Oppanna.com

ಸಮಸ್ಯೆ 39: "ತೋಟಕೆ ಹೋಗೋ° ಹೇಳಿರೆ ಮಾಣೀ ನಸುಪಿಸುರಿಲಿ ನೆಡದನೊ ಬುಡುಬುಡುನೇ"

ಬರದೋರು :   ಸಂಪಾದಕ°    on   20/07/2013    22 ಒಪ್ಪಂಗೊ

ಈ ವಾರ ಅಕ್ಷರವೃತ್ತಲ್ಲಿ “ಕ್ರೌ೦ಚಪದ” ಹೇಳುವ ಛ೦ದಸ್ಸಿನ ಪರಿಚಯ ಮಾಡಿಗೊ೦ಬ°.
 
ಪ್ರತಿಸಾಲಿಲಿ 25 ಅಕ್ಷರ೦ಗೊ ಬಪ್ಪ ಈ ಛ೦ದಸ್ಸಿನ ಲಕ್ಷಣ ಹೀ೦ಗಿದ್ದು ಃ
– ೧ ೧/ – – – /೧೧ -/ – ೧೧/೧೧೧/೧೧೧/೧೧೧/೧೧೧/-
ನಾನನ/ನಾನಾ/ನಾ ನನನಾನಾ/ನನನನ/ನನನನ/ನನನನ/ನನನಾ
ಕನ್ನಡಪ೦ಡಿತರು ” ನಾಕಿವೆ ಪಾದ೦ ಕ್ರೌ೦ಚಪದಕ್ಕ೦ ಪುಟಪುಟ ನೆಗೆಯುವ ಲಘುಗಳ ಮರೆತ೦” ಹೇಳಿ ಕಲುಶುಗು.
ಸಮಸ್ಯೆ ಹೀ೦ಗಿದ್ದು ಃ

‘ ತೋಟಕೆ ಹೋಗೋ° ಹೇಳಿರೆ ಮಾಣೀ ನಸುಪಿಸುರಿಲಿ  ನೆಡದನೊ ಬುಡುಬುಡುನೇ”

22 thoughts on “ಸಮಸ್ಯೆ 39: "ತೋಟಕೆ ಹೋಗೋ° ಹೇಳಿರೆ ಮಾಣೀ ನಸುಪಿಸುರಿಲಿ ನೆಡದನೊ ಬುಡುಬುಡುನೇ"

  1. ತೋಟಕೆ ಹೋಗೋ ಹೇಳಿರೆ ಮಾಣೀ ನಸುಪಿಸುರಿಲಿ ನೆಡದನೊ ಬುಡುಬುಡುನೇ
    ಊಟಕೆ ಬಾರೋ ಹೇಳಿರೆ ಮಾಣೀ ಬೆಶಿತೆಳಿಯಶನ ಸುರುದ ಸೊರಸೊರನೇ
    ಪಾಟವ ಓದೋ ಹೇಳಿರೆ ಮಾಣೀ ಪುಟ ತಿರುಗುಸಿ ಮಡುಸಿದ ಸರಸರನೇ
    ಆಟವನಾಡೀ ಬಚ್ಚಿರೆ ಮಾಣೀ ಹಸೆಬಿಡುಸಿ ಚುರುಟಿದನೊ ಬರಬರನೇ
    —————————————-
    ಗಟ್ಟಿಗ ನೀನೇ ಹೇಳಿರೆ ಮಾಣೀ ಮುಸಿಮುಸಿ ನೆಗೆಬರುಸಿ ನೆಡದನವನೇ
    ಈಟಿಯ ಸುತ್ತೋ ಹೇಳಿರೆ ಮಾಣೀ ಹೊಸಹುರುಪಿಲಿ ಸುರುಟಿದ ಸರಸರನೇ
    ಆಟಿಯ ತಿಂಡೀ ಪತ್ರೊಡೆ ಮತ್ತೇ ಕಣಿಲೆಗಸಿ ಹೊಡದನವ ಗಬಗಬನೇ
    ತೋಟಕೆ ಹೋಗೋ ಹೇಳಿರೆ ಮಾಣೀ ನಸುಪಿಸುರಿಲಿ ನೆಡದನೊ ಬುಡುಬುಡುನೇ

    1. ಅಕೇರಿಲಿ ಎಲ್ಲಾ ಕಡೆ ಅನುಕರಣವಾಚಿಗಳ ಹಾಕಿ ಪದ್ಯಗ ಭಾರೀ ಲಾಯ್ಕಾಯ್ದು.

  2. ಆಟಕೆ ಊಟಕ್ಕೋಡುವ ಮಾಣೀ ಕುಶಿಲಿಯೆ ಕೆಲಸಕು ನಡೆ ಬಿರಬಿರನೇ
    ನೀಟಕೆ ಅಡ್ಡಕ್ಕಾಗಿಯೆ ನೆಟ್ಟೆಲ್ಲಗೆಡುಗೊ ಬೆಳದವು ಹಸುರೆಲೆ ಕೊಣುಸೀ
    ಕೀಟಗೊ ಮಾಡಿದ್ದೊಟ್ಟೆಯ ಕಂಡೆಲ್ಲೆಲೆಗಳ ಕೊಡುಮಗ ಗಮನವ ರಜ ಹೂ
    ತೋಟಕೆ ಹೋಗೋ°ಹೇಳಿರೆ ಮಾಣೀ ನಸುಪಿಸುರಿಲಿ ನೆಡದನೊ ಬುಡುಬುಡುನೇ

  3. ಚಿಟ್ಟೆಯ ಮೇಲೇಕಾಲಿಳಿಬಿಟ್ಟೇ ಮಳೆಹನಿಗಳ ರಭಸವ ನಿರುಕಿಸುತಾ
    ವೀಟಿಕೆ ಮೆಲ್ಲುತ್ತಾ ಕಡುಕಾರ್ತಿಂಗಳ ಸೊಬಗಿನ ಕವನವ ಬರವಗಳೇ
    ತಟ್ಟನೆ ನೆಂಪಾಗ್ಯಜ್ಜನು ಪುಳ್ಯಕ್ಕಳ ದಿನಿಗೆಳಿಯೆ ಅಡಕೆಯ ಹೆರುಕುಲೆ
    ತೋಟಕೆ ಹೋಗೋ° ಹೇಳಿರೆ ಮಾಣೀ ನಸುಪಿಸುರಿಲಿ ನೆಡದನೊ ಬುಡುಬುಡುನೇ ॥
    ವೀಟಿಕೆ = ತಾಂಬೂಲ

    1. ಎಂಗ ಇಲ್ಲಿ ಕಷ್ಟ ಪಟ್ಟು ಕವನ ಬರವಗ ನಡುವಿಲಿ ಎಂತಾರು ಕೆಲಸ ಹೇಳಿರೆ ಪಿಸುರು ಬಾರದ್ದಿಕ್ಕೋ ಮತ್ತೆ, ಅಲ್ದಾ ಅತ್ತೆ ? 🙂

      1. ಇ೦ದಿರತ್ತೆ,ಅದಿತಿ ಅಕ್ಕ,ಭಾಗ್ಯಕ್ಕ ಎಲ್ಲಾ ಬರವದು ಕಾ೦ಬಗ ಕವನ ಬರವದು ಎಷ್ಟು ಎಳ್ಪ ಹೇಳಿ ಕಾಣುತ್ತಾ ಇದ್ದು !

  4. ‘ಗೂಟಕೆ ಕಟ್ಟಾ ಕ೦ಜಿಯ’ ಕೊ೦ಡಾಟದ ನುಡಿಗಿವ° ಕೆಮಿ ಕೊಡ° ಸರಿ ಬಿಡಿ ಹು
    ಗ್ಗಾಟಕೆ ಬೇಗೋಡುತ್ತದು ನೋಡೀ ಕೆಸೆಕೆಸೆ ಕಿಸಿಯುವ ಹುಡುಗರ ಪಡೆಲೀ
    ತೋಟಕೆ ಹೋಗೋ° ಹೇಳಿರೆ ಮಾಣೀ ನಸುಪಿಸುರಿಲಿ ನೆಡದನೊ ಬುಡುಬುಡುನೇ
    ಊಟಕೆ ಬಾರೋ° ಹೇಳಿರೆ ಮಾ೦ತ್ರಾ ಬೆಳಿನೆಗೆಲಿಯೆ ಹೆರಡುಗು ಚೆಲ ಕತೆಯೇ ॥

  5. ಓದುಲೆ ಸರಾಗ ಅಪ್ಪಲೆ ೧ ಗೆರೆಯ ೨ಹಂತಿಲಿ ಬರದ್ದೆ….
    ಶೀಟಿನ ಮಾಡೂ ಕಾವದೆ ಅಪ್ಪ಼ಾ಼
    ರಜೆಮಗನೊಡ ನುಡಿದವು ಅಸಬಡುದೇ
    ಮೂಟೆಯೆ ಅಕ್ಕೋ ತೆಂಗಿನ ಕಾಯೀ
    ಬಿರುಮಳೆ ಪವನದ ಕೃಪೆಲವು ಉರುಳೀ
    ನೋಟಿನ ಪೈಸೇ ಸುಮ್ಮನೆ ಬಕ್ಕೋ
    ಕೊಳೆಯಡಕುರುವೆಯ ತರೆಕದ ಬಿಡದೇ
    ತೋಟಕೆ ಹೋಗೋ ಹೇಳಿರೆ ಮಾಣೀ
    ನಸುಪಿಸುರಿಲೆ ನಡದನೊ ಬುಡುಬುಡುನೇ ।
    ತೋಟಕೆ ಹೋಗೋ ಹೇಳಿರೆ ಮಾಣೀ
    ನಸುಪಿಸುರಿಲೆ ನಡದನೊ ಬುಡುಬುಡುನೇ
    ಊಟದ ಹೊತ್ತೂ ಕೋಪಲಿ ತಿಂದಾ
    ಹಲಸಿನ ತುಳುವನ ಸೊಳೆಮರದಡಿಲೇ
    ಕಾಟಿನ ಬಲ್ಲೇ ತುಂಬಿದ ಅಲ್ಲೀ
    ನುಸಿತೊರುಸಿಯೆ ಬಸವಳಿದಿಕಿ ಬೊಡುದೇ
    ಗೀಟಿನ ದಾರಿ ಮಾಸುದ ನೋಡೀ
    ಮರಳಿದ ಮನೆಗೆ ಹೆದರಿದುಸಿರಿಲಿಯೇ ॥

  6. ಕಾಟವು ಅಜ್ಜಂಗೀ ಮಳೆಯೂ ದಂ ನೆಗಡಿಲಿ ನಡುಕವ ತಡವಲೆ ಎಡಿಯಾ
    ಕೋಟಿನ ಮೇಲಾ ಕಂಬಳಿ ಹೊದ್ದೂ ಮನುಗಿರು ಗಡಗಡ ಚಳಿಬಿಡ ಮಗನೇ
    ಆಟವ ಬಿಟ್ಟಿಕ್ಕೊಂದರಿ ಪುಟ್ಟಾ ಕೊಡುಗವು ಕುಡಿವಲೆ ರಸವೊ ಹೊಡಿಯೊ ದೈ-
    ತೋಟಕೆ ಹೋಗೋ ಹೇಳಿರೆ ಮಾಣೀ ನಸುಪಿಸುರಿಲಿ ನೆಡದನೊ ಬುಡುಬುಡುನೇ

    1. ಅದಿತಿ, ದೈತೋಟಕ್ಕೆ ಹೋದ್ದದು ಭಾರೀ…. ಲಾಯ್ಕಾಯ್ದು.

    2. ಅಕ್ಕ.ಮಾತ್ರೆಗೊ ಸರಿ ಇದ್ದು. ಸುರುವಾಣ ಅರ್ಧ,ಮತ್ತಾಣ ಅರ್ಧದ ನೆಡುಕೆ ಸ೦ಬ೦ಧ ಕ೦ಡತ್ತಿಲ್ಲೆ,ಅಷ್ಟೆ.

      1. ಅಜ್ಜಂಗೆ ನೆಗಡಿ ಜೋರಾಯ್ದಡ. ಅದಕ್ಕೆ ಆಡಿಕೊಂಡಿದ್ದ ಮಾಣಿಯ ಹತ್ತರೆ “ಆಟ ಬಿಟ್ಟು ಒಂದರಿ ದೈತೋಟಕ್ಕೆ ಹೋಗಿ ಮದ್ದು ತಾ” ಹೇಳಿದ್ದು.
        ಆಟ ಅರ್ಧಲ್ಲಿ ಬಿಟ್ಟು ಹೋಗು ಹೇಳಿದ್ದಕ್ಕೆ ಮಾಣಿಗೆ ರಜ್ಜ ಪಿಸುರು ಬಂತಡ.

        1. ಹೋ..ಸರಿ ಸರಿ.ಹಾ೦ಗಾರೆ ಫಷ್ಟಾಯಿದು.

  7. ಆಟವ ಆಡೆಕ್ಕೇಳಿಯೆ ಜಾಲಿಂಗಿಳಿವಗಳೆ ಜನಕನು ಹಿಡುದು ಮಡುಗೀ
    ಸ್ಲೇಟಿನ ಕೊಟ್ಟೂ ಕೂರಿಸಿಯೇ ಕೋಪಿಯ ಬರೆಶುಲೆ ಭರದಲಿ ಹೆರಡುಗದಾ
    ಪಾಠವ ಓದುತ್ತಿಲ್ಲೆಯೊ ನೀನೂ ಹೆರಡು ಕೆಲಸಕೆ ಹುಡುಗರ ಜತೆಲಿಯೇ
    ತೋಟಕೆ ಹೋಗೋ°ಹೇಳಿರೆ ಮಾಣೀ ನಸುಪಿಸುರಿಲಿ ನೆಡದನೊ ಬುಡುಬುಡುನೇ ॥

    1. ಲಾಯ್ಕ ಆಯಿದು ಅತ್ತೆ. ಓದದ್ದರೆ ಗೊಬ್ಬರ ಹೊರೆಕ್ಕಟ್ಟೆ !

  8. ಯಾವಗಳು ಕಂಪ್ಯೂಟರ್ಲಿ ಗುರುಟುವ ಮಾಣಿಯತ್ತರೆ ಅಪ್ಪ, ಮಳೆಗಾಲಲ್ಲಿ ತೋಟದ ಕರೆ – ಬರಿ ಒ೦ದರಿ ನೋಡಿಗೊಂಡು ಬಾ ಹೇಳಿರೆ ಅವ ಈ ರೀತಿ ಹೇಳುಗೊ ಹೇಳುವ ಕಲ್ಪನೆ
    ಆಟಿಯ ಮಾಸಲ್ಹೋಪದು ಹೇಂಗೇ? ಹನಿ ಕಡಿಯದ ಜಡಿಮಳೆ ತಟಪಟನೇ
    ಹುಟ್ಟಿದ ಹುಲ್ಲೂ ನಾಚಿಕೆ ಮುಳ್ಳೇ ಕೊಡಿವರೆಗೆನಗೆ ನೆಡವಲೆಯೆಡಿಯ ಕಂ
    ಪ್ಯೂಟರಿನಾ ಕಾಲಿಂದಿಳಿಶುತ್ತಲ್ಲೆ ; ಹುಡುಕಿದ ಕೊಡೆಯ ಜೆಗಿಲಿಯ ಕೊಡಿಲೇ
    ತೋಟಕೆ ಹೋಗೋ ಹೇಳಿರೆ ಮಾಣೀ ನಸುಪಿಸುರಿಲೆ ನಡದನೊ ಬುಡುಬುಡುನೇ
    ಕಂಪ್ಯೂಟರ್ = ಲ್ಯಾಪ್ ಟಾಪ್, ಕಾಲಿಂದ ಅಲ್ಲೆ ಕೆಳ ಮಡುಗಿ .

    1. ಹನಿಕಡಿಯದ್ದ ಮಳೆಗಾಲಲ್ಲಿ ತೋಟಲ್ಲಿ ಹುಟ್ಟುವ ಹುಲ್ಲು, ನಾಚಿಕೆಮುಳ್ಲಿನ ಸಮೃದ್ಧಿ ಮತ್ತೊಂದರಿ ಕಣ್ಣಿಂಗೆ ಕಟ್ಟಿದ ಹಾಂಗಾತು- ಭಾಗ್ಯಕ್ಕ, ಕವನ ಲಾಯ್ಕಾಯಿದು.

    2. ಲಾಯ್ಕ ಆಯಿದು ಅಕ್ಕ.ಎರಡ್ನೆ ಸಾಲು ರಜಾ ಡ೦ಕಿದರೂ ಮಾತ್ರೆಗೊ ಸರಿ ಇದ್ದು.

      1. ಅಣ್ಣಾ,
        ಒತ್ತಕ್ಶರ ಇಪ್ಪ ಕಾರಣವೋ? ಗುರುತಿಸಿ ಕೊಟ್ಟರೆ ಒೞೆದಿತ್ತು.

        1. ಹುಟ್ಟಿದ ಹುಲ್ಲೂ ನಾಚಿಕೆ ಮುಳ್ಳೇ ಕೊಡಿವರೆ/ಗೆನಗೆ ನೆ/ಡವಲೆ ಯೆ/ಡಿಯ ಕಂ
          ಇದರ
          ಹುಟ್ಟಿದ ಹುಲ್ಲೂ ನಾಚಿಕೆ ಮುಳ್ಳೇ/ಕೊಡಿವರೆ/ಗೆನಗದು /ನೆಡವಲೆ/ಬಿಡ ಕ೦
          ಹೇಳಿ ಬದಲ್ಸಿರೆ ಸರಾಗವಾಗಿ ಓದುಲೆ ಸುಲಭ. ಶಬ್ದ೦ಗಳ ಗಣ ವ್ಯತ್ಯಾಸ ಆದ್ದದರ ಗಮನಿಸಿ.

    3. ಅಕ್ಕಾ,ಹಾ೦ಗೆಯೇ,
      ಪ್ಯೂಟರಿನಾ ಕಾಲಿಂದಿಳಿಶುತ್ತಲ್ಲೆ ; ಹುಡುಕಿದ ಕೊಡೆಯ ಜೆಗಿಲಿಯ ಕೊಡಿಲೇ
      ಇದರ
      ಪ್ಯೂಟರಿನಾ ಕಾಲಿಂದಿಳಿಶುತ್ತಾ ಹುಡುಕಿದ ಹಳೆಕೊಡೆ ಜೆಗಿಲಿಯ ಕೊಡಿಲೇ
      ಹೇಳಿರೆ ಸರಾಗ ಆವುತ್ತು. ( ಹಳೆಕೊಡೆಯೋ ಹೊಸಕೊಡೆಯೋ ಯೇವದೋ ಒ೦ದು)

      1. ಗಣ ವ್ಯತ್ಯಾಸ ಆದ್ದದು ಗೊ೦ತಾತು. ಧನ್ಯವಾದನ೦ಗೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×