ಸಮಸ್ಯೆ 71: ರಜೆ ಮುಗುದ ಮರದಿನವೆ ಶಾಲೆಗೆ ಹೆರಡುಲಿದ್ದನ್ನೇ

May 31, 2014 ರ 6:00 amಗೆ ನಮ್ಮ ಬರದ್ದು, ಇದುವರೆಗೆ 13 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈ ವಾರ ದೊಡ್ಡರಜೆ ಮುಗುದು ಮತ್ತೆ ಶಾಲೆ ಶುರುವಪ್ಪ ಗೌಜಿ. ಕೆಲವು ಜೆನಕ್ಕೆ ಸ೦ತೋಷ,ದೋಸ್ತಿಗಳ ಮತ್ತೆ ಕಾ೦ಬ ಉತ್ಸಾಹ.ಇನ್ನು ಕೆಲವು ಜೆನಕ್ಕೆ ಅಯ್ಯೋ.. ರಜೆ ಮುಗುತ್ತನ್ನೇ ಹೇಳ್ತ ಸ೦ಕಟ.

ನೋಡುವ ನಮ್ಮ ಬೈಲಿನ ನೆ೦ಟ್ರು ಎ೦ತ ಹೇಳುತ್ತವು?

ಸಮಸ್ಯೆ :

ರಜೆಮುಗುದ ಮರದಿನವೆ ಶಾಲೆಗೆ ಹೆರಡುಲಿದ್ದನ್ನೇ !

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 13 ಒಪ್ಪಂಗೊ

 1. ಮುಳಿಯ ಭಾವ
  ರಘುಮುಳಿಯ

  ಅಜಯನೊಟ್ಟಿ೦ಗಾಟವಾಡುವ
  ಭಜನೆ ಮಾಡೆಡ ಹೋಗು ಬೇಗನೆ
  ಕುಜುವೆ ತಾಳಿನ ಕೂಡಿ ಉ೦ಬಲೆ ಬೇಗ ಸುರು ಮಾಡು I
  ಮುಜುಡು ಬುದ್ಧಿಯೆ,ಪಾಠಪುಸ್ತಕ
  ರಜವು ಮುಟ್ಟಿದ್ದಿಲ್ಲೆ ಬೇಸಗೆ
  ರಜೆಮುಗುದ ಮರದಿನವೆ ಶಾಲೆಗೆ ಹೆರಡುಲಿದ್ದನ್ನೇ II

  [Reply]

  VA:F [1.9.22_1171]
  Rating: 0 (from 0 votes)
 2. ನೆಗೆಗಾರ°

  ಮೊನ್ನೆ ಮಜಲುಗುಡ್ಡೆ ಇಳುದು ಮಾಷ್ಟ್ರುಮಾವನಲ್ಲಿಗೆ ಹೋಪಗ ಹೀಂಗೆ ಬರದು ಕೊಟ್ಟವು:

  ಭಜನೆ ಭಾಗವತಿಕೆಯ ಕಲಿವದೊ,
  ಅಜನೆ ಮಂತ್ರವ ಕಲಿವದೋ, ರವಿ-
  ಕುಜನ ಜನ್ಮದ ರಾಶಿ ಮಡಗುವ ಕವಡೆ ಕಲ್ತಕ್ಕೋ?
  ಮಜಲಗುಡ್ಡೆಲಿ ತಿರುಗಿ ದಿನಗಳ
  ನಿಜಕು ಕೊಲ್ಲುದು ಬೇಡ ಮಕ್ಕಳೆ,
  ರಜೆ ಮುಗುದ ಮರದಿನವೆ ಶಾಲೆಗೆ ಹೆರಡುಲಿದ್ದನ್ನೇ || :-) ||

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಯಬ ಯಬ .. ನೆಗೆಮಾಣಿಗೂ ದೊಡ್ದರಜೆಯೋ ಬೈಲಿಂಗೆ ಬಪ್ಪಲೇ ಹೇಳಿ ಗ್ರೇಶಿದ್ದು..
  ನೆಗೆಯಮಾಣಿಯ ಕವನವೋ? ಎಲೆ
  ಜಗಿವ ನಮ್ಮಯ ಮಾಷ್ಟ್ರುಮಾವನ
  ಜಗದ ಅನುಭವ ಕಥನವೋ ? ಗೊಂತಿಲ್ಲೆ ಏ ಮಾಣಿ !!

  [Reply]

  VA:F [1.9.22_1171]
  Rating: 0 (from 0 votes)
  ತೆಕ್ಕುಂಜ ಕುಮಾರ ಮಾವ°

  ತೆಕ್ಕುಂಜ ಕುಮಾರ ಮಾವ° Reply:

  ನೆಗೆ ಮಾಣಿ ಈಗ ಇಂಗ್ಲೀಷು ಕಲಿವದು ಬಿಟ್ಟು ಚಂದಸ್ಸು ಕಲಿವಲೆ ಶುರು ಮಾಡಿದನೋ..? ಇಂಗ್ಲೀಷು ಸಾಕಾತೋ..? ಏಂ…

  [Reply]

  VN:F [1.9.22_1171]
  Rating: 0 (from 0 votes)
 3. ಭಾಗ್ಯಲಕ್ಷ್ಮಿ

  ಶಾಲಗೆ ಹೆರಡುವಾಗ ; ಮಧೂರಿಲಿ ಎರಡು ತಿಂಗಳ ರಜೆಲಿ ವಿಜಯ ಭಾವನ ಒಟ್ಟಿ೦ಗೆ ಮ೦ತ್ರ ಕಲ್ತ ಮಾಣಿಯ ಯೋಚನೆ –

  ಗಜಮುಖನ ಬೇಡಿಕ್ಕಿ ಬಲದಿಕೆ
  ಭುಜಲಿ ಚೀಲವ ನೇಲ್ಸಿ ಬೇಸಗೆ
  ರಜೆ ಮುಗುದ ಮರದಿನವೆ ಶಾಲಗೆ ಹೆರಡುಲಿದ್ದನ್ನೇ I
  ಗಜವದನನೆದುರೆರಡು ತಿಂಗಳು
  ವಿಜಯನ ಜತೆಲಿ ಕಲ್ತ ಮಂತ್ರದ
  ಮಜವದೆಂತು ಮರೆಯಲಿ ?ಶಾಲೆಲಿ ಹೋಗಿ ಹೇಳೆಕ್ಕು II

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಒಳ್ಳೆ ಕಲ್ಪನೆ ಭಾಗ್ಯಕ್ಕ. ಗಜಮುಖ ,ಗಜವದನ ಎರಡೂ ಪುನರೋಕ್ತಿ ಅಪ್ಪ ಕಾರಣ ಬದಲ್ಸಿರೆ ಇನ್ನೂ ಒಳ್ಳೆದು.

  [Reply]

  ಭಾಗ್ಯಲಕ್ಷ್ಮಿ Reply:

  ”ಗಜ ನಯನನೆದುರೆರಡು ತಿಂಗಳು” ಹೇಳಿ ಅಕ್ಕಾ? ಗಣಪತಿಗೆ ಇಲ್ಲಿ ಸೇರಿ ಬಪ್ಪ ಹೆಸರು ಬೇರೆ ಯಾವದುದೆ ಎನಗೆ ಗೊ೦ತಾವುತ್ತಿಲ್ಲೆ . ಆ ಗಣೇಶನೇ ಆಶೀರ್ವಾದ ಮಾಡೆಕ್ಕಷ್ಟೆ.

  ಮೊದಲ ಅಕ್ಷರ ಹೃಸ್ವ ಆಗಿ ಪ್ರಾಸ ”ಜ ” ಕಾರಲ್ಲಿ ಬಂದು, ಮಾತ್ರಾ ಗಣ ಆದಕಾರಣ ನಿಷೇದಾಕ್ಷರಿ ಕೊಟ್ಟ ಹಾಂಗೆ ಆವುತ್ತು !!

  [Reply]

  VA:F [1.9.22_1171]
  Rating: 0 (from 0 votes)
 4. ಶೈಲಜಾ ಕೇಕಣಾಜೆ

  ರೈಸಿತ್ತದ ಭಾಗ್ಯಕ್ಕ….
  ಭುಜಲಿ ನೇಲುಸಿ ಚೀಲ ಭಾರಲಿ
  ರಜೆಯ ಮಜವದ ನೆನಪ ಭಿತ್ತಿಲಿ
  ದಜಬಜನೆ ಕೊಡೆಯಡಿಲಿ ನೀರಿನ ತಲಗು ಹಾರ್ಸೊಂಡೆ
  ಪ್ರಜೆಗೊ ಮುಂದೆಲಿ ಇಂದು ಕಲ್ತರೆ
  ನಿಜವೆ ಹುರುಪದು ಬಂದು ಬೇಸಗೆ
  ರಜೆ ಮುಗುದ ಮರದಿನವೆ ಶಾಲಗೆ ಹೆರಡುಲಿದ್ದನ್ನೆ //

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಲಾಯ್ಕ ಆಯಿದು ಶೈಲಜಕ್ಕಾ.. ರಜೆ ಶಬ್ದ ಆದಿಪ್ರಾಸಲ್ಲಿ ಎರಡು ಸರ್ತಿ ಬಯಿ೦ದು, ದೋಷ ಅಲ್ಲದ್ದರೂ ಬದಲ್ಸಿರೆ ತೂಕ ಹೆಚ್ಚಕ್ಕು.

  [Reply]

  ಶೈಲಜಾ ಕೇಕಣಾಜೆ Reply:

  ಮಜದ ನೆಂಪುಗೊ ಮನಸ ಬುತ್ತಿಲಿ
  ಹೇಳಿ ಮಾಡಿರೆ ?

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಧಾರಾಳ .. ಲಾಯಕ ಆತದಾ..

  VA:F [1.9.22_1171]
  Rating: 0 (from 0 votes)
 5. K.Narasimha Bhat Yethadka

  ರಜೆ ಮುಗುದ್ದದು ಹೇಂಗೆ ಹೇದೇ
  ಮಜದೆಡೆಲಿ ಗೊಂತಾಯಿದಿಲ್ಲೇ+
  ರಜೆ ಮುಗುದ ಮರದಿನವೆ ಶಾಲೆಗೆ ಹೆರಡುಲಿದ್ದನ್ನೇ
  ಗಜದ ಗಾತ್ರದ ಚೀಲ ಹೊತ್ತೊಂ-
  ಡು ಜೆತೆ ಹಿಡಿಯೆಕ್ಕು ಹೊಸ ಮಕ್ಕಳ
  ಗೆಜಳಿದ ಹುಳುಗೊ ಪುಂಡೆಲಾಗಿಯೆ ಹೋಪ ರೀತಿಲಿಯೇ

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಮಾವಾ..ರೈಸಿದ್ದು..ರಜೆ – ಆದಿಪ್ರಾಸದ ಪುನರೋಕ್ತಿ ಬದಲ್ಸಿರೆ ಇನ್ನೂ ಲಾಯ್ಕಕ್ಕು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಜಯಶ್ರೀ ನೀರಮೂಲೆಚುಬ್ಬಣ್ಣಶ್ಯಾಮಣ್ಣಪೆಂಗಣ್ಣ°ಸಂಪಾದಕ°ಒಪ್ಪಕ್ಕಮುಳಿಯ ಭಾವಬೋಸ ಬಾವಸರ್ಪಮಲೆ ಮಾವ°ವೇಣೂರಣ್ಣದೊಡ್ಡಮಾವ°ವಿದ್ವಾನಣ್ಣವೆಂಕಟ್ ಕೋಟೂರುಮಂಗ್ಳೂರ ಮಾಣಿಪಟಿಕಲ್ಲಪ್ಪಚ್ಚಿದೇವಸ್ಯ ಮಾಣಿಬಟ್ಟಮಾವ°ಪುತ್ತೂರಿನ ಪುಟ್ಟಕ್ಕದೊಡ್ಡಭಾವಗಣೇಶ ಮಾವ°ಪ್ರಕಾಶಪ್ಪಚ್ಚಿಡೈಮಂಡು ಭಾವಗೋಪಾಲಣ್ಣಅನಿತಾ ನರೇಶ್, ಮಂಚಿಕಳಾಯಿ ಗೀತತ್ತೆಚೆನ್ನಬೆಟ್ಟಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ