ಸಮಸ್ಯಾ ಪೂರಣ – 02: “ನಾಕು ಲಾಡು ಬಳುಸಿ ಎನ್ನ ಮೋರೆ ನೋಡಿದಾ”

July 12, 2012 ರ 9:00 amಗೆ ನಮ್ಮ ಬರದ್ದು, ಇದುವರೆಗೆ 53 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕಳುದವಾರ ಗುರುವಂದನೆ ಒಟ್ಟಿಂಗೆ ಸುರುಮಾಡಿದ ಸಮಸ್ಯಾಪೂರಣಕ್ಕೆ ಅಭೂತಪೂರ್ವ ಪ್ರತಿಕ್ರಿಯೆ!
ಎಷ್ಟು ಒಪ್ಪಂಗೊ, ಎಷ್ಟು ಪರಿಹಾರಂಗೊ, ಎಷ್ಟು ಹೊಸ-ಹೊಸ ವಿಶಯಂಗೊ!?
ಕೆಕ್ಕಾರು ರಾಮಚಂದ್ರಣ್ಣನ ಹಾಂಗಿಪ್ಪ ಹೆರಿಯೋರಿಂದ ತೊಡಗಿ, ಹೊಸ ಹೊಸ ಪ್ರಯತ್ನದ ಬಾವಯ್ಯಂದ್ರೂ ಒಪ್ಪ ಕೊಡ್ತವು; ಅದೇ ಕೊಶಿ!

ಇದಾ, ಈ ವಾರ ಇನ್ನೊಂದು ಸಮಸ್ಯೆ.

“ನಾಕು ಲಾಡು ಬಳುಸಿ ಎನ್ನ ಮೋರೆ ನೋಡಿದಾ°”

ರಜ ತಿಳಿಹಾಸ್ಯ, ಕುಶಾಲು, ತಮಾಶೆ, ಜೆಂಬ್ರದ ಸನ್ನಿವೇಶವ ತೆಕ್ಕೊಂಬಲಕ್ಕು.

ಭೋಗ ಷಟ್ಪದಿ : ಲಕ್ಷಣಂಗೊ

~

ಸೂ:

 • ಈ ಸಮಸ್ಯೆ ಭೋಗಷಟ್ಪದಿಲಿ ಇದ್ದು.
 • ಭೋಗಷಟ್ಪದಿಗೆ ಉದಾಹರಣೆ:
  ತಿರುಕನೋರ್ವನೂರ ಮುಂದೆ
  ಮುರುಕು ಧರ್ಮ ಶಾಲೆಯಲ್ಲಿ
  ಒರಗಿರುತ್ತಲೊಂದು ಕನಸ ಕಂಡನಂತೆನೆ ||
 • ಆದಿಪ್ರಾಸಕ್ಕೆ ಸಲಹೆಗೊ:
  ಸುರುವಾಣದ್ದು ಗುರು,
  ಎರಡ್ಣೇದು “ಕ”ಕಾರ.
  ಬೇಕು, ನಾಕು, ಸಾಕು, ನೂಕು, ಪಾಕ, ಶಾಕ, ಲೋಕ, ಕೇಕೆ ಇತ್ಯಾದಿ.
 • ಹೆಚ್ಚಿನ ವಿವರಂಗೊ: http://padyapaana.com

ಈ ಶುದ್ದಿಗೆ ಇದುವರೆಗೆ 53 ಒಪ್ಪಂಗೊ

 1. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಅಪ್ಪಚ್ಚಿಯ ಸಣ್ಣ ಪ್ರಯತ್ನಲ್ಲಿ ದೊಡ್ಡ ತಪ್ಪೇನೂ ಇಲ್ಲೆ. ಲಾಯಿಕಿದ್ದು.

  [Reply]

  VN:F [1.9.22_1171]
  Rating: 0 (from 0 votes)
 2. ಶ್ರೀಶಣ್ಣ
  ಶ್ರೀಶಣ್ಣ

  ನಾಕು ನಾಕು ಜೆಂಬ್ರದೂಟ
  ಪೋಕು ಮುಟ್ಟಿ ಹೋದರಂತು
  ಪಾಕ ಶಾಲೆ ಒಳದಿಕಿದ್ದ ಬೋಸ ಭಾವನೂ
  ನೂಕಿ ಜೆನರ ನಡುಕೆ ಬಂದು
  ಚೊಕ್ಕದಾದ ಕೈಲಿ ನಮಿಸಿ
  ನಾಕು ಲಾಡು ಬಳುಸಿ ಎನ್ನ ಮೋರೆ ನೋಡಿದಾ°

  [Reply]

  ತೆಕ್ಕುಂಜ ಕುಮಾರ ಮಾವ°

  ತೆಕ್ಕುಂಜ ಕುಮಾರ ಮಾವ° Reply:

  ಪದ ಲಾಯಿಕಿದ್ದು, ಹಾಡಿ ಬೈಲಿಲಿ ಹಾಕುತ್ತಿರೋ..?

  [Reply]

  VN:F [1.9.22_1171]
  Rating: 0 (from 0 votes)
 3. ಬಾಲಣ್ಣ (ಬಾಲಮಧುರಕಾನನ)
  ಬಾಲಣ್ಣ (ಬಾಲಮಧುರಕಾನನ)

  “ಬೇಕು ಎನಗೆ ಹಸರ ಪಾಚ

  ಏಕೊ ಬಾವ ಬತ್ತೆ ಇಲ್ಲೆ

  ಪೋಕು ಮುಟ್ಟಿ ಹೋತೊ ,ಅಲ್ಲ ಪಾತ್ರ ಕಾಲಿಯೋ?

  ಹಾಕು ಬಾವ ಎರಡು ಕೈಲು,

  ಸಾಕು ಹೇಳಿದವಕು ಬೆಲಕಿ

  ತೋಕಿ ಬಡುಸಿ ಮುಗಿದು ಹೋತು ಎಂತ ಮಾಡುದು?

  ನಾಕು ಮದುವೆ ಮಾಡಿ ಎನಗೆ

  ತೇಕು ಮುಳುಕು ಆತು ಬಾವ

  ಬಾಕಿ ಎಂತು ಇಲ್ಲೆ ಕಿಸೆಲಿ,ಕಾಲಿ ಆಯಿದು

  ಹೋಕೊ ಮಾನ ಸಬೆಲಿ?ದಾರಿ-

  ಹೋಕರಿಂಗು ಬಡುಸಿ ಒಳುದ

  ನಾಕು ಲಾಡು ಬಳುಸಿ ಎನ್ನ ಮೋರೆ ನೋಡಿದಾ

  (ಈಗ ಸರಿ ಆತೊ ಹೇಳಿ ಬಾವ, ತಪ್ಪಾದರೆ ತಿಳುಸಿ)

  [Reply]

  ತೆಕ್ಕುಂಜ ಕುಮಾರ ಮಾವ°

  ತೆಕ್ಕುಂಜ ಕುಮಾರ ಮಾವ° Reply:

  ತುಂಬಾ ತುಂಬಾ ಲಾಯಿಕ್ಕಾತು, ಈಗ.

  [Reply]

  VN:F [1.9.22_1171]
  Rating: 0 (from 0 votes)
 4. ಬಾಲಣ್ಣ (ಬಾಲಮಧುರಕಾನನ)
  ಬಾಲಣ್ಣ (ಬಾಲಮಧುರಕಾನನ)

  ತೆಕ್ಕುಂಜ ಬಾವಾ, ಒಟ್ಟಾರೆ ನಾಕು ಲಾಡು ಇನೂ ಒಳುದ್ಡು ಹೇಳಿ ಕಾಣುತ್ತು .ಅದಿರಲಿ,ಶ್ರಿಶಣ್ಣಾ ಎನ್ನ” ಅಬ್ಬಿ” ಪದ್ಯವ ಚೆಂದಕ್ಕೆ ಹಾಡಿದ್ದ
  ವು ,ಬೈಲಿಂಗೆ ಕಳುಸಲೆ ಎನಗೆ ಗೊಂತಿಲ್ಲೆ. ಶ್ರಿಶಣ್ಣಾ ಕಳುಸುತ್ತಿರೊ ಹೇಂಗೆ ?ಒಪ್ಪಣ್ಣಂಗೊ ಒಪ್ಪಕ್ಕಂಗೊ ಕೇಳಲಿ ಆಗದೊ?

  [Reply]

  VN:F [1.9.22_1171]
  Rating: 0 (from 0 votes)
 5. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಅಕ್ಕನಲ್ಲಿಗಂದು ಹೋದೆ
  ಮಕ್ಕಳನ್ನು ಕೂಡಿಯೊಂಡು
  ಪಕ್ಕದಲ್ಲಿ ಕೂದು ಭಾವ ಏನು ಕೇಳಿದಾ° ।
  ಸಕ್ಕರೆಯಾ ತಿಂಡಿ ಇಷ್ಟ
  ಎಕ್ಕ ಸಕ್ಕ ಎನಗೆ ಭಾವ
  ನಾಕು ಲಾಡು ಬಳುಸಿ ಎನ್ನ ಮೋರೆ ನೋಡಿದಾ° ॥

  ಅಲ್ಲಿಗೇ ಮುಗುದ್ದಿಲ್ಲೆ. ಹತ್ರೆ ಇಪ್ಪ ಹೆಂಡತಿ ಎಂತ ಹೇಳ್ತು ಕೇಳಿ

  ಸಾಕು ಸಾಕು ತಿಂದದಿಂದು
  ಬೇಕು ಮತ್ತೆ ಸೂಜಿ ಮದ್ದು
  ಸಿಕ್ಕಬಟ್ಟೆ ತಿಂಬದೊಂದೆ ಗೊಂತು ನಿಂಗೊಗೆ।
  ಅಕ್ಕರೆಯಾ ಮಾತು ಚೆಂದ
  ಪಕ್ಕಕಿಪ್ಪ ತೋಟ ಚೆಂದ
  ಬಕ್ಕು ಬೇಗ ಮಳೆಯು ಒಂದು ಸುತ್ತು ಬಪ್ಪನಾ ॥

  [Reply]

  VA:F [1.9.22_1171]
  Rating: +3 (from 3 votes)
 6. ಓಯ್ ನಾವು ತಿರುಗಾಟದೊಟ್ಟಿಂಗೆ ಜೆಂಬ್ರಂಗಳನ್ನೂ ಸುದಾರ್ಸಿಯೊಂಡು ಬೈಲಿಂಗಿಳುದಪ್ಪಗ ಲಾಡು ಬಾರೀ ರೈಸುತ್ತಿತ್ತಯ್ಯಾ..
  ನಾವು ಒಂದು ಕೈ ನೋಡುವ ಹೇದು ಮುಳಿಯ ಬಾವಂಗೆ ಪೋನಾಯಿಸಿ ಪಾಠ ಹೇಳ್ಸಿಯೊಂಡು ಬರದತ್ತು..
  ಹೇಂಗೆ ಅಕ್ಕೋ?

  ಬಕ್ಕು ನಮ್ಮ ಬೋಸ ಭಾವ
  ದಿಕ್ಕು ನೋಡಿ ದಿಬ್ಬಣಲ್ಲಿ
  ಚೊಕ್ಕ ಅಂಗಿ ಚೆಡ್ಡಿ ಶಾಲು ಹಾಕಿ ಗತ್ತಿಲಿ
  ಬೊಕ್ಕು ಬಾಯಿ ಕಿಸುದು ರಜ್ಜ
  ಸೊಕ್ಕು ಮಾಡಿ ಹ೦ತಿಯೆಡೆಲಿ
  ನಾಕು ಲಾಡು ಬಳುಸಿ ಎನ್ನ ಮೋರೆ ನೋಡಿದಾ

  [Reply]

  VA:F [1.9.22_1171]
  Rating: +4 (from 4 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಉಡುಪುಮೂಲೆ ಅಪ್ಪಚ್ಚಿಶಾ...ರೀಕಾವಿನಮೂಲೆ ಮಾಣಿದೊಡ್ಡಮಾವ°ಕೆದೂರು ಡಾಕ್ಟ್ರುಬಾವ°ಸುವರ್ಣಿನೀ ಕೊಣಲೆಚುಬ್ಬಣ್ಣಬೊಳುಂಬು ಮಾವ°ವೇಣೂರಣ್ಣಅಡ್ಕತ್ತಿಮಾರುಮಾವ°ವೆಂಕಟ್ ಕೋಟೂರುಪೆಂಗಣ್ಣ°ಕಳಾಯಿ ಗೀತತ್ತೆಅಜ್ಜಕಾನ ಭಾವಚೆನ್ನೈ ಬಾವ°ಸಂಪಾದಕ°ವಿನಯ ಶಂಕರ, ಚೆಕ್ಕೆಮನೆವಿದ್ವಾನಣ್ಣಡಾಗುಟ್ರಕ್ಕ°ಕಜೆವಸಂತ°ವೇಣಿಯಕ್ಕ°ಪಟಿಕಲ್ಲಪ್ಪಚ್ಚಿಶಾಂತತ್ತೆಹಳೆಮನೆ ಅಣ್ಣಗೋಪಾಲಣ್ಣಮಂಗ್ಳೂರ ಮಾಣಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ