ಚೈನು- ಭಾಗ ಆರು

September 3, 2013 ರ 10:33 amಗೆ ನಮ್ಮ ಬರದ್ದು, ಇದುವರೆಗೆ 16 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

(ಈ ಕತೆಲಿ ಬಪ್ಪ ಎಲ್ಲ ವ್ಯಕ್ತಿಗಳುದೇ, ಸ್ಥಳ, ಘಟನೆಗಳುದೇ ಕೇವಲ ಕಾಲ್ಪನಿಕ, ಯಾವದೇ ವ್ಯಕ್ತಿ ಅತವಾ ಘಟನೆಗೆ ಸಾಜ ಕಂಡತ್ತು ಹೇಳಿ ಆದರೆ ಅದು ಕೇವಲ ಕಾಕತಾಳೀಯ. ಈ ಕತೆ ಐವತ್ತು ವರ್ಷದ ಮೊದಲು ನಡದ್ದು ಹೇಳಿ ತಿಳ್ಕೊಳ್ಳೆಕ್ಕು.)
————————————————————————————————-
ಇಲ್ಯಾಣವರೇಗೆ……

ಸಬ್ಬಿನಿಸ್ಪೇಟ ಮರಿಯಪ್ಪ ಬೂಡ್ಸು ತೆಗದು ಮಡುಗಿತ್ತು. ಗುರ್ಮೆ ಹತ್ತರಂಗೆ ಬಂದು ಆರೂ ಬಗ್ಗಿ ನೋಡದ್ದ ಹಾಂಗೆ ನೋಡಿಗೊಂಬಲೆ ಒಳುದ ಎರಡು ಪೋಲಿಸುಗೊಕ್ಕೆ ತಾಕೀತು ಮಾಡಿತ್ತು. ಮತ್ತೆ ಮೆಲ್ಲಂಗೆ ಗುರ್ಮೆಯೊಳ ಇಳುತ್ತು…

ಮುಂದೆ ಓದಿ…..

——————————————————————————————-

ಮರಿಯಪ್ಪ ಗುರ್ಮೆಯೊಳ ಇಳುತ್ತು. ಕೆಳ ಕಿಷ್ಣಪ್ಪ ಅದರೊಟ್ಟಿಂಗೆ ಎಂತದೋ ಗುಸು ಗುಸು ಹೇಳಿತ್ತು. ಅದು ಹೆಣವ ತಿರುಗಿಸಿ ಹಾಕಿದ್ದು. ಹೆಣ ತ್ಯಾಂಪಂದೆ. ಕಿಷ್ಣಪ್ಪಂಗೆ ತ್ಯಾಂಪನ ನೋಡಿ ಗೊಂತಿದ್ದು. ಅದರ ಕತೆಯೂ ಗೊಂತಿದ್ದು.

ಆಮೇಲೆ ಒಂದು ಅರ್ಧ ಗಂಟೆ ಅಪ್ಪಷ್ಟು ಹೊತ್ತು ಎರಡುದೆ ಅಲ್ಲೆ ಕೆಳ ಹೆಣದ ಹತ್ತರೆ ಎಂತದೋ ವ್ಯೆವಾರವೋ ಪಿತೂರಿಯೋ ಮಾಡಿಕೊಂಡು ಇತ್ತಿದ್ದವು… ಎಂತ ಇಕ್ಕು?

ಅರ್ಧ ಗಂಟೆ ಆದಮೇಲೆ ಎರಡುದೆ ಮೇಲೆ ಹತ್ತಿಕ್ಕಿ ಬಂದವು.

ಸಬ್ಬಿನಿಸ್ಪೇಟ ಒಂದುಸರ್ತಿ ಅಲ್ಲಿ ಇದ್ದೋರಿನ ಎಲ್ಲ ನೋಡಿತ್ತು. ಅದು ನೋಡಿಕೊಂಡು ಇದ್ದ ಹಾಂಗೆ ಆರಾರ ಮೇಲೆ ಅದರ ದೃಷ್ಟಿ ಬಿದ್ದತ್ತೋ ಅವಕ್ಕೆಲ್ಲ ಪುಕುಪುಕು ಹೇಳಿತ್ತು. ಕೆಲವು ಮೆಲ್ಲಂಗೆ ಅಲ್ಲಿಂದ ರಟ್ಟುಲೆ ಕಾಲು ತೆಗದವು.

“ಮೊದ್ಲು ಯಾರು ನೋಡಿದ್ದು…?” ಸಬ್ಬಿನಿಸ್ಪೇಟನ ತನಿಖೆ ಸುರು ಆತು.

” ನ…. ನಾನು…” ಲಿಂಗಪ್ಪ° ಹೇಳಿತ್ತು… ಸ್ವರ ಹೇಳ್ತದು ಗುಂಡಿಯೊಳ ಬಿದ್ದಾಂಗೆ ಆಯಿದು….

“ಬಾ ಇಲ್ಲಿ… ಮುಂದೆ….”

ಲಿಂಗಪ್ಪ° ಮುಂದೆ ಬಂತು.

“ಹೇಗೆ ಗೊತ್ತಾದ್ದು ನಿಂಗೆ… ಅವ್ನ ಹೆಣ ಅಲ್ಲೇ ಬಿದ್ದಿದ್ದು ಅಂತ…?”

“ಯ… ಯಾನು ಎಲೆ ತಿನ್ಯಾರ ಅಂತ ನಾಲ್ಕು ಅಡಿಕೆ ಉಂಡಾಂದು ನೋಡ್ಳಿಕ್ಕೆ ತೋಟಗ್ ಬತ್ತುದಿತ್ತೆ. ಹಾಗೆ ಗುರ್ಮೆಯಲ್ಲಿ ತೂನಗ ನಂಗೆ ಯಾರೋ ಬಿದ್ದಗೆ ಕಂಡಿದ್ದು…” ಲಿಂಗಪ್ಪಂಗೆ ಕನ್ನಡ ತುಳು ಎಲ್ಲ ಮಿಕ್ಸಪ್ಪಲೆ ಸುರು ಆತು… ಸಜ್ಜಿಗೆ ಬಜಿಲಿನ ಹಾಂಗೆ…

ಇದು ಎಂತ ಹೇಳ್ತಾ ಇದ್ದು ಹೇಳಿ ಸಬ್ಬಿನಿಸ್ಪೇಟಂಗೆ ಅರ್ತ ಆಯಿದಿಲ್ಲೆ. ಅದಕ್ಕೆ ತುಳು ಸರಿ ಅರ್ತ ಆವುತ್ತಿಲ್ಲೆ… ಗಟ್ಟದ ಮೇಲಾಣದ್ದು…..

“ಏ… ಸರೀ ಹೇಳಾ…” ಗರ್ಜಿಸಿತ್ತು. ಲಿಂಗಪ್ಪಂಗೆ ಬೆಗರುಬಿಚ್ಚಿತ್ತು.

“ಬ್ಬೆ..ಬ್ಬೆ..ಬ್ಬೆ…”

“ಕನ್ನಡ ಬತ್ತಿಜ್ಜಾಂಡ ತುಳುಟ್ಟೇ ಪಣ್ ಮಾರಾಯ…” ಕಿಷ್ಣಪ್ಪ ಹೇಳಿತ್ತು.

“ಅವ್ನಿಗೆ ಕನ್ನಡ ಸರೀ ಬರೂದಿಲ್ಲ ಸಾರ್… ತುಳುವಿನಲ್ಲಿ ಹೇಳ್ಲಿ… ನಾನು ಕನ್ನಡದಲ್ಲಿ ಹೇಳ್ತೇನೆ….”

“ಸರಿ…ಹೇಳ್ಲಿ….”

“ಪಣ್” ಹೇಳಿತ್ತು ಕಿಷ್ಣಪ್ಪ

“ಯಾನ್ ಇರೆ ತಿನ್ಯಾರ ರಡ್ಡ್ ಬಜ್ಜೆಯಿ ಪೆಜ್ಜುಗಾ ಪಂಡುದ್ ತೋಟಗ್ ಬತ್ತುದಿತ್ತೆ. ಅಂಚ್ ಗುರ್ಮೆಡ್ ತಾರಾಯಿ ಮಿನಿ ಬೂರ್ದುಂಡಾ ಪಂಡುದ್ ತೂಯಾರ ನಿಲ್ಕಿಯೆ. ಎಂಚಿನ್ವೋ ಬೊಳ್ದು ಬೊಳ್ದು ತೋಜುಂಡ್. ಸರೀ ತೂಂಡ ಏರೋ ಬೂರ್ಲೆಕ್ಕ ತೋಜುಂಡ್. ಅಂಚ ಪೋದು ಅಣ್ಣೇರ್ಡ ಪಂಡೆ.” ಈ ಸರ್ತಿ ಲಿಂಗಪ್ಪನ ಸಪ್ನೆಸು ಗಿಸ್ಪೆನ್ಸು ಎಂತದೂ ಇಲ್ಲೆ. ಸೀದಾ ಹೇಳಿತ್ತು.ಪೆಟ್ಟಿನ ಹೆದರಿಕೆ ಇದ್ದರೆ ಈ ಕೋಲ ಕಟ್ಟುದು ಎಲ್ಲ ಇರ್ತಿಲ್ಲೆ ಅಪ್ಪೋ?

ಕಿಷ್ಣಪ್ಪ ಕನ್ನಡಕ್ಕೆ ತರ್ಜಮೆ ಮಾಡಿ ಸಬ್ಬಿಬಿಸ್ಪೇಟಂಗೆ ವಿಷಯ ಹೇಳಿತ್ತು

“ಸುರುವಿಗೆ ಇಳ್ದದ್ದು ಅವ್ನೇ ಅಲ್ವಾ?” ಸಬ್ಬಿನಿಸ್ಪೇಟ ಕೇಳಿತ್ತು.

“ಅದು ಯಾರೂಂತ ನೋಡ್ಲಿಕ್ಕೆ ಇಳಿ ಅಂತ ನಾನೆ ಹೇಳಿದ್ದು…” ಎಂಕಣ್ಣ ಹೇಳಿದ°.

“ಅವ್ನೆ ಕೊಂದು ಇಲ್ಲಿ ತಂದು ಯಾಕೆ ಹಾಕಿರ್ಬಾರ್ದು? ಮತ್ತೆ ಬಂದು ನಿನ್ನತ್ರ ಯಾಕೆ ಸುಳ್ಳೂ ಹೇಳಿರ್ಬಾರ್ದು?” ಸಬ್ಬಿನಿಸ್ಪೇಟ ಕೇಳಿತ್ತು. ಕೇಳಿದ್ದೇ ಲಿಂಗಪ್ಪಂಗೆ ದರುಸುಲೆ ಸುರು ಆತು…

“ಅಲ್ಲ… ನೀನು ಮತ್ತು ಅವ್ನು ಸೇರಿ ಕೊಲೆ ಮಾಡಿ ನಮ್ಮತ್ರ ಯಾಕೆ ಸುಳ್ಳು ಹೇಳಿರ್ಬಾರ್ದು? ” ಸಬ್ಬಿನಿಸ್ಪೇಟಂದು ಇನ್ನೊಂದು ಪ್ರಶ್ಣೆ.

ಈಸರ್ತಿ ಎಂಕಣ್ಣಂಗೆ ಬೆಗರಿತ್ತು. ಅಲ್ಲಿ ಇದ್ದವಕ್ಕೆ ಸಬ್ಬಿನಿಸ್ಪೇಟ ಹೇಳುದು ಸತ್ಯವೇ ಇಪ್ಪಲೂ ಸಾಕು ಹೇಳಿ ಕಂಡತ್ತು.

“ಯಾರು ಕೊಂದ್ರೂ ಹಿಡೀಲಿಕ್ಕೆ ನಮಿಗೆ ಗೊತ್ತುಂಟು… ಗೊತ್ತಾಯ್ತಾ?…” ಸಬ್ಬಿನಿಸ್ಪೇಟ ಮತ್ತಷ್ಟು ಹೆದರಿಸಿತ್ತು.

“ಏಯ್… ಅವ್ನ…ಎಂತ ಅವ್ನ ಹೆಸರು?…ತ್ಯಾಂಪ… ಅವ್ನ ಮನೆಯವ್ರು ಯಾರು ಇಲ್ಲಿ… ಬನ್ನಿ…”

” ಅವ್ರು ಯಾರು ಬರ್ಲಿಲ್ಲ…” ಎಂಕಣ್ಣ ಹೇಳಿದ°.

“ಯಾಕೆ ಬರ್ಲಿಲ್ಲ?”

“ಮನೆಯವ್ರಿಗೆ ಮತ್ತೆ ತ್ಯಾಂಪನಿಗೆ ಮನಸ್ತಾಪ ಉಂಟಂತೆ.. ಹಾಗೆ ಅವ್ರು ಬರೂದಿಲ್ಲ ಅಂತ ಹೇಳಿದ್ದಾರೆ… ” ಎಂಕಣ್ಣ ಹೆದರಿಕೊಂಡೇ ಹೇಳಿದ°.

“ಹಾ… ಗೊತ್ತಾಯ್ತಲ್ಲ… ಅವ್ನ ಮನೆಯವ್ರೆ ಇವ್ನನ್ನು ಕೊಂದು ಇಲ್ಲಿ ತಂದು ಹಾಕಿರ್ಲಿಕ್ಕೂ ಸಾಕು…” ಸಬ್ಬಿನಿಸ್ಪೇಟ ಕಿಷ್ಣಪ್ಪಂಗೆ ಹೇಳಿತ್ತು.

ಎಲ್ಲವುದೆ ಒಂದುಸರ್ತಿ ” ಹಾಂ…” ಹೇಳಿದವು. ಅಲ್ಲಿತ್ತ ಕೆಲವು ಜೆನಂಗೊಕ್ಕೆ ಸಬ್ಬಿಬಿಸಿಸ್ಪೇಟ ಹೇಳಿದ್ದು “ಅಪ್ಪು ಅಪ್ಪು” ಹೇಳಿ ಕಂಡತ್ತು.

“ಅವ್ರದ್ದು ಮನೆ ಎಲ್ಲಿ? ಯಾರಿಗೆ ಗೊತ್ತುಂಟು…?”

ದೂಜ ಇದ್ದನ್ನೆ… “ನಂಗೊತ್ತುಂಟು” ಹೇಳಿತ್ತು.

“ಏ… ಏಳ್ನೂರೆಂಬತ್ತಾರು… ನೋಡು, ಇವ್ನೊಟ್ಟಿಗೆ ಹೋಗಿ ಆ ತ್ಯಾಂಪನ ಮನೆಯವ್ರನ್ನು ‘ಸಬ್ಬಿಸ್ಪೇಟ್ರು ಕರೀತಾರೆ’ ಅಂತ ಹೇಳಿ ಕರ್ಕೊಂಡು ಬಾ” 786 ಹೇಳಿದರೆ ಪೋಲಿಸು ಅಬ್ದುಲ್ಲ. ಒಟ್ಟಿಂಗೆ ಎರಡು ಪೋಲಿಸೀಸುಗ ಇತ್ತಿದ್ದವಲ್ಲದಾ? ಅದರಲ್ಲಿ ಒಂದು ಅಬ್ದುಲ್ಲ. ನಂಬ್ರ 786. ಈ ಅಬ್ದುಲ್ಲಂಗೆ ಅದರ ನಂಬರು ಹೇಳಿರೆ ಬಾರೀ ಕುಶಿ.

ಅಬ್ದುಲ್ಲ ದೂಜನೊಟ್ಟಿಂಗೆ ತ್ಯಾಂಪನ ಮನೆಯೋರಿನ ಕರಕ್ಕೊಂಡು ಬಪ್ಪಲೆ ಹೋತು.

“ಏ ಲಿಂಗಪ್ಪ ಬಾ ಇಲ್ಲಿ…” ಲಿಂಗಪ್ಪಂಗೆ ಬೆಗರು ಇಳಿತ್ತ ಇದ್ದು.

“ಸತ್ಯ ಹೇಳು… ನೀನೇ ಕೊಂದು ತಂದು ಹಾಕಿದ್ದಲ್ವಾ? ಎಲ್ಲಿ ಕೊಂದದ್ದು? ಯಾವಾಗ ಕೊಂದದ್ದು? ಯಾಕೆ ಕೊಂದದ್ದು? ಸತ್ಯ ಹೇಳದಿದ್ರೆ ಶ್ಟೇಶನಿಗೆ ಕೊಂಡೋಗಿ ಏರೊಪ್ಲೇನ್ ಹತ್ತಿಸ್ತೇನೆ ನೋಡು….”

ದರಿಸಿಕೊಂಡು ಇತ್ತಿದ್ದ ಲಿಂಗಪ್ಪಂಗೆ ಇತ್ತಿದ್ದ ಬೆಗರುದಾರ ಒಟ್ಟಿಂಗೆ ಕೈಕ್ಕಾಲು ಜೋರು ಜೋರು ನಡುಗುಲೆ ಸುರು ಆತು.

” ಭ್ಭೆ ಭ್ಭೆ ಭ್ಭೆ…..”

“ಭ್ಭೆ ಭ್ಭೆ ಭ್ಭೆ ಎಂತದು?… ನೀನೆ ಕೊಂದದ್ದು ಅಂತ ನಮಿಗೆ ಗೊತ್ತಾಗಿದೆ… ಕೆಳಗೆ ಪ್ರೂಫು ಉಂಟು… ನಿನ್ನ ಕಾಲಿಂದು ಗುರ್ತ ಬಿದ್ದಿದೆ ಅಲ್ಲಿ…ಗೊತ್ತಾಯ್ತಾ… ಅದೇ ಸಾಕು..ನಿನ್ನನ್ನು ಗಲ್ಲಿಗೆ ಹಾಕ್ಲಿಕ್ಕೆ…”

ಲಿಂಗಪ್ಪಂಗೆ ಕಣ್ಣು ಕಸ್ತಲೆ ಕಟ್ಳೆ ಸುರು ಆತು.. ಎಂತ ಹೇಳ್ಲೂ ಬಾಯಿ ಕಟ್ಟುತ್ತು… ಸಬ್ಬಿನಿಸ್ಪೇಟ ಮೋರೆ ಗೆಂಟು ಹಾಯ್ಕೊಂಡು, ಕಣ್ಣು ಕೆಂಪು ಮಾಡಿ ನೋಡ್ತಾ ಇದ್ದು. ‘ಎಂತಕಾರೂ ಆನು ಇದರಲ್ಲಿ ಸಿಕ್ಕಿ ಹಾಯ್ಕೊಂಡೆ’ ಹೇಳಿ ಲಿಂಗಪ್ಪಂಗೆ ಕಾಂಬಲೆ ಸುರು ಆತು.

“ಫೋರ್ಟ್ವೆಂಟಿ… ಇವ್ನನ್ನು ಕರ್ಕೊಂಡು ಇವ್ನ ಮನೆಗೆ ಹೋಗಿ, ಇವ್ನು ಎಂತದ್ದರಲ್ಲಿ ಅವನನ್ನು ಕೊಂದದ್ದು ಅಂತ ಇವ್ನ ಮನೆ ಇಡೀ ತಲಾಶು ಮಾಡಿ ಬಾ….” ಕಿಷ್ಣಪ್ಪಂಗೆ ಸಬ್ಬಿನಿಸ್ಪೇಟನ ಓರ್ಡರು ಜಾರಿ ಆತು.

ಇನ್ನು ಲಿಂಗಪ್ಪನ ಹೆದರ್ಸುವ ಸರದಿ ಕಿಷ್ಣಪ್ಪಂದು.

“ಏ ಬಲ… ಪೋಯಿ ನಿನ್ನ ಇಲ್ಲಗ್… ಈಯೆ ಕೆರ್ನೆ ಪಂಡುದ್ ಸಬ್ಬಿನಿಸ್ಪೇಟ್ರೆಗ್ ಗೊತ್ತಾತುಂಡ್.. ನಿಕ್ಕ್ ಉಂಡ್ ತೂಲ ಜೈಲು… ಬಲ ಬಲ…” ಲಿಂಗಪ್ಪನ ಕರಕ್ಕೊಂಡು ಲಿಂಗಪ್ಪನ ಮನೆ ಹೊಡೆಂಗೆ ಕಿಷ್ಣಪ್ಪ ಹೆರಟತ್ತು.

ಇನ್ನು ಎಂತೆಲ್ಲ ಲಿಂಗಪ್ಪನ ಹಣೆಲೆ ಬರದ್ದೋ…?

—————————————————————————————–
ಅರ್ಧ ಗಂಟೆ ಕಳುದಪ್ಪಗ, ಅಬ್ದುಲ್ಲ ತ್ಯಾಂಪನ ಮನೆಯೋರಿನ ಕರಕ್ಕೊಂಡು ಬಂತು. ಎರಡು ಗೆಂಡು ಮಕ್ಕಳುದೆ, ಎರಡು ಹೆಣ್ಣುಗಳುದೆ. ನಾಲ್ಕರದ್ದುದೆ ಮೋರೆ ಒಣಗಿದ್ದು.
ಬಹುಶ ಅಬ್ದುಲ್ಲ ಸರೀ ಹೆದರ್ಸಿದ್ದು ಅವರ. ನಾಲ್ಕರ ಮುಸುಡಿಲಿಯೂ ಬೆಗರು ಇಳಿತ್ತಾ ಇದ್ದು. ಬಂದು ನಿಂದವು… ಹಿಂದೆ ಹಿಂದೆ…

” ಏಯ್… ಬನ್ರಾ ಮುಂದೆ…” ಸಬ್ಬಿನಿಸ್ಪೇಟ ಆರ್ಭಟಿಸಿತ್ತು. ನಾಲ್ಕುದೆ ಮೆಲ್ಲಂಗೆ ಮುಂದೆ ಬಂದಾಂಗೆ ಮಾಡಿದವು. ಬಪ್ಪಲೆ ಕಾಲು ಕೇಳ್ತಿಲ್ಲೆ.

” ಏನಾ… ನೀವು ನಾಲ್ಕು ಜೆನವೂ ಸೇರಿ ನಿಮ್ಮ ಅಪ್ಪ… ಯಾರವ್ನು? ಎಂತ ಹೆಸ್ರು… ತ್ಯಾಂಪ… ಅವ್ನನ್ನು ಕೊಂದು ಇಲ್ಲಿ ತೋಡಿನ ಹೊಂಡಕ್ಕೆ ಹಾಕಿದ್ದೀರಿ ಅಂತ ನಮಿಗೆ ಕಂಪ್ಲೇಂಟು ಬಂದಿದೆ… ಗೊತ್ತುಂಟಾ? ಯಾಕೆ ಕೊಂದದ್ದು ಬೊಗಳೀ… ಇಲ್ದಿದ್ರೆ ನಿಮ್ದು ಎಲ್ರದ್ದು ಚರ್ಮ ಸುಲ್ದು ನೇತು ಹಾಕ್ತೇನೆ ನೋಡಿ…”

“…ಬೆಬೆಬೆ… ನ್ನ…ನಾವು ನಾವು…. ಯಾ… ಯಾರು ಕಂಪ್ಲೇಂಟು ಕೊಟ್ಟದ್ದು…?”

“ಮತ್ಯಾರು ಈ ಎಂಕಣ್ಣ ಬಟ್ಟ ಕೊಟ್ಟದ್ದು…”

ಎಂಕಣ್ಣಂಗೆ ಜಪ್ಪ ಹೇಳೀತ್ತು….ಎಲ ಈ ಸಬ್ಬಿನಿಸ್ಪೇಟನೇ….. ಆನು ಕಾಲಿ ‘ಹೆಣ ಬಿದ್ದಿದು’ ಹೇಳಿ ಕೊಟ್ಟದಲ್ಲದಾ… ಆರು ಕೊಂದದು ಹೇಳಿ ಹೇಳಿದ್ದನಾ? ಕತೆಯೇ…

“ಆದ್ರೆ ನಾವು ಕೊಲ್ಲಿಲ್ಲಾ…ಸಾರ್… ನಮ್ಮಪ್ಪ ಮನೆಯಲ್ಲೇ ಇರೂದಿಲ್ಲ… ನಮಿಗು ಅವ್ನಿಗು ಸರಿ ಇರ್ಲಿಲ್ಲ…”

“ಸರಿ ಇರ್ಲಿಲ್ವಾ?… ಯಾಕೆ ಸರಿ ಇರ್ಲಿಲ್ಲ?”

“ಅದು…ಅದೂ.. ಅವ್ನು.. ಅವ್ನು…”

‘ಏನು ಅವ್ನು?”

“ಅವ್ನು… ನಮ್ಮ ತಾಯಿದ್ದು… ಚಿನ್ನ ಎಲ್ಲ… ಅಡಗಿಸಿ ಇಟ್ಟಿದ್ದಾನೆ…”

“ಓ ಈಗ ಗೊತ್ತಾಯ್ತು… ಆ ಚಿನ್ನಕ್ಕೆ ನೀವು ಅವ್ನನ್ನು ಕೊಂದದ್ದಲ್ವಾ?” ಸಬ್ಬಿನಿಸ್ಪೇಟ ಒಂದು ಸುಳಿವು ಸಿಕ್ಕಿದ ಹಾಂಗೆ ಮಾಡಿತ್ತು.

“ಇರ್ಲಿ, ಇದನ್ನು ನಾನು ಸರೀ ತನಿಕೆ ಮಾಡ್ತೇನೆ… ಈಗ ಕೆಳಗೆ ಇಳ್ದು ಅವ್ನ ಹೆಣ ಮೇಲೆ ಎತ್ತಿ ಹಾಕಿ…”

“ನಾವಾ…?” ತ್ಯಾಂಪನ ಮಕ್ಕೊಗೆ ಬೆಶಿ ಆತು…

“ಮತ್ತೆ ಯಾರು? ನಿಮ್ಮ ಅಪ್ಪನ ಹೆಣ ನೀವೆ ಎತ್ತಿ ಮೇಲೆ ಹಾಕ್ಬೇಕು….”

“ಏ ಅವ್ರೊಟ್ಟಿಗೆ ನೀನುಸಾ ಇಳಿ…” ದೂಜಂಗೂ ಓರ್ಡರು ಮಾಡಿತ್ತು ಸಬ್ಬಿನಿಸ್ಪೇಟ…

ದೂಜಂಗೆ ಬೆಶಿ ಆತು… ಆದರೆ ಎಂತ ಮಾಡ್ಳಾವುತ್ತು?

ತ್ಯಾಂಪನ ಮಕ್ಕಳುದೆ, ದೂಜನುದೆ ಹೆಣ ಮೇಲೆ ಎತ್ತಿಹಾಕುಲೆ ಕೆಳ ಇಳುದವು …

ಹೆಣವ ಹೇಂಗೆ ಮೇಲೆ ಎತ್ತಿ ಹಾಕಿದ್ವು ಹೇಳಿ ವಿವರವಾಗಿ ಹೇಳ್ಲೆ ಹೆರಟರೆ ಅದು ಇನ್ನೊಂದು ದೊಡ್ಡ ಕತೆಯೇ ಅಕ್ಕು…. ಒಟ್ಟಾರೆ ಒಂದು ಮಡಲಿಂಗೆ ಕಟ್ಟಿ, ಬಾವಿ ಬಳ್ಳಿಲಿ ಕಟ್ಟಿ ಅಂತೂ ಮೇಲೆ ಎತ್ತಿ ಎಳದು ಹಾಕಿದವು ಹೇಳುವ.

ಸರಿ ಹೆಣ ಮೇಲೆ ಬಂತು…. ಇನ್ನೆಂತರ?

ಇಷ್ಟೆಲ್ಲ ಅಪ್ಪಗ ಸಬ್ಬಿನಿಸ್ಪೇಟಂಗೆ ಜೋರು ಆಸರ ಅಪ್ಪಲೆ ಸುರು ಆತು. “ಏ… ಕುಡೀಲಿಕ್ಕೆ ಎಂತ ಇಲ್ವಾ ಇಲ್ಲಿ?”

ದೂಜ ಇದ್ದನ್ನೆ… “ಉಂಟು … ಉಂಟು.. ” ಹೇಳಿದ್ದೇ ತೋಟದ ಒಳ ಇತ್ತಿದ್ದ ಒಂದು ತೆಂಗಿನ ಮರಕ್ಕೆ ತುರುತುರು ಹತ್ತಿತ್ತು. ಒಂದು ಗೊನೆಲಿ ಇತ್ತಿದ್ದ ಎಂಟು ಹತ್ತು ಬೊಂಡವ ದಡದಡ ಕೆಳಂಗೆ ಎಳದು ಹಾಕಿತ್ತು. ಒಟ್ಟಿಂಗೆ ಹತ್ತು ಬೆಳದ ತೆಂಗಿನ ಕಾಯಿದೆ ಎಳದು ಹಾಕಿಕ್ಕಿ ಇಳುತ್ತು. ಎರಡು ಬೊಂಡವ ಚಕ ಚಕ ಕೆತ್ತಿ ಕಲ್ಲುರ್ಟಿ ಬೂತಕ್ಕೆ ಕೊಟ್ಟ ಹಾಂಗೆ ಸಬ್ಬಿನಿಸ್ಪೇಟಂಗೆ ಕೊಟ್ಟತ್ತು. ಎಂಕಣ್ಣ ನೋಡಿಯೇ ಬಾಕಿ.

ಅಷ್ಟೊತ್ತಿಂಗೆ ಕಿಷ್ಣಪ್ಪ ಲಿಂಗಪ್ಪನ ಒಟ್ಟಿಂಗೆ ವಾಪಾಸು ಬಂತು. ಲಿಂಗಪ್ಪನ ಮೋರೆ ಹೇಳ್ತದು ಒಣಗಿ ಹೋಯಿದು. ಮಾತಾಡ್ಸಿದರೆ ಕೂಗುಗು ಹೇಳುವ ಹಾಂಗೆ ಇದ್ದು ಅದರ ಮೋರೆ. ಕಿಷ್ಣಪ್ಪ ಎಂತ ಎಲ್ಲ ಮಾಡಿದ್ದೊ? ಒಂದು ಕರೇಲಿ ಮಾತಾಡದ್ದೆ ತಳಿಯದ್ದೆ ಕೂದತ್ತು ಲಿಂಗಪ್ಪ. ಕಿಷ್ಣಪ್ಪ ಸಬ್ಬಿನಿಸ್ಪೇಟಂಗೆ ಎಂತದೋ ಸನ್ನೆ ಮಾಡಿತ್ತು…. ಸಬ್ಬಿನಿಸ್ಪೇಟ ಗೊಂತಾದೋರ ಹಾಂಗೆ ತಲೆ ಆಡ್ಸಿತ್ತು. ಕಿಷ್ಣಪ್ಪಂದೆ ಎರಡು ಬೊಂಡ ಕುಡುತ್ತು… ಅಬ್ದುಲ್ಲಂಗೆ ಒಂದು ಬೊಂಡ…

ಮತ್ತೆ ಅಬ್ದುಲ್ಲನ ದಿನಿಗಿ, ಗವರ್ಮೆಂಟು ಆಸ್ಪತ್ರೆಗೆ ಹೋಗಿ ಗವರ್ಮೆಂಟು ಡಾಟ್ರನ ಕರಕ್ಕೊಂಡು ಬಪ್ಪಲೆ ಹೇಳಿತ್ತು. ಸತ್ತದಕ್ಕೆ ಡಾಟ್ರ ಎಂತಕೆ ಕೇಳೆಡಿ… ಹೀಂಗೆ ಅಕಸ್ಮಾತ್ ಸತ್ತೋರಿನ ಎಲ್ಲ ಡಾಟ್ರಕ್ಕ ಎಲ್ಲ ಕೊಯ್ದು ನೋಡೆಕ್ಕಡ. ಹಾಂಗೊಂದು ಕಾನೂನು ಇದ್ದಡ. ಇಲ್ಲಿ ಗವರ್ಮೆಂಟು ಆಸ್ಪತ್ರೆಯ ಡಾಟ್ರನೇ ಈ ಕೆಲಸ ಮಾಡುದು.

ಸಬ್ಬಿನಿಸ್ಪೇಟ ತನಿಕೆ ಪುನಾ ಸುರು ಮಾಡಿತ್ತು.

“ಹೂಂ ಹೇಳಿ ಈಗ ಯಾರು ಕೊಂದದ್ದು..? ಇಲ್ಲದಿದ್ರೆ ಇಲ್ಲಿ ಇರುವ ಎಲ್ರಿಗು ಜೈಲಿಗೆ ಕಳಿಸ್ತೇನೆ…”

ಆರಿಂದೂ ಸುದ್ದಿ ಇಲ್ಲೆ…

ಸಬ್ಬಿನಿಸ್ಪೇಟಂಗೆ ಕೋಪ ಏರಿತ್ತು….

“ಏ ಬಾ ಇಲ್ಲಿ…” ದೂಜನ ದಿನಿಗಿತ್ತು…

“ಏನಾ ನಿಂಗೇನಾದ್ರೂ ಗೊತ್ತುಂಟಾ ಯಾರು ಕೊಂದದ್ದು ಅಂತ?”

ಹ್ಹ… ‘ಗೊತ್ತುಂಟು’ ಹೇಳಿದರೆ ‘ನಿಂಗೆ ಹೇಗೆ ಗೊತ್ತಯ್ತು… ನೀನೂ ಸೇರಿದ್ದೀಯ ?’ ಹೇಳುಗು… ಆದ್ರೂ ದೂಜನ ಮನಸ್ಸಿಲಿ ಒಂದು ಜೆನದ ಹೆಸರು ಇದ್ದು… ಆ ಜೆನದ ಒಟ್ಟಿಂಗೆ ಕಳುದ ವಾರ ಒಂದು ಸಣ್ಣ ಮಟ್ಟಿನ ಕಟಿ ಪಿಟಿ ಆಯಿದು… ದೂಜ ಅದರ ಹತ್ತರೆ ನಾಲ್ಕು ಬಂಗುಡೆ ತೆಕ್ಕೋಳ್ಳೆಕ್ಕು ಹೇಳಿ ಗ್ರೇಶಿದ್ದು… ಅದು ಊರಿಲಿ ಇಲ್ಲದ್ದ ರೇಟು ಹೇಳಿತ್ತು… ಹಾಂಗಾಗಿ ಅದರ ಮೇಲೆ ದೂಜಂಗೆ ಪಿಸುರು ಇದ್ದು…

“ನಂಗೆ ಒಬ್ಬನ ಮೇಲೆ ಸಂಶಯ ಉಂಟು..ಸಾರು….”

“ಹೌದಾ? ಯಾರ ಅದು….?”

“ಅದು… ಅದು..ಸಾರು… ಮೀನು…ಸಾರು… ಅದ್ರಾಮ…..”

“ಎಂತದ್ದು? ಮೀನಿನ ಸಾರಾ…?

“ಮೀ.. ಮೀನಿನ ಸಾರು ಅಲ್ಲ.. ಸಾರು…”

“ಮತ್ತೆಂತದು…ಸಾರು ಸಾರು…”

“ಅಲ್ಲ…ಅಲ್ಲ… ಅದು ಅದ್ರಾಮ, ಮೀನು ಅದ್ರಾಮ ….ಸಾರು”

“ಮೀನು ಅದ್ರಾಮನಾ?”

“ಹೌದು ಸಾರು… ಅವನು ಸುಮಾರು ಸಲ ಹೇಳಿದ್ದಾನೆ… ತ್ಯಾಂಪ ಸೆಟ್ಟಿಯನ್ನು ಕುತ್ತಿಗೆ ಮುರ್ದು ಗುಂಡಿಗೆ ಹಾಕ್ತೇನೆ ಅಂತ….”

“ಯಾರು ಅದು ಮೀನು ಅದ್ರಾಮ?”

ದೂಜ ಹೇಳಿ ಮುಗುಸುದಕ್ಕೂ… ಸಬ್ಬಿನಿಸ್ಪೇಟ ಕೇಳುದಕ್ಕೂ…. ಮೀನು ಅದ್ರಾಮ ಅಲ್ಲಿಗೆ ಬಂದು ಎತ್ತುದಕ್ಕೂ ಸರೀ ಆತು….

———————————————————————————————————-

ತ್ಯಾಂಪ ಹೀಂಗೆ ಗುಂಡಿಗೆ ಬಿದ್ದು ಸತ್ತಿದು ಹೇಳ್ತ ಸುದ್ದಿ ಮೀನುಅದ್ರಾಮಂಗೆ ಅಲ್ಲೆಲ್ಲಿಯೋ ಮೀನು ಮಾರ್ಲೆ ಹೋದಿಪ್ಪಗ ಸಿಕ್ಕಿದ್ದು. ಇದುವೇ ಅದರ ಕೊರಳು ಮುರಿತ್ತೆ ಹೇಳಿ ತಿರುಗಿದ್ದು ಅದಕ್ಕೆ ನೆನಪ್ಪಿದ್ದದಾ.. “ಎಡ್ಡೆ ಆಂಡು.. ಆಯೆಗ್ ಅಂಚನೇ ಆವೊಡು” ಹೇಳಿ ಆದಕ್ಕೆ ಕಂಡಿದು…. ಈಗ ಕೂತುಹಲ ತಾಳ್ಲೆ ಎಡಿಯದ್ದೆ ‘ನೋಡುವ ಎಂತಾಯಿದು’ ಹೇಳಿ ತಿಳಿವಲೆ ಇಲ್ಲಿಗೆ ಬಂದದು… ಹುಲಿ ಬಾಯಿಗೆ ಸೀದ ಬಂದು ಬಿದ್ದಾಂಗೆ ಆತು..

“ಸಾರು ಅವ್ನೆ ಅದ್ರಾಮ…” ದೂಜ ಸಬ್ಬಿನಿಸ್ಪೇಟನ ಕೆಮಿಲಿ ಪಿಸಿ ಪಿಸಿ ಹೇಳಿತ್ತು…

“ಏಯ್… ಬಾರಾ ಇಲ್ಲಿ….” ಅದ್ರಾಮ ಆರತ್ರೆ ಎಂತ ಕೇಳುದಕ್ಕೂ ಮೊದಲೇ ಸಬ್ಬಿನಿಸ್ಪೇಟ ದಿನಿಗಿತ್ತು…. ಅದ್ರಾಮನ. ಅದ್ರಾಮಂಗೆ ಒಂದೇಸರ್ತಿಗೆ ಟ್ಟೆ ಟ್ಟೇ ಟ್ಟೇ….. ಆತು. ಅದುದೆ ಇಷ್ಟರವರೇಗೆ ಈ ಪೋಲೀಸುಗಳ ವ್ಯೆವಾರಕ್ಕೆ ಹೋದ ಜೆನ ಅಲ್ಲ. ಎಂತಕಾರೂ ಇಲ್ಲಿ ಬಂದೆ ಹೇಳಿ ಅದ್ರಾಮಂಗೆ ಕಂಡತ್ತು.

ಸಬ್ಬಿನಿಸ್ಪೇಟನ ಎದುರು ಬಂತು…”ಸತ್ಯ ಹೇಳು ಯಾಕೆ ಕೊಂದದ್ದು… ತ್ಯಾಂಪ ಸೆಟ್ಟಿಯನ್ನು….ಸತ್ಯ ಹೇಳದಿದ್ರೆ ನಿನ್ನ ಗಂಟಲಿಗೆ ಹಸೀ ಮೀನು ತುರ್ಕಿಸ್ತೇನೆ ನೋಡು….”

ಅದ್ರಾಮಂಗೆ ಒಂದೇ ಸಲಕ್ಕೆ ತಲೆ ಮೇಲೆ ಕಲ್ಲು ಬಿದ್ದಾಂಗೆ ಆತು. ಯಾವಾಗಳೋ ಪಿಸುರಿಲಿ ಹೇಳಿದ್ದು ಈಗ ಈ ಸಬ್ಬಿನಿಸ್ಪೇಟನವರೇಂಗೆ ಎತ್ತಿ, ಈಗ ಬೂತದ ಹಾಂಗೆ ಎದುರೇ ಬಂದು ನಿಂದತ್ತನ್ನೇ? ಎಂತ ಹೇಳುದು ಹೇಳಿ ಅದಕ್ಕೆ ಗೊಂತಾಯಿದಿಲ್ಲೆ.

“ಏನು ಮುಕ ನೋಡುವುದು?…. ಕೇಳಿದ್ದಕ್ಕೆ ಉತ್ತರ ಕೊಡು…” ಸಬ್ಬಿನಿಸ್ಪೇಟ ಕಣ್ಣು ಕೆಂಪು ಮಾಡಿ ಅದ್ರಾಮನ ನೋಡಿತ್ತು….

ಈ ಸಬ್ಬಿನಿಸ್ಪೇಟಂಗೆ ಎದುರು ಸಿಕ್ಕಿದೋರೆಲ್ಲ ಕೊಲೆಗಾರನ ಹಾಂಗೇ ಕಾಣ್ತಾ ಹೇಳಿ…!!!

“ಏ ಫೋರ್ಟ್ವೆಂಟಿ… ನೋಡು… ಇವ್ನನ್ನು ಎರೆಷ್ಟು ಮಾಡಿ ಸತ್ಯ ಕಕ್ಕಿಸ್ಬೇಕು… ಇವ್ನ ಮನೆಗೆ ಹೋಗಿ ತಲಾಶು ಮಾಡಿ ಬಾ… ಯಾವುದರಲ್ಲಿ ಕೊಂದದ್ದು, ಹೇಗೆ ಕೊಂದದ್ದು, ಕೊಂದ ಹತ್ಯಾರು ಯಾವುದು ಅಂತ ಹುಡುಕಿ ತಾ…” ಕಿಷ್ಣಪ್ಪಂಗೆ ಓರ್ಡರು ಮಾಡಿತ್ತು ಸಬ್ಬಿನಿಸ್ಪೇಟ.

ಕಿಷ್ಣಪ್ಪ ಅದ್ರಾಮನ ದುರುಗುಟ್ಟಿ ನೋಡಿತ್ತು. ಅದ್ರಾಮನ ಗೊಂತಿದ್ದು ಕಿಷ್ಣಪ್ಪಂಗೆ. ಕಿಷ್ಣಪ್ಪನ ಮನೆಗೆ ಮೀನು ಕೊಡುದು ಈ ಅದ್ರಾಮನೇ. ” ಬಲ… ಬಲ್ಲ…” ಹೇಳಿ ಅದ್ರಾಮನ ಕರಕ್ಕೊಂಡು ಅದರ ಮನೆಗೆ ಹೆರಟತ್ತು ಕಿಷ್ಣಪ್ಪ.

“ಅಂದಾ ಬ್ಯಾರಿ, ನಿಕ್ಕ್ ದಾಯೆ ಬೋಡಿತ್ತ್ಂಡ್ ಮಾರಯಾ… ಈಡೆ ಬರ್ಪುನ ಬೇಲೆ..?” ಸಣ್ಣಕ್ಕೆ ಸಬ್ಬಿನಿಸ್ಪೇಟಂಗೆ ಕೇಳದ್ದ ಹಾಂಗೆ ಅದ್ರಾಮನ ಹತ್ತರೆ ಕೇಳಿತ್ತು ಕಿಷ್ಣಪ್ಪ, ದಾರಿಲಿ ಅದ್ರಾಮನ ಮನೆಗೆ ಹೋಪಗ. ಅದ್ರಾಮನ ಹತ್ತರೆ ಅದು ಅಷ್ಟು ಸಮಾದನಲ್ಲಿ ಇಪ್ಪಲೆ ಒಂದು ಕಾರಣ ಇದ್ದು. ಎಂತ ಕಾರಣ ಹೇಳಿರೆ…. ಈ ಅದ್ರಾಮನ ಹೆಂಡತ್ತಿ ಆಮೀನಾ ಬ್ಯಾರ್ತಿ ಇದ್ದಲ್ಲದಾ? ಕೆಲವು ಜೆನಂಗ ಅದರ ‘ಆ ಮೀನು ಬ್ಯಾರ್ತಿ’ ಹೇಳಿಯೂ ಹೇಳ್ತವು… ಅದು ಹೊರಿವ ಮಸಾಲೆ ಮೀನು. ಆ ಹೊರಿವ ಮಸಾಲೆ ಮೀನಿನ ರುಚಿ ಇದ್ದಲ್ಲದಾ, ಅದು ಬೇರೆ ಆರು ಹೊರುದರೂ ಆ ಮೀನಿಂಗೆ ಬಾರಡ. ಆ ಮೀನಿನ ಹೊರಿವಲೆ ಒಂದು ಕ್ರಮ ಇದ್ದಡ. ಮೊದಾಲು ಮೀನಿನ ಚೆಂದಕ್ಕೆ ತೊಳೆಯಕ್ಕಡ. ಆಮೇಲೆ ಅದರ ಹೆರಾಣ ಚರ್ಮವ ಕೆರೆಸೆಕ್ಕಡ, ಅದರ ಚೋಲಿಲಿ ಒಂತರಾ ದೊರಗು ದೊರಗು ಮುಳ್ಳಿನ ಹಾಂಗೆ ಇರ್ತಲ್ಲದಾ, ಅದರ ತೆಗವಲೆ. ಆ ಮೇಲೆ ಅದರ ತಲೆಯ ಕೊಯ್ದು ತುಂಡು ಮಾಡಿ ತೆಗೆಯಕ್ಕಡ. ಮತ್ತೆ ಅದರ ಉದ್ದಕ್ಕೆ ಕೊಯ್ವದು… ಕೆಲವು ಸಲ ಸತ್ಯಣ್ಣ ಸಾರಿಂಗೆ ಹಸಿಮೆಣಸಿನ ಉದ್ದಕ್ಕೆ ಸೀಳಿದಾಂಗೆ ಕೊಯ್ತಲ್ಲದಾ, ಹಾಂಗೆ. ಮತ್ತೆ ಅದರ ಬಿಡಿಸಿ, ಒಳಾಣ ಮುಳ್ಳು ಇದ್ದಲ್ಲದಾ, ಮುಳ್ಳು ಹೇಳಿರೆ ಆ ಮೀನಿನ ಬೆನ್ನೆಲುಬು, ಅದರ ಎಳದು ತೆಗವದಡ… ಮತ್ತೆ ಒಳ ಕರುಳು ಎಲ್ಲ ಇರ್ತು, ಅದರ ಎಲ್ಲ ಕ್ಲೀನು ಮಾಡಿ ತೆಗವದಡ. ಆಮೇಲೆ ಮಸಾಲೆಯ ಒಳ ತುಂಬುಸುದು, ಮಸಾಲೆಯ ಮೊದಲೇ ಚಟ್ಣಿಯ ಹಾಂಗೆ ಕಡದು ರೆಡಿ ಮಾಡಿ ಮಡಿಕ್ಕೊಂಡಿರೆಕ್ಕು. ಆ ಮೇಲೆ ಪುನ ಎರಡು ತುಂಡನ್ನೂ ಸೇರಿಸಿ ಕೊದಿವ ಎಣ್ಣೆಲಿ ಹೊರಿವದಡ. ಅದರ ರುಚಿ ಇದ್ದಲ್ಲದಾ, ಅದು ಅಮೀನ ಬ್ಯಾರ್ತಿ ಹೊರುದ ಹಾಂಗೆ ಯಾವುದಕ್ಕೂ ಬಾರಡ. (ಆರೋ ಹೇಳಿದ್ದು ಕೇಳಿದ್ದು ಆನು…!!)

ಅದ್ರಾಮ ಆವಾಗಾವಗ ಹೆಂಡತ್ತಿ ಕೈಲಿ ಮಾಸಾಲೆ ಮೀನು ಮಾಡ್ಸಿ ಈ ಕಿಷ್ಣಪ್ಪನ ಮನೆಗೆ ಎತ್ತುಸುಲೆ ಇದ್ದು. ಕಿಷ್ಣಪ್ಪಂಗೆ ಈ ಮೀನಿನ ನೆನೆಸಿಕೊಂಡರೆ ಸಾಕು ಬಾಯಿಲಿ ನೀರಿಳಿತ್ತು. ಈಗ ಅದ್ರಾಮನ ಮನೆಗೆ ಎತ್ತುದಕ್ಕೂ, ಒಳಂದ ಅದ್ರಾಮನ ಹೆಂಡತ್ತಿ ಹೊರಿತ್ತಾ ಇತ್ತಿದ್ದ ಈ ಮಸಾಲೆ ಮೀನಿನ ಪರಿಮ್ಮಳ ಕಿಷ್ಣಪ್ಪನ ಮೂಗಿಂಗೆ ಎತ್ತುದಕ್ಕೂ ಸರೀ ಆತು.

———————————————————————–

ಮುಂದಾಣ ಬಾಗ ಬಪ್ಪವಾರ…..

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 16 ಒಪ್ಪಂಗೊ

 1. ಇಂದಿರತ್ತೆ
  ಇಂದಿರತ್ತೆ

  ಹೊರುದ ಮಸಾಲೆಮೀನಿನ ಪರಿಮಳ [!!!] ಮೂಸಿಗೊಂಡೇ ಕೂರೆಕ್ಕೋ ಒಂದು ವಾರ !! ದೇ….ವರೆ!!!

  [Reply]

  ದೊಡ್ಡಭಾವ

  ದೊಡ್ಡಭಾವ° Reply:

  ಇಂದಿರತ್ತೆ ಹೇಳಿದ ಹಾಂಗೇ ಆತನ್ನೆ!!
  ಅಲ್ಲದ್ದೇ ಕಥೆಯ ಕುತೂಹಲ ತಡವಲೆ ಎಡಿತ್ತಿಲ್ಲೆ, ಈಗ ಒಟ್ಟಿಂಗೆ ಮೀನಿನ ಪರಿಮಳವೂ… :-)

  [Reply]

  ಶ್ಯಾಮಣ್ಣ

  ಶ್ಯಾಮಣ್ಣ Reply:

  ಆ ಶಿರಕವಚದ ಕನ್ನಟಿಯ ರಜ್ಜ ಕೆಳ ಎಳದರೆ ಮೀನಿನ ಪರಿಮ್ಮಳ ತಡವಲೆಡಿಗೋ ಹೇಳಿ… :)

  [Reply]

  VN:F [1.9.22_1171]
  Rating: +1 (from 1 vote)
  ಶ್ಯಾಮಣ್ಣ

  ಶ್ಯಾಮಣ್ಣ Reply:

  ಇಂದಿರಕ್ಕೋ…. :) ಛೆ…. ಛೆ….. ಸೀವಿನ ಪತ್ರಡೆಯ ಹತ್ತರೆ ಮಡಿಕ್ಕೊಳ್ಳಿ…. ಮೀನಿನ ಪರಿಮ್ಮಳ ಬಾರ…

  [Reply]

  VN:F [1.9.22_1171]
  Rating: +1 (from 1 vote)
 2. ಯಮ್.ಕೆ.

  ಕಮ್ಮನೆ ಒ೦ದುವಾರ ಬ೦ದರೆ,
  ಅದಕ್ಕೆ ಪೈಸೆ ಪೀ೦ಕುಸಲೆ ಆರಾದರೂ
  ಶಾ” ಣ್ಯ ಇಪ್ಪೋರ ಕಳುಸುಗು,ಹುಶಾರು.
  ಬೆಲೆ ಎಲ್ಲಾ ರಾಕೆಟ್ಟ್ಲಿ ಕೂದಿಪ್ಪಾಗ,
  ಇದರೆ ಅ-ಮೀನ ಹೊರದ ಘಾಟಿ೦ಗೆ,
  ಹೊಟ್ಟೆ ಉಬ್ಬರಿಸಿ ಬಪ್ಪಲೂ ಸಾಕೊಲ್ಲದ?.

  ಸೀವು ಪತ್ರೊಡೆ ತ೦ದು ಮಡಿಗಯಪ್ಪಗಲೆ,
  ಇದು ಕಮ್ಮನೆ ಬ೦ದದೂ,
  ತಾಳಿಬೊ೦ಡ ಬಿದ್ದಾ೦ಗೆ ಆತನ್ನೆ.

  [Reply]

  ಶ್ಯಾಮಣ್ಣ

  ಶ್ಯಾಮಣ್ಣ Reply:

  ಯ್ಯಬ….. :)

  [Reply]

  VN:F [1.9.22_1171]
  Rating: +2 (from 2 votes)
 3. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  {…………………. ಎಲ್ಲ ಗೊಂತಿರೆಕ್ಕು ಹೇಳಿ ಏನಿಲ್ಲೆ….}
  ಈ ಗೆರೆ ತೆಗೆರಿ ಶ್ಯಾಮಣ್ಣ. ಕತೆಲಿ ಇದು ಬೇಡ ಹೇಳಿ ಎನಗೆ ಕಾಂಬದು. – ಮೀನಿಳಿಯದ ಗಂಟಲೊಳ್ ಮುಳ್ಳು ಸಿಕ್ಕಿದಂತಕ್ಕುಂ.

  [Reply]

  ಶ್ಯಾಮಣ್ಣ

  ಶ್ಯಾಮಣ್ಣ Reply:

  ಸರಿ ಮಾಡಿದ್ದೆ ನೋಡಿ….

  [Reply]

  VN:F [1.9.22_1171]
  Rating: 0 (from 0 votes)
  ಶ್ಯಾಮಣ್ಣ

  ಶ್ಯಾಮಣ್ಣ Reply:

  ಅಪ್ಪೋ ಭಾವ ಈ “ಮೀನಿಳಿಯದ ಗಂಟಲೊಳ್ ಮುಳ್ಳು ಸಿಕ್ಕಿದಂತಕ್ಕುಂ” ಹೇಳಿರೆ ಎಂತ? ನಿಂಗೊಗೆ ಏನಾರೂ.. ? ಅನುಭವ….? :)

  [Reply]

  ತೆಕ್ಕುಂಜ ಕುಮಾರ ಮಾವ°

  ತೆಕ್ಕುಂಜ ಕುಮಾರ ಮಾವ° Reply:

  ಅನುಭವ ಬೇಕು ಹೇಳಿ ಎನೂ ಇಲ್ಲೆ ಭಾವ..”ಕೆಲವಂ ಬಲ್ಲವರಿಂದ ಕಲ್ತು, ಕೆಲವಂ ಶಾಸ್ತ್ರಂಗಳಿಂ …’ ಹೀಂಗೆ ಎಂತದೋ ಹೇಳವನ್ನೆ.

  [Reply]

  VN:F [1.9.22_1171]
  Rating: 0 (from 0 votes)
 4. ಚೆನ್ನೈ ಬಾವ°

  [ಅವ್ನಿಗೆ ಕನ್ನಡ ಸರೀ ಬರೂದಿಲ್ಲ ಸಾರ್ ] [ಎಲ್ಲವುದೆ ಒಂದುಸರ್ತಿ ” ಹಾಂ…” ಹೇಳಿದವು.]

  ಅಕೇರಿಗೆ ಮೀನು ….. ಎಲ್ಲವೂ ತುಂಬ ಲಾಯ್ಕ ಲಾಯ್ಕ ಲಾಯ್ಕ ಆಯ್ದು. ನೆಗೆ ಮಾಡಿ ನೆಗೆ ಮಾಡಿ ಕೊಶಿ ಆತು ಕತೆ

  [Reply]

  ಶ್ಯಾಮಣ್ಣ

  ಶ್ಯಾಮಣ್ಣ Reply:

  ಛೆ… ಛೆ… ಪಾಪ ಅಲ್ಲಿ ಇಪ್ಪೋರಿನ ಅವಸ್ತೆಗೆ ನಿಂಗೊಗೆ ನೆಗೆಯಾ? ಆಗ ಆತ…

  [Reply]

  VN:F [1.9.22_1171]
  Rating: 0 (from 0 votes)
 5. Venugopal Kambaru

  ಲಾಯಕ ಆಯಿದು

  [Reply]

  VA:F [1.9.22_1171]
  Rating: 0 (from 0 votes)
 6. ಬೊಳುಂಬು ಮಾವ°
  ಬೊಳುಂಬು ಗೋಪಾಲ

  ಚೈನಿನೊಟ್ಟಿಂಗೆ ಅಮೀನನ ಮೀನಿನ ಫ್ರೈ ರೈಸಿದ್ದು ಶಾಮಣ್ಣ. ಪೋಲೀಸಿನ ವಿಚಾರಣೆ ನೈಜವಾಗಿದ್ದು. ಧಾರಾವಾಹಿ ಮುಂದುವರಿಯಲಿ.

  [Reply]

  VA:F [1.9.22_1171]
  Rating: 0 (from 0 votes)
 7. ಮುಳಿಯ ಭಾವ
  ರಘುಮುಳಿಯ

  ಆ ಗುರ್ಮೆಲಿ ಬಿದ್ದು ಸತ್ತ ತ್ಯಾ೦ಪನ ಇಷ್ಟು ಜೆನ ಕೊ೦ದವಾ ! ಸಮಸ್ಯೆ ಜಟಿಲವೇ !

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕಜೆವಸಂತ°ಚೆನ್ನಬೆಟ್ಟಣ್ಣವೇಣೂರಣ್ಣತೆಕ್ಕುಂಜ ಕುಮಾರ ಮಾವ°ದೊಡ್ಮನೆ ಭಾವಅಡ್ಕತ್ತಿಮಾರುಮಾವ°ಪುತ್ತೂರಿನ ಪುಟ್ಟಕ್ಕಚುಬ್ಬಣ್ಣಡಾಗುಟ್ರಕ್ಕ°ನೆಗೆಗಾರ°ದೀಪಿಕಾಪುಣಚ ಡಾಕ್ಟ್ರುಚೆನ್ನೈ ಬಾವ°ಸುಭಗಕಾವಿನಮೂಲೆ ಮಾಣಿದೊಡ್ಡಮಾವ°ಬೋಸ ಬಾವvreddhiಸರ್ಪಮಲೆ ಮಾವ°ಪುಟ್ಟಬಾವ°ಬಂಡಾಡಿ ಅಜ್ಜಿದೊಡ್ಡಭಾವಡಾಮಹೇಶಣ್ಣವೆಂಕಟ್ ಕೋಟೂರುಪಟಿಕಲ್ಲಪ್ಪಚ್ಚಿಗಣೇಶ ಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ