ಸಮಸ್ಯೆ 106 : “ರಿ೦ಗು ಹಾಲಿನ ಸೇರುಸಿದ್ದವು ಅಡಿಗೆ ಸತ್ಯಣ್ಣ”

ಬೈಲ ನೆ೦ಟ್ರುಗಳಲ್ಲಿ ಪೂಜೆ,ಬದ್ಧ ಹೇಳಿ ಜೆ೦ಬ್ರ೦ಗಳ ತೆರಕ್ಕು ಸುರು ಅಪ್ಪಗ ಅಡಿಗೆ ಸತ್ಯಣ್ಣನ ಓಡಾಟ ಇಪ್ಪದೇ..ಈ ಗಡಿಬಿಡಿಲಿ ಸತ್ಯಣ್ಣ ಎ೦ತ ಮಾಡಿದವು ಹೇಳಿ ಭಾಮಿನಿ ಷಟ್ಪದಿಲಿ ನೋಡುವ.

ಸಮಸ್ಯೆ  : “ರಿ೦ಗು ಹಾಲಿನ ಸೇರುಸಿದ್ದವು ಅಡಿಗೆ ಸತ್ಯಣ್ಣ”

 

ಸಂಪಾದಕ°

   

You may also like...

15 Responses

 1. ಭಾಗ್ಯಲಕ್ಷ್ಮಿ says:

  ರಂಗು ರಂಗಿನ ಸೀರೆ ಸುತ್ತಿಯೆ
  ರಿಂಗೊ ಜುಮ್ಕಿಯೊ ಮಿಸ್ರಿ ಮಾಲೆಲಿ
  ಸಿಂಗರಿಸಿ ಶೋಭಿಸುವ ದಿಬ್ಬಣದವರ ಕಾ೦ಬಗಳೆ I
  ರಂಗ ತೋಡಿದ ಕೊದಿಲ ಪಾತ್ರ ಕ –
  ವಂಗವದು ಬದಲಾಗಿ ಸಾಂಬಾ –
  ರಿಂಗು ಹಾಲಿನ ಸೇರುಸಿದ್ದವು ಅಡಿಗೆ ಸತ್ಯಣ್ಣ II

  ಉದಿಯಪ್ಪಗ ದಿಬ್ಬಣ ಬಪ್ಪಗ ರಂಗಣ್ಣ ಗಡಿಬಿಡಿಲಿ , ಸತ್ಯಣ್ಣ ಹೇಳಿದ ಹಾಂಗೆ ಮಾಡದ್ದೆ ಸಾಂಬಾರಿನ ಕವಂಗಕ್ಕೂ ಹಾಲು ಬಿದ್ದತ್ತಡ

  ರಿಂಗು =ಕೆಮಿಯ ಆಭರಣ ,ತೆಂಗಿನ ಕಾಯಿ

  • ಭಾಗ್ಯಲಕ್ಷ್ಮಿ says:

   ಕಾಪಿಗೆ ಇಡ್ಲಿ ಸಾ೦ಬಾರಡ

  • ಬೊಳುಂಬು ಗೋಪಾಲ says:

   ಭಾಗ್ಯಲಕ್ಷ್ಮಿಯಕ್ಕನ ಕಲ್ಪನೆ ಸೂಪರ್ ಆಯಿದು. ದಿಬ್ಬಣದ ವರ್ಣನೆ ಲಾಯಕಾಯಿದು. ಆನುದೆ ಪದ್ಯ ಬರದ್ದದು ಅಕ್ಕ ಬರದ ಪದ್ಯಕ್ಕೆ ರಜ ರಜ ಹತ್ರೆ ಇದ್ದು. ಪ್ರಾಸ ಒಂದೇ ಆದ್ದದು ಕಾಕತಾಳೀಯ.

   ರಿಂಗು ಜುಮ್ಕಿಯ ಬೆಡಗಿ ಮಾಟಕೆ
   ಮಂಗನಾಗೆಯೆ ಹಿಂದೆ ಬೀಳುವ
   ರಂಗ ಪೆಂಗಗೆ ರಿಂಗು ಮಾಸ್ತರ ನಮ್ಮ ಸತ್ಯಣ್ಣ |

   ರಂಗು ರಂಗಿನ ಕಥೆಯ ಹೇಳೋ-
   ರಿಂಗೆ ಬೈಯುವ ಭರದಿ ಸಾಂಬಾ-
   ರಿಂಗು ಹಾಲಿನ ಸೇರುಸಿದ್ದವು ಅಡಿಗೆ ಸತ್ಯಣ್ಣ ||

   • ತೆಕ್ಕುಂಜ ಕುಮಾರ ಮಾವ° says:

    ರೈಸಿದ್ದು ಭಾಗ್ಯತ್ತೆ, ಬೊಳುಂಬು ಭಾವ. ಪಾಚಕ್ಕೆ ಒಗ್ಗರಣೆ ಹಾಕಿಕ್ಕೋ ಇನ್ನು…?ಎಡಿಯಪ್ಪ.

  • ಭಾಗ್ಯತ್ತೇ, ಬೊಳುಂಬು ಮಾವಾ-
   ಅದ್ಭುತ ಪರಿಹಾರಂಗೊ..
   ಹೊಹ್ಹೋ… ರೈಸಿದ್ದು. 😀

  • ಭಾಗ್ಯಲಕ್ಷ್ಮಿ says:

   ಪದ್ಯ ಮೆಚ್ಚಿದ ಎಲ್ಲೋರಿಂಗೂ ಧನ್ಯವಾದ೦ಗೊ .

 2. S.K.Gopalakrishna Bhat says:

  ಚಂಗುಳಿಯ ಪಾಯಸಕೆ ಸಾಂಬಾ
  ರಿಂಗೆ ಮೇಲಾರಕ್ಕೆ ಗೊಜ್ಜಿಗೆ
  ಇಂಗು ಹಾಕಿದ ಸಾರು,ತಾಳೆಲ್ಲದಕು ಹುಳಿಹೆಚ್ಚು ||

  ಮುಂಗೆ ಬರಿಸಿದ ಪಚ್ಚೆಸರು ಕಾ
  ಳಿಂಗೆ ಗಜ್ಜರಿ ಕೊಚ್ಚಿ ಹುಳಿಮೊಸ
  ರಿಂಗು ಹಾಲಿನ ಸೇರಿಸಿದ್ದವು ಅಡಿಗೆ ಸತ್ಯಣ್ಣ ||

  • ತೆಕ್ಕುಂಜ ಕುಮಾರ ಮಾವ° says:

   ಮೊಸರು ಹುಳಿ ಆದರೆ ಹಾಲು ಸೇರ್ಸುದು ಕ್ರಮವೇ. ಅದನ್ನೇ ಪೂರ್ಣವಾಗಿ ತೆಕ್ಕೊಂಡದು ಲಾಯಿಕ ಆಯಿದು.

 3. indiratte says:

  ಗಂಗೆ ಕಪಿಲೆಯ ಮಂದ ಹಾಲದು ,
  ತುಂಗೆ ಮಡಗಿದ ಹೆಪ್ಪಿನಾ ಮೊಸ
  ರಿಂಗೆ ಹಾಲನು ಸೇರಿಸಿದ್ದನು ಅಡಿಗೆ ಸತ್ಯಣ್ಣ |
  ಬಿಂಗಿಮಾಡುವ ಗೋಪಬಾಲರ
  ರಂಗ ಸೇರಿಸಿಯಡ್ಡ ಕಟ್ಟಿದ
  ರಂಗುರಂಗಿನ ಅಳಗೆಯಲ್ಲಣ ಬೆಣ್ಣೆ ಕೇಳುತಲೀ ||

  ಇದು ನಮ್ಮ ಬೈಲಿನ ಅಡಿಗೆಸತ್ಯಣ್ಣ ಅಲ್ಲ, ಗೋಕುಲಲ್ಲಿ ನಂದಗೋಪನ ಅರಮನೆಯ ಅಡಿಗೆ ಮುಖ್ಯಸ್ಥ !!

  • ತೆಕ್ಕುಂಜ ಕುಮಾರ ಮಾವ° says:

   ಅಡಿಗೆ ಸತ್ಯಣ್ಣ ಇದ್ದಲ್ಲಿ ರಂಗಣ್ಣನೋ ಬೇಕನ್ನೆ…

 4. ಅದಿತಿ says:

  ಮಂಗಳೆಯ ಬದ್ಧಲ್ಲಿ ಬೀಜ ಲ
  ವಂಗ ಹಾಕಿದ ಲಾಡು ಹೋಳಿಗೆ-
  -ಯಿಂಗಿನೊಗ್ಗರಣೆಯ ಟೊಮೇಟದ ಸಾರು ರುಚಿಯಿತ್ತು
  ಅಂಗ ವಸ್ತ್ರಲ್ಲುದ್ದಿಕೊಂಬಗ
  ರಂಗ ಹೇಳಿದ ಗುಟ್ಟು ತಿಳಿಸಾ-
  ರಿಂಗು ಹಾಲಿನ ಸೇರಿಸಿದ್ದವು ಅಡಿಗೆ ಸತ್ಯಣ್ಣ
  ಕಾಯಿಹಾಲು ಹಾಕಿ ಮಾಡಿದ ತಿಳಿಸಾರು ರುಚಿಯಾವ್ತು ಉಂಬಲೆ.
  ಮಂಗಳೆಯ ಬದ್ಧಲ್ಲಿ ಆ ಸಾರು ಅಡಿಗೆ ಸತ್ಯಣ್ಣ ಮಾಡಿದ್ದಡ.

 5. ಭಾಗ್ಯಲಕ್ಷ್ಮಿ says:

  ‘ತಿಂಗಳಾತಿದ ದೊಡ್ಡ ಮಗಳಿನ
  ಬೆಂಗಳೂರಿನ ಮನಗೆ ಹೋಗ-
  ದ್ದೆ೦ಗೊ” ಹೇಳಿದ ಶಾರದಕ್ಕನ ಮಾತು ಮರೆಶುಲೆಯೆ I
  ತುಂಗ ಭದ್ರೆಯ ಹಾಲ್ಲಿ ನವಗೀ –
  ಗಂಗೆಚಾಯವೆ ಹೇಳಿಯೆಲ್ಲೋ-
  ರಿಂಗು ಹಾಲಿನ ಸೇರಿಸಿದವು ಅಡಿಗೆ ಸತ್ಯಣ್ಣ II
  ಶಾರದಕ್ಕ ಮಗಳ ಮನೆಗೆ ಹೋಯೆಕ್ಕು ಹೇಳಿ ಪೀಟಿಕೆ ಹಾಕುವಗ ಒಂದರಿಯಂಗೆ ಶಾರದಕ್ಕನ ಸಮಾಧಾನ ಮಾಡಿಕುತ್ತೆ ಹೇಳಿ ಸತ್ಯಣ್ಣನೆ ಉದಿಯಪ್ಪಗ ಕರದ ಹಾಲಿಲಿ ಹೊತ್ತೋಪಗಣ ಚಾಯ ಮಾಡಿದವಡ್ಡ .(ಇಲ್ಲದ್ದರೆ ಸತ್ಯಣ್ಣ ಮನೆಲಿ ಅಡಿಗೆ ಕೋಣಗೆ ಹೋಪಲಿಲ್ಲೆದ ) ತುಂಗ ಭದ್ರೆ ಸತ್ಯಣ್ಣನ ದನ

  • ಅದಿತಿ says:

   ಒಳ್ಳೆಯ ಕಲ್ಪನೆ ಮತ್ತು ಪದ್ಯ

   • ಭಾಗ್ಯಲಕ್ಷ್ಮಿ says:

    ಅದಿತಿಯಕ್ಕಂಗೆ ಧನ್ಯವಾದ.ರಂಗಣ್ಣನ ಮೂಲಕ ಸಾರಿನ ಗುಟ್ಟು ತಿಳಿಶಿದ್ದಕ್ಕೆ ಇನ್ನೊಂದು.
    ಸುಮಾರು ಸಮಯಂದ ಭಾಮಿನಿಲಿ ಬರೆಯದ್ದೆ ಅಸಕ್ಕ ಹಿಡುದಿತ್ತು. ಭಾಮಿನಿ ಲಾಯಿಕ ಆದರೆ ಅದುವೇ ಕಾರಣ

 6. K.Narasimha Bhat Yethadka says:

  ಹೊಸ ರುಚಿ
  ರಂಗು ರಂಗಿನ ಭಾರಿ ಸೀವಿನ
  ತಂಗೆ ಅಕ್ಕನ ಮನೆಯ ಎಲ್ಲೋ-
  ರಿಂಗು ಇಷ್ಟದ ಹೊಸ ರುಚಿಯ ಮಾಡಿದವು ಸತ್ಯಣ್ಣ
  ರಂಗ ಹಿಂಡಿದ ನಿಂಬೆ ಹುಳಿಯ ಕ-
  ವಂಗವನೆ ತಂದು ಬಳುದಾ ಎಸ-
  ರಿಂಗು ಹಾಲಿನ ಸೇರುಸಿದ್ದವು ಅಡಿಗೆ ಸತ್ಯಣ್ಣ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *