ°ಪುಟ್ಟಬಾವ°ಜಯಶ್ರೀ ನೀರಮೂಲೆಚೆನ್ನಬೆಟ್ಟಣ್ಣಕೇಜಿಮಾವ°ವೆಂಕಟ್ ಕೋಟೂರುಬಂಡಾಡಿ ಅಜ್ಜಿಗಣೇಶ ಮಾವ°ಸಂಪಾದಕ°ಹಳೆಮನೆ ಅಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ