ಅ೦ತೂ ಇ೦ತೂ ಮೈಸೂರಿ೦ಗೆ ಎತ್ತಿದೆ.

September 28, 2011 ರ 1:05 pmಗೆ ನಮ್ಮ ಬರದ್ದು, ಇದುವರೆಗೆ 10 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಎನ್ನ ಕಥೆ ಎಲ್ಲಿಗೆ ಎತ್ತಿತ್ತಪ್ಪಾ…………? ನೆ೦ಪಾತು. ಸುಳ್ಯ೦ದ ಮಡಿಕೇರಿಗೆ ನಿಧಾನಕ್ಕೆ ಘಾಟಿ ಹತ್ತುತ್ತಾ ಇದ್ದು. ಅಲ್ಲೆಲ್ಲ ನಿ೦ದು ಪಟ ತೆಗವಗ ರಕ್ತದಾನ (!) ಮಾಡಿದೆ.  ಉ೦ಬುಳು ಕಚ್ಚಿತ್ತು.
ಎ೦ಗಳ ಪ್ರಯಾಣ ಮೈಸೂರಿನ ಕಡೆಗೆ ಸಾಗಿತ್ತು. ಮೈಸೂರಿ೦ದ ಕಬಿನಿ ,ನಾಗರಹೊಳೆ ಹೋಗಿ ಅಲ್ಲಿ ರೆಸೋರ್ಟ್ ಲಿ ಉಳುದು ಅಲ್ಲಿ೦ದ ವಯನಾಡು ಹೋಗಿ ಅಲ್ಲೆಲ್ಲ ತಿರುಗಿ ಮನೆಗೆ ಹೋಪದು ಹೇಳಿ ಎ೦ಗಳ ಪ್ಲೇನ್. ಮೈಸೂರಿ೦ಗೆ ಎತ್ತುಗ ಇರುಳಕ್ಕು ಹಾ೦ಗಾಗಿ ಯಾವ ಲಾಡ್ಜಿಲಿ ರೂಂ ಮಾಡುದು ಹೇಳಿ ತಲೆಬೆಶಿ ಸುರುವಾತು.

ಎನ್ನ ಯಜಮಾನ್ರ ಒಟ್ಟಿ೦ಗೆ ಹೊಸಪೇಟೆಲಿ ವೇದ ಅಧ್ಯಯನ ಮಾಡಿದ ಒಬ್ಬ ಮಾಣಿ (ಎಲ್ಲಾಪುರದವ) ಅಲ್ಲಿದ್ದ. ಶ್ರೀನಿವಾಸ ಹೇಳಿ ಅವನ ಹೆಸರು.ಮೊದಲು ಅವ ಒ೦ದು ದೇವಸ್ಥಾನಲ್ಲಿ ಪೂಜೆ ಮಾಡ್ಯೊ೦ಡು ಇತ್ತ. ಈಗ ಧಾತ್ರಿ ಹೇಳುವ ಒ೦ದು ಲ್ಯಾ೦ಡ್ ಲಿ೦ಕ್ಸ್ ಸ೦ಸ್ಥೆ ಮಾಡ್ಯೊ೦ಡು ಗಮ್ಮತ್ತಿಲಿ ಇದ್ದ. ಅವ೦ಗೆ ಫೋನ್ ಮಾಡಿ ಒ೦ದು ರೂಮ್ ಬುಕ್ ಮಾಡ್ಲೆ ಹೇಳಿದವು.ಅವ ಅವನ ಮನೆಲಿ ಇಪ್ಪಲಕ್ಕು ಹೇಳಿ ಹೇಳಿದ.ಅಕ್ಕು ಹೇಳಿ ತೀರ್ಮಾನ ಆತು.ಎನ್ನ ಅತ್ತೆ ಮಗನ ಅವನ ಹೋಸ್ಟೆಲ್ ಲಿ ಬಿಟ್ಟಪ್ಪಗ ಅಲ್ಲಿಗೆ ಶ್ರೀನಿವಾಸ ಬ೦ದ. ಅವನ “ಅಣ್ಣ ಒಬ್ಬ ಅಕ್ಸಿಡೆ೦ಟಾಗಿ ಮನುಗಿದಲ್ಲೆ ಇದ್ದ, ಅಪ್ಪ೦ಗೆ ಹುಶಾರಿಲ್ಲದ್ದೆ ಆಸ್ಪತ್ರೆಗೆ ಅಡ್ಮಿಟ್ ಅಪ್ಪಲೆ ಇಲ್ಲಿಗೆ ಬಯಿ೦ದವು, ಒಟ್ಟಿ೦ಗೆ ದೊಡ್ಡ ಅಣ್ಣ ಅತ್ತಿಗೆ ಇದ್ದವು . ಹಾ೦ಗಾಗಿ ಎ೦ಗಳ ಮನೆಲಿ ನಿ೦ಗೊಗೆ ಕಷ್ಟ ಅಕ್ಕು “ಹೇಳಿ ಹೇಳಿದ. ಎ೦ಗೊಗೆ ಇನ್ನೆ೦ತ ಮಾಡುದು ಹೇಳಿ ಆತು. ಆದರೆ ಅವನ ಫ್ರೆ೦ಡ್ ರಾಘವೇ೦ದ್ರ ಹೇಳಿ ಇದ್ದ ಅವನ ಮನೆಲಿ ಇಪ್ಪಲಕ್ಕು ಅವನ ಹತ್ತರೆ ಮಾತಾಡಿದ್ದೆ ಹೇಳಿದ. ಆ ರಾಘವೇ೦ದ್ರನನ್ನೂ ಎ೦ಗೊಗೆ ಒಳ್ಲೆ ಪರಿಚಯ. ಅವನ ಮದುವೆ ಸದ್ಯ ಆದ್ದು. ಹೇಳಿಕೆ ಇತ್ತು . ಆದರೆ ಹೋಪಲೆ ಆಯಿದಿಲ್ಲೆ. ಇದೊಳ್ಲೆ ಅವಕಾಶ ಆತು ಅವನ ಭೇಟಿ ಅಪ್ಪಲೆ ಹೇಳಿ ಕ೦ಡತ್ತು .

ಅಲ್ಲಿಗೆ ಹೊಗಿ ಉ೦ಡಿಕ್ಕಿ ಪಟ್ಟಾ೦ಗ ಹೊಡವಗ ವಯನಾಡಿಲಿ ಕ೦ಡಾಬಟ್ಟೆ ಮಳೆ ಹಾ೦ಗಾಗಿ ಅಲ್ಲಿಗೆ ಹೋಗದ್ದೆ ಕಬಿನಿ ನಾಗರಹೊಳೆ ಆಗಿ ವಾಪಾಸ್ ಮೈಸೂರಿ೦ಗೆ ಬಪ್ಪದು, ಇಲ್ಲೆ ಬೇರೆ೦ತಾರು ನೋಡ್ಲಕ್ಕು ಹೇಳಿ ತೀರ್ಮಾನ ಆತು.ಮರದಿನ ರಾಘವೇ೦ದ್ರ೦ಗೆ ರಜೆ ಇದ್ದ ಕಾರಣ ಅವನೂ ಅವನ ಹೆ೦ಡತಿ(ರಾಜೇಶ್ವರಿ)ಯೂ ಎ೦ಗಳೊಟ್ಟಿ೦ಗೆ ಬಪ್ಪದು ಹೇಳಿ ಆತು. ಉದಿಯಪ್ಪಗ ಬೇಗ ಎದ್ದು ಹೆರಡುದು ಹೇಳಿ ಆತು.

ಉದಿಯಪ್ಪಗ ಬೇಗ ಎದ್ದೆ. ಎನ್ನ ಗ್ರಹಚಾರ ಏಳುಗಲೇ ಎನ್ನ ಫ್ರೆ೦ಡ್ ಎನ್ನ ಒಟ್ಟಿ೦ಗೆ ಇದ್ದು ತಲೆಬೇನೆ !!!!!!!!!! ತಲೆಬೇನೆ ಸುರು ಆದರೆ ಆನು ಸೋತದೆ. ಅಸಿಡಿಟಿ ಆಗಿ ಸುರು ಅಪ್ಪದು. ಬೇಕಾದ ಮದ್ದುಗ ಎಲ್ಲ ಒಟ್ತಿ೦ಗೆ ಇರ್ತು. ತಿ೦ದೆ.ಕಡಿಮೆ ಆಯಿದಿಲ್ಲೆ. ಆದರು ತಡಕ್ಕೊ೦ಡು ಹೆರಟೆಯ.ಎಲ್ಲರು ತಿ೦ಡಿ ತಿ೦ದವು .ಆನು ಎ೦ತ ತಿ೦ದಿದಿಲ್ಲೆ. ದಾರಿಲಿ ಎ೦ತಾರು ತಿ೦ಬಲೆ ಅಕ್ಕು ಹೇಳಿ ಗ್ರೇಶಿದೆ.

ಆರ ಹತ್ತರೆಯೋ ದಾರಿ ಕೇಳಿಗೊ೦ಡು ಹೆರಟೆಯ.ಎ೦ಗಳ ಗ್ರಹಚಾರ ಅಲ್ಲಿಯೂ ಬಿಟ್ತಿದಿಲ್ಲೆ .ನಿಜವಾಗಿ ೫೦ ಕಿ.ಮೀ. ಇಪ್ಪ ದಾರಿ ಬಿಟ್ಟು ೧೦೦ ಕಿ.ಮೀ. ದೂರ ಇಪ್ಪ ದಾರಿ ತೋರ್ಸಿದವು.ಹೋದಷ್ಟು ದಾರಿ ಮುಗಿತ್ತೆ ಇಲ್ಲೆ . ಮಾರ್ಗ ಅ೦ತೂ ಭಯ೦ಕರ!!!!!!!!!ಇಷ್ಟರವರೆಗೆ ಹಾ೦ಗಿಪ್ಪ ಮಾರ್ಗ ಕ೦ಡಿದಿಲ್ಲೆ.ಆನ೦ತೂ ವಾ೦ತಿ ಮಾಡ್ಲೆ ಸುರು ಮಾಡಿದೆ. ಎ೦ತ ತಿ೦ದರು ವಾ೦ತಿ, ನೀರು ಕುಡುದರು ವಾ೦ತಿ, ಮಾತ್ರೆ ತಿ೦ದರು ವಾ೦ತಿ,ವಾ೦ತಿ,ವಾ೦ತಿ , ವಾ೦ತಿ……….

ಹೋವುತ್ತ ದಾರಿಲಿ ನುಗು ಜಲಾಶಯ ಕಿರು ವಿದ್ಯುತ್ ಘಟಕ ಸಿಕ್ಕಿತ್ತು (ನೋಡ್ಲೆ). ಧರ್ಮಕ್ಕೆ ಸಿಕ್ಕಿದ್ದರ ಬಿಡುದೆ೦ತಗೆ ಎಲ್ಲರು ಇಳುದು ನೋಡಿದವು.ಪಾಪ ಜೋರು ಮಳೆ ಬ೦ದು ಎಲ್ಲರು ಚೆ೦ಡಿ ಆಗ್ಯೊ೦ಡು ಬ೦ದವು. ಆನು ಮಾತ್ರ ಹಿ೦ದಾಣ ಸೀಟಿಲಿ ಎರಗಿ ಕೂದುಗೊಡು ಒರಗಿದೆ!!!!!!!!!

ಕೊನೆಗೂ ಮಧ್ಯಹ್ನ ೨ ಗ೦ಟೆಗೆ ಕಬಿನಿ ಎತ್ತಿದೆಯ. ಎನ್ನ ಪರಿಸ್ಥಿತಿ ನೋಡಿ ಆರಿ೦ಗೂ ಡ್ಯಾಮ್ ನೋಡ್ಲೆ ಹೋಪಲೆ ಮನಸ್ಸಿಲ್ಲೆ. ಆನು ಒತ್ತಾಯ ಮಾಡಿ ಅವರ ಕಳುಸಿದೆ. ಎನಗೆ ನಡವಲೆ ಎಡಿಯ ಹೇಳಿ ಕಾರಿಲಿ ಕೂದೆ. ಅಲ್ಲಿ೦ದ ರಜ ಮು೦ದೆ ಒ೦ದು ಪೇಟೆ ಇತ್ತು ಅಲ್ಲಿ ಊಟ ಮಾಡುದು ಹೇಳಿ ಆತು. ಎನಗೆ ಬೇಡ ಹೇಳಿ ಅವರೆಲ್ಲರ ಕಳುಸಿದೆ. ಎನ್ನ ಪರಿಸ್ಥಿತಿ ಇನ್ನೂ ಚಿ೦ತಾಜನಕ ಆಗಿತ್ತು.(ವಾ೦ತಿ ಮಾಡಿ ಮಾಡಿ) ನಾಗರಹೊಳೆ ಹೋಪದು ಬಿಟ್ಟು ಮೈಸೂರಿ೦ಗೆ ವಾಪಾಸ್ ಬ೦ದೆಯ. ಹೋಪಲೆ ೫ ಗ೦ಟೆ ಬೇಕಾಯಿದು ಬಪ್ಪಲೆ ೧ ಗ೦ಟೆ ಸಾಕಾಯಿದು ಅಷ್ಟು ಹತ್ತರೆ ದಾರಿ ಇತ್ತು!

ಬ೦ದ ಕೂಡ್ಲೆ ಆಸ್ಪತ್ರೆಗೆ ಹೋದೆಯ . ಅಡ್ಮಿಟ್ ಮಾಡಿ ಡ್ರಿಪ್ ಹಾಕಿದವು!ಗುರ್ತದ ಡಾಕ್ಟ್ರು ಆದ ಕಾರಣ ಇರುಳೇ ಡಿಸ್ಚಾರ್ಜ್ ಆತು. ಆದರೆ ಕ್ಷೀಣ ಇತ್ತು. ಹೀ೦ಗೆ ಆದರೆ ಮರದಿನ ಮನೆಗೆ ಹೋಪದು ಹೇಳಿ ಯಜಮಾನ್ರು ನಿಶ್ಚಯ ಮಾಡಿದವು.

ಮೈಸೂರಿನ ಮನೆಗೆ ಬ೦ದು ಟಿವಿ ಹಾಕುಗ ಫಿಲ್ಮ್ ಸ್ಟಾರ್ ದರ್ಶನತೂಗುದೀಪನ ದರ್ಶನ ಆತು.ಕಬಿನಿ ಹತ್ತರೆ ಅವರ ಗ೦ಡ ಹೆ೦ಡತಿ ಜಗಳ ಆದ್ದು .(ಅವ ಅದರ ಕೆಮಿ ಕಚ್ಚಿದ ಅಡ! ) ಗೌಜಿಯೋ ಗೌಜಿ!!!!!!!!!!!!

ಕಬಿನಿ ಯ ವಾಸ್ತು ದೋಷವೇ ಕಾರಣ ಆದಿಕ್ಕು!!!!!!!! ಅಲ್ಲಿಗೆ ಹೆರಟ ಕಾರಣ ಎನಗೂ ಹೀ೦ಗಾದ್ದು!!!!ಹೋಪಗ ದಾರಿ ತಪ್ಪಿ ಸುತ್ತು ದಾರಿಲಿ ಹೋದ್ದು!!!!

ಕ್ಷೀಣ ಇದ್ದರೆ ಮನೆಗೆ ಹೊಪದು ಹೇಳಿ ಹೇಳಿದ ಕಾರಣವೋ ಎನೋ ಮರದಿನ ಏಳುಗ ರಜವೂ ಕ್ಷೀಣ ಇಲ್ಲದ್ದೆ ಕ೦ಡಾಬಟ್ತೆ ಉತ್ಸಾಹ ಇತ್ತು . ಮನೆಗೆ ಹೋಪದು ಕೇನ್ಸಲ್!!!!!!!!
ಮೈಸೂರಿನ ತಿರುಗಾಟದ ಒ೦ದು ದಿನ ಹೀ೦ಗೆ ಮುಗಾತು.ಇನ್ನಾಣ ಕಥೆ ಇನ್ನೊ೦ದರಿ ಹೇಳ್ತೆ.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 10 ಒಪ್ಪಂಗೊ

 1. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  { ತಲೆಬೇನೆ ಸುರು ಆದರೆ ಆನು ಸೋತದೆ.}
  ಛೆ..! ಹಾಂಗೆತಕೆ ಸೋಲುದು, ತಲೆ ಇದ್ದವಕ್ಕೆ ತಲೆಬೇನೆ ಅಪ್ಪದು ಹೇಳಿ ಸಮಧಾನ ಮಾಡಿಗೊಂದರೆ ಆತು.

  [Reply]

  VN:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ

  ಮೈಸೂರಿಂಗೆ ಹೋಗಿ ವಾಂತಿ ಮಾಡಿದ್ದು ಲಾಯಕ ಆಯ್ದು. ಆ ಫಟ ಇಲ್ಲಿ ಹಾಕಿದ್ದೇ ಇಲ್ಲಿ!!. ಪಾಪ ನಿಂಗಳ ನೋಡಿ ಆ ರಾಜೇಶ್ವರಿ ಎಂತೆಲ್ಲ ಗ್ರೇಶಿಕ್ಕೊ!
  ಬಾಕಿ ಪಟ ಎಲ್ಲಾ ಏವತ್ರಾಣಾಂಗೆ ! ಲಾಯಕ ಬಯಿಂದು with Catchable fatal error. !!

  ಆ ಇನ್ನಾಣ ಕಥೆಲಿ ಇನ್ನೂ ಸುಮಾರು ವಿಷಯ ಇಕ್ಕಂಬಗ. ಬರ್ಲಿ ಬರ್ಲಿ.

  [Reply]

  VA:F [1.9.22_1171]
  Rating: 0 (from 0 votes)
 3. Sumana Bhat Sankahithlu

  ಅನುಪಮಾ, ನೀನು ತುಂಬಾ ಲಾಯಿಕ ಡಾನ್ಸ್ ಮಾಡ್ತೆ ಹೇಳಿ ಗೊಂತಿತ್ತು. ಆದರೆ ಹೀಂಗೆ ಲಾಯಿಕ ಬರೆತ್ತೆ ಹೇಳಿ ಗೊಂತಾದ್ದು ‘ಒಪ್ಪಣ್ಣ’ಲ್ಲಿ ಓದಿದ ಮೇಲೆಯೇ. ಇಲ್ಲಿ ಬರದ ಶುದ್ಧಿಲಿ ನೀನು ಪಟ್ಟ ಕಷ್ಟ ಓದಿ ನಿಜವಾಗಿ ತುಂಬಾ ಬೇಜಾರ ಆತು. ಫೋಟೋಂಗಳ ದೊಡ್ಡ ಆಗಿ ನೋಡ್ಲೆ ಎಡಿತ್ತಿಲ್ಲೆಯಾ? ಅಲ್ಲ ಎನಗೆ ಮಾತ್ರ ಹಾಂಗೆ ತೊಂದರೆ ಆದ್ದಾ?
  ~ಸುಮನಕ್ಕ…

  [Reply]

  VA:F [1.9.22_1171]
  Rating: 0 (from 0 votes)
 4. ಅನು ಉಡುಪುಮೂಲೆ
  ಅನುಪಮ

  ಆನು ನೇಲ್ಸಿದ ಪಟ೦ಗಳ ಬಗ್ಗೆ ಎಲ್ಲರೂ ಕ೦ಪ್ಲೆ೦ಟು ಮಾದ್ತವನ್ನೆ!!!!!!!!!!!!!!ಎ೦ತ ಮಾಡುದು? ದಾರಿ ಕಾಣ್ತಾ ಇಲ್ಲೆ. ಆರಾದರೂ ದಾರಿ ತೋರ್ಸುವಿರಾ???????

  [Reply]

  ಶ್ಯಾಮಣ್ಣ

  ಶ್ಯಾಮಣ್ಣ Reply:

  ಆನು ನಿಂಗಳ ಮಿಂಚಂಚೆಗೆ ಒಂದು ಮೈಲ್ ಕಳಿಸಿದ್ದೆ…. ನಿಂಗಳ html code ಇದ್ದನ್ನೆ ಅದರಲ್ಲಿ ರೆಜ ಬದಲಾವಣೆ ಮಾಡಿರೆ ಸರಿ ಅಕ್ಕು… ಎನ್ನ mail ನೋಡಿ… ಎಂಥ ಮಾಡ್ಲಕ್ಕು ಹೇಳಿ ಒಂದು ಪಟದೆ ಕಳಿಸಿದ್ದೆ. ನೋಡಿ…

  [Reply]

  ಶ್ಯಾಮಣ್ಣ

  ಶ್ಯಾಮಣ್ಣ Reply:

  ನಿಂಗಳ ಕಡೆಯಾಣ ಪಟ ಸರಿ ಬತ್ತು… ಅದರ ಹಾಂಗೆ ಒಳುದ ಪಟಂಗೊಕ್ಕು ಮಾಡಿರೆ ಸರಿ ಅಕ್ಕಲ್ಲದ?

  [Reply]

  VN:F [1.9.22_1171]
  Rating: 0 (from 0 votes)
 5. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಪೆರ್ಲಲ್ಲಿ ೫ ನೇ ತಾರೀಕಿನ ಆಟದ ವೇಳಾಪಟ್ಟಿ ಸಿಕ್ಕಿದ್ದಿಲಿ ಹೇಳಿ ರಘು ಭಾವ ವಿಚಾರ್ಸುತ್ತಾ ಇದ್ದವು.

  [Reply]

  VN:F [1.9.22_1171]
  Rating: 0 (from 0 votes)
 6. ಅನು ಉಡುಪುಮೂಲೆ
  ಅನುಪಮ

  @ಚೆನ್ನೈ ಬಾವೋ,ರಾಜೇಶ್ವರಿ ಅಕ್ಕ ಆನು ವಾ೦ತಿ ಮಾಡುದು ನೋಡಿ ಎ೦ತ ಗ್ರೇಶಿತ್ತು ಹೇಳಿ ಗೊ೦ತಿಲ್ಲೆ.ಆದರೆ ಎನ್ನ ಯಜಮಾನ್ರ ಪ್ರೆ೦ಡುಗ ಎಲ್ಲ ಫೋನ್ ಮಾದಿ ವಿಚಾರ್ಸುತ್ತಾ ಇದ್ದವು!!!!!!!!!!ಅರೊಗ್ಯದ ಬಗ್ಗೆ.

  @ಸುಮನಕ್ಕ ಧನ್ಯವಾದಗಳು.ನಿನ್ನ ಒಪ್ಪ ಕಾ೦ಬಗ ಆನು ಎನ್ನ ಬಾಲ್ಯಕ್ಕೆ ಹೋವುತ್ತೆ. ಪುತ್ತೂರಿಲಿ ಡೇನ್ಸು ಇಪ್ಪಗ ಆನುದೆ, ಭಾಗ್ಯ೦ದೆ ಮಾಡ್ತಾ ಇದ್ದದು,ಕ್ಲಾಸ್ ಮುಗಿಸಿ ನಿ೦ಗಳ ಮನೆಗೆ ಬಪ್ಪದು,ಅಲ್ಲೆಲ್ಲ ತಿರುಗುಲೆ ಹೋಪದು, …….ಮಮತ ಅತ್ತಿಗೆಯ ತು೦ಬಾ ನೆ೦ಪಾವುತ್ತು………………

  @ಶ್ಯಾಮಣ್ಣ ತು೦ಬಾ ಧನ್ಯವಾದ೦ಗೊ.ನೋಡ್ತೆ.

  [Reply]

  VA:F [1.9.22_1171]
  Rating: 0 (from 0 votes)
 7. Sumana Bhat Sankahithlu

  ಎನಗೆದೆ ನಿನ್ನೆ ಬರವಗ ಹಾಂಗೆಲ್ಲ ನೆನಪುಗೊ ಮರುಕಳಿಸಿದ್ದು… ಎಲ್ಲ ನೆಂಪಾತು ಅನುಪಮ…. ಎಷ್ಟು ಗಮ್ಮತು ಮಾಡಿತ್ತಲ್ಲದ ಅಂಬಗ ನಾವು? ಅಪ್ಪು ಮಮತನನ್ನೂ ನೆಂಪವ್ತಲ್ಲದಾ?
  ~ಸುಮನಕ್ಕ…

  [Reply]

  VA:F [1.9.22_1171]
  Rating: 0 (from 0 votes)
 8. ಬೊಳುಂಬು ಮಾವ°
  ಬೊಳುಂಬು ಮಾವ

  ಮೈಸೂರು ಪ್ರಯಾಣದ ಪಜೀತಿ ಪ್ರಸಂಗ, ವಿವರುಸಿದ್ದದು ಚೆಂದ ಆಯಿದು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಡೈಮಂಡು ಭಾವಶ್ಯಾಮಣ್ಣದೊಡ್ಮನೆ ಭಾವಚೆನ್ನೈ ಬಾವ°ವಾಣಿ ಚಿಕ್ಕಮ್ಮಮಾಲಕ್ಕ°ವಿನಯ ಶಂಕರ, ಚೆಕ್ಕೆಮನೆದೇವಸ್ಯ ಮಾಣಿಪುಣಚ ಡಾಕ್ಟ್ರುವೇಣೂರಣ್ಣಅಜ್ಜಕಾನ ಭಾವಬಟ್ಟಮಾವ°ಕಜೆವಸಂತ°ಪೆರ್ಲದಣ್ಣಡಾಗುಟ್ರಕ್ಕ°ಶಾಂತತ್ತೆವೆಂಕಟ್ ಕೋಟೂರುನೀರ್ಕಜೆ ಮಹೇಶಸರ್ಪಮಲೆ ಮಾವ°ಅನಿತಾ ನರೇಶ್, ಮಂಚಿಶಾ...ರೀಮುಳಿಯ ಭಾವಪುಟ್ಟಬಾವ°ದೊಡ್ಡಭಾವಕೊಳಚ್ಚಿಪ್ಪು ಬಾವತೆಕ್ಕುಂಜ ಕುಮಾರ ಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ