GLAUCOMA: ಗ್ಲಾಕೊಮಾ – ದೃಷ್ಟಿಚೋರ; ಎಲ್ಲರ ದೃಷ್ಟಿ ಕಾಪಾಡಿಗೊಳ್ಳಿ ನಿರಂತರ!

ಕಣ್ಣು ನಮ್ಮ ಶರೀರಲ್ಲಿ ಒಂದು ಪ್ರಮುಖ ಅಂಗ. ಕಣ್ಣ ದೃಷ್ಟಿ ಸರಿ ಇದ್ದರೆ ನವಗೆ ಈ ಚೆಂದದ ಜಗತ್ತಿನ ನೋಡಿಗೊಂಡು, ಎಲ್ಲ ಕೆಲಸಂಗಳ ಮಾಡಿಗೊಂಡು ಸ್ವಾವಲಂಬಿಗೋ ಆಗಿ ಬದುಕ್ಕುಲಕ್ಕು.
ಕಣ್ಣಿನ ದೃಷ್ಟಿ ಹೀನತೆಗೆ ಮೂರನೇ ಕಾರಣ ಆದ ಗ್ಲಾಕೊಮಾದ ಬಗ್ಗೆ ರಜ್ಜ ಮಾಹಿತಿ ಕೊಡುವ ಉದ್ದೇಶಲ್ಲಿ ಕಾನಾವು ಡಾಗುಟ್ರ ಹತ್ತರೆ ಕೇಳಿದೆ.
ಅಂಬಗ ಅವ್ವು ಕೊಟ್ಟ ವಿವರಣೆಯ ಎನಗೆ ಅರಡಿಗಾದ ಹಾಂಗೆ ಹೇಳ್ತಾ ಇದ್ದೆ.

ಈ ವಾರವ (ಮಾರ್ಚ್11- ಮಾರ್ಚ್17) ವಿಶ್ವ ಗ್ಲಾಕೋಮಾ ವಾರ (WORLD GLAUCOMA WEEK) ವಾಗಿ ಆಚರಿಸುತ್ತಾ ಇದ್ದವು.
ಸದ್ದಿಲ್ಲದ್ದೆ ಬಂದು ಕಣ್ಣಿನ ದೃಷಿ ನಾಶ ಮಾಡುವ ಈ ಕಾಯಿಲೆಯ ಬಗ್ಗೆ ಜನಂಗಳಲ್ಲಿ ಅರಿವು ಮೂಡುಸಿ, ಕಾಲಕಾಲಕ್ಕೆ ಕಣ್ಣಿನ ಪರೀಕ್ಷೆ ಮಾಡ್ಸಿ ಕಣ್ಣಿನ ದೃಷ್ಟಿಯ ಕಾಪಾಡುದು ಇದರ ಉದ್ದೇಶ.
ಗಡಿಯಾರದ ಮುಳ್ಳು ತಿರುಗಿದ ಹಾಂಗೆ ಸಮಯ ಮೀರಿದ ಸಮಯದ ಕೆಲಸಂಗಳ ಒತ್ತಡಲ್ಲಿ ನಮ್ಮ ಕಣ್ಣಿನ ಒತ್ತಡವನ್ನೂ ಗಮನಿಸಿ ಕಣ್ಣಿಂಗೆ ಒತ್ತಡ ಹೆಚ್ಚಾಗದ್ದ ಹಾಂಗೆ ಮಾಡುದು ನಮ್ಮೆಲ್ಲರ ಕರ್ತವ್ಯ.

ಗ್ಲಾಕೋಮ – ಎಂತರ? :

ನಮ್ಮ ಶರೀರಕ್ಕೆ ರಕ್ತದೊತ್ತಡ ಇಪ್ಪ ಹಾಂಗೆ ಕಣ್ಣಿಲಿಯೂ ಒಂದು ಒತ್ತಡ ಇದ್ದು. ಕಣ್ಣು ಒಂದು ಆಟದ ಚೆಂಡು ಹೇಳಿ ಆದರೆ, ಹೇಂಗೆ ಚೆಂಡು ಉರುಟಾಗಿ ಸರಿಯಾಗಿ ಇರೆಕ್ಕಾದರೆ, ಅದಕ್ಕೆ ಒಳಂದ ಒಂದು ಒತ್ತಡ ಬೇಕಾವುತ್ತೋ,
ಈ ಒತ್ತಡ ಹೆಚ್ಚು ಕಡಮ್ಮೆ ಆದರೆ ಚೆಂಡಿನ ಕಾರ್ಯಕ್ಷಮತೆಲಿ ವ್ಯತ್ಯಾಸ ಆವುತ್ತೋ ಹಾಂಗೆ ಕಣ್ಣಿಲಿಯೂ ಕೂಡಾ ಒಂದು ಒತ್ತಡದ ಅಗತ್ಯ ಇದ್ದು.

ಕಣ್ಣಿನ ಒಳಾಣ ರಚನೆ

ಕಣ್ಣಿನ ಈ ಒತ್ತಡಕ್ಕೆ ಕಣ್ಣಿನ ಆಂತರಿಕ ಒತ್ತಡ (Intraocular pressure) ಹೇಳಿ ಹೇಳ್ತವು.
ನಮ್ಮ ಶರೀರದ ರಕ್ತದ ಒತ್ತಡ ಸಾಮಾನ್ಯ ಮನುಷ್ಯಂಗೆ 120/80 ಇಪ್ಪ ಹಾಂಗೆ ಕಣ್ಣಿನ ಒತ್ತಡ 10-20mmHg ಇರೆಕ್ಕಪ್ಪದು.
ನಾವು ಜಗತ್ತಿನ ನೋಡ್ಲೆ ಚಿತ್ರ ಮೂಡುದು ಕಣ್ಣಿನ ದೃಷ್ಟಿಪಟಲ (ರೆಟಿನಾ) ಲ್ಲಿ. ದೃಷ್ಟಿಪಟಲಕ್ಕೆ ನಮ್ಮ ಮೆದುಳಿಂದ ಬಪ್ಪ ನರಕ್ಕೆ ದೃಷ್ಟಿ ನರ ( ಒಪ್ಟಿಕ್ ನರ್ವ್ Optic nerve) ಹೇಳುದು.
ರೆಟಿನಾಕ್ಕೆ ಒಪ್ಟಿಕ್ ನರ್ವ್ ಸೇರುವ ಜಾಗೆ ಒಪ್ಟಿಕ್ ಡಿಸ್ಕ್ (Optic disc) ಹೇಳ್ತವು.
ಕಣ್ಣಿನ ಬೇರೆ ಬೇರೆ ಭಾಗಂಗೊ ಸರಿಯಾಗಿ ಕಾರ್ಯ ನಿರ್ವಹಿಸುಲೆ ಅದಕ್ಕೆ ಬೇಕಾದ ಪೋಷಣೆ (nutrition) ತುಂಬುಸುವ ಕೆಲಸ ಮಾಡುದು ಅಕ್ವೆಸ್ ಹ್ಯೂಮರ್ (Aqueous humour) ಹೇಳುವ ಕಣ್ಣಿಲೇ ಉಂಟಪ್ಪ ದ್ರವ.
ಕಣ್ಣಿನೊಳ ಸಂಚಾರಲ್ಲಿ ಇಪ್ಪ ಈ ದ್ರವ ನಿರಂತರ ಉತ್ಪತ್ತಿ ಆಯ್ಕೊಂಡು ಆಂತರಿಕ ಕಣ್ಣಿನ ಯೋಗಕ್ಷೇಮ ನೋಡಿಗೊಂಡು ರಕ್ತಕ್ಕೆ ಸೇರ್ತಾ ಇರ್ತು.
ಇದರ ಉತ್ಪತ್ತಿಯೂ- ರಕ್ತಕ್ಕೆ ಸೇರುದೂ ಒಂದೇ ರೀತಿ ಆಯ್ಕೊಂಡಿದ್ದರೆ ಕಣ್ಣಿನ ಒತ್ತಡ ಸಾಮಾನ್ಯ ಆಗಿರ್ತು, ಆರೋಗ್ಯಲ್ಲಿ ಇರ್ತು.
ಉತ್ಪತ್ತಿಯ ಕ್ರಿಯೆ ನಿರಂತರವಾಗಿದ್ದು, ರಕ್ತಕ್ಕೆ ಸೇರುವ ಪ್ರಕ್ರಿಯೆಲಿ ಅಡಚಣೆ ಆದರೆ ಕಣ್ಣಿನ ಒಳಾಣ ಸಮತೋಲನ ತಪ್ಪುತ್ತು. ಆ ಹೊತ್ತಿಂಗೆ ಕಣ್ಣಿಲಿ ಅಕ್ವೆಸ್ ನ ಪ್ರಮಾಣ ಹೆಚ್ಚಾವುತ್ತು. ಪ್ರಮಾಣ ಹೆಚ್ಚಪ್ಪಗ ಕಣ್ಣಿನ ಆಂತರಿಕ ಒತ್ತಡ ಹೆಚ್ಚಾವುತ್ತಾ ಹೋವುತ್ತು.
ಕಣ್ಣಿನ ಒತ್ತಡ ಹೆಚ್ಚಪ್ಪಗ ಒಪ್ಟಿಕ್ ಡಿಸ್ಕಿನ ಜಾಗೆಲಿ ಒತ್ತಡ ಹೆಚ್ಚಾಗಿ ಕಣ್ಣಿನ ದೃಷ್ಟಿ ನರವ ಅಮರ್ಸಿದ ಹಾಂಗೆ ಆವುತ್ತು. ಒತ್ತಡ ಹೆಚ್ಚಿದ ಹಾಂಗೆ ಈ ಅಮರ್ಸುವ ಬಿಗಿ ಹೆಚ್ಚಾವುತ್ತು.
ಈ ಹೊತ್ತಿಂಗೆ ದೃಷ್ಟಿನರದ ಹೆರಾಣ ಸುತ್ತಿಂಗೆ ಒತ್ತಡ ಬಿದ್ದು ಹಾನಿ ಆಗಿ ಕ್ರಮೇಣ ಒಳಾಣ ಭಾಗಂಗ ಹಾನಿಗೊಳಗಾವುತ್ತು.

ಉದಾ: ಕಂಪ್ಯೂಟರ್ ಅಥವಾ ಟಿವಿ ಕಾಂಬಲೆ ನವಗೆ ಬೇಕಾದ ವಯರಿಂಗೆ ಯಾವುದಾದರೂ ಒತ್ತಡ ಬಿದ್ದು, ಎಲಿ ಕೆರದು ಆ ಭಾಗದ ವಯರ್ ಹಾನಿ ಆದರೆ ಕಂಪ್ಯೂಟರ್ ಅಥವಾ ಟಿ ವಿ ಕಾಣದ್ದೆ ಆವುತ್ತಲ್ಲದಾ – ಹಾಂಗೆ ನವಗೆ ನರಕ್ಕೆ ಒತ್ತಡ ಬಿದ್ದಪ್ಪಗ ಕಣ್ಣಿಲಿ ತೊಂದರೆ ಅಪ್ಪದು.

ಕಣ್ಣಿನ ಒತ್ತಡ ಹೆಚ್ಚಾಗಿ, ಕಣ್ಣಿನ ದೃಷ್ಟಿನರಕ್ಕೆ ಹಾನಿ ಆಗಿ ಬಪ್ಪಂಥಾ ಕಾಯಿಲೆಗೆ ಗ್ಲಾಕೋಮಾ ಹೇಳಿ ಹೇಳುತ್ತವು.
ಈ ಕಾಯಿಲೆಲಿ ಒಂದರಿ ದೃಷ್ಟಿ ನಾಶ ಆದರೆ ಮತ್ತೆ ಎಂದಿಂಗೂ ದೃಷ್ಟಿ ಪುನಾ ಬತ್ತಿಲ್ಲೆ. ಪುನಃ ಎಂದಿಂಗೂ ಆ ನರಂಗೋ ಚೇತರ್ಸಿಗೊಳ್ತಿಲ್ಲೆ.
ಪ್ರಾರಂಭಿಕ ಹಂತಲ್ಲಿಯೇ ಕಾಯಿಲೆಯ ಗುರುತಿಸಿದರೆ ಅಥವಾ ಇದ್ದು ಹೇಳಿ ಗೊಂತಾದರೆ ಅದುವರೆಗೆ ಆದ ಹಾನಿಯ ಬಿಟ್ಟು ದೃಷ್ಟಿ ಮತ್ತೂ ನಾಶ ಅಪ್ಪದರ ಮದ್ದಿಲಿ ಮತ್ತೆ ಜಾಗ್ರತೆಲಿ ಇದ್ದುಗೊಂಡು ತಡವಲಾವುತ್ತು.

ದೃಷ್ಟಿಯ ಶಾಶ್ವತ ನಾಶ ತಪ್ಪ ಈ ಗ್ಲಾಕೊಮಾ ಕಾಯಿಲೆಂದ ಲೋಕಲ್ಲಿ ಸುಮಾರು ಆರು ಮಿಲಿಯ ಜನಂಗ ತೊಂದರೆಗೊಳಗಾವುತ್ತಾ ಇದ್ದವು.
ಬಹುತೇಕ ಎಲ್ಲೋರಿಂಗೂ ಈ ಕಾಯಿಲೆ ತಮ್ಮ ಆಕ್ರಮಿಸಿದ ಬಗ್ಗೆ ಅಂದಾಜೇ ಆವುತ್ತಿಲ್ಲೆ.

ಅದಕ್ಕೇ ಈ ಕಾಯಿಲೆಯ ಗುಟ್ಟಿಲಿ ಬಪ್ಪ ದೃಷ್ಟಿಚೋರ (Silent thief of sight) ಹೇಳಿ ಹೇಳುತ್ತವು. ನಮ್ಮ ಕಣ್ಣೊಳವೇ ಇದ್ದುಗೊಂಡು ನವಗೆ ಕಾಣದ್ದೆ ನಮ್ಮ ದೃಷ್ಟಿಯ ಕಸಿವ ಮಹಾ ಕಳ್ಳ!!!
ಈ ಗ್ಲಾಕೋಮಾಲ್ಲಿ ಎರಡು ತರ ಇದ್ದು. ಓಪನ್ ಅಂಗಲ್ ಗ್ಲಾಕೋಮಾ ಮತ್ತೆ ಆಂಗಲ್ ಕ್ಲೋಶರ್ ಗ್ಲಾಕೋಮಾ.

ಕಾಯಿಲೆಯ ಸೂಚನೆಗೋ:

ಓಪನ್ ಅಂಗಲ್ ಗ್ಲಾಕೋಮಾಲ್ಲಿ ಆರಂಭಿಕ ಹಂತಲ್ಲಿ ಯಾವುದೇ ಸೂಚನೆ ಇರ್ತಿಲ್ಲೆ.
ನಿಧಾನಕ್ಕೆ ನಮ್ಮ ಕಣ್ಣಿನ ದೃಷ್ಟಿಯ ವ್ಯಾಪ್ತಿ ಕಣ್ಣಕರೆಂದ ಕಡಮ್ಮೆ ಆಗಿ ನಡೂಗೆ ಮಾತ್ರ ದೃಷ್ಟಿ ಕಾಂಬ ಹಾಂಗೆ ಅಪ್ಪದು, ಅಂಬಗಂಬಗ ಕನ್ನಡ್ಕ ಬದಲಾವಣೆ ಮಾಡೆಕ್ಕಪ್ಪದು, ಉರಿವ ಬಲ್ಬಿನ ಸುತ್ತಲೂ ಪ್ರಭೆ ಕಂಡ ಹಾಂಗೆ ಅಪ್ಪದು.
ಅಂಗಲ್ ಕ್ಲೋಶರ್ ಗ್ಲಾಕೋಮಲ್ಲಿ ವ್ಯಕ್ತಿಗೆ ಕಣ್ಣು ಕೆಂಪಪ್ಪದು, ಕಣ್ಣುಬೇನೆ, ತಲೆಬೇನೆ, ವಾಂತಿ, ದೃಷ್ಟಿ ಮಂಜಪ್ಪದು, ಹೀಂಗಿಪ್ಪ ತೊಂದರೆಗೊ ಕಾಂಗು. ಈ ಚಿಹ್ನೆಗ ಕಂಡರೆ ಕೂಡಲೇ ತಜ್ಞ ವೈದ್ಯರ ಕಾಣೆಕ್ಕು.

ಉದಾಹರಣೆಗೆ:

ಆರೋಗ್ಯಪೂರ್ಣ ದೃಷ್ಟಿ

ಗ್ಲಾಕೊಮಾದ ದೃಷ್ಟಿ

ಗ್ಲಾಕೊಮಾದ ದೃಷ್ಟಿವ್ಯಾಪ್ತಿ

ಆರಿಂಗೆ ಬಪ್ಪದು?
ಸಾಮಾನ್ಯವಾಗಿ ನಲುವತ್ತು ವರ್ಷ ಮೇಲ್ಪಟ್ತ ವ್ಯಕ್ತಿಗಳಲ್ಲಿ, ಅನುವಂಶೀಯವಾಗಿ, ಮಧುಮೇಹಿಗಳಲ್ಲಿ, ವೈದ್ಯರ ಸಲಹೆ ಇಲ್ಲದ್ದೆ ಅವ್ವವ್ವೇ ಕಣ್ಣಿಂಗೆ ಇಪ್ಪ ಮದ್ದು ಹೇಳಿ ಮದ್ದಿನಂಗಡಿಲಿ ಕೇಳಿ ಅರಿವಿಲ್ಲದ್ದೆ ಸ್ಟಿರೋಯ್ಡ್ ಡ್ರೋಪ್ಸ್ ತಿಂಗಳುಗಟ್ಲೆ ಹಾಕುವವರಲ್ಲಿ ಇದು ಬಪ್ಪ ಸಾಧ್ಯತೆ ಹೆಚ್ಚು.
ಮಕ್ಕಳಲ್ಲಿಯೂ ಕೆಲವು ಸರ್ತಿ ಕಾಂಬ ಸಂದರ್ಭಂಗ ಇದ್ದು.

ಎಂತ ಮಾಡೆಕ್ಕಪ್ಪದು?
ವರ್ಷ ಅಥವಾ ಎರಡು ವರ್ಷಕ್ಕೊಂದರಿ ಕಣ್ಣಿನ ತಜ್ಞರಲ್ಲಿ ತಪಾಸಣೆ ಮಾಡಿ ಆದಷ್ಟು ಕಣ್ಣಿನ ಒತ್ತಡ ಸಾಮಾನ್ಯ ಇದ್ದೋ ಹೇಳಿ ನೋಡೆಕ್ಕಪ್ಪದು.
ಅನುವಂಶೀಯವಾಗಿ ಇದು ಬಪ್ಪ ಸಾಧ್ಯತೆ ಇಪ್ಪವ್ವು ವರ್ಷಕ್ಕೊಂದರಿ ತಪಾಸಣೆ ಮಾಡ್ಲೇ ಬೇಕು. ಪ್ರತಿ ಬಾರಿ ಕಣ್ಣಿನ ಪರೀಕ್ಷೆಗೆ ಹೋದಪ್ಪಗ ಗ್ಲಾಕೋಮಾದ ಇರುವಿಕೆಯ ಸಾಧ್ಯತೆಯ ಬಗ್ಗೆ ವೈದ್ಯರಿಂಗೆ ನೆನಪಿಸುದು ಒಳ್ಳೆದು.
ವೈದ್ಯರ ಸಲಹೆಯ ಪ್ರಕಾರ ನಿಯಮಿತ ಮದ್ದಿಲಿ ಈ ಕಾಯಿಲೆಯ ನಿಯಂತ್ರಣಲ್ಲಿ ಮಡಿಕ್ಕೊಂಬಲೆ ಎಡಿಗು.

ಕಣ್ಣಿನ ಆರೋಗ್ಯಕ್ಕೆ ಮೀಸಲಾದ ಈ ವಾರದ ಸದುಪಯೋಗವ ಎಲ್ಲೊರೂ ಪಡಕ್ಕೊಳ್ಳಿ. ನಮ್ಮ ಮನೆಯೋರು, ಬಂಧು ಬಳಗದೋರು, ನೆರೆಕರೆಯೋರು ಎಲ್ಲೊರಲ್ಲೂ ಈ ಅರಿವಿನ ಪ್ರಚಾರ ಮಾಡಿ ಎಲ್ಲರ ದೃಷ್ಟಿಯ ರಕ್ಷಣೆ ಮಾಡುದು ಪ್ರತಿಯೊಬ್ಬನ ಧ್ಯೇಯ ಆಗಲಿ.
ಸುಂದರ ಸೃಷ್ಟಿಯ ನೋಡುಲೆ ದೇವರು ಕೊಟ್ಟ ದೃಷ್ಟಿಯ ಸಂತುಷ್ಟಿಲಿ ಮಡುಗಿ ನಮ್ಮ ನಂತರ ಸಂಕಷ್ಟಲ್ಲಿ ಇಪ್ಪೋರಿಂಗೆ ದೃಷ್ಟಿದಾನ ಮಾಡಿ ಜೀವನ ಸಾರ್ಥಕ್ಯವ ಪಡಕ್ಕೊಂಬ.

ಗ್ಲಾಕೋಮಾಲ್ಲಿ ನಾಶ ಆದ ದೃಷ್ಟಿ ಮರುಕಳಿಸುದು ಅಸಾಧ್ಯ
ಹರಡಲಿ ಮನೆ ಮನೆ ಮನ ಮನಲ್ಲಿ ಈ ಸಂದೇಶ ವೇದ್ಯ
ಆಗಲಿ ದೃಷ್ಟಿಯ ಕಾಳಜಿ ಎಲ್ಲೋರಿಂಗೂ ಸುಲಭ ಸಾಧ್ಯ
ದೃಷ್ಟಿ ನಾಶ ತಪ್ಪ ಶಾಶ್ವತ ನಾಶ ತಡೆಯಲಿ ಆದ್ಯ.

~*~*~

ಸೂ: ಪಟಂಗ ಅಂತರ್ಜಾಲದ ಬೈಲುಗಳಿಂದ

ಶ್ರೀಅಕ್ಕ°

   

You may also like...

12 Responses

 1. ಹೊಸ ವಿಶಯ ಚಿಕ್ಕಮ್ಮ.
  ಧನ್ಯವಾದಂಗೊ 🙂

 2. ಶರ್ಮಪ್ಪಚ್ಚಿ says:

  ಶ್ರೀ..
  ಸಂದರ್ಭಕ್ಕೆ ಸೂಕ್ತವಾದ ಲೇಖನ.
  ಕಣ್ಣಿನ ದೃಷ್ಟಿ ದೋಶ ಬಪ್ಪದಕ್ಕೆ ಗ್ಲಾಕೋಮಾ ಕೂಡಾ ಒಂದು ಕಾರಣ ಹೇಳ್ತ ವಿಶಯವ ಚಿತ್ರ ಸಮೇತ ವಿವರಿಸಿದ್ದು ಲಾಯಿಕ ಆಯಿದು.
  ರಕತ ಒತ್ತಡವ ಹೇಂಗೆ silent killer ಹೇಳ್ತವೋ ಹಾಂಗೆ ಕಣ್ಣಿನ ಒತ್ತಡಕ್ಕೂ ಅದೇ ನಮೂನೆ ಇನ್ನೊಂದು ಹೆಸರು silent thief of sight. ಎರಡಕ್ಕೂ ಸಾಮ್ಯತೆ. ಅಳವದು ಒತ್ತಡವನ್ನೇ, ಬೇರೆ ಬೇರೆ ವಿಧಾನಂಗೊ.
  ನಿಯಮಿತವಾಗಿ ಪರೀಕ್ಷೆ ಮಾಡಿಸಿಂಡು ಇಲ್ಲದ್ದರೆ, ದೋಷ ಗೊಂತಪ್ಪಗ ತಡ ಆಗಿರ್ತು.
  ಸಂಗ್ರಹ ಯೋಗ್ಯ ಲೇಖನ.
  ಮಾಹಿತಿ ಒದಗಿಸಿದ ಡಾಕ್ಟ್ರಿಂಗೂ, ಲೇಖನ ರೂಪಲ್ಲಿ ಒದಗಿಸಿದ ನಿನಗೂ ಧನ್ಯವಾದಂಗೊ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *