Oppanna.com

ಈ ಸಾಧಕರು ಆರು?

ಬರದೋರು :   ಗೋಪಾಲಣ್ಣ    on   12/03/2012    10 ಒಪ್ಪಂಗೊ

ಗೋಪಾಲಣ್ಣ

ಕೆಲವೇ ಪ್ರಶ್ನೆಗೊ ನಮ್ಮ ಹವ್ಯಕ ಸಾಧಕರ ಬಗ್ಗೆ-
೧]ಕಾರವಾರಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದವು ಇವು.ಇವು ಸಂಪಾದಕರಾಗಿ ಇದ್ದ ಪತ್ರಿಕೆಯ ಹೆಸರೆಂತ?
೨]ತುಳು ಭಾಷೆಲಿ ಪಂಚವಟಿ ಪ್ರಸಂಗ ಬರೆದವು ಇವು.
೩]ಇವರ ಹೆಸರಿಲಿ ಪ್ರತಿವರ್ಷ ಹೆಮ್ಮಕ್ಕೊಗೆ ಕಥಾ ಸ್ಪರ್ಧೆ ಏರ್ಪಾಡಾವುತ್ತು.
೪]ಮಾತಿನ ಲೋಕದ ಮಹಾಕವಿ-ಹೇಳಿ ಒಂದು ಪತ್ರಿಕೆ ಇವರ ಬಗ್ಗೆ ಅಗ್ರ ಲೇಖನ ಪ್ರಕಟಿಸಿದ್ದು.ಇವರ ಆತ್ಮಕತೆಯ ಹೆಸರೆಂತ?
೫]ಹವ್ಯಕ ರಾಜಕಾರಣಿಗಳಲ್ಲಿ ಇವರಷ್ಟು ಎತ್ತರಕ್ಕೆ ಹೋದವು ಬೇರೆ ಇಲ್ಲೆ.
೬]ಪಂಪನ ಬಗ್ಗೆ ಸಂಶೋಧನಾ ಗ್ರಂಥ ಬರೆದ್ದೂ ಅಲ್ಲದೆ ಪಂಪನ ಸಾವಿರ ವರ್ಷದ ಉತ್ಸವಕ್ಕೆ ಅಧ್ಯಕ್ಷರೂ ಆಗಿ ಹೆಸರು ಮಾಡಿದ್ದವು.
೭]ವೆಂಕಟೇಶ ಕೇತ್ಕರ್ ಮತ್ತೆ ತಿಲಕರಿಂದ ಪ್ರಭಾವಿತರಾಗಿ ದೃಗ್ಗಣಿತ ಪಂಚಾಂಗ ಮಾಡಿದವು-ಅವರ ಪಂಚಾಂಗ ಸುರು ಆದ ವರ್ಷ ಏವದು?

ಇನ್ನೂ ಹಲವು ಸಾಧಕರು ಇದ್ದವು.ಬೈಲಿಲಿ ಇಪ್ಪವು ಇವರ ಬಗ್ಗೆ ವಿವರಗಳನ್ನೂ ಬರೆಯೆಕ್ಕು;ಹೀಂಗಿಪ್ಪ ಸಾಧಕರ ನೆಂಪು ಮಾಡುತ್ತಾ ಇರೆಕ್ಕು ಹೇಳಿ ಎನ್ನ ಕೋರಿಕೆ.

10 thoughts on “ಈ ಸಾಧಕರು ಆರು?

  1. ಉತ್ತರವ ರಘು ಭಾವ ಬರೆದ್ದವು.
    ೧ನೆ ಪ್ರಶ್ನೆಲಿ,ಶಂಕರ ಭಟ್ಟರು ರಾಷ್ಟ್ರ ಬಂಧು ವಿಲಿ ಕೆಲಸ ಮಾಡಿದ್ದವು.ಮತ್ತೆ ರಾಷ್ಟ್ರಮತ ಪತ್ರಿಕೆ ಮಾಡಿದ್ದವು ಹೇಳಿ ಉತ್ತರ.
    ೭ನೇ ಪ್ರಶ್ನೆಗೆ ಉತ್ತರ-ಯರ್ಮುಂಜ ಶಂಕರ ಜೋಯಿಸರು[ವೈಜಯಂತಿ ಪಂಚಾಂಗ-೧೯೧೭ ರಲ್ಲಿ ಸುರುವಾದ್ದು].ಬಾಕಿ ಎಲ್ಲಾ ರಘು ಭಾವ ಬರದ್ದು ಸರಿ.

    1. ೧. ಕಡೆ೦ಗೋಡ್ಲು ಶ೦ಕರ ಭಟ್ಟ , “ರಾಷ್ಟ್ರಬ೦ಧು”ಪತ್ರಿಕೆ.
      ೨. ಬಾಯಾರು ಸ೦ಕಯ್ಯ ಭಾಗವತರು
      ೩. ಕೊಡಗಿನ ಗೌರಮ್ಮ
      ೪. ಶೇಣಿ ಗೋಪಾಲಕೃಷ್ಣ ಭಟ್ , ” ಯಕ್ಷಗಾನ ಮತ್ತು ನಾನು”
      ೫. ರಾಮಕೃಷ್ಣ ಹೆಗಡೆ
      ೬. ಮುಳಿಯ ತಿಮ್ಮಪ್ಪಯ್ಯ
      ೭. ( ಉತ್ತರ ಗೊ೦ತಿಲ್ಲೆ )

      1. ಒಪ್ಪೊಪ್ಪ ಪ್ರಶ್ನೆಗಳ ಹುಡ್ಕಿ ಬೈಲಿಂಗೆ ಹಾಕಿದ್ದಿ ಗೋಪಾಲಣ್ಣ.
        ಪ್ರತಿಯೊಂದರ ಓದುವಗಳೂ ಮೈ ರೋಮಾಂಚನ ಆವುತ್ತಾಂಗೆ ಇದ್ದು.

        ಒಯಿಜಯಂತಿ ಪಂಚಾಂಗವೋಪ?
        ಈಗಾಣದ್ದು “ರಸಾಂಕವರ್ಷೇ ಪದಮಾದಧಾನಾ..” ಆಗಿರೇಕು.
        (ರಸ=6; ಅಂಕ=9 , ರಸಾಂಕ = ತೊಂಬತ್ತಾರು ಒರಿಶ ಆತೋದು.)

        ಮಾಷ್ಟ್ರುಮಾವಂಗೆ ಅರಡಿಗು.

  2. ನಾಲ್ಕು ಉತ್ತರ ಗೊ೦ತಿದ್ದು ಗೋಪಾಲಣ್ಣ.
    ಸಾಧಕರ ಪರಿಚಯದ ಶುದ್ದಿಗೊ ಇನ್ನು ಕೆಲವೇ ದಿನಲ್ಲಿ ಬೈಲಿ೦ಗೆ ಬಕ್ಕು.

  3. ಉತ್ತಮ ಕಾರ್ಯ. ಸಾಧಕರ ನೆಂಪು ಮಾಡ್ಯೊಳೆಕಾದ್ದು ನಮ್ಮ ಕರ್ತವ್ಯ.
    ಚೆ. ಇಲ್ಲಿ ಆನು ಪಾಸು ಅಪ್ಪಲೆ ಕಷ್ಟ ಇದ್ದೋ ಹೇಳಿ.

  4. ಅಪ್ಪು… ಸಾಧಕರ ನೆನಪು ಮಾಡುತ್ತಾ ಇರೆಕ್ಕು ಅವರಿಂದ ನಾವೂ ಪ್ರಚೋದನೆ ಪಡಕ್ಕೊಲ್ಲೆಕ್ಕು…

  5. {ಹೀಂಗಿಪ್ಪ ಸಾಧಕರ ನೆಂಪು ಮಾಡುತ್ತಾ ಇರೆಕ್ಕು ಹೇಳಿ ಎನ್ನ ಕೋರಿಕೆ}. ಆನು ಒಪ್ಪುತ್ತೆ ನಿಂಗಳ ಕಳಕಳಿಯ.
    ಖಂಡಿತ ಆಯೆಕ್ಕು.

  6. ನಿಂಗಳ ಮೂಲಕ ಬೈಲಿಂಗೆ ಇದು ಅತ್ತ್ಯುತ್ತಮ ಕೆಲಸ ಗೋಪಾಲಣ್ಣ. ನಮೋ ನಮಃ ನಿಂಗಳ ಈ ಚಿಂತನಗೆ.
    (ಆರತ್ರೂ ಹೇಳೆಡಿ – ಎನಗೆ ಇದರ್ಲಿ ಮೂರು ಪ್ರಶ್ನಗೆ ಉತ್ತರ ಗೊಂತಾಯ್ದಿಲ್ಲೆ!)

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×