ಸಮಸ್ಯೆ 20 : ಚಳಿಗಾಲ ಹೋಗಿ ಬೇಸಗೆಗಾಲ ಬ೦ತು ಮಾವಿನಕಾಯಿ ಮೆಡಿ ಬಿಟ್ಟಿದೋ?

February 23, 2013 ರ 6:00 amಗೆ ನಮ್ಮ ಬರದ್ದು, ಇದುವರೆಗೆ 46 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈ ವಾರದ ಸಮಸ್ಯೆ  : ಚಳಿಗಾಲ ಹೋಗಿ ಬೇಸಗೆಗಾಲ ಬ೦ತು ಮಾವಿನಕಾಯಿ ಮೆಡಿ ಬಿಟ್ಟಿದೋ?

ಇದು ವಾರ್ಧಕ ಷಟ್ಪದಿಲಿ ಇದ್ದು.

ಸೂ:

ಈ ಸಮಸ್ಯೆ ವಾರ್ಧಕ ಷಟ್ಪದಿಲಿ ಇದ್ದು.
ಐದೈದು ಮಾತ್ರೆಯ ನಾಕು ಗುಂಪು – ಮೊದಲೆರಡು ಗೆರೆಲಿ.
ಐದು ಮಾತ್ರೆಯ ಆರು ಗುಂಪು, ಕೊನೆಗೊಂದು ಗುರು – ಮೂರ್ನೇ ಗೆರೆಲಿ.ಹೆಚ್ಚಿನ ಮಾಹಿತಿಗೆ:
http://oppanna.com/oppa/shara-kusuma-bhoga-bhamini-shatpadi
http://padyapaana.com

ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 46 ಒಪ್ಪಂಗೊ

 1. ಮುಳಿಯ ಭಾವ
  ರಘು ಮುಳಿಯ

  ಸೆಳಿವ ತಲೆಗೊ೦ದು ಬೈರಾಸು ಕಟ್ಟಿಯೆ ಗುಡ್ದೆ
  ಸುಳುದು ಶುದ್ಧದ ಗಾಳಿ ತಿ೦ಬ ಹೆಳೆಲಿಯೆ ಹೆರಟು
  ಮುಳಿಯ ಪದವಿಲಿ ಕ೦ಡೆಯರಳಿ ಮರದೆಲೆ ಹಸುರ ತಳಿರ ತೋರಣ ಚೆಪ್ಪರ I
  ಜುಳುಜುಳುನೆ ಹರಿವ ಹೊಳೆ ನೀರ ರಾಗಕೆ ಜಾಲು
  ಹೊಳಿವ ತಾಳಕೆ ಮನಸು ಮೇಳೈಸಿ ಕೇಳಿತ್ತು
  ಚಳಿಗಾಲ ಹೋಗಿ ಬೇಸಗೆ ಕಾಲ ಬಂತು ಮಾವಿನ ಕಾಯಿ ಮೆಡಿ ಬಿಟ್ಟಿದೋ?II

  [Reply]

  ಅದಿತಿ Reply:

  ಪದ್ಯ ಲಾಯ್ಕಾಯ್ದು.

  [Reply]

  VA:F [1.9.22_1171]
  Rating: 0 (from 0 votes)
 2. ಇಂದಿರತ್ತೆ
  ಇಂದಿರತ್ತೆ

  ಹೊಳೆಮಾವು ಕಶಿಮಾವು ಕಾಟುಮಾವಿನ ಮರಲಿ
  ಚಳಿಗಾಳಿ ಸೋಂಕಿ ಮರ ತುಂಬ ಹೂಗು ಹೋಯಿದು
  ಬೆಳಿಮೋಡದೆಡಕ್ಕಿಲಿ ಕರಿಮುಗಿಲು ಬಂದರೋ ಹೂಗು ಪೂರಾ ಕರಂಚುಗು ।
  ಹುಳಿಹುಟ್ಟುವ ಮೊದಲೇ ಕೊಯಿಶಿಳಿಶುವ ತುರ್ತಿಲಿ
  ಗಳಿಕೆಯ ಹೆಳೆಲಿ ಯಮ್ಟಿಯಾರಿನವು ಕೇಳಿದವು
  ಚಳಿಗಾಲ ಹೋಗಿ ಬೇಸಗೆಗಾಲ ಬಂತು ಮಾವಿನಕಾಯಿ ಮೆಡಿ ಬಿಟ್ಟಿದೋ ?

  [Reply]

  ಮುಳಿಯ ಭಾವ

  raghumuliya Reply:

  ಅತ್ತೆ,ಲಾಯ್ಕ ಆಯಿದು.
  ಸಣ್ಣ ತಿದ್ದುಪಡಿಗೊಃ

  ೧ ಚಳಿಗಾಳಿ ಸೋಂಕಿ ಮರ ತುಂಬ ಹೋಯಿದು ಹೂಗು— ಹೇಳಿ ಬದಲ್ಸಿರೆ ಓದುಲೆ ಸುಲಭ.

  ೨. ಬೆಳಿಮೋಡದೆಡಕ್ಕಿಲಿ ಕರಿಮುಗಿಲು ಬಂದರೋ ಹೂಗು ಪೂರಾ ಕರಂಚುಗು । –ದೆಡಕ್ಕಿಲಿ ಲಗ೦ ಆಯಿದು,
  ಬೆಳಿಮೋಡದೆಡೆಲಿ ಕರಿಮುಗಿಲ ಕ೦ಡರೆ ಹೂಗು ಮುಗುಟು ಪೂರ ಕರ೦ಚುಗು — ಹೇಳಿ ಮಾಡ್ಲಕ್ಕು,

  ೩.ಹುಳಿಯಪ್ಪ ಮೊದಲೆ ಕೊಯಿಶಿಳಿಶುತ್ತ ತುರ್ತಿಲ್ಲಿ

  ಗಳಿಕೆಯಾಸೆಲಿ ಯಮ್ಟಿಯಾರಿನವು ಕೇಳಿದವು — ಹೇಳಿ ಬದಲ್ಸಲಕ್ಕು

  [Reply]

  ಇಂದಿರತ್ತೆ

  ಇಂದಿರತ್ತೆ Reply:

  ಮಾತ್ರೆಗಳ ಸರ್ಕಸ್ಸಿಲಿ ಕವನದ ಲಯದ ಕಡೆಂಗೆ ಗಮನಕೊಡುದು ಕಮ್ಮಿಯಾವುತ್ತು .
  ತಿದ್ದಿಯಪ್ಪಗ ಹೋ! ಅಪ್ಪನ್ನೆ ಹೇಳಿ ಗೊಂತಾವುತ್ತು .
  ಅದೇ ಪದ್ಯವ ತಿದ್ದಿ ಪುನಃ ಬರೆತ್ತೆ .

  ಹೊಳೆಮಾವು ಕಶಿಮಾವು ಕಾಟುಮಾವಿನ ಮರಲಿ
  ಚಳಿಗಾಳಿ ಸೋಂಕಿ ಮರತುಂಬ ಹೋಯಿದು ಹೂಗು
  ಬೆಳಿಮೋಡದೆಡೆಲಿ ಕರಿಮುಗಿಲ ಕಂಡರೆ ಹೂಗು ಮುಗುಟು ಪೂರ ಕರಂಚುಗು ।
  ಹುಳಿಯಪ್ಪ ಮೊದಲೆ ಕೊಯಿಶಿಳಿಶುತ್ತ ತುರ್ತಿಲ್ಲಿ
  ಗಳಿಕೆಯಾಸೆಲಿ ಯಮ್ಟಿಯಾರಿನವು ಕೇಳಿದವು
  ಚಳಿಗಾಲ ಹೋಗಿ ಬೇಸಗೆಗಾಲ ಬಂತು ಮಾವಿನಕಾಯಿ ಮೆಡಿ ಬಿಟ್ಟಿದೋ ?

  [Reply]

  VA:F [1.9.22_1171]
  Rating: 0 (from 0 votes)
 3. ಶ್ಯಾಮಣ್ಣ
  ಶ್ಯಾಮಣ್ಣ

  ಅಬ್ಬಬ್ಬಾ..!!! ಎಂತೆಂತಾ ಪದ್ಯಂಗ… ಇಷ್ಟು ಜನಂಗ ಬರದ ಪದ್ಯಂಗಳ ಓದಿ ಅಪ್ಪಗ ಎನಗೆ ನಿಜಕ್ಕೂ ಚಳಿಗಾಲ ಹೋಗಿ ಬೇಸಗೆಗಾಲ ಬಂತು ಮಾವಿನಕಾಯಿ ಮೆಡಿ ಬಿಟ್ಟಿದೋ ? ಹೇಳಿ ಸಂಶಯ ಬಂದು ಜಾಲ ಕರೇಲಿ ಹೋಗಿ, ಮಾವಿನ ಮರದ ಕೊಡಿ ನೋಡಿದೆ… ಛೆ… ಎಲ್ಲಿಗೆ ಮೆಡಿ ಬಿಡುದು? ಹೂಗೆಲ್ಲಾ ಕರೆಂಚಿದ್ದು… ಛೆ….

  [Reply]

  ಅದಿತಿ Reply:

  ಅಯ್ಯೋ !! ಹೂಗು ಕರಂಚಿರೆ ಮತ್ತೆ ಉಪ್ಪಿನಕಾಯಿ ??

  [Reply]

  VA:F [1.9.22_1171]
  Rating: +2 (from 2 votes)
  ಬಾಲಣ್ಣ (ಬಾಲಮಧುರಕಾನನ)

  ಬಾಲಣ್ಣ (ಬಾಲಮಧುರಕಾನನ) Reply:

  ಶಾಮಣ್ಣಾ ,ಜಾಲ ಕರೇಲಿ ಹೋಗಿ ಆ ಪಡು ದಿಕ್ಕಾಣ ಮಾವಿನ ಮರ ನೋಡಿದ್ದಿಲ್ಲೆಯೋ?ಅದರಲ್ಲಿ ಒಂದೆರಡು ಗೆಲ್ಲು ಹೂಗು ಬಿಟ್ಟಿದಡ !

  [Reply]

  VN:F [1.9.22_1171]
  Rating: 0 (from 0 votes)
 4. ಶೈಲಜಾ ಕೇಕಣಾಜೆ

  :) :) ಎಷ್ಟೇ ಪದ್ಯ ಬಂದರೂ ಒಂದು ಸಾಮ್ಯತೆ ಎಂತ ಹೇದರೆ ದ್ವಿತೀಯಾಕ್ಷರ ಪ್ರಾಸ ‘ ಳ ‘ಕಾರ.. ಅದೆಂತಪ್ಪ??

  [Reply]

  ಅದಿತಿ Reply:

  ಕೇಳುಲಿಂಪದು ಪ್ರಾಸ ಬಂದರೆ
  ಹೇಳಿ ನಿಯಮವ ರೂಪಿಸಿದ್ದವು
  ಗಾಳಿಯೊಟ್ಟಿಗೆ ಹಾರ್ಸಿ ಕಳುಸದೆ ಪಾಲಿಸೆಕ್ಕೆಲ್ಲ
  ಮೇಳವಾದರೆ ಪದಗೊ ಪ್ರಾಸಲಿ
  ತಾಳದೊಟ್ಟಿಗೆ ಪದ್ಯ ರೈಸುಗು
  ಬೋಳು ಕಾಂಗದು ಪದ್ಯ ರಚಿಸಿರೆ ಗಣ್ಯ ಮಾಡದ್ದೆ

  ಈ ಕೆಳಾಣ ಸಂಕೋಲೆಲಿ, ತೆಕ್ಕುಂಜ ಮಾವ, ಗೋಪಾಲ ಮಾವ ಪ್ರಾಸಗಳ ಬಗ್ಗೆ ಹೆಚ್ಚಿನ ಮಾಹಿತಿ ಕೊಟ್ಟಿದವು.
  http://oppanna.com/chodyango/negeyu-kadalaleyaagi

  [Reply]

  ಶೈಲಜಾ ಕೇಕಣಾಜೆ Reply:

  ಅದಿತಿಯಕ್ಕಂಗೆ ಧನ್ಯವಾದ. ಪದ್ಯಲ್ಲೇ ಉತ್ತರಿಸಿದ್ದಕ್ಕೆ ಒಂದೊಪ್ಪ..
  ಹಿಂದಾಣವು(ಮುದ್ದಣ,ಲಕ್ಷೀಶ) ಆದಿಪ್ರಾಸವ ಪ್ರಥಮಾಕ್ಷರ ಬಿಟ್ಟು ದ್ವಿತೀಯಾಕ್ಷರ ಮಾಡ್ಲೆ ಕಾರಣ ಗೊಂತಿದ್ದರೆ ಹೇಳ್ತೀರಾ?

  [Reply]

  ಅದಿತಿ Reply:

  ಆದಿಪ್ರಾಸ ಮೊದಲನೇ ಮತ್ತು ಎರಡನೇ ಅಕ್ಷರ ಎರಡಕ್ಕೂ ಅನ್ವಯ ಆವ್ತು.
  ಮೊದಲನೇ ಅಕ್ಷರಲ್ಲಿ ವ್ಯಂಜನ ಪ್ರಾಸ ಮುಖ್ಯ ಅಲ್ಲ. ಸ್ವರ ಪ್ರಾಸ ಮುಖ್ಯ. ಹೇಳಿರೆ ಹ್ರಸ್ವ ಸ್ವರಂದ ಮೊದಲ ಸಾಲು ಮಾಡಿರೆ ಒಳುದ ೫ ಸಾಲಿಲಿಯೂ ಮೊದಲ ಅಕ್ಷರ ಹ್ರಸ್ವವೇ ಆಗಿರೆಕ್ಕು. ಎರಡನೇ ಅಕ್ಷರಲ್ಲಿ ವ್ಯಂಜನ ಪ್ರಾಸ ಮುಖ್ಯ. ಸ್ವರ ಯಾವುದೂ ಇಪ್ಪಲಕ್ಕು.
  ಉದಾಹರಣೆಗೆ “ಕುಡಿ” ಹೇಳಿ ಮೊದಲ ಪದ ಮೊದಲ ಸಾಲಿಲಿ ಇದ್ದರೆ, ಒಳುದ ಸಾಲಿಲಿ, “ಕೊಡೆ, ನಡಾವಳಿ, ತಡ” ಹೀಂಗೆ ಬಪ್ಪಲಕ್ಕು. ಇಲ್ಲಿ ಮೊದಲ ಸ್ವರ ಹ್ರಸ್ವ ( ಕ್ + ಉ , ಕ್ + ಒ …..). ಎರಡನೇ ಅಕ್ಷರಲ್ಲಿ “ಡ್” ವ್ಯಂಜನ ಪ್ರಾಸಲ್ಲಿ ಇರೆಕ್ಕು. ( ಡ್ + ಅ, ಡ್ + ಓ, ಡ್ + ಈ ….)
  ಅನುಸ್ವಾರ ಮೊದಲು ತಂದರೆ ಮತ್ತೆಯೂ ಹಾಂಗೆ ಇರೆಕ್ಕು. (ಕಂದ, ಚೆಂದ, ಮಂದ….)

  ಶತಾವಧಾನಿ ಶ್ರೀ ಗಣೇಶರು “ಪದ್ಯಪಾನ”ಲ್ಲಿ ಭಾರಿ ಲಾಯ್ಕಲ್ಲಿ ವಿವರಿಸಿದ್ದವು. ಆನೂ ಕವನ ರಚನೆಲಿ ವಿದ್ಯಾರ್ಥಿಯೇ :-). ಎನಗೂ ಈ ಅನುಮಾನ ಬಂದಿತ್ತು. ಆಗ ಶ್ರೀ ಗಣೇಶರ ಪಾಠಗಳಿಂದ ಪರಿಹಾರ ಆತು.
  http://padyapaana.com/?page_id=637

  ಭಾಗ್ಯಲಕ್ಶ್ಮಿ Reply:

  ನಿ೦ಗೊಗೆ ಕಲಿವಲೆ ಮಾತ್ರ ಅಲ್ಲ , ಇನ್ನೊಬ್ಬ೦ಗೆ ಅರ್ಥ ಅಪ್ಪ ಹಾ೦ಗೆ ಹೇಳಿಕೊಡುವ ಅರ್ಹತೆದೆ ಇದ್ದು. ನಿ೦ಗೊ ಬರದ್ದ್ದು ಒದಿ ಕೊಶಿ ಆತು.

  VA:F [1.9.22_1171]
  Rating: 0 (from 0 votes)
  ಮುಳಿಯ ಭಾವ

  raghumuliya Reply:

  ಶೈಲಜಕ್ಕ ಪ್ರಶ್ನೆ ಕೇಳಿದ್ದದು ಒಳ್ಳೆದಾತು,ಅದಿತಿ ಅಕ್ಕ ಒಳ್ಳೆ ವಿವರಣೆ ಕೊಟ್ಟಿದವು.
  ಕಾವ್ಯವ ಗಮಕಲ್ಲಿ ಓದೊಗ ದ್ವಿತೀಯಾಕ್ಷರ ಪ್ರಾಸಸ್ಥಾನದ ಮಹತ್ವ ಸರಿಯಾಗಿ ಅರ್ಥ ಆವುತ್ತು.ಯಕ್ಷಗಾನ ಸಾಹಿತ್ಯಲ್ಲಿ ಎಲ್ಲಾ ಪದ೦ಗಳೂ ಈ ನಿಯಮಲ್ಲಿದ್ದು.
  ಆದರೆ ಕೆಲವು ಸರ್ತಿ ಈ ನಿಯಮ೦ಗಳ ಮಿತಿ೦ದಾಗಿ ಭಾವದ ತೂಕ ಕಮ್ಮಿ ಆವುತ್ತು ಹೇಳ್ತ ಕಾರಣ೦ದ ಮ೦ಜೇಶ್ವರ ಗೋವಿ೦ದ ಪೈಗಳು ಪ್ರಾಸ ಇಲ್ಲದ್ದೆ ಕವನ ಬರವಲೆ ಶುರು ಮಾಡಿದವು,ಅದು ಮು೦ದುವರುದು ಈಗ ಗದ್ಯವೇ ಪದ್ಯ ಆದ್ದದು ಬೇಜಾರಿನ ಸ೦ಗತಿ.

  ಶೈಲಜಾ ಕೇಕಣಾಜೆ Reply:

  ಓ… ಎನ್ನ ಪದ್ಯಯಲ್ಲಿ ರಘು ಅಣ್ಣ ಸರಿ ಮಾಡಿದ್ದು ಈಗ ಗೊಂತಾತು… ಹೀಂಗೇ ಮಾರ್ಗದರ್ಶನ ಕೊಡ್ತಾ ಇರೇಕು ಹೇಳಿ ಕೇಳಿಕೆ .

  ಮುಳಿಯ ಭಾವ

  raghumuliya Reply:

  ಶೈಲಜಕ್ಕನ ಪರಿಹಾರದ ನಾಲ್ಕನೆ ಸಾಲಿನ ”ಕೇಳಿದವದಾ” ಸುರುವಾಣ ಶಬ್ದ ಲಘು ಆಯೆಕ್ಕಾತು,ಆದರೆ ಶಬ್ದ ಬದಲ್ಸೆಕ್ಕಾವುತ್ತು.

  VA:F [1.9.22_1171]
  Rating: 0 (from 0 votes)
  ತೆಕ್ಕುಂಜ ಕುಮಾರ ಮಾವ°

  ತೆಕ್ಕುಂಜ ಕುಮಾರ ಮಾವ° Reply:

  ವಾಹ್..! ಅದಿತಿ ಅಕ್ಕಂಗೆ ಅಭಿನಂದನೆಗೊ.

  [Reply]

  VN:F [1.9.22_1171]
  Rating: 0 (from 0 votes)
 5. ಚೆನ್ನೈ ಬಾವ°

  ಎಂತಾರು ಇತ್ತೀಚೆಗೆ ಕೆಲವು ವಾರಂದ ಸಮಸ್ಯಾ ಪೂರಣ ರೈಸುತ್ತ ಇದ್ದು ನಮ್ಮ ಬೈಲಿಲಿ. ಸಂತೋಷ. ಹೀಂಗೆ ಮುಂದುವರುದು ಹೆಚ್ಚು ಹೆಚ್ಚು ಜೆನ ಭಾಗವಹಿಸಲಿ ಹೇದು ಹೇಳ್ವೊ° ಅಲ್ದೊ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೊಡ್ಡಭಾವದೀಪಿಕಾಅಕ್ಷರ°ನೀರ್ಕಜೆ ಮಹೇಶಕೇಜಿಮಾವ°ಡಾಗುಟ್ರಕ್ಕ°ಮಾಲಕ್ಕ°ಅನುಶ್ರೀ ಬಂಡಾಡಿಕಜೆವಸಂತ°ವಾಣಿ ಚಿಕ್ಕಮ್ಮವಿದ್ವಾನಣ್ಣಶಾ...ರೀಹಳೆಮನೆ ಅಣ್ಣಶೇಡಿಗುಮ್ಮೆ ಪುಳ್ಳಿವಸಂತರಾಜ್ ಹಳೆಮನೆಶುದ್ದಿಕ್ಕಾರ°ಎರುಂಬು ಅಪ್ಪಚ್ಚಿವೇಣಿಯಕ್ಕ°ಉಡುಪುಮೂಲೆ ಅಪ್ಪಚ್ಚಿತೆಕ್ಕುಂಜ ಕುಮಾರ ಮಾವ°ಪವನಜಮಾವಚೆನ್ನಬೆಟ್ಟಣ್ಣಶಾಂತತ್ತೆಗಣೇಶ ಮಾವ°ಅನಿತಾ ನರೇಶ್, ಮಂಚಿಬೊಳುಂಬು ಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ