ಸಮಸ್ಯೆ -03: “ಹೂಗಿನೊಳ ಕುಸುಮವೇ ಇಪ್ಪ ಹಾಂಗೆ”

July 21, 2012 ರ 8:30 amಗೆ ನಮ್ಮ ಬರದ್ದು, ಇದುವರೆಗೆ 47 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕಳುದ ಎರಡುವಾರದ ಸಮಸ್ಯೆಗೊಕ್ಕೆ ಭರ್ಜರಿಯಾದ ಪ್ರತಿಕ್ರಿಯೆ ಕಂಡು ಬೈಲಿನೋರಿಂಗೆ ತುಂಬಾ ಕೊಶಿ ಆತು.
ದೊಡ್ಡ ಮಕ್ಕೊ ಸಣ್ಣಮಕ್ಕೊಗೆ ಕ್ರಮ ಕಲುಶಿದ ಹಾಂಗೆ ಕೆಲವು ಜೆನ ಪಳಗಿದೋರು ಹೊಸ ಪ್ರಯತ್ನದ ಬೈಲಿನೋರಿಂಗೆ ಕಲಿಶುದು ಕಾಂಬಗ ಸಂತೋಷ ಆವುತ್ತು.
ಇದೀಗ ಮೂರ್ನೇ ವಾರದ ಸಮಸ್ಯೆಯ ಸಮಯ:

ಈ ವಾರದ ಸಮಸ್ಯೆ:

“ಹೂಗಿನೊಳ ಕುಸುಮವೇ ಇಪ್ಪ ಹಾಂಗೆ”

ಎಲ್ಲೋರುದೇ ಪ್ರಯತ್ನಪಡಿ, ಚೆಂದದ ಒಪ್ಪ ಕೊಡಿ.
~

ಕುಸುಮ ಷಟ್ಪದಿ

ಸೂ:

 • ಈ ಸಮಸ್ಯೆ “ಕುಸುಮ” ಷಟ್ಪದಿಲಿ ಇದ್ದು.
 • ಐದು ಐದರ ಎರಡು ಗುಚ್ಛ ಮೊದಲೆರಡು ಸಾಲುಗಳಲ್ಲಿ,
  ಮೂರ್ನೇ ಸಾಲಿಲಿ ಮೂರು ಗುಚ್ಛ, ಕೊನೆಗೊಂದು ಗುರು.
  (ಹೂಗಿನೊಳ | ಕುಸುಮವೇ | ಇಪ್ಪ ಹಾಂ | ಗೆ | )
 • ಆದಿಪ್ರಾಸಕ್ಕೆ ಸಲಹೆ:
  ಪ್ರಥಮಾಕ್ಷರ ಗುರು, ಎರಡ್ಣೇ ಅಕ್ಷರ “ಗ”ಕಾರ.
  ನಾಗ, ಮಾಗು, ಮೂಗು, ಮುಂಗೆ, ಮಂಗ, ಸಾಗು, ಸೀಗೆ, ರಾಗ..
  ತ್ಯಾದಿ
 • ಷಟ್ಪದಿಗಳ ಬಗ್ಗೆ ಇಲ್ಲಿ ಓದಲಕ್ಕು: ಸಂಕೊಲೆ
 • ಹೆಚ್ಚಿನ ಮಾಹಿತಿಗೆ:
  http://padyapaana.com

ಈ ಶುದ್ದಿಗೆ ಇದುವರೆಗೆ 47 ಒಪ್ಪಂಗೊ

 1. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ನಮಸ್ಕಾರ ರಾಮಚಂದ್ರಣ್ಣ,
  ನಿಂಗಳೇ ಹೇಳಿದ ಮತ್ತೆ ವ್ಯಾಕರಣದ ತೊಡಕಿನ ಸರಿ ಮಾಡುವ ಪ್ರಯತ್ನ ಎನ್ನದು –
  ಕಾಗದದೊಳಡಕಾದ – ಇಪ್ಪದರ “ಕಾಗದದೊಳದಿಕಿಪ್ಪ” ಹೇಳಿ ಸರಿ ಮಾಡ್ತೆ.
  ಮತ್ತೆ, ತ್ಯಾಗದೊಳು, ರಾಗದೊಳು ಹೇಳುವ ಕನ್ನಡ ಶಬ್ದಂಗಳ – ತ್ಯಾಗದೊಳ, ರಾಗದೊಳ ಹೇಳಿ ಮಾಡಿದರೆ ಹವ್ಯಕ ಆತು. ಎಂತ ಹೇಳ್ತಿ…?

  [Reply]

  ಕೆಕ್ಕಾರು ರಾಮಚಂದ್ರ

  ಕೆಕ್ಕಾರು ರಾಮಚಂದ್ರ Reply:

  ನಮಸ್ಕಾರ ಕುಮಾರ ಮಾವ. ನಿಂಗಳ ಸವರಣೆ ಸರಿ ಇದ್ದು. ಧನ್ಯವಾದಗಳು

  [Reply]

  VN:F [1.9.22_1171]
  Rating: 0 (from 0 votes)
 2. ಎನ್ ಸುಬ್ರಾಯ ಭಟ್

  ರಾಗಲ್ಲಿ ಹಾಡುತ್ತ
  ಬೇಗಲ್ಲಿ ಓಡುತ್ತ
  ಯೋಗಲ್ಲಿಯೂ ಇದ್ದು ಸಾಮರ್ಥಿಗೆ ।

  ತೂಗಿನೋಡುವಗ ಇವ
  ಸಾಗರದ ಹಾಂಗಿದ್ದ
  ಹೂಗಿನೊಳ ಕುಸುಮವೇ ಇಪ್ಪ ಹಾಂಗೆ ॥

  [Reply]

  ಬೊಳುಂಬು ಮಾವ°

  ಗೋಪಾಲ ಬೊಳುಂಬು Reply:

  ಸುಬ್ರಾಯಣ್ಣ, ನಮ್ಮ ಒಪ್ಪಣ್ಣನ ಬಗ್ಗೆ ಹೇಳ್ತಾ ಇದ್ದಿರೊ ಹೇಂಗೆ ? ಕವನ ಲಾಯಕಾಯಿದು.

  [Reply]

  n subraya bhat Reply:

  appu gopalanna, santosha vandanego

  [Reply]

  VA:F [1.9.22_1171]
  Rating: 0 (from 0 votes)
  ತೆಕ್ಕುಂಜ ಕುಮಾರ ಮಾವ°

  ತೆಕ್ಕುಂಜ ಕುಮಾರ ಮಾವ° Reply:

  ತುಂಬ ಲಾಯಕದ ಪೂರಣ.

  [Reply]

  VN:F [1.9.22_1171]
  Rating: 0 (from 0 votes)
 3. ಬೊಳುಂಬು ಮಾವ°
  ಗೋಪಾಲ ಬೊಳುಂಬು

  ತ್ಯಾಗಲ್ಲಿ ಪ್ರೀತಿಯೂ
  ಯಾಗಲ್ಲಿ ಭಕ್ತಿಯೂ
  ಹೂಗಿನಲಿ ಕುಸುಮವೂ ಇಪ್ಪ ಹಾಂಗೆ ।

  ಹಾಗಲದಿ ಕೈಕ್ಕೆಯೂ
  ಕೋಗಿಲೆಯು ಮೆಡಿಯೊಳಾ
  ಬಾಗದಾ ಜೆತೆಜೆತೆಗೆ ಎಸರಿಪ್ಪದೇ !!
  (ಸಾಗುವಿನ ಪಾಚದಲಿ ಸೀವಿಪ್ಪದೇ )

  ಇನ್ನೊಂದು ಪದ್ಯ ಹೀಂಗೆ ಬರವೋ ಹೇಳಿ ಕಂಡತ್ತು.

  ಬೇಗಿನೊಳ ಪೈಸೆಯೂ
  ಬೇಗಡೆಲಿ ಮಾತ್ರೆಯೂ
  ಹೂಗಿನೊಳ ಕುಸುಮವೂ ಇಪ್ಪ ಹಾಂಗೆ ।

  ಬಂಗುಡೆಲಿ ವಾಸನೆಯು
  ಇಂಗಿಲ್ಲಿ ಪರಿಮಳವು
  ರಂಗು ಹೊಡಿ ಯಲಿ ಅಲ್ಪ ವಿಷವಿಪ್ಪದೇ ॥

  [Reply]

  ಮುಳಿಯ ಭಾವ

  ರಘು ಮುಳಿಯ Reply:

  ಎಲ್ಲಿ೦ದ ಎಲ್ಲಿಗೆ ಎತ್ತಿತ್ತು! ಅದ್ಭುತ ಬೊಳು೦ಬು ಮಾವ.

  [Reply]

  ಬೊಳುಂಬು ಮಾವ°

  ಗೋಪಾಲ ಬೊಳುಂಬು Reply:

  ಎಂತ ಅದ್ಭುತವೋ ?! ಸುಮ್ಮನೆ, ಸಜ್ಜಿಗೆ ಬಜಿಲು ಹೇಳ್ತವಿಲ್ಲೆಯೊ, ಹಾಂಗೆ ಭಾವಯ್ಯಾ !!

  [Reply]

  VA:F [1.9.22_1171]
  Rating: 0 (from 0 votes)
  ತೆಕ್ಕುಂಜ ಕುಮಾರ ಮಾವ°

  ತೆಕ್ಕುಂಜ ಕುಮಾರ ಮಾವ° Reply:

  ರೈಸಿತ್ತಯ್ಯ…ರೈಸಿತ್ತು.

  [Reply]

  VN:F [1.9.22_1171]
  Rating: 0 (from 0 votes)
 4. ಪೆರ್ಲದಣ್ಣ
  ಪೆರ್ಲದಣ್ಣ

  ಈಗ ಸರಿ ಆವ್ತ ನೋಡುವ..

  ’ಈಗ’ ಹೇ-ಳುವ ಸಿನೆಮ
  ಹೋಗಿ ನೋ-ಡಿದೆ ಈಗ
  ಹೇಂಗೆ ಮಾ-ಡಿದವೊ ಆ -ನೆಳವು ಚಿ-ತ್ರ!

  ಡೋಂಗಿ ನೆಳ-ವಡ! ಗೊಂತೆ
  ಆಗ ಅದು – ಕಾಗದದ
  ಹೂಗಿನೊಳ ಕುಸುಮವೇ ಇಪ್ಪ ಹಾಂಗೆ

  [Reply]

  ತೆಕ್ಕುಂಜ ಕುಮಾರ ಮಾವ°

  ತೆಕ್ಕುಂಜ ಕುಮಾರ ಮಾವ° Reply:

  ಸರಿ ಆತು

  [Reply]

  VN:F [1.9.22_1171]
  Rating: 0 (from 0 votes)
 5. ಪೆರ್ಲದಣ್ಣ
  ಪೆರ್ಲದಣ್ಣ

  ತಂಗಾಳಿ ಬೀಸುತ್ತು
  ಆಗಸವು ಕಪ್ಪಾತು
  ಮುಂಗಾರು ಮಳೆ ಜೋರು ಇರಲಿ ಹೀಂಗೆ

  ಬೆಂಗಾಡು ಫಲವತ್ತು
  ಭೂಗೋಳ ಚೆಂದಾತು
  ಹೂಗಿನೊಳ ಕುಸುಮವೇ ಇಪ್ಪ ಹಾಂಗೆ

  [Reply]

  ಮುಳಿಯ ಭಾವ

  ರಘು ಮುಳಿಯ Reply:

  ಪೆರ್ಲದಣ್ಣಾ.ಎರಡೂ ಭರ್ಜರಿ.

  [Reply]

  VA:F [1.9.22_1171]
  Rating: 0 (from 0 votes)
 6. ಮುಳಿಯ ಭಾವ
  ರಘು ಮುಳಿಯ

  ಈ ಸಮಸ್ಯಾಪೂರಣಲ್ಲಿ ಬತ್ತಾ ಇಪ್ಪ ಪ್ರತಿ ಕವಿತೆಯೂ ನಮ್ಮ ಬೈಲಿನ ಬ೦ಧುಗಳ ಕಲ್ಪನಾಶಕ್ತಿಯ ತೋರುಸುತ್ತಾ ಇದ್ದು.ಒ೦ದರಿ೦ದ ಒ೦ದು ಚೆ೦ದ.ಹೀ೦ಗೆಯೇ ಕವಿತಾ ಸುಧೆ ಮು೦ದರಿಯಲಿ ಬೈಲಿನೊಳ ಕವಿತೆಗಳು ಹೂಗಿನೊಳ ಕುಸುಮವೇ ಇಪ್ಪ ಹಾ೦ಗಾಗಲಿ..

  ಬೇಗ ಬಾ ಮಳೆ,ಬೆಶಿಲ
  ಬೇಗೆ ನಾಟದ್ದಿರಲಿ
  ಪೂಗವನ ಹಸುರಾಗಿ ತರವಾಡಿಲಿ
  ಮೇಗೆ ಸೊ೦ಪಾಗಿರಲಿ
  ಸೋಗೆಯೊಳ ಸಿ೦ಗಾರ
  ಹೂಗಿನೊಳ ಕುಸುಮವೇ ಇಪ್ಪ ಹಾ೦ಗೆ
  *********************
  ರಾಗಲ್ಲಿ ಪದವು ಅನು
  ರಾಗಲ್ಲಿ ದಾ೦ಪತ್ಯ
  ಸಾಗಿದರೆ ರುಚಿ ಹಾಲುಜೇನಿನಾ೦ಗೆ
  ಯೋಗವೇ ಸಜ್ಜನಿಗ
  ರಾಗಿ ಭೂಮಿಯ ಬದುಕು
  ಹೂಗಿನೊಳ ಕುಸುಮವೇ ಇಪ್ಪ ಹಾ೦ಗೆ
  **********************
  ಆಗದೋ° ಮಗನೆ ಮೇ
  ಲೋಗರವ ಸುರುದು೦ಡು
  ತೇಗಿದರೆ ಮಿತಿಮೀರಿ ಜೀವನಲ್ಲಿ
  ರೋಗ ಶಮನಕೆ ಬೇಕು
  ಜಾಗರಣೆ ಉಪವಾಸ
  ಹೂಗಿನೊಳ ಕುಸುಮವೇ ಇಪ್ಪ ಹಾ೦ಗೆ
  **********************

  [Reply]

  ತೆಕ್ಕುಂಜ ಕುಮಾರ ಮಾವ°

  ತೆಕ್ಕುಂಜ ಕುಮಾರ ಮಾವ° Reply:

  ಅಬ್ಬಬ್ಬ…! ರೈಸಿತ್ತು.

  [Reply]

  VN:F [1.9.22_1171]
  Rating: +2 (from 2 votes)
 7. ಬೊಳುಂಬು ಮಾವ°
  ಗೋಪಾಲ ಬೊಳುಂಬು

  ವಾಹ್ !!! ಬಣ್ಣದ ವೇಷ ಬಂದೇ ಬಿಟ್ಟತ್ತಾನೆ ! ಅದ್ಭುತ ಭಾವಯ್ಯ, ಅಧ್ಭುತ. ಅರ್ಥ, ಪದ ಜೋಡಣೆ, ಪ್ರಾಸ ಎಲ್ಲವುದೆ. ಮುಳಿಯ ಭಾವಯ್ಯಂಗೆ ಮುಳಿಯ ಭಾವಯ್ಯನೇ ಸಾಟಿ ಎಂತ ಹೇಳ್ತಿ.

  [Reply]

  VA:F [1.9.22_1171]
  Rating: +2 (from 2 votes)
 8. ಬೋದಾಳ
  ಬೋದಾಳ

  ಮೂಗಿಂಗೆ ಹೊಕ್ಕತ್ತು
  ‘ಈಗ’ದಾ ಮರಿಕುಃನಿ
  ಮೂಗಿನೊಳ ಕುಸುಮವೇ ಹೊಕ್ಕ ಹಾಂಗೆ

  ಬೇಗಾನು ತಾಬೇಗ (ಕೊಲ್ಲುವ)
  ಹೋಗಿ ಸೇರಲಿ ಹಳ್ಲ (=ಚರಂಡಿ)
  ಹೂಗಿನೊಳ ಕುಸುಮವೇ ಇಪ್ಪ ಹಾ೦ಗೆ

  ಉಹ್ಹಹ್ಹಹ್ಹಹ್ಹಾ…..

  [Reply]

  ಪೆರ್ಲದಣ್ಣ

  ಪೆರ್ಲದಣ್ಣ Reply:

  ಓಹೋ.. ಹಾಂಗಾರೆ:

  ಮೂಗಿನೊಳ ನೆಳವೂಳಿ
  ಬೀಗ ಕೀ ಹೊಕ್ಕಿಸೆಡಿ
  ಬಾಗಿಲಿನ ಲಾಕಿಂಗೆ ಹೊಕ್ಸಿದಾಂಗೆ

  ಬೀಗಿ ಅರಳುಗು ಮೂಗು
  ಕಾಂಗು ತುಂಬಿಸಿದಾಂಗೆ
  ಹೂಗಿನೊಳ ಕುಸುಮವೇ ಇಪ್ಪ ಹಾ೦ಗೆ

  :)

  [Reply]

  VA:F [1.9.22_1171]
  Rating: +1 (from 1 vote)
 9. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಮೂಗಿನೊಳ ಹೊಕ್ಕ ಹುಳುವಿನ ಕೊಲ್ಲುಲೆ ಬೇಗಾನು ಬಿಡುದೋ..? ಅಯ್ಯಯ್ಯೋ..!

  [Reply]

  VN:F [1.9.22_1171]
  Rating: 0 (from 0 votes)
 10. ಮುಳಿಯ ಭಾವ
  ರಘು ಮುಳಿಯ

  ಎ೦ತೆ೦ಥಾ ಆಲೋಚನೆಗೊ..ಹ..ಹ್ಹಾ…

  ಮೂಗಿನೊಳ ನೆಳವಿದ್ದ
  ರೀಗ ಬಾಜಾರಿ೦ದ
  ಬೇಗಾನು ಸ್ಪ್ರೇ ತ೦ದ ಬೋದಾಳನ
  ಮೇಗೆ ನೋಡ್ಯೊ೦ಡಿಪ್ಪ
  ಆ ಗೆಣಪ ಕಾಯೆಕ್ಕು
  ಹೂಗಿನೊಳ ಕುಸುಮವನೆ ಕಾದ ಹಾ೦ಗೆ

  [Reply]

  ಮುಳಿಯ ಭಾವ

  ರಘು ಮುಳಿಯ Reply:

  ಹು..ನೆಗೆ ಎಡಕ್ಕಿಲಿ ಮಾತ್ರೆ ತಟಪಟ !

  ಮೂಗಿನೊಳ ನೆಳವಿದ್ದ
  ರೀಗ ಬಾಜಾರಿ೦ದ
  ಬೇಗಾನು ತೆಕ್ಕೊ೦ಡ ಬೋದಾಳನ
  ಮೇಗೆ ನೋಡ್ಯೊ೦ಡಿಪ್ಪ
  ಆ ಗೆಣಪ ಕಾಯೆಕ್ಕು
  ಹೂಗಿನೊಳ ಕುಸುಮವನೆ ಕಾವ ಹಾ೦ಗೆ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚೆನ್ನಬೆಟ್ಟಣ್ಣಕೆದೂರು ಡಾಕ್ಟ್ರುಬಾವ°ಶುದ್ದಿಕ್ಕಾರ°ಶ್ರೀಅಕ್ಕ°ಉಡುಪುಮೂಲೆ ಅಪ್ಪಚ್ಚಿಚುಬ್ಬಣ್ಣಅಕ್ಷರ°ಪೆಂಗಣ್ಣ°ರಾಜಣ್ಣಶಾ...ರೀವಿಜಯತ್ತೆಸುವರ್ಣಿನೀ ಕೊಣಲೆಜಯಗೌರಿ ಅಕ್ಕ°ಗಣೇಶ ಮಾವ°ಪವನಜಮಾವಚೂರಿಬೈಲು ದೀಪಕ್ಕವೆಂಕಟ್ ಕೋಟೂರುಬೋಸ ಬಾವಪುಣಚ ಡಾಕ್ಟ್ರುಮಾಷ್ಟ್ರುಮಾವ°vreddhiನೀರ್ಕಜೆ ಮಹೇಶಪುತ್ತೂರಿನ ಪುಟ್ಟಕ್ಕಅಕ್ಷರದಣ್ಣಶೇಡಿಗುಮ್ಮೆ ಪುಳ್ಳಿಕೊಳಚ್ಚಿಪ್ಪು ಬಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ