ಸಮಸ್ಯೆ 111 : ಮಾಡ ನೀರಿನ ಧಾರೆ ತೋಡಿಲಿ ಸಾಗಿ ಸಾಗರ ಸೇರದೋ

ಈ ವಾರದ ಸಮಸ್ಯೆ ಮಲ್ಲಿಕಾಮಾಲೆ ಛ೦ದಸ್ಸಿಲಿ.
( ನಾನ ನಾನನ ನಾನ ನಾನನ ನಾನ ನಾನನ ನಾನನಾ)

ಉದಾಹರಣೆಗೊಕ್ಕೆ ಒ೦ದರಿ ಹಳೆಯ ಸಮಸ್ಯಾಪೂರಣ೦ಗಳ ನೋಡುಲಕ್ಕು.

ಸಮಸ್ಯೆ : ಮಾಡ ನೀರಿನ ಧಾರೆ ತೋಡಿಲಿ ಸಾಗಿ ಸಾಗರ ಸೇರದೋ

ಸಂಪಾದಕ°

   

You may also like...

10 Responses

 1. indiratte says:

  ಮೂಢರಾಗಿಯೆ ಕಟ್ಟಿಬಿಟ್ಟವು ಮಾರ್ಗದೀಚಿಗೆ ಕಲ್ಲಿಲೀ
  ಮಾಡನೀರಿನ ಧಾರೆ ತೋಡಿಲಿ ಸಾಗಿ ಸಾಗರ ಸೇರದೋ
  ಪಾಡುಪಟ್ಟವು ವರ್ಷಧಾರೆಗೆ ನೀರು ನಿಂಬಗ ಊರಿಲೀ
  ಮೋಡಿಮಾಡಿತು ಅಮ್ಮ ತನ್ನಯ ನಾಮಧೇಯವ ಸೇರಿಸಿ ||

 2. ಬೊಳುಂಬು ಗೋಪಾಲ says:

  ಬೇಡ ಹೇಳಿರು ಕೇಳ ಕೆಮಿಗೇ ಮಾಡಲೆಡಿಯದು ಸುಮ್ಮನೇ
  ಬೋಡನಾಂಗೆಯೆ ಹಟವ ಹಿಡುದರೆ ಎರಡು ಬೀಸೆಕು ಬೆನ್ನಿಗೇ
  ಕಾಡು ಕಡುದೂ ಗಂಡಿ ತೋಡಿರೆ ನೀರು ಗುಡ್ಡಗೆ ಹತ್ತುಗೋ ?
  ಮಾಡ ನೀರಿನ ಧಾರೆ ತೋಡಿಲಿ ಸಾಗಿ ಸಾಗರ ಸೇರದೋ? ||

 3. ಶೈಲಜಾ ಕೇಕಣಾಜೆ says:

  ಮಾಡ ನೀರಿನ ಧಾರೆ ತೋಡಿಲಿ ಸಾಗಿ ಸಾಗರ ಸೇರದೋ
  ಜಾಡು ದಾರಿಯ ಮೇಲೆ ಮಾಡುದು ಸುಂಕವಿಲ್ಲದ ಯೋಜನೇ
  ಬೇಡ ಎತ್ತಿನ ಕಣ್ಣು ತಪ್ಪಿಸಿ ಬೀಲ ಗೀಸುವ ಭಾವನೇ
  ತಾಡಿ ಬಂದರೆ ಉದ್ದ ಕೋಡಿಲಿ, ರಾಡಿ ಮೆತ್ತುದು ಖಂಡಿತಾ ||

 4. K.Narasimha Bhat Yethadka says:

  ರೂಢಿ
  ಮಾಡ ನೀರಿನ ಧಾರೆ ತೋಡಿಲಿ ಸಾಗಿ ಸಾಗರ ಸೇರದೋ
  ಕಾಡ ಮಲ್ಲಿಗೆ ಹೂಗು ಅಲ್ಲಿಯೆ ಬಾಡಿ ಬಿದ್ದರೆ ಚೆಂದವೋ
  ಆಡಿ ಬಚ್ಚಿದ ಮಾಣಿ ಅಲ್ಲಿಯೆ ರಜ್ಜ ವಿಶ್ರಮ ಮಾಡನೋ
  ಕಾಡಿ ಬೇಡಿ ಯೆ ಉಂಡು ತಿಂ ಬದು ನಮ್ಮ ತಿಮ್ಮನ ರೀತಿಯೇ

 5. ರೇವತಿ.ಯು.ಎಮ್. says:

  ಮೂಢ ಮಾನವ ತಾನು ಎಂತದೊ ಮಾಡಿ ಬೀಗುದು ಎಂತಕೋ
  ಕೋಡು ಬಂದೊರ ಹಾಂಗೆ ತೋರುಸಿ ಸೃಷ್ಟಿ ಮುಂದೆಯೆ ಜಂಭವೋ
  ಬೀಡು ಪಾಲನೆ ಮಾಡಿ ಗೊಳ್ಳದೆ ನಾವು ಏನನು ಗೈಯ್ದರೂ
  ಮಾಡ ನೀರಿನ ಧಾರೆ ತೋಡಿಲಿ ಸಾಗಿ ಸಾಗರ ಸೇರದೋ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *