ಅಪ್ಪ – ಮಗ

ಅಪ್ಪಾ ಮಗಾ ವಂದೇ ಮನೇಲಿದ್ರೂ ಮಾತಿಲ್ಲೆ
ಕೊಂಕು ಪಂಕು ಮಾತಾಡ್ಕಂಡು ಹತ್ರಾಗ್ತಾಯಿಲ್ಲೆ
ಮಗ್ನ ಕಂಡ್ರೆ ಅಪ್ಪ ಕಣ್ಣ ದೊಡ್ಡಕ್ಕೆ ಬಿಡ್ತ
ಮಗಾ ಅಪ್ನ ನೋಡ್ದ ಕೂಡ್ಲೆ ಮುಖಾನೇ ತಿರಗ್ಸತಾ ||

ಹೀಂಗಾದ್ರೆ ಸಂಸಾರದಲ್ಲಿಯೆಲ್ಲಿ ಖುಷಿ ಇರ್ತು
ಮುಸಿ ಮುಸಿ ಜಗ್ಳಾ ಮಾಡಿ ಬೇಜಾರೇ ಆಗ್ತು
ದಿನಾನೂ ಕೊರಗಿ ಅಪ್ಪಾ ಮಗಾ ನೋವಲ್ಲೇ ಇರ್ತೊ
ತಂಗ್ಳ ಕತೆ ಯೆಂತಕ್ ಹೀಂಗೆ ಕೇಳ್ಕತ್ತ ಉಣತೊ ||

ಅಪ್ಪಾ ಮಗಾ ಅತ್ತೆ ಸೊಸೆ ಚಂದಕ್ಕಾಗಿರೊ
ಮನೇಲಿದ್ರೆ ನೆಮ್ಮದಿ ಶಾಂತಿ ತುಂಬ್ಕಂಡಿರೊ
ಬಂದ ಹೋಪೋರಿಗೂ ಸರಿ ಹೇಳ್ವಾಂಗಿರೋ
ಚಾಡಿ ಮಾತು ಕೋಂಕು ವ್ಯಂಗ್ಯ ದೂರಾ ಸರಿಯೊ ||
(ಕೆಲವರ ಮನೆಯಲ್ಲಿ ಈ ರೀತಿ ವಾತಾವರಣ ಇರ್ತು)

You may also like...

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *