Oppanna.com

ಸಮಸ್ಯೆ 17:ಗುಜ್ಜೆಯಾ ಬಿರಿಯಾನಿ ತಿಂಬಲೆ ಕೊದಿ ಹಿಡುದ್ದಿಂದು

ಬರದೋರು :   ಸಂಪಾದಕ°    on   02/02/2013    31 ಒಪ್ಪಂಗೊ

ಈ ವಾರದ ಸಮಸ್ಯೆ:

“ ಗುಜ್ಜೆಯಾ ಬಿರಿಯಾನಿ ತಿಂಬಲೆ ಕೊದಿ ಹಿಡುದ್ದಿಂದು”

ಕಳುದ ವರುಷ ಶ್ರೀಅಕ್ಕ ಬೈಲಿಲಿ ಹ೦ಚಿದ ಗುಜ್ಜೆ ಬಿರಿಯಾನಿಯ ಘಮಘಮ ಇನ್ನುದೇ ಇದ್ದು.ಈ ವರುಷ ಬೈಲ ಕರೆ ಮರ೦ಗಳಲ್ಲಿ ಗುಜ್ಜೆ ಇದ್ದನ್ನೇ.

ಹಾ೦ಗಾರೆ ಗುಜ್ಜೆ ಕೊರಕ್ಕೊ೦ಡೇ ಭಾಮಿನಿ ಷಟ್ಪದಿಲಿ ತಿಳುಶಿ.

ಸೂ:

ಈ ಸಮಸ್ಯೆ “ಭಾಮಿನಿ ಷಟ್ಪದಿಲಿ” ಇದ್ದು.
ಮೂರು ನಾಲ್ಕರ ಎರಡು ಗುಚ್ಛ ಮೊದಲೆರಡು ಸಾಲುಗಳಲ್ಲಿ,
ಮೂರ್ನೇ ಸಾಲಿಲಿ ಮೂರು ಗುಚ್ಛ, ಕೊನೆಗೊಂದು ಗುರು.ಹೆಚ್ಚಿನ ಮಾಹಿತಿಗೆ:
https://oppanna.com/oppa/shara-kusuma-bhoga-bhamini-shatpadi

http://padyapaana.com

31 thoughts on “ಸಮಸ್ಯೆ 17:ಗುಜ್ಜೆಯಾ ಬಿರಿಯಾನಿ ತಿಂಬಲೆ ಕೊದಿ ಹಿಡುದ್ದಿಂದು

  1. ರಜ್ಜ ಗುಟ್ಟಿನ ಮಾತಿದೆನಗೀ
    ಹೆಜ್ಜೆ ತೆಳಿ ಕ೦ಡ್ರಾಗ ನಿತ್ಯದ
    ಸಜ್ಜಿಗೆಗೆಯವಲಕ್ಕಿಯೋ? ಹೇಳದ್ದೆ ಪದ್ರಾಡೇ।
    ಬೊಜ್ಜು ಕರಗುಸುಲಕ್ಕು ಸೌಟಿಲಿ
    ಸಜ್ಜಿಲೆಣ್ಣೆಯ ತೋಕಿ ಬೇಶಿದ
    ಗುಜ್ಜೆಯಾ ಬಿರಿಯಾನಿ ತಿ೦ಬಲೆ ಕೊದಿ ಹಿಡುದ್ದಿ೦ದು ॥

    1. ಅಯ್ಯರೆ ! ಇದರ ನೋಡುವಗ ಬರವ ಕೊದಿ ಖಂಡಿತಾ ಹಿಡಿತ್ತು .

  2. ಗೆಜ್ಜೆಯಾ೦ಗೆ ಮರಲ್ಲಿ ನೇಲ್ವ

    ಗುಜ್ಜೆ ಕ೦ಡ ಕುಸುಮತ್ತೆ ತ೦ದು

    ಹೆಜ್ಜೆ ಮಡುಗಿ ಕೊರದು ಕೊಡುಗು ಸೊಸೆ ಕೂಸು ಭಾಮಿನಿಗೆ

    ಸಜ್ಜಿ ಮಾಡುವ ಮೊದಲೆ ಹೇಳುಗು

    ಜಜ್ಜಿ ಮಾಡಡ ಪಲ್ಯವೆನಗಾ

    ಗುಜ್ಜೆಯಾ ಬಿರಿಯಾನಿ ತಿಂಬಲೆ ಕೊದಿ ಹಿಡುದ್ದಿಂದು”

    1. ಒಳ್ಳೆ ಕಲ್ಪನೆ,ಪ್ರಯತ್ನ.
      ಶುರುವಾಣ ಸಾಲಿಲಿ “ನೇಲುವ” ಹೇಳಿ ಮಾಡಿರೆ ಮಾತ್ರೆ ಸರಿಯಕ್ಕು.
      ಎರಡ್ನೆ ಸಾಲಿಲಿ
      ಗುಜ್ಜೆ/ ಕ೦ಡ ಕು/ಸುಮ/ತ್ತೆ ತ೦ದು
      ಸುಮ, ತ್ತೆ ತ೦ದು ಈ ಎರಡು ಗಣಲ್ಲಿ “ಲಗ೦” ಇದ್ದು.ಹಾ೦ಗಾಗಿ ಬದಲ್ಸೆಕ್ಕು.ಮಾತ್ರೆ ಲೆಕ್ಕ ಸರಿ ಇದ್ದರೂ ಗಟ್ಟಿಯಾಗಿ ಓದೊಗ ಈ ಸಮಸ್ಯೆ ಅರ್ಥ ಅಕ್ಕು.
      “ಗುಜ್ಜೆ ಕ೦ಡ ಸುಮತ್ತೆ ಬೇಗನೆ’ ಹೇಳಿ ಮಾಡಲಕ್ಕು.
      ಮೂರನೆ ಸಾಲಿಲಿ
      ಹೆಜ್ಜೆ /ಮಡುಗಿ ಕೊ/ರದು ಕೊ/ಡುಗು ಸೊಸೆ/ ಕೂಸು ಭಾಮಿನಿಗೆ
      ಯತಿ ತಪ್ಪೊದು ಗೊ೦ತಕ್ಕು.ಸುಮಾರು ಲಘುಗೊ ಒಟ್ಟಾಗಿ ಓದೊಗ ತೊ೦ದರೆ ಕೊಡ್ತು.
      “ಹೆಜ್ಜೆಯೊಲೆ ಹೊತ್ತುಸಿಯೆ ಕೊರವಗ ಕೂಸು ಭಾಮಿನಿಗೆ”
      ಹೇಳಿರೆ ಸರಿಯಕ್ಕು.

      1. ಮುಳಿಯದಣ್ಣ೦ಗೆ ಧನ್ಯವಾದ೦ಗೊ.ನಿ೦ಗೊ ಸರಿ ಮಾಡಿದ್ದು ಮತ್ತಸ್ಟು ಲಾಯಿಕ ಆಯಿದು.

  3. ಸರಿ ಇದ್ದು ಭಾವ. “ಪ್ರಿಜ್ಜು ಮೊಸರಿನ ಗೊಜ್ಜು ಸೇರುಸಿ” ದರೆ ಬಿರಿಯಾನಿ ಮತ್ತೂ ರುಚಿಯಕ್ಕೋ ಹೇದು.

  4. ಅಜ್ಜಿ ಮನೆಯಾ ಹಿಂದೆ ಪಾತ್ರೆ
    ಯುಜ್ಜುತಿರಲೂ ಕಳ್ಳ ಪುಚ್ಚೆಯ
    ಮರ್ಜಿಯಲ್ಲಿಯೆ ಮೆಲ್ಲನಟ್ಟುಂಬಳದ ಬಳಿಸೇರೀ ।

    ಲಜ್ಜೆಯಿಲ್ಲದೆ ಕೆಳವೆ ಕೂದೂ
    ಫ್ರಿಜ್ಜು ಮೊಸರಿನ ಗಟ್ಟಿ ಸೇರುಸಿ
    ಗುಜ್ಜೆಯಾ ಬಿರಿಯಾನಿ ತಿ೦ಬಲೆ ಕೊದಿ ಹಿಡುದ್ದಿ೦ದು ॥

  5. ಹೆಜ್ಜೆಯೂಟಲಿ ರಾಮ ಕಾಣಲಿ
    ಸಜ್ಜುಗೊಳ್ಳಲಿಯೆನ್ನ ಮನವೂ
    ಲಜ್ಜೆಯೆಂತಕೆ ಬ್ರಹ್ಮನಾರಾಧಿಸುತವು೦ಬಲೆಯು?
    ರಜ್ಜವುದೆ ವಿಚಲಿತಗೊಳಿಸದಾ
    ಬಜ್ಜಿಯೋ, ಜೀಗುಜ್ಜೆ ಪೋಡಿಯೊ,
    ಗುಜ್ಜೆಯಾ ಬಿರಿಯಾನಿ ತಿಂಬಲೆ ಕೊದಿ ಹಿಡುದ್ದಿಂದು||

    ಈ ಗುರುವಾಣಿಂದ ಪ್ರಭಾವಿತಳಾಗಿ ಬರದ್ದದು…

    ಗುರುವಾಣಿ
    ———
    ದೇವರಿಗೂ ನಮಗೂ ಅಂತಿಮವಾಗಿ ಸಂಭವಿಸಬೇಕಾಗಿರುವುದು ‘ಅದ್ವೈತ‘
    ನಮ್ಮೊಳ ಹೊಕ್ಕು,ನಮ್ಮ ರಸ-ರಕ್ತ-ಮಾಂಸಗಳಲ್ಲಿ ಹಾಸುಹೊಕ್ಕಾಗಿ ಬೆರೆತು,ಕೊನೆಗೆ ನಾವೇ ಆಗಿಬಿಡುವ ಅನ್ನಕ್ಕೂ-ನಮಗೂ ‘ನಿತ್ಯಾದ್ವೈತ‘

    ಅನ್ನದಿಂದಲೇ ಜನನ, ಅನ್ನದಿಂದಲೇ ಜೀವನ, ಅನ್ನದಿಂದಲೇ ಮರಣ…
    ಅನ್ನದಿಂದಲೇ ಭಾವ, ಅನ್ನದಿಂದಲೇ ಬವಣೆ..
    ಅನ್ನದಿಂದಲೇ ಭೋಗ, ಅನ್ನದಿಂದಲೇ ರೋಗ, ಅನ್ನದಿಂದಲೇ ಯೋಗ…
    ಅನ್ನದಿಂದಲೇ ಸಕಲವೂ…
    ಅನ್ನದಿಂದಲೇ ಬಂದ ಬಂಧ ತೊಲಗುವುದೂ ಅನ್ನದಿಂದಲೇ…
    ಪರಮಾತ್ಮನಂತೆ ಸರ್ವರ ಅಂತರ್ಯಾಮೀ..ಆನಂದದಾಯೀ..ಅದ್ವೈತಪರ್ಯವಸಾಯೀ..
    ಆದುದರಿಂದಲೇ ‘ಅನ್ನಂ ಬ್ರಹ್ಮ’

    — ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು

    1. ಮೂರನೆ ಸಾಲಿಲಿ ಮಾತ್ರೆಗೊ ತಟಪಟ ಆಯಿದನ್ನೆ ಜಯಕ್ಕ.

      1. ಓಹೋ.. ಅಪ್ಪನ್ನೇ… “ಬ್ರಹ್ಮ” ನ “ದೇವ” ಹೇಳಿ ಮಾಡುತ್ತೆ…

        ‘ಲಜ್ಜೆಯೆಂತಕೆ ದೇವರಾರಾಧಿಸುತವು೦ಬಲೆಯು?’

  6. ರಜೆಯ ದಿನಕ್ಕೆ ಬಂದವ ರಜತ

    ಸಜೆಯ ಶಾಲೆಯ ಮರವ ಖಂಡಿತ

    ಮಜವ ಮಾಡುವ ಗುರಿಲಿ ಪಿಜ್ಜಿಯ ಬಳಿಯುಸುರಿದ ಪೋರ

    ವಜಾ ಮಾಡಿಂದು ಹೆಜ್ಜೆಯೂಟ

    ಬಜೆಯು ಬೇಕೆನ ಜತೆಗೆ ಹೊಸರುಚಿ

    ಗುಜ್ಜೆಯಾ ಬಿರಿಯಾನಿ ತಿ೦ಬಲೆ ಕೊದಿ ಹಿಡುದ್ದಿ೦ದು

    1. ಆದಿಪ್ರಾಸ ತಪ್ಪಿದ್ದು
      “ದಿನಕ್ಕೆ” – > ಜಗಣ , ಅಥವಾ ‘ಲಗಂ’ ಬಯಿಂದು.
      ಮುರನೆ ಸಾಲಿಲಿ ಒಂದು ಮಾತ್ರೆ ಹೆಚ್ಚಿಗೆ ಅಯಿದು.
      ನಾಕನೆ ಸಾಲಿಲಿ, ವಜಾ। ಮಾಡಿಂ।ದು ಹೆ।ಜ್ಜೆಯೂಟ -> ಇಲ್ಲಿ ಮೂರು ದಿಕ್ಕೆ ‘ಲಗಂ’ ಬಂತು.
      ಇಷ್ಟೆಲ್ಲ ಬರದಪ್ಪಗೆ ಇನ್ನು “ಟೀಕೆ” ಮಾಡುದು ಹೇಳಿ ತಿಳ್ಕೊಳ್ಳೆಡಿ ಅಕ್ಕ.

      1. ನಿಂಗ ಎಲ್ಲಿ ತಪ್ಪಿದ್ದುಳಿ ಸ್ಪಷ್ಟವಾಗಿ ಹೇಳುವ ಕಾರಣ ಎಂಗೊಗೆ ಕಲಿವಲೆ ಅವಕಾಶ ಆವ್ತು.ಹಾಂಗಾಗಿ ತಿದ್ದಿದರೆ ತೊಂದರೆ ಇಲ್ಲೆ.

        ಧನ್ಯವಾದ.ಈಗ ಸರಿ ಆಯ್ದ ನೋಡಿ ಮಾವ.

        ರಜೆಯ ದಿನಕದು ಬಂದವ ರಜತ

        ಸಜೆಯ ಶಾಲೆಯ ಮರವ ಖಂಡಿತ

        ಮಜವ ಮಾಡುವ ಗುರಿಲಿ ಪಿಜ್ಜಿ ಬಳಿಯುಸುರಿದ ಪೋರ

        ವಜಾ ಮಾಡಾ ಸಾರನ್ನವಾ

        ಬಜೆಯು ಬೇಕೆನ ಜತೆಗೆ ಹೊಸರುಚಿ

        ಗುಜ್ಜೆಯಾ ಬಿರಿಯಾನಿ ತಿ೦ಬಲೆ ಕೊದಿ ಹಿಡುದ್ದಿ೦ದು

        1. ಆದಿಪ್ರಾಸ ಗು’ಜ್ಜೆ’ ಆದ ಕಾರಣ ಪ್ರತಿಸಾಲಿನ ದ್ವಿತೀಯಾಕ್ಷರ ”ಜ್ಜ” ಆಗಿರೇಕು.ತೊ೦ದರೆ ಇಲ್ಲೆ.ನಿ೦ಗೊ ಬರದ್ದರ್ಲಿ,

          ರಜೆಯ ಕಳವಲೆ ಬ೦ದ ರಜತನು

          ಸಜೆಯ ಶಾಲೆಯ ಮರಗು ಖಂಡಿತ

          ಮಜವ ಮಾಡುವ ಗುರಿಲಿ ಪಿಜ್ಜಿಯ ಮ೦ಕಡಿಸುಲೆ ಹೆರಟ°

          ವಜವ ಮಾಡಾ ಸಾರು ಹೆಜ್ಜೆಯ

          ಬಜೆಯು ಬೇಕೆನ ಜತಗೆ ಹೊಸರುಚಿ

          ಗುಜ್ಜೆಯಾ ಬಿರಿಯಾನಿ ತಿ೦ಬಲೆ ಕೊದಿ ಹಿಡುದ್ದಿ೦ದು

          ಹೇಳಿ ಸಣ್ಣಕೆ ಬದಲ್ಸಿರೆ ಅಕ್ಕು.

          1. ಒಹ್ .’ಜ್ಜೆ’,’ಜೆ’,’ಜ’ ಎಲ್ಲಾ ಪ್ರಾಸಕ್ಕೆ ಸರಿಯಾದ್ದಾಳಿ ಗ್ರೇಸಿದೆ.(ಸಮೀಪ ಪ್ರಾಸ?).

            ಪದ್ಯ ಸರಿ ಮಾಡಿದ್ದಕ್ಕೆ ಧನ್ಯವಾದ.

  7. ಪಿಜ್ಜ ತಿಂದರೆ “ಓಂತಿ” ಎನಗದ
    ಸಜ್ಜಿಗೆಯ ಮಡೆ ಬೊಡುದು ಹೋಯಿದು
    ರಜ್ಜ ಮಜ್ಜಿಗೆ ಕುಡುದು ನೋಡಿರೆ ಬಂತು ಹುಳಿತೇಗೂ ॥

    ಹಜ್ಜು ಯಾತ್ರೆಲಿ ನೋಂಬಿನೆಡೆಲಿ
    ಬೊಜ್ಜು ಮಮ್ಮದೆ ತಿಂಬ ರೀತಿಲಿ
    ಗುಜ್ಜೆಯಾ ಬಿರಿಯಾಣಿ ತಿಂಬಲೆ ಕೊದಿ ಹಿಡುದ್ದಿಂದು ॥

    ಹೊಸ ಪ್ರಾಸಕ್ಕೆ ಪ್ರಯಾಸ ಪಟ್ಟು ಹಜ್ಜು ಯಾತ್ರೆಯ ತೆಕ್ಕೊಂಡೆ, ಬೇರೆ ಏವ ಕಾರಣಕ್ಕುದೆ ಅಲ್ಲ.
    ನಮ್ಮದು, ಗುಜ್ಜೆ ಬಿರಿಯಾಣಿ, ವೆಜ್ ಬಿರಿಯಾಣಿ.

    1. {ಹಜ್ಜು ಯಾತ್ರೆಲಿ ನೋಂಬಿನೆಡೆಲಿ
      ಬೊಜ್ಜು ಮಮ್ಮದೆ ತಿಂಬ ರೀತಿಲಿ} – > ಪಷ್ಟಾಯಿದು ಭಾವ.

    2. ಬೊಳು೦ಬು ಮಾವಾ,ರೈಸಿದ್ದು.
      ಹಜ್ಜು/ ಯಾತ್ರೆಲಿ/ ನೋಂಬಿ/ನೆಡೆಲಿ -ಒ೦ದು ಮಾತ್ರೆ ಕಮ್ಮಿ ಇದ್ದು.
      “ನೋ೦ಬಿನೆಡಕಿಲಿ” ಹೇಳಿ ಮಾಡಿರೆ ಆತು.

      1. ಹಾಂ, ಈಗ ಸರಿಯಾತು. ಓದಲೆ ಸರೀ ಆವ್ತು. ನಿಂಗಳ, ಟಿಕೆ ಮಾವನ ವಿಮರ್ಶೆಲಿ ತುಂಬಾ ಕಲಿಯಲೆ ಸಿಕ್ಕುತ್ತು. ಬೈಲಿಲ್ಲಿ ಪದ್ಯ ಪೂರಣ ರೈಸುತ್ತಾ ಇಪ್ಪದು ತುಂಬಾ ಸಂತೋಷದ ವಿಶಯ. ಒಂದು ಸಂಶಯ ಭಾವಯ್ಯ. “ನೋಂಬು” ಹೇಳ್ತ ಪದಲ್ಲಿ ನಾಕು ಮಾತ್ರೆ ಆವ್ತಾ, ಅಲ್ಲ ಮೂರು ಮಾಂತ್ರವೊ ?
        ನೋಂಬಿನೆಡೆಲೀ ಹೇಳಿ ದೀರ್ಘ ಎಳದರೂ ಸರಿ ಮಾಡ್ಳೆ ಆವ್ತೊ ?

        1. ಮಾವಾ,
          ನೋ೦ಬು – ಮೂರು ಮಾತ್ರೆ.ನೋಂಬಿ/ನೆಡೆಲೀ – ಸರಿ ಆವುತ್ತು.

  8. ಅಜ್ಜಕಾನ ಭಾವ° ಬೋಸ ಬಾವನ ಬಿಟ್ಟಿಕ್ಕಿ ಶ್ರೀ ಅಕ್ಕನಲ್ಲಿಗೆ ಗುಜ್ಜೆ ತಿಂಬಲೆ ಹೋದ ಕತೆ ಎಂತಾಯ್ದು ಗೊಂತಿದ್ದಾ.. –

    ಅಜ್ಜಕಾನದ ಭಾವ° ಒಂದಿನ
    ಗುಜ್ಜೆ ಪೋಡಿಯ ತಿಂಬಲೇಳಿಯೆ
    ರಜ್ಜಹೊತ್ತಿಲಿ ಅಕ್ಕನಲ್ಲಿಗೆ ಹಾಜರಾದನಡಾ ।

    ಹೆಜ್ಜೆಯೂಟವೆ ಅವಕೆ ಇಂದುದೆ
    ಮಜ್ಜಿಗುಂಡಿಕಿ ಹೇಳಿದನಾಗಲೆ
    ಗುಜ್ಜೆಯಾ ಬಿರಿಯಾನಿ ತಿ೦ಬಲೆ ಕೊದಿ ಹಿಡುದ್ದಿ೦ದು ॥

    1. {ಮಜ್ಜಿಗುಂಡಿಕಿ ಹೇಳಿದನಾಗಲೆ} -> ಮಾತ್ರೆ ಒಂಡು ಹೆಚ್ಚಿಗೆ ಬಯಿಂದನ್ನೆ, ಭಾವ.
      “ಮಜ್ಜಿಗೆಯನುರ್ಪಿಕ್ಕಿ ಹೇಳಿದ” – ಹೇಳಿ ಬರದರೆ ಸರಿಯಕ್ಕು.

      1. ಹೋ! ಅಪ್ಪಲ್ಲದ!! ಈಗ ಅಂದಾಜಾತಷ್ಟೆ 🙁

  9. ಅಜ್ಜನ ಮನೆಲಿ ಬೇಸಗೆ ರಜೆಲಿ
    ಅಜ್ಜಿ ಮಾಡುವ ಗುಜ್ಜೆ ಬೆಂದಿಯು
    ಹೆಜ್ಜೆಯೂಟಕೆ ಕಾಟುಮಾವಿನ ಗೊಜ್ಜಿ ರುಚಿಯಕ್ಕೂ ।
    ಅಜ್ಜಿ ಮಾಡುವ ಬೆಶಿಬೆಶಿಯ ಜೀ-
    ಗುಜ್ಜೆ ಪೋಡಿಯನತ್ತೆ ಮಾಡುವ
    ಗುಜ್ಜೆಯಾ ಬಿರಿಯಾನಿ ತಿಂಬಲೆ ಕೊದಿ ಹಿಡುದ್ದಿಂದೂ ॥

    1. ಅತ್ತೆ,
      ಅಜ್ಜ/ನ ಮನೆಲಿ/ ಬೇಸ/ಗೆ ರಜೆಲಿ
      ಇದು ಓದೊಕ ಡ೦ಕುತ್ತು,ಯತಿ ಸಮಸ್ಯೆ.
      ಅಜ್ಜನಾ ಮನೆ ಬೇಸಗೆಯ ರಜೆ/ಲಜ್ಜಿ ಮಾಡುವ
      ಹೇಳಿರೆ ಸರಿಯಕ್ಕು.

      1. ಡಂಕುತ್ತು ಹೇಳಿ ಆತು, ಆದರೆ ಹೇಂಗೆ ಬದಲುಸೆಕ್ಕು ಹೇಳಿ ಗೊಂತಾಯಿದಿಲ್ಲೆ

  10. ಹೆಜ್ಜೆ, ಹಪ್ಪಳ, ಹೊರುದ ಸೆ೦ಡಗೆ,
    ಗುಜ್ಜೆ ತಾಳುದೆಯಪ್ಪೆ ಮೆಡಿಯುದೆ,
    ಮಜ್ಜಿಗೆಯನೀರಿ೦ದು ಕೂದ೦ಡು೦ಬಲಿದ್ದರುದೆ
    ಅಜ್ಜಿ ಬಳುಸಿದ ಹವಿಕರಡಿಗೆಲಿ-
    ಯಚ್ಚ ಹವಿಕನ ಹೊಟ್ಟೆ ತು೦ಬಿರು
    ಗುಜ್ಜೆಯಾ ಬಿರಿಯಾನಿ ತಿ೦ಬಲೆ ಕೊದಿ ಹಿಡುದ್ದಿ೦ದು.

    1. ಪೆರ್ವದಣ್ಣ, ಅಡಿಗೆ ಒಳ್ಳೆ ರೈಸುತ್ತಾ ಇದ್ದು.

    2. ಪೆರ್ವದಣ್ಣಾ,ಲಾಯ್ಕ ಆಯಿದು.
      “ಹವಿಕರಡಿಗೆಲಿ-ಯಚ್ಚ”
      ಇಲ್ಲಿ ಆದಿಪ್ರಾಸ ತಪ್ಪಿದ್ದು.
      ಹವಿಕರಡಿಗೆಲಿ/ರಜ್ಜ ಜಾಗೆಯು ಬಾಕಿ ಹೊಟ್ಟೆಲಿ
      ಹೇಳಿ ಏನಾರು ಬದಲ್ಸಿರೆ ಅರ್ಥ ಅದೇ ಒಳಿಗೋ ಏನೋ.

      1. ಧನ್ಯವಾದ೦ಗೊ ಮುಳಿಯ ಭಾವಾ..
        ಚ- ವುದೆ ಜ- ವುದೆ ಪರಸ್ಪರ ಪ್ರಾಸಕ್ಕೆ ಹೊ೦ದುಗು ಹೇಳ್ತ ಒ೦ದು ತಪ್ಪುತಿಳುವಳಿಕೆ೦ದಾಗಿ ಹಾ೦ಗಾದ್ದದು, ಇನ್ನು ನೆ೦ಪು ಮಡುಗ್ಯೋಳುತ್ತೆ, ಧನ್ಯವಾದ೦ಗೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×