ಉಪ್ಪಿನಕಾಯಿ

March 20, 2011 ರ 12:00 pmಗೆ ನಮ್ಮ ಬರದ್ದು, ಇದುವರೆಗೆ 49 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಓ ಮೊನ್ನೆ ಹೊತ್ತೊಪ್ಪಾಗ ಚಿಟ್ಟೆಕರೇಲಿ ಕೂದುಗೊಂಡು ಸೋಗೆ ಕೆರಸಿಗೊಂಡಿತ್ತಿದ್ದೆ ಅದಾ… ಸುಮಾರು ಲಾಯಿಕ ಲಾಯಿಕದ ಸೋಗೆ ಕಾಂಬಗ ಮನಸ್ಸು ಕೇಳುತ್ತಿಲ್ಲೆ… ಹಿಡಿ ಮಾಡಿ ಮಡುಗಲಕ್ಕನ್ನೆ ಹೇಳಿ ಅಪ್ಪದು. ಕಳುದ ಸರ್ತಿ ಕೊಡೆಯಾಲಲ್ಲಿಪ್ಪ ಅಂಬಿಕೆ ಕೊಂಡೋಗಿದ್ದತ್ತು, ನಾಕು ಹಿಡಿಸೂಡಿ. ಅಲ್ಲಿ ಅವಕ್ಕೆ ಕ್ರಯ ಕೊಟ್ಟು ತೆಕ್ಕೊಳೆಕ್ಕಾವುತ್ತಡಪ್ಪ. ಉಮ್ಮ ಈ ಹಿಡಿಗೂ ಎಂತರ ಕ್ರಯ ಕೊಡುತ್ತದೊ… ಅಂತೆ ಎಂತಕೆ ಪಯಿಸೆ ಹಾಳು ಮಾಡ್ತದು ಹೇಳಿ ಈ ಸರ್ತಿಯೂ ಇಲ್ಲಿಂದಲೇ ಕೊಂಡೋಪಲೆ ಹೇಳಿದ್ದೆ…
ಹಾಂಗೆ ಸೋಗೆ ಕೆರಸಿಗೊಂಡಿಪ್ಪಾಗ ಓ ಅಲ್ಲೆ ನೆಗೆಮಾಣಿ ಬಪ್ಪದು ಕಂಡತ್ತು… ಹೆಗಲಿಲಿ ಒಂದು ಸಣ್ಣ ಗೋಣಿಯ ಕಟ್ಟವೂ ಇದ್ದತ್ತು.. ಈ ಮಾಣಿ ಪದ್ಯ ಹೇಳಿ ಎಲ್ಲೊರ ಮರುಳು ಮಾಡಿ ಎಂತಾರು ಹೊತ್ತೊಂಡು ಬಂದನೋ ಹೇಳಿ ಆತೊಂದರಿ… ಜಾಲತಲೆಂದಲೇ ಬೊಬ್ಬೆ ಹೊಡಕ್ಕೊಂಡು ಬಂದ ಅದ.. “ಅಜ್ಜೀ.. ಮಾವಿನ ಮೆಡಿ ತಯಿಂದೇ…. ಎನಗೆ ಪಾಯಸ ಮಾಡಿಕೊಡೀ…” ಹೇಳಿ… ಎಲಾ… ಮಾವಿನ ಮೆಡಿದು ಎಂತರಪ್ಪ ಪಾಯಿಸ ಹೇಳಿ ಗ್ರೇಶಿಗೊಂಡಿಪ್ಪಾಗಳೇ ಹೇಳಿದ – “ನಿಂಗೊಗೆ ಉಪ್ಪಿನಕಾಯಿಗೆ ಮೆಡಿ.. ಎನಗೆ ತಂದುಕೊಟ್ಟದಕ್ಕೆ ಪಾಯ್ಸ” ಹೇಳಿಗೊಂಡು…
ಆತನ್ನೆ ಕತೆ… ಆಗಲಿ, ಇಷ್ಟು ಸಮೆಯಲ್ಲಿ ಇದುವೇ ಸುರು ಒಂದು ಒಳ್ಳೆ ಕೆಲಸ ಮಾಡಿದ್ದದು…. ಆರ್ಲ ಸತ್ಯಣ್ಣನಲ್ಲಿಂದ ತಂದದೋ ಕಾಣ್ತು.. ಸುಮಾರು ನೆಡಕ್ಕೊಂಡು ಬಂದಿರೇಕು ಪಾಪ… ಆತೂ ಹೇಳಿದೆ…
ಭಾರೀ ಲಾಯ್ಕಿತ್ತು ಮೆಡಿ… ಘಮ್ಮನೆ ಪರಿಮ್ಮಳ… ನಮ್ಮ ತೋಟದ ಕರೆಲಿ ಅಂದು ಇತ್ತು ಇದೇ ನಮುನೆದರ ಮರ.. ಮತ್ತೆ ತೋಟಕ್ಕೆ ನೆರಳು ಹೇಳಿ ಕಡುದ್ದದು… ಚೆ ಬೇಜಾರವುತ್ತು ಗ್ರೇಶೊಗ…
ಹ್ಮ್.. ಎಂತರ ಮಾಡುದು.. ಈಗ ಇದು ರಜ್ಜ ಸಿಕ್ಕಿತ್ತನ್ನೆ… ಮತ್ತೆ ಶಾಂತಕ್ಕನೊ ಮಣ್ಣ ಕೊಡುಗು ಇದ್ದರೆ ಹೇಳಿಗೊಂಡು ಸಮಾದಾನ ಮಾಡಿಗೊಂಡದು…

ಮತ್ತೆ ಉಪ್ಪಿನಕಾಯಿ ಹಾಕುತ್ತ ಗವುಜಿ… ಈ ಸರ್ತಿ ಅದರನ್ನೇ ಮಾತಾಡುವೊ ಆಗದೋ…
ಉಪ್ಪಿನಕಾಯಿ ಮೆಡಿಯೂ ಹಾಕಲಕ್ಕು. ರಜ ಬೆಳದಿದ್ದರೆ ಹಸಿಕೆತ್ತೆಯೋ, ಹೊರುದು ಕೂಡಿಯೊ ಹಾಕಲಕ್ಕು…

ಮೆಡಿಹಾಕುತ್ತ ಕ್ರಮ:
ಮೊದಾಲಿಂಗೆ ಮೆಡಿಯ ಲಾಯ್ಕ ಉದ್ದಿ, ತೊಟ್ಟು ತೆಗದು ಉಪ್ಪಿಲಿ ಹಾಕಿ ಮಡುಗೆಕ್ಕು… ಉಪ್ಪು ಅಂದಾಜಿಂಗೆ ಹಾಕುದು. ಜಾಸ್ತಿ ಆದ ಉಪ್ಪು ಅಡೀಲಿ ನಿಂದಿರ್ತು…
ಒಂದು ಇನ್ನೂರು ಮೆಡಿಗೆ ಒಂದು ಸೇರು ಉಪ್ಪು ಬೇಕಕ್ಕು…. ಬರಣಿಲಿ ಹಾಕಿ ಮಡುಗುದು… ಈಗ ಪ್ಲೇಶ್ಟಿಕು ಕರಡಿಗೆ, ಡ್ರಮ್ಮು ಎಲ್ಲ ಬಯಿಂದದ… ಮತ್ತೆ ಈಗಾಣ ಬರಣಿಗಳೂ ಮೊದಲಾಣದ್ದರ ನಮುನೆ ಬರ್ಕತ್ತು ಇರ್ತಿಲ್ಲೆ… ಬಂಡಾಡಿ ಜೆಂಗಲ್ಲಿ ನಾಕು ಹಳೇ ಬರಣಿಗೊ ಇದ್ದದಾ… ಶಾಂತಕ್ಕನತ್ರವೂ ಇದ್ದೋಳಿ ಕಾಣ್ತು… ಕಾನಾವಿನ ಅಕ್ಕನತ್ರ ಇದ್ದೋ ಗೊಂತಿಲ್ಲೆ… ಗೋಪಾಲಣ್ಣನ ಮನೆಲಿ ಇಕ್ಕೇ ಇಕ್ಕು…
ಹ್ಮ್.. ಅದಿರಳಿ… ಉಪ್ಪಿಲಿ ಹಾಕಿ ಒಂದು ವಾರ ಮಡುಗೇಕು… ಅದಕ್ಕೆ ಎರಡು ದಿನಕ್ಕೊಂದರಿ ಕೈ ಹಾಕಿ ಮೊಗಚ್ಚಿಗೋಂಡು ಬೇಕು… ಇಲ್ಲದ್ದರೆ ಕಪ್ಪಾವುತ್ತು… ಮತ್ತೆ ಕೆಲವು ಮೆಡಿ ಕಪ್ಪಪ್ಪದು ಆಗಿಯೇ ಆವುತ್ತು ಹೇಳುವೊ.. ಎಂತ ಮಾಡುಲೂ ಎಡಿಯ….

ಉಪ್ಪಿಂದ ತೆಗದು ಮಡುಗಿದ ಮೆಡಿ..

ಒಂದು ವಾರ ಕಳುದ ಮತ್ತೆ ಹೊರಡಿ ಕೂಡುಲಕ್ಕದ…
ಉದೀಯಪ್ಪಗಳೇ ಉಪ್ಪಿಂದ ತೆಗದು ಬೆಳೀ ಬೈರಾಸಿಲಿ ಬಿಡೂಸಿ ಮಡುಗುದು… ಪಸೆ ಒಣಗಲೆ… ಉದಿಯಪ್ಪಾಗ ತೆಗದು ಮಡಿಗಿರೆ ಮದ್ಯಾನ್ಮೇಲೆ ಹೊರಡಿ ಬೆರುಸಲಕ್ಕು…

ಹೊರಡಿ ಮಾಡುಲೆ : ಸಾಸಮೆಯ ತೊಳದು ಲಾಯಿಕ ಒಣಗುಸುದು… ಮತ್ತೆ ಹೊಡಿ ಮಾಡಿ ಮಡಿಕ್ಕೊಂಬದು… ಅರಿಶಿನ ಗುದ್ದಿ ಹೊಡಿಮಾಡಿ ಮಡಿಗಿದ್ದು ಇದ್ದನ್ನೇ… ಮನೆಲೇ ಆದ ಅರಿಶಿನ ಆದರೆ ಬಾರಿ ಒಳ್ಳೆದು… ಪೇಟೆಂದ ತಂದದು ಲಾಯಿಕ ಇರ್ತಿಲ್ಲೆ… ಕೆಲವು ಸರ್ತಿ ಪರಿಮ್ಮಳವೇ ಇರ್ತಿಲ್ಲೆ… ಎಂತ ಹೊಡಿ ಕೊಡುತ್ತವೋ….
ಹ್ಮ್.. ಮತ್ತೆ ಊರ ಮೆಣಸನ್ನುದೇ ಲಾಯಿಕ ಒಣಗುಸಿ ಹೊಡಿಮಾಡುದು…. ಪ್ರಮಾಣ ಅಂದಾಜಿಂಗೆ ಹೇಳೆಕಾರೆ – ಒಂದು ಸಾವಿರ ಮೆಡಿಗೆ ೩ ಸೇರು ಒಣಗುಸಿದ ಮೆಣಸು, ಒಂದು ಸೇರು ಸಾಸಮೆ, ಒಂದು ಪಾವು ಅರಿಶಿನ ಹೊಡಿ ಬೇಕಕ್ಕು….

ಒಳ್ಳೆ ಮೆಡಿ ಆದರೆ ಹೊರಡಿಗೆ ಅದರ ಅದ್ದಿಮಡಗಿದ ಉಪ್ಪುನೀರನ್ನೇ ಸೇರ್ಸಲಕ್ಕು… ಇಲ್ಲದ್ದರೆ ಬೇರೆ ಮಾಡುದು… ಒಂದು ಎರಡು ಚೆಂಬು ನೀರಿಂಗೆ ಅರ್ದ ಸೇರು ಉಪ್ಪು ಹಾಕೆಕ್ಕಾವುತ್ತು… ಉಪ್ಪುನೀರು ಮಾಡಲೆ ಗೊಂತಿದ್ದನ್ನೆ… ಮೊದಲಿಂಗೆ ನೀರಿನ ಕೊದಿಶುತ್ತದು.. ಅದು ಕೊದುದಪ್ಪಗ ಉಪ್ಪಿನ ಹಾಕಿ ತೊಳಸುದು… ಒಳ್ಳೆ ಕೊದುದಪ್ಪಗ ಅದರ ಮೇಗಂದ ಬಾವೆಯಾಂಗೆ ಬತ್ತು ಉಪ್ಪು… ಅದರ ತೆಗದು ಮಡಿಗಿರೆ ಮೆಡಿಯ ಮೇಲೆ ಹಾಕಿ ಮುಚ್ಚಿಮಡುಗುಲೆ ಬೇಕಾವುತ್ತದು…

ಮೆಡಿಗೆ ಹೊರಡಿ ಕೂಡುತ್ತದು...

ಸಾಸಮೆ ಹೊಡಿ, ಮೆಣಸಿನ ಹೊಡಿ, ಅರಿಶಿನ ಹೊಡಿ ಮೂರನ್ನೂ ಉಪ್ಪುನೀರಿಲಿ ಗಟ್ಟಿಗೆ ಬೆರುಸಿ ಹೊರಡಿ ಮಾಡಿ ಮಡುಗುದು…

ಮೊದಲೇ ಮಾಡಿಮಡುಗಿರೆ ಬೇಕಾದಪ್ಪಾಗ ಉಪ್ಪಿನಕಾಯಿ ಬೆರುಸುಲಕ್ಕದ….

ಬೇಕಪ್ಪಷ್ಟು ಹೊರಡಿಗೆ ರಜ ರಜವೇ ಮೆಡಿ ಹಾಕಿ, ಉಪ್ಪು ನೀರು ಹಾಕಿ ಬೆರುಸುದು.. ಎಲ್ಲ ಆದ ಮತ್ತೆ ಬರಣಿಲಿ ತುಂಬುಸಿ, ಮೇಗಂದ ಬೇಕಾರೆ ಆಗ ತೆಗದು ಮಡುಗಿದ ಬಾವೆ ಹಾಕಿ, ಸಣ್ಣ ಬೆಳಿ ವಸ್ತ್ರದ ತುಂಡು ಮಡಿಗಿ ಮುಚ್ಚಿತ್ತು…
ಮೆಡಿ ಉಪ್ಪಿನಕಾಯಿ ಹಾಕಿ ಆತದ… ಇನ್ನು ಹದಿನೈದು ದಿನ – ಒಂದು ತಿಂಗಳು ಕಳುದು ಉಂಬಲಕ್ಕು ಹೊಸಾ ಮೆಡಿ…


ಹೊರುದು ಕೂಡಿದ್ದು:


ಇದರ ಹೊರಡಿ ಮಾಡುಲೆ :
ಜೀರಿಗೆ, ಮೆಂತೆ, ರಜ ಇಂಗು, ಸಾಸಮ್ಮೆ, ಎಣ್ಣೆ ಎಲ್ಲ ಹಾಕಿ ಹೊರಿವದು ಮೊದಾಲಿಂಗೆ. ಮತ್ತೆ ಮೆಣಸು ಹೊರಿವದು.. ಎಣ್ಣೆ ಹಾಕಿಯೂ ಹೊರಿವಲಕ್ಕು, ಹಾಕದ್ದರೂ ಅಕ್ಕು…
ಮೆಣಸು ಹೊರುದಾದ ಕೂಡ್ಳೆ ಇಳಿಶಿ ಮಡಿಗಿ ಅರಿಶಿನ ಹೊಡಿ ಬೆರುಸುದು… ಮತ್ತೆ ಎಲ್ಲ ಒಟ್ಟಿಂಗೆ ಹೊಡಿ ಮಾಡಿಕ್ಕಿ ಉಪ್ಪು ನೀರು ಬೆರುಸಿದರೆ ಹೊರಡಿ ತಯಾರಾತು..

ಹೊರುದು ಕೂಡಿದ್ದು

ಮಾವಿನಕಾಯಿಯ ನಾಕು ಸೀಳಿ ಕೊರದು ಸೆಕೆ ಬರುಸೇಕು.. ಸೆಕೆ ಬರುಸುದು ಗೊಂತಿದ್ದನ್ನೇ… ನೆಗೆಮಾಣಿ ಬೆಗರಾ ಹೇಳಿ ಕೇಳುಗು ಈಗ…
ಹ್ಮ್… ನೀರಿನ ಕೊದಿವಲೆ ಮಡುಗಿ, ಕೊದುದಪ್ಪಗ ಉಪ್ಪಾಕಿ ಕರಡುಸುದು… ಒಂದು ಚೆಂಬು ನೀರಿಂಗೆ ಎರಡು-ಮೂರು ಮುಷ್ಟಿ ಉಪ್ಪು ಬೇಕಕ್ಕು… ಅದು ಸರೀ ಕರಗಿ ಕೊದಿಯೆಕ್ಕು.. ಅಷ್ಟಪ್ಪಾಗ ಅದಕ್ಕೆ ಕೊರದು ಮಡುಗಿದ ಕೆತ್ತೆಯ ಹಾಕುದು… ಅದು ಹಸಿಮಾಸಿಯಪ್ಪಗ ಇಳುಗಿತ್ತು…

ಮತ್ತೆ ತಣಿವಲೆ ಬಿಡೆಕ್ಕು ಅದರ… ಒಳ್ಳೆತ ತಣುದಪ್ಪಾಗ ಹೊರಡಿ ಬೆರುಸುದು… ಕೆತ್ತೆಲಿ ಇದ್ದ ಉಪ್ಪುನೀರೇ ಅಕ್ಕು ಬೆರುಸಲೆ…
ಈ ಉಪ್ಪಿನಕಾಯಿಯ ಅಂಬಗಳೇ ಉಂಬಲಕ್ಕು….

ಹಸಿಕೆತ್ತೆ:
ಇದಕ್ಕೆ ಮೆಡಿಗೆ ಮಾಡಿದ ಹೊರಡಿಯನ್ನೇ ಬೆರುಸುತ್ತದು..
ಮಾವಿನಕಾಯಿಯ ನಾಕುಬಾಗ ಮಾಡಿ ಉಪ್ಪು ಬೆರುಸಿ ಮಡುಗುದು…. ಇಲ್ಲದ್ರೆ ಉಪ್ಪುನೀರಿಲಿ ಹಾಕಿ ಮಡಿಗಿರೂ ಅಕ್ಕು… ಅದರ ಹಸಿಕರ್ದಪ್ಪಾಗ ಹೊರಡಿ ಬೆರುಸಿರಾತು… ಉಪ್ಪುನೀರಿಲಿ ಆದರೆ ಎರಡು ದಿನಲ್ಲಿ ಹಸಿಕರಿತ್ತು… ಬರೇ ಉಪ್ಪುಬೆರುಸಿ ಮಡುಗಿದ್ದಾದರೆ ಮೂರು-ನಾಕು ದಿನ ಬೇಕಕ್ಕು….
ಇದರ ಹೊರಡಿ ಕೂಡಿದ ಒಂದು ವಾರಲ್ಲಿ ಉಂಬಲಕ್ಕು…

ನಿಂಗಳಲ್ಲಿಯೂ ಇದ್ದೋ..?

ಹಾಂಗೆ ಉಪ್ಪಿನಕಾಯಿಗಳಲ್ಲಿ ಸುಮಾರು ಬಗೆಗೊ ಇದ್ದಪ್ಪಾ… ಈಗ ಮಾವಿನ ಮೆಡಿಯ ಸಮೆಯ ಅಲ್ಲದೋ.. ಹಾಂಗೆ ಇದರ ಬರದ್ದದು… ಒಳುದ್ದದರ ಎಲ್ಲ ಇನ್ನೊಂದರಿ ಬರವೊ….
ಮೆಡಿ ಸಿಕ್ಕಿರೆ ನಿಂಗಳೂ ಹಾಕಿ.. ಅಜ್ಜಿಗೂ ಕಳುಸಿ ರೆಜ ರುಚಿ ನೋಡುಲೆ… ದಣಿಯ ಕಾರ ತಿಂಬಲಾಗಡ… ಅಂದರೂ ಉಪ್ಪಿನಕಾಯಿ ತಿನ್ನದ್ದೆ ಇಪ್ಪಲೆಡಿಗೋ… ಏ°?

ಉಪ್ಪಿನಕಾಯಿ, 5.0 out of 10 based on 3 ratings
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 49 ಒಪ್ಪಂಗೊ

 1. ತುಪ್ಪೆಕ್ಕಲ್ಲ ತಮ್ಮ
  ತಿರುಕ್ಕೂಳಿ ಸುಬ್ಬ

  ಉಪ್ಪಿನಕಾಯೈ ಭಾರಿ ಲಾಯಿ ಕಆಯಿದು

  [Reply]

  VA:F [1.9.22_1171]
  Rating: 0 (from 0 votes)
 2. ಬೊಳುಂಬು ಮಾವ°
  ಬೊಳುಂಬು ಗೋಪಾಲ ಮಾವ

  ಅಜ್ಜೀ, ನಿಂಗಳ ಮೆಡಿ ಉಪ್ಪಿನಕಾಯಿ ಮಾಡ್ತ ವಿವರ ಲಾಯಕಾಯಿದು. ಈಗಾಣ ಕಾಲದವಕ್ಕೆ ಹೇಳಿ ಮಾಡುಸಿದ ಲೇಖನ. ಇದರ ಓದಿ ಅಪ್ಪಗ ಎನ್ನದೊಂದು ಕವನ ನೆಂಪಾವುತ್ತಾನೆ.
  ಮಂಗಳೂರು ಹುಡುಗಿಯರೇನು ಮಹಾ ಬಿಡಿ,
  ನನ್ನ ಅಜ್ಜಿ ಯೂ ಹಾಕುತ್ತಾಳೆ, ಮಿಡಿ………
  ಮಿಡಿ ಉಪ್ಪಿನಕಾಯಿ.
  (ಬಂಡಾಡಿ ಅಜ್ಜಿಯೊ, ಉಮ್ಮಪ್ಪ). ಅದು ಹಾಂಗಿರಳೀ.
  ಆನಂಬಗ ಒಂದು ತಿಂಗಳು ಬಿಟ್ಟು ಬತ್ತೆ ನಿಂಗಳಲ್ಲಿಗೆ, ಈಗಳೇ ಬಂದರೆ, ಹೊರಡಿ ಮೆಡಿ ಒಟ್ಟಿಂಗೆ ಸರೀ ಸೇರಿ ಬಂದಿರ.
  ಮೆಡಿ ಉಪ್ಪಿನ ಕಾಯಿಯ ತಂಬುಳಿ ಮಾಡಿರೆ ಲಾಯಕಾವುತ್ತು ಅಲ್ಲದೊ ಅಜ್ಜಿ. ಎಂಗೊ ಎಲ್ಲ ಸಣ್ಣ ಇಪ್ಪಗ, ಕಾರ ಆವುತ್ತಕ್ಕೆ ಬೇಕಾಗಿ ಮೆಡಿ ಉಪ್ಪಿನಕಾಯಿಯ ತೊಳದು ತಿಂದೊಂಡು ಇದ್ದಿದ್ದೆಯೊ. ಎಲ್ಲಾ ನೆಂಪಾವುತ್ತ ಹಾಂಗೆ ಮಾಡಿದಿ. ಅದರ ಒಳಾಣ ಹೂಂಗು (ಕೋಗಿಲೆ ಹೇಳ್ತವು ಕೆಲವು ಜೆನ) ತಿಂಬಲುದೆ ಭಾರಿ ಲಾಯಕಾವುತ್ತು. ಧನ್ಯವಾದಂಗೊ ಅಜ್ಜಿ.

  [Reply]

  VA:F [1.9.22_1171]
  Rating: +1 (from 1 vote)
 3. ಚೆನ್ನೈ ಬಾವ°

  ‘ಸುಮಾರು ನೆಡಕ್ಕೊಂಡು ಬಂದಿರೇಕು ಪಾಪ’ – ಅಜ್ಜಿಗೆ ಮೆಡಿ ಕಂಡಪ್ಪಗ ಆಸರಿಂಗೆ ಕೇಳ್ಳೂ ಮರದತ್ತು!

  ‘ಮೆಡಿ ಕಪ್ಪಪ್ಪದು ಆಗಿಯೇ ಆವುತ್ತು ಹೇಳುವೊ.. ಎಂತ ಮಾಡುಲೂ ಎಡಿಯ….’ – ಅಜ್ಜೀ, ಮೆಡಿ ತಂಬುಳಿ ?!

  ‘ಸಾಸಮೆಯ ತೊಳದು ಲಾಯಿಕ ಒಣಗುಸುದು…’ – ಸಾಸಮೆ ದೊಡ್ಡದೋ ಸಣ್ಣದೋ?!!

  ‘ಎಣ್ಣೆ ಎಲ್ಲ ಹಾಕಿ ಹೊರಿವದು’ – ಯಾವ ಎಣ್ಣೆ ಗೊಂತಾಯ್ದಿಲ್ಲೆ.

  ಹೀಂಗಿರ್ತ ಮೆಡಿಯೇ ಅಯೇಕು ಹೇಳಿ ಇದ್ದೋ ಅಲ್ಲಾ ಕೈಗೆ ಸಿಕ್ಕಿದ ಮೆಡಿ ಹಾಕಲಕ್ಕೋಪ?!

  “ಮೆಡಿ ಸಿಕ್ಕಿರೆ ನಿಂಗಳೂ ಹಾಕಿ.. ” ಎನಗೆ ಮೆಡಿ ಸಿಕ್ಕಿದ್ದಿಲ್ಲೆ. ಬರಣಿ ಹಿಡ್ಕೊಂಡು ಬಪ್ಪೋದೇ ನಿಂಗಳಲ್ಲಿಗೆ ಅಜ್ಜಿ ಆಗದೋ ಏ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೊಡ್ಡಮಾವ°ಚೆನ್ನೈ ಬಾವ°ಸರ್ಪಮಲೆ ಮಾವ°ವೇಣೂರಣ್ಣಕೊಳಚ್ಚಿಪ್ಪು ಬಾವಶೀಲಾಲಕ್ಷ್ಮೀ ಕಾಸರಗೋಡುಮಂಗ್ಳೂರ ಮಾಣಿಮಾಷ್ಟ್ರುಮಾವ°ವಿಜಯತ್ತೆರಾಜಣ್ಣಡೈಮಂಡು ಭಾವಪೆಂಗಣ್ಣ°ಅಜ್ಜಕಾನ ಭಾವಎರುಂಬು ಅಪ್ಪಚ್ಚಿಡಾಮಹೇಶಣ್ಣಕಳಾಯಿ ಗೀತತ್ತೆದೀಪಿಕಾಉಡುಪುಮೂಲೆ ಅಪ್ಪಚ್ಚಿಬೊಳುಂಬು ಮಾವ°ಬಟ್ಟಮಾವ°ಪುತ್ತೂರಿನ ಪುಟ್ಟಕ್ಕವಸಂತರಾಜ್ ಹಳೆಮನೆಬಂಡಾಡಿ ಅಜ್ಜಿಚೂರಿಬೈಲು ದೀಪಕ್ಕಡಾಗುಟ್ರಕ್ಕ°ಶ್ಯಾಮಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ