ಚೈನು – ಭಾಗ ಮೂರು

(ಈ ಕತೆಲಿ ಬಪ್ಪ ಎಲ್ಲ ವ್ಯಕ್ತಿಗಳುದೇ, ಸ್ಥಳ, ಘಟನೆಗಳುದೇ ಕೇವಲ ಕಾಲ್ಪನಿಕ, ಯಾವದೇ ವ್ಯಕ್ತಿ ಅತವಾ ಘಟನೆಗೆ ಸಾಜ ಕಂಡತ್ತು ಹೇಳಿ ಆದರೆ ಅದು ಕೇವಲ ಕಾಕತಾಳೀಯ. ಈ ಕತೆ ಐವತ್ತು ವರ್ಷದ ಮೊದಲು ನಡದ್ದು ಹೇಳಿ ತಿಳ್ಕೊಳ್ಳೆಕ್ಕು.)
————————————————————————————————-
ಇಲ್ಯಾಣವರೆಗೆ…

ಅಳಿಯನ ಕೈಲಿ ವಿಷಯ ತಿಳ್ಕೊಂಡ ಮೀನು ಅದ್ರಾಮಂಗೆ ಇದಕ್ಕೆ ತ್ಯಾಂಪ ಸೆಟ್ಟಿಯೆ ಮೂಲ ಹೇಳಿ ಗೊಂತಾತು. ಪಿಸುರು ಏರಿದ ಅದ್ರಾಮ “ಆ ತ್ಯಾಂಪ ಸೆಟ್ಟಿ ಕೈಗೆ ಸಿಕ್ಕಲಿ, ಅದರ ಕೊರಳು ಮುರುದು, ಗುಂಡಿಲಿ ಹುಗಿತ್ತೆ” ಹೇಳಿ ಸಿಕ್ಕಿದೋರತ್ರೆ ಎಲ್ಲ ಹೇಳಿಕೊಂಡು ತಿರುಗುತ್ತ ಇದ್ದು ಹೇಳಿ ಊರಿಲಿಡಿ ಸುದ್ದಿ…

ಮುಂದೆ ಓದಿ….
———————————————————————————-

ಹಾಂಗೇಳಿ ಅದ್ರಾಮ ಬಯಂಕರ ಪೆಟ್ಟಿನ ಮನುಷ್ಯ° ಹೇಳಿ ಗ್ರೇಷುದು ಬೇಡ. ಅಳಿಯಂಗೆ ಆದ ಅವಸ್ತೆ ನೋಡಿ ಅದಕ್ಕೆ ಪಿಸುರು ಬಂದದು. ಒಂದು ವಾರ ಅದು ಈ ತ್ಯಾಂಪ ಸೆಟ್ಟಿಯ ರಜ ಜೋರು ಮಾಡೆಕ್ಕು ಹೇಳಿ ಅದರ ಕಾದು ಕೂದ್ದು ಅಪ್ಪು. ಹಾಂಗೇಳಿ ಯಾವಗಳೂ ಕಾದು ಕೂಪಲೆ ಆವುತ್ತ, ಈ ತ್ಯಾಂಪ ಸೆಟ್ಟಿ ಇಲ್ಲಿ ಸಿಕ್ಕುತ್ತು ಹೇಳಿ? ಆ ಪಳಿಕ್ಕೆಲಿ ಇರ್ತಲ್ಲದಾ ಹೇಳಿ ನಿಂಗ ಕೇಳುವಿ. ಆದರೆ ಪಳಿಕ್ಕೆಗೆ ಹೋದವು ವಾಪಾಸು ಬತ್ತವಿಲ್ಲೆ ಹೇಳುದರ ಕೇಳಿದ್ದು ಅದ್ರಾಮ. ಮತ್ತೆ ಅದು ಅಲ್ಲಿಗೆ ಹೋಕಾ? ಉದಿಯಪ್ಪಗ ಎದ್ದು ಮೀನಿನ ಕುರ್ವೆ ಹಿಡ್ಕೊಂಡು, ‘ಬಂಗ್ಡೆ, ಬೂತಾಯ್’ ಹೇಳಿಕೊಂಡು ಮನೆ ಮನೆ ತಿರುಗುಲೆ ಇದ್ದು. ಹಾಂಗೆ ಹೋಗದ್ರೆ ಹೆಂಡತಿ ಮಕ್ಕಳ ಹೊಟ್ಟೆ ತುಂಬುಸುದು ಆರು? ಎಲ್ಲಿಯಾದರೂ ಆ ತ್ಯಾಂಪಂಗೆ ಬಡಿವಲೆ ಹೋಗಿ ಅದು ಬಿದ್ದು ಸತ್ತತ್ತು ಹೇಳಿ ಆದರೆ, ಮತ್ತೆ ಪೋಲೀಸುಗಳ ಕೈಲಿ ಸಿಕ್ಕಿ ಹಾಕಿಕೊಂಬದು ಆರಿಂಗೆ ಬೇಕು? “ಯೇ ಅಲ್ಲಾ, ಎನಕ್ಕು ಈ ವ್ಯೆವಾರ ಬೇಂಡ” ಹೇಳಿ ಬಿಟ್ಟತ್ತತ್ಲಾಗಿ ವಿಷಯವ ಅದ್ರಾಮ.
———————————————————————————

ಎಂಕಣ್ಣ ತಲೆ ಮೇಲೆ ಕೈ ಹೊತ್ತು ಕೂಯಿದ°. ಹೋಗಿ ಹೋಗಿ ಈ ತ್ಯಾಂಪ ಎನ್ನ ತೋಟದ ಗುರ್ಮೆಲಿ ಸತ್ತು ಬಿದ್ದದು ಎಂತಕೆ? ಬೇರೆ ಎಲ್ಲಿಯೂ ಅದಕ್ಕೆ ಜಾಗೆ ಸಿಕ್ಕಿದ್ದಿಲೆಯ? ಅಲ್ಲ, ಆರಾದ್ರೂ ಕೊಂದು ಹಾಕಿದವೋ? ಆರಿಕ್ಕು? ಈಗ ಎಂತ ಮಾಡುದು?
ಲಿಂಗಪ್ಪ ಗುರ್ಮೆಂದ ಹತ್ತಿಕ್ಕಿ ಮೇಲೆ ಬಂತು.

“ತ್ಯಾಂಪೆ ಅಣ್ಣೇರೆ… ಆಯೆ ದಾಯೆಗ್ ಮೂಲು ಸೈತೆ? ಅದ್ರಾಮೆ ಕೆರ್ದಿಪ್ಪೋಡು ಅಣ್ಣೆರೆ. ಆಯೆ ಊರುಡು ಇಡೀಕ ಸಾರೊಂಡು ಬತ್ತುದೆ… ಆಯೆನ್ ಕೆರ್ಪೆ ಪಂಡುದು…” ಲಿಂಗಪ್ಪ ಹೇಳಿತ್ತು.

“ಇತ್ತೆ ಎಂಚಿನ ಮಲ್ಪುನೆ?” ಎಂಕಣ್ಣ ಕೇಳಿದ°.

” ಆಯೆನ ಇಲ್ಲದಾಕ್ಲೆಗ್ ಪಂಡುಂಡ ಆಂಡ್… ಅಕ್ಲು ಬತ್ತುದು ದೆತ್ತುದು, ಕೊಂಡೋದು ಪೊತ್ತಾವಡ್.” ಲಿಂಗಪ್ಪಂಗೆ ಬಾರಿ ಸುಲಬ ಹೇಳಿ ಕಾಣ್ತಾ ಇದ್ದು.

“ಹಾಂಗಾವುತ್ತಿಲ್ಲೆ ಅದು… ಪೋಲೀಸುಗೋ ಬರೆಕ್ಕಾವುತ್ತು” ಕಿಟ್ಟಣ್ಣ ಹೇಳಿದ°. ಅವಂಗೆ ಶಾಲೆಲಿ ಕೇಳಿ ಗೊಂತಿದ್ದು.

ಪೋಲೀಸು ಹೇಳಿದ ಕೂಡ್ಲೆ ಎಂಕಣ್ಣಂಗೆ ಬೆಗರು ಬಿಚ್ಚಿತ್ತು. ಅವ° ಇಷ್ಟ್ರವರೆಗೆ ಪೋಲಿಸು ಟೇಶನಿಂಗೆ ಹೋದವ° ಅಲ್ಲ. ಅವರ ಕೆಂಪು ಟೊಪ್ಪಿ ಕಂಡರೆ ಸಾಕು ಅಲ್ಲಿಂದ ಮೆಲ್ಲಂಗೆ ಚಾಂಬುವ ಜೆನ ಅವ°.

“ಲಿಂಗಪ್ಪ… ಈ ತ್ಯಾಂಪ ಸೆಟ್ಟಿಯ ಇಲ್ಲಗ್ ಪೋದು ಪಂಡುದು ಬಲ…. ಅಕ್ಲು ಎಂಚಿನಾಂಡ್ಳ ಮಾಳ್ಪಡು” ಎಂಕಣ್ಣ ಲಿಂಗಪ್ಪಂಗೆ ಹೇಳಿದ°.

“ಮತ್ತೆ… ಕಿಟ್ಟಣ್ಣ ನೀನು ಹೋಗಿ ತೌಡೂರು ರಾಮಣಂಗೆ ಹೇಳಿಕ್ಕಿ ಬಾ. ಅವ ಇದ್ದರೆ ನವಗೆ ರಜ ಧೈರ್ಯ…” ಕಿಟ್ಟಣ್ಣಂಗೆ ಹೇಳಿದ°.

ಲಿಂಗಪ್ಪ ಅತ್ಲಾಗಿ ಹೋತು. ಕಿಟ್ಟಣ್ಣ ಇತ್ಲಾಗಿ ಹೋದ°.

ಎಂಕಣ್ಣ ಅಲ್ಲೇ ಒಂದು ಹಾಳೆ ಎಳದು ಅಡಕ್ಕೆ ಮರದ ಬುಡಲ್ಲಿ ಕೂದ°.

ಎಂಕಣ್ಣ ಕೂದ್ದರ ಕೇಳಾಣ ತೋಟಂದ ದೂಜ ಪುರ್ಬು ನೋಡಿತ್ತು.

ಎಂಕಣ್ಣನ ಕೆಳಾಣ ತೋಟ ಈ ದೂಜನ ಅಪ್ಪ ಲೂಯಿ ಪುರ್ಬುದು. ಲೂಯಿ ಪುರ್ಬು ಈಗ ಇಲ್ಲೆ, ಸತ್ತಿದು. ಲೂಯಿಗೆ ನಾಲ್ಕು ಮಕ್ಕ. ಸುರುವಾಣದ್ದು ದೂಜ, ಎರಡ್ಣೆದು ಬಾಬಿಲ, ಮೂರ್ನೆದು ಜರ್ಮಿ, ನಾಲ್ಕನೆದು ಅಂತೋಣಿ.

ದೂಜ ಎಂಕಣ್ಣನ ಮನೆಗೆ ಒಂದೊಂದರಿ ಕೆಲಸಕ್ಕೆ ಬತ್ತು. ಒಟ್ಟಿಂಗೆ ಇದ್ದರೆ ಕೆಲಸ ಮಾಡುದರ್ಲಿ ಉಷಾರಿ. ಆದರೆ ಒಟ್ಟಿಂಗೆ ಆರು ಇಲ್ಲದ್ರೆ ಕೆಲಸ ಕಂಡು. ಆದರೆ ಹೊತ್ತೋಪಗ ಗಂಟೆ ಆರು ಆದರೆ ಅದಕ್ಕೆ ಗಡಂಗಿಂಗೆ ಎತ್ತದ್ರೆ ಆವುತ್ತಿಲ್ಲೆ. ಬಾಬಿಲನ ಕತೆ ಕೇಳಿ ಸುಕ ಇಲ್ಲೆ. ಅದಕ್ಕೆ ಉದಿಯಪ್ಪಗಳೇ ಗಡಂಗಿಲಿ ಇರೆಕ್ಕು. ಕುಡುದು ಕುಡುದು ಎಲ್ಕೊಟೆ ಕಟ್ಟಿ ಹೋಯಿದು. ಜರ್ಮಿ ಎಲ್ಲಿ ಇರ್ತು ಹೇಳಿ ಆರಿಂಗೂ ಗೊಂತಿಲ್ಲೆ. ಕೆಲವು ಸರ್ತಿ ಮನೆಲಿ ಇರ್ತು. ಕೆಲವು ಸರ್ತಿ ಎಲ್ಲಿಯಾದ್ರು ಹೋದರೆ ತಿಂಗಳೂ ಗಟ್ಳೆ ಕಾಣೆ. ಗಟ್ಟದ ಮೇಲೆ ಏಲಕ್ಕಿ ತೋಟಕ್ಕೆ ಕೆಲಸಕ್ಕೆ ಹೋವುತ್ತು ಹೇಳಿ ಜೆನಂಗ ಗ್ರೇಷಿದ್ದವು. ಕಡೆಯಾಣ ಅಂತೋಣಿ ರಜ ಸೀದ ಜೆನ. ಅದರಷ್ಟಕ್ಕೆ ಎಲ್ಲಿಯಾದರೂ ಕೆಲಸಕ್ಕೆ ಹೋಗಿ ಜೀವನ ಮಾಡ್ತು.

ಎಂಕಣ್ಣ ತೋಟಲ್ಲಿ ಹಾಂಗೆಲ್ಲ ಕೂಪದರ ದೂಜ ನೋಡುದು ಇದು ಸುರು. ಎಂತಕಪ್ಪ ಹೀಂಗೆ ಕೂದ್ದು ಹೇಳಿ ಅದಕ್ಕೆ ಕಂಡತ್ತು. ಮೆಲ್ಲಂಗೆ ಬೇಲಿ ಮೇಲಂದ ಹಾರಿ ಇತ್ಲಾಗಿ ಬಂತು. ಅದು ಯಾವಾಗ್ಳು ಹಾಂಗೆ ಬೇಲಿ ಹಾರಿ ಬಪ್ಪದು. ಅಲ್ಲಿ ರಜ ಬೇಲೆ ಹೊಡಿ ಅಪ್ಪದು, ಮತ್ತೆ ದನಂಗ ಅದೇ ಜಾಗೆಲಿ ನುರ್ಕುದು, ಮತ್ತೆ ಇದಕ್ಕೇ ಪೈಸೆ ಕೊಟ್ಟು ಬೇಲಿ ಸರಿ ಮಾಡ್ಸುದು…

“ದಾನೆ ಅಣ್ಣೆರು ಮೂಲು ಕುಳ್ಳುನೆ ?” ಕೇಳಿತ್ತು.

ಎಂಕಣ್ಣ ವಿಷಯ ಹೇಳಿದ ಕೂಡ್ಳೆ ಪೇರಳೆ ಮರದ ಬುಡಲ್ಲಿ ನಿಂದು ಕೆಳ ಇಣ್ಕಿತ್ತು.

“ಎಂಚಿನ ಅಣ್ಣೇರೆ, ಇಂಬೆ ಮೂಲೇ ಬತ್ತುದು ದಾಯೆ ಸೈತ್ತೆ?”

“ದಾಯ್ ಪಂಡುದು ಆಯೆನೆ ಕೇಣು. ದಾನೆ ಎನ್ನಡ ಪಂಡುದು ಸೈತ್ತೆನ?”

“ಅಂಚತ್ತ್… ಯಾನ್ ಕೇಂಡಿನೆ…”

“ಯಾನ್ಲಾ ಪಂಡಿನೆ…” ಎಂಕಣ್ಣಂಗೆ ತಲೆ ಬೆಷಿ ಎಂಕಣ್ಣಂಗೆ… ಇನ್ನು ಹೀಂಗಿಪ್ಪವಕ್ಕೆ ಉತ್ತರ ಕೊಡೆಕ್ಕು.

ದೂಜ ಅರ್ಜೆಂಟಿಲಿ ಇಪ್ಪೋರ ಹಾಂಗೆ ಅಲ್ಲಿಂದ ಓಡಿತ್ತು… ಬೀಬೀಸಿ ಕಂತ್ರಾಟು ತೆಕ್ಕೊಂಡೋರ ಹಾಂಗೆ ಇನ್ನು ಅದಕ್ಕೆ ಊರಿಲಿ ಇಡೀ ಹೇಳಿಕೊಂಡು ಬಪ್ಪಲೆ ಇದ್ದು.

ರಜ ಹೊತ್ತಪ್ಪಗ ಲಿಂಗಪ್ಪ ಒಂದೇ ವಾಪಾಸು ಬಂತು.

ಎಂಕಣ್ಣ ಹೇಳಿದ° “ತೂಲ ಎಂಚಿನ ಆಂಡು ಪಂಡುದ್ ಪಣ್ಪುನೆನ್ ಸೀದ ಪಣ್… ನಿನ್ನ ರಾಗ ಮಾಲಿಕೆ ಬೋಡ್ಚಿ….”

“ಅಣ್ಣೇರೆ ಆಕ್ಲು ಬರ್ಪುಜ್ಜೇರುಗೆ, ‘ಆಯೆ ಓಳು ಬೋಡಾಂಡ್ಳ ಬೂರುದು ಸೈಯಡ್. ಎಂಕ್ಳೆಗ್ ದಾಲ ಇಜ್ಜಿ’ ಪಂಡೆರ್”

ಎಲಾ… ಈಗೆಂತ ಮಾಡುದು? ಇದರ ಮನೆಯವೇ ಬಾರದ್ರೆ…..?

ಅಷ್ಟಪ್ಪಗ ಕಿಟ್ಟಣ್ಣನೂ ಬಂದ°. “ಅಪ್ಪ… ರಾಮಣ್ಣ ಮತ್ತೆ ಬತ್ತಡ್ಡ. ಈಗ ನಾವು ಇಳುದು ಮುಟ್ಟಿ ಎಲ್ಲ ಮಾಡ್ಳಾಗಡ. ಮತ್ತೆ ಪೋಲಿಸುಗೊಕ್ಕೆ ಹೋಗಿ ಹೇಳೆಕ್ಕಡ”

ವಿಷಯ ಕಡೇಂಗೆ ಅಲ್ಲಿಗೇ ಎತ್ತಿತ್ತು. ಈ ಪೋಲೀಸುಗಳ ಹತ್ತರಂಗೆ ಆರಪ್ಪ ಹೋಪದು?

ಅಷ್ಟಕ್ಕೂ ಈ ತ್ಯಾಂಪ ಈ ಗುರ್ಮೆಗೆ ಬಂದು ಬಿದ್ದದು ಹೇಂಗೆ?

———————————————————————————

ನಟರಾತ್ರಿ. ಗಂಟೆ ಒಂದಾದಿಕ್ಕು. ಶುಕ್ಲಪಕ್ಷದ ಹನ್ನೆರಡ್ಣೇ ದಿನ ಹೇಳಿ ಕಾಣ್ತು. ತಿಂಗಳುಬೆಣ್ಚಿ ಇದ್ದು. ಚಳಿಯೂ ಇದ್ದು.
ತಂಪು ಗಾಳಿ ಹದಾಕೆ ಬೀಜುತ್ತಾ ಇದ್ದು.

ಚಳಿ ಕಾಸುವ ಹೇಳಿರೆ ಪಳೀಕ್ಕೆಲಿ ಒಂದು ಕಾಷ್ಟವೂ ಹೊತ್ತಿಗೊಂಡು ಇಲ್ಲೆ. ಆರು ಸತ್ತಿದವಿಲ್ಲೆ. ತ್ಯಾಂಪ ಸೆಟ್ಟಿಗೆ ಒಬ್ಬನೇ ಕೂದು ಕೂದು ಬಚ್ಚಿತ್ತು. ಈ ಮನುಷ್ಯರಿಂಗೆ ಸಾವಲೆ ಎಂತ. ಒಂದು ಕಾಷ್ಟ ಆದರೂ ಹೊತುತಿತ್ತು, ಚಳಿ ಕಾಸುಲಾವ್ತಿತ್ತು ಹೇಳಿ ಗ್ರೇಷುತ್ತ ಇದ್ದು.

ಇಂತಾ ಸಂದರ್ಬಲ್ಲಿ ಅದಕ್ಕೆ ಮನೆಗೆ ಹೋಯೆಕ್ಕು ಹೇಳಿ ಕಾಂಬಲೆ ಸುರು ಆತು. ಹೋಯೆಕ್ಕಾರೆ ಎಂತಾಯೆಕ್ಕು ಸೀದಾ ಎದ್ದಿಕ್ಕಿ ಹೋಪದು. ಆರತ್ರೆ ಆದರು ಹೇಳೆಕ್ಕಾ…

ತ್ಯಾಂಪಸೆಟ್ಟಿ ಮನೆಗೆ ಹೆರಟತ್ತು. ಸುಮ್ಮನೆ ಹೋಪ ಅಬ್ಯಾಸ ಇಲ್ಲೆನ್ನೆ… ಪಳಿಕ್ಕೆಂದ ಹೆರ ಕಾಲು ಮಡುಗಿದ ಕೂಡ್ಳೆ ಪ್ರಸಂಗ ಸುರು ಆತು. ವಿಶ್ವಾಮಿತ್ರ- ತ್ರಿಶಂಕು ಪ್ರಸಂಗ.

“ತಕ ದಿನ್ನ… ತಕ ದಿನ್ನಾ… ತೈಯಾ ತಕ ತಕ ದಿನ್ನ….” ಮನೆ ಹೊಡೇಂಗೆ ಹೊವ್ತಾ ಇದ್ದಾಂಗೆ ತಾಳದೆ, ಪದ್ಯದೆ, ಕೊಣಿತ್ತವುದೆ ಒಟ್ಟಿಂಗೆ ಸುರು ಆತು. ಪಳಿಕ್ಕೆ ಪದವಿನ ಕರೇಂಗೆ ಎತ್ತಿ, ಬಾಂದು ಕಲ್ಲಿನ ಹತ್ರಂಗೆ ಎತ್ತುವಗ ವಿಶ್ವಾಮಿತ್ರಂದೆ ತ್ರಿಶಂಕುದೆ ಮುಕಾಮುಕಿ ಆವುತ್ತ ಪ್ರಸಂಗ.chainu4

ಅಲ್ಲಿಂದ ಮುಂದೆ ಬೀಜದ ಕಾಡಿಲಿ ಬಪ್ಪಗ ವಿಶ್ವಾಮಿತ್ರ ತ್ರಿಶಂಕುಗೆ ಸ್ವರ್ಗಕ್ಕೆ ಕಳುಸುಲೆ ಯಾಗ ಮಾಡುವ ಪ್ರಸಂಗ…. ಅದ್ರಾಮನ ಮನೆ ಹತ್ರೆ ಎತ್ತುವಗ ಪ್ರಸಂಗಕ್ಕೆ ಅರ್ದ ವಿರಾಮ. ಅದ್ರಾಮಂಗೆ ಇದರ ಮೇಲೆ ಕೋಪ ಇದ್ದು ಹೇಳಿ ತ್ಯಾಂಪಂಗೆ ಗೊಂತಾಯಿದು. ಹಾಂಗೆ ಅದರ ಮನೆ ದಾಂಟಿ ಅಪ್ಪವರೇಗೆ ಮೌನ.

ಕಲ್ಮಾರು ಕಾಡಿಂಗೆ ಎತ್ತುವಗ ವಿಶ್ವಾಮಿತ್ರ ತ್ರಿಶಂಕುವಿನ ಸ್ವರ್ಗಕ್ಕೆ ಏರುಸುವ ಪ್ರಸಂಗ.
ತ್ರಿಶಂಕು ಮೇಲೆ ಮೇಲೆ ಏರ್ತಾ ಇದ್ದ°. ಸ್ವರ್ಗದ ಬಾಗಿಲಿಂಗೆ ಎತ್ತಿದ್ದ°. ದೇವೇಂದ್ರ “ನಿನ್ನ ಒಳಂಗೆ ಬಿಡೆ” ಹೇಳಿ ಅಡ್ಡ ನಿಂದಿದ°. ಅಷ್ಟಪ್ಪಗ ತೋಟದ ಕರೆಯಾಣ ಬರೆಯ ಮೇಲಾಣ ಹೋಡೆಂಗೆ ಎತ್ತಿತ್ತು. ತ್ಯಾಂಪ ಕೊಣ್ಕೊಂಡೇ ಬತ್ತಾ ಇದ್ದು. ದೇವೇಂದ್ರನೂ ಅದುವೇ ತ್ರಿಶಂಕುವೂ ಅದುವೇ. ಕೊಣಿತ ಪದ್ಯ ಎಲ್ಲಾ ಆವುತ್ತಾ ಇದ್ದು.

ಕಾಲುದಾರಿಲಿ, ಬರೆಯ ಕರೇಲಿ, ಕೆಳ ಗುರ್ಮೆ ಇಪ್ಪ ಜಾಗೆಗೆ ಎತ್ತುವಗ ದೇವೇಂದ್ರಂಗು ತ್ರಿಶಂಕುಗೂ ಲಡಾಯಿ ಆಗಿ ದೇವೇಂದ್ರ ಬಡುದ ಪೆಟ್ಟಿಂಗೆ ತ್ರಿಶಂಕು ಕೆಳ ಬೀಳುವ ದೀಂಗಿಣ ಹೊಡವಲೆ ಸುರು ಮಾಡಿತ್ತು ತ್ಯಾಂಪ. ನಾಲ್ಕು ದಿಂಗಿಣ ಹೊಡದು ಕಾಲು ಕೆಳ ಮಡುಗುವಗ ಕಾಲು ನೆಲಕ್ಕೆ ಮಡುಗುವ ಬದಲಿಂಗೆ ಮಡುಗಿದ್ದು ಇತ್ಲಾಗಿ ಬರೆಯ ಕೆಳ. ಕಾಲಿಂಗೆ ನೆಲ ಸಿಕ್ಕಿದ್ದಿಲ್ಲೆ. ತ್ರಿಶಂಕು ತಲೆ ಕೆಳ ಆಗಿ ಬಿದ್ದ ಹಾಂಗೆ ತ್ಯಾಂಪನುದೆ ತಲೆ ಕೆಳ ಆಗಿ ಬರೆಂದ ಕೆಳಂಗೆ ಬೀಳ್ಲೆ ಸುರು ಆತು. ವಿಶ್ವಾಮಿತ್ರ ತ್ರಿಶಂಕುವ ” ಅಲ್ಲೆ ನಿಲ್ಲು” ಹೇಳ್ತ. ಆದರೆ ತ್ಯಾಂಪಂಗೆ ಹೇಳುವವು ಆರು? ತ್ಯಾಂಪ ಸೆಟ್ಟಿ ಸೀದ ಗುರ್ಮೆಯ ಒಳ, ಕೆಳಂಗೆ, ತಲೆ ಕೆಳ ಆಗಿ ಎತ್ತಿತ್ತು. ತಲೆ ನೆಲಕ್ಕೆ ಬಡುದು, ಕೊರಳು ಮುರುದತ್ತು. ಕೆಳ ಬಿದ್ದ ತ್ಯಾಂಪಸೆಟ್ಟಿಯ ಜೀವ ಮೇಲೆ ಹೋತು.

———————————————————————————-

ಎಂಕಣ್ಣಂಗೆ ಹೊಟ್ಟೆಯ ಒಳ ತೊಳಸಿದಾಂಗೆ, ಎರಡು ಸರ್ತಿ ಗುಡ್ಡೆಗೆ ಹೋಗಿ ಬಂದ. ಇಷ್ಟರ ವರೆಗೆ ಪೋಲೀಸು ಟೇಶನಿಂಗೆ ಹೋದವ ಅಲ್ಲ. ಆ ಕಾಕಿ ಚಡ್ಡಿ, ಕಾಕಿ ಅಂಗಿ ಹಾಕಿ, ಬೆಲ್ಟು ಕಟ್ಟಿ, ಕಾಲಿಂಗೆ ದಪ್ಪ ದಪ್ಪ ಬೂಡ್ಸು ಹಾಕಿ, ತಲೆಗೆ ಕೆಂಪು ಮುಂಡಾಸಿನ ಹಾಂಗಿಪ್ಪ ಟೊಪ್ಪಿ ಹಾಕಿದ ಪೋಲೀಸುಗಳ ಕಾಂಬಗಳೆ ಎಂಕಣ್ಣಂಗೆ ಒಳಂದಲೆ ಪುಕು ಪುಕು ಆವುತ್ತು. ಟೇಶನಿಂಗೆ ಹೋದವಕ್ಕೆ ಪೋಲೀಸುಗ ಮೊದಾಲು ನಾಲ್ಕು ಬಿಗಿತ್ತವು, ಮತ್ತೆ ಅವು ಮಾತಾಡುಸುದು ಹೇಳಿ ಅವನ ನಂಬಿಕೆ.

ಇಲ್ಯಾಣ ಪೋಲೀಸು ಟೇಶನಿಲಿ ಸಬ್ಬಿನಿಸ್ಪೇಟ ಮರಿಯಪ್ಪ ಹೇಳಿ. ಆದು ಮೊದಲಿಂಗೆ ಗವರ್ಮೆಂಟು ಬ್ರಾಮ್ಮಣ ಜಾತಿದಡ. ಕೆಲಸಕ್ಕೆ ಸೇರಿ ಆದ ಮತ್ತೆ ಪುರ್ಬು ಜಾತಿಗೆ ಸೇರಿದ್ದಡ. ಅದಕ್ಕೆ ಮೇಲಾಣ ಜಾತಿಯೋರಿನ ಕಂಡರೆ ಆವುತ್ತಿಲ್ಲೆಡ. ಅವಕ್ಕೆ ಮೊದಲೇ ನಾಲ್ಕು ಬೈದೋ, ಬಿಗುದೋ ಮತ್ತೆಯೇ ಮಾತಾಡುಸುದಡ. ಹೀಂಗೆಲ್ಲ ಸುದ್ದಿ ಇಪ್ಪದು ಎಂಕಣ್ಣಂಗುದೆ ಗೊಂತಿದ್ದು.

ಈಗ ಹೋಗದ್ದೆ ಉಪಾಯ ಇಲ್ಲೆ. ಹೋಯೆಕ್ಕೆ. ಎಂತ ಮಾಡುದು? ವಸ್ತ್ರ ಸುತ್ತಿ, ಅಂಗಿ ಹಾಕಿ ಹೆರಟ. ಪೋಲೀಸು ಟೇಶನು ಇಪ್ಪದು ಪೇಟೆಯ ಹತ್ತರೆಯೇ. ಒಂದು ಇಪ್ಪತ್ತೈದು ಮೂವತ್ತು ಮೆಟ್ಳು ಹತ್ತಿ ಮೇಲಂಗೆ ಹತ್ತಿಕ್ಕಿ ಹೋಯೆಕ್ಕು. ಈ ಟೇಶನಿನ ಮೇಲೆ ನಿಂದು ನೋಡಿರೆ ಇಡೀ ಪೇಟೆ ಕಾಣ್ತು.

————————————————————————————-

ಟೇಶನಿಲಿ ಎಂತಾತು? ಬಪ್ಪವಾರ ನೋಡುವೋ.
(ಕತೆ ರಜಾ ಉದ್ದ ಉದ್ದ ಆವುತ್ತ ಇದ್ದು. ಹಾಂಗಾಗಿ ರಜಾ ಸಣ್ಣ ಸಣ್ಣಕ್ಕೆ ನಿಲ್ಸುತ್ತ ಇದ್ದೆ…. ಅಕ್ಕನ್ನೆ…?)

ಶ್ಯಾಮಣ್ಣ

   

You may also like...

15 Responses

 1. ಶ್ಯಾಮಣ್ಣ,
  ಸೋಮವಾರ ಕಳುದತ್ತು, ಮಂಗಳವಾರ ಬಂತು…
  ಕಥೆಯ ಮುಂದಾಣ ಕಂತಿಂಗೆ ಕಾಯ್ತಾ ಇದ್ದೆ,
  ಕುತೂಹಲ ತಡವಲೆ ಎಡಿತ್ತಾ ಇಲ್ಲೆ..
  ಬೇಗ ಬರಳಿ…

 2. ಶ್ಯಾಮಣ್ಣ says:

  ಒಪ್ಪಣ್ಣನ ಈ ಸರ್ತಿಯಾಣ ಶುದ್ದಿ ನೋಡಿದ್ದಿರಿಲ್ಲೆಯೋ ಭಾವಾ? ಕಾಯೆಕ್ಕಡ….
  ಎಷ್ಟು ಜೆನಂಗ ಕಾಯ್ತಾ ಇದ್ದಿ ಹೇಳಿ ನೋಡ್ತಾ ಇದ್ದೆ… 🙂 🙂 🙂

 3. ಒಪ್ಪಣ್ಣ ಪೇಜ್ ನ ಸುಮಾರು ಸಮಯಂದ ಇಣುಕಿ ನೋಡ್ತಾ ಇತ್ತೆ . ಚೈನು – ಕಥಾ ಸರಣಿ ಯ ಓದಲೆ ಈಗ ಸಮಯ ಸಿಕ್ಕಿತಷ್ಟೆ :(.
  ತುಂಬಾ ಕುತೂಹಲಂದ ಇಂದು 2 ಭಾಗ ಓದಿದೆ :).
  ಕಥೆ ಭಾರೀ ಲಾಯಿಕ್ಕಿದ್ದು.
  ಹೋಟೆಲ್ “ಭಾವ”ನ ಹೆಸರು ಎನಗೆ ಭಾರೀ ಖುಷಿ ಆತು:)
  ಲಿಂಗಪ್ಪ ನ ಮಾತಿನ ಶೈಲಿ ತಾಳ್ಮೆಯ ಪರೀಕ್ಷಿಸುತ್ತು!!
  ನಾಳಂಗೆ ಸಮಯ ಬಿಡುವಾದಪ್ಪಗ ಮುಂದಾಣ ಭಾಗವ ಓದೆಕ್ಕು ಹೇಳಿ ಎಣಿಶಿಯೊಂಡಿದ್ದೆ. .

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *